Tag: football

  • ನವೆಂಬರ್‌ನಲ್ಲಿ ಕೇರಳಕ್ಕೆ ಭೇಟಿ ನೀಡಲಿದ್ದಾರೆ ಅರ್ಜೆಂಟಿನಾದ ಫುಟ್‌ಬಾಲ್ ಆಟಗಾರ ಮೆಸ್ಸಿ

    ನವೆಂಬರ್‌ನಲ್ಲಿ ಕೇರಳಕ್ಕೆ ಭೇಟಿ ನೀಡಲಿದ್ದಾರೆ ಅರ್ಜೆಂಟಿನಾದ ಫುಟ್‌ಬಾಲ್ ಆಟಗಾರ ಮೆಸ್ಸಿ

    ಚೆನ್ನೈ: ಫುಟ್‌ಬಾಲ್ (Football) ತಾರೆ, ಅರ್ಜೆಂಟಿನಾದ (Argentina) ಆಟಗಾರ ಲಿಯೋನೆಲ್ ಮೆಸ್ಸಿ (Lionel Messi) ಕೇರಳಕ್ಕೆ (Kerala) ಭೇಟಿ ಕನ್ಫರ್ಮ್ ಆಗಿದ್ದು, ಇದೇ ನವೆಂಬರ್‌ನಲ್ಲಿ ಭೇಟಿ ನೀಡಲಿದ್ದಾರೆ ಎಂದು ಕೇರಳದ ಕ್ರೀಡಾ ಸಚಿವ ವಿ. ಅಬ್ದುರ್ ಹಿಮಾನ್ ತಿಳಿಸಿದ್ದಾರೆ.

    ಈ ಕುರಿತು ಮಾತನಾಡಿದ ಅವರು, ಕೇರಳದಲ್ಲಿ ಆಯೋಜನೆಗೊಳ್ಳಲಿರುವ ಸೌಹಾರ್ದ ಪಂದ್ಯದಲ್ಲಿ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಆಡಲು ಸಜ್ಜಾಗಿದೆ. ಈ ಪಂದ್ಯಾವಳಿಗಾಗಿ ಫಿಫಾದ ಅಗ್ರ 50 ತಂಡಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಈ ಕುರಿತು ಈಗಾಗಲೇ ಆಸ್ಟ್ರೇಲಿಯಾ ತಂಡ ಉತ್ಸುಕತೆ ತೋರಿದೆ ಎಂದು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ವಾಟ್ಸಪ್‌ನಲ್ಲಿ ಬಂತು ಮದುವೆ ಕಾರ್ಡ್ – ಕ್ಲಿಕ್ ಮಾಡ್ತಿದ್ದಂಗೆ 2 ಲಕ್ಷ ರೂ. ಕಳೆದುಕೊಂಡ ಸರ್ಕಾರಿ ನೌಕರ

    ಅರ್ಜೆಂಟೀನಾ ಫುಟ್‌ಬಾಲ್ ಅಸೋಸಿಯೆಷನ್ (Argentine Football Association) ಕೂಡ ಈ ಕುರಿತು ಮಾಹಿತಿಯನ್ನು ದೃಢಪಡಿಸಿದೆ. ಅಕ್ಟೋಬರ್ 6ರಿಂದ 14ರವರೆಗೆ ಯುಎಸ್‌ನಲ್ಲಿ, ಬಳಿಕ ಅಂಗೋಲಾದ ಲುವಾಂಡಾದಲ್ಲಿ, ಆನಂತರ ನವೆಂಬರ್ 10ರಿಂದ 18ರವರೆಗೆ ಭಾರತದ ಕೇರಳದಲ್ಲಿ ಆಡಲಿದೆ ಎಂದು ತಿಳಿಸಿದೆ.

    ಸದ್ಯ ಭಾರತದಲ್ಲಿ ಆಡಲು ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ತಯಾರಾಗಿದ್ದು, ಕೇರಳ ಸರ್ಕಾರ ಮೆಸ್ಸಿ ಭೇಟಿಯನ್ನು ಖಚಿತಪಡಿಸಿದೆ. ಈ ಹಿಂದೆ 2011ರಲ್ಲಿ ಮೆಸ್ಸಿ ಒಳಗೊಂಡ ಅರ್ಜೆಂಟೀನಾ ತಂಡವು ವೆನೆಜುವೆಲಾ ವಿರುದ್ಧ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಆಡಿತ್ತು.ಇದನ್ನೂ ಓದಿ: ಬಾಘಿ-4 ಟ್ರೈಲರ್‌ಗೆ ಮುಹೂರ್ತ ಫಿಕ್ಸ್

  • ರೆಫ್ರಿ ವಿವಾದಿತ ತೀರ್ಪಿನಿಂದ ಫುಟ್ಬಾಲ್ ಅಭಿಮಾನಿಗಳ ನಡುವೆ ಘರ್ಷಣೆ – 100ಕ್ಕೂ ಹೆಚ್ಚು ಮಂದಿ ಸಾವು

    ರೆಫ್ರಿ ವಿವಾದಿತ ತೀರ್ಪಿನಿಂದ ಫುಟ್ಬಾಲ್ ಅಭಿಮಾನಿಗಳ ನಡುವೆ ಘರ್ಷಣೆ – 100ಕ್ಕೂ ಹೆಚ್ಚು ಮಂದಿ ಸಾವು

    ಕೊನಕ್ರಿ: ಗಿನಿಯಾದ (Guinea) 2ನೇ ಅತಿದೊಡ್ಡ ನಗರವಾದ ಎನ್‌ಜೆರೆಕೋರ್‌ನಲ್ಲಿ ಫುಟ್ಬಾಲ್ ಪಂದ್ಯವೊಂದರ ವೇಳೆ ಅಭಿಮಾನಿಗಳ (Football Fans) ನಡುವೆ ಘರ್ಷಣೆ ಉಂಟಾಗಿ ಸುಮಾರು 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    2021ರ ದಂಗೆಯ ನಂತರ ಅಧಿಕಾರ ವಹಿಸಿಕೊಂಡು ತನ್ನನ್ನು ತಾನು ಅಧ್ಯಕ್ಷ ಎಂದು ಘೋಷಿಸಿಕೊಂಡ ಗಿನಿಯಾದ ಜುಂಟಾ ನಾಯಕ ಮಮಡಿ ಡೌಂಬೌಯಾ ಅವರ ಗೌರವಾರ್ಥವಾಗಿ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ವೇಳೆ ರೆಫ್ರಿ ನೀಡಿದ ವಿವಾದಿತ ತೀರ್ಪು ಅಭಿಮಾನಿಗಳ ಘರ್ಷಣೆಗೆ ಕಾರಣವಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿರುವುದಾಗಿ ತಿಳಿದುಬಂದಿದೆ.

