Tag: football

  • ತಂಡಕ್ಕೆ ಸ್ಫೂರ್ತಿ ತುಂಬಲು ಲಕ್ಷ, ಲಕ್ಷ ಸುರಿದು ಜ್ಯೋತಿಷಿಯನ್ನು ನೇಮಕ ಮಾಡಿದ AIFF

    ತಂಡಕ್ಕೆ ಸ್ಫೂರ್ತಿ ತುಂಬಲು ಲಕ್ಷ, ಲಕ್ಷ ಸುರಿದು ಜ್ಯೋತಿಷಿಯನ್ನು ನೇಮಕ ಮಾಡಿದ AIFF

    ನವದೆಹಲಿ: ಆಲ್ ಇಂಡಿಯಾ ಫುಟ್‍ಬಾಲ್ ಫೆಡರೇಷನ್ (AIFF) ಎಎಸ್‍ಸಿ ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಫುಟ್‍ಬಾಲ್ ತಂಡ ಉತ್ತಮ ಪ್ರದರ್ಶನ ನೀಡಬೇಕೆಂಬ ಕಾರಣಕ್ಕೆ ತಂಡಕ್ಕೆ ಸ್ಫೂರ್ತಿ ತುಂಬಲು ಓರ್ವ ಜ್ಯೋತಿಷಿಯನ್ನು ನೇಮಕ ಮಾಡಿಕೊಂಡ ಬಗ್ಗೆ ವರದಿಯಾಗಿದೆ.

    ಭಾರತ ಫುಟ್‍ಬಾಲ್ ತಂಡ ಎಎಫ್‍ಸಿ ಏಷ್ಯಾ ಕಪ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿ ಭಾಗವಹಿಸಲು ಅರ್ಹರಾದ 24 ತಂಡಗಳ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ. ಈ ಯಶಸ್ಸಿನ ಹಿಂದೆ ಜ್ಯೋತಿಷಿಯ ಚಮತ್ಕಾರವಿದೆ ಎಂಬ ಕುರಿತು ಚರ್ಚೆಯಾಗುತ್ತಿದೆ. ಇದನ್ನೂ ಓದಿ: ಬೀದಿ ಬೀದಿ ಸುತ್ತಾಡಬೇಡಿ ಕೊಹ್ಲಿ, ರೋಹಿತ್ ವಿರುದ್ಧ ಬಿಸಿಸಿಐ ಗರಂ

    ಈ ಬಗ್ಗೆ ತಂಡದೊಂದಿಗಿದ್ದ ಆಪ್ತರೊಬ್ಬರು ಮಾಹಿತಿ ಹಂಚಿಕೊಂಡಿದ್ದು, ತಂಡದೊಂದಿಗಿದ್ದ ಜ್ಯೋತಿಷಿಗೆ ಫುಟ್‍ಬಾಲ್ ಫೆಡರೇಷನ್ 16 ಲಕ್ಷ ರೂ. ಸಂಭಾವನೆ ನೀಡಿದೆ. ಲಕ್ಷ, ಲಕ್ಷ ಸುರಿದು ಜ್ಯೋತಿಷಿಯನ್ನು ತಂಡಕ್ಕೆ ಮಾರ್ಗದರ್ಶನ ನೀಡಲು ಕರೆಸಿಕೊಳ್ಳಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ.

    ಈ ಮಾಹಿತಿ ಹೊರಬರುತ್ತಿದ್ದಂತೆ ಫುಟ್‍ಬಾಲ್ ಪ್ರಿಯರು ಎಐಎಫ್‍ಎಫ್ ವಿರುದ್ಧ ಕೆಂಡಾಮಂಡಲವಾಗಿದ್ದು, ಫುಟ್‍ಬಾಲ್ ಭಾರತದಲ್ಲಿ ಜನಮನ್ನಣೆ ಪಡೆದುಕೊಳ್ಳುತ್ತಿರುವಾಗ ಈ ರೀತಿಯ ಕೆಲಸದಿಂದ ಕೆಟ್ಟ ಅಭಿಪ್ರಾಯ ಮೂಡಿಸಬೇಡಿ. ಫುಟ್‍ಬಾಲ್ ಪಂದ್ಯಗಳಲ್ಲಿ ಗೆಲುವು ಎಂಬುದು ಆಟಗಾರರ ಪರಿಶ್ರಮದಿಂದಲೇ ಹೊರತು ಯಾವುದೇ ಜ್ಯೋತಿಷಿಯ ಮಾರ್ಗದರ್ಶನದಿಂದಲ್ಲ ಇಂತಹ ಹುಚ್ಚು ಸಾಹಸ ಬಿಡಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಕೊರೊನಾ ಪಾಸಿಟಿವ್?

    Live Tv

  • ಕ್ರಿಸ್ಟಿಯಾನೊ ರೊನಾಲ್ಡೊ ಮಾಲೀಕತ್ವದ 13 ಕೋಟಿ ಮೌಲ್ಯದ ಕಾರು ಅಪಘಾತ

    ಕ್ರಿಸ್ಟಿಯಾನೊ ರೊನಾಲ್ಡೊ ಮಾಲೀಕತ್ವದ 13 ಕೋಟಿ ಮೌಲ್ಯದ ಕಾರು ಅಪಘಾತ

    ಸ್ಪೇನ್: ಖ್ಯಾತ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಮಾಲೀಕತ್ವದ 13.3 ಕೋಟಿ ಮೌಲ್ಯದ ಬುಗಾಟಿ ವೆರಾನ್ ಕಾರು ಅಪಘಾತಕ್ಕೀಡಾಗಿದೆ.

