Tag: Food Truck

  • ಹೊಸ ರೂಪದಲ್ಲಿ ಫುಡ್ ಟ್ರಕ್ ಆರಂಭಿಸಿದ ಬಿಗ್‍ಬಾಸ್ ವಿನ್ನರ್

    ಹೊಸ ರೂಪದಲ್ಲಿ ಫುಡ್ ಟ್ರಕ್ ಆರಂಭಿಸಿದ ಬಿಗ್‍ಬಾಸ್ ವಿನ್ನರ್

    ಬೆಂಗಳೂರು: ಕಿರುತೆರೆ ನಟ ಮತ್ತು ಬಿಗ್‍ಬಾಸ್ ವಿನ್ನರ್ ಶೈನ್ ಶೆಟ್ಟಿ ಫುಡ್ ಟ್ರಕ್ ನಡೆಸುತ್ತಿದ್ದ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ ಕೊರೊನಾ ಸಂದರ್ಭದಲ್ಲಿ ಫುಡ್ ಟ್ರಕ್ ಅನ್ನು ಕ್ಲೋಸ್ ಮಾಡಲಾಗಿತ್ತು. ಇದೀಗ ಹೊಸ ರೂಪ ನೀಡಿ ಮತ್ತೆ ಶೈನ್ ಫುಡ್ ಟ್ರಕ್ ಆರಂಭಿಸಿದ್ದಾರೆ.

    ಶೈನ್ ಶೆಟ್ಟಿ ‘ಗಲ್ಲಿ ಕಿಚನ್’ ಫುಡ್ ಟ್ರಕ್‍ಗೆ ಹೊಸ ರೂಪ ನೀಡಿ ಮತ್ತೆ ಪ್ರಾರಂಭಿಸಿದ್ದಾರೆ. ಹಳೆಯ ಗಲ್ಲಿ ಕಿಚನ್‍ಗಿಂತ ಹೊಸ ಗಲ್ಲಿ ಕಿಚನ್ ದೊಡ್ಡದಾಗಿದೆ. ಹೊಸ ರೂಪದಲ್ಲಿ ಬಂದಿರುವ ಗಲ್ಲಿ ಕಿಚನ್ ಅನ್ನು ನಿರ್ದೇಶಕ ರಿಷಬ್ ಶೆಟ್ಟಿ ಉದ್ಘಾಟನೆ ಮಾಡಿದ್ದಾರೆ. ಮತ್ತೆ ಗಲ್ಲಿ ಕಿಚನ್ ಪ್ರಾರಂಭಿಸಿದ ಸಂತಸವನ್ನು ಶೈನ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಂಡಿದ್ದಾರೆ.

    ಈ ಸಂಭ್ರಮದಲ್ಲಿ ಶೈನ್ ಶೆಟ್ಟಿ ಸ್ನೇಹಿತರು ಮತ್ತು ಬಿಗ್‍ಬಾಸ್ ಸ್ಪರ್ಧಿಗಳು ಭಾಗಿಯಾಗಿದ್ದರು. ಚಂದನ್ ಆಚಾರ್, ಚಂದನಾ ಅನಂತಕೃಷ್ಣ, ಚೈತ್ರ ವಾಸುದೇವನ್ ಸೇರಿದಂತೆ ಅನೇಕರು ಶೈನ್‍ ಶೆಟ್ಟಿ ಹೊಸ ಫುಡ್ ಟ್ರಕ್‍ಗೆ ಶುಭಹಾರೈಸಿದ್ದಾರೆ.

    ಶೈನ್ ಶೆಟ್ಟಿ ಸಿನಿಮಾದಲ್ಲಿ ನಟಿಸಬೇಕು ಎಂಬ ಕನಸು ಕಂಡಿದ್ದರು. ಆದರೆ ಅವಕಾಶಗಳು ಸಿಗದಿದ್ದಾಗ ಟ್ರಕ್ ಫುಡ್ ಮೂಲಕ ಶೈನ್ ಜೀವನ ಸಾಗಿಸುತ್ತಿದ್ದರು. ನಂತರ ರಿಯಾಲಿಟಿ ಶೋ ಬಿಗ್‍ಬಾಸ್‍ಗೆ ಹೋಗಲು ಆಫರ್ ಬಂದಿತ್ತು. ಶೈನ್ ಬಿಗ್‍ಬಾಸ್ ಮನೆಗೆ ಹೋಗಿದ್ದಾಗ ಅವರ ತಾಯಿ ಈ ಫುಡ್ ಟ್ರಕ್ ನಿಭಾಯಿಸಿಕೊಂಡು ಹೋಗುತ್ತಿದ್ದರು.

    ಮತ್ತೆ ಕೊರೊನಾ ಲಾಕ್‍ಡೌನ್‍ನಿಂದ ಗಲ್ಲಿ ಕಿಚನ್ ಅನ್ನು ಕ್ಲೋಸ್ ಮಾಡಲಾಗಿತ್ತು. ಲಾಕ್‍ಡೌನ್ ಸಡಿಲಿಕೆ ಆದ ಮೇಲೂ ಜನರ ಆರೋಗ್ಯ ದೃಷ್ಟಿಯಿಂದ ಇನ್ನೂ ಕೆಲವು ದಿನ ಫುಡ್ ಟ್ರಕ್ ಓಪನ್ ಮಾಡುವುದಿಲ್ಲ ಎಂದು ಶೈನ್ ಶೆಟ್ಟಿ ತಿಳಿಸಿದ್ದರು. ಇದೀಗ ಮತ್ತೆ ‘ಗಲ್ಲಿ ಕಿಚನ್’ ಫುಡ್ ಟ್ರಕ್ ಆರಂಭಿಸಿದ್ದಾರೆ. ಸದ್ಯಕ್ಕೆ ಶೈನ್ ಶೆಟ್ಟಿ ನಿರ್ದೇಶಕ ರಿಷಬ್ ಶೆಟ್ಟಿ ಅವರ ಬಹುನಿರೀಕ್ಷೆಯ ‘ರುದ್ರ ಪ್ರಯಾಗ’ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.