Tag: Footwear

  • ಮೆಸ್ಕಾಂ ಕಚೇರಿಯಲ್ಲಿದ್ದ ಅಂಬೇಡ್ಕರ್ ಭಾವಚಿತ್ರಕ್ಕೆ ಚಪ್ಪಲಿ ಏಟು – ದಲಿತ ಸಂಘಟನೆಗಳ ಆಕ್ರೋಶ

    ಮೆಸ್ಕಾಂ ಕಚೇರಿಯಲ್ಲಿದ್ದ ಅಂಬೇಡ್ಕರ್ ಭಾವಚಿತ್ರಕ್ಕೆ ಚಪ್ಪಲಿ ಏಟು – ದಲಿತ ಸಂಘಟನೆಗಳ ಆಕ್ರೋಶ

    ಚಿಕ್ಕಮಗಳೂರು: ಮೆಸ್ಕಾಂ ಕಚೇರಿ ಒಳಗೆ ಇದ್ದ ಅಂಬೇಡ್ಕರ್ ಭಾವಚಿತ್ರಕ್ಕೆ (Ambedkar Photo) ಕಿಡಿಗೇಡಿಗಳು ಚಪ್ಪಲಿಯಿಂದ ಹೊಡೆದಿರುವ ಘಟನೆ ಜಿಲ್ಲೆಯ ಶೃಂಗೇರಿ ಪಟ್ಟಣದ ಮೆಸ್ಕಾಂ (MESCOM) ಕಚೇರಿಯಲ್ಲಿ ನಡೆದಿದೆ.

    ಸರ್ಕಾರಿ ಕಚೇರಿಯಲ್ಲಿ ರಾಷ್ಟ್ರೀಯ ನಾಯಕರ ಭಾವಚಿತ್ರವನ್ನು ಹಾಕಲಾಗಿದೆ. ಅದರಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ್ದಾರೆ. ಅಂಬೇಡ್ಕರ್ ಭಾವಚಿತ್ರದಲ್ಲಿ ಚಪ್ಪಲಿ ಗುರುತು ಕಾಣಿಸಿಕೊಂಡಿದೆ. ಹಾಗಾಗಿ ಫೋಟೋಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ದಲಿತ ಸಂಘಟನೆಯವರು ಅಂಬೇಡ್ಕರ್ ಫೋಟೋವನ್ನು ಸ್ವಚ್ಛಗೊಳಿಸಿ ಹೂವಿನ ಹಾರ ಹಾಕಿದ್ದಾರೆ. ಕಚೇರಿ ಒಳಗೆ ಇದ್ದ ಅಂಬೇಡ್ಕರ್ ಫೋಟೋಗೆ ಅಪಮಾನವಾದರೂ ಅಧಿಕಾರಿಗಳು ದೂರು ನೀಡಲು ಮೀನಾಮೇಷ ಎಣಿಸಿದ್ದರು. ದಲಿತ ಸಂಘಟನೆಗಳು ಸ್ಥಳಕ್ಕೆ ಭೇಟಿ ನೀಡಿ ಆಕ್ರೋಶ ಹೊರಹಾಕಿದ ಬಳಿಕ ಶೃಂಗೇರಿ ಠಾಣೆಯಲ್ಲಿ ದೂರು ದಾಖಲಿಸಿ ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಐವರ ಬಂಧನ

    ಕಚೇರಿ ಒಳಗೆ ಇರುವ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ್ದು ಯಾರು ಎಂಬ ಯಕ್ಷ ಪ್ರಶ್ನೆ ಮೂಡಿದೆ. ಯಾಕೆಂದರೆ ಬಯಲು ಪ್ರದೇಶದ ಭಾವಚಿತ್ರವಾದರೆ ದಾರಿಹೋಕರು ಮಾಡಿರಬಹುದು ಎಂದು ಅಂದಾಜಿಸಬಹುದು. ಆದರೆ, ಸರ್ಕಾರಿ ಕಚೇರಿ ಒಳಗಡೆಯೇ ಇದ್ದ ಅಂಬೇಡ್ಕರ್ ಫೋಟೋಗೆ ಈ ರೀತಿ ಮಾಡಿದ್ದಾರೆ ಅಂದರೆ, ಒಳಗಡೆಯೇ ಇರುವವರು ಅಥವಾ ಕಚೇರಿಗೆ ಬಂದು ಹೋಗುವವರೇ ಮಾಡಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಈ ಬಗ್ಗೆ ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಿಖರವಾಗಿ ಹೇಳುವುದು ಕಷ್ಟ, ಆದರೆ ಸೇತುವೆ ರೂಪದ ರಚನೆ ಇದೆ – ರಾಮ ಸೇತು ಬಗ್ಗೆ ಕೇಂದ್ರ ಉತ್ತರ

    Live Tv
    [brid partner=56869869 player=32851 video=960834 autoplay=true]

  • ಗಣಪತಿ ವಿಸರ್ಜನೆ ಬಳಿಕ 6 ಟ್ರಕ್ ತುಂಬುವಷ್ಟು ಚಪ್ಪಲಿಗಳನ್ನು ಸಂಗ್ರಹಿಸಿದ ಘನತ್ಯಾಜ್ಯ ಇಲಾಖೆ

    ಗಣಪತಿ ವಿಸರ್ಜನೆ ಬಳಿಕ 6 ಟ್ರಕ್ ತುಂಬುವಷ್ಟು ಚಪ್ಪಲಿಗಳನ್ನು ಸಂಗ್ರಹಿಸಿದ ಘನತ್ಯಾಜ್ಯ ಇಲಾಖೆ

    ಮುಂಬೈ: ಗಣಪತಿ ವಿಸರ್ಜನೆ ಬಳಿಕ ಪುಣೆಯ ಮುನ್ಸಿಪಲ್ ಕಾರ್ಪೊರೆಷನ್(ಪಿಎಂಸಿ) ಘನತ್ಯಾಜ ಇಲಾಖೆ(ಎಸ್‌ಡಬ್ಲ್ಯುಎಂ) ನಗರದಲ್ಲಿ ಸುಮಾರು 21 ಟನ್‌ಗಳಷ್ಟು ಕಸವನ್ನು ಸಂಗ್ರಹಿಸಿದೆ. ಇದರಲ್ಲಿ ಸುಮಾರು 6 ಮಿನಿ ಟ್ರಕ್‌ಗಳಲ್ಲಿ ತುಂಬಲಾಗುವಷ್ಟು ಚಪ್ಪಲಿಗಳೇ ದೊರೆತಿವೆ ಎಂದು ವರದಿಯಾಗಿದೆ.