    ಸ್ಪ್ಯಾನಿಷ್ ನಗರದ ಮಜೋರ್ಕಾದಲ್ಲಿ ಮನೆಯೊಂದರ ಪ್ರವೇಶದ್ವಾರಕ್ಕೆ ಕಾರು ಡಿಕ್ಕಿ ಹೊಡೆದಿದೆ. ಆದರೆ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ರೊನಾಲ್ಡೊ ಅವರ ಸಿಬ್ಬಂದಿಯೊಬ್ಬರು ಕಾರನ್ನು ಚಲಾಯಿಸುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ಕಳೆದುಕೊಂಡಿದ್ದರಿಂದ ಅಪಘಾತ ಸಂಭವಿಸಿದ್ದು, ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಚಿನ್ನದ ಹುಡುಗ ನೀರಜ್ ಚೋಪ್ರಾ ಕೊರಳಿಗೆ ಮತ್ತೊಂದು ಚಿನ್ನ

    ದುಬಾರಿ ಬೆಲೆಯ ಸ್ಪೋರ್ಟ್ಸ್ ಕಾರುಗಳನ್ನು ಹೊಂದಿರುವ ಆಟಗಾರರ ಪೈಕಿ ರೊನಾಲ್ಡೊ ಸಹ ಒಬ್ಬರಾಗಿದ್ದಾರೆ. ಪ್ರಸ್ತುತ ಅವರು ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಫುಟ್‌ಬಾಲ್ ಆಟಗಾರರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಫೋಕ್ಸ್ ವ್ಯಾಗನ್ ಕಂಪನಿಯ ಬುಗಾಟಿ ವೆರಾನ್ ಕಾರು ಪ್ರಪಂಚದಲ್ಲಿರುವ ದುಬಾರಿ ಕಾರುಗಳಲ್ಲಿ ಒಂದಾಗಿದೆ.

    Live Tv

  • 2026ರ ಫಿಫಾ ವಿಶ್ವಕಪ್‌ಗೆ ಮೂರು ರಾಷ್ಟ್ರಗಳ ಆತಿಥ್ಯ – 32 ರಾಷ್ಟ್ರಗಳ 48 ತಂಡಗಳು ಭಾಗಿ

    2026ರ ಫಿಫಾ ವಿಶ್ವಕಪ್‌ಗೆ ಮೂರು ರಾಷ್ಟ್ರಗಳ ಆತಿಥ್ಯ – 32 ರಾಷ್ಟ್ರಗಳ 48 ತಂಡಗಳು ಭಾಗಿ

    ವಾಷಿಂಗ್ಟನ್: 2026ರ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ಇದೇ ಮೊದಲ ಬಾರಿಗೆ ಮೂರು ರಾಷ್ಟ್ರಗಳ ಆತಿಥ್ಯದಲ್ಲಿ ನಡೆಯಲಿದೆ. ಈಗಾಗಲೇ ಫಿಫಾ ಅಧ್ಯಕ್ಷ ಗಿಲಾನಿ ಇನ್ ಫ್ಯಾಂಟಿನೊ 2026ರ ವಿಶ್ವಕಪ್ ಟೂರ್ನಿಗೆ ಸಿದ್ಧತೆಗಳನ್ನು ಆರಂಭಿಸುವಂತೆ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊಗೆ ಸೂಚಿಸಿದ್ದಾರೆ.

    ಮೂರು ರಾಷ್ಟ್ರಗಳ ಆತಿಥ್ಯದಲ್ಲಿ ನಡೆಯುವುದರಿಂದ ಈ ಬಾರಿ ವಿಶ್ವಕಪ್ ಟೂರ್ನಿಯ ತಂಡಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಈ ಬಾರಿ 32 ರಾಷ್ಟ್ರಗಳಿಂದ 48 ತಂಡಗಳು ಪಾಲ್ಗೊಳ್ಳಲಿದ್ದು, 1994ರ ಫೈನಲಿಸ್ಟ್ ಉತ್ತರ ಅಮೆರಿಕ ತಂಡ ಇದೇ ಮೊದಲ ಬಾರಿ ವಿಶ್ವಕಪ್ ಅಖಾಡಕ್ಕೆ ಇಳಿಯಲಿದೆ. ಇದನ್ನೂ ಓದಿ: ಏಕದಿನ ಕ್ರಿಕೆಟ್‍ನಲ್ಲಿ ದಾಖಲೆಯ 498 ರನ್ ಸಿಡಿಸಿದ ಇಂಗ್ಲೆಂಡ್ – ಮೈದಾನದೆಲ್ಲೆಡೆ ಸಿಕ್ಸರ್, ಬೌಂಡರಿಗಳ ಅಬ್ಬರ

    ಅಮೆರಿಕದ 11, ಮೆಕ್ಸಿಕೊದ 3, ಕೆನಡಾದ 2 ಮೈದಾನಗಳಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಒಟ್ಟಾರೆ 80 ಪಂದ್ಯಗಳ ಪೈಕಿ 60 ಪಂದ್ಯಗಳು ಅಮೆರಿಕದಲ್ಲಿ, ಮೆಕ್ಸಿಕೊ ಹಾಗೂ ಕೆನಡಾದಲ್ಲಿ ತಲಾ 10 ಪಂದ್ಯಗಳು ನಡೆಯಲಿದ್ದು, ಇದರಲ್ಲಿ ಫೈನಲ್, ಸೆಮಿಫೈನಲ್ ಮತ್ತು ಕ್ವಾರ್ಟರ್ ಫೈನಲ್ ಪಂದ್ಯಗಳೂ ಸೇರಿವೆ.

