Tag: Foot Ball

  • ಅತ್ಯಾಚಾರ, ಹಲ್ಲೆ ಆರೋಪ – ಫುಟ್‍ಬಾಲ್ ಆಟಗಾರ ಅರೆಸ್ಟ್

    ಅತ್ಯಾಚಾರ, ಹಲ್ಲೆ ಆರೋಪ – ಫುಟ್‍ಬಾಲ್ ಆಟಗಾರ ಅರೆಸ್ಟ್

    ಲಂಡನ್: ಮಹಿಳೆಯೊಬ್ಬರ ಮೇಲೆ ಅತ್ಯಾಚಾರ, ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಭಾನುವಾರ ಫುಟ್‍ಬಾಲ್ ಆಟಗಾರ ಮೇಸನ್ ಗ್ರೀನ್‍ವುಡ್‍ನನ್ನು ಅಮಾನತುಗೊಳಿಸಿದೆ.

    ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್, ಸಾಮಾಜಿಕ ಜಾಲತಾಣದಲ್ಲಿ ಗ್ರೀನ್‍ವುಡ್, ಮಹಿಳೆಯ ಮೇಲೆ ಹಲ್ಲೆ ಎಸೆಗಿದ್ದಾರೆಂಬ ಆರೋಪದ ಫೋಟೋಗಳು ವೈರಲ್ ಆಗಿವೆ. ಆಟಗಾರನ ಮೇಲೆ ಅತ್ಯಾಚಾರ ಆರೋಪವೂ ಕೇಳಿಬಂದಿದೆ. ಆರೋಪ ಸಾಬೀತಾಗುವವರೆಗೆ ಕ್ಲಬ್ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಮ್ಯಾಂಚೆಸ್ಟರ್ ಯುನೈಟೆಡ್ ಯಾವುದೇ ರೀತಿಯ ಹಿಂಸೆಯನ್ನು ಕ್ಷಮಿಸುವುದಿಲ್ಲ. ಆರೋಪವು ಸಾಬೀತಾಗುವವರೆಗೆ ಮೇಸನ್ ಗ್ರೀನ್‍ವುಡ್ ತರಬೇತಿಗೆ ಹಿಂತಿರುಗುವಂತಿಲ್ಲ. ಪೊಲೀಸ್ ತನಿಖೆಯ ಮುಂದಿನ ಸೂಚನೆ ಬರುವವರೆಗೆ ಪಂದ್ಯಗಳನ್ನು ಆಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಕೊನೆಗೂ ಕತ್ರಿನಾ ಮದುವೆಗೆ ವಿಶ್ ಮಾಡಿದ ಸಲ್ಮಾನ್ ಖಾನ್

    ಹಲ್ಲೆ ಆರೋಪದ ಕುರಿತು ಗ್ರೀನ್‍ವುಡ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವೀಡಿಯೋ, ಛಾಯಾಚಿತ್ರಗಳು ಮತ್ತು ಆಡಿಯೋ ರಿಕಾರ್ಡಿಂಗ್ ಸೇರಿದಂತೆ ಗ್ರೀನ್‍ವುಡ್ ವಿರುದ್ಧದ ಆರೋಪಗಳನ್ನು ಭಾನುವಾರ ಬೆಳಿಗ್ಗೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿ, ನಂತರದಲ್ಲಿ ಅಳಿಸಲಾಗಿದೆ.

    ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯು ಘಟನೆಯ ಕೆಲ ತುಣುಕುಗಳನ್ನು ಪೋಸ್ಟ್ ಮಾಡಿದ್ದಾರೆ. ನಂತರ ಅತ್ಯಾಚಾರ ಮತ್ತು ಹಲ್ಲೆ ಆರೋಪದ ಶಂಕೆಯ ಮೇಲೆ ಗ್ರೀನ್‍ವುಡ್‍ನನ್ನು ಬಂಧಿಸಲಾಗಿದೆ. ವಿಚಾರಣೆಗಾಗಿ ಆಟಗಾರನನ್ನು ಕಸ್ಟಡಿಯಲ್ಲಿ ಇರಿಸಲಾಗಿದೆ ಎಂದು ಗ್ರೇಟರ್ ಮ್ಯಾಂಚೆಸ್ಟರ್ ಪೋಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೀದಿ ನಾಯಿ ಮೇಲೆ ಕಾರು ಹತ್ತಿಸಿದ FIR ಏನಾಯ್ತು: ಸಿಎಂ, ತೇಜಸ್ವಿ ಸೂರ್ಯಗೆ ರಮ್ಯಾ ಪ್ರಶ್ನೆ

