Tag: Fordo Nuclear Facility

  • ಅಮೆರಿಕ ಬಳಿಕ ಇರಾನ್‌ನ ಶಕ್ತಿಶಾಲಿ ಫೋರ್ಡೋ ಪರಮಾಣು ಘಟಕದ ಮೇಲೆ ಇಸ್ರೇಲ್‌ ದಾಳಿ

    ಅಮೆರಿಕ ಬಳಿಕ ಇರಾನ್‌ನ ಶಕ್ತಿಶಾಲಿ ಫೋರ್ಡೋ ಪರಮಾಣು ಘಟಕದ ಮೇಲೆ ಇಸ್ರೇಲ್‌ ದಾಳಿ

    – ಅಮೆರಿಕ ದಾಳಿ ನಡೆಸಿದ ಮರುದಿನವೇ ಅಟ್ಯಾಕ್‌

    ಟೆಹ್ರಾನ್‌/ಟೆಲ್‌ ಅವಿವ್‌: ಅಮೆರಿಕ ಬಾಂಬ್‌ ದಾಳಿ ನಡೆಸಿದ ಒಂದು ದಿನದ ನಂತರ ಇರಾನ್‌ನ ಶಕ್ತಿಶಾಲಿ ಫೋರ್ಡೋ ಪರಮಾಣು ಘಟಕದ (Fordow Nuclear Site) ಮೇಲೆ ಮೇಲೆ ಇಸ್ರೇಲ್‌ ಕೂಡ ದಾಳಿ (Israel Strikes) ನಡೆದಿದೆ.

    ಫೋರ್ಡೋ ಮೇಲೆ ಇಸ್ರೇಲ್‌ ದಾಳಿ ನಡೆಸಿರುವುದಾಗಿ ಇರಾನ್‌ನ (Iran) ತಸ್ನಿಮ್‌ ಸುದ್ದಿಸಂಸ್ಥೆ ವರದಿ ಮಾಡಿದೆ. ಬಳಿಕ ಇಸ್ರೇಲ್‌ನ ರಕ್ಷಣಾ ಸಚಿವ ಕಾಟ್ಜ್‌ ದಾಳಿಯನ್ನು ಖಚಿತಪಡಿಸಿದ್ದಾರೆ. ನಮ್ಮ ರಕ್ಷಣಾಪಡೆಗಳು ಟೆಹ್ರಾನ್‌ ಮಧ್ಯಭಾಗದ ಗುರಿಗಳ ಮೇಲೆ ನಿಖರ ದಾಳಿ ನಡೆಸಿದೆ ಎಂದು ಹೇಳಿದ್ದಾರೆ.

    Iran Nuclear Sites

    ಸದ್ಯಕ್ಕೆ ಸ್ಥಳದಲ್ಲಿ ಹಾನಿಯ ಬಗ್ಗೆ ತಕ್ಷಣದ ಮಾಹಿತಿ ಇಲ್ಲ. ಈ ನಡುವೆ ಉತ್ತರ ಟೆಹ್ರಾನ್‌ನಲ್ಲೂ ಭಾರೀ ಸ್ಫೋಟಗಳು ಸಂಭವಿಸಿದೆ. ಇದನ್ನೂ ಓದಿ: ಅಮೆರಿಕನ್ನರು ಹಿಂದೆಂದೂ ನೋಡಿರದ ದಾಳಿ ಎದುರಿಸಲು ಸಿದ್ಧರಾಗಿ – ಖಮೇನಿ ಬಿಗ್‌ ವಾರ್ನಿಂಗ್‌

    ಇರಾನ್‌ನ ಫೋರ್ಡೋ ಪರಮಾಣು ಘಟಕವನ್ನ ಬೆಟ್ಟದ ಮೇಲೆ ಸ್ಥಾಪನೆ ಮಾಡಲಾಗಿದೆ. ಫೋರ್ಡೊ ಅತ್ಯಂತ ರಹಸ್ಯ ಮತ್ತು ಬಿಗಿ ಭದ್ರತೆಯ ಸೌಲಭ್ಯವಾಗಿದ್ದು 2009 ರಲ್ಲಿ ಈ ವಿಚಾರ ಸಾರ್ವಜನಿಕವಾಗಿ ಬೆಳಕಿಗೆ ಬಂದಿತ್ತು. ಇರಾನ್‌ನ ಪವಿತ್ರ ನಗರವಾದ ಕೋಮ್‌ಗೆ ಹತ್ತಿರದಲ್ಲಿ ನಿರ್ಮಾಣವಾಗಿರುವ ಈ ಘಟಕದ ನಿಜವಾದ ಗಾತ್ರ ಮತ್ತು ಒಳಗಡೆ ಯಾವೆಲ್ಲ ಸಂಶೋಧನೆಗಳು ನಡೆಯುತ್ತಿದೆ.

