ಬೆಂಗಳೂರು: ಎಲ್ಲಾ ಜೀವಿಗಳಿಗೂ ನೀರು (Water) ಅತ್ಯಗತ್ಯ. ಪ್ರಮುಖ ದೈಹಿಕ ಪ್ರಕ್ರಿಯೆಗಳನ್ನು ಬೆಂಬಲಿಸುವುದರ ಜೊತೆಗೆ, ನೀರು ಉತ್ಪಾದಿಸಲು ಸಾಧ್ಯವಾಗದ ದೇಹಕ್ಕೆ ಅಗತ್ಯವಾದ ಪೋಷಕಾಂಶ ಒದಗಿಸುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಬೆಂಗಳೂರಿನಂತಹ (Bengaluru) ಮಹಾನಗರಗಳಲ್ಲಿ ಕುಡಿಯುವ ನೀರು ವಿಷವಾಗುತ್ತಿದೆಯೇ ಅನ್ನೋ ಆತಂಕ ಜನರನ್ನು ಆವರಿಸಿದೆ.
ಇತ್ತೀಚೆಗೆ ಆಹಾರ ಗುಣಮಟ್ಟ ಸುರಕ್ಷತಾ ಇಲಾಖೆ ಸುಮಾರು 160 ಮಿನರಲ್ ವಾಟರ್ ಬಾಟಲ್‌ಗಳನ್ನ (Mineral Water Bottle) ಸ್ಯಾಂಪಲ್ ಟೆಸ್ಟ್‌ಗೆ ಕಳುಹಿಸಿತ್ತು. ಈ ಪೈಕಿ ಈಗಾಗಲೇ 100ಕ್ಕೂ ಹೆಚ್ಚು ಬಾಟಲ್‌ಗಳ ವರದಿ ಕೈಸೇರಿದೆ. ಇಲಾಖೆ ಕಳುಹಿಸಿದ್ದ ಮಾದರಿಗಳಲ್ಲಿ 50% ನೀರು ಅನ್‌ಸೇಫ್ ಆಗಿದೆ. ಲೋಕಲ್ ಮಿನರಲ್ ವಾಟರ್ ಅನ್ ಸೇಫ್ ಅಂತ ರಿಪೋರ್ಟ್ ಬಂದಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಬಟಾಣಿ ಪ್ರಿಯರೇ ಎಚ್ಚರ – ಹಸಿರು ಬಟಾಣಿಯಲ್ಲೂ ಕ್ಯಾನ್ಸರ್ ಕಾರಕ ಅಂಶ ಪತ್ತೆ!
ಮಿನರಲ್ ವಾಟರ್ ಬಾಟಲ್ ವರದಿಯಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ತುಂಬಾ ಸಮಯದಿಂದ ನೀರು ಶೇಖರಣೆ ಮಾಡುವುದರಿಂದ ಪಾಚಿ ಅಂಶಗಳು ಕಂಡುಬಂದಿವೆ. ಅಲ್ಲದೇ ಕೆಲ ಕಂಪನಿಗಳು ಕಲುಷಿತ ನೀರು, ಬೋರ್ವೆಲ್ ನೀರನ್ನು ಬಾಟಲ್ ಮೂಲಕ ಮಾರಾಟ ಮಾಡುತ್ತಿದ್ದದ್ದು ಕಂಡುಬಂದಿದೆ. ನೀರನ್ನು ಶುದ್ದೀಕರಿಸದೇ ನೇರವಾಗಿ ಮಾರುಕಟ್ಟೆಗೆ ಸರಬರಾಜು ಮಾಡುತ್ತಿದ್ದ ಕಾರಣ ಹಾನಿಕಾರಕ ಅಂಶ ಪತ್ತೆಯಾಗಿರುವುದು ಕಂಡುಬಂದಿದೆ. ಇಂತಹ ಕಲುಷಿತ ನೀರು ಕುಡಿಯೋದ್ರಿಂದ ವಾಂತಿ, ಭೇದಿ, ಜ್ವರ, ಸುಸ್ತು ಕಾಣಿಸಿಕೊಳ್ಳುತ್ತೆ, ಅದ್ರಲ್ಲೂ ಮಕ್ಕಳಿಗೆ ಬೇಗನೇ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ ಎಂದು ಆಹಾರ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬಾಯಿ ಚಪ್ಪರಿಸುವ ಟೊಮೆಟೊ ಸಾಸ್‌ನಲ್ಲಿ ಅಪಾಯಕಾರಿ ರಾಸಾಯನಿಕ ಬಳಕೆ
– ಕೇಕ್‌ಗಳಿಗೆ ಅಪಾಯಕಾರಿ ರಾಸಾಯನಿಕ ಬಳಕೆ
– ತಪಾಸಣೆ ಮುಂದಾದ ಆಹಾರ ಸುರಕ್ಷತಾ ಇಲಾಖೆ
ಬೆಂಗಳೂರು: ಆಹಾರ ಸುರಕ್ಷತೆ (Food Safety) ಮತ್ತು ಔಷಧ ಆಡಳಿತದ ಅಧಿಕಾರಿಗಳ ವಿಶ್ಲೇಷಣಾ ವರದಿಯ ಪ್ರಕಾರ, ಟ್ಯಾಟೂಗೆ ಬಳಸುವ ಇಂಕ್‌ನಲ್ಲಿ 22 ಹೆವಿ ಮೆಟಲ್ ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಈ ಟ್ಯಾಟೂ ಇಂಕ್ ನಲ್ಲಿರುವ ಮೈಕ್ರೋ ಆರ್ಗ್ಯಾನಿಸಮ್ ಮತ್ತು ಹೆವಿ ಮೆಟಲ್ಸ್ ಚರ್ಮದ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಇದರಿಂದ ಅನೇಕ ಚರ್ಮ ರೋಗಗಳು ಉಂಟಾಗುತ್ತವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದರು.
