Tag: football player

  • ವೈದ್ಯರ ನಿರ್ಲಕ್ಷ್ಯ – ಕಾಲನ್ನು ಕಳೆದುಕೊಂಡ ಫುಟ್‌ಬಾಲ್ ಆಟಗಾರ್ತಿ ಆಸ್ಪತ್ರೆಯಲ್ಲೇ ಸಾವು

    ವೈದ್ಯರ ನಿರ್ಲಕ್ಷ್ಯ – ಕಾಲನ್ನು ಕಳೆದುಕೊಂಡ ಫುಟ್‌ಬಾಲ್ ಆಟಗಾರ್ತಿ ಆಸ್ಪತ್ರೆಯಲ್ಲೇ ಸಾವು

    ಚೆನ್ನೈ: 17 ವರ್ಷದ ಮಹತ್ವಾಕಾಂಕ್ಷಿ ಫುಟ್‌ಬಾಲ್ ಆಟಗಾರ್ತಿ (Football Player) ವೈದ್ಯರ ನಿರ್ಲಕ್ಷ್ಯದಿಂದಾಗಿ ಮೊದಲಿಗೆ ತನ್ನ ಕಾಲನ್ನು ಕಳೆದುಕೊಂಡು ಬಳಿಕ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ (Tamil Nadu) ನಡೆದಿದೆ.

    ದೈಹಿಕ ಶಿಕ್ಷಣದಲ್ಲಿ ಪದವಿಪೂರ್ವ ವಿದ್ಯಾರ್ಥಿನಿಯಾಗಿದ್ದ ಪ್ರಿಯಾ ತನ್ನ ಬಲಗಾಲಿನ ಅಸ್ಥಿರಜ್ಜು ಹರಿದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಮೊಣಕಾಲು ಸಂಬಂಧಿತ ಶಸ್ತ್ರಚಿಕಿತ್ಸೆಗೆ (Surgery) ಒಳಗಾಗಿದ್ದಳು. ಆದರೆ ಶಸ್ತ್ರಚಿಕಿತ್ಸೆಯ ನಂತರ ತೊಡಕುಗಳ ಕಾರಣದಿಂದ ಬಾಲಕಿಯ ಕಾಲನ್ನೇ ಕತ್ತರಿಸಬೇಕಾಯಿತು.

    ನವೆಂಬರ್ 8ರಂದು ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾಳೆ. ಆದರೆ ಆಕೆಯ ಸಾವಿಗೆ ಕಾರಣ ಅಂಗಾಂಗ ವೈಫಲ್ಯ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಲವ್ ಜಿಹಾದ್‌ಗೆ ಬಲಿಯಾದ್ರೆ ಇದೇ ಗತಿ – ಹೊಸ ಆಯಾಮದಲ್ಲಿ ತನಿಖೆ ನಡೆಸುವಂತೆ VHP ಮನವಿ

    ಬಾಲಕಿ ಮೃತಪಟ್ಟ ಬಳಿಕ ಆಕೆಯ ಪೋಷಕರು ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯವೇ ಮಗಳ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆ ನಿರ್ಲಕ್ಷ್ಯದಿಂದ ಶಸ್ತ್ರಚಿಕಿತ್ಸೆ ನಡೆಸಿದ ಇಬ್ಬರು ವೈದ್ಯರನ್ನು ಅಮಾನತುಗೊಳಿಸಲಾಗಿದೆ. ಅವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಸುಬ್ರಮಣ್ಯಂ ತಿಳಿಸಿದ್ದಾರೆ.

    ಬಾಲಕಿಯ ಸಾವಿಗೆ ಸಂತಾಪ ವ್ಯಕ್ತಪಡಿಸಿದ ಸುಬ್ರಮಣ್ಯಂ, ಇದು ಭರಿಸಲಾರದ ನಷ್ಟವಾಗಿದೆ. ಬಾಲಕಿಗೆ ಶಸ್ತ್ರಚಿಕಿತ್ಸೆಯನ್ನು ಸರಿಯಾಗಿಯೇ ಮಾಡಲಾಗಿದೆ. ಆದರೆ ಕಂಪ್ರೆಷನ್ ಬ್ಯಾಂಡೇಜ್ ಅನ್ನು ಬಿಗಿಯಾಗಿ ಹಾಕಿದ್ದರಿಂದ ರಕ್ತ ಪರಿಚಲನೆ ನಿಂತಿದೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಬ್ಬರು ವೈದ್ಯರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