    ಘಟನೆ ನಂತರ ಇಲ್ಲಿನ ಸ್ಥಳೀಯ ಆಸ್ಪತ್ರೆ ಮುಂಭಾಗ ಹೆಣಗಳ ರಾತ್ರಿಯೇ ಇತ್ತು, ಕೆಲವರ ದೇಹಗಳನ್ನ ಆಸ್ಪತ್ರೆಯ ವರಾಂಡದಲ್ಲಿ ಇಡಲಾಗಿತ್ತು. 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ ಎನ್ನಲಾಗಿದೆ.

    ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳು ರೆಫ್ರಿ ತೀರ್ಪಿನಿಂದ ರೊಚ್ಚಿಗೆದ್ದು ಘರ್ಷಣೆಗೆ ಇಳಿದಿದ್ದರು. ಇದು ದೊಡ್ಡ ದಂಗೆಯಾಗಿ ಮಾರ್ಪಟ್ಟಿತು. ಈ ವೇಳೆ ಸಮೀದಲ್ಲಿದ್ದ ಪೊಲೀಸ್‌ ಠಾಣೆಯನ್ನೂ ಧ್ವಂಸಗೊಳಿಸಿದ್ದಾರೆ ಎಂದು ಹೇಳಿರುವುದಾಗಿ ವರದಿಯಾಗಿದೆ.

    2021ರ ದಂಗೆಯ ನಂತರ ಆಲ್ಫಾ ಕಾಂಡೆ ಗಿನಿಯಾ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಂಡರು. ಆ ಬಳಿಕ ಅಧ್ಯಕ್ಷ ಸ್ಥಾನಕ್ಕೇರಿದ ಗಿನಿಯಾದ ಜುಂಟಾ ನಾಯಕ ಮಮಡಿ ಡೌಂಬೌಯಾ ತನ್ನನ್ನು ತಾನೇ ಅಧ್ಯಕ್ಷ ಎಂದು ಘೋಷಿಸಿಕೊಂಡರು. ಈ ವೇಳೆ ಚುನಾವಣಾ ಪ್ರವಾರದ ಭಾಗವಾಗಿ ಹಾಗೂ ತನಗೆ ಗೌರವಾರ್ಥವಾಗಿ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ಹಿಂದೆಯೂ ಈ ರೀತಿಯ ಪಂದ್ಯಗಳನ್ನು ಆಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

  • ಭಾರತಕ್ಕೆ ಮೋಸ – ಚೀಟಿಂಗ್‌ ಕತಾರ್‌ ವಿರುದ್ಧ ಅಭಿಮಾನಿಗಳು ಕೆಂಡ

    ಭಾರತಕ್ಕೆ ಮೋಸ – ಚೀಟಿಂಗ್‌ ಕತಾರ್‌ ವಿರುದ್ಧ ಅಭಿಮಾನಿಗಳು ಕೆಂಡ

    ದೋಹಾ: ಏಷ್ಯನ್‌ ಚಾಂಪಿಯನ್‌ ಕತಾರ್‌ (Qatar) ತಂಡದ ಮೋಸದ ಆಟದಿಂದ 2026ರ ಫಿಫಾ ವಿಶ್ವಕಪ್‌ ಅರ್ಹತಾ ಟೂರ್ನಿಯಿಂದ (FIFA WC Qualifiers) ಭಾರತ ಹೊರಬಿದ್ದಿದೆ.

    ಅರ್ಹತಾ ಟೂರ್ನಿಯ 2ನೇ ಹಂತದ ಕೊನೆಯ ಪಂದ್ಯದ 75 ನಿಮಿಷದಲ್ಲಿ ನಡೆದ ಮೋಸದಿಂದಾಗಿ ಭಾರತದ (India) ಕನಸು ನುಚ್ಚುನೂರಾಯಿತು. ಕತಾರ್‌ ವಿರುದ್ಧ 2-1 ಗೋಲುಗಳಿಂದ ಸೋತ ಭಾರತ ಟೂರ್ನಿಯಿಂದ ನಿರ್ಗಮಿಸಿತು.

    37ನೇ ನಿಮಿಷದಲ್ಲಿ ಚಾಂಗ್ಟೆ ಗೋಲು ಹೊಡೆಯುವ ಮೂಲಕ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು. 75 ನಿಮಿಷದಲ್ಲಿ ಕತಾರ್‌ ಗೋಲ್‌ ಗಳಿಸಲು ಮುಂದಾಯಿತು. ಈ ವೇಳೆ ಚೆಂಡು ಗೆರೆಯನ್ನು ದಾಟಿ ಹೊರಗಡೆ ಹೋಗಿತ್ತು. ಬಾಲ್‌ ಹೊರಗಡೆ ಹೋಗಿದ್ದರೂ ಕತಾರ್‌ ಆಟಗಾರ ಅಲ್‌ ಹಸನ್‌ ಚೆಂಡನ್ನು ಎಳೆದು ಯೂಸುಫ್‌ ಅಯೇಮ್‌ ನೀಡಿದರು. ಯೂಸೂಫ್‌ ಅವರು ಚೆಂಡನ್ನು ಗೋಲ್‌ ಪೆಟ್ಟಿಗೆ ತಳ್ಳಿದರು. ಗೋಲ್‌ ಹೊಡೆದ ಬಳಿಕ ಕತಾರ್‌ ಆಟಗಾರರು ಸಂಭ್ರಮಿಸತೊಡಗಿದರು.  ಇದನ್ನೂ ಓದಿ: India vs Pakistan: ಟ್ರ್ಯಾಕ್ಟರ್‌ ಮಾರಿ ಕ್ರಿಕೆಟ್‌ ನೋಡಲು ಬಂದ ಪಾಕ್ ಅಭಿಮಾನಿಗೆ ನಿರಾಸೆ