ರಾಜ್ಯದಲ್ಲಿ ತಯಾರಾಗುವ ಮತ್ತು ಮಾರಾಟಕ್ಕಾಗಿ ಸರಬರಾಜಾಗುತ್ತಿರುವ ಔಷಧಗಳ ಮತ್ತು ಕಾಂತಿವರ್ಧಕ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳುವುದು ಮತ್ತು ಉತ್ತಮ ಗುಣಮಟ್ಟದ, ಸುರಕ್ಷಿತ ಹಾಗೂ ಪರಿಣಾಮಕಾರಿ ಔಷಧಗಳನ್ನು ನಿಯಂತ್ರಿತ ಬೆಲೆಗಳಲ್ಲಿ ಗ್ರಾಹಕರಿಗೆ ದೊರಕುವಂತೆ ಮಾಡುವುದೇ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಮುಖ್ಯ ಉದ್ದೇಶವಾಗಿರುತ್ತದೆ.
ಔಷಧ ಆಡಳಿತ ವಿಭಾಗದ ಅಮಲು ಜಾರಿ ಅಧಿಕಾರಿಗಳಿಂದ ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಔಷಧ ಪರೀಕ್ಷಾ ಪ್ರಯೋಗಾಲಯಗಳಲ್ಲಿ ಜನವರಿ 2025ರಲ್ಲಿ 1,133 ಔಷಧಗಳ ಮಾದರಿಗಳನ್ನು ವಿಶ್ಲೇಷಣೆಗೆ ಪಡೆಯಲಾಗಿದೆ. ಅವುಗಳಲ್ಲಿ 938 ಉತ್ತಮ ಗುಣಮಟ್ಟದ ಔಷಧಗಳೆಂದು, 106 ಉತ್ತಮ ಗುಣಮಟ್ಟವಿಲ್ಲದ ಔಷಧಿಗಳೆಂದು ಘೋಷಿತವಾಗಿದೆ. ಫೆಬ್ರವರಿ ತಿಂಗಳಲ್ಲಿ 1,841 ಔಷಧ ಮಾದರಿಗಳನ್ನು ವಿಶ್ಲೇಷಣೆಗೆ ಪಡೆಯಲಾಗಿದೆ. ಇಲ್ಲಿಯವರೆಗೆ 58 ಮಾದರಿಗಳು ಅನುತ್ತಮ ಗುಣಮಟ್ಟದ ಔಷಧಿಗಳೆಂದು ಘೋಷಿತವಾಗಿದೆ ಎಂದು ವಿವರಿಸಿದರು.
2024ರ ಡಿಸೆಂಬರ್‌ನಲ್ಲಿ ಕಾಂತಿವರ್ಧಕಗಳ ಗುಣಮಟ್ಟವನ್ನು ಪರೀಕ್ಷಿಸಲು ಇಂದಿನವರೆಗೆ 262 ಕಾಂತಿವರ್ಧಕ ಮಾದರಿಗಳನ್ನು ವಿಶ್ಲೇಷಣೆಗೆ ಪಡೆಯಲಾಗಿದೆ. ಅವುಗಳಲ್ಲಿ 120 ಉತ್ತಮ ಗುಣಮಟ್ಟದ ಕಾಂತಿವರ್ಧಕಗಳೆಂದು ಘೋಷಿತವಾಗಿದೆ. ಉಳಿದ ಮಾದರಿಗಳು ವಿಶ್ಲೇಷಣಾ ಹಂತದಲ್ಲಿರುತ್ತದೆ ಎಂದರು. ಇದನ್ನೂ ಓದಿ: ದಯವಿಟ್ಟು ಗಂಡಸರ ಬಗ್ಗೆ ಯೋಚಿಸಿ: ಪತ್ನಿ ದೌರ್ಜನ್ಯಕ್ಕೆ ಬೇಸತ್ತು ಟೆಕ್ಕಿ ಆತ್ಮಹತ್ಯೆ
2024ರ ಡಿಸೆಂಬರ್ ಹಾಗೂ 2025ರ ಜನವರಿ ತಿಂಗಳಲ್ಲಿ ಔಷಧ ಮತ್ತು ಕಾಂತಿವರ್ಧಕ ಅಧಿನಿಯಮದ 1940 ಮತ್ತು ಅದರಡಿಯ ನಿಯಾಮಾವಳಿಗಳನ್ನು ಉಲ್ಲಂಘನೆ ಮಾಡಿದ 75 ಸಂಸ್ಥೆಗಳ ವಿರುದ್ಧ ಮಾನ್ಯ ನ್ಯಾಯಾಲಯಗಳಲ್ಲಿ ಮೊಕದ್ದಮೆ ದಾಖಲಿಸಲು ಅನುಮತಿ ನೀಡಲಾಗಿದೆ. ರಾಜ್ಯದಲ್ಲಿ NSQ ಬಂದಂತಹ ಪ್ರಕರಣಗಳಲ್ಲಿ ಜನವರಿ 2025ರ ಮಾಹೆಯಲ್ಲಿ ವಿಶೇಷ ಅಭಿಯಾನ ಕೈಗೊಂಡು ಸುಮಾರು 17 ಲಕ್ಷಕ್ಕಿಂತಲೂ ಹೆಚ್ಚಿನ ಮೌಲ್ಯದ ಅನುತ್ತಮ ಗುಣಮಟ್ಟವಲ್ಲದ ಔಷಧಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ ಎಂದು ತಿಳಿಸಿದರು.