    ರಾಜ್ಯ ಸರ್ಕಾರ ಬಾಲಕಿಯ ಕುಟುಂಬಕ್ಕೆ 10 ಲಕ್ಷ ರೂ. ಆರ್ಥಿಕ ನೆರವು ಹಾಗೂ ಆಕೆಯ ಸಹೋದರ ಒಬ್ಬನಿಗೆ ಅರ್ಹತೆ ಪಡೆದಾಗ ಸರ್ಕಾರಿ ಉದ್ಯೋಗವನ್ನು ಘೋಷಿಸಿರುವುದಾಗಿ ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ಬಾವಿಗೆ ಬಿದ್ದ ಒಂಟಿ ಸಲಗ – ಮೇಲಕ್ಕೆತ್ತಲು ಅರಣ್ಯಾಧಿಕಾರಿಗಳಿಂದ ಬಿಗ್ ಸರ್ಕಸ್

    Live Tv
    [brid partner=56869869 player=32851 video=960834 autoplay=true]

  • ವಿದ್ಯುತ್ ಶಾಕ್ ತಗುಲಿ ಆಸ್ಪತ್ರೆ ಸೇರಿದ್ದ ರಾಷ್ಟ್ರೀಯ ಫುಟ್ಬಾಲ್ ಆಟಗಾರ ವಿಶ್ವಾಸ್ ಚಿಕಿತ್ಸೆ ಫಲಕಾರಿಯಾಗದೇ ನಿಧನ

    ವಿದ್ಯುತ್ ಶಾಕ್ ತಗುಲಿ ಆಸ್ಪತ್ರೆ ಸೇರಿದ್ದ ರಾಷ್ಟ್ರೀಯ ಫುಟ್ಬಾಲ್ ಆಟಗಾರ ವಿಶ್ವಾಸ್ ಚಿಕಿತ್ಸೆ ಫಲಕಾರಿಯಾಗದೇ ನಿಧನ

    ಮಂಡ್ಯ: ವಿದ್ಯುತ್ ಶಾಕ್ ತಗುಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಗರದ ಗುತ್ತಲು ಬಡಾವಣೆ ನಿವಾಸಿ ರಾಷ್ಟ್ರೀಯ ಫುಟ್‍ಬಾಲ್ ಆಟಗಾರ ವಿಶ್ವಾಸ್ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.

    ಜು.1ರಂದು ಸ್ವರ್ಣ ಫುಟ್‍ಬಾಲ್ ಸಂಸ್ಥೆ ಆಯೋಜಿಸಿದ್ದ ಹೊನಲು ಬೆಳಕಿನ ಏಳು ಮಂದಿ ಆಟಗಾರರ ಫುಟ್‍ಬಾಲ್‌ ಪಂದ್ಯಕ್ಕಾಗಿ ತಯಾರಿಯಲ್ಲಿದ್ದ ಪ್ರತಿಭಾವಂತ ಆಟಗಾರ ವಿಶ್ವಾಸ್, ಮನೆಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾಕ್‍ಗೆ ಒಳಗಾಗಿದ್ದರು. ಬಳಿಕ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ವಿದ್ಯುತ್‌ ಶಾಕ್‌ – ರಾಷ್ಟ್ರೀಯ ಫುಟ್ಬಾಲ್ ಆಟಗಾರನ ಸ್ಥಿತಿ ಚಿಂತಾಜನಕ

