Tag: football

  • ನೆಚ್ಚಿನ ಫುಟ್‌ಬಾಲ್‌ ತಂಡ ಸೋತಿದ್ದಕ್ಕೆ ಸ್ಟೇಡಿಯಂನಲ್ಲಿ ಅಭಿಮಾನಿಗಳ ಗಲಭೆ – ಮಕ್ಕಳು, ಪೊಲೀಸರು ಸೇರಿ 127 ಮಂದಿ ಸಾವು

    ನೆಚ್ಚಿನ ಫುಟ್‌ಬಾಲ್‌ ತಂಡ ಸೋತಿದ್ದಕ್ಕೆ ಸ್ಟೇಡಿಯಂನಲ್ಲಿ ಅಭಿಮಾನಿಗಳ ಗಲಭೆ – ಮಕ್ಕಳು, ಪೊಲೀಸರು ಸೇರಿ 127 ಮಂದಿ ಸಾವು

    ಜಕಾರ್ತ: ಇಂಡೋನೇಷ್ಯಾದಲ್ಲಿ (Indonesia) ಶನಿವಾರ ರಾತ್ರಿ ನಡೆದ ಫುಟ್‌ಬಾಲ್ (Football) ಪಂದ್ಯವೊಂದರಲ್ಲಿ ಗಲಭೆ ಸಂಭವಿಸಿ, ಕನಿಷ್ಠ 127 ಜನರು ಸಾವನ್ನಪ್ಪಿದ್ದಾರೆ. ಸತ್ತವರಲ್ಲಿ ಮಕ್ಕಳು ಮತ್ತು ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ.

    ಇಂಡೋನೇಷ್ಯಾದ ಪೂರ್ವ ಜಾವಾದ ಪ್ರಾಂತ್ಯದ ಮಲಾಂಗ್‌ನಲ್ಲಿರುವ ಕಂಜುರುಹಾನ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಇದನ್ನೂ ಓದಿ: 2.9 ಕೋಟಿ ಬೆಳಕಿನ ವರ್ಷಗಳ ಹಿಂದಿನ ನಕ್ಷತ್ರಪುಂಜ – ನಾಸಾದ ವೆಬ್ ಟೆಲಿಸ್ಕೋಪ್‌ನಿಂದ ಸೆರೆ

    ತವರು ಮೈದಾನದಲ್ಲಿ ಅರೆಮಾ ಫುಟ್‌ಬಾಲ್ ಕ್ಲಬ್ ಅನ್ನು ಪ್ರತಿಸ್ಪರ್ಧಿ ತಂಡ ಪರ್ಸೆಬಾಯಾ ಸೋಲಿಸಿತು. ಇದರಿಂದ ಬೇಸರಗೊಂಡ ಅರೆಮಾ ಫುಟ್‌ಬಾಲ್‌ ಕ್ಲಬ್‌ ತಂಡದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಿಚ್‌ಗೆ ನುಗ್ಗುವಂತೆ ಪ್ರೇರೇಪಿಸಿತು. ನಂತರ ಸಾಮೂಹಿಕ ಗಲಭೆಗಳು ಭುಗಿಲೆದ್ದು, ಪೊಲೀಸರು ಸೇರಿದಂತೆ 127 ಮಂದಿ ಸಾವನ್ನಪ್ಪಿದ್ದಾರೆ.

    ಜನರನ್ನು ಚದುರಿಸಲು ಘಟನಾ ಸ್ಥಳದಲ್ಲಿ ಅಶ್ರುವಾಯು ಸಿಡಿಸಲಾಯಿತು. ಸಾಕರ್ ಮೈದಾನದಲ್ಲಿ ಗಲಭೆ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಬೀದಿಗಳಲ್ಲಿ ಜನ ಚೆಲ್ಲಾಪಿಲ್ಲಿಯಾಗಿ ಓಡಿದರು. ಈ ವೇಳೆ ಕಾಲ್ತುಳಿತ ಕೂಡ ಸಂಭವಿಸಿತು. ಇದನ್ನೂ ಓದಿ: ನಮೀಬಿಯಾದಿಂದ ಬಂದ ಚೀತಾ `ಆಶಾ’ ಗರ್ಭಿಣಿಯಾಗಿದ್ಯಾ – ಅಧಿಕಾರಿಗಳು ಹೇಳೋದೇನು?

    Live Tv
    [brid partner=56869869 player=32851 video=960834 autoplay=true]

  • ಮಕ್ಕಳೊಂದಿಗೆ ಕೇರಳದ ಬೀದಿಗಳಲ್ಲಿ ಫುಟ್‍ಬಾಲ್ ಆಡಿದ ರಾಹುಲ್

    ಮಕ್ಕಳೊಂದಿಗೆ ಕೇರಳದ ಬೀದಿಗಳಲ್ಲಿ ಫುಟ್‍ಬಾಲ್ ಆಡಿದ ರಾಹುಲ್

    ತಿರುವನಂತಪುರಂ: ರಾಜಸ್ಥಾನದಲ್ಲಿ (Rajasthan) ರಾಜಕೀಯ ಬಿಕ್ಕಿಟ್ಟು ಎದುರಾಗಿದೆ. ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಭಾರತ್ ಜೋಡೋ ಯಾತ್ರೆ (Bharat Jodo Yatra) ವೇಳೆ ಕೇರಳದ (Kerala) ಬೀದಿಗಳಲ್ಲಿ ಮಕ್ಕಳೊಂದಿಗೆ ಫುಟ್‍ಬಾಲ್ ಆಟ ಆಡಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಈ ವಿಡಿಯೋವನ್ನು ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ನಾವು ಈ ಮಕ್ಕಳ ಭವಿಷ್ಯವನ್ನು ರೂಪಿಸಬೇಕು. ಇದಕ್ಕಾಗಿ ಎಲ್ಲಾ ಕಷ್ಟಗಳನ್ನು ಎದುರಿಸಬೇಕು ಎಂದು ವೀಡಿಯೋ ಜೊತೆಗೆ ಕ್ಯಾಪ್ಷನ್‍ನಲ್ಲಿ ಬರೆಯಲಾಗಿದೆ. ಇದನ್ನೂ ಓದಿ: ಗೋವಾಕ್ಕೆ ಚೋರ್ಲಾ ಘಾಟ್ ಮೂಲಕ ತೆರಳುವ ರಾಜ್ಯದ ಭಾರೀ ವಾಹನಗಳಿಗೆ ತಡೆ