ಮಾದಕ ಔಷಧಗಳ (NDPS) ದುರ್ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನವರಿ 2025ರ ಮಾಹೆಯಲ್ಲಿ ವಿಶೇಷ ಅಭಿಯಾನ ಕೈಗೊಂಡು ಒಟ್ಟು 488 ಔಷಧ ಮಳಿಗೆಗಳನ್ನು ಪರಿವೀಕ್ಷಿಸಿ ಅದರಲ್ಲಿ ನಿಯಮಗಳನ್ನು ಉಲ್ಲಂಘಿಸಿರುವ 400 ಮಳಿಗೆಗಳಿಗೆ ಕಾರಣ ಕೇಳುವ ನೋಟಿಸ್ ಜಾರಿಗೊಳಿಸಲಾಗಿದೆ. ನಂತರ ನೋಟಿಸ್‌ಗೆ ಸಮಂಜಸ ಉತ್ತರ ನೀಡದ ಸಂಸ್ಥೆಗಳ ಪೈಕಿ 213 ಪರವಾನಗಿಗಳನ್ನು ಅಮಾನತ್ತುಗೊಳಿಸಿ, 03 ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ. 2025ರ ಫೆ.17 ರಿಂದ ಫೆ.19ರ ವರೆಗೆ ರಾಜ್ಯಾದ್ಯಂತ ಎಲ್ಲಾ ಔಷಧ ಮಳಿಗೆಗಳಲ್ಲಿ ಆಂಟಿಬಯೋಟಿಕ್ ಔಷಧಗಳ ದುರ್ಬಳಕೆ ಬಗ್ಗೆ ಅಮಲು ಜಾರಿ ಅಧಿಕಾರಿಗಳ ವಿಶೇಷ ತಪಾಸಣೆ ಕೈಗೊಂಡು 199 ಪರಿವೀಕ್ಷಣೆಗಳನ್ನು ನಡೆಸಲಾಗಿದೆ. 52 ಔಷಧ ಮಳಿಗೆಗಳಲ್ಲಿ ಆಂಟಿಬಯೋಟಿಕ್ ಔಷಧಗಳನ್ನು ಮಾರಾಟ ಮಾಡಿರುವುದು ಕಂಡುಬಂದಿರುತ್ತದೆ. ಈ 52 ಪ್ರಕರಣಗಳಲ್ಲಿ ಮೊಕದ್ದಮೆ ಹೂಡಲು ಗಮನಹರಿಸಲಾಗುತ್ತಿದೆ ಎಂದು ಹೇಳಿದರು.
ಟ್ಯಾಟೂ ಅನ್‌ಸೇಫ್:
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಅಧಿಕಾರಿಗಳು ಟ್ಯಾಟೂ ಹಾಕಲು ಉಪಯೋಗಿಸುವ ಇಂಕ್ ಅನ್ನು ಮಾರುಕಟ್ಟೆಯಿಂದ ಪಡೆದು ವಿಶ್ಲೇಷಣೆ ನಡೆಸಲಾಗಿದೆ. ವಿಶ್ಲೇಷಣಾ ವದರಿಯ ಪ್ರಕಾರ ಟ್ಯಾಟೂನಲ್ಲಿ 22 ಹೆವಿ ಮೆಟಲ್ ಇರುವುದು ಕಂಡುಬಂದಿದೆ. ಇದು ಔಷಧ ಮತ್ತು ಕಾಂತಿವರ್ಧಕ ಅಧಿನಿಯಮಗಳ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ. ಈ ಟ್ಯಾಟು ಇಂಕ್ ನಲ್ಲಿರುವ ಮೈಕ್ರೋ ಆರ್ಗ್ಯಾನಿಸಮ್ ಮತ್ತು ಹೆವಿ ಮೆಟಲ್ಸ್ ಚರ್ಮದ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಇದರಿಂದ ಅನೇಕ ಚರ್ಮ ರೋಗಗಳು ಉಂಟಾಗುತ್ತವೆ. ಈ ಕುರಿತು ನಿಯಮಗಳನ್ನು ರೂಪಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿರುವುದರಿಂದ ಕ್ರಮ ಜರುಗಿಸಬೇಕು ಎಂದು ಕೇಂದ್ರಕ್ಕೆ ಒತ್ತಾಯಿಸಿದರು.