    ನರಸಿಂಹಮೂರ್ತಿ ಮತ್ತು ಶ್ಯಾಮಲಾ ದಂಪತಿಯ ಪುತ್ರ ವಿಶ್ವಾಸ್, ನಗರದ ಪಿಇಎಸ್ ಕಾಲೇಜ್‍ನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದರು. ಓದಿನ ಜೊತೆಗೆ ಫುಟ್‍ಬಾಲ್ ಕ್ರೀಡೆಯಲ್ಲಿಯೂ ತೊಡಗಿಸಿಕೊಂಡಿದ್ದರು. ಆದರೆ ಈ ಆಟಗಾರನ ಬಾಳಿನಲ್ಲಿ ವಿಧಿಯ ಆಟ ಬೇರೆಯಾಗಿತ್ತು. ಫುಟ್‍ಬಾಲ್ ಆಟದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕೆಂಬ ಕನಸು ಕಂಡಿದ್ದ ವಿಶ್ವಾಸ್ ವಿದ್ಯುತ್‌ ಶಾಕ್ ತಗುಲಿ ದೇಹದ ಶೇ.80ರಷ್ಟು ಭಾಗ ಹಾನಿಗೊಳಗಾಗಿ ಕೋಮಾ ಸ್ಥಿತಿಗೆ ತಲುಪಿ ಆಸ್ಪತ್ರೆ ಸೇರಿದ್ದರು. ನಂತರ ಪೋಷಕರಿಗೆ ಆರ್ಥಿಕವಾಗಿ ಕಷ್ಟ ಇದ್ದುದರಿಂದಾಗಿ ವಿಶ್ವಾಸ್‍ಗೆ ಚಿಕಿತ್ಸೆ ಕೊಡಿಸಲು ಸಹಾಯ ಕೇಳಿದ್ದರು. ಸಾವಿರಾರು ಜನ ವಿಶ್ವಾಸ್‍ಗಾಗಿ ದೇಣಿಗೆ ನೀಡಿದ್ದರು. ಆದರೆ ವಿಶ್ವಾಸ್ ಮಾತ್ರ ಇಂದು ಎಲ್ಲರನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿದ್ಯುತ್‌ ಶಾಕ್‌ – ರಾಷ್ಟ್ರೀಯ ಫುಟ್ಬಾಲ್ ಆಟಗಾರನ ಸ್ಥಿತಿ ಚಿಂತಾಜನಕ

    ವಿದ್ಯುತ್‌ ಶಾಕ್‌ – ರಾಷ್ಟ್ರೀಯ ಫುಟ್ಬಾಲ್ ಆಟಗಾರನ ಸ್ಥಿತಿ ಚಿಂತಾಜನಕ

    ಮಂಡ್ಯ: ನಗರದ ಗುತ್ತಲು ಬಡಾವಣೆ ನಿವಾಸಿ, ರಾಷ್ಟ್ರೀಯ ಫುಟ್ಬಾಲ್ ಆಟಗಾರ ವಿಶ್ವಾಸ್‌, ವಿದ್ಯುತ್ ಶಾಕ್‌ನಿಂದ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದವರು ಮಗನಿಗೆ ಚಿಕಿತ್ಸೆ ಕೊಡಿಸಲು ಪರದಾಡುತ್ತಿದ್ದರೆ, ಮತ್ತೊಂದೆಡೆ ಸ್ನೇಹಿತನಿಗಾಗಿ ವಿದ್ಯಾರ್ಥಿಗಳು ಜನರಿಂದ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ನರಸಿಂಹಮೂರ್ತಿ ಮತ್ತು ಶ್ಯಾಮಲಾ ದಂಪತಿ ಮಗ ವಿಶ್ವಾಸ್, ನಗರದ ಪಿಇಎಸ್ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದಾರೆ. ಓದಿನ ಜತೆಗೆ ಫುಟ್ಬಾಲ್ ಕ್ರೀಡೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮಳೆ ಅಬ್ಬರ – ಕೊಡಗು, ಉಡುಪಿ, ಚಿಕ್ಕಮಗಳೂರು ಸೇರಿ 5 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ

    ಜು.1ರಂದು ಸ್ವರ್ಣ ಫುಟ್ಬಾಲ್ ಸಂಸ್ಥೆ ಆಯೋಜಿಸಿರುವ ಹೊನಲು ಬೆಳಕಿನ ಏಳು ಮಂದಿ ಆಟಗಾರರ ಫುಟ್ಬಾಲ್ ಕ್ರೀಡೆಯಲ್ಲಿ ತೊಡಗಬೇಕಿದ್ದ ಪ್ರತಿಭಾವಂತ ಆಟಗಾರ ವಿಶ್ವಾಸ್, ಮನೆಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾಕ್‌ಗೆ ಒಳಗಾಗಿದ್ದರು.