    ಪುಣೆಯಲ್ಲಿ ನಡೆದ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ 5 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಹಬ್ಬ ಕಳೆದ ಬಳಿಕ ಸುಮಾರು 1,037 ಪಿಎಂಸಿ ಸಿಬ್ಬಂದಿ ಬೀದಿಗಿಳಿದು ಕಸವನ್ನು ಸಂಗ್ರಹಿಸಿದ್ದಾರೆ. ಸ್ವಚ್ಛ ಸಂಸ್ಥೆ, ಜನವಾಣಿ ಸಂಸ್ಥೆ, ನಾನಾಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನ, ರೋಟರಿ ಕ್ಲಬ್, ಮರಾಠವಾಡ ಕಾಲೇಜು ಹಾಗೂ ಇತರ ಸಂಸ್ಥೆಗಳ ಸುಮಾರು 650 ಸ್ವಯಂ ಸೇವಕರು ಈ ಸ್ವಚ್ಛ ನಗರ ಅಭಿಯಾನಕ್ಕೆ ಕೈ ಜೋಡಿಸಿದ್ದರು ಎಂದು ಎಸ್‌ಡಬ್ಲ್ಯುಎಂ ಉಪ ಆಯುಕ್ತ ಆಶಾ ರಾವತ್ ತಿಳಿಸಿದರು. ಇದನ್ನೂ ಓದಿ: ಕೊನೆಗೂ ತೇಜಸ್ವಿ ನಿವಾಸಕ್ಕೆ ತಲುಪಿತು ಕಾಂಗ್ರೆಸ್ ದೋಸೆ – ಡೆಲಿವರಿ ಬಾಯ್ ಪೊಲೀಸರ ವಶಕ್ಕೆ

    ಗಣಪತಿ ವಿಸರ್ಜನೆ ಮೆರವಣಿಗೆ ಲಕ್ಷ್ಮಿ ರಸ್ತೆ, ತಿಲಕ್ ರಸ್ತೆ, ಕುಮ್ಟೇಕರ್ ರಸ್ತೆ, ನಾರಾಯಣ ಪೇಠ ರಸ್ತೆ, ಬಾಜಿರಾವ್ ರಸ್ತೆ, ಶಿವಾಜಿ ರಸ್ತೆ, ಅಲ್ಕಾ ಚೌಕ್, ಖಂಡುಜಿ ಬಾಬಾ ಚೌಕ್, ಕರವೇ ರಸ್ತೆ, ಜಂಗ್ಲಿ ಮಹಾರಾಜ್ ರಸ್ತೆ, ಸೇನಾಪತಿ ಬಾಪಟ್ ರಸ್ತೆ, ಗಣೇಶಖಿಂಡ್ ರಸ್ತೆ, ಫರ್ಗುಸನ್ ಕಾಲೇಜು ರಸ್ತೆ, ಪ್ರಭಾತ್ ಮಾರ್ಗವಾಗಿ ಸಾಗಿದೆ ಎಂದು ವರದಿಗಳು ತಿಳಿಸಿವೆ.

    ಮೆರವಣಿಗೆ ಸಾಗಿದ ಪ್ರದೇಶದಲ್ಲಿ ಕಸ ಸಂಗ್ರಹಿಸಲು ಪಿಎಂಸಿ 9 ಕಾಂಪ್ಯಾಕ್ಟರ್‌ಗಳು, 13 ಸಣ್ಣ ವಾಹನಗಳು, 6 ಟೆಂಪೋಗಳು, 8 ಟಿಪ್ಪರ್‌ಗಳು ಮತ್ತು 8 ಇತರ ವಾಹನಗಳನ್ನು ಬಳಸಿದೆ ಎನ್ನಲಾಗಿದೆ. ಇದನ್ನೂ ಓದಿ: ಕುಂಬಳಕಾಯಿ 47,000 ರೂ.ಗೆ ಹರಾಜು

    Live Tv
    [brid partner=56869869 player=32851 video=960834 autoplay=true]

  • ಕಾಶಿ ವಿಶ್ವನಾಥ ಧಾಮದ ಕಾರ್ಮಿಕರಿಗೆ ಮೋದಿಯಿಂದ ಉಡುಗೊರೆ

    ಲಕ್ನೋ: ಕಾಶಿ ವಿಶ್ವನಾಥ ಧಾಮದಲ್ಲಿ ಕೆಲಸಮಾಡುವ ಕಾರ್ಮಿಕರು ಕೊರೆಯುವ ಚಳಿಯಲ್ಲಿಯೂ ಬರಿಗಾಲಿನಲ್ಲಿ ಇರುವುದನ್ನು ತಿಳಿದ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ 100 ಜೊತೆ ಸೆಣಬಿನ ಪಾದಕ್ಷೆಗಳನ್ನು ಕಳುಹಿಸಿದ್ದಾರೆ.

    ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಗೆ ವಾರಣಾಸಿಗೆ ಭೇಟಿ ನೀಡಿದ ಮೋದಿ ದೇವಾಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಹೆಚ್ಚಿನವರು ಬರಿಗಾಲಿನಲ್ಲಿ ಇರುತ್ತಾರೆ ಎಂಬುದನ್ನು ತಿಳಿದುಕೊಂಡಿದ್ದರು. ಹೀಗಾಗಿ ಅವರಿಗಾಗಿ 100 ಜೊತೆ ಪಾದರಕ್ಷೆಗಳನ್ನು ಕಳುಹಿಸಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪ್ರಧಾನಿಗೆ ಭದ್ರತಾ ವೈಫಲ್ಯ – 3 ನಿವೃತ್ತ ನ್ಯಾಯಾಧೀಶರ ಸಮಿತಿಯಿಂದ ತನಿಖೆ

    ದೇವಸ್ಥಾನದ ಆವಣದಲ್ಲಿ ಚರ್ಮ ಅಥವಾ ರಬ್ಬರ್‌ನಿಂದ ತಯಾರಿಸಿದ ಪಾದರಕ್ಷೆಗಳನ್ನು ಧರಿಸುವುದು ನಿಷೇಧಿಸಲಾಗಿದೆ. ಈ ಕ್ರಮವನ್ನು ದೇವಸ್ಥಾನದ ಅರ್ಚಕರು, ಭದ್ರತಾ ಸಿಬ್ಬಂದಿ, ನೈರ್ಮಲ್ಯ ಕಾರ್ಯಕರ್ತರು ಹಾಗೆಯೇ ಭಕ್ತರು ಚಾಚು ತಪ್ಪದೇ ಪಾಲಿಸುತ್ತಾರೆ. ಹೀಗಾಗಿ ಪ್ರಧಾನಿ ಸೆಣಬಿನಿಂದ ತಯಾರಿಸಿದ ಪಾದರಕ್ಷೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ಮೋದಿ, ಯೋಗಿ ಫೋಟೋಗಳೊಂದಿಗೆ ಉಚಿತ ಆಹಾರ ಪ್ಯಾಕೆಟ್‍ಗಳನ್ನು ವಿತರಿಸುವಂತಿಲ್ಲ

    ಕಾಶಿ ವಿಶ್ವನಾಥ ಕಾರಿಡರ್ ಉದ್ಘಾಟನೆಯ ಸಮಯದಲ್ಲಿ ಪ್ರಧಾನಿ ಮೋದಿ ಕಾರ್ಮಿಕರು ಜೊತೆ ಗುಂಪು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಅವರ ಜೊತೆ ಭೋಜನ ವಿದಿದ್ದರು.

  • ಯುವತಿಯರಿಗಾಗಿ ಈ 5 ಬಗೆಯ ಸ್ಟೈಲಿಶ್ ಪಾದರಕ್ಷೆ

    ಪ್ರತಿನಿತ್ಯದ ಜೀವನದಲ್ಲಿ ಪಾದರಕ್ಷೆ ಎಷ್ಟು ಮುಖ್ಯ ಅಲ್ವಾ? ಪಾದರಕ್ಷೆಗಳಿಲ್ಲದೇ ಯಾರು ತಾನೇ ಮನೆಯಿಂದ ಹೊರಗಡೆ ಹೋಗುತ್ತಾರೆ? ಮುಖ್ಯವಾಗಿ ಮಹಿಳೆಯರು ಹೊಸ ಹೊಸ ವಿನ್ಯಾಸದ ಪಾದರಕ್ಷೆಗಳಿಗೆ ಮಾರು ಹೋಗುತ್ತಾರೆ. ಇವುಗಳು ನಮ್ಮ ಪಾದವನ್ನು ರಕ್ಷಿಸುವುದಲ್ಲದೇ ಸ್ಟೈಲಿಶ್ ಆಗಿ ಕಾಣಲು ಸಹಕಾರಿಯಾಗುತ್ತವೆ.

    ಹೀಗಿರುವಾಗ ಹೆಣ್ಣು ಮಕ್ಕಳಲ್ಲಿ 5 ಜೊತೆ ಪಾದರಕ್ಷೆಗಳು ಇಲ್ಲದಿದ್ದರೆ ಹೇಗೆ? ಸ್ಟೈಲ್‌ನ ಡ್ರೆಸ್‌ಗಳಿಗೆ ತಕ್ಕಂತೆ ಪಾದುಕೆಗಳನ್ನು ಧರಿಸುವುದೂ ಮುಖ್ಯವಾಗುತ್ತದೆ. ಪ್ರತೀ ಹುಡುಗಿಯರೂ ಹೊಂದಿರಬೇಕಾದ 5 ರೀತಿಯ ಪಾದರಕ್ಷೆಗಳ ಪಟ್ಟಿ ಹೀಗಿದೆ.

    ಹೀಲ್ಸ್:
    ಫ್ಯಾಶನ್ ಪ್ರಿಯರ ಬಳಿ ಇರಲೇಬೇಕು ಹೀಲ್ಸ್. ಎತ್ತರ ಇರುವವರಿಗೆ ಹೀಲ್ಸ್ ಅಷ್ಟೊಂದು ಅಗತ್ಯ ಬೀಳದಿದ್ದರೂ ಕುಳ್ಳಗೆ ಇರುವವರಿಗೆ ಹೀಲ್ಸ್ ಬಹು ಮುಖ್ಯವಾಗಿರುತ್ತದೆ. ನಿಮ್ಮ ಬಳಿ ಇರುವ ಹೀಲ್ಸ್, ಎಲ್ಲಾ ಬಣ್ಣದ ಬಟ್ಟೆಗಳಿಗೂ ಸರಿ ಹೊಂದುವಂತಿದ್ದರೆ ಚೆನ್ನಾಗಿರುತ್ತದೆ. ಇದನ್ನೂ ಓದಿ: ಅಪ್ಪನ Birthdayಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಐರಾ, ಯಥರ್ವ್