    ಫೋರ್ಡೋ ಅಣು ಕೇಂದ್ರ ಎಷ್ಟು ಸೇಫ್‌?
    ಫೋರ್ಡೋ ಘಟಕದ ಮುಖ್ಯ ಸಭಾಂಗಣವು ನೆಲದಡಿಯಲ್ಲಿ ಸುಮಾರು 80 ರಿಂದ 90 ಮೀಟರ್ (295 ಅಡಿ) ಆಳದಲ್ಲಿದೆ. ಇಷ್ಟು ಅಡಿ ಆಳದಲ್ಲಿರುವ ಈ ಘಟಕವನ್ನು ಇಸ್ರೇಲ್ ಹೊಂದಿರುವ ಯಾವುದೇ ವೈಮಾನಿಕ ಬಾಂಬ್‌ನಿಂದ ಧ್ವಂಸ ಮಾಡಲು ಸಾಧ್ಯವಿಲ್ಲ. ಹೀಗಾಗಿಯೇ ವಿಶ್ವದಲ್ಲೇ ಅತಿಹೆಚ್ಚು ಪವರ್‌ಫುಲ್‌ ಆಗಿರುವ ಸ್ವದೇಶಿ ನಿರ್ಮಿತ GBU-57A/B Massive Ordinance Penetrator ಬಾಂಬ್‌ನಿಂದ ಅಮೆರಿಕ ದಾಳಿ ನಡೆಸಿದೆ. ಇದನ್ನೂ ಓದಿ: ವಿಶ್ವದ ಪವರ್‌ಫುಲ್‌ ವೆಪೆನ್‌ ʻಬಂಕರ್‌ ಬಸ್ಟರ್‌ʼ – 14,000 ಕೆಜಿ ತೂಕದ ಬಾಂಬ್‌ ಬಳಸಿ ಇರಾನ್‌ ಪರಮಾಣು ಕೇಂದ್ರದ ಮೇಲೆ ಅಮೆರಿಕ ದಾಳಿ

    ಅಮೆರಿಕ ದಾಳಿ ಎಷ್ಟು ಭೀಕರ?
    ಇರಾನ್‌ನ ಫೋರ್ಡೊ, ನಟಾಂಜ್ ಮತ್ತು ಇಸ್ಪಹಾನ್ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಯಶಸ್ವಿ ಬಾಂಬ್ ದಾಳಿ ನಡೆಸಿದೆ. ಅಮೆರಿಕವು 6 ಶಕ್ತಿಶಾಲಿ Northrop B-2 Spirit ಯುದ್ಧವಿಮಾನ ಬಳಸಿಕೊಂಡು ಡಜನ್‌ಗಟ್ಟಲೇ ಜಿಬಿಯು -57 ಎ/ಬಿ ಬೃಹತ್ ಆರ್ಡ್‌ನೆನ್ಸ್ ಪೆನೆಟ್ರೇಟರ್ (MOP) ಬಾಂಬ್‌ಗಳನ್ನ ಬಳಸಿ ದಾಳಿ ನಡೆಸಿದೆ. ಇದನ್ನ ʻಬಂಕರ್‌ ಬಸ್ಟರ್‌ʼ ಎಂದೂ ಕರೆಯಲಾಗುತ್ತದೆ. ಈ ʻಬಂಕರ್‌ ಬಸ್ಟರ್‌ʼ ಇರಾನ್‌ ರಾಜಧಾನಿ ಟೆಹ್ರಾನ್‌ನಿಂದ 100 ಕಿಮೀ ದೂರದಲ್ಲಿರುವ ಫೋರ್ಡೋ ಘಟಕದ ಮೇಲೆ ದಾಳಿ ಮಾಡಿದ್ರೆ, ಜಲಾಂತರ್ಗಾಮಿ ನೌಕೆಗಳಿಂದ ಹಾರಿಸಲಾದ 30 ಟೊಮಾಹಾಕ್ ಕ್ಷಿಪಣಿಗಳು (ಕ್ರೂಸ್‌ ಕ್ಷಿಪಣಿ) ಉಳಿದ 2 ಅಣು ಕೇಂದ್ರಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿವೆ.