    ಇದರಿಂದಾಗಿ ಆತನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ವಿದ್ಯುತ್ ದುರಂತಕ್ಕೆ ಒಳಗಾಗ ವಿಶ್ವಾಸ್ ದೇಹದ ಶೇ.80ರಷ್ಟು ಭಾಗ ಹಾನಿಗೊಳಗಾಗಿದ್ದು, ಕೋಮಾ ಸ್ಥಿತಿಯಲ್ಲಿದ್ದಾನೆ. ವಿಶ್ವಾಸ್ ಚಿಕಿತ್ಸೆಗೆ ದಿನವೊಂದಕ್ಕೆ ಸಾವಿರಾರೂ ರೂ. ವೆಚ್ಚ ತಗುಲುತ್ತಿದೆ. ಇತ್ತ ಕಾಲೇಜಿನ ವಿದ್ಯಾರ್ಥಿಗಳು ಹಣ ಸಂಗ್ರಹಿಸಿ ಚಿಕಿತ್ಸೆಗೆಂದು ನೀಡುತ್ತಿದ್ದಾರೆ. ಅಂತೆಯೇ ಪುಟ್ಬಾಲ್ ಕ್ಲಬ್‌ಗಳು ಕೂಡ ಆರ್ಥಿಕ ನೆರವು ಕೊಡುತ್ತಿವೆ. ಆದರೂ ಇನ್ನಷ್ಟು ಹಣದ ಅವಶ್ಯಕತೆ ಇದೆ. ಆದ್ದರಿಂದ ಸಹಾಯ ಮಾಡುವವರು ಬ್ಯಾಂಕ್ ಖಾತೆ ಸಂಖ್ಯೆ-17202610002717 (ಐಎಫ್‌ಎಸ್‌ಸಿ ಕೋಡ್-SYNB0001720), ಫೋನ್ ಪೇ ಅಥವಾ ಗೂಗಲ್ ಪೇ ಸಂಖ್ಯೆ – 9900201307 (ಅಶ್ವಿನಿ) ಹಣ ಕಳುಹಿಸಬಹುದು. ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಯುವ ಪ್ರತಿಭೆಗೆ ನೆರವಾಗಬೇಕೆಂದು ಕುಟುಂಬದವರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಗುರೂಜಿಯನ್ನು ನಾವು ದೇವರಂತೆ ಕಾಣುತ್ತಿದ್ದೆವು: ವನಜಾಕ್ಷಿ

    Live Tv
    [brid partner=56869869 player=32851 video=960834 autoplay=true]

  • ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಗಂಡುಮಗು ಸಾವು

    ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಗಂಡುಮಗು ಸಾವು

    ಲಿಸ್ಬನ್: ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್. ರೊನಾಲ್ಡೋ ಅವರು ತಮ್ಮ ಗಂಡುಮಗುವನ್ನು ಕಳೆದುಕೊಂಡಿದ್ದಾರೆ.

    ರೊನಾಲ್ಡೋ ತಮ್ಮ ಅವಳಿ ಮಕ್ಕಳಲ್ಲಿ ಒಂದು ಮಗು ಸಾವನ್ನಪ್ಪಿದ್ದು, ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ನಮ್ಮ ನವಜಾತ ಅವಳಿ ಮಕ್ಕಳಲ್ಲಿ ಒಂದು ಮಗು ಸಾವನ್ನಪ್ಪಿರುವುದು ನಾವು ದುಃಖದಿಂದ ಘೋಷಿಸಬೇಕಾಗಿದೆ. ಇದೀಗ ಹೆಣ್ಣು ಮಗು ಮಾತ್ರವೇ ಹುಟ್ಟಿದ್ದು, ಈ ಕ್ಷಣವನ್ನು ಸ್ವಲ್ಪ ಭರವಸೆಯಿಂದ ಬದುಕಲು ನಮಗೆ ಶಕ್ತಿ ನೀಡಿದೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಟ್ಲರ್ ಬೊಂಬಾಟ್ ಶತಕ – ರಾಜಸ್ಥಾನ್ ರಾಯಲ್ಸ್‌ಗೆ 7ರನ್‌ಗಳ ರೋಚಕ ಜಯ

    ವೈದ್ಯರ ಆರೈಕೆ ಹಾಗೂ ಬೆಂಬಲಕ್ಕಾಗಿ ನಾವು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಈ ನಷ್ಟದಿಂದ ನಾವು ಕುಗ್ಗಿ ಹೋಗಿದ್ದೇವೆ. ಈ ಕಷ್ಟದ ಸಮಯದಲ್ಲಿ ನಾನು ನಿಮ್ಮಿಂದ ಶಾಂತಿಯನ್ನು ಬಯಸುತ್ತೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಅಪಘಾತವಾದರೆ ರಸ್ತೆ ಅಗೆದವರೆ ಹೊಣೆ – ಬಿಬಿಎಂಪಿಯಿಂದ ಆದೇಶ

    ಕ್ರಿಸ್ಟಿಯಾನೋ ರೊನಾಲ್ಡೋ ತಮ್ಮ ಗೆಳತಿ ಜಾರ್ಜಿನಾರೊಂದಿಗೆ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದರು. ಆದರೆ ಅವಳಿ ಮಕ್ಕಳಲ್ಲಿ ಒಂದು ಮಗು ಸಾವನ್ನಪ್ಪಿರುವುದು ಅಭಿಮಾನಿಗಳಿಗೂ ದುಃಖ ತಂದಿದೆ.