    ನೀವು ಕೇವಲ ಒಂದು ಜೊತೆ ಹೀಲ್ಸ್ ಖರೀದಿಸಲು ಇಷ್ಟ ಪಡುತ್ತೀರಿಯಾದರೆ ಕಪ್ಪು ಇಲ್ಲವೇ ಚರ್ಮದ ಬಣ್ಣದ ಹೀಲ್ಸ್ ಖರೀದಿಸುವುದೇ ಉತ್ತಮ. ಇವುಗಳು ಫಾರ್ಮಲ್ ಈವೆಂಟ್‌ಗಳ ದಿರಿಸಿನೊಂದಿಗೆ ಮ್ಯಾಚ್ ಆಗುವುದರೊಂದಿಗೆ ಮೆರುಗನ್ನೂ ನೀಡುತ್ತವೆ. ಹೀಲ್ಸ್ ಪೆನ್ಸಿಲ್ ಪಾಯಿಂಟ್‌ನದ್ದೇ ಆಗಬೇಕೆಂದೇನಿಲ್ಲ. ಬ್ಲಾಕ್ ಹೀಲ್ಸ್ ಕೂಡಾ ಸ್ಟಾಂಡರ್ಡ್ ಲುಕ್ ನೀಡುವುದರೊಂದಿಗೆ ನಿಮ್ಮ ಪಾದಗಳಿಗೂ ಕಂಫರ್ಟ್ ಆಗಿರುತ್ತದೆ.

    ಶೂಸ್:
    ಒಂದೆರಡು ವರ್ಷಗಳ ಹಿಂದೆ ಕಪ್ಪು ಬಣ್ಣದ ಶೂಗಳ ಟ್ರೆಂಡ್ ಇತ್ತು. ಪ್ರತಿ ಕಾಲೇಜು ಹುಡುಗಿಯರ ಕಾಲಿನಲ್ಲೂ ಶೂಗಳು ರಾರಾಜಿಸುತ್ತಿದ್ದವು. ಈ ಟ್ರೆಂಡ್ ಹಳೆಯದಾಗಿಲ್ಲವಾದರೂ ಬಣ್ಣಗಳಲ್ಲಿ ಬದಲಾವಣೆ ನೋಡಬಹುದು. ಇತ್ತೀಚೆಗೆ ಕಪ್ಪು ಬಣ್ಣದ ಶೂಗಳಿಗಿಂತಲೂ ಬಿಳಿ ಬಣ್ಣದ ಶೂಗಳನ್ನು ಹುಡುಗಿಯರು ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ಇವುಗಳು ಕೂಡಾ ಸ್ಟೈಲಿಶ್ ಬಟ್ಟೆಗಳೊಂದಿಗೆ ಟ್ರೆಂಡಿಯಾಗಿ ಕಾಣಿಸುತ್ತವೆ. ಇದನ್ನೂ ಓದಿ: ಅಕ್ಕಿ ಹಿಟ್ಟಿನಿಂದ ಮಾಡಿ ರುಚಿಯಾದ ಪೇಡ

    ಕಾಲೇಜು ಹುಡುಗಿಯರಿಗೆ ಶೂಗಳು ಜೀನ್ಸ್, ಫ್ರಾಕ್, ಜಂಪ್‌ಸೂಟ್‌ಗಳಿಗೆ ಚೆನ್ನಾಗಿ ಹೊಂದಿಕೆಯಾಗುತ್ತವೆ. ಕಪ್ಪು ಅಥವಾ ಬಿಳಿಯ ಶೂ ನಿಮ್ಮಲ್ಲಿದ್ದರೆ, ಸ್ಟೈಲಿಶ್ ಬಟ್ಟೆಗಳಿಗೆ ಮ್ಯಾಚ್ ಮಾಡಿಕೊಂಡು ಧರಿಸಬಹುದು.

    ಬ್ಯಾಲೆಟ್ ಶೂಸ್:
    ಕಾಲೇಜು ಹುಡುಗಿಯರ ಅಚ್ಚುಮೆಚ್ಚಿನ ಪಾದರಕ್ಷೆಗಳೆಂದರೆ ಅವುಗಳೇ ಬ್ಯಾಲೆಟ್ ಶೂಗಳು. ಪ್ರತಿಯೊಂದು ಸ್ಟೈಲ್‌ನ ಬಟ್ಟೆಗಳಿಗೂ ಹೊಂದಿಕೊಂಡು ಹೋಗಬಲ್ಲ ಬ್ಯಾಲೆಟ್ ಶೂವನ್ನು ಹೆಣ್ಣುಮಕ್ಕಳೂ ಹೊಂದಿರಲೇ ಬೇಕು. ಇವುಗಳು ಜೀನ್ಸ್ ಅಥವಾ ಎತ್ನಿಕ್ ಉಡುಗೆಗಳಿಗೆ ಪರ್ಫೆಕ್ಟ್ ಆಗಿ ಮ್ಯಾಚ್ ಆಗುತ್ತವೆ. ಇದನ್ನೂ ಓದಿ: ಶೂಟಿಂಗ್‍ನಲ್ಲಿ ಪಾಲ್ಗೊಂಡ ಮೇಘನಾ ರಾಜ್

    ಸ್ಲೈಡರ್, ಸ್ಯಾಂಡಲ್ಸ್ ಅಥವಾ ಫ್ಲಾಟ್ಸ್:
    ಬ್ಯಾಲೆಟ್ ಶೂಗಳನ್ನು ಧರಿಸಲು ಇಷ್ಟಪಡದವರು ಅಥವಾ ಕಂಫರ್ಟಬಲ್ ಎನಿಸದವರು ಸ್ಲೈಡರ್ ಇಲ್ಲವೇ ಸ್ಯಾಂಡಲ್‌ಗಳನ್ನು ಹೊಂದಿರಲೇಬೇಕು. ಇವು ಸಹ ಯಾವುದೇ ರೀತಿಯ ಬಟ್ಟೆಗೂ ಹೊಂದಿಕೆಯಾಗುತ್ತವೆ. ಇವುಗಳು ಹೆಣ್ಣುಮಕ್ಕಳ ಡೈಲಿ ಯೂಸ್ ಬಟ್ಟೆಗಳಿಗೆ ಜೋಡಿಯಾಗಬಲ್ಲವು. ಕುರ್ತಾ ಟಾಪ್, ಜೀನ್ಸ್, ಲೆಗಿನ್ಸ್, ಅಥವಾ ಚೂರಿದಾರ್ ಯಾವುದೇ ರೀತಿಯ ಉಡುಗೆಗೆ ಇವುಗಳು ಮ್ಯಾಚ್ ಆಗುತ್ತವೆ.