    ಅಮೆರಿಕ ದಾಳಿ ಬಳಿಕ ಇರಾನ್‌, ಇಸ್ರೇಲ್‌ ಮೇಲೆ ಖಂಡಾಂತರ ಕ್ಷಿಪಣಿ ಹಾರಿಸಿತ್ತು. 10ಕ್ಕೂ ಹೆಚ್ಚು ನಗರಗಳ ಮೇಲೆ 30ಕ್ಕೂ ಹೆಚ್ಚು ಮಿಸೈಲ್‌ಗಳನ್ನ ಹಾರಿಸಿ ದಾಳಿ ಮಾಡಿತ್ತು. ಇದಕ್ಕೆ ಇಸ್ರೇಲ್‌ ಪ್ರತೀಕಾರ ತೀರಿಸಿಕೊಂಡಿದೆ. ಇದನ್ನೂ ಓದಿ: America Strikes | ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಬೆಂಬಲಿಸಿದ್ದ ಪಾಕ್‌ನಿಂದ ಇರಾನ್‌ ಮೇಲಿನ ದಾಳಿ ಖಂಡನೆ

  • ಅಮೆರಿಕನ್ನರು ಹಿಂದೆಂದೂ ನೋಡಿರದ ದಾಳಿ ಎದುರಿಸಲು ಸಿದ್ಧರಾಗಿ – ಖಮೇನಿ ಬಿಗ್‌ ವಾರ್ನಿಂಗ್‌

    ಅಮೆರಿಕನ್ನರು ಹಿಂದೆಂದೂ ನೋಡಿರದ ದಾಳಿ ಎದುರಿಸಲು ಸಿದ್ಧರಾಗಿ – ಖಮೇನಿ ಬಿಗ್‌ ವಾರ್ನಿಂಗ್‌

    – ಬಹ್ರೇನ್‌ನ ಯುಎಸ್ ನೌಕಾಪಡೆಯ ಮೇಲೆ ಕ್ಷಿಪಣಿ ದಾಳಿಗೆ ಪ್ಲ್ಯಾನ್‌
    – ಹಾರ್ಮುಜ್ ಜಲಸಂಧಿ ಮುಚ್ಚಲು ತ್ವರಿತ ಕ್ರಮಕ್ಕೆ ಮುಂದಾದ ಇರಾನ್‌

    ಟೆಹ್ರಾನ್‌: ಇರಾನ್‌ನ ಮೂರು ಪರಮಾಣು ಕೇಂದ್ರಗಳ (Nuclear Facility) ಮೇಲೆ ಅಮೆರಿಕ ಬಾಂಬ್‌ ದಾಳಿ ನಡೆಸಿದ ಬೆನ್ನಲ್ಲೇ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅಮೆರಿಕಾಗೆ ಕಟು ಎಚ್ಚರಿಕೆ ನೀಡಿದ್ದಾರೆ.

    ಅಮೆರಿಕನ್ನರು (Americans) ಹಿಂದೆಂದಿಗಿಂತಲೂ ಭೀಕರ ಹಾಗೂ ಹೆಚ್ಚಿನ ಹಾನಿ ಉಂಟುಮಾಡಬಲ್ಲ ದಾಳಿಯನ್ನು ಎದುರಿಸಲು ಸಜ್ಜಾಗಿ ಎಂದು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ದನಿಗೂಡಿಸಿರುವ ಖಮೇನಿಯ ಪ್ರತಿನಿಧಿ ಹೊಸೈನ್ ಶರಿಯತ್‌ಮದಾರಿ, ಒಂದೂ ಕ್ಷಣವೂ ತಡಮಾಡದೇ ಪ್ರತೀಕಾರದ ದಾಳಿ ನಡೆಸಲು ಸೂಚನೆ ನೀಡುವಂತೆ ಒತ್ತಾಯಿಸಿದ್ದಾರೆ.

    ಈಗ ಯಾವುದೇ ವಿಳಂಬವಿಲ್ಲದೇ ಕಾರ್ಯನಿರ್ವಹಿಸುವ ಸರದಿ ನಮ್ಮದಾಗಿದೆ. ಮೊದಲ ಹೆಜ್ಜೆಯಾಗಿ ನಾವು ಬಹ್ರೇನ್‌ನಲ್ಲಿರುವ (Bahrain) ಯುಎಸ್ ನೌಕಾಪಡೆಯ ಮೇಲೆ ಕ್ಷಿಪಣಿ ದಾಳಿ ಮಾಡಬೇಕು. ಅದೇ ಸಮಯಕ್ಕೆ ಅಮೆರಿಕನ್‌, ಬ್ರಿಟಿಷ್, ಜರ್ಮನ್ ಮತ್ತು ಫ್ರೆಂಚ್ ಹಡಗುಗಳಿಗೆ ಹಾರ್ಮುಜ್ ಜಲಸಂಧಿ (Strait of Hormuz) ಮುಚ್ಚಬೇಕು. ನಿರ್ಣಾಯಕ ಮಿಲಿಟರಿ ಕ್ರಮ ಕೈಗೊಳ್ಳಬೇಕು ಎಂದು ಖಮೇನಿ ಅವರಿಗೆ ಪ್ರತಿನಿಧಿ ಸಲಹೆ ನೀಡಿದ್ದಾರೆ.

    ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆ
    ಅಮೆರಿಕದ ದಾಳಿಯನ್ನು ಖಚಿತಪಡಿಸಿರುವ ಇರಾನ್‌ನ ಪರಮಾಣು ಇಂಧನ ಸಂಸ್ಥೆ, ಇದು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆಯ ಕ್ರೂರ ಕೃತ್ಯ ಎಂದು ಹೇಳಿದೆ. ನಮ್ಮ ಫೋರ್ಡೊ, ನಟಾಂಜ್ ಮತ್ತು ಎಸ್ಫಹಾನ್ ಪರಮಾಣು ಕೇಂದ್ರಗಳ ಮೇಲೆ ಶತ್ರುದೇಶ ದಾಳಿ ನಡೆಸಿದ್ದು, ಇದು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆಯಾಗಿದೆ ಎಂದು ಹೇಳಿಕೊಂಡಿದೆ. ಅಲ್ಲದೇ ಈ ದಾಳಿಯನ್ನು ಬಲವಾಗಿ ಖಂಡಿಸುವಂತೆ ಇರಾನ್ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದೆ. ಜೊತೆಗೆ ತನ್ನ ಪರಮಾಣು ಅಭಿವೃದ್ಧಿ ಕಾರ್ಯಕ್ರಮ ನಿಲ್ಲಿಸಲು ಸಾಧ್ಯವಿಲ್ಲವೆಂದೂ ಹೇಳಿದೆ.

    ಶಾಂತಿ ಮಾತುಕತೆಗೆ ವಿಶ್ವಸಂಸ್ಥೆ ಮನವಿ
    ಅಮೆರಿಕ ಭೀಕರ ಬಾಂಬ್ ದಾಳಿ ನಡೆಸಿದ ಬೆನ್ನಲ್ಲೇ ಶಾಂತಿ ಮಾತುಕತೆಗೆ ವಿಶ್ವಸಂಸ್ಥೆ (UN) ಮನವಿ ಮಾಡಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಇರಾನ್ ಮೇಲೆ ಅಮೆರಿಕ ತೆಗೆದುಕೊಂಡ ಮಿಲಿಟರಿ ಕ್ರಮದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ, ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ನೇರ ಬೆದರಿಕೆಯೂ ಆಗಿದೆ. ಎಲ್ಲ ದೇಶಗಳು ಉದ್ವಿಗ್ನತೆಯನ್ನು ಕಡಿಮೆ ಮಾಡಬೇಕು. ಈ ಬಿಕ್ಕಟ್ಟಿಗೆ ಯಾವುದೇ ಪರಿಹಾರವಿಲ್ಲ. ಶಾಂತಿ ಮಾತುಕತೆಯ ಮೂಲಕ ಮಾತ್ರ ಬಗೆಹರಿಸಲು ಸಾಧ್ಯ ಎಂದು ಗುಟೆರಸ್ ಹೇಳಿದ್ದಾರೆ.

    ಶಾಂತಿ ಪಾಲಿಸದಿದ್ದರೆ ಹುಷಾರ್‌
    ಇನ್ನೂ ಫೋರ್ಡೊ, ನಟಾಂಜ್ ಮತ್ತು ಎಸ್ಫಹಾನ್ ಪರಮಾಣು ಕೇಂದ್ರಗಳ ಮೇಲಿನ ದಾಳಿಯನ್ನುದ್ದೇಶಿಸಿ ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್ (donald trump) ಮಾತನಾಡಿದ್ದಾರೆ. ಇದು ಮುಂದುವರಿಯಲು ಸಾಧ್ಯವಿಲ್ಲ. ಕಳೆದ 8 ದಿನಗಳಲ್ಲಿ ನಡೆದ ದಾಳಿಗಿಂತ ಇದು ಭೀಕರವಾಗಿದೆ. ನಮ್ಮ ಇನ್ನೂ ಹಲವು ಗುರಿಗಳು ಉಳಿದಿವೆ. ಆದ್ರೆ ನೆನಪಿಟ್ಟುಕೊಳ್ಳಿ ಇನ್ನೂ ಹಲವು ಗುರಿಗಳು ಉಳಿದಿವೆ. ಇಸ್ರೇಲ್ ಜೊತೆಗಿನ ಸಂಘರ್ಷ ಕೊನೆಗೊಳಿಸದಿದ್ದರೆ, ಇಸ್ರೇಲ್ ಮೇಲೆ ನಿಖರ ದಾಳಿ ನಡೆಸಬೇಕಾಗುತ್ತದೆ ಎಂದು ಟ್ರಂಪ್ ನೇರ ಎಚ್ಚರಿಕೆ ನೀಡಿದ್ದಾರೆ.