    40 ಸೆಕೆಂಡ್ ಇರುವ ವೀಡಿಯೋದಲ್ಲಿ ನೇರಳೆ ಬಣ್ಣದ ಟೀ ಶರ್ಟ್ ಮತ್ತು ಬಿಳಿ ಬಣ್ಣದ ಶಾಟ್ರ್ಸ್ ಧರಿಸಿರುವ ಮಕ್ಕಳೊಂದಿಗೆ ಪಾಲಕ್ಕಾಡ್‍ನ (Palakkad) ಬೀದಿಗಳಲ್ಲಿ ಫುಟ್‍ಬಾಲ್ ಆಡಿರುವುದನ್ನು ಕಾಣಬಹುದಾಗಿದೆ. ಮಕ್ಕಳೊಂದಿಗೆ (Children) ಕಾಲ್ನಡಿಗೆಯಲ್ಲಿ ಮಾತನಾಡುತ್ತಾ, ಹುಡುಗನೊಬ್ಬನಿಗೆ ತಾವು ಎಸೆಯುವ ಬಾಲ್ ಹಿಡಿದುಕೊಳ್ಳುವಂತೆ ತಿಳಿಸಿ ಬಾಲ್ ಅನ್ನು ಎಸೆದು ಆಟವಾಡಿ ಸಂತೋಷಪಟ್ಟಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದೀಗ ಈ ವೀಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ಸಾಕಷ್ಟು ಲೈಕ್ಸ್ ಬಂದಿದೆ.

    150 ದಿನಗಳಲ್ಲಿ 3,570 ಕಿ.ಮೀವರೆಗೂ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಹೆಜ್ಜೆಹಾಕಲಿದ್ದು, ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾದ ಈ ಅಭಿಯಾನ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ. ಇದನ್ನೂ ಓದಿ: ತಾಲೂಕು, ಗ್ರಾಮ ಮಟ್ಟದಲ್ಲೂ `PayCM’ ಅಭಿಯಾನ- ಕಾಂಗ್ರೆಸ್ ನಿಂದ ಮಾಸ್ಟರ್ ಪ್ಲ್ಯಾನ್

    Live Tv
    [brid partner=56869869 player=32851 video=960834 autoplay=true]

  • ಸೀರೆಯುಟ್ಟು ಸಂಸದೆ ಮಹುವಾ ಮೊಯಿತ್ರಾ ಫುಟ್‍ಬಾಲ್ ಆಟ – ನೆಟ್ಟಿಗರು ಫುಲ್ ಫಿದಾ

    ಸೀರೆಯುಟ್ಟು ಸಂಸದೆ ಮಹುವಾ ಮೊಯಿತ್ರಾ ಫುಟ್‍ಬಾಲ್ ಆಟ – ನೆಟ್ಟಿಗರು ಫುಲ್ ಫಿದಾ

    ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್(Trinamool Congress) ಸಂಸದೆ ಮಹುವಾ ಮೊಯಿತ್ರಾ (MP Mahua Moitra) ಅವರು ಕೃಷ್ಣಾನಗರ ಎಂಪಿ ಕಪ್ ಟೂರ್ನಿಯಲ್ಲಿ(Krishnanagar MP Cup Tournament) ಸೀರೆಯಲ್ಲೇ ಫುಟ್‍ಬಾಲ್ (Foot Ball) ಆಟ ಆಡಿದ್ದು, ಇದೀಗ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಈ ಫೋಟೋವನ್ನು ಮಹುವಾ ಮೊಯಿತ್ರಾ ಅವರೇ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಕೆಂಪು-ಕಿತ್ತಳೆ ಬಣ್ಣದ ಸೀರೆಯನ್ನುಟ್ಟು, ಕಾಲಿಗೆ ಸ್ಪೋರ್ಟ್ಸ್ ಶೂ ತೊಟ್ಟು, ಕಣ್ಣಿಗೆ ಸನ್‍ಗ್ಲಾಸ್ ಧರಿಸಿಕೊಂಡು, ಫುಟ್‌ಬಾಲ್ ಆಡುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ. ಅಲ್ಲದೆ ಮತ್ತೊಂದು ಫೋಟೋದಲ್ಲಿ ಗೋಲ್ ಕೀಪರ್(Goal Keeper) ಆಗಿ ನಿಂತಿರುವುದನ್ನು ಕೂಡ ನೋಡಬಹುದಾಗಿದೆ. ಇದನ್ನೂ ಓದಿ: ಮದರಸಾಗಳನ್ನು ಧ್ವಂಸಗೊಳಿಸುವಂತೆ ಕರೆ ನೀಡಿದ್ದ ಯತಿ ನರಸಿಂಹಾನಂದ ವಿರುದ್ಧ FIR