    ಕೂಡಲೇ ಭಾರತದ ಗೋಲ್‌ ಕೀಪ್‌ ಪ್ರೀತ್‌ ಸಂಧು ರೆಫ್ರಿ ಬಳಿ ಹೋಗಿ ಬಾಲ್‌ ಚೆಂಡು ದಾಟಿ ಹೊರಗಡೆ ಬಂದಿದೆ. ಹೀಗಾಗಿ ಈ ಗೋಲನ್ನು ಪರಿಗಣಿಸಬಾರದು ಎಂದು ಪರಿ ಪರಿಯಾಗಿ ಮನವಿ ಮಾಡಿದರು. ಭಾರತದ ಮನವಿಯನ್ನು ರೆಫ್ರಿ ಪುರಸ್ಕರಿಸಲಿಲ್ಲ. 85ನೇ ನಿಮಿಷದಲ್ಲಿ ಕತಾರ್‌ ಮತ್ತೊಂದು ಗೋಲು ಹೊಡೆದು 2 ಗೋಲುಗಳ ಮುನ್ನಡೆ ಪಡೆದು ಕೊನೆಗೆ ಜಯ ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಕುವೈತ್ ಗೆದ್ದಿದ್ದು ‘ಎ’ ಗುಂಪಿನಿಂದ 2ನೇ ತಂಡವಾಗಿ ಅರ್ಹತಾ ಟೂರ್ನಿಯ 3ನೇ ಸುತ್ತಿಗೇರಿದೆ.

    ಈಗ ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಫುಟ್‌ಬಾಲ್‌ ಅಭಿಮಾನಿಗಳು ಸಿಟ್ಟಾಗಿ ಕತಾರ್‌ ಮತ್ತು ರೆಫ್ರಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಕತಾರ್‌ ಈಗಾಗಲೇ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ. ಹೀಗಿರುವಾಗ ಮೋಸ ಮಾಡುವ ಅಗತ್ಯ ಏನಿತ್ತು ಎಂದು ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

  • ಫುಟ್‌ಬಾಲ್‌ಗೆ ವಿದಾಯ ಹೇಳಿದ ಸುನಿಲ್ ಛೆಟ್ರಿ

    ಫುಟ್‌ಬಾಲ್‌ಗೆ ವಿದಾಯ ಹೇಳಿದ ಸುನಿಲ್ ಛೆಟ್ರಿ

    ನವದೆಹಲಿ: ಟೀಂ ಇಂಡಿಯಾದ ಖ್ಯಾತ ಆಟಗಾರ ಸುನಿಲ್‌ ಛೆಟ್ರಿ (Sunil Chhetri) ಅಂತಾರಾಷ್ಟ್ರೀಯ ಪುಟ್‌ಬಾಲ್‌ಗೆ (International Football) ವಿದಾಯ ಹೇಳಿದ್ದಾರೆ. ಜೂನ್‌ 6 ರಂದು ಕುವೈತ್‌ (Kuwait) ವಿರುದ್ಧ ಫಿಫಾ ವಿಶ್ವಕಪ್‌ ಅರ್ಹತಾ ಪಂದ್ಯ ತನ್ನ ಕೊನೆಯ ಪಂದ್ಯವಾಗಲಿದೆ ಎಂದು ತಿಳಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್‌ ಮೂಲಕ 39 ವರ್ಷದ ಛೆಟ್ರಿ ವಿದಾಯದ ನಿರ್ಧಾರವನ್ನುತಿಳಿಸಿದರು.

    ಛೆಟ್ರಿ ಮಾರ್ಚ್‌ನಲ್ಲಿ ಭಾರತಕ್ಕಾಗಿ (India) ತಮ್ಮ 150 ನೇ ಪಂದ್ಯ ಆಡಿದ್ದರು. ಗುವಾಹಟಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಗೋಲು ಗಳಿಸಿದ್ದರು. ಆದರೆ ಆ ಪಂದ್ಯವನ್ನು ಭಾರತ 1-2 ಅಂತರದಲ್ಲಿ ಸೋಲನುಭವಿಸಿತ್ತು.

    ನಾನು ವೈಯಕ್ತಿಕವಾಗಿ ಆಡಿಲ್ಲ. ದೇಶಕ್ಕಾಗಿ ಆಡಿದ್ದೇನೆ. ನಾನು ರಾಷ್ಟ್ರೀಯ ತಂಡದೊಂದಿಗಿನ ಪ್ರತಿಯೊಂದು ತರಬೇತಿಯನ್ನು ನಾನು ಆನಂದಿಸಲು ಬಯಸುತ್ತೇನೆ. ಕುವೈತ್ ವಿರುದ್ಧದ ಪಂದ್ಯಕ್ಕೆ ಒತ್ತಡವಿದೆ. ಮುಂದಿನ ಸುತ್ತಿಗೆ ಅರ್ಹತೆ ಪಡೆಯಲು ನಮಗೆ ಮೂರು ಅಂಕಗಳ ಅಗತ್ಯವಿದೆ. ಇದು ನಮಗೆ ಬಹಳ ಮುಖ್ಯವಾಗಿದೆ ಎಂದು ಛೆಟ್ರಿ ಹೇಳಿದರು.

