Tag: Food Street

  • ನಿವೇದಿತಾ ಗೌಡ ‘ಸ್ಮೋಕ್’ ಮಾಡಿಲ್ಲ, ಹೊಗೆ ಬಿಟ್ಟಿದ್ದಕ್ಕೆ ಕಾರಣ ಬೇರೆಯೇ ಇದೆ

    ನಿವೇದಿತಾ ಗೌಡ ‘ಸ್ಮೋಕ್’ ಮಾಡಿಲ್ಲ, ಹೊಗೆ ಬಿಟ್ಟಿದ್ದಕ್ಕೆ ಕಾರಣ ಬೇರೆಯೇ ಇದೆ

    ರಡು ದಿನಗಳ ಹಿಂದೆಯಷ್ಟೇ ‘ಗಿಚ್ಚಿ ಗಿಲಿ ಗಿಲಿ’ ರಿಯಾಲಿಟಿ ಶೋ ರನ್ನರ್ ಅಪ್ ಆಗಿ ಹೊರ ಹೊಮ್ಮಿರುವ ನಟಿ ನಿವೇದಿತಾ ಗೌಡ (Nivedita Gowda),  ಶೂಟಿಂಗ್ ಇರದೇ ಇರುವ ಕಾರಣಕ್ಕಾಗಿ ಬೆಂಗಳೂರಿನ ವಿವಿಪುರಂನಲ್ಲಿರುವ (VV Puram) ಫುಡ್ ಸ್ಟ್ರೀಟ್‍ ಗೆ ಭೇಟಿ ನೀಡಿದ್ದಾರೆ. ಅಲ್ಲಿ ಹತ್ತಾರು ಬಗೆಯ ತಿಂಡಿ, ಚಾಟ್ಸ್ ಸವಿದಿದ್ದಾರೆ. ಕೊನೆಯಲ್ಲಿ ಬಾಯಿಯಿಂದ ಹೊಗೆ ಬಿಟ್ಟು ಎಲ್ಲರನ್ನೂ ಕನ್ಫೂಸ್ ಮಾಡಿದ್ದಾರೆ. ಇದೀಗ ಆ ವಿಡಿಯೋ ಟ್ರೋಲ್ ಆಗುತ್ತಿದೆ.

    ಸೋಷಿಯಲ್ ಮೀಡಿಯಾದಲ್ಲಿ ನಿವಿ ಯಾವಾಗಲೂ ಬ್ಯುಸಿ. ಒಂದಿಲ್ಲೊಂದು ಚಟುವಟಿಕೆಗಳನ್ನು ಮಾಡುತ್ತಲೇ ಅವುಗಳನ್ನು ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತಲೇ ಇರುತ್ತಾರೆ. ರೀಲ್ಸ್ ನಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದವರು, ಇದೀಗ ತಿಂಡಿ, ತಿನಿಸು ಮಾಡುವುದು ಹೇಗೆ ಎನ್ನುವುದನ್ನು ಹೇಳಿಕೊಡುತ್ತಿದ್ದಾರೆ. ಮಾಡಿದ ಅಡುಗೆಯನ್ನು ಚಂದನ್ (Chandan Shetty) ಮೇಲೆ ಪ್ರಯೋಗ ಮಾಡಿಯೇ ಸೇಡು ತೀರಿಸಿಕೊಳ್ಳುತ್ತಾರೆ. ಇದನ್ನೂ ಓದಿ:ಮತ್ತೆ ಒಂದಾದ ʻಪಂಚರಂಗಿ’ ದಿಗಂತ್‌- ನಿಧಿ ಸುಬ್ಬಯ್ಯ ಜೋಡಿ