    ಫೋಟೋ ಜೊತೆಗೆ ಕೃಷ್ಣನಗರ ಎಂಪಿ ಕಪ್ ಟೂರ್ನಮೆಂಟ್ 2022 ರ ಫೈನಲ್‍ನ ಮೋಜಿನ ಕ್ಷಣಗಳು ಮತ್ತು ನಾನು ಸೀರೆಯಲ್ಲಿ ಆಟ ಆಡಿದ್ದೇನೆ ಎಂದು ಕ್ಯಾಪ್ಷನ್‌ನಲ್ಲಿ ಬರೆದುಕೊಂಡಿದ್ದಾರೆ. ಒಟ್ಟಾರೆ ಸಂಸದೆ ಸೀರೆ ಉಟ್ಟುಕೊಂಡು ಆಟವಾಡುತ್ತಿರುವುದನ್ನು ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ಡಿಸ್ಕೌಂಟ್‌ ಬೆಲೆಯಲ್ಲಿ ತೈಲ – 35 ಸಾವಿರ ಕೋಟಿ ಗಳಿಸಿದ ಭಾರತ

    Live Tv
    [brid partner=56869869 player=32851 video=960834 autoplay=true]

  • ಭಾರತದ ಮೇಲೆ ಫಿಫಾ ಹೇರಿದ ಅಮಾನತು ತೆರವು

    ಭಾರತದ ಮೇಲೆ ಫಿಫಾ ಹೇರಿದ ಅಮಾನತು ತೆರವು

    ನವದೆಹಲಿ: ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್(ಎಐಎಫ್‌ಎಫ್) ಮೇಲಿನ ಅಮಾನತನ್ನು ವಿಶ್ವ ಫುಟ್‌ಬಾಲ್ ಆಡಳಿತ ಮಂಡಳಿ ಫಿಫಾ ಶುಕ್ರವಾರ ತೆರವುಗೊಳಿಸಿದೆ. ಈ ಕ್ರಮದಿಂದ 17 ವರ್ಷದೊಳಗಿನ ಮಹಿಳಾ ವಿಶ್ವಕಪ್ 2022ರ ಪಂದ್ಯದಲ್ಲಿ ಭಾರತ ಭಾಗವಹಿಸಲು ಸಾಧ್ಯವಾಗಲಿದೆ.

    ಫಿಫಾ ಕೌನ್ಸಿಲ್‌ನ ಬ್ಯೂರೋ ಅನಗತ್ಯ ಮೂರನೇ ವ್ಯಕ್ತಿಯ ಪ್ರಭಾವದಿಂದಾಗಿ ಎಐಎಫ್‌ಎಫ್ ಅನ್ನು ಅಮಾನತುಗೊಳಿಸಿತ್ತು. ಇದೀಗ ಎಐಎಫ್‌ಎಫ್ ಮೇಲೆ ವಿಧಿಸಲಾಗಿದ್ದ ಅಮಾನತನ್ನು ತೆಗೆದುಹಾಕಲು ನಿರ್ಧರಿಸಿರುವುದಾಗಿ ಫಿಫಾ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಫಿಫಾ ಭಾರತವನ್ನು ಅಮಾನುತು ಮಾಡಿದ್ದು ಯಾಕೆ? ಇಲ್ಲಿ ಪೂರ್ಣ ಮಾಹಿತಿ

    ತಾನು ಮಿಸಿದ್ದ ಆಡಳಿತಾಧಿಕಾರಿಗಳ ಸಮಿತಿಯನ್ನು ಸುಪ್ರೀಂ ಕೋರ್ಟ್‌  ರದ್ದುಗೊಳಿಸಿತ್ತು. ಐಎಫ್‌ಎಫ್‌ನ ದೈನಂದಿನ ವ್ಯವಹಾರಗಳು ಸದ್ಯಕ್ಕೆ 36 ರಾಜ್ಯ ಸಂಘಗಳು ಈಗಾಗಲೇ ಆಯ್ಕೆ ಮಾಡಿರುವ ಎಐಎಫ್‌ಎಫ್‌ನ ಪ್ರಧಾನ ಕಾರ್ಯದರ್ಶಿಯಿಂದ ನಿರ್ವಹಣೆಯಾಗಬೇಕು ಎಂದು ಎಂದು ಸುಪ್ರೀಂ ಸೂಚಿಸಿತ್ತು. ಸುಪ್ರೀಂ ಆದೇಶ ಪ್ರಕಟವಾದ ಬೆನ್ನಲ್ಲೇ  ಎಐಎಫ್‌ಎಫ್ ತನ್ನ ಮೇಲೆ ವಿಧಿಸಲಾಗಿರುವ ಅಮಾನತನ್ನು ತೆರವುಗೊಳಿಸಬೇಕೆಂದು ಫಿಫಾ ಬಳಿ ಮನವಿ ಮಾಡಿತ್ತು. ಈ ಮನವಿಯನ್ನು ಪುರಸ್ಕರಿಸಿದ ಫಿಫಾ ಈಗ ಅಮಾನತನ್ನು ತೆರವುಗೊಳಿಸಿದೆ. ಇದನ್ನೂ ಓದಿ: ಅಂದುಕೊಂಡಂತೆ ನಡೆದರೆ ಮುಂದಿನ ಮೂರು ಭಾನುವಾರ ಇಂಡೋ-ಪಾಕ್ ಫೈಟ್ ಗ್ಯಾರಂಟಿ

    Live Tv
    [brid partner=56869869 player=32851 video=960834 autoplay=true]