    ಫಂಕ್ಷನ್ ವೇರ್ಸ್:
    ನೀವು ಮದುವೆ ಸಮಾರಂಭ ಅಥವಾ ಟ್ರೆಡಿಶನಲ್ ಈವೆಂಟ್‌ಗೆ ಯಾವ ರೀತಿಯ ಪಾದುಕೆಗಳನ್ನು ಧರಿಸುತ್ತೀರಿ? ಮೇಲೆ ತಿಳಿಸಲಾದ ಯಾವುದೇ ರೀತಿಯ ಪಾದರಕ್ಷೆ ಅಷ್ಟಾಗಿ ಸರಿ ಹೊಂದುವುದಿಲ್ಲ ಎನಿಸುವವರು, ಒಂದು ಜೊತೆ ಫಂಕ್ಷನ್ ವೇರ್ ಹೊಂದಿರುವುದು ಸೂಕ್ತ. ಇವುಗಳಿಗೆ ಆಯ್ಕೆ ನೀಡುವುದಾದರೆ ಕೋಲಾಪುರಿ ಅಥವಾ ಮೊಜಿರಿ ಶೈಲಿಯ ಪಾದುಕೆಗಳ ಹೆಸರನ್ನು ತಿಳಿಸಬಹುದು. ಇದನ್ನೂ ಓದಿ: ಹೋಟೆಲ್ ಸ್ಟೈಲ್‌ನಲ್ಲಿ ಮಾಡಿ ರುಚಿಯಾದ ಪನೀರ್ ಕರಿ

    ಇವುಗಳು ಸೀರೆ, ಲೆಹೆಂಗಾ, ಗಾಗ್ರಾ, ಅಥವಾ ಇನ್ನಿತರ ಗ್ರಾಂಡ್ ಬಟ್ಟೆಗಳಿಗೆ ಹೊಂದಿಕೆಯಾಗುತ್ತವೆ. ಇವುಗಳು ನಿಮ್ಮ ಟ್ರೆಡಿಶನಲ್ ಬಟ್ಟೆಗಳ ಲುಕ್ ಹಾಳು ಮಾಡದೇ ಇನ್ನಷ್ಟು ಮೆರುಗು ನೀಡುವುದು ಖಂಡಿತಾ.

  • ಪುಟ್ಟಗೌರಿ ಖ್ಯಾತಿಯ ನಟಿ ರಂಜನಿಯಿಂದ ಎಡವಟ್ಟು

    ಪುಟ್ಟಗೌರಿ ಖ್ಯಾತಿಯ ನಟಿ ರಂಜನಿಯಿಂದ ಎಡವಟ್ಟು

    ಬೀದರ್: ಬಸವಣ್ಣನ ಕರ್ಮಭೂಮಿಯಲ್ಲಿ ನಡೆದ ಕಲ್ಯಾಣ ಪರ್ವ ಕಾರ್ಯಕ್ರಮದಲ್ಲಿ ಪಾದರಕ್ಷೆ ಹಾಕಿಕೊಂಡು ವೇದಿಕೆ ಏರಿ ಪುಟ್ಟಗೌರಿ ಧಾರವಾಹಿ ಖ್ಯಾತಿಯ ನಾಯಕಿ ರಂಜನಿ ರಾಘವನ್ ಎಡವಟ್ಟು ಮಾಡಿಕೊಂಡಿದ್ದಾರೆ.

    ಇಂದು ಬಸವಣ್ಣನ ಕರ್ಮ ಭೂಮಿ ಬಸವಕಲ್ಯಾಣದಲ್ಲಿ 17ನೇ ಕಲ್ಯಾಣ ಪರ್ವ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರದಲ್ಲಿ ಕಲ್ಯಾಣ ಪರ್ವ ಪವಿತ್ರ ವೇದಿಕೆಯಲ್ಲಿ ಬಸವ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಸೇರಿದಂತೆ ಶರಣರು ಇದ್ದರು. ಆದರೆ ಈ ವೇದಿಕೆಯ ಮೇಲೆ ಪುಟ್ಟಗೌರಿ ಖ್ಯಾತಿಯ ರಂಜನಿ ರಾಘವನ್ ಚಪ್ಪಲಿ ಹಾಕಿಕೊಂಡು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ.

    ರಂಜನಿ ಕಲ್ಯಾಣ ಪರ್ವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಮಹಿಳಾ ಪೊಲೀಸರು ಮತ್ತು ಶರಣರು ಅವರನ್ನು ವೇದಿಕೆಯ ಮೇಲೆ ಕರೆದುಕೊಂಡು ಬರುತ್ತಿದ್ದರು. ವೇದಿಕೆಯ ಮೆಟ್ಟಿಲು ವರೆಗೂ ಪೊಲೀಸರು ಬಂದಿದ್ದಾರೆ. ಆದರೆ ಅಲ್ಲಿಂದ ಪೊಲೀಸರು ಬಂದಿಲ್ಲ. ಬಳಿಕ ರಂಜನಿ ಅವರು ಪಾದರಕ್ಷೆಯ ಸಮೇತ ವೇದಿಕೆಯ ಮೇಲೆ ಹೋಗಿದ್ದಾರೆ.