    ಫುಡ್ ಬಗ್ಗೆ ಮಾತನಾಡಿದಾಗೆಲ್ಲ ನಿವಿ ಅಭಿಮಾನಿಗಳು ನೀವು ವಿವಿಪುರಂ ಫುಡ್ ಸ್ಟ್ರೀಟ್‍ ಗೆ (Food Street) ಹೋಗಿಲ್ಲವಾ? ಎಂದು ಎಲ್ಲರೂ ಕೇಳುತ್ತಿದ್ದರಂತೆ. ಈವರೆಗೂ ಅವರು ಅಲ್ಲಿಗೆ ಹೋಗಿಲ್ಲವಂತೆ. ಹಾಗಾಗಿ ಗಿಚ್ಚಿಗಿಲಿಗಿಲಿ ಮುಗಿಯುತ್ತಿದ್ದಂತೆಯೇ ಫುಡ್ ಸ್ಟ್ರೀಟ್ ಗೆ ಬಂದು, ಅಲ್ಲಿನ ವಿವಿಧ ತಿಂಡಿ ತಿನಿಸುಗಳನ್ನು ಸವಿದಿದ್ದಾರೆ. ಮೂವತ್ತಕ್ಕೂ ಹೆಚ್ಚು ಬಗೆಯ ತಿಂಡಿಗಳು ಇಲ್ಲಿದ್ದರೂ, ನನಗೆ ಐದಾರು ಮಾತ್ರ ತಿನ್ನುವುದಕ್ಕೆ ಸಾಧ್ಯವೆಂದು ಹೇಳಿದ್ದಾರೆ. ಅಲ್ಲದೇ, ಬೇರೆ ಬೇರೆ ತಿಂಡಿ ತಿನಿಸುಗಳ ಬಗ್ಗೆಯೂ ಪರಿಚಯ ಮಾಡಿಕೊಟ್ಟಿದ್ದಾರೆ.

    ಚಾಟ್ಸ್ (Chats)ತಿನ್ನುವುದು ಮುಗಿಯುತ್ತಿದ್ದಂತೆಯೇ ಸ್ಮೋಕಿಂಗ್ (Smoke) ಐಸ್ ಕ್ರೀಮ್ ಕೂಡ ಸವಿದಿದ್ದು, ಐಸ್ ಕ್ರೀಮ್ ತಿನ್ನುವಾಗ ಬರುವ ಹೊಗೆಯನ್ನು ಕ್ಯಾಮೆರಾ ಮುಂದೆ ಬಿಟ್ಟಿದ್ದಾರೆ. ಹಾಗಾಗಿ ನಿವೇದಿತಾ ಸ್ಮೋಕ್ ಮಾಡಿದ್ದಾರೆ ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಆದರೆ, ಅವರು ತಿಂದಿದ್ದು ಹೊಗೆ ಬರುವ ಐಸ್ ಕ್ರೀಮ್ ಎನ್ನುವುದು ಅವರು ಹಾಕಿರುವ ವಿಡಿಯೋ ನೋಡಿಯೇ ಗೊತ್ತಾಗುತ್ತದೆ. ಏನೇ ಆಗಲಿ, ನಿವಿ ಸಖತ್ ಎಂಜಾಯ್ ಮಾಡಿದ್ದಾರೆ ಫುಡ್ ಸ್ಟ್ರೀಟ್ ನಲ್ಲಿ.

    Live Tv
    [brid partner=56869869 player=32851 video=960834 autoplay=true]

  • ವಿವಿ ಪುರಂನ ತಿಂಡಿಗಳನ್ನು ಸವಿದು ಬಾಯ್ತುಂಬ ಹೊಗಳಿದ ಕೇಂದ್ರ ಸಚಿವ ಜೈಶಂಕರ್

    ವಿವಿ ಪುರಂನ ತಿಂಡಿಗಳನ್ನು ಸವಿದು ಬಾಯ್ತುಂಬ ಹೊಗಳಿದ ಕೇಂದ್ರ ಸಚಿವ ಜೈಶಂಕರ್

    ಬೆಂಗಳೂರು: ರಾಜ್ಯಕ್ಕೆ ಆಗಮಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಶುಕ್ರವಾರ ಬೆಂಗಳೂರಿನ ವಿವಿ ಪುರಂಗೆ ಭೇಟಿ ನೀಡಿದ್ದು, ಸ್ಥಳೀಯ ಬೇಕರಿ ಹಾಗೂ ಫುಡ್ ಸ್ಟ್ರೀಟ್‌ನಲ್ಲಿರುವ ಅಂಗಡಿಗಳಿಗೆ ಭೇಟಿ ನೀಡಿ ತಿಂಡಿಗಳನ್ನು ಸವಿದಿದ್ದಾರೆ. ಜೈಶಂಕರ್ ಅವರಿಗೆ ಸಚಿವ ಅಶ್ವಥ್ ನಾರಾಯಣ್ ಅವರು ಸಾಥ್ ನೀಡಿದ್ದಾರೆ.