  • ಭಾರತದ ಮೇಲಿನ ಅಮಾನತು ತೆರವಿಗೆ ಆಡಳಿತಾಧಿಕಾರಿಗಳ ಸಮಿತಿಯನ್ನೇ ರದ್ದುಗೊಳಿಸಿದ ಸುಪ್ರೀಂ

    ಭಾರತದ ಮೇಲಿನ ಅಮಾನತು ತೆರವಿಗೆ ಆಡಳಿತಾಧಿಕಾರಿಗಳ ಸಮಿತಿಯನ್ನೇ ರದ್ದುಗೊಳಿಸಿದ ಸುಪ್ರೀಂ

    ನವದೆಹಲಿ: ಭಾರತದ ಮೇಲೆ ವಿಶ್ವ ಫುಟ್‌ಬಾಲ್‌ನ ಆಡಳಿತ ಮಂಡಳಿ ​​(ಫಿಫಾ) ಹೇರಿರುವ ಅಮಾನತನ್ನು ತೆರವುಗೊಳಿಸಲು ತಾನು ನೇಮಿಸಿದ್ದ ಆಡಳಿತಾಧಿಕಾರಿಗಳ ಸಮಿತಿಯನ್ನು ಸುಪ್ರೀಂ ಕೋರ್ಟ್‌  ರದ್ದುಗೊಳಿಸಿದೆ.

    ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ಕಾರ್ಯಕಾರಿ ಸಮಿತಿಯ ಆಯ್ಕೆ ಸಂಬಂಧ ಚುನಾವಣೆಯನ್ನು ಮುಂದೂಡುವಂತೆ ಕೇಂದ್ರ ಸರ್ಕಾರ ಮಾಡಿದ ಮನವಿಗೆ ಸುಪ್ರೀಂ ಸೋಮವಾರ ಒಪ್ಪಿಗೆ ನೀಡಿದೆ.

    ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಎಐಎಫ್‌ಎಫ್‌ನ ದೈನಂದಿನ ವ್ಯವಹಾರಗಳು ಸದ್ಯಕ್ಕೆ 36 ರಾಜ್ಯ ಸಂಘಗಳು ಈಗಾಗಲೇ ಆಯ್ಕೆ ಮಾಡಿರುವ ಎಐಎಫ್‌ಎಫ್‌ನ ಪ್ರಧಾನ ಕಾರ್ಯದರ್ಶಿಯಿಂದ ನಿರ್ವಹಣೆಯಾಗಬೇಕು ಎಂದು ಎಂದು ಆದೇಶಿಸಿದೆ.

    SUPREME COURT

    ಪ್ರಸ್ತುತ ಎಐಎಫ್‌ಎಫ್ ಅನ್ನು ನಡೆಸುತ್ತಿರುವ ಆಡಳಿತಾಧಿಕಾರಿಗಳ ಸಮಿತಿ (CoA) ಇನ್ನು ಮುಂದೆ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಫಿಫಾ ಭಾರತವನ್ನು ಅಮಾನುತು ಮಾಡಿದ್ದು ಯಾಕೆ? ಇಲ್ಲಿ ಪೂರ್ಣ ಮಾಹಿತಿ

    ಫಿಫಾ ಎಐಎಫ್‌ಎಫ್ ಮೇಲೆ ಹೇರಿದ ಅಮಾನತನ್ನು ತೆರವುಗೊಳಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದಿರುವ ಸುಪ್ರೀಂ ಭಾರತದಲ್ಲಿ 17 ವರ್ಷದೊಳಗಿನವರ ಮಹಿಳೆಯರ ವಿಶ್ವಕಪ್ ಆಯೋಜನೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

    ಫಿಫಾ ನ್ಯಾಯಾಲಯ ನೇಮಿಸಿದ ಸಮಿತಿಯ ಜೊತೆ ವ್ಯವಹಾರ ನಡೆಸುವುದಿಲ್ಲ. ಹೀಗಾಗಿ ಆಡಳಿತಾಧಿಕಾರಿಗಳ ಸಮಿತಿಯಯನ್ನು ಕೂಡಲೇ ರದ್ದುಗೊಳಿಸಬೇಕು. ಐಎಫ್‌ಎಫ್‌ನ ಪ್ರಧಾನ ಕಾರ್ಯದರ್ಶಿಯಿಂದ ವ್ಯವಹಾರ ನಡೆಸುವಂತೆ ನಿರ್ದೇಶನ ನೀಡಬೇಕು ಮತ್ತು ಈ ಕೂಡಲೇ ಚುನಾವಣಾ ಪ್ರಕ್ರಿಯೆ ನಡೆಸುವಂತೆ ಆದೇಶಿಸಬೇಕೆಂದು ಕೇಂದ್ರ ಸರ್ಕಾರ ಇಂದು ಸುಪ್ರೀಂ ಮುಂದೆ ಮನವಿ ಮಾಡಿತ್ತು.

    ಮೇ 18 ರಂದು ಸುಪ್ರೀಂ ಕೋರ್ಟ್ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ವಿಸರ್ಜಿಸಿತು ಮತ್ತು ದೇಶದಲ್ಲಿ ಫುಟ್‌ಬಾಲ್‌ ಕ್ರೀಡೆಯನ್ನು ನಿಯಂತ್ರಿಸಲು ಮೂರು ಸದಸ್ಯರ ಆಡಳಿತಾಧಿಕಾರಿಗಳ ಸಮಿತಿ(CoA) ನೇಮಿಸಿತು. ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾ. ಎಆರ್ ದವೆ, ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್ ವೈ ಖುರೇಷಿ ಮತ್ತು ಭಾರತೀಯ ಪುರುಷರ ಫುಟ್ಬಾಲ್ ತಂಡದ ಮಾಜಿ ನಾಯಕ ಭಾಸ್ಕರ್ ಗಂಗೂಲಿ ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಫಿಫಾ ಜೊತೆ 2 ಬಾರಿ ಸಭೆ ಮಾಡಲಾಗಿದೆ: ಸುಪ್ರೀಂಗೆ ಕೇಂದ್ರ