  • 20 ಲಕ್ಷ ಮೌಲ್ಯದ ಮರಡೋನಾ ವಾಚ್ ಅಸ್ಸಾಂನಲ್ಲಿ ವಶಕ್ಕೆ

    20 ಲಕ್ಷ ಮೌಲ್ಯದ ಮರಡೋನಾ ವಾಚ್ ಅಸ್ಸಾಂನಲ್ಲಿ ವಶಕ್ಕೆ

    ದಿಸ್ಪುರ: ಅರ್ಜೆಂಟೀನಾದ ಫುಟ್ಬಾಲ್ ದಿಗ್ಗಜ ದಿವಂಗತ ಡಿಯಾಗೊ ಮರಡೋನಾ ಅವರ ಕಳುವಾಗಿದ್ದ ಬೆಲೆಬಾಳುವ ವಾಚ್ ಅಸ್ಸಾಂನಲ್ಲಿ ಸಿಕ್ಕಿದೆ.

    ಸುಮಾರು 20 ಲಕ್ಷ ರೂ. ಮೌಲ್ಯದ ವಾಚ್ ಅಸ್ಸಾಂ ಮೂಲದ ವ್ಯಕ್ತಿಯ ಬಳಿ ಇತ್ತು. ಈತ ದುಬೈನಿಂದ ಅಸ್ಸಾಂಗೆ ವಾಪಸ್ಸಾದಾಗ ವಾಚ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅರಿಶಿನ ಶಾಸ್ತ್ರ ಸಂಭ್ರಮದ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್

    ಈ ಕುರಿತು ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ, ದುಬೈ ಪೊಲೀಸರು ನೀಡಿದ ಮಾಹಿತಿ ಮೇರೆಗೆ ನಮ್ಮ ಅಸ್ಸಾಂ ಪೊಲೀಸರು ವಾಜಿದ್ ಹುಸೇನ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆತನಿಂದ ಫುಟ್ಬಾಲ್ ದಿಗ್ಗಜ ಮರಡೋನಾ ಬಳಸುತ್ತಿದ್ದ ವಾಚ್ ಅನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

    ಫುಟ್ಬಾಲ್ ಕ್ರೀಡಾ ಜಗತ್ತಿನಲ್ಲಿ ಅರ್ಜೆಂಟೀನಾದ ಡಿಯಾಗೊ ಮರಡೋನಾ ಹೆಸರು ಸುಪ್ರಸಿದ್ಧ. ಇವರು 2020ರ ನವೆಂಬರ್‍ನಲ್ಲಿ ಹೃದಯಾಘಾತದಿಂದ ನಿಧನರಾದರು. ದುಬೈನ ಸಂಗ್ರಹಾಲಯದಲ್ಲಿ ಹಲವು ಪ್ರಮುಖ ವಸ್ತುಗಳೊಂದಿಗೆ ಇವರ ವಾಚ್ ಅನ್ನೂ ಸಂಗ್ರಹಿಸಿಡಲಾಗಿತ್ತು. ಇದನ್ನೂ ಓದಿ: ದಿಶಾ ಪಟಾನಿ ಹಾಟ್ ಅವತಾರಕ್ಕೆ ಟೈಗರ್ ಶ್ರಾಫ್ ಹೇಳಿದ್ದೇನು ಗೊತ್ತಾ?

    POLICE JEEP

    ಮರಡೋನಾ ಅವರ ವಾಚ್ ಅನ್ನು ವಾಜಿದ್ ಹುಸೇನ್ ಕಳ್ಳತನ ಮಾಡಿದ್ದ. ನಂತರ ಅದನ್ನು ದುಬೈನಿಂದ ಅಸ್ಸಾಂಗೆ ಸಾಗಿಸಲು ಯತ್ನಿಸಿದ್ದ. ಈ ಬಗ್ಗೆ ದುಬೈ ಪೊಲೀಸರು ಅಸ್ಸಾಂನ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇಂದು ಬೆಳಗ್ಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಡಿಜಿಪಿ ಭಾಸ್ಕರ್ ಜ್ಯೋತಿ ಮಹಂತಾ ಅವರು ತಿಳಿಸಿದ್ದಾರೆ.