    Live Tv

  • ಅಂತಾರಾಷ್ಟ್ರೀಯ ಮಟ್ಟದ ಪ್ರತಿಭೆಗಳನ್ನು ಗುರುತಿಸಲು ಅಂಧ ಮಹಿಳಾ ಫುಟ್‍ಬಾಲ್ ಟ್ರೈನಿಂಗ್

    ಅಂತಾರಾಷ್ಟ್ರೀಯ ಮಟ್ಟದ ಪ್ರತಿಭೆಗಳನ್ನು ಗುರುತಿಸಲು ಅಂಧ ಮಹಿಳಾ ಫುಟ್‍ಬಾಲ್ ಟ್ರೈನಿಂಗ್

    ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಪುರುಷ ಅಂಧರ ಫುಟ್‍ಬಾಲ್‌ನಲ್ಲಿ ಗೆಲುವು ಸಾಧಿಸಿದಲು ಕಾರಣವಾಗಿದ್ದ ಸಂಸ್ಥೆ ಇದೀಗ ರಾಷ್ಟ್ರೀಯ ಮಟ್ಟದ ಮಹಿಳಾ ಫುಟ್‍ಬಾಲ್ ಆಟಗಾರರಿಗೆ ತರಬೇತಿಯನ್ನು ಶುರು ಮಾಡಿದೆ.

    ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಫುಟ್‍ಬಾಲ್ ಗ್ರೌಂಡ್‍ನಲ್ಲಿ ತಮೋಘ್ನ ಬ್ಲೈಂಡ್ ಫುಟ್‍ಬಾಲ್ ಅಸೋಸಿಯೇಷನ್ ಕರ್ನಾಟಕ ಸಂಸ್ಥೆಯು ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶವನ್ನು ಪ್ರತಿನಿಧಿಸುವಂತೆ ಮಾಡುವ ಪ್ರಯತ್ನಕ್ಕೆ ಮುಂದಾಗಿದೆ. ಇದನ್ನೂ ಓದಿ: ಲುಲು ಗ್ರೂಪ್‍ನೊಂದಿಗೆ 2,000 ಕೋಟಿ ರೂ. ಹೂಡಿಕೆ ಒಪ್ಪಂದ – ಪ್ರತಿಷ್ಠಿತ ಕಂಪನಿಗಳೊಂದಿಗೆ ಬೊಮ್ಮಾಯಿ ಚರ್ಚೆ

    ಕಳೆದ ವರ್ಷ ಅಂಧ ಪುರುಷರ ಫುಟ್‍ಬಾಲ್ ಚಾಂಪಿಯನ್ ಶಿಪ್ ಕಪ್ ಗೆದ್ದಿದ್ದು, ಈ ಬಾರಿ ಮಹಿಳಾ ಆಟಗಾರ್ತಿಯರಿಗೆ ಈ ಅವಕಾಶ ಸಿಕ್ಕಿದ್ದು ಮಹಿಳಾ ಆಟಗಾರ್ತಿಯರು ಟ್ರೈನಿಂಗ್ ಪಡೆಯುತ್ತಿದ್ದಾರೆ. ತಮೋಘ್ನ ಬ್ಲೈಂಡ್ ಫುಟ್‍ಬಾಲ್ ಅಸೋಸಿಯೇಷನ್ ಕರ್ನಾಟಕ ಸಂಸ್ಥೆ ಮಾಡುತ್ತಿರುವಂತಹ ಈ ಕೆಲಸಕ್ಕೆ ಯಾವುದೇ ಇತರೆ ಸಂಸ್ಥೆಗಳು ಅಥವಾ ಸರ್ಕಾರ ನೆರವಾಗುತ್ತಿಲ್ಲ ಇದೀಗ ರಾಷ್ಟ್ರೀಯ ಮಟ್ಟದ ಅಂಧರ ಪಂದ್ಯಾವಳಿಗಳನ್ನು ಆಯೋಜಿಸಲು ನಿರ್ಧರಿಸಿದೆ. ಯಾವುದೇ ಸಹಾಯ ಹಸ್ತ ಇಲ್ಲದೆ ನಮ್ಮ ಖರ್ಚುವೆಚ್ಚಗಳನ್ನು ಈ ಸಂಸ್ಥೆಯೇ ಬರಿಸುತ್ತಿದ್ದು ಈ ಬಾರಿಯೂ ಸಹ ರಾಷ್ಟ್ರೀಯ ಮಟ್ಟದ ಚಾಂಪಿಯನ್ ಶಿಪ್ ಅನ್ನು ನಾವು ಪಡೆಯುತ್ತೇವೆ ಎಂದು ಕ್ರೀಡಾಪಟುಗಳು ಭರವಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: ʻಖುಷಿʼ ಶೂಟಿಂಗ್ ವೇಳೆ ನೀರಿಗೆ ಬಿದ್ದ ವಾಹನ: ಸಮಂತಾ- ವಿಜಯ್ ದೇವರಕೊಂಡ ಸೇಫ್!