ಅಲ್ಲದೇ ರಿಂಗರ್ ಲ್ಯಾಕ್ಟೇಟ್ ದ್ರಾವಣಕ್ಕೆ ಸಂಬಂಧಿಸಿದಂತೆ 246 ಬ್ಯಾಚ್‌ನ ಮಾದರಿಗಳಲ್ಲಿ 113 ಅನುತ್ತಮ ಗುಣಮಟ್ಟದೆಂದು ಘೋಷಿತವಾಗಿದೆ. ಈ ಸಂಬಂಧ ತಯಾರಿಕಾ ಸಂಸ್ಥೆಯಾದ ಪಶ್ಚಿಮ್‌ಬಂಗಾ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ 9 ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಇನ್ನುಳಿದ ಅನುತ್ತಮ ಗುಣಮಟ್ಟದ 25 ಪ್ರಕರಣಗಳಲ್ಲಿ ಮೊಕದ್ದಮೆ ಹೂಡಲು ಅನುಮತಿ ನೀಡಲಾಗಿದ್ದು, ಮೊಕದ್ದಮೆ ಹೂಡುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಸುಧಾರಣಾ ಕ್ರಮಗಳೇನು?
ಈ ಕಳಪೆ ಗುಣಮಟ್ಟದ ಔಷಧಗಳು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗದಂತೆ ತಡೆಯಬೇಕು. ಈಗ ಇರುವ ದಾಸ್ತಾನುಗಳನ್ನು ಹಿಂಪಡೆಯಲು ಚಿಲ್ಲರೆ ಔಷಧ ಮಳಿಗೆಗಳು / ಸಗಟು ಮಾರಾಟಗಾರರು / ತಯಾರಿಕಾ ಸಂಸ್ಥೆಗಳ ವಿವರಗಳನ್ನು ಗಣಕೀಕರಣಗೊಳಿಸಲಾಗುತ್ತಿದೆ. ಶೀಘ್ರದಲ್ಲಿ ಸದರಿ ತಂತ್ರಾಂಶವನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.\
ಆಹಾರ ಸುರಕ್ಷತೆ:
2025ರ ಜನವರಿಯಲ್ಲಿ 3,608 ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿ 26 ಮಾದರಿಗಳು ಅಸುರಕ್ಷಿತ ಮತ್ತು 28 ಮಾದರಿಗಳು ಕಳಪೆ ಎಂದು ವರದಿಯಾಗಿದೆ. 2025ರ ಫೆಬ್ರವರಿ 2025ರ ಮಾಹೆಯಲ್ಲಿ 2,543 ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿ 8 ಮಾದರಿಗಳು ಅಸುರಕ್ಷಿತ ಮತ್ತು 5 ಮಾದರಿಗಳು ಕಳಪೆ ಎಂದು ವರದಿಯಾಗಿದೆ ಎಂದು ಸಚಿವರು ವಿವರಿಸಿದರು.
ಕೇಕ್‌ನಲ್ಲಿ ತಗ್ಗಿದ ಕೃತಕ ಬಣ್ಣದ ಪ್ರಮಾಣ:
2024ರ ಮಾಹೆಯಲ್ಲಿ ಕೇಕ್ ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬಳಸುತ್ತಿರುವ ಕುರಿತಂತೆ 295 ಮಾದರಿಗಳನ್ನ ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿದ್ದು ಅವುಗಳಲ್ಲಿ 12 ಮಾದರಿಗಳು (ಶೇ.4.06ರಷ್ಟು) ಅಸುರಕ್ಷಿತ ಎಂದು ವರದಿಯಾಗಿತ್ತು. 2025ರಲ್ಲಿ ಪುನಃ ಪರಿಶೀಲನೆ ನಡೆಸಿದಾಗ 7 ಮಾದರಿಗಳು ಅನ್‌ಸೇಫ್ ಎಂದು ವರದಿ ಬಂದಿದೆ. ಹೀಗಾಗಿ ಉದ್ದಿಮೆದಾರರಿಗೆ ನಿಗದಿತ ಮಿತಿಯೊಳಗೆ ಬಣ್ಣ ಬಳಸುವಂತೆ ಅರಿವು ಮೂಡಿಸಲಾಗಿದೆ. ಜೊತೆಗೆ ಮತ್ತೊಂದು ಸುತ್ತಿನಲ್ಲಿ ಕೇಕ್ ಟೆಸ್ಟಿಂಗ್ ಮಾಡಲು ಆಹಾರ ಇಲಾಖೆಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಬೆಂಗಳೂರು: ಇಡ್ಲಿ ತಯಾರಿಕೆಗೆ ಬಳಸುವ ಪ್ಲಾಸ್ಟಿಕ್‌ನಿಂದ ಕ್ಯಾನ್ಸರ್ ಕಾರಕ ಅಂಶ (Carcinogenicity element) ಪತ್ತೆಯಾದ ಬೆನ್ನಲ್ಲೇ ಈಗ ಹಸಿರು ಬಟಾಣಿ ಬಗ್ಗೆ ವರದಿ ಬಂದಿದೆ. ಹಸಿರು ಬಟಾಣಿಯಲ್ಲೂ ಕ್ಯಾನ್ಸರ್ ಕಾರಕ ಪತ್ತೆಯಾಗಿರುವ ಬಗ್ಗೆ ಆಹಾರ ಸುರಕ್ಷತಾ ಇಲಾಖೆ (Food Safety Department) ವರದಿ ನೀಡಿದೆ.
