Tag: Food Recipe

  • ಸಿಹಿಯೊಂದಿಗೆ ಬೆಳಕಿನ ಹಬ್ಬ ಆಚರಿಸೋಣ – ಮನೆಯಲ್ಲೇ ಮಾಡಿ ವಾಲ್ನಟ್ ಬರ್ಫಿ

    ಸಿಹಿಯೊಂದಿಗೆ ಬೆಳಕಿನ ಹಬ್ಬ ಆಚರಿಸೋಣ – ಮನೆಯಲ್ಲೇ ಮಾಡಿ ವಾಲ್ನಟ್ ಬರ್ಫಿ

    ದೀಪಾವಳಿ ಹಬ್ಬ ಬಂತು ಅಂದ್ರೆ ಚಳಿಗಾಲವೂ ಶುರುವಾಯ್ತು ಎಂದೇ ಅರ್ಥ. ಈ ಸಂದರ್ಭದಲ್ಲಿ ಆರೋಗ್ಯ ರಕ್ಷಿಸಿಕೊಳ್ಳುವುದು ತುಂಬಾನೇ ಮುಖ್ಯ. ತಣ್ಣಗಿನ ಈ ದಿನಗಳಲ್ಲಿ ಹೆಚ್ಚಾಗಿ ಒಣ ಹಣ್ಣುಗಳನ್ನು ಸೇವಿಸುವುದರಿಂದ ಚರ್ಮದ ಆರೋಗ್ಯ ಕಾಪಾಡಿಕೊಳ್ಳಬಹುದು. ಪ್ರತಿ ಹಬ್ಬದಲ್ಲೂ ಸಿಹಿ ತಿನಿಸುಗಳೇ ಹೆಚ್ಚು ವಿಶೇಷ. ಬಂಧು-ಬಳಗದವರಿಗೆ ಬಾಯಿ ಸಿಹಿ ಮಾಡಿಸಿ ಹಬ್ಬವನ್ನು ಸಮೃದ್ಧಿಯಿಂದ ಆಚರಣೆ ಮಾಡ್ತಾರೆ. ಈ ಬಾರಿ ಮನೆಯಲ್ಲೇ ಮಾಡಬಹುದಾದ ಸ್ಪೆಷಲ್‌ ವಾಲ್ನಟ್‌ ಬರ್ಫಿ (Walnut Burfi) ಮಾಡೋದು ಹೇಗೆಂದು ಹೇಳಿಕೊಡ್ತಿದ್ದೇವೆ. ಮನೆಯಲ್ಲೇ ಮಾಡಿ ಸವಿದು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ. ಮಾತ್ರವಲ್ಲದೇ ಕುಟುಂಬ, ಸ್ನೇಹಿತರಿಗೂ ಹಂಚಿ ಸಂಬಂಧಗಳನ್ನು ಗಟ್ಟಿಗೊಳಿಸಿ.

    ಬೇಕಾಗುವ ಪದಾರ್ಥಗಳು:
    ಒರಟಾಗಿ ಪುಡಿ ಮಾಡಿದ ವಾಲ್ನಟ್ – 1 ಕಪ್
    ಸಕ್ಕರೆ – 4 ಟೀಸ್ಪೂನ್
    ಹಾಲಿನ ಪುಡಿ – 4 ಟೀಸ್ಪೂನ್
    ಹಾಲು – 4 ಟೀಸ್ಪೂನ್
    ಜಾಯಿಕಾಯಿ ಪುಡಿ – ಚಿಟಿಕೆ
    ತುಪ್ಪ – 4 ಟೀಸ್ಪೂನ್
    ಮಾವಾ – ಕಾಲು ಕಪ್

    ಬೇಕಾಗುವ ಪದಾರ್ಥಗಳು:
    * ಮೊದಲಿಗೆ ಮೈಕ್ರೊವೇವ್ ಸೇಫ್ ಬೌಲ್‌ನಲ್ಲಿ ಮಾವಾ ಮತ್ತು 2 ಟೀಸ್ಪೂನ್ ತುಪ್ಪವನ್ನು ಸೇರಿಸಿ ಮತ್ತು 1 ನಿಮಿಷ ಬಿಸಿ ಮಾಡಿ.
    * ಸಕ್ಕರೆ, ಹಾಲಿನ ಪುಡಿ, ಹಾಲು ಮತ್ತು ಜಾಯಿಕಾಯಿ ಪುಡಿ ಸೇರಿಸಿ ಪಕ್ಕಕ್ಕೆ ಇರಿಸಿ.
    * ಉಳಿದ ತುಪ್ಪವನ್ನು ವಾಲ್ನಟ್‌ಗೆ ಸೇರಿಸಿ 1 ನಿಮಿಷ ಬೆರೆಸಿ. ಅದನ್ನು 2 ನಿಮಿಷಗಳ ಕಾಲ ಹೆಚ್ಚಿನ ತಾಪದಲ್ಲಿ ಬಿಸಿ ಮಾಡಿ.
    * ಮಿಶ್ರಣಕ್ಕೆ ಹಾಲು ಮತ್ತು ಸಕ್ಕರೆ ಮಿಶ್ರಣ ಸೇರಿಸಿ ಮೈಕ್ರೊವೇವ್‌ನಲ್ಲಿ 1 ನಿಮಿಷ ಹೆಚ್ಚಿನ ತಾಪದಲ್ಲಿ ಬಿಸಿ ಮಾಡಿ.
    * ಈಗ ಗ್ರೀಸ್ ಮಾಡಿದ ಪಾತ್ರೆಯಲ್ಲಿ ಈ ಮಿಶ್ರಣವನ್ನು ಹರಡಿ, 1 ಗಂಟೆ ತಣ್ಣಗಾಗಲು ಪಕ್ಕಕ್ಕೆ ಇರಿಸಿ.
    * ನಂತರ ಅದನ್ನು ಚಾಕುವಿನ ಸಹಾಯದಿಂದ ಚೌಕಾಕಾರ ಇಲ್ಲವೇ ನಿಮ್ಮಿಷ್ಟದ ಆಕಾರಕ್ಕೆ ಕತ್ತರಿಸಿಕೊಳ್ಳಿ.
    * ಇದೀಗ ವಾಲ್ನಟ್ ಬರ್ಫಿ ತಯಾರಾಗಿದ್ದು, ಕುಟುಂಬ, ಸ್ನೇಹಿತರಿಗೆ ಹಂಚಿ. ಇದನ್ನೂ ಓದಿ: ನಾಲ್ಕೇ ಪದಾರ್ಥ ಬಳಸಿ ಮಾಡಿ ಸಿಹಿಯಾದ ಚಾಕ್ಲೇಟ್ ಮೈಸೂರ್ ಪಾಕ್

  • ಕೇರಳ ಶೈಲಿಯ ಫಿಶ್ ಫ್ರೈ ಸವಿದರೆ ಮತ್ತೆ