    ಅಷ್ಟೇ ಅಲ್ಲದೇ ರಂಜನಿ ಅವರ ಕೈಯಿಂದ ವೇದಿಕೆಯ ಮೇಲಿದ್ದವರಿಗೆ ಹಾರ ಹಾಕಿಸಲು ಶರಣರು ಮುಂದಾಗಿದ್ದರು. ಈ ಸಂದರ್ಭದಲ್ಲಿ ಅವರು ಹಾರ ಹಾಕಲು ಮುಂದಾಗುತ್ತಿದ್ದರು. ಆಗ ಅವರ ಪಕ್ಕದಲ್ಲಿದ್ದರು ಬಂದು ಪಾದರಕ್ಷೆ ಬಿಡುವಂತೆ ಸೂಚಿಸಿದ್ದಾರೆ. ಬಳಿಕ ರಂಜನಿಯವರು ಪಾದರಕ್ಷೆಯನ್ನು ಬಿಟ್ಟು ವೇದಿಕೆಯ ಮೇಲೆ ಆಸೀನರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಮ್ಮ ಭಗವಾನ್ ಪಾದರಕ್ಷೆಯನ್ನು ಮೈಮೇಲೆ ಸವರಿಕೊಂಡ ಸಚಿವ ಮಹೇಶ್: ವಿಡಿಯೋ ವೈರಲ್

    ಅಮ್ಮ ಭಗವಾನ್ ಪಾದರಕ್ಷೆಯನ್ನು ಮೈಮೇಲೆ ಸವರಿಕೊಂಡ ಸಚಿವ ಮಹೇಶ್: ವಿಡಿಯೋ ವೈರಲ್

    ಚಾಮರಾಜನಗರ: ಪ್ರಾಥಮಿಕ ಶಿಕ್ಷಣ ಸಚಿವ ಎನ್.ಮಹೇಶ್ ಅಮ್ಮ ಭಗವಾನ್ ಪಾದರಕ್ಷೆಯನ್ನು ಮೈಮೇಲೆ ಸವರಿಕೊಂಡ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೊಳ್ಳೇಗಾಲ ಮತಕ್ಷೇತ್ರದಿಂದ ಬಿಎಸ್‍ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎನ್.ಮಹೇಶ್ ಅವರು ಗೆಲುವು ಸಾಧಿಸಿ ಸಚಿವರಾಗಿದ್ದಾರೆ. ಎನ್.ಮಹೇಶ್ ಅವರು ಕೆಲವು ದಿನಗಳ ಹಿಂದಷ್ಟೇ ಸುತ್ತೂರು ಶ್ರೀಗಳ ಕಾಲಿಗೆ ಬಿದ್ದು ನಮಸ್ಕರಿಸಿ ಭಾರೀ ಚರ್ಚೆಗೆ ಕಾರಣವಾಗಿದ್ದರು. ಇದರ ಬೆನ್ನಲ್ಲೆ ಈಗ ಅಮ್ಮ ಭಗವಾನ್ ಎಂಬ ಸ್ವಾಮೀಜಿಯ ಪಾದರಕ್ಷೆಯನ್ನು ಮೈಮೇಲೆ ಸವರಿಕೊಂಡ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಆಗುತ್ತಿದ್ದಂತೆ, ಭಾರೀ ಪ್ರಮಾಣದ ಟೀಕೆಗಳು ಕೇಳಿಬರುತ್ತಿದ್ದು, ಈ ಕುರಿತು ಅಂಬೇಡ್ಕರ್‍ವಾದಿಗಳು ಅಸಮಾಧಾನ ವ್ಯಕ್ತಡಿಸಿದ್ದಾರೆ. ಅಂಬೇಡ್ಕರ್ ವಿಚಾರಧಾರೆಯನ್ನು ಊರೆಲ್ಲ ಹರಡಿ, ಈಗ ಅವರ ಸ್ವಾಭಿಮಾನವನ್ನು ಹರಾಜು ಹಾಕುವ ಕೃತ್ಯವನ್ನು ಎನ್.ಮಹೇಶ್ ಮಾಡುತ್ತಿದ್ದಾರೆ. ಅಂಬೇಡ್ಕರ್ ಸ್ವಾಭಿಮಾನದ ಚಿಂತನೆಯನ್ನು ಸ್ವಾಮೀಜಿ ಚಪ್ಪಲಿ ತಳಕ್ಕಿಟ್ಟಿದ್ದು, ಬಿಎಸ್‍ಪಿ ಹಾಗೂ ಅಂಬೇಡ್ಕರಿಸಮ್ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಬೆಂಬಲಿಗರು ಕಮೆಂಟ್ ಮಾಡುತ್ತಿದ್ದಾರೆ.

    https://youtu.be/jg2vq0ZAyTc

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಎನ್ ಮಹೇಶ್, ಚುನಾವಣೆ ಪ್ರಚಾರಕ್ಕಾಗಿ ಕೊಳ್ಳೇಗಾಲಕ್ಕೆ ಹೋಗಿದ್ದೆ. ಈ ವೇಳೆ ಸ್ಥಳೀಯರು ನೀವು ಪೂಜೆ ಮಾಡಿ ಒಳ್ಳೆದಾಗುತ್ತದೆ ಎಂದು ಹೇಳಿದರು. ಅವರ ಮನಸ್ಸಿಗೆ ಧಕ್ಕೆ ತರಬಾರದು ಎನ್ನುವುದಕ್ಕೆ ನಾನು ಪಾದ ಪೂಜೆ ಮಾಡಿದ್ದು ಸತ್ಯ. ಆದರೆ ನಾವು ಯಾವುದೇ ಧರ್ಮಕ್ಕೆ ಸೇರಿಲ್ಲ. ಒಬ್ಬ ಜನಪ್ರತಿನಿಧಿಯಾಗಿ ಉಳಿದ ಧರ್ಮಗಳನ್ನು ಗೌರವಿಸಬೇಕಾಗುತ್ತದೆ. ನಾನು ಚರ್ಮಕ್ಕೆ ಪಾದರಕ್ಷೆ ಮುಟ್ಟಿಸಿಕೊಂಡಿಲ್ಲ, ಬಟ್ಟೆಗೆ ಮುಟ್ಟಿಸಿಕೊಂಡಿರುವೆ. ನಾನು ಅಂಬೇಡ್ಕರ್ ಸಿದ್ಧಾಂತಗಳಿಗೆ ಧಕ್ಕೆ ತಂದಿದ್ದೇನೆ ಎಂದು ಕೆಲವರು ದೂರಿದ್ದಾರೆ. ಆದರೆ ನಾನು ಅದನ್ನು ಒಪ್ಪುವುದಿಲ್ಲ. ನಾನು ಕಟ್ಟಾ ಅಂಬೇಡ್ಕರ್‍ವಾದಿ ಎಂದಿದ್ದಾರೆ.