ಹೌದು.. ಈಗ ಹಸಿರು ಬಟಾಣಿಗೆ ನಿಷೇಧ ಕಲ್ಲರ್‌ಗಳನ್ನ ಬಳಕೆ ಮಾಡ್ತಿರೋದು ಪತ್ತೆಯಾಗಿದೆ. ಈಗಾಗಲೇ ರಾಜ್ಯಾದ್ಯಂತ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಪರೀಕ್ಷೆಗೆ ಒಳಪಡಿಸಿದೆ. ಅದರಲ್ಲಿ 8 ರಿಂದ 10 ಕಡೆ ಕ್ಯಾನ್ಸರ್ ಕಾರಕ ಬಣ್ಣ ಬಳಕೆ ಮಾಡ್ತಿರೋದು ಪತ್ತೆಯಾಗಿದೆ. ಇದನ್ನೂ ಓದಿ: ನೇಪಾಳದಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪನ – ಭಾರತ, ಚೀನಾ ಗಡಿಯಲ್ಲೂ ಕಂಪಿಸಿದ ಭೂಮಿ
ಇನ್ನೂ ಇಡ್ಲಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿರೋ ಹಿನ್ನೆಲೆ ಸಚಿವ ದಿನೇಶ್ ಗುಂಡೂರಾವ್ ಇವತ್ತು ಮಹತ್ವದ ಸುದ್ದಿಗೋಷ್ಠಿ ಮಾಡಲಿದ್ದಾರೆ. ಆಹಾರ ತಯಾರಿಕೆ ಮತ್ತು ಆಹಾರ ಪಾರ್ಸೆಲ್ ಕೊಡೋದಕ್ಕೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಅಧಿಕೃತ ಆದೇಶ ಮಾಡುವ ಸಾಧ್ಯತೆ ಇದೆ. ಇದರ ಜೊತೆ ಹಸಿರು ಬಟಾಣಿಗೆ ಕಲರ್ ಲೇಪನ ಸಂಬಂಧ ಕ್ರಮದ ಬಗ್ಗೆ ಅನೌನ್ಸ್ ಮಾಡುವ ಸಾಧ್ಯತೆ ಇದೆ.
ಇನ್ನೂ ಹಸಿರು ಬಟಾಣಿಗೆ ನಿಷೇಧಿತ ಕಲರ್ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆಯಂತೆ. ಕೆಮಿಕಲ್‌ನಿಂದ ಸಾಕಷ್ಟು ಎಫೆಕ್ಟ್ ಆಗುತ್ತೆ ಅಂತ ಆಹಾರ ತಙ್ಞರು ಹೇಳ್ತಾರೆ. ಇದನ್ನೂ ಓದಿ: ಪುಣೆ ಅತ್ಯಾಚಾರ ಕೇಸ್ – 75 ಗಂಟೆಗಳ ಬಳಿಕ ಕಾಮುಕ ಅರೆಸ್ಟ್
ಯಾವುದು ಹಾನಿಕಾರಕ? – ಯಾವುದು ಹಾನಿಕಾರಕವಲ್ಲ?