  • ಮದ್ವೆಗೂ ಮುನ್ನ 4 ಮಕ್ಕಳ ತಂದೆಯಾಗಿರೋ ರೊನಾಲ್ಡೋ ಮತ್ತೆ ಟ್ವಿನ್ಸ್ ನೀರಿಕ್ಷೆಯಲ್ಲಿ

    ಮದ್ವೆಗೂ ಮುನ್ನ 4 ಮಕ್ಕಳ ತಂದೆಯಾಗಿರೋ ರೊನಾಲ್ಡೋ ಮತ್ತೆ ಟ್ವಿನ್ಸ್ ನೀರಿಕ್ಷೆಯಲ್ಲಿ

    ವಾಷಿಂಗ್ಟನ್: ಫುಟ್ಬಾಲ್ ಆಟಗಾರ ಕ್ರಿಸ್ಟಿಯನೋ ರೊನಾಲ್ಡೋ ಎಲ್ಲರಿಗೂ ಗೊತ್ತು. ಇವರು ಮದುವೆ ಆಗುವ ಮುನ್ನವೇ 4 ಮಕ್ಕಳ ತಂದೆ ಎಂಬುದು ಕೂಡ ಹಳೇ ಸುದ್ದಿಯಾಗಿದೆ. ಆದರೆ ಈಗ ರೆನಾಲ್ಡೋ ಗರ್ಲಫ್ರೆಂಡ್ ಮತ್ತೆ ಪ್ರೆಗ್ನೆಂಟ್ ಆಗಿದ್ದಾರೆ. ಇವರು ಅವಳಿ ಮಕ್ಕಳ ನೀರಿಕ್ಷೆಯಲ್ಲಿದ್ದಾರೆ.

    ಗರ್ಲ್‍ಫ್ರೆಂಡ್ ಜಾರ್ಜಿನಾ ರೋಡ್ರಿಗಸ್ ಜೊತೆಗಿನ ಫೋಟೋವೊಂದನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡು ಅವಳಿ ಮಗು ಪಡೆಯುವ ನೀರಿಕ್ಷೆಯಲ್ಲಿ ಇದ್ದೇವೆ ಎನ್ನುವ ವಿಚಾರವನ್ನು ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ರೊನಾಲ್ಡೋ ಇದಕ್ಕೂ ಮೊದಲೇ ತಮ್ಮ ಇತರೆ ಗೆಳತಿಯರೊಂದಿಗೆ ನಾಲ್ಕು ಮಕ್ಕಳನ್ನು ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

    ನಾವು 6ನೇ ಮಗುವಿನ ನಿರೀಕ್ಷೆಯಲ್ಲಿದ್ದೇವೆ. ನಮಗೆ ಬಹಳ ಸಂತೋಷ ಆಗುತ್ತಿದೆ ಎಂದು ಬರೆದುಕೊಂಡಿದ್ದ ರೊನಾಲ್ಡೋ, ತನ್ನ 4 ಮಕ್ಕಳೊಂದಿಗೆ ಸ್ವಿಮ್ಮಿಂಗ್ ಪೂಲ್‍ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋ ಕೂಡ ಶೇರ್ ಮಾಡಿದ್ದಾರೆ. ಈ ಫೋಟೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು

     

    View this post on Instagram

     

    A post shared by Cristiano Ronaldo (@cristiano)

    ರೊನಾಲ್ಡೋ ಇರುವರೆಗೂ ಯಾರನ್ನೂ ಮದುವೆಯಾಗಿಲ್ಲ. ಹೀಗಿರುವಾಗ ಬೇರೆ ಬೇರೆ ಗೆಳತಿಯರೊಂದಿಗೆ 4 ಮಕ್ಕಳ ತಂದೆಯಾಗಿದ್ದಾರೆ. ಈಗ ಹಲವು ವರ್ಷಗಳಿಂದ ಡೇಟ್ ಮಾಡುತ್ತಿರುವ ಜಾರ್ಜಿನಾ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದಾರೆ.