    ಫಿಫಾ ಜೊತೆ 2 ಬಾರಿ ಸಭೆ ಮಾಡಲಾಗಿದೆ: ಸುಪ್ರೀಂಗೆ ಕೇಂದ್ರ

    ನವದೆಹಲಿ: ಫಿಫಾ ಎಐಎಫ್‌ಎಫ್‌ ಮೇಲೆ ಹೇರಿರುವ ಅಮಾನತು ನಿರ್ಧಾರವನ್ನು ತೆಗೆದು ಭಾರತದಲ್ಲೇ 17 ವರ್ಷದ ಒಳಗಿನ ಮಹಿಳೆಯರ ವಿಶ್ವಕಪ್‌ ಆಯೋಜಿಸುವಂತೆ ಕ್ರಮ ವಹಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

    ವಿಶ್ವ ಫುಟ್‌ಬಾಲ್‌ ಆಡಳಿತ ಮಂಡಳಿ (ಫಿಫಾ) ಭಾರತೀಯ ಫುಟ್ಬಾಲ್ ಫೆಡರೇಶನ್ ಸಂಸ್ಥೆಯನ್ನು(ಎಐಎಫ್‌ಎಫ್‌) ಅಮಾನುತು ಮಾಡಿದ ಹಿನ್ನೆಲೆಯಲ್ಲಿ ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು.

    ಫಿಫಾ ಅಮಾನತು ಮಾಡಿದ ನಿರ್ಧಾರವನ್ನು ಮಂಗಳವಾರ  ಕೋರ್ಟ್‌ ಗಮನಕ್ಕೆ ಸಾಲಿಸಿಟರ್‌ ಜನರಲ್‌ ತಂದಿದ್ದರು. ಇಂದು ನ್ಯಾ. ಡಿವೈ ಚಂದ್ರಚೂಡ್‌, ಎಎಸ್‌ ಬೋಪಣ್ಣ ಮತ್ತು ಜೆಬಿ ಪಾರ್ದಿವಾಲಾ ನೇತೃತ್ವದ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು.

    ಈ ಸಂದರ್ಭದಲ್ಲಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಕೇಂದ್ರ ಸರ್ಕಾರ ಅಮಾನತು ನಿರ್ಧಾರ ತೆಗೆಯುವ ಸಂಬಂಧ ಫಿಫಾ ಜೊತೆ ಮಾತುಕತೆ ನಡೆಯುತ್ತಿದೆ. ಈಗಾಗಲೇ 2 ಬಾರಿ ಸಭೆ ನಡೆಸಿದೆ. ಮಾತುಕತೆ ಫಲಪ್ರದವಾಗುವ ಸಾಧ್ಯತೆಯಿದೆ. ಸಭೆಯ ಫಲಿತಾಂಶ ಬರುವವರೆಗೂ ಮುಂದಿನ ಸೋಮವಾರದವರೆಗೆ ವಿಚಾರಣೆ ನಡೆಸಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಫಿಫಾ ಭಾರತವನ್ನು ಅಮಾನುತು ಮಾಡಿದ್ದು ಯಾಕೆ? – ನಡೆಯುತ್ತಾ ಮಹಿಳಾ ವಿಶ್ವಕಪ್‌?

    ಅಷ್ಟೇ ಅಲ್ಲದೇ ಸುಪ್ರೀಂ ನೇಮಿಸಿದ ಮೂರು ಸದಸ್ಯರ ಆಡಳಿತಾಧಿಕಾರಿಗಳ ಸಮಿತಿ(CoA) ಸಮಸ್ಯೆ ಬಗೆಹರಿಸಲು ಫಿಫಾ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಸಾಲಿಸಿಟರ್‌ ಜನರಲ್‌ ಕೋರ್ಟ್‌ ಗಮನಕ್ಕೆ ತಂದರು.

    ಎಐಎಫ್‌ಎಫ್‌ನಲ್ಲಿ ಚುನಾವಣೆ ನಡೆಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದ ಹಿರಿಯ ವಕೀಲ ರಾಹುಲ್‌ ಮೆಹ್ತಾ, ಮಾಜಿ ಎಐಎಫ್‌ಎಫ್‌ ಅಧ್ಯಕ್ಷ ಪ್ರಫುಲ್‌ ಪಟೇಲ್‌ ಅವರಿಂದಲೇ ಈ ಎಲ್ಲ ಘಟನೆಗಳು ಆಗುತ್ತಿದೆ ಎಂದು ವಾದಿಸಿದರು.

    ಈ ಪ್ರಕರಣ ಬಗೆ ಹರಿಸುವ ಸಂಬಂಧ ಕೇಂದ್ರ ಸರ್ಕಾರದ ನಡೆಗೆ ಮೆಚ್ಚುಗೆ ಇದೆ ಎಂದ ಕೋರ್ಟ್‌ ಫಿಫಾ ಜೊತೆ ಮಾತುಕತೆ ನಡೆಸಿ ಅಮಾನತು ನಿರ್ಧಾರ ತೆಗೆಯಬೇಕು ಮತ್ತು ಭಾರತದಲ್ಲೇ ವಿಶ್ವಕಪ್‌ ಫುಟ್‌ಬಾಲ್‌ ಆಯೋಜನೆಯಾಗಬೇಕು ಎಂದು ಸೂಚಿಸಿತು.

    ಸಾಲಿಸಿಟರ್‌ ಜನರಲ್‌ ಮನವಿಯ ಮೇರೆಗೆ ಕೋರ್ಟ್‌ ಮುಂದಿನ ಸೋಮವಾರಕ್ಕೆ ವಿಚಾರಣೆಯನ್ನು ಮುಂದೂಡಿತು.