* ಹಸಿ ಬಟಾಣಿ ಸಿಪ್ಪೆ ಬಿಡಿಸಿ ಬಳಸಿದ್ರೆ ಹಾನಿಕಾರಕ ಅಲ್ಲ
* ಶೇಖರಿಸಿ ಇಟ್ಟ ಹಸಿರು ಬಟಾಣಿ ಬಳಸಬಾರದು
* ಬಣ್ಣ ಬಳಸಿದ ಹಸಿರು ಬಟಾಣಿ ಬಳಸಬಾರದು
* ಗ್ರಾಹಕರನ್ನ ಆಕರ್ಷಿಸಲು ಫುಡ್ ಕಲರ್ ಬಳಕೆ
* ಶೇಖರಿಸಿ ಮಾರುವ ಬಟಾಣಿಗೆ ಫುಡ್ ಕಲರ್ ಬಳಕೆ
* ಫುಡ್ ಕಲರ್ ದೇಹಕ್ಕೆ ಹೆಚ್ಚು ಪ್ರಮಾಣ ಸೇರಿದ್ರೆ ಹಾನಿಕಾರಕ
* ಕಿಡ್ನಿ ಮೇಲೆ ಅಡ್ಡಪರಿಣಾಮ ಬೀರುವ ಸಾಧ್ಯತೆ
* ಯೂರಿನ್ ಉತ್ಪತ್ತಿ ಪ್ರಮಾಣ ಕಡಿಮೆ ಆಗುತ್ತೆ
* ಹೃದಯ ಸಂಬಂಧಿ ಖಾಯಿಲೆ ಬರುವ ಸಾಧ್ಯತೆ
* ಫುಡ್ ಕಲರ್‌ನಿಂದ ಕ್ಯಾನ್ಸರ್ ಬರುವ ಸಂಭವ ಇದೆ ಎಂದು ಆಹಾರ ಇಲಾಖೆ ತಜ್ಞರು ಹೇಳಿದ್ದಾರೆ.
ಆರೋಗ್ಯದ ಮೇಲೆ ಪರಿಣಾಮ ಏನು?
ಹಸಿರು ಬಟಾಣಿಗೆ ನಿಷೇಧಿತ ಬಣ್ಣ ಬಳಕೆ ಮಾಡುವುದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ರಿಟೆಕ್ಷನ್ ಆಫ್ ಟಾಕ್ಸಿನ್ ಪ್ರಮಾಣ ಏರಿಕೆಯಾಗುತ್ತದೆ. ಇದರಿಂದ ಕಿಡ್ನಿ ಸಮಸ್ಯೆ, ಮೂತ್ರ ಉತ್ಪತ್ತಿ ಕಡಿಮೆಯಾಗುತ್ತದೆ. ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್ ರೋಗ ಬರುವ ಸಂಭವ ಹೆಚ್ಚಾಗಿರುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ವಿಜಯಪುರ- ಬೆಳಗಾವಿ, ವಿಜಯಪುರ – ಹುಬ್ಬಳ್ಳಿ ಷಟ್ಪಥ ರಸ್ತೆಗೆ ಗಡ್ಕರಿ ಸಹಮತ – ಎಂಎಲ್‌ಸಿ ಸುನೀಲಗೌಡ
ಬೆಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ಖಾದ್ಯ ಇಡ್ಲಿಯನ್ನ ಎಲ್ಲೆಡೆ ತಯಾರಿಸಲಾಗುತ್ತದೆ. ಬಹುತೇಕ ನಗರವಾಸಿಗಳಿಗೆ ಇಡ್ಲಿಯೇ (Idli) ಬೆಳಗ್ಗಿನ ಉಪಾಹಾರ. ಆದ್ರೆ ಈ ಇಡ್ಲಿ ತಯಾರಿಕೆಗೆ ಬಳಸುವ ಪ್ಲಾಸ್ಟಿಕ್‌ನಲ್ಲಿ ಕ್ಯಾನ್ಸರ್ ಕಾರಕ ಅಂಶ (Carcinogenicity) ಪತ್ತೆಯಾಗಿದೆ ಎಂದು ಖುದ್ದು ಆಹಾರ ಇಲಾಖೆಯ ವರದಿಯೇ ಬಹಿರಂಗಪಡಿಸಿರುವುದು ಜನರ ನಿದ್ದೆಗೆಡಿಸಿದೆ.
ಹೌದು. ಇಡ್ಲಿ ತಯಾರಿಕೆಗೆ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕರಿಂದ ಸಾಲು ಸಾಲು ದೂರುಗಳು ಬಂದಿದ್ದವು. ದೂರು ಬಂದ ಹಿನ್ನೆಲೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಸುಮಾರು 500 ಆಹಾರ ಮಳಿಗೆಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ 35 ಕಡೆ ಪ್ಲಾಸ್ಟಿಕ್ ಬಳಕೆ ಮಾಡಿರುವುದು ಪತ್ತೆಯಾಗಿತ್ತು. ಈ ಬೆನ್ನಲ್ಲೇ 35 ಮಳಿಗೆದಾರರಿಗೆ ನೋಟಿಸ್ ನೀಡಲಾಗಿತ್ತು.
ಅಲ್ಲದೇ 500 ಕಡೆಗಳಲ್ಲಿ ಕಡೆಗಳಲ್ಲಿ ಸಂಗ್ರಹಿಸಿದ್ದ ಮಾದರಿಗಳನ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರಲ್ಲಿ 35 ಡೇಂಜರ್ ಅಂತ ವರದಿ ಬಂದಿದೆ. ಇಡ್ಲಿಗೆ ಬಳಸುವ ಪ್ಲಾಸ್ಟಿಕ್‌ನಲ್ಲಿ ಶಾಖ ಹೆಚ್ಚಾದಂತೆ ಪಿಎಫ್‌ಎಎಸ್ ಕೆಮಿಕಲ್ ಎಂಬ ಹಾನಿಕಾರಕ ಅಂಶ ಹೊರ ಸೂಸುತ್ತದೆ ಅಂತ ವರದಿ ಬಂದಿದೆ ಎಂದು ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ.