     

  • ಲೆಯೊನೆಲ್‌ ಮೆಸ್ಸಿ ಭದ್ರತೆಗೆ ಹೊಸ ಬಾಡಿಗಾರ್ಡ್‌ ನೇಮಕ – ಯಾಸಿನ್‌ ಚುಯೆಕೊ ಯಾರು ಗೊತ್ತಾ?

    ಲೆಯೊನೆಲ್‌ ಮೆಸ್ಸಿ ಭದ್ರತೆಗೆ ಹೊಸ ಬಾಡಿಗಾರ್ಡ್‌ ನೇಮಕ – ಯಾಸಿನ್‌ ಚುಯೆಕೊ ಯಾರು ಗೊತ್ತಾ?

    ವಾಷಿಂಗ್ಟನ್‌: ಇತ್ತೀಚೆಗಷ್ಟೇ ಇಂಟರ್‌ ಮಿಮಿಯಾ ಕ್ಲಬ್‌ ಸೇರಿದ ಫುಟ್ಬಾಲ್‌ ತಾರೆ ಲಿಯೋನೆಲ್‌ ಮೆಸ್ಸಿ (Lionel Messi) ಸುರಕ್ಷತೆಗೆ ಎಂಎಂಎ ಫೈಟರ್‌ (MMA Fighter) ಹಾಗೂ ಮಾಜಿ ಸೈನಿಕನನ್ನ ಬಾಡಿಗಾರ್ಡ್‌ ಆಗಿ ನೇಮಿಸಲಾಗಿದೆ.

    ಮೆಸ್ಸಿಗೆ ಕಳೆದ ಕೆಲವು ದಿನಗಳಿಂದ ಬೆದರಿಕೆಗಳು ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ವೈಯಕ್ತಿಕ ಭದ್ರತೆಗಾಗಿ ಮಾಜಿ ಸೈನಿಕನೂ ಆಗಿರುವ ಎಂಎಂಎ ಫೈಟರ್‌ ಯಾಸಿನ್‌ ಚುಯೆಕೊ (Yassine Chueko) ಅವರನ್ನ ಬಾಡಿಗಾರ್ಡ್‌ ಆಗಿ ನೇಮಿಸಲಾಗಿದೆ. ಇದನ್ನೂ ಓದಿ: ಖ್ಯಾತ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಚೀನಾದಲ್ಲಿ ಅರೆಸ್ಟ್ – ಮುಂದೇನಾಯ್ತು?

    ಮೆಸ್ಸಿ ಯುಎಸ್‌ನಲ್ಲಿ ಅತ್ಯಂತ ಜನಪ್ರಿಯ ಆಟಗಾರ, ಅವರನ್ನ ಗುರಿಯಾಗಿಸುವ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಕೆಲ ದಿನಗಳ ಹಿಂದೆ ಮೆಸ್ಸಿ ಅವರ ಕುಟುಂಬಕ್ಕೆ ಸೇರಿದ ಸೂಪರ್‌ ಮಾರ್ಕೆಟ್‌ವೊಂದರ ಮೇಲೆ ಗುಂಡಿನ ದಾಳಿಯೂ ನಡೆದಿತ್ತು. ಹಾಗಾಗಿ ಯಾಸಿನ್‌ ಚುಯೆಕೊ ಅವರನ್ನ ಬಾಡಿ ಗಾರ್ಡ್‌ ಆಗಿ ನೇಮಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಫಿಫಾ ವಿಶ್ವಕಪ್‌ ಟೂರ್ನಿ ಬಳಿಕ ಇತ್ತೀಚೆಗಷ್ಟೇ ಇಂಟರ್ ಮಿಯಾಮಿ ಕ್ಲಬ್‌ ಸೇರಿದ ಲಿಯೊನೆಲ್‌ ಮೆಸ್ಸಿ ಯುಎಸ್‌ ಲೀಗ್‌ನಲ್ಲಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

    ಯಾಸಿನ್‌ ಚುಯೆಕೊ ಯಾರು ಗೊತ್ತಾ?
    ಇಂಟರ್‌ ಮಿಯಾಮಿ ಕ್ಲಬ್‌ನ ಮೆಸ್ಸಿ ಬಾಡಿಗಾರ್ಡ್‌ ಆಗಿರುವ ಯಾಸಿನ್‌ ಚುಯೆಕೊ ಎಂಎಂಎ ಫೈಟರ್‌ ಕೂಡ ಆಗಿದ್ದರು. ಯುಎಸ್‌ ಸೈನಿಕನಾಗಿ ಇರಾಕ್‌ ಮತ್ತು ಅಫ್ಘಾನಿಸ್ತಾನಗಳಲ್ಲಿ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: World Athletics Championships: 2024ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ನೀರಜ್‌ ಚೋಪ್ರಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫುಟ್ಬಾಲ್ ದಿಗ್ಗಜ ಮೊಹಮ್ಮದ್ ಹಬೀಬ್ ಇನ್ನಿಲ್ಲ

    ಫುಟ್ಬಾಲ್ ದಿಗ್ಗಜ ಮೊಹಮ್ಮದ್ ಹಬೀಬ್ ಇನ್ನಿಲ್ಲ

    ಭಾರತದ ಫುಟ್ಬಾಲ್ (FootBall) ಮಾಜಿ ಆಟಗಾರ ಮೊಹಮ್ಮದ್ ಹಬೀಬ್ (74) (Mohammed Habib) ನಿಧನರಾಗಿದ್ದಾರೆ.