    Live Tv
    [brid partner=56869869 player=32851 video=960834 autoplay=true]

  • ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ ಅಮಾನತುಗೊಳಿಸಿದ ಫಿಫಾ

    ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ ಅಮಾನತುಗೊಳಿಸಿದ ಫಿಫಾ

    ಪ್ಯಾರಿಸ್: ಜಾಗತಿಕ ಫುಟ್‌ಬಾಲ್ ಆಡಳಿತ ಮಂಡಳಿ ಫಿಫಾ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್(ಎಐಎಫ್‌ಎಫ್) ಅನ್ನು ಸೋಮವಾರ ಅಮಾನತುಗೊಳಿಸಿದೆ. ಫೆಡರೇಶನ್ ಹಿಂದೆ ಮೂರನೇ ವ್ಯಕ್ತಿಗಳ ಪ್ರಭಾವ ಇದೆ ಎನ್ನಲಾಗಿದ್ದು, ಇದು ಕಾನೂನುಗಳ ಗಂಭೀರ ಉಲ್ಲಂಘನೆ ಎಂದು ಫಿಫಾ ಆರೋಪಿಸಿದೆ.

    ಎಐಎಫ್‌ಎಫ್‌ನ ಅಮಾನತಿನಿಂದಾಗಿ ಈ ಬಾರಿ ಅಕ್ಟೋಬರ್‌ನಲ್ಲಿ ಭಾರತದಲ್ಲಿ ನಡೆಯಬೇಕಿದ್ದ 17 ವರ್ಷದ ಒಳಗಿನ ಮಹಿಳಾ ವಿಶ್ವಕಪ್ ಟೂರ್ನಿಯನ್ನು ಮೊದಲೇ ನಿರ್ಧರಿಸಿದಂತೆ  ನಡೆಸಲು ಸಾಧ್ಯವಿಲ್ಲ ಎಂದು ಫಿಫಾ ಹೇಳಿದೆ. ಇದನ್ನೂ ಓದಿ: ಸ್ವಾತಂತ್ರ್ಯ ದಿನದಂದೇ ಶ್ರೀನಗರದಲ್ಲಿ 2 ಬಾರಿ ಗ್ರೆನೇಡ್ ದಾಳಿ

    ಎಐಎಫ್‌ಎಫ್‌ನ ಮಾಜಿ ಮುಖ್ಯಸ್ಥ, ಎನ್‌ಸಿಪಿ ನಾಯಕ ಪ್ರಫುಲ್‌ ಪಟೇಲ್ ತಮ್ಮ ಅಧಿಕಾರಾವಧಿಯನ್ನು ಮೀರಿ ಅಧಿಕಾರದಲ್ಲಿಯೇ ಉಳಿದುಕೊಂಡಿದ್ದರು. ಬಳಿಕ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಿ ಆಡಳಿತಾಧಿಕಾರಿಗಳನ್ನು ಸುಪ್ರೀಂ ಕೋರ್ಟ್ ನೇಮಕ ಮಾಡಿತ್ತು. ಇದನ್ನೂ ಓದಿ: 10 ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಅದ್ಧೂರಿ ತೆರೆ- ಅಪ್ಪು ಜಾತ್ರೆ ವೀಕ್ಷಣೆಗೆ ಹರಿದು ಬಂತು ಜನಸಾಗರ

    2020ರಲ್ಲಿ ಭಾರತದಲ್ಲಿ ನಡೆಯಬೇಕಿದ್ದ ಪಂದ್ಯಾವಳಿಯನ್ನು ಕೋವಿಡ್ ಹಿನ್ನೆಲೆ ರದ್ದುಗೊಳಿಸಲಾಗಿತ್ತು. ಈ ಬಾರಿ ಅಕ್ಟೋಬರ್ 11 ರಿಂದ 30ರ ವರೆಗೆ ಭಾರತದಲ್ಲಿ 17 ವರ್ಷದ ಒಳಗಿನ ಮಹಿಳಾ ವಿಶ್ವಕಪ್ ಪಂದ್ಯಾವಳಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಫಿಫಾ ಎಐಎಫ್‌ಎಫ್ ಅನ್ನು ಅಮಾನತುಗೊಳಿಸಿದೆ.

    ಎಐಎಫ್‌ಎಫ್‌ನಲ್ಲಿ ಸೃಷ್ಟಿಯಾಗಿರುವ ಗೊಂದಲ ಬಗೆಹರಿಸಲು ಫಿಫಾ ಮತ್ತು ಎಎಫ್‌ಸಿ ಜೂನ್‌ನಲ್ಲಿ ಗಡುವು ನೀಡಿತ್ತು. ‘ಎಐಎಫ್‌ಎಫ್‌ಗೆ ಹೊಸದಾಗಿ ನಿಯಮಾವಳಿ ರೂಪಿಸಿ, ಜುಲೈ 31ರ ಒಳಗೆ ಅನುಮೋದನೆ ನೀಡಬೇಕು. ಸೆ.15ರ ಒಳಗಾಗಿ ಚುನಾವಣೆ ನಡೆಸಿ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರಬೇಕು ಎಂದು ಫಿಫಾ ಸೂಚಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಭಾರತೀಯ ಫೇಮಸ್ ಫುಟ್ಬಾಲ್ ಆಟಗಾರ ಇನ್ನಿಲ್ಲ

    ಭಾರತೀಯ ಫೇಮಸ್ ಫುಟ್ಬಾಲ್ ಆಟಗಾರ ಇನ್ನಿಲ್ಲ

    ಕೋಲ್ಕತ್ತಾ: ಭಾರತ ಮಾಜಿ ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರ ನರೇಂದ್ರ ತಾಪಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಅಖಿಲ ಭಾರತೀಯ ಫುಟ್ಬಾಲ್ ಫೆಡರೇಶನ್ (AIFF) ತಿಳಿಸಿದೆ.