  • ಚಪ್ಪಲಿಯಲ್ಲಿ ಕ್ಯಾಮೆರಾ ಇಟ್ಕೊಂಡು ಮಹಿಳೆಯರ ಫೋಟೋ ತೆಗೆಯುತ್ತಿದ್ದ ವಿಕೃತಕಾಮಿ ಅರೆಸ್ಟ್

    ಚಪ್ಪಲಿಯಲ್ಲಿ ಕ್ಯಾಮೆರಾ ಇಟ್ಕೊಂಡು ಮಹಿಳೆಯರ ಫೋಟೋ ತೆಗೆಯುತ್ತಿದ್ದ ವಿಕೃತಕಾಮಿ ಅರೆಸ್ಟ್

    ತಿರುವಂತನಪುರಂ: ತನ್ನ ಪಾದರಕ್ಷೆಯಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟುಕೊಂಡು ಮಹಿಳೆಯರ ಫೋಟೋ ತೆಗೆಯುತ್ತಿದ್ದ ಕಾಮುಕನೊಬ್ಬನನ್ನು ಪೊಲೀಸರ ಅತಿಥಿಯಾಗಿದ್ದಾನೆ.

    ಕೇರಳದ ಬಿಜು ಬಂಧಿತ ಆರೋಪಿ. ಈತ ತ್ರಿಶೂರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಕಲೋಲ್‍ಸವಂ(ರಾಜ್ಯ ಕಲಾ ಹಬ್ಬ) ಕಾರ್ಯಕ್ರಮದಲ್ಲಿ ಮಹಿಳೆಯರ ಫೋಟೋ ತೆಗೆಯಲು ಯತ್ನಿಸುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದಾನೆ.

    ಪಾದರಕ್ಷೆಯಲ್ಲಿ ಕ್ಯಾಮೆರಾ ಹೀಗಿತ್ತು:
    ಪಾದರಕ್ಷೆಯಲ್ಲಿ ಒಂದು ಸಣ್ಣ ರಂಧ್ರ ಮಾಡಿದ್ದ. ಈ ರಂಧ್ರಕ್ಕೆ ಕ್ಯಾಮೆರಾ ಬರುವಂತೆ ಫೋನನ್ನು ಜೋಡಿಸಿದ್ದ. ಈ ಮೂಲಕ ಆತ ಮಹಿಳೆಯರ ಫೋಟೋ, ವಿಡಿಯೋಗಳನ್ನು ಸೆರೆ ಹಿಡಿಯುತ್ತಿದ್ದ. ಒಂದು ವೇಳೆ ಬೇರೆಯವರು ತನ್ನ ಪಾದರಕ್ಷೆಯ ಮೇಲೆ ಕಾಲಿಟ್ಟರೆ ಫೋನಿಗೆ ಹಾನಿ ಆಗಬಾರದೆಂದು ಮುಂಜಾಗೃತವಾಗಿ ವಿಶೇಷ ಸ್ಟೀಲ್ ಕವರ್ ಕೂಡಾ ಅಳವಡಿಸಿಕೊಂಡಿದ್ದ.

    ಬಿಜು ಫೋನ್ ಹಾಕಿದ ಪಾದರಕ್ಷೆ ಹಾಕಿಕೊಂಡು ಜನಸಮೂಹದ ಮಧ್ಯೆ ಹೋಗುತ್ತಿದ್ದ. ಅಲ್ಲಿ ಹುಡುಗಿಯರು ಮತ್ತು ಮಹಿಳೆಯರ ಕೆಳಗಿನಿಂದ ಫೋಟೋಗಳನ್ನು ತೆಗೆದುಕೊಳುತ್ತಿದ್ದ. ಅಥವಾ ಜನಸಂದಣಿ ಇರುವ ಕಡೆ ಪಾದರಕ್ಷೆಗಳನ್ನ ಬಿಟ್ಟು, ದೂರದಲ್ಲಿ ನಿಂತು ನೋಡುತ್ತಿದ್ದ. ಒಂದು ವೇಳೆ ಫೋನ್ ಬ್ಯಾಟರಿ ಖಾಲಿಯಾದ್ರೂ ತನ್ನ ಈ ಕೆಲಸಕ್ಕೆ ಅಡ್ಡಿಯಾಗಬಾರದೆಂದು ಎರಡನೇ ಫೋನ್ ಬಳಸುತ್ತಿದ್ದ.

    ಸಿಕ್ಕಿಬಿದ್ದಿದ್ದು ಹೇಗೆ?
    ಕೆಲ ದಿನದ ಹಿಂದೆ ಪೊಲೀಸರು ಬಿಜು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ನಿಧನವಾಗಿ ಕಾಲುಗಳನ್ನೇ ನೋಡುತ್ತಾ ಮುಂದಕ್ಕೆ ಹೋಗುತ್ತಿರುವುದನ್ನು ಗಮನಿಸಿದ್ದಾರೆ. ಇದರಿಂದ ಅನುಮಾನುಗೊಂಡು ಪೊಲೀಸರು ವಿಚಾರಣೆ ನಡೆಸಿದಾಗ ಈತನ ಖತರ್ನಾಕ್ ಕೆಲಸ ಬಯಲಾಗಿದೆ.