    ದಾಳಿ ಮಾಡುವುದು ನಮ್ಮ ಉದ್ದೇಶವಲ್ಲ. ಪರಮಾಣು ಪುಷ್ಟೀಕರಣ ಸಾಮರ್ಥ್ಯ ನಿಲ್ಲಿಸುವುದು ಹಾಗೂ ಭಯೋತ್ಪಾದನೆ ಬೆಂಬಲಿಸುವ ರಾಷ್ಟ್ರದಿಂದ ಪರಮಾಣು ಬೆದರಿಕೆಗಳನ್ನು ಕುಗ್ಗಿಸುವುದಷ್ಟೇ ಈ ದಾಳಿಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

    ಅಣ್ವಸ್ತ್ರ ಕೇಂದ್ರಗಳ ಮೇಲೆ ಬಾಂಬ್ ದಾಳಿ
    ಇರಾನ್‌ನ ಫೋರ್ಡೊ, ನಟಾಂಜ್ ಮತ್ತು ಎಸ್ಪಹಾನ್ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಯಶಸ್ವಿ ಬಾಂಬ್ ದಾಳಿ ನಡೆಸಿರುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ. ಅಲ್ಲದೇ ನಮ್ಮ ಹಲವು ಗುರಿಗಳು ಇನ್ನೂ ಉಳಿದಿವೆ. ಶಾಂತಿ ಸಾಧಿಸದಿದ್ದರೆ ಮತ್ತೆ ದಾಳಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಎಲ್ಲ ವಿಮಾನಗಳು ಇರಾನ್ ವಾಯುಪ್ರದೇಶದಿಂದ ಸುರಕ್ಷಿತವಾಗಿ ಹೊರಗೆ ಬಂದಿವೆ. ಪ್ರಾಥಮಿಕ ಅಣು ಕೇಂದ್ರವಾದ ಫೋರ್ಡೊ ಮೇಲೆ ಪೂರ್ಣ ಪ್ರಮಾಣದ ಪೇಲೋಡ್ ಹೊಂದಿದ ಬಾಂಬ್ ದಾಳಿ ನಡೆಸಲಾಗಿದೆ. ಕಾರ್ಯವನ್ನು ಯಶಸ್ವಿಗೊಳಿಸಿದ ಅಮೆರಿಕದ ಮಹಾನ್ ಯೋಧರಿಗೆ ಅಭಿನಂದನೆಗಳು. ಜಗತ್ತಿನ ಬೇರೆ ಯಾವುದೇ ಸೈನ್ಯಕ್ಕೆ ಇಂತಹ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿ ಕೊನೆಗೆ ?ಇದು ಶಾಂತಿಯ ಸಮಯ’ ಎಂದಿದ್ದಾರೆ.

  • ವಿಶ್ವದ ಪವರ್‌ಫುಲ್‌ ವೆಪೆನ್‌ ʻಬಂಕರ್‌ ಬಸ್ಟರ್‌ʼ – 14,000 ಕೆಜಿ ತೂಕದ ಬಾಂಬ್‌ ಬಳಸಿ ಇರಾನ್‌ ಪರಮಾಣು ಕೇಂದ್ರದ ಮೇಲೆ ಅಮೆರಿಕ ದಾಳಿ

    ವಿಶ್ವದ ಪವರ್‌ಫುಲ್‌ ವೆಪೆನ್‌ ʻಬಂಕರ್‌ ಬಸ್ಟರ್‌ʼ – 14,000 ಕೆಜಿ ತೂಕದ ಬಾಂಬ್‌ ಬಳಸಿ ಇರಾನ್‌ ಪರಮಾಣು ಕೇಂದ್ರದ ಮೇಲೆ ಅಮೆರಿಕ ದಾಳಿ