ಬೆಂಗಳೂರು: ಬಾಣಂತಿಯರ ಸರಣಿ ಸಾವು ಬಳಿಕ ಆಹಾರ ಸುರಕ್ಷತಾ ಇಲಾಖೆ (Food Safety Department) ಹಾಗೂ ಔಷಧ ನಿಯಂತ್ರಣ ಇಲಾಖೆಯನ್ನು (Drug Control Department) ಸರ್ಕಾರ ವಿಲೀನಗೊಳಿಸಿದೆ.
ರಾಜ್ಯದಲ್ಲಿ ಪರಿಶಿಷ್ಟ ಜಾತಿ-ಪಂಗಡಗಳ ಸಮುದಾಯದ ಜನರಿಗೆ ಆರೋಗ್ಯ ಸೇವೆಗಾಗಿ, ಹೆಚ್ಚು ಚಿಕಿತ್ಸಾ ವೆಚ್ಚ ಇರುವ ಕಾಯಿಲೆಗಳಿಗೆ ಹಾಗೂ ವಿರಳ ಆರೋಗ್ಯ ಸೇವೆ ಒದಗಿಸಲು ಕಾರ್ಫಸ್ ಫಂಡ್. ಒಟ್ಟು 45 ಕೋಟಿಯನ್ನು ಸರ್ಕಾರ ಮೀಸಲಿಟ್ಟಿದೆ.
ಬಳ್ಳಾರಿ ಹಾಗೂ ಬೆಳಗಾವಿಯಲ್ಲಿ ಬಾಣಂತಿಯರ ಸಾವು ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಬೆಳಗಾವಿಯ ಕುಂದಾನಗರಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ ಆರು ತಿಂಗಳಲ್ಲಿ 322 ಶಿಶುಗಳು ಮತ್ತು 29 ಬಾಣಂತಿಯರು ಮೃತಪಟ್ಟಿದ್ದಾರೆ. ಅಲ್ಲದೇ, ರಾಯಚೂರಿನಲ್ಲಿ ಅಕ್ಟೋಬರ್ ತಿಂಗಳಲ್ಲಿ ನಾಲ್ವರು ಬಾಣಂತಿಯರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಆಯ್ತು ಈಗ ರಾಯಚೂರು – ಅಕ್ಟೋಬರ್‌ನಲ್ಲಿ ನಾಲ್ವರು ಬಾಣಂತಿಯರು ಸಾವು
ಬೆಂಗಳೂರು: ಇನ್ಮುಂದೆ ಸಿಕ್ಕ ಸಿಕ್ಕಿದ್ದನ್ನೆಲ್ಲಾ ಪ್ರಸಾದ ಅಂತ ಹಂಚೋ ಹಾಗಿಲ್ಲ. ಯಾಕಂದ್ರೆ ಆಹಾರ ಸುರಕ್ಷತಾ ಇಲಾಖೆ ಹೊಸದೊಂದು ನಿಯಮ ಜಾರಿ ಮಾಡಿದೆ.
ಮುಜುರಾಯಿ ಇಲಾಖೆ ದೇಗುಲ ಸೇರಿದಂತೆ ರಾಜ್ಯದ ಎಲ್ಲಾ ದೇಗುಲಗಳಿಗೆ, ಚರ್ಚ್ ಹಾಗೂ ಮಸೀದಿಗಳಿಗೆ ಆಹಾರ ಸುರಕ್ಷತಾ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ಪ್ರಸಾದ ವಿನಿಯೋಗಕ್ಕೆ ಲೈಸನ್ಸ್ ಪಡೆಯುವಂತೆ ಸೂಚಿಸಿದೆ.
ಭಕ್ತರಿಗೆ ಪ್ರಸಾದ ರೂಪದಲ್ಲಿ ಯಾವುದೇ ಆಹಾರ ಪದಾರ್ಥ ನೀಡಿದ್ರೂ ಅದನ್ನು ಆಹಾರ ಸುರಕ್ಷತೆ ಇಲಾಖೆಯ ಲ್ಯಾಬ್‍ನಲ್ಲಿ ಪರೀಕ್ಷೆಗೆ ಒಳಪಡಿಸಬೇಕೆಂದು ಹೇಳಿದೆ. ದೇಗುಲದಲ್ಲಿ ವಿತರಣೆ ಮಾಡುವ ಪ್ರಸಾದದಲ್ಲಿ ಗುಣಮಟ್ಟ ಕಾಪಾಡುವುದಿಲ್ಲ ಅಂತಾ ದೂರುಗಳು ಬಂದ ಹಿನ್ನಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿರೋದಾಗಿ ಅಧಿಕಾರಿಗಳು ಹೇಳಿದ್ದಾರೆ.