  • ಫುಟ್‍ಬಾಲ್ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿತ – 200 ಮಂದಿಗೆ ಗಾಯ

    ಫುಟ್‍ಬಾಲ್ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿತ – 200 ಮಂದಿಗೆ ಗಾಯ

    ತಿರುವನಂತಪುರಂ: ಫುಟ್‍ಬಾಲ್ ಪಂದ್ಯದ ವೇಳೆ ತಾತ್ಕಾಲಿಕವಾಗಿ ನಿರ್ಮಿಸಲಾದ ಗ್ಯಾಲರಿಯೊಂದು ಕುಸಿತಗೊಂಡ ಪರಿಣಾಮ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಕೇರಳದ ಮಲ್ಲಾಪುರಂ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಡೆದಿದೆ.

    ಪಂದ್ಯ ಆರಂಭಕ್ಕೂ ಮುನ್ನ ಪ್ರೇಕ್ಷಕರು ಗ್ಯಾಲರಿಯಲ್ಲಿ ಕೂತಿದ್ದರು. ಈ ವೇಳೆ ಏಕಾಏಕಿ ಕುಸಿತಗೊಂಡ ಗ್ಯಾಲರಿ ಅಡಿಯಲ್ಲಿ 200ಕ್ಕೂ ಹೆಚ್ಚು ಮಂದಿ ಸಿಲುಕಿಕೊಂಡು ಗಾಯಗೊಂಡಿದ್ದಾರೆ. ಈ ಪೈಕಿ ಐವರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಮಂಜೆರಿ ವೈದ್ಯಕೀಯ ಕಾಲೇಜ್ ಆಸ್ಪತ್ರೆ ಸೇರಿದಂತೆ ವಂದೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಟಿ20 ಮಾದರಿಯಲ್ಲಿ ಏಷ್ಯಾ ಕಪ್ – ಶ್ರೀಲಂಕಾದಲ್ಲಿ ಆಗಸ್ಟ್ 27ಕ್ಕೆ ಆರಂಭ

    ಗ್ಯಾಲರಿ ಕುಸಿತಗೊಂಡ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಗ್ಯಾಲರಿ ಕುಸಿತಗೊಂಡಂತೆ ಪ್ರೇಕ್ಷಕರು ಭಯದಿಂದ ಓಡಲಾರಂಭಿಸಿದ್ದಾರೆ. ಇದರಿಂದಾಗಿ ಹಲವು ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಇದನ್ನೂ ಓದಿ: ಗ್ಯಾಂಗ್ ನೋಡಿ ಸ್ಥಳದಿಂದ ಕಾಲ್ಕಿತ್ತ ಪತಿ- ಮಕ್ಕಳ ಮುಂದೆಯೇ ದಲಿತ ಮಹಿಳೆ ಮೇಲೆ ಸಾಮೂಹಿಕ ರೇಪ್

  • ಫುಟ್ಬಾಲ್ ಆಟಗಾರ ಸೂರಜಿತ್ ಸೇನ್‍ಗುಪ್ತಾ ಇನ್ನಿಲ್ಲ

    ಫುಟ್ಬಾಲ್ ಆಟಗಾರ ಸೂರಜಿತ್ ಸೇನ್‍ಗುಪ್ತಾ ಇನ್ನಿಲ್ಲ

    ಕೊಲ್ಕತ್ತಾ: ಕೊರೊನಾ ಸೋಂಕಿಗೆ ತುತ್ತಾಗಿದ್ದ ಬಂಗಾಳದ ಮಾಜಿ ಫುಟ್ಬಾಲ್ ಆಟಗಾರ ಸೂರಜಿತ್ ಸೇನ್‍ಗುಪ್ತಾ(70) ಅವರು ಇಂದು ಕೊನೆಯುಸಿರೆಳೆದರು.

    ಪೂರ್ವ ಬಂಗಾಳದ ಮಾಜಿ ನಾಯಕ ಸೆನ್‍ಗುಪ್ತಾ ಅವರಿಗೆ ಜನವರಿ 23ರಂದು ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಒಂದು ವಾರದಿಂದ ವೆಂಟಿಲೇಟರ್‍ನಲ್ಲಿ ಇದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ.

    ಸೂರಜಿತ್ ಸೇನ್‍ಗುಪ್ತಾ ಅವರು ಕೋಲ್ಕತ್ತಾದ ಎಲ್ಲಾ ಕ್ಲಬ್‍ಗಳಿಗೆ ಆಡಿದ ಹಿರಿಮೆಯನ್ನು ತನ್ನದಾಗಿಸಿಕೊಂಡಿದ್ದಾರೆ. 1975ರಲ್ಲಿ ಪೂರ್ವ ಬಂಗಾಳದ ತಂಡದ ಪರ ಆಡಿದ್ದ ಅವರು, ಮೋಹನ್ ಬಗಾನ್ ಅನ್ನು 5-0 ಅಂತರದಲ್ಲಿ ಸೋಲಿಸುವ ಮೂಲಕ ಐಎಫ್‍ಎ ಪದಕವನ್ನು ಗೆಲ್ಲಲು ಕಾರಣರಾಗಿದ್ದರು. 1970ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದ ಪರ ಆಡಿದ್ದರು. ಇದನ್ನೂ ಓದಿ: Ranji Trophy: ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ ಯಶ್ ಧುಲ್

    ಸೂರಜಿತ್ ಸೇನ್‍ಗುಪ್ತಾ ಅವರ ನಿಧನಕ್ಕೆ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕ್ರಿಕೆಟಿಗ ಮನೋಜ್ ತಿವಾರಿ ಸೇರಿದಂತೆ ಅನೇಕ ಗಣ್ಯರು ಸಂತಾಪವನ್ನು ಸೂಚಿಸಿದರು. ಇದನ್ನೂ ಓದಿ: ಹಾಲಿ ವಿಶ್ವ ನಂಬರ್ 1 ಬೌಲರ್ ಐಪಿಎಲ್‍ನಲ್ಲಿ ಅನ್‍ಸೋಲ್ಡ್