    ಹಬೀಬ್ ಅವರು ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದೀಗ ಅವರು ಹೈದರಾಬಾದ್‍ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಹಬೀಬ್ ಅವರು ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

    1970 ರಲ್ಲಿ ಬ್ಯಾಂಕಾಕ್‍ನಲ್ಲಿ (Bankok) ನಡೆದ ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಪಡೆದಿದ್ದ ಭಾರತ ತಂಡದಲ್ಲಿ ಹಬೀಬ್ ಕೂಡ ಇದ್ದರು. ಇನ್ನು ಬ್ರೆಜಿಲ್‍ನ ಪೆಲೆ ಅವರನ್ನು ಒಳಗೊಂಡ ನ್ಯೂಯಾರ್ಕ್ ಕಾಸ್ಮೋಸ್ ತಂಡದ ವಿರುದ್ಧ 1977ರಲ್ಲಿ ನಡೆದಿದ್ದ ಪ್ರದರ್ಶನ ಪಂದ್ಯದಲ್ಲಿ ಅವರು ಮೋಹನ್ ಬಾಗ್ ತಂಡದಲ್ಲಿ ಆಡಿದ್ದರು. ಆ ಪಂದ್ಯದಲ್ಲಿ ಗೋಲು ಗಳಿಸಿದ್ದ ಅವರ ಆಟವನ್ನು ಪೆಲೆ ಕೊಂಡಾಡಿದ್ದರು.

    ಹಬೀಬ್ ಅವರು ಆಟಗಾರನಾಗಿದ್ದ ಸಂದರ್ಭದಲ್ಲಿ ಹಲವಾರು ಉದ್ಯೋಗವಕಾಶಗಳು ಬಂದಿತ್ತು. ಆದರೆ ಈ ಎಲ್ಲಾ ಅವಕಾಶಗಳನ್ನು ಹಬೀಬ್ ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಮೊದಲ ‘ನೈಜ ವೃತ್ತಿಪರ ಫುಟ್‍ಬಾಲ್ ಆಟಗಾರ’ ಎಂಬ ಹೆಸರು ಬಂದಿತ್ತು. ನಿವೃತ್ತಿ ಬಳಿಕ ಹಬೀಬ್ ಅವರು ಹಲ್ದಿಯಾದಲ್ಲಿನ ಇಂಡಿಯನ್ ಫುಟ್ಬಾಲ್ ಅಸೋಸಿಯೇಷನ್ ಅಕಾಡೆಮಿಯ ಮುಖ್ಯ ತರಬೇತುದಾರರಾಗಿಯೂ ಕಾರ್ಯನಿರ್ವಹಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೌದಿ ಕ್ಲಬ್‌ ಸೇರಿದ ಬಳಿಕ ಚೊಚ್ಚಲ ಟ್ರೋಫಿ ಗೆದ್ದ ರೊನಾಲ್ಡೊ – ಅಲ್-ನಾಸ್ರ್‌ಗೆ ಐತಿಹಾಸಿಕ ಜಯ

    ಸೌದಿ ಕ್ಲಬ್‌ ಸೇರಿದ ಬಳಿಕ ಚೊಚ್ಚಲ ಟ್ರೋಫಿ ಗೆದ್ದ ರೊನಾಲ್ಡೊ – ಅಲ್-ನಾಸ್ರ್‌ಗೆ ಐತಿಹಾಸಿಕ ಜಯ

    ರಿಯಾದ್: ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್‌ ಆಟಗಾರರಲ್ಲಿ ಒಬ್ಬರಾದ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಸೌದಿ ಅರೇಬಿಯಾದ ಅಲ್-ನಾಸ್ರ್‌ ಕ್ಲಬ್ ಸೇರಿದ ಬಳಿಕ ಚೊಚ್ಚಲ ಚಾಂಪಿಯನ್‌ ಟ್ರೋಫಿ ಗೆದ್ದುಕೊಟ್ಟಿದ್ದಾರೆ.

    ಅರಬ್ ಕ್ಲಬ್ ಚಾಂಪಿಯನ್‌ಶಿಪ್ ಕಪ್-2023 ನಲ್ಲಿ (Arab Club Championship Cup 2023) ಅಲ್-ನಾಸ್ರ್ ಮತ್ತು ಅಲ್-ಹಿಲಾಲ್ ನಡುವಿನ ಫೈನಲ್‌ ಪಂದ್ಯದಲ್ಲಿ ಭರ್ಜರಿ ಎರಡು ಗೋಲು ಸಿಡಿಸುವ ಮೂಲಕ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಲ್-ನಾಸ್ರ್ ಪ್ರಶಸ್ತಿ ಗೆಲ್ಲುವಂತೆ ಮಾಡಿದ್ದಾರೆ. ಅಲ್ಲದೇ ರೊನಾಲ್ಡೊ ಸೌದಿ ಅರೇಬಿಯಾದ (Saudi Arabia) ಕ್ಲಬ್‌ ಸೇರಿದ ಬಳಿಕ ಗೆದ್ದ ಮೊದಲ ಟ್ರೋಫಿಯೂ ಇದಾಗಿದೆ. ಕಳೆದ ವರ್ಷ ರೊನಾಲ್ಡೋ ಸೌದಿ ಅರೇಬಿಯಾ ತಂಡ ಸೇರಿಕೊಂಡರು.

    ಫೈನಲ್‌ ಪಂದ್ಯದಲ್ಲಿ ಗೆಲುವಿನ ಪ್ರಮುಖ ರೂವಾರಿಯಾಗಿದ್ದ ಜರ್ಮನಿ ಮತ್ತು ಬೇಯರ್ನ್ ಮ್ಯೂನಿಚ್ ದಂತಕಥೆ ಗೆರ್ಡ್ ಮುಲ್ಲರ್‌ ಅವರನ್ನ ಹಿಂದಿಕ್ಕಿ ಅತಿಹೆಚ್ಚು ಹೆಡ್‌ ಗೋಲ್‌ಗಳನ್ನು (145) ಗಳಿಸಿದ ಹೊಸ ದಾಖಲೆಯನ್ನೂ ನಿರ್ಮಿಸಿದ್ದಾರೆ. ಸೋಲು ಖಚಿತವಾಗಿತ್ತು ಎನ್ನುವ ಪಂದ್ಯದಲ್ಲಿ ಗೆದ್ದಿರುವುದು ಅಭಿಮಾನಿಗಳಲ್ಲಿ ಹೆಚ್ಚಿನ ಸಂತಸ ತಂದಿದೆ. ಇದನ್ನೂ ಓದಿ: ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಗುಡ್ ಬೈ – ಸೌದಿ ಅರೇಬಿಯಾ ಪಾಲಾದ ರೊನಾಲ್ಡೊ