    ಫುಡ್ ಸ್ಟ್ರೀಟ್‌ನಲ್ಲಿ ವಿವಿಧ ತಿಂಡಿಗಳನ್ನು ಸವಿದು ಗ್ರಾಹಕರು ಹಾಗೂ ಅಂಗಡಿ ಮಾಲೀಕರೊಂದಿಗೆ ಜೈಶಂಕರ್ ಮಾತುಕತೆಯನ್ನೂ ನಡೆಸಿದ್ದಾರೆ. ಇದು ನನಗೆ ಒಳ್ಳೆಯ ಅನುಭವವನ್ನು ತಂದು ಕೊಟ್ಟಿದೆ. ಈ ಭಾಗದ ಆಹಾರ ತುಂಬಾ ಚೆನ್ನಾಗಿತ್ತು. ದೇಶದ ಪ್ರಧಾನಿ ಪ್ರವಾಸೋದ್ಯಮವನ್ನು ಬೆಂಬಲಿಸಲು ಹೇಳಿದ್ದಾರೆ. ಪ್ರವಾಸೋದ್ಯಮ ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಾನು ಮತ್ತೊಮ್ಮೆ ಈ ಭಾಗಕ್ಕೆ ಬರಲು ಇಷ್ಟಪಡುತ್ತೇನೆ. ಇಲ್ಲಿನ ಆಹಾರ ತುಂಬಾ ಚೆನ್ನಾಗಿತ್ತು ಎಂದು ಕನ್ನಡದಲ್ಲಿಯೇ ನುಡಿದಿದ್ದಾರೆ. ಇದನ್ನೂ ಓದಿ: ಮೋದಿ ಚೀನಾದೊಂದಿಗೆ `ರಾಷ್ಟ್ರಧ್ವಜ ಒಪ್ಪಂದ’ ಮಾಡ್ಕೊಂಡಿದ್ದಾರೆ – ರಾಹುಲ್ ಗಾಂಧಿ ಆರೋಪ

    ಬಳಿಕ ಮಾತನಾಡಿದ ಜೈಶಂಕರ್, ಮನೆ ಮನೆ ಮೇಲೆ ತ್ರಿವರ್ಣ ಧ್ವಜ ಹಾರಬೇಕೆಂದು ಇಡೀ ದೇಶ ಹೇಳುತ್ತಿದೆ. ನಾನಿರುವ ಜಾಗದಿಂದಲೇ ನಾಳೆ ತ್ರಿವರ್ಣ ಧ್ವಜ ಹಾರಿಸುತ್ತೇವೆ. ನಾಳೆಯಿಂದ 3 ದಿನಗಳ ಕಾಲ ದೇಶದ ಎಲ್ಲಾ ಭಾಗಗಳಲ್ಲೂ ತ್ರಿವರ್ಣ ಧ್ವಜ ಹಾರಬೇಕು. ಪ್ರತಿ ಮನೆ ಮೇಲೂ, ಪ್ರತಿಯೊಬ್ಬರ ಮನದಲ್ಲೂ ತ್ರಿವರ್ಣ ಧ್ವಜ ಹಾರಬೇಕು ಎಂದರು.

    ಮನೆ ಮನೆ ಮೇಲೆ ತ್ರಿವರ್ಣ ಧ್ವಜ ಇದು ರಾಷ್ಟ್ರೀಯತೆಯ ಸಂಕೇತ. ಮೋದಿ ಅವರ ನೇತೃತ್ವದಲ್ಲಿ ಈ ಅಭಿಯಾನ ನಡೆಯಲಿದೆ. ಅವರ ಅಭಿಯಾನದಿಂದ ದೇಶವೇ ಒಂದಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಆಗಸ್ಟ್ 15ರ ನಂತ್ರ ಸರ್ಕಾರ, ಪಕ್ಷದಲ್ಲಿ ಬದಲಾವಣೆ – ಸಂಪುಟ ಸಭೆಯಲ್ಲಿ ಬೊಮ್ಮಾಯಿ ಸುಳಿವು

    Live Tv
    [brid partner=56869869 player=32851 video=960834 autoplay=true]