    ಥಾಪಾ 1984 ರಲ್ಲಿ ಸಿಂಗಾಪುರದಲ್ಲಿ ನಡೆದ ಎಎಫ್‌ಸಿ ಏಷ್ಯನ್ ಕಪ್‌ಗೆ ಅರ್ಹತೆ ಪಡೆದ ಭಾರತೀಯ ತಂಡದ ಭಾಗವಾಗಿದ್ದರು. ಕೊಚ್ಚಿನ್‌ನಲ್ಲಿ ನಡೆದ 1983ರ ನೆಹರೂ ಕಪ್‌ನಲ್ಲಿ ಚೀನಾ ವಿರುದ್ಧ ಮುರು ಗೋಲ್‌ಗಳನ್ನು ಸಿಡಿಸಿ ಮಿಂಚಿದ್ದರು. 29 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದರು. ಇದನ್ನೂ ಓದಿ: ನನ್ನ ಪತ್ನಿ ಜೊತೆ ಮಾತನಾಡಬೇಡ ಅಂದಿದ್ದಕ್ಕೆ ಕ್ರಿಕೆಟ್ ಬ್ಯಾಟ್, ವಿಕೇಟ್‍ನಿಂದ ಹೊಡೆದು ಕೊಲೆಗೈದ್ರು

    ಅಷ್ಟೇ ಅಲ್ಲದೇ 1984 ರಲ್ಲಿ ಬೀಜಿಂಗ್‌ನಲ್ಲಿ ನಡೆದ ಗ್ರೇಟ್ ವಾಲ್ ಕಪ್‌ನಲ್ಲಿ ಭಾರತವು ಅಲ್ಜೀರಿಯಾ ವಿರುದ್ಧ 1-0 ಅಂತರದಲ್ಲಿ ಗೆಲುವು ಸಾಧಿಸಿತು, ಈ ಟೂರ್ನಿಯಲ್ಲಿ ತಮ್ಮ ವೃತ್ತಿ ಜೀವನದ ಶ್ರೇಷ್ಠ ಸಾಧನೆಯನ್ನು ಅವರು ಮಾಡಿದ್ದಾರೆ ಎಂದು ಎಐಎಫ್‌ಎಫ್ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ವಿದ್ಯುತ್ ಶಾಕ್ ತಗುಲಿ ಆಸ್ಪತ್ರೆ ಸೇರಿದ್ದ ರಾಷ್ಟ್ರೀಯ ಫುಟ್ಬಾಲ್ ಆಟಗಾರ ವಿಶ್ವಾಸ್ ಚಿಕಿತ್ಸೆ ಫಲಕಾರಿಯಾಗದೇ ನಿಧನ

    ವಿದ್ಯುತ್ ಶಾಕ್ ತಗುಲಿ ಆಸ್ಪತ್ರೆ ಸೇರಿದ್ದ ರಾಷ್ಟ್ರೀಯ ಫುಟ್ಬಾಲ್ ಆಟಗಾರ ವಿಶ್ವಾಸ್ ಚಿಕಿತ್ಸೆ ಫಲಕಾರಿಯಾಗದೇ ನಿಧನ

    ಮಂಡ್ಯ: ವಿದ್ಯುತ್ ಶಾಕ್ ತಗುಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಗರದ ಗುತ್ತಲು ಬಡಾವಣೆ ನಿವಾಸಿ ರಾಷ್ಟ್ರೀಯ ಫುಟ್‍ಬಾಲ್ ಆಟಗಾರ ವಿಶ್ವಾಸ್ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.

    ಜು.1ರಂದು ಸ್ವರ್ಣ ಫುಟ್‍ಬಾಲ್ ಸಂಸ್ಥೆ ಆಯೋಜಿಸಿದ್ದ ಹೊನಲು ಬೆಳಕಿನ ಏಳು ಮಂದಿ ಆಟಗಾರರ ಫುಟ್‍ಬಾಲ್‌ ಪಂದ್ಯಕ್ಕಾಗಿ ತಯಾರಿಯಲ್ಲಿದ್ದ ಪ್ರತಿಭಾವಂತ ಆಟಗಾರ ವಿಶ್ವಾಸ್, ಮನೆಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾಕ್‍ಗೆ ಒಳಗಾಗಿದ್ದರು. ಬಳಿಕ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ವಿದ್ಯುತ್‌ ಶಾಕ್‌ – ರಾಷ್ಟ್ರೀಯ ಫುಟ್ಬಾಲ್ ಆಟಗಾರನ ಸ್ಥಿತಿ ಚಿಂತಾಜನಕ