    2022ರ ಡಿಸೆಂಬರ್‌ 31 ರಂದು ರೊನಾಲ್ಡೋ ಸೌದಿ ಅರೇಬಿಯಾದ ಅನ್‌ ನಾಸ್ರ್‌ ಕ್ಲಬ್‌ಗೆ ಸೇರಿಕೊಂಡರು. ಎರಡೂವರೆ ವರ್ಷಗಳ ಅವಧಿ ಒಪ್ಪಂದಕ್ಕೆ ಸಹಿ ಹಾಕಿದ್ದು, 2025ರ ವರೆಗೆ ಕ್ಲಬ್ ಪರ ಆಡಲು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಬಾಬರ್‌ ಮೇಲಿನ ಗೌರವ ಇಂದಿಗೂ ಬದಲಾಗಿಲ್ಲ – ಪಾಕ್‌ ಆಟಗಾರನನ್ನ ಬಾಯ್ತುಂಬ ಹೊಗಳಿದ ಕೊಹ್ಲಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • SAFF Championship 2023: ಚೆಟ್ರಿ ಮ್ಯಾಜಿಕ್‌, ನೇಪಾಳ ವಿರುದ್ಧ 2-0 ಜಯ – ಸೆಮಿಫೈನಲ್‌ಗೆ ಭಾರತ

    SAFF Championship 2023: ಚೆಟ್ರಿ ಮ್ಯಾಜಿಕ್‌, ನೇಪಾಳ ವಿರುದ್ಧ 2-0 ಜಯ – ಸೆಮಿಫೈನಲ್‌ಗೆ ಭಾರತ

    ಬೆಂಗಳೂರು: ನಾಯಕ ಸುನೀಲ್‌ ಚೆಟ್ರಿ ಅವರ ಆರಂಭಿಕ ಗೋಲಿನ ಬಲದಿಂದ ಶನಿವಾರ ನೇಪಾಳ ವಿರುದ್ಧ 2-0 ಗೋಲುಗಳ ಅಂತರದಿಂದ ಭಾರತೀಯ ಫುಟ್ಬಾಲ್‌ ತಂಡ (Indian Football Team) ಗೆದ್ದು, ಸ್ಯಾಫ್‌ ಫುಟ್ಬಾಲ್‌ ಚಾಂಪಿಯನ್‌ಶಿಪ್‌ (SAFF Championship 2023) ಟೂರ್ನಿಯ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿತು.

    ಶನಿವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಗೆ ಚೆಟ್ರಿ ಬಳಗ ರಸದೌತಣ ನೀಡುವ ಜೊತೆಗೆ ಎದುರಾಳಿ ನೇಪಾಳ ತಂಡವನ್ನ 2-0 ಅಂತರದಲ್ಲಿ ಮಣಿಸಿತು. ಇದನ್ನೂ ಓದಿ: ಒಡಿಶಾ ರೈಲು ದುರಂತದಲ್ಲಿ ಮೃತರ ಕುಟುಂಬಕ್ಕೆ 20 ಲಕ್ಷ ದೇಣಿಗೆ ನೀಡಿದ ಭಾರತೀಯ ಫುಟ್ಬಾಲ್‌ ತಂಡ

    ಭಾರತ ಮತ್ತು ನೇಪಾಳ (Nepal Football Team) ತಂಡಗಳ ನಡುವೆ ಪ್ರಬಲ ಪೈಪೋಟಿ ನಡೆದಿತ್ತು. ಫಸ್ಟ್‌ ಹಾಫ್‌ನಲ್ಲಿ ಇತ್ತಂಡಗಳ ಸಮಬಲ ಪೈಪೋಟಿಯಿಂದ ಯಾವುದೇ ಗೋಲು ದಾಖಲಾಗಲಿಲ್ಲ. ಸೆಕೆಂಡ್‌ ಹಾಫ್‌ನಲ್ಲಿ ನಾಯಕ ಸುನೀಲ್‌ ಚೆಟ್ರಿ (Sunil Chhetri) ಮ್ಯಾಜಿಕ್‌ನಿಂದ ಮೊದಲ ಗೋಲು ದಾಖಲಾಯಿತು. ಈ ಮೂಲಕ ಚೆಟ್ರಿ 91ನೇ ಅಂತಾರಾಷ್ಟ್ರೀಯ ಗೋಲನ್ನು ದಾಖಲಿಸಿದರು. ಇದಾದ ಕೆಲವೇ ನಿಮಿಷಗಳಲ್ಲಿ ಸಹ ಆಟಗಾರ ಮಹೇಶ್‌ ಸಿಂಗ್‌ ಮತ್ತೊಂದು ಗೋಲು ದಾಖಲಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.

    ಆರಂಭಿಕ ಪಂದ್ಯದಲ್ಲೇ 4-0 ಗೋಲುಗಳ ಅಂತರದಲ್ಲಿ ಪಾಕಿಸ್ತಾನ (Pakistan Football Team) ತಂಡವನ್ನು ಮಣಿಸಿದ್ದ ಭಾರತ ತಂಡ ಸತತ 2ನೇ ಗೆಲುವು ದಾಖಲಿಸುವ ಮೂಲಕ ಸೆಮಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಗ್ರೂಪ್‌ ಹಂತದ ಅಂತಿಮ ಪಂದ್ಯ ಜೂನ್‌ 27ರಂದು ಕುವೈತ್‌ ವಿರುದ್ಧ ನಡೆಯಲಿದೆ. ಇದನ್ನೂ ಓದಿ: Indonesia Open 2023: ಐತಿಹಾಸಿಕ ಜಯ ತಂದ ಮೊದಲ ಭಾರತೀಯ ಜೋಡಿ, ಸಾತ್ವಿಕ್‌ಸಾಯಿರಾಜ್, ಚಿರಾಗ್‌ಗೆ ಪ್ರಶಸ್ತಿ

    ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನಾಯಕ ಸುನೀಲ್‌ ಚೆಟ್ರಿ ಹ್ಯಾಟ್ರಿಕ್‌ ಗೋಲುಗಳನ್ನು ಗಳಿಸುವ ಮೂಲಕ ಮಿಂಚಿದ್ದರು. ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಆಟದಲ್ಲಿ ಅತಿಥೇಯ ತಂಡ ಉತ್ತಮ ಪ್ರದರ್ಶನ ನೀಡಿತ್ತು.