    ಗ್ರೀನ್‍ವುಡ್ 24 ಪಂದ್ಯಗಳನ್ನಾಡಿದ್ದು, 6 ಗೋಲು ಮಾಡಿದ್ದಾರೆ. ಯುನೈಟೆಡ್‍ನ ಅಕಾಡೆಮಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ. ಒಮ್ಮೆ ಇಂಗ್ಲೆಂಡ್ ರಾಷ್ಟ್ರೀಯ ತಂಡಕ್ಕಾಗಿ ಆಡಿದ್ದರು.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭಾರತದ ಫುಟ್ ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭಾರತದ ಫುಟ್ ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ

    ಕೋಲ್ಕತ್ತಾ: ಭಾರತದ ಫುಟ್ ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಬಹುಕಾಲದ ಸ್ನೇಹಿತೆ ಸೋನಮ್ ಭಟ್ಟಚಾರ್ಯ ಜೊತೆ ಸೋಮವಾರ ಕೋಲ್ಕತ್ತಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ನಗರದಲ್ಲಿ ನಡೆದ ಕಾರ್ಯಕ್ರಮಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗಮಿಸಿ ನವದಂಪತಿಗೆ ಮೊದಲು ಶುಭಹಾರೈಸಿದರು. ರಾಜಕೀಯ, ಸಿನಿಮಾ, ಫುಟ್ ಬಾಲ್ ಹಾಗೂ ಇತರೆ ಕ್ರೀಡಾ ಸೆಲೆಬ್ರಿಟಿಗಳು ಆಗಮಿಸಿದ್ದರು.

    ನೇಪಾಳದ ಸಾಂಸ್ಕೃತಿಕ ಉಡುಗೆಯನ್ನು ಧರಿಸಿ ಅದ್ದಕ್ಕೆ ಪೇಟಾ ಹಾಕಿ ಕುದುರೆ ಮೇಲೆ ಸವಾರಿ ಮಾಡಿಕೊಂಡು ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ನಂತರ ಬಂಗಾಳದ ಸಾಂಸ್ಕೃತಿಕ ಉಡುಗೆಯನ್ನು ಧರಿಸಿದ್ದರು. ನವೆಂಬರ್ ತಿಂಗಳಲ್ಲಿ ಈ ಜೋಡಿ ತಮ್ಮ ನಿಶ್ಚಿತಾರ್ಥವನ್ನು ಮಾಡಿಕೊಂಡಿತ್ತು.

    ಸದ್ಯ ಚೆಟ್ರಿ ಈಗ ಇಂಡಿಯನ್ ಸೂಪರ್ ಲೀಗ್ ಅಲ್ಲಿ ಬೆಂಗಳೂರು ಎಫ್‍ಸಿ ತಂಡದ ನಾಯಕರಾಗಿದ್ದಾರೆ. ಮದುವೆ ನಂತರ ಡಿಸೆಂಬರ್ 8ರಂದು ನಾರ್ಥ್ ಈಸ್ಟ್ ಯುನೈಟೆಡ್ ತಂಡದ ಜೊತೆ ಗುವಾಹಟಿಯಲ್ಲಿ ಪಂದ್ಯ ನಡೆಯಲಿದ್ದು, ಚೆಟ್ರಿ ಯಾವುದೇ ರಜೆಗಳನ್ನು ತೆಗೆದುಕೊಳ್ಳುತ್ತಿಲ್ಲ. ನವೆಂಬರ್ 19ರಂದು ಮುಂಬೈ ಸಿಟಿ ಜೊತೆ ಬೆಂಗಳೂರು 2-0 ಅಂತರದಲ್ಲಿ ಜಯ ಸಾಧಿಸಿತ್ತು. ಆ ನಂತರದ ಪಂದ್ಯದಲ್ಲಿ ಎಫ್‍ಸಿ ಗೋವಾ ವಿರುದ್ಧ ಸೋಲು ಕಂಡಿತ್ತು.