    ನರಸಿಂಹಮೂರ್ತಿ ಮತ್ತು ಶ್ಯಾಮಲಾ ದಂಪತಿಯ ಪುತ್ರ ವಿಶ್ವಾಸ್, ನಗರದ ಪಿಇಎಸ್ ಕಾಲೇಜ್‍ನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದರು. ಓದಿನ ಜೊತೆಗೆ ಫುಟ್‍ಬಾಲ್ ಕ್ರೀಡೆಯಲ್ಲಿಯೂ ತೊಡಗಿಸಿಕೊಂಡಿದ್ದರು. ಆದರೆ ಈ ಆಟಗಾರನ ಬಾಳಿನಲ್ಲಿ ವಿಧಿಯ ಆಟ ಬೇರೆಯಾಗಿತ್ತು. ಫುಟ್‍ಬಾಲ್ ಆಟದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕೆಂಬ ಕನಸು ಕಂಡಿದ್ದ ವಿಶ್ವಾಸ್ ವಿದ್ಯುತ್‌ ಶಾಕ್ ತಗುಲಿ ದೇಹದ ಶೇ.80ರಷ್ಟು ಭಾಗ ಹಾನಿಗೊಳಗಾಗಿ ಕೋಮಾ ಸ್ಥಿತಿಗೆ ತಲುಪಿ ಆಸ್ಪತ್ರೆ ಸೇರಿದ್ದರು. ನಂತರ ಪೋಷಕರಿಗೆ ಆರ್ಥಿಕವಾಗಿ ಕಷ್ಟ ಇದ್ದುದರಿಂದಾಗಿ ವಿಶ್ವಾಸ್‍ಗೆ ಚಿಕಿತ್ಸೆ ಕೊಡಿಸಲು ಸಹಾಯ ಕೇಳಿದ್ದರು. ಸಾವಿರಾರು ಜನ ವಿಶ್ವಾಸ್‍ಗಾಗಿ ದೇಣಿಗೆ ನೀಡಿದ್ದರು. ಆದರೆ ವಿಶ್ವಾಸ್ ಮಾತ್ರ ಇಂದು ಎಲ್ಲರನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಫಿಫಾ ವಿಶ್ವಕಪ್ ವೇಳೆ ಸೆಕ್ಸ್‌ ಮಾಡಿದ್ರೆ 7 ವರ್ಷ ಜೈಲು!

    ಫಿಫಾ ವಿಶ್ವಕಪ್ ವೇಳೆ ಸೆಕ್ಸ್‌ ಮಾಡಿದ್ರೆ 7 ವರ್ಷ ಜೈಲು!

    ದೋಹಾ: ನವೆಂಬರ್, ಡಿಸೆಂಬರ್‌ನಲ್ಲಿ ಕತಾರ್‌ನಲ್ಲಿ ನಡೆಯಲಿರುವ ಫಿಫಾ ಫುಟ್ಬಾಲ್ ವಿಶ್ವಕಪ್ ವೇಳೆ ವಿವಾಹೇತರ ಲೈಂಗಿಕ ಸಂಪರ್ಕಕ್ಕೆ ನಿಷೇಧ ಹೇರಲಾಗಿದೆ. ಈ ನಿಯಮವನ್ನು ಉಲ್ಲಂಘಿಸಿದರೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

    ಆಯೋಜಕರು ಈಗಾಗಲೇ ಕಠಿಣ ನಿಯಮಗಳನ್ನು ಜಾರಿ ಮಾಡಿದ್ದು, ಯಾವುದೇ ಆಟಗಾರ ಅಥವಾ ಅಭಿಮಾನಿಗಳು ವಿವಾಹೇತರ ಲೈಂಗಿಕ ಸಂಪರ್ಕ ಹೊಂದುವುದನ್ನು ನಿಷೇಧಿಸಲಾಗಿದೆ.

    ದಂಪತಿ ಮಾತ್ರ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದು ಎಂದು ತಿಳಿಸಿದೆ. ಅಷ್ಟೇ ಅಲ್ಲದೇ ಸಲಿಂಗಕಾಮವನ್ನು ಕೂಡಾ ನಿಷೇಧಿಸಿದೆ. ಫಿಫಾ ವೇಳೆ ಸೆಕ್ಸ್ ಕ್ರಿಯೆಗಳು ವ್ಯಾಪಕವಾಗಿ ನಡೆಯುತ್ತಿದ್ದು, ಇದೇ ಮೊದಲ ಬಾರಿ ಸೆಕ್ಸ್‌ಗೆ ನಿಷೇಧ ಹೇರಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಐಪಿಎಲ್‍ನಿಂದ ಔಟ್ ಆಗಿದ್ದ ಅಂಪೈರ್ ಅಸಾದ್ ರೌಫ್ ಇದೀಗ ಪಾಕ್‍ನಲ್ಲಿ ಚಪ್ಪಲಿ ವ್ಯಾಪಾರಿ

    ಕೊಕೇನ್ ಮತ್ತು ಇತರ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಿದ್ದು ಸಾಬೀತಾದರೆ ಕತಾರ್‌ನಲ್ಲಿ ಮರಣದಂಡನೆ ಶಿಕ್ಷೆ ನೀಡಲಾಗುತ್ತದೆ. ವಿಶ್ವಕಪ್‌ ಸಮಯದಲ್ಲಿ ಮದ್ಯಕ್ಕೆ ಅನುಮತಿ ನೀಡಲಾಗಿದೆ. ಮದ್ಯ ಸೇವನೆಗೆಗೆ ಪ್ರತ್ಯೇಕ ವಲಯವನ್ನು ತೆರೆಯಲಾಗುತ್ತದೆ.

    ಫುಟ್‌ಬಾಲ್‌ ಟೂರ್ನಿ ನವೆಂಬರ್ 21 ರಿಂದ ಆರಂಭವಾಗಲಿದೆ. ವಿಶೇಷವಾಗಿ 32 ತಂಡಗಳು ಆಡುತ್ತಿರುವ ಕೊನೆಯ ವಿಶ್ವಕಪ್‌ ಪಂದ್ಯ ಇದಾಗಿದೆ. ಇನ್ನು ಮುಂದೆ 48 ತಂಡಗಳು ಆಡಲಿದ್ದು 2026ರ ವಿಶ್ವಕಪ್‌ ಆತಿಥ್ಯವನ್ನು ಅಮೆರಿಕ, ಮೆಕ್ಸಿಕೋ, ಕೆನಡಾ ವಹಿಸಲಿದೆ.

    Live Tv