    ವಾಷಿಂಗ್ಟನ್‌/ಟೆಹ್ರಾನ್‌: ಕಳೆದ 8 ದಿನಗಳಿಂದ ನಡೆಯುತ್ತಿದ್ದ ಇರಾನ್‌-ಇಸ್ರೇಲ್‌ ಸಂಘರ್ಷಕ್ಕೆ (Iran Israel) ಅಮೆರಿಕ ಅಧಿಕೃತವಾಗಿ ಎಂಟ್ರಿಯಾಗಿದೆ. ಇರಾನ್‌ನ ಫೋರ್ಡೊ, ನಟಾಂಜ್ ಮತ್ತು ಎಸ್ಪಹಾನ್‌ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಬಾಂಬ್‌ ದಾಳಿ (Bomb Attack) ನಡೆಸಿದೆ. 14,000 ಕೆಜಿ ತೂಕ ಹೊಂದಿರುವ ಹಾಗೂ ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ಎಂದು ಗುರುತಿಸಿಕೊಂಡಿರುವ ಬಿ-12 ಬಾಂಬರ್‌ ಬಳಸಿ ಅಮೆರಿಕ ದಾಳಿ ನಡೆಸಿದೆ.

    northrop b 2 spirit stealth bomber 1

    ವರದಿಗಳ ಪ್ರಕಾರ, ಅಮೆರಿಕವು 6 ಶಕ್ತಿಶಾಲಿ Northrop B-2 Spirit ಯುದ್ಧವಿಮಾನ ಬಳಸಿಕೊಂಡು ಡಜನ್‌ಗಟ್ಟಲೇ ಜಿಬಿಯು -57 ಎ/ಬಿ ಬೃಹತ್ ಆರ್ಡ್‌ನೆನ್ಸ್ ಪೆನೆಟ್ರೇಟರ್ (MOP) ಬಾಂಬ್‌ಗಳನ್ನ ಬಳಸಿ ದಾಳಿ ನಡೆಸಿದೆ. ಇದನ್ನ ʻಬಂಕರ್‌ ಬಸ್ಟರ್‌ʼ ಎಂದೂ ಕರೆಯಲಾಗುತ್ತದೆ. ಈ ʻಬಂಕರ್‌ ಬಸ್ಟರ್‌ʼ ಇರಾನ್‌ ರಾಜಧಾನಿ ಟೆಹ್ರಾನ್‌ನಿಂದ 100 ಕಿಮೀ ದೂರದಲ್ಲಿರುವ ಫೋರ್ಡೋ ಘಟಕದ ಮೇಲೆ ದಾಳಿ ಮಾಡಿದ್ರೆ, ಜಲಾಂತರ್ಗಾಮಿ ನೌಕೆಗಳಿಂದ ಹಾರಿಸಲಾದ 30 ಟೊಮಾಹಾಕ್ ಕ್ಷಿಪಣಿಗಳು ಉಳಿದ 2 ಅಣು ಕೇಂದ್ರಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿವೆ. ನೆಲ ಮಾಳಿಗೆಯಲ್ಲಿ ನಿರ್ಮಿಸಿದ್ದ ಅಣು ಕೇಂದ್ರವನ್ನು ಧ್ವಂಸಗೊಳಿಸಿದ ಅಮೆರಿಕದ ಬಾಂಬರ್‌ ಎಷ್ಟು ಪವರ್‌ ಫುಲ್‌ ಅಂತ ತಿಳಿಯಬೇಕಾದ್ರೆ ಮುಂದೆ ಓದಿ…

    northrop b 2 spirit stealth bomber 2

    ಇರಾನ್‌ನ ಫೋರ್ಡೋ ಪರಮಾಣು ಘಟಕವನ್ನ ಬೆಟ್ಟದ ಮೇಲೆ ಸ್ಥಾಪನೆ ಮಾಡಲಾಗಿದೆ. ಫೋರ್ಡೊ ಅತ್ಯಂತ ರಹಸ್ಯ ಮತ್ತು ಬಿಗಿ ಭದ್ರತೆಯ ಸೌಲಭ್ಯವಾಗಿದ್ದು 2009 ರಲ್ಲಿ ಈ ವಿಚಾರ ಸಾರ್ವಜನಿಕವಾಗಿ ಬೆಳಕಿಗೆ ಬಂದಿತ್ತು. ಇರಾನ್‌ನ ಪವಿತ್ರ ನಗರವಾದ ಕೋಮ್‌ಗೆ ಹತ್ತಿರದಲ್ಲಿ ನಿರ್ಮಾಣವಾಗಿರುವ ಈ ಘಟಕದ ನಿಜವಾದ ಗಾತ್ರ ಮತ್ತು ಒಳಗಡೆ ಯಾವೆಲ್ಲ ಸಂಶೋಧನೆಗಳು ನಡೆಯುತ್ತಿದೆ ಎನ್ನುವುದು ಇಂದಿಗೂ ಕುತೂಹಲವಾಗಿಯೇ ಉಳಿದುಕೊಂಡಿದೆ. ಹೀಗಿದ್ದರೂ ಇಸ್ರೇಲಿ ಗುಪ್ತಚರ ಸಂಸ್ಥೆ ಮೊಸಾದ್‌ ಕೆಲ ವರ್ಷಗಳ ಹಿಂದೆ ಕದ್ದ ಇರಾನಿನ ದಾಖಲೆಗಳಿಂದ ಕೆಲವು ವಿವರಗಳು ಬಹಿರಂಗವಾಗಿದೆ. ಇದನ್ನೂ ಓದಿ: 21 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್‌ ಬಲೂನ್‌ನಲ್ಲಿ ಬೆಂಕಿ ಅವಘಡ; 8 ಮಂದಿ ದುರ್ಮರಣ