  • ಇನ್‍ಸ್ಟಾಗ್ರಾಮ್‍ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊಗೆ 40 ಕೋಟಿ ಫಾಲೋವರ್ಸ್ – ನಂ.1

    ಇನ್‍ಸ್ಟಾಗ್ರಾಮ್‍ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊಗೆ 40 ಕೋಟಿ ಫಾಲೋವರ್ಸ್ – ನಂ.1

    ಲಂಡನ್: ಖ್ಯಾತ ಫುಟ್‍ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಸ್ವಲ್ಪ ಸಮಯದವರೆಗೆ ಫಾರ್ಮ್‍ನಿಂದ ಹೊರಗುಳಿದಿರಬಹುದು. ಆದರೆ ಮ್ಯಾಂಚೆಸ್ಟರ್ ಯುನೈಟೆಡ್ ಸ್ಟ್ರೈಕರ್ ರೊನಾಲ್ಡೊ ಇನ್‍ಸ್ಟಾಗ್ರಾಮ್‍ನಲ್ಲಿ 400 ಮಿಲಿಯನ್ (40 ಕೋಟಿ) ಫಾಲೋವರ್ಸ್‍ಗಳ ಸಂಖ್ಯೆಯನ್ನು ದಾಟಿದ ವಿಶ್ವದ ಏಕೈಕ ವ್ಯಕ್ತಿಯಾಗಿದ್ದಾರೆ.

    ಇನ್‍ಸ್ಟಾಗ್ರಾಮ್‍ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸೆಲೆಬ್ರೆಟಿಗಳ ಪಟ್ಟಿಯಲ್ಲಿ, ಪೋರ್ಚುಗಲ್ ನಾಯಕ ಕೈಲಿ ಜೆನ್ನರ್ ಅವರು 309 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ರೊನಾಲ್ಡೊ ಅವರ ಅತಿದೊಡ್ಡ ಫುಟ್‍ಬಾಲ್ ಪ್ರತಿಸ್ಪರ್ಧಿ ಮೆಸ್ಸಿ ಪ್ರಸ್ತುತ 306 ಮಿಲಿಯನ್ ಫಾಲೋವರ್ಸ್ ಪಡೆದು ನಂತರದ ಸ್ಥಾನದಲ್ಲಿದ್ದಾರೆ. ಪಾಪ್ ಗಾಯಕಿ ಸೆಲೆನಾ ಗೊಮೆಜ್ ಮತ್ತು ನಟ ಡ್ವೇನ್ ಜಾನ್ಸನ್ ತಲಾ 295 ಮಿಲಿಯನ್ ಫಾಲೋವರ್ಸ್‍ಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಜಯ – ಸರಣಿ ಕೈವಶಪಡಿಸಿಕೊಂಡ ಟೀಂ ಇಂಡಿಯಾ

    ವರದಿಯ ಪ್ರಕಾರ ರೊನಾಲ್ಡೊ ಇನ್‍ಸ್ಟಾಗ್ರಾಮ್‍ನ ಎಲ್ಲಾ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಹೆಚ್ಚು ಶುಲ್ಕವನ್ನು ವಿಧಿಸುತ್ತಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಪ್ರತಿ ಪೋಸ್ಟ್‌ಗೆ (ಯುಎಸ್‍ಡಿ) 1.6 ಮಿಲಿಯನ್ (ಐಎನ್‍ಆರ್ 11.9 ಕೋಟಿ) ಚಾರ್ಜ್ ಮಾಡುತ್ತಾರೆ.

    ಇದರ ಮಧ್ಯೆ ಒಂದೆರಡು ದಿನಗಳ ಹಿಂದೆ ರೊನಾಲ್ಡೊ ತನ್ನ 37 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಹುಟ್ಟುಹಬ್ಬದ ಪ್ರಯುಕ್ತ ತಮಗೆ ಶುಭಾಶಯಗಳನ್ನು ಕಳುಹಿಸಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದರು.

    ಜೀವನವು ರೋಲರ್ ಕೋಸ್ಟರ್ ಆಗಿದೆ. ಕಠಿಣ ಪರಿಶ್ರಮ, ಹೆಚ್ಚಿನ ವೇಗ, ಗುರಿಗಳು, ಬೇಡಿಕೆಯ ನಿರೀಕ್ಷೆಗಳು. ಆದರೆ ಕೊನೆಯಲ್ಲಿ ಇದು ಕುಟುಂಬ, ಪ್ರೀತಿ, ಪ್ರಾಮಾಣಿಕತೆ, ಸ್ನೇಹ ಎಲ್ಲವನ್ನೂ ಮೌಲ್ಯಯುತವಾಗಿಸುತ್ತದೆ ಎಂದು ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದರು. ಇದನ್ನೂ ಓದಿ:  7.47 ಕೋಟಿ ರೂ.ಗೆ ವಿಮೆ ಮಾಡಿಸಿದ್ದ ಪೇಂಟಿಂಗ್ ನಾಶ ಮಾಡಿದ ಸೆಕ್ಯೂರಿಟಿ!

