Tag: Food Recipe

  • ಭಗವಂತ್ ಮಾನ್ ಮದುವೆ ರೆಸಿಪಿ ಲಿಸ್ಟ್ ಏನು ಗೊತ್ತಾ?

    ಭಗವಂತ್ ಮಾನ್ ಮದುವೆ ರೆಸಿಪಿ ಲಿಸ್ಟ್ ಏನು ಗೊತ್ತಾ?

    ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಡಾ.ಗುರುಪ್ರೀತ್ ಕೌರ್ ಅವರನ್ನು ಇಂದು ಗುರು ಹಿರಿಯರ ಸಮ್ಮುಖದಲ್ಲಿ ತಮ್ಮ ನಿವಾಸದಲ್ಲಿ ವಿವಾಹವಾಗಿದ್ದಾರೆ. ವಿಶೇಷವೆಂದರೆ ಈ ಮದುವೆ ಸಮಾರಂಭದಲ್ಲಿನ ಫುಡ್ ಮೆನು ಎಲ್ಲರ ಗಮನ ಸೆಳೆದಿದೆ.

    ಸಾಮಾನ್ಯವಾಗಿ ಮದುವೆ ಸಮಾರಂಭ ಊಟವಿಲ್ಲದೇ ಪರಿಪೂರ್ಣವಾಗುವುದಿಲ್ಲ. ಮದುವೆ ವೇಳೆ ಅನೇಕ ವಿವಿಧ ಖಾದ್ಯಗಳನ್ನು ಮಾಡಿಸಲಾಗಿರುತ್ತದೆ. ಸದ್ಯ ಭಗವಂತ್ ಮಾನ್ ಅವರು ತಮ್ಮ ಮದುವೆಗೆ ಆಗಮಿಸಿರುವ ಅಥಿತಿಗಳಿಗೆ ವಿಶೇಷ ಭೋಜನ ಕೂಟವನ್ನು ಏರ್ಪಡಿಸಿದ್ದಾರೆ. ಎಲ್ಲ ರೀತಿಯ ಖಾದ್ಯಗಳು ಎಲ್ಲರ ಬಾಯಿಯಲ್ಲಿ ನೀರು ತರಿಸುವಂತಿದೆ. ಇದನ್ನೂ ಓದಿ: ನಿಮ್ಮ ಮದುವೆ ಯಾವಾಗ – ರಾಘವ್ ಚಡ್ಡಾಗೆ ಪ್ರಶ್ನೆ

    Bhagwant Maan

    ಹೌದು ಭಗವಂತ್ ಮಾನ್ ಅವರ ಮದುವೆ ಸಮಾರಂಭದಲ್ಲಿ ಅತಿಥಿಗಳಿಗಾಗಿ ಕರಾಹಿ ಪನೀರ್, ತಂದೂರಿ ಕುಲ್ಚಾ, ದಾಲ್ ಮಖಾನಿ, ನವರತನ್ ಬಿರಿಯಾನಿ, ಮೌಸಮಿ ಸಬ್ಜಿಯಾನ್, ಏಪ್ರಿಕಾಟ್ ಸ್ಟಫ್ಡ್ ಕೋಫ್ತಾ, ಲಸಾಗ್ನಾ ಸಿಸಿಲಿಯಾನೋ ಮತ್ತು ಬಿರಿಯಾನಿ ರೈತಾ ಸೇರಿದಂತೆ ಭಾರತೀಯ ಮತ್ತು ಇಟಾಲಿಯನ್ ಫುಡ್‍ಗಳನ್ನು ಮಾಡಿಸಲಾಗಿದೆ. ಇದನ್ನೂ ಓದಿ: ನಾಳೆ ಪಂಜಾಬ್ ಸಿಎಂ 2ನೇ ಮದುವೆ – ಮತ್ತೆ ಹಸೆಮಣೆ ಏರಲಿದ್ದಾರೆ ಭಗವಂತ್ ಮಾನ್

    ಇನ್ನೂ ಸಿಹಿ ತಿಂಡಿ ವಿಚಾರಕ್ಕೆ ಬಂದರೆ ಫ್ರೆಶ್ ಫ್ರೂಟ್ ಟ್ರಫಲ್, ಮೂಂಗ್ ದಾಲ್ ಹಲ್ವಾ, ಶಾಹಿ ತುಕ್ಡಾ, ಅಂಗೂರಿ ರಸಮಲೈ ಮತ್ತು ಡ್ರೈ ಫ್ರೂಟ್ ರಬರಿ, ಬಿಸಿ ಗುಲಾಬ್ ಜಾಮೂನ್‍ನಂತಹ ವಿವಿಧ ಸಿಹಿತಿಂಡಿಗಳಿವೆ ಮತ್ತು ಆರೋಗ್ಯ ಸಮಸ್ಯೆಗೆ ಹೊಂದಿರುವವರಿಗೆ ವಿವಿಧ ರೀತಿಯ ಸಲಾಡ್‍ಗಳ ವ್ಯವಸ್ಥೆಗೊಳಿಸಲಾಗಿದೆ.

    ಸಿಎಂ ನಿವಾಸದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಕೂಡ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]