    ಜಾರ್ಜಿನಾ ಮಾಡೆಲ್. ರೋನಾಲ್ಡೋ ಮತ್ತು ಜಾರ್ನಿನಾ ಮೊದಲ ಬಾರಿಗೆ ಸ್ಪೇನ್‍ನಲ್ಲಿ ಭೇಟಿಯಾಗಿದ್ದರು. ಅವರು 2016ರಲ್ಲಿ ಭೇಟಿ ಪರಿಚಯಕ್ಕೆ ತಿರುಗಿ ಡೇಟಿಂಗ್ ಶುರು ಮಾಡಿದ್ದರು. ಇದೀಗ ಜಾರ್ಜಿನಾ ರೋನಾಲ್ಡೋ ಅವರ ಅವಳಿ ಮಕ್ಕಳಿಗೆ ತಾಯಿ ಆಗುವ ನೀರಿಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: ತಂದೆಯ ಮೂಢನಂಬಿಕೆ, ನಿರ್ಲಕ್ಷ್ಯಕ್ಕೆ ಪ್ರಾಣ ಬಿಟ್ಟ ಬಾಲಕಿ

    ಮೊದಲು ರೊನಾಲ್ಡೋ ಕಿಮ್ ಕರ್ದಿಶಿಯಾ, ಜಯೀನಾ ಜಯಿನಾ, ಮಿರಾಲ್ ಗ್ರೀಸ್‍ಲೆಸ್, ರೊಮ್ಯಾರಿಯಾ, ಎಲಿಸಾ ಗುಡಾವಿನಾ ಸೇರಿದಂತೆ ಹಲವರ ಜೊತೆ ಲವ್‍ನಲ್ಲಿದ್ದರು. ಸದ್ಯ ರೊನಾಲ್ಡೋ ಎಲ್ಲಾ ಮಕ್ಕಳನ್ನ ಜಾರ್ಜಿನಾ ನೋಡಿಕೊಳ್ಳುತ್ತಿದ್ದಾರೆ.

  • ಫುಟ್ಬಾಲ್ ಆಟಗಾರನ ವಿಲ್ಲಾದಲ್ಲಿ 22 ಲಕ್ಷ ಮೌಲ್ಯದ ವಜ್ರಾಭರಣ ಕಳವು

    ಫುಟ್ಬಾಲ್ ಆಟಗಾರನ ವಿಲ್ಲಾದಲ್ಲಿ 22 ಲಕ್ಷ ಮೌಲ್ಯದ ವಜ್ರಾಭರಣ ಕಳವು

    ಚಿಕ್ಕಬಳ್ಳಾಪುರ: ಫುಟ್ಬಾಲ್ ಆಟಗಾರರೊಬ್ಬರು ವಾಸವಾಗಿದ್ದ ವಿಲ್ಲಾವೊಂದರಲ್ಲಿ 22 ಲಕ್ಷ ಮೌಲ್ಯದ ವಜ್ರಾಭರಣಗಳು ಕಳ್ಳತನವಾಗಿರುವುದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    bangaluru resort

    ಅಂದಹಾಗೆ ದೇವನಹಳ್ಳಿ-ನಂದಿಬೆಟ್ಟ ಮಾರ್ಗದ ಪ್ರೆಸ್ಟೀಜ್ ಗಾಲ್ಪ್ ಶೈರ್ ರೆಸಾರ್ಟ್‍ನಲ್ಲಿ ಆಸ್ಟ್ರೇಲಿಯಾ ಮೂಲದ ಕ್ಲಬ್ ಫುಟ್ಬಾಲ್ ಆಟಗಾರ ವೊಹಾನ್ ಟ್ರೋಲಫಿ ವಾಸವಾಗಿದ್ದಾರೆ. ಈ ವೊಹಾನ್ ಟ್ರೊಲಫಿ ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಈ ವಿಲ್ಲಾದಲ್ಲಿ ವಾಸವಾಗಿದ್ದಾರೆ. ಆದರೆ ಈ ಫುಟ್ಬಾಲ್ ಆಟಗಾರನ ವಿಲ್ಲಾಗೆ ಕಳ್ಳರು ಪ್ರವೇಶ ಮಾಡಿ, ಪತ್ನಿಯ 22 ಲಕ್ಷ ಮೌಲ್ಯದ ವಜ್ರಾಭರಣಗಳನ್ನು ಕಳವು ಮಾಡಿದ್ದಾರೆ. ನಂತರ ವಿಲ್ಲಾಗೆ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ:ಪರಪ್ಪನ ಅಗ್ರಹಾರದಲ್ಲಿ ಕೃಷ್ಣಾಷ್ಟಮಿ ಆಚರಣೆ