    ತಮ್ಮ ಭವಿಷ್ಯದ ಮುಂದಿನ ಯೋಜನೆಗಳ ಬಗ್ಗೆ ಮಾತನಾಡುತ್ತಾ ರೊನಾಲ್ಡೊ, ನಾನು ಫುಟ್‍ಬಾಲ್ ಕ್ಷೇತ್ರದಲ್ಲಿ ಇನ್ನೂ 40ರ ವಯಸ್ಸಿನವರೆಗೂ ಆಡಲು ನಿರ್ಧರಿಸಿದ್ದೇನೆ. ಇದೀಗ ನಾನು ಅಲ್ಪಾವಧಿಯ ಗುರಿಗಳತ್ತ ಗಮನ ಹರಿಸಿದ್ದೇನೆ ಎಂದು ತಿಳಿಸಿದ್ದಾರೆ.

     

    View this post on Instagram

     

    A post shared by Cristiano Ronaldo (@cristiano)

    ನನಗೆ ಈಗ 30 ವರ್ಷ ವಯಸ್ಸಾಗಿದೆ. ನಾನು ನನ್ನ ದೇಹ ಮತ್ತು ಮನಸ್ಸಿನ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇನೆ. 33ರ ವಯಸ್ಸಿನ ನಂತರ ದೇಹವು ಕುಗ್ಗಲಾರಂಭಿಸುತ್ತದೆ. ಆದರೆ ನಾನು ಮಾನಸಿಕವಾಗಿ ಸಧೃಢನಾಗಿದ್ದೇನೆ. ಹಾಗೆ ನೋಡಿದರೆ ನಿಜವಾದ ಜೀವನದ ಯುದ್ಧವು 40ರ ನಂತರ ಪ್ರಾರಂಭವಾಗುತ್ತದೆ. ವಯಸ್ಸು ಕೇವಲ ಎಣಿಕೆಗಾಗಿ. ನಾವು ನಮ್ಮ ದೇಹವನ್ನು ಎಷ್ಟು ಚಟುವಟಿಕೆಯಿಂದ ಇಡುತ್ತೇವೋ ಅಷ್ಟು ಸಧೃಡರಾಗಿರಬಹುದು ಎಂದು ಇತ್ತೀಚಿನ ಸಂದರ್ಶನ ಒಂದರಲ್ಲಿ ಹೇಳಿದ್ದರು.

  • ಹೆಣ್ಣಾನೆಯೊಂದಿಗೆ ಫುಟ್‌ಬಾಲ್‌ ಆಟವಾಡಿ ಎದೆಹಾಲು ಕುಡಿದ 3 ವರ್ಷದ ಪುಟ್ಟ ಹುಡುಗಿ!

    ಹೆಣ್ಣಾನೆಯೊಂದಿಗೆ ಫುಟ್‌ಬಾಲ್‌ ಆಟವಾಡಿ ಎದೆಹಾಲು ಕುಡಿದ 3 ವರ್ಷದ ಪುಟ್ಟ ಹುಡುಗಿ!

    ಗುವಾಹಟಿ: ಮೂರು ವರ್ಷದ ಪುಟ್ಟ ಹುಡುಗಿ, ಸಾಕಾನೆ ಜೊತೆ ಫುಟ್‌ಬಾಲ್‌ ಆಟವಾಡಿ ನಂತರ ಆನೆಯ ಎದೆಹಾಲನ್ನು ಕುಡಿಯಲು ಹರಸಾಹಸಪಡುತ್ತಿರುವ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.

    ವೀಡಿಯೋದಲ್ಲಿ ಏನಿದೆ?
    ಅಸ್ಸಾಂನ ಪುಟ್ಟ ಹುಡುಗಿ, ಆನೆ ಕಡೆಗೆ ಫುಟ್‌ಬಾಲ್‌ನ್ನು ಎಸೆಯುತ್ತಾಳೆ. ಫುಟ್‌ಬಾಲ್‌ನ್ನು ಬಾಲಕಿಗೆ ಹಿಂದಿರುಗಿಸುವ ಮೂಲಕ ಆನೆ ಕೂಡ ಆಟಕ್ಕೆ ಸಾಥ್‌ ನೀಡುತ್ತದೆ. ಹೀಗೆ ಕೆಲಕಾಲ ಬಾಲಕಿ, ಆನೆಯೊಂದಿಗೆ ಚೆಂಡಾಟ ಆಡುತ್ತದೆ. ಇದನ್ನೂ ಓದಿ: 43.2 ಕೋಟಿ ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ – ಮಹಿಳೆ ಅರೆಸ್ಟ್

    ನಂತರ ಹೆಣ್ಣಾನೆ ಮೇವು ತಿನ್ನುವ ಸಂದರ್ಭದಲ್ಲಿ ಹುಡುಗಿ ಹತ್ತಿರ ಹೋಗಿ, ಆನೆ ಎದೆಹಾಲು ಕುಡಿಯಲು ಹರಸಾಹಸ ಪಡುತ್ತಾಳೆ. ಆನೆ ಹಾಗೂ ಪುಟ್ಟ ಹುಡುಗಿಯ ಬಾಂಧವ್ಯದ ಮುದ್ದಾದ ವೀಡಿಯೋ ನೋಡುಗರ ಮನಸೂರೆಗೊಂಡಿದೆ. ವೀಡಿಯೋಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಗೋಲಾಘಾಟ್ ಜಿಲ್ಲೆಯ ಹರ್ಷಿತಾ ಬೋರಾ ಹೆಸರಿನ ಪುಟ್ಟ ಹುಡುಗಿ ಆನೆಯೊಂದಿಗಿ ಬಾಂಧವ್ಯದ ಕುರಿತು ಮಾತನಾಡಿದೆ. ಆನೆ ನನ್ನೊಂದಿಗೆ ಚೆಂಡಾಟ ಆಡುತ್ತದೆ. ಅವಳ ಹೆಸರು ಬಿನು. ಅವಳಿಗೆ ಬಾಳೆಹಣ್ಣು ಎಂದರೆ ತುಂಬಾ ಇಷ್ಟ ಎಂದು ಆನೆ ಕುರಿತು ಮುದ್ದಾಗಿ ಪ್ರತಿಕ್ರಿಯಿಸಿದ್ದಾಳೆ. ಇದನ್ನೂ ಓದಿ: ಭಾರತ ವಿರೋಧಿ ಸ್ನೇಹಿತರು ಟ್ರುಡೊರನ್ನು ರಕ್ಷಿಸಬಹುದು: ಇದು ಕರ್ಮ ಎಂದ ಸಿಂಘ್ವಿ