    ಆದ್ರೆ ಈ ರೀತಿಯ ಘಟನೆ ನಡೆದಿರೋದು ಇದೇ ಮೊದಲೇನಲ್ಲ. 2015 ರಲ್ಲಿ, ಶೂನಲ್ಲಿ ಕ್ಯಾಮೆರಾವನ್ನು ಬಳಸಿಕೊಂಡು ಮಹಿಳೆಯರ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದ ವಕೀಲನನ್ನ ದೆಹಲಿಯಲ್ಲಿ ಬಂಧಿಸಲಾಗಿತ್ತು. ಇಂಗ್ಲೆಂಡಿನ ಉದ್ಯಮಿಯೊಬ್ಬ ಇದೇ ರೀತಿಯ ಆರೋಪದ ಮೇಲೆ ಬಂಧಿತನಾಗಿದ್ದ. 2014 ರಲ್ಲಿ ಜಪಾನ್ ನಲ್ಲೂ ಫೋಟೋಗಳನ್ನು ತೆಗೆದುಕೊಳ್ಳಲು ‘ಶೂ ಕ್ಯಾಮೆರಾ’ ವನ್ನು ವಿನ್ಯಾಸಗೊಳಿಸಿದ್ದ ಪ್ರಕರಣ ಬಯಲಾಗಿತ್ತು.

     

  • ಮನೆ ಬಾಗಿಲಿಗೆ ಬಂದ ಬಿಜೆಪಿ ನಾಯಕನಿಗೆ ಚಪ್ಪಲಿ ಹಾರ ಹಾಕಿದ ವೃದ್ಧ-ವಿಡಿಯೋ ವೈರಲ್

    ಮನೆ ಬಾಗಿಲಿಗೆ ಬಂದ ಬಿಜೆಪಿ ನಾಯಕನಿಗೆ ಚಪ್ಪಲಿ ಹಾರ ಹಾಕಿದ ವೃದ್ಧ-ವಿಡಿಯೋ ವೈರಲ್

    ಭೋಪಾಲ್: ಮನೆ ಬಾಗಿಲಿಗೆ ಬಂದ ಬಿಜೆಪಿ ನಾಯಕರೊಬ್ಬರಿಗೆ ವಯೋವೃದ್ಧರೊಬ್ಬರು ಚಪ್ಪಲಿ ಹಾರ ಹಾಕಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ. ಈಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ರಾಜಧಾನಿ ಭೋಪಾಲ್‍ನಿಂದ ಸುಮಾರು 272 ಕಿ.ಮೀ ದೂರದಲ್ಲಿರುವ ಧಾಮನೋದ್ ನಗರದಲ್ಲಿ ಸ್ಥಳೀಯ ಚುನಾವಣೆಗೆ ಭಾನುವಾರ ಪ್ರಚಾರ ನಡೆಯುತ್ತಿತ್ತು. ಈ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ದಿನೇಶ್ ಶರ್ಮಾ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮನೆ ಮನೆಗೂ ಹೋಗಿ ತಮ್ಮ ಪಕ್ಷಕ್ಕೆ ಮತ ಹಾಕುವಂತೆ ಕೇಳುತ್ತಿದ್ದರು.

    ವಿಡಿಯೋದಲ್ಲಿ ದಿನೇಶ್ ಶರ್ಮಾ ಸಾಲಾಗಿ ನಿಂತಿದ್ದ ವ್ಯಕ್ತಿಗಳ ಬಳಿ ಮತ ಹಾಕುವಂತೆ ಕೇಳುತ್ತಿದ್ದು, ಈ ಮಧ್ಯ ವೃದ್ಧರೊಬ್ಬರು ಕೈಗೆ ಚಪ್ಪಲಿ ಹಾರ ಎತ್ತಿಕೊಂಡಿದ್ದಾರೆ. ಆಗ ಶರ್ಮಾ ಮೊದಲು ಹಿಂದಕ್ಕೆ ಸರಿಯಲು ಯತ್ನಿಸಿದ್ದಾರೆ. ಆದ್ರೆ ನಂತರ ಅವರೇ ಹಾರ ಹಾಕಿಸಿಕೊಂಡಿರೋದನ್ನ ಕಾಣಬಹುದು.

    ಈ ಬಗ್ಗೆ ಪ್ರತಿಕ್ರಿಯಿಸಿದ ಶರ್ಮಾ, ಅವರು ನನ್ನವರಲ್ಲಿ ಒಬ್ಬರು. ಅವರಿಗೆ ಯಾವುದೋ ವಿಷಯದಲ್ಲಿ ಅಸಮಾಧಾನವಾಗಿ ಈ ರೀತಿ ಮಾಡಿದ್ದಾರೆ. ನಾವಿಬ್ಬರೂ ಒಟ್ಟಿಗೆ ಕುಳಿತು ಮಾತನಾಡುತ್ತೇವೆ. ನಾನು ಅವರ ಮಗನಿದ್ದಂತೆ ಎಂದು ಹೇಳಿದ್ದಾರೆ.

    ಈ ಪ್ರದೇಶದಲ್ಲಿ ನೀರಿನ ಸಮಸ್ಯೆ ತುಂಬಾ ಇದೆ. ಆದ್ದರಿಂದ ಹಲವು ಬಾರಿ ಈ ಬಗ್ಗೆ ನಮ್ಮ ಮಹಿಳೆಯರು ಆಗಿನ ಅಧ್ಯಕ್ಷರಿಗೆ ದೂರು ನೀಡಲು ಹೋಗಿದ್ದರು. ಆದ್ರೆ ಬದಲಿಗೆ ಅವರ ವಿರುದ್ಧವೇ ದೂರು ದಾಖಲಾಗಿತ್ತು. ರಾತ್ರಿ ಹೊತ್ತಲ್ಲೂ ಪೊಲೀಸ್ ಠಾಣೆಗೆ ಅನೇಕ ಬಾರಿ ಕರೆಸಿದ್ದಾರೆ. ಅದಕ್ಕಾಗಿ ಈ ರೀತಿ ಮಾಡಿದೆ ಎಂದು ಚಪ್ಪಲಿ ಹಾರ ಹಾಕಿದ ವೃದ್ಧ ಮಾಧ್ಯಮಗಳಿಗೆ ಹೇಳಿದ್ದಾರೆ.