    Fordo Nuclear Facility

    ಫೋರ್ಡೋ ಅಣು ಕೇಂದ್ರ ಎಷ್ಟು ಸೇಫ್‌?
    ಫೋರ್ಡೋ ಘಟಕದ ಮುಖ್ಯ ಸಭಾಂಗಣವು ನೆಲದಡಿಯಲ್ಲಿ ಸುಮಾರು 80 ರಿಂದ 90 ಮೀಟರ್ (295 ಅಡಿ) ಆಳದಲ್ಲಿದೆ. ಇಷ್ಟು ಅಡಿ ಆಳದಲ್ಲಿರುವ ಈ ಘಟಕವನ್ನು ಇಸ್ರೇಲ್ ಹೊಂದಿರುವ ಯಾವುದೇ ವೈಮಾನಿಕ ಬಾಂಬ್‌ನಿಂದ ಧ್ವಂಸ ಮಾಡಲು ಸಾಧ್ಯವಿಲ್ಲ. ಹೀಗಾಗಿಯೇ ವಿಶ್ವದಲ್ಲೇ ಅತಿಹೆಚ್ಚು ಪವರ್‌ಫುಲ್‌ ಆಗಿರುವ ಸ್ವದೇಶಿ ನಿರ್ಮಿತ GBU-57A/B Massive Ordinance Penetrator ಬಾಂಬ್‌ನಿಂದ ಅಮೆರಿಕ ದಾಳಿ ನಡೆಸಿದೆ.  ಇದನ್ನೂ ಓದಿ: ಇದು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾದ ಕ್ರೂರ ಕೃತ್ಯ – ಅಮೆರಿಕ ದಾಳಿ ಒಪ್ಪಿಕೊಂಡ ಇರಾನ್‌

    bunker buster bomb GBU 57AB Massive Ordinance Penetrator 3

    ಬಾಂಬರ್‌ನ ವಿಶೇಷತೆ ಏನು?
    2011 ರಿಂದ ಈ ಬಾಂಬ್‌ ಅಮೆರಿಕ ವಾಯುಸೇನೆಯ ಬತ್ತಳಿಕೆಯಲ್ಲಿದೆ. 6.2 ಮೀಟರ್‌ ಉದ್ದದ ಈ ಬಾಂಬ್‌ 13,608 ಕೆಜಿ ತೂಕವನ್ನು ಹೊಂದಿದೆ. ಈ ಬಾಂಬ್‌ ಅನ್ನು ʻಬಂಕರ್‌ ಬಸ್ಟರ್‌ʼ ಬಾಂಬ್‌ ಎಂದೇ ಕರೆಯಲಾಗುತ್ತದೆ. ಅಂದಾಜು ಸುಮಾರು 200 ಮೀಟರ್‌ ಆಳದಲ್ಲಿರುವ ಗುರಿಯನ್ನು ಧ್ವಂಸ ಮಾಡುವ ಸಾಮರ್ಥ್ಯವನ್ನು ಈ ಬಾಂಬ್‌ ಹೊಂದಿದೆ. 2007 ರಲ್ಲಿ ಈ ಬಾಂಬ್‌ ಪ್ರಯೋಗ ನಡೆದು 2011 ರಲ್ಲಿ 16 ಬಂಕರ್‌ ಬಾಂಬ್‌ ಅಮೆರಿಕ ವಾಯುಸೇನೆಗೆ ಸೇರ್ಪಡೆಯಾಗಿತ್ತು.