  • ಪತ್ನಿಯ ಹುಟ್ಟುಹಬ್ಬಕ್ಕೆ ಬುರ್ಜ್ ಖಲಿಫಾದಲ್ಲಿ ಫೋಟೋ ಹಾಕಿ ಶುಭ ಕೋರಿದ ರೊನಾಲ್ಡೊ

    ಪತ್ನಿಯ ಹುಟ್ಟುಹಬ್ಬಕ್ಕೆ ಬುರ್ಜ್ ಖಲಿಫಾದಲ್ಲಿ ಫೋಟೋ ಹಾಕಿ ಶುಭ ಕೋರಿದ ರೊನಾಲ್ಡೊ

    ದುಬೈ: ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನ್ ರೊನಾಲ್ಡೊ ತನ್ನ ಪತ್ನಿಯ ಹುಟ್ಟುಹಬ್ಬಕ್ಕೆ ಬುರ್ಜ್ ಖಲಿಫಾದಲ್ಲಿ ಲೇಸರ್ ಶೋ ಏರ್ಪಡಿಸುವ ಮೂಲಕ ಪತ್ನಿಗೆ ಉಡುಗೊರೆಯನ್ನು ನೀಡಿದ್ದಾರೆ.

    ಜಾರ್ಜಿನಾ ರೊಡ್ರಿಗಸ್ ಅವರ 28ನೇ ಹುಟ್ಟುಹಬ್ಬವನ್ನು ಆಚರಿಸಲು ವಿಶ್ವದ ಅತಿ ಎತ್ತರದ ಕಟ್ಟಡವಾದ ದುಬೈನಲ್ಲಿರುವ ಬುರ್ಜ್ ಖಲೀಫಾದ ಮೇಲೆ ರೊನಾಲ್ಡೊ ಪತ್ನಿಯ ಭಾವಚಿತ್ರವಿರುವ ಲೇಸರ್ ಶೋ ಏರ್ಪಡಿಸಿದ್ದಾರೆ. ಇದರಲ್ಲಿ ಜಾರ್ಜಿಯಾವ ಅವರ ಫೋಟೋ ವೀಡಿಯೊವು ದುಬೈನಲ್ಲಿರುವ ಬುರ್ಜ್ ಖಲೀಫಾದಲ್ಲಿ ಗೋಚರಿಸಿದೆ.

     

    View this post on Instagram

     

    A post shared by Georgina Rodríguez (@georginagio)

    ಐದು ಬ್ಯಾಲನ್ ಡಿ ಓರ್ ಪ್ರಶಸ್ತಿಗಳ ವಿಜೇತ ರೊನಾಲ್ಡೊ, ದುಬೈನ ಹೃದಯಭಾಗದಲ್ಲಿರುವ ಐಕಾನಿಕ್ ಟವರ್ ಮೇಲೆ ತನ್ನ ಪತ್ನಿಯ ಜನ್ಮದಿನದ ಶುಭಾಶಯ ಕೋರಲು ಬರೋಬ್ಬರಿ 50,000 ಪೌಂಡ್‍ಗಳನ್ನು ಖರ್ಚು ಮಾಡಿದ್ದಾರೆ.

    ತಮ್ಮ ಪತ್ನಿಯ ಹುಟ್ಟುಹಬ್ಬಕ್ಕೆ ಶುಭಕೋರಿರುವ ರೊನಾಲ್ಡೊ ಈ ವಿಡಿಯೋವನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧ

     

    View this post on Instagram

     

    A post shared by Cristiano Ronaldo (@cristiano)

    ವೀಡಿಯೋದಲ್ಲಿ ಏನಿದೆ?: ಸುಮಾರು ಮೂರರಿಂದ ನಾಲ್ಕು ನಿಮಿಷಗಳ ಕಾಲ ಲೈಟ್ ಮತ್ತು ಲೇಸರ್ ಶೋನಲ್ಲಿ ರೊನಾಲ್ಡೊ ಹಾಗೂ ಅವರ ಪತ್ನಿ ಹೆಸರು ಬುರ್ಜ್ ಖಲಿಫಾದ ಮೇಲೆ ಪ್ರದರ್ಶನಗೊಂಡಿತು. ನಂತರ ಹ್ಯಾಪಿ ಬರ್ತ್‍ಡೇ ಜಿಯೋ ಸಂದೇಶದೊಂದಿಗೆ ಕೊನೆಗೊಂಡಿತು. ಇದನ್ನೂ ಓದಿ: ಮಾಜಿ ಆರ್‌ಸಿಬಿ ಆಟಗಾರನ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ

  • ಸ್ಪೇನ್‍ನಲ್ಲಿರುವ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ

    ಸ್ಪೇನ್‍ನಲ್ಲಿರುವ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ

    ಮ್ಯಾಡ್ರಿಡ್: ಸ್ಪೇನ್‍ನ ವೃದ್ಧರೊಬ್ಬರು 112 ವರ್ಷ ಬದುಕಿರುವ ಮೂಲಕ ವಿಶ್ವದ ಅತ್ಯಂತ ಹಿರಿಯ ಜೀವಿಯಾಗಿ ಗಿನ್ನೆಸ್ ದಾಖಲೆ ಮಾಡಿದ್ದಾರೆ.