  • ಖ್ಯಾತ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಚೀನಾದಲ್ಲಿ ಅರೆಸ್ಟ್ – ಮುಂದೇನಾಯ್ತು?

    ಖ್ಯಾತ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಚೀನಾದಲ್ಲಿ ಅರೆಸ್ಟ್ – ಮುಂದೇನಾಯ್ತು?

    ಬೀಜಿಂಗ್: ಜೂನ್ 15ರಂದು ವರ್ಕಸ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ನಡೆಯಲಿರುವ ಸೌಹಾರ್ದ ಪಂದ್ಯಕ್ಕೆ ತೆರಳುತ್ತಿದ್ದ ವೇಳೆ ಅರ್ಜೆಂಟೀನಾ ಫುಟ್ಬಾಲ್ ತಂಡದ (Argentina Football Team) ನಾಯಕ ಲಿಯೋನೆಲ್ ಮೆಸ್ಸಿ (Lionel Messi) ಅವರನ್ನು ಬೀಜಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ ಘಟನೆ ನಡೆದಿದೆ.

    ಅರ್ಜೆಂಟೀನಾ ಮತ್ತು ಆಸ್ಟ್ರೇಲಿಯಾ ನಡುವಿನ ಸೌಹಾರ್ದ ಪಂದ್ಯದಲ್ಲಿ ತನ್ನ ದೇಶವನ್ನು ಮುನ್ನಡೆಸಲು ಲಿಯೋನೆಲ್ ಮೆಸ್ಸಿ ಚೀನಾಕ್ಕೆ ಆಗಮಿಸಿದರು. ಆಗ ಅವರನ್ನು ಚೀನಾದ ಬಾರ್ಡರ್ ಪೊಲೀಸರು (Chinese Border Police) ವಿಮಾನ ನಿಲ್ದಾಣದಲ್ಲಿ ತಡೆದು ಬಂಧಿಸಿದರು.

    ಮೂಲಗಳ ಪ್ರಕಾರ, ಮೆಸ್ಸಿ ಅವರ ವೀಸಾ ವಿಳಂಬವಾಗಿತ್ತು. ಮೆಸ್ಸಿ ತಮ್ಮ ಅರ್ಜೆಂಟೀನಾದ ಪಾಸ್‌ಪೋರ್ಟ್ ಬದಲಾಗಿ ತಮ್ಮ ಸ್ಪ್ಯಾನಿಷ್ ಪಾಸ್‌ಪೋರ್ಟ್ನೊಂದಿಗೆ ಪ್ರಯಾಣಿಸಿದ್ದರು. ಆದರೆ ಅದು ಚೀನಾ ವೀಸಾವನ್ನು (Chinese Visa) ಹೊಂದಿರಲಿಲ್ಲ. ತಮ್ಮ ಅಜಾಗರೂಕತೆಯಿಂದಾಗಿ ಮೆಸ್ಸಿ ಚೀನಾ ಬಾರ್ಡರ್ ಪೊಲೀಸರಿಂದ ಬಂಧಿತರಾಗಿದ್ದರು. ಸುಮಾರು 30 ನಿಮಿಷಗಳ ನಂತರ ಪರಿಸ್ಥಿತಿಯನ್ನು ಬಗೆಹರಿಸಲಾಯಿತು. ಅನಂತರ ಲಿಯೋನೆಲ್ ಮೆಸ್ಸಿ ವಿಮಾನ ನಿಲ್ದಾಣದಿಂದ ನಿರ್ಗಮಿಸಿದರು.

    ತನ್ನ ಸ್ಪ್ಯಾನಿಷ್ ಪಾಸ್‌ಪೋರ್ಟ್ ಹಿಡಿದುಕೊಂಡು ತನ್ನ ಸಹ ಆಟಗಾರರೊಂದಿಗೆ ಮಾತನಾಡುತ್ತಿದ್ದ ಲಿಯೋನೆಲ್ ಮೆಸ್ಸಿಯನ್ನು ಹಲವು ಪೊಲೀಸ್ ಅಧಿಕಾರಿಗಳು ತಡೆದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಮೋದಿ ಕ್ರೀಡಾಂಗಣದಲ್ಲಿ ಇಂಡೋ ಪಾಕ್ ಕದನ – ರಣರೋಚಕ ಪಂದ್ಯಕ್ಕಾಗಿ ಕಾಯ್ತಿದ್ದಾರೆ ಫ್ಯಾನ್ಸ್