    ಜಿಪಿಎಸ್‌ ಆಧಾರಿತ ಈ ಬಾಂಬ್‌ ವಿನ್ಯಾಸವನ್ನು ಬೋಯಿಂಗ್‌ ಕಂಪನಿ ಮಾಡಿದ್ದು ಅಮೆರಿಕ ವಾಯುಸೇನೆ ಈ ಉತ್ಪಾದನೆ ಮಾಡಿದೆ. ಅಮೆರಿಕದ ವಾಯುಪಡೆಯ ಬಳಿ ಇರುವ ಅತ್ಯಂತ ಶಕ್ತಿಶಾಲಿ ಪರಮಾಣು ರಹಿತ ಬಾಂಬ್ ಎಂದೇ ಇದನ್ನು ಕರೆಯಲಾಗುತ್ತದೆ. ಇದನ್ನೂ ಓದಿ: ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಬಾಂಬ್‌ ದಾಳಿ

    bunker buster bomb GBU 57AB Massive Ordinance Penetrator 2

    ಈ ಬಾಂಬ್‌ ಅನ್ನು ಹಾಕಬೇಕಾದರೆ ಅಮರಿಕದ ಬಳಿ ಇರುವ ಶಕ್ತಿಶಾಲಿ Northrop B-2 Spirit ಯುದ್ಧವಿಮಾನದಿಂದ ಮಾತ್ರ ಸಾಧ್ಯ. ಬಾವಲಿಯಂತೆ ಕಾಣುವ ಈ ವಿಮಾನಕ್ಕೆ ಒಂದು ಬಾರಿ ಇಂಧನ ತುಂಬಿಸಿದರೆ 11 ಸಾವಿರ ಕಿಮೀ ದೂರ ಕ್ರಮಿಸಬಲ್ಲದು. ಅಲ್ಲದೇ ನಿರಂತರವಾಗಿ 44 ಗಂಟೆಗಳ ಕಾಲ ಹಾರುವ ಸಾಮರ್ಥ್ಯವನ್ನು ಹೊಂದಿದೆ. ಈ ವಿಮಾನವು ದೀರ್ಘಾವಧಿಯ ಕಾರ್ಯಾಚರಣೆ ನಡೆಸುವುದರಿಂದ ಶೌಚಾಲಯ, ಹಾಸಿಗೆ ಜೊತೆಗೆ ಮೈಕ್ರೋವೇವ್ ಹೊಂದಿದೆ. ಇಬ್ಬರು ಪೈಲಟ್‌ ಪೈಕಿ ಒಬ್ಬರು ವಿಶ್ರಾಂತಿ ಪಡೆದರೆ ಇನ್ನೊಬ್ಬರು ವಿಮಾನವನ್ನು ಹಾರಿಸುತ್ತಿರುತ್ತಾರೆ. ಇದರಿಂದಾಗಿ ಕಾರ್ಯಾಚರಣೆಯು ಅಡಚಣೆಯಿಲ್ಲದೆ ಮುಂದುವರಿಯುತ್ತದೆ.

    2001 ರಲ್ಲಿ ಐದು ಬಿ-2 ವಿಮಾನಗಳು ಅಫ್ಘಾನಿಸ್ತಾನದ ಮೇಲೆ ನಿರಂತರ 44 ಗಂಟೆಗಳ ಕಾರ್ಯಾಚರಣೆ ನಡೆಸಿತ್ತು. ಇದು ಇತಿಹಾಸದಲ್ಲಿ ಅತಿ ಉದ್ದದ ವಾಯು ಯುದ್ಧ ಕಾರ್ಯಾಚರಣೆ ಎಂಬ ಹೆಸರನ್ನು ಪಡೆದಿದೆ. ಇದನ್ನೂ ಓದಿ: ಆಪರೇಷನ್ ಸಿಂಧು – ಯುದ್ಧ ಪೀಡಿತ ಇರಾನ್‌ನಿಂದ 11 ಕನ್ನಡಿಗರು ವಾಪಸ್

    bunker buster bomb GBU 57AB Massive Ordinance Penetrator 1

    ಸದ್ಯ ಅಮೆರಿಕ ವಾಯುಸೇನೆ 19 ಬಿ-2 ಬಾಂಬರ್‌ ಯುದ್ಧ ವಿಮಾನಗಳನ್ನು ಹೊಂದಿದೆ. B-2 ಏಕಕಾಲದಲ್ಲಿ ಎರಡು MOP ಬಾಂಬ್‌ಗಳನ್ನು ಮಾತ್ರ ಸಾಗಿಸಬಲ್ಲದು. ಹೀಗಾಗಿ ಅಮೆರಿಕ ಈ ಬಾಂಬ್‌ ಹಾಕುವ ಮೂಲಕ ಇರಾನಿಗೆ ತಕ್ಕ ಪಾಠ ಕಲಿಸುವ ಸಂದೇಶ ಕೊಟ್ಟಿದೆ.