    112 ವರ್ಷ 211 ದಿನ ವಯಸ್ಸಾಗಿರುವ ಸ್ಯಾಟರ್ನಿನೋ ಡೆ ಲಾ ಫ್ಯೂಂಟೆ ಗಾರ್ಸಿಯಾ, 1909ರ ಫೆಬ್ರವರಿ 11ರಂದು ಲಿಯಾನ್‍ನಲ್ಲಿ ಜನಿಸಿದರು. ಆದರೆ ಅವರು ಯಾವಾಗಲೂ ತಮ್ಮ ಹುಟ್ಟುಹಬ್ಬವನ್ನು ಫೆಬ್ರವರಿ 8ರಂದು ಆಚರಿಸಿಕೊಳ್ಳುತ್ತಾರೆ.  ಇದನ್ನೂ ಓದಿ: ಕಾಬೂಲ್ ಮಸೀದಿ ಬಳಿ ಬಾಂಬ್ ಸ್ಫೋಟ – ಇಬ್ಬರು ಸಾವು, ಹಲವರಿಗೆ ಗಾಯ

    Spain Old man

    ಇದೀಗ ಅವರನ್ನು ಅತೀ ಹೆಚ್ಚು ವರ್ಷ ಬದುಕಿರುವ ವ್ಯಕ್ತಿ ಎಂದು ಹೇಳಲಾಗಿದೆ. ಇವರಿಗೆ ಏಳು ಜನ ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನಿದ್ದರು. ಆದರೆ ಮಗ ಬಾಲ್ಯದಲ್ಲಿಯೇ ತೀರಿಕೊಂಡರು. ಸದ್ಯ ಸ್ಯಾಟರ್ನಿನೋ ಅವರು ತಮ್ಮ ಮಗಳು ಮತ್ತು ಅಳಿಯ ಜೊತೆಯಲ್ಲಿ ವಾಸವಾಗಿದ್ದು, ಇವರಿಗೆ 14 ಜನ ಮೊಮ್ಮಕ್ಕಳು ಮತ್ತು 22 ಜನ ಮರಿ ಮೊಮ್ಮಕ್ಕಳಿದ್ದಾರೆ.

    ತಮ್ಮ ದೀರ್ಘಾಯುಷ್ಯದ ರಹಸ್ಯದ ಬಗ್ಗೆ ಕೇಳಿದಾಗ ಅವರು, 112 ವರ್ಷ ಅವರು ನೆಮ್ಮದಿಯಿಂದ ಜೀವನ ನಡೆಸಿದ್ದು, ಯಾರನ್ನು ನೋಯಿಸಬೇಡಿ ಮತ್ತು ನೆಮ್ಮದಿಯಿಂದ ಜೀವನ ನಡೆಸಿ ಎಂದಿದ್ದಾರೆ. 4.92 ಅಡಿ ಎತ್ತರವಿರುವ ಸ್ಯಾಟರ್ನಿನೋ, 1936ರಲ್ಲಿ ಆರಂಭವಾದ ಸ್ಪ್ಯಾನಿಷ್ ಅಂತರ್ಯುದ್ಧದಲ್ಲಿ ನಾನು ಕಡಿಮೆ ಎತ್ತರ ಇದ್ದರಿಂದ ಯುದ್ಧದಲ್ಲಿ ಹೋರಾಡುವುದು ತಪ್ಪಿತು ಎಂದಿದ್ದಾರೆ. ಶೂ ತಯಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು, ತಮ್ಮ ಪತ್ನಿ ಆಂಟೋನಿನಾ ಬ್ಯಾರಿಯೊ ಜೊತೆ ನೆಮ್ಮದಿ ಜೀವನ ನಡೆಸುತ್ತಿದ್ದಾಗಿ ಹೇಳಿಕೊಂಡಿದ್ದಾರೆ.  ಇದನ್ನೂ ಓದಿ:  ನಿಮ್ಮ ಧೈರ್ಯಕ್ಕೆ ಅವರು ಹೆದರುತ್ತಾರೆ – ಪ್ರಿಯಾಂಕಾಗೆ ಧೈರ್ಯ ತುಂಬಿದ ಸಹೋದರ ರಾಹುಲ್

    112 ವರ್ಷ ವಯಸ್ಸಿನ ಸ್ಯಾಟರ್ನಿನೊ ಒಬ್ಬ ಫುಟ್ಬಾಲ್ ಅಭಿಮಾನಿಯಾಗಿದ್ದು, ಫುಟ್ಬಾಲ್ ಆಟವನ್ನು ಹಲವು ವರ್ಷಗಳಿಂದ ಆಡಿದ್ದಾರೆ ಮತ್ತು ಸ್ಥಳೀಯ ತಂಡವಾದ ಪ್ಯುಂಟೆ ಕ್ಯಾಸ್ಟ್ರೋ ಸಹ ಸ್ಥಾಪಿಸಿದ್ದಾರೆ.