    ಮೆಸ್ಸಿ ಫುಟ್ಬಾಲ್ ಲೋಕದಲ್ಲಿ ಶ್ರೀಮಂತ ಆಟಗಾರರಲ್ಲಿ ಒಬ್ಬರು. ಅವರು ಈವರೆಗೆ ಬಾರ್ಸಿಲೋನಾ ಕ್ಲಬ್ ಪರ 778 ಪಂದ್ಯಗಳ ಮೂಲಕ ಬರೋಬ್ಬರಿ 672 ಗೋಲ್‌ಗಳನ್ನು ಬಾರಿಸಿದ್ದಾರೆ. ಮೆಸ್ಸಿ 21 ವರ್ಷದವರಿದ್ದಾಗಲೇ 8 ಗೋಲುಗಳನ್ನು ಸಿಡಿಸುವ ಮೂಲಕ ಅಸಾಧಾರಣ ಪ್ರತಿಭೆ ಪ್ರದರ್ಶಿಸಿದ್ದರು. ಜೊತೆಗೆ ಅರ್ಜೆಂಟೀನಾ ತಂಡ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಲು ನಿರ್ಣಾಯಕ ಪಾತ್ರ ವಹಿಸಿದ್ದರು. ಈ ಹಿಂದೆ ನಡೆದ ಫಿಫಾ ವಿಶ್ವಕಪ್‌ನಲ್ಲೂ ಮೆಸ್ಸಿ ಮ್ಯಾಜಿಕ್‌ನಿಂದಾಗಿಯೇ ಅರ್ಜೆಂಟೀನಾ ಕಪ್ ಗೆಲ್ಲಲು ಸಾಧ್ಯವಾಗಿತ್ತು. ಇದನ್ನೂ ಓದಿ: ICC ಟೂರ್ನಿಗಳಲ್ಲಿ ಟೀಂ ಇಂಡಿಯಾ ಫೇಲ್ ಆಗ್ತಿರೋದೇಕೆ? – ಕಾರಣ ತಿಳಿಸಿದ ChatGPT

  • ಗಂಗಾವತಿ ಜನ ಫುಟ್ಬಾಲ್ ಆಡಿದ್ರೆ ಸೀದಾ ಬಳ್ಳಾರಿಗೆ ಹೋಗಿ ಬೀಳ್ತಾರೆ- ರೆಡ್ಡಿ ಚಿಹ್ನೆ ಬಗ್ಗೆ ಅನ್ಸಾರಿ ವ್ಯಂಗ್ಯ

    ಗಂಗಾವತಿ ಜನ ಫುಟ್ಬಾಲ್ ಆಡಿದ್ರೆ ಸೀದಾ ಬಳ್ಳಾರಿಗೆ ಹೋಗಿ ಬೀಳ್ತಾರೆ- ರೆಡ್ಡಿ ಚಿಹ್ನೆ ಬಗ್ಗೆ ಅನ್ಸಾರಿ ವ್ಯಂಗ್ಯ

     ಕೊಪ್ಪಳ: ಗಂಗಾವತಿ ಜನ ಫುಟ್ಬಾಲ್ (FootBall) ಆಡಿದ್ರೆ ಸೀದಾ ಬಳ್ಳಾರಿಗೆ ಹೋಗಿ ಬೀಳುತ್ತಾರೆ ಎಂದು ಜನಾರ್ದನ ರೆಡ್ಡಿ ಪಕ್ಷದ ಚಿಹ್ನೆ ಬಗ್ಗೆ ಗಂಗಾವತಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ (Iqbal Ansari) ವ್ಯಂಗ್ಯವಾಡಿದ್ದಾರೆ.

    ಕೊಪ್ಪಳ ಜಿಲ್ಲೆ ಗಂಗಾವತಿಯ ತಮ್ಮ ನಿವಾಸದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ (Janardhan Reddy) ತೆಗೆದುಕೊಂಡ ಚಿಹ್ನೆ ಬರೋಬ್ಬರಿ ಸೂಟ್ ಆಗಿದೆ. ಗಂಗಾವತಿ ಜನ ಇಲ್ಲಿ ಫುಟ್ಬಾಲ್ ಆಡಿದರೆ ಸೀದಾ ಬಳ್ಳಾರಿಗೆ ಹೋಗಿ ಬೀಳ್ತಾರೆ ಎಂದು ಟೀಕಿಸಿದರು. ಇದನ್ನೂ ಓದಿ: KMFಗೆ ಬೊಮ್ಮಣ್ಣ ಕೈ ಹಾಕಿದ್ರೆ ರಕ್ತ ಕ್ರಾಂತಿಯಾಗುತ್ತೆ: ಸಿಎಂ ಇಬ್ರಾಹಿಂ ಎಚ್ಚರಿಕೆ

    ಬಳ್ಳಾರಿಯಲ್ಲಿ ಏನು ಮಾಡಲಾರದೆ ಅವರು ಇಲ್ಲಿಗೆ ಬಂದಿದ್ದಾರೆ. ಇಲ್ಲಿ ಅದೇನ್ ಕಡೆದು ಕಟ್ಟೆ ಹಾಕ್ತಾರೋ. ಜನಾರ್ದನ ರೆಡ್ಡಿ ಇಲ್ಲಿ ಚುನಾವಣೆಗೆ ಬಂದಿದ್ದಾರೆ ಅಷ್ಟೆ. ಚುನಾವಣೆ ಮುಗಿದ ನಂತರ ಸಂಜೆನೆ ಅವರು ಹೊರಟು ಹೋಗುತ್ತಾರೆ. ಅನ್ಸಾರಿ ಭಾಷಣ ಕೆಳಿ ಕಾರ್ಯಕರ್ತರು ನಗೆಗಡಲಲ್ಲಿ ತೇಲಾಡಿದರು.

    ನೀತಿಸಂಹಿತೆ ಇರುವುದರಿಂದ ಉಪವಾಸ ಸಭೆ ಮಾಡಬೇಕಾಗಿದೆ. ಚುನಾವಣೆ ಮುಗಿಯುವ ತನಕ ಉಪವಾಸ ಇರೋಣ. ನಂತರ ನೂರು ಎಕರೆ ಹೊಲದಲ್ಲಿ ಬಿರಿಯಾನಿ ತಿನ್ನೋಣ ಎಂದರು. ಇದನ್ನೂ ಓದಿ: ʻಫುಟ್ಬಾಲ್ʼ ಚಿಹ್ನೆ ತೆಗೆದುಕೊಂಡ ಕಥೆ ವಿವರಿಸಿದ ಜನಾರ್ದನ ರೆಡ್ಡಿ