ಮೂರು ಬಾರಿ ನೋಟಿಸ್ ನೀಡಿದ ನಂತರವೂ ಲೈಸೆನ್ಸ್ ಪಡೆಯದೇ, ಪ್ರಸಾದ ಪರೀಕ್ಷೆಗೆ ಒಳಪಡಿಸದೇ ವಿತರಣೆ ಮಾಡಿದ್ರೆ ದಂಡ ವಿಧಿಸಲು ಆಹಾರ ಇಲಾಖೆ ನಿರ್ಧರಿಸಿದೆ.
ಬೆಂಗಳೂರು: ಪ್ಲಾಸ್ಟಿಕ್ ಅಕ್ಕಿ, ಸಕ್ಕರೆ, ಮೊಟ್ಟೆಯ ಸುದ್ದಿಗೆ ಇಡೀ ರಾಜ್ಯ ಬೆಚ್ಚಿಬಿದ್ದಿದೆ. ರಾಜ್ಯದ ಮೂಲೆ ಮೂಲೆಯಿಂದಲೂ ಪ್ಲಾಸ್ಟಿಕ್ ಫುಡ್ ಬಗ್ಗೆ ಆಹಾರ ಸುರಕ್ಷತಾ ಇಲಾಖೆಗೆ ದೂರುಗಳ ಸುರಿಮಳೆ ಬಂದಿದೆ. ಇದ್ರಿಂದ ಅಲರ್ಟ್ ಆಗಿರುವ ಇಲಾಖೆ ಈಗ ರಾಜ್ಯದ ಮಾರ್ಟ್ ಗಳು, ಎಪಿಎಂಸಿ ,ರೈಸ್ ಮಿಲ್‍ಗಳು, ಅಂಗಡಿಗಳ ಮೇಲೆ ರೇಡ್ ಮಾಡಿ ಪ್ಲಾಸ್ಟಿಕ್ ಕಳ್ಳರ ಹುಡುಕಾಟದಲ್ಲಿದೆ.
ಅಧಿಕಾರಿಗಳು ಸುಮಾರು ಇನ್ನೂರು ಕಡೆಯಿಂದ ಅಕ್ಕಿ ಸಕ್ಕರೆ ಯ ಸ್ಯಾಂಪಲ್ ಸಂಗ್ರಹಿಸಿದ್ದಾರೆ. ಇಂದು ಕೂಡ ರಾಜ್ಯದ ಮಾರ್ಟ್ ಗಳು ರೈಸ್ ಮಿಲ್, ಎಪಿಎಂಸಿ, ದಿನಸಿ ಅಂಗಡಿಯಿಂದ ಸ್ಯಾಂಪಲ್ ಕಲೆಕ್ಟ್ ಮಾಡಿ ಲ್ಯಾಬ್ ಗೆ ಕಳಿಸಲಿದ್ದಾರೆ.
ಅಕ್ಷಯಪಾತ್ರೆ, ಅನ್ನಭಾಗ್ಯದ ಅಕ್ಕಿ ಮೇಲೂ ಕಣ್ಣು: ಮಧ್ಯಾಹ್ನದ ಬಿಸಿಯೂಟದ ಅಕ್ಷಯಪಾತ್ರೆ ಅಕ್ಕಿಯ ಸ್ಯಾಂಪಲ್ ಕೂಡ ಕಲೆಕ್ಟ್ ಮಾಡೋದಕ್ಕೆ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಸರ್ಕಾರದ ಜೊತೆ ಮಾತುಕತೆ ನಡೆಸಿ ಅನ್ನಭಾಗ್ಯದ ಅಕ್ಕಿಯನ್ನು ಲ್ಯಾಬ್ ಗೆ ಕಳಿಸುವ ಚಿಂತನೆ ಮಾಡಲಾಗಿದೆ.
ಸ್ಯಾಂಪಲ್ ರಿಪೋರ್ಟ್‍ನಲ್ಲಿ ಕಲಬೆರೆಕೆ, ಪ್ಲಾಸ್ಟಿಕ್‍ನ ಸೂಚನೆ ಸಿಕ್ಕರೆ ಆಯಾ ಮಾಲೀಕರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ಅಲ್ಲದೆ, ಒಂದು ಲಕ್ಷದಿಂದ 25 ಲಕ್ಷದವರೆಗೆ ದಂಡ ವಿಧಿಸಲಾಗುತ್ತೆ. ಕಲಬೆರಕೆ ಪ್ರಮಾಣ ಹೆಚ್ಚಿದ್ರೆ ಮಾರಾಟ ಮಾಡುವವರನ್ನ ಜೈಲಿಗೂ ಅಟ್ಟಬಹುದು. ಶಾಶ್ವತ ವಾಗಿ ಆಹಾರ ಪದಾರ್ಥ ಮಾರಾಟ ಮಾಡುವ ಲೈಸೆನ್ಸ್ ರದ್ದು ಮಾಡಬಹುದು.
ಕಲಬೆರಕೆ ಕಳ್ಳರ ಪತ್ತೆಗಾಗಿ ಅಧಿಕಾರಿಗಳ ಸಭೆ ಕೂಡ ಕರೆಯಲಾಗಿದೆ.