    bangaluru resort

    ಈ ಬಗ್ಗೆ ರೆಸಾರ್ಟ್‍ಗೆ ಭಾರೀ ಭದ್ರತೆಯಿದ್ದು, ಸುತ್ತಲೂ ಸಿಸಿಟಿವಿ ಕಣ್ಗಾವಲು ಇದೆ. ರೆಸಾರ್ಟ್‍ಗೆ ಸಂಬಂಧಿಸಿದವರು, ಕೂಲಿ ಕಾರ್ಮಿಕರು, ಸಿಬ್ಬಂದಿ ಹೊರತುಪಡಿಸಿ ಬೇರೆ ಯಾರಿಗೂ ಒಳಗೆ ಪ್ರವೇಶವಿಲ್ಲ. ಹೀಗಾಗಿ ಅಲ್ಲಿನವರೇ ಯಾರೋ ಕಳವು ಮಾಡಿರಬೇಕು ಎಂಬ ಅನುಮಾನ ವ್ಯಕ್ತವಾಗುತ್ತಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ:ಕಾರಿನಿಂದ ರಾಕೆಟ್ ಉಡಾಯಿಸ್ತಿದ್ದ ಉಗ್ರರು- ಫೋಟೋಗಳು ಔಟ್

  • ಫುಟ್‍ಬಾಲ್ ಆಟಗಾರ ಗೋಪಿ ಉದ್ಧಟತನ – ಕ್ಷುಲ್ಲಕ ಕಾರಣಕ್ಕೆ ಬೆಂಗ್ಳೂರಲ್ಲಿ ವಿದೇಶಿ ಪ್ರಜೆ ಮೇಲೆ ಹಲ್ಲೆ

    ಫುಟ್‍ಬಾಲ್ ಆಟಗಾರ ಗೋಪಿ ಉದ್ಧಟತನ – ಕ್ಷುಲ್ಲಕ ಕಾರಣಕ್ಕೆ ಬೆಂಗ್ಳೂರಲ್ಲಿ ವಿದೇಶಿ ಪ್ರಜೆ ಮೇಲೆ ಹಲ್ಲೆ

    ಬೆಂಗಳೂರು: ರಾಜ್ಯ ಮಟ್ಟದ ಫುಟ್‍ಬಾಲ್ ಆಟಗಾರ ಗೋಪಿ ಕ್ಷುಲ್ಲಕ ಕಾರಣಕ್ಕೆ ವಿದೇಶಿ ಪ್ರಜೆ ಮೇಲೆ ಹಲ್ಲೆ ನಡೆಸಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಕಳೆದ ಶುಕ್ರವಾರ ಗರುಡಾ ಮಾಲ್ ಎದುರು ಈ ಘಟನೆ ನಡೆದಿದೆ. 7 ಬಾರಿ ಸಂತೋಷ್ ಟ್ರೋಫಿ ವಿನ್ನರ್ ಆಗಿರುವ ಗೋಪಿ, ಕಳೆದ ವಾರ ಫುಟ್‍ಪಾತ್ ಮೇಲೆ ಬೈಕ್‍ನಲ್ಲಿ ಬರುತ್ತಿದ್ದರು. ಇದೇ ವೇಳೆ ಅದೇ ಫುಟ್‍ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ವಿದೇಶಿ ಪ್ರಜೆ, ಗೋಪಿಯನ್ನ ಪ್ರಶ್ನಿಸಿದ್ದಾರೆ.

    ಫುಟ್‍ಪಾತ್ ಮೇಲೆ ಏಕೆ ಬೈಕ್ ಚಲಾಯಿಸುತ್ತಿದ್ದೀಯ ಅಂತಾ ಪ್ರಶ್ನಿಸಿದ ವಿದೇಶಿ ಪ್ರಜೆಗೆ ಗೋಪಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಕೂಡಲೇ ಅಶೋಕ್‍ನಗರ ಪೊಲೀಸರು ಗೋಪಿಯನ್ನ ಬಂಧಿಸಿದ್ದಾರೆ. ಸದ್ಯ ಗೋಪಿ ಬೇಲ್ ಮೇಲೆ ರಿಲೀಸ್ ಆಗಿದ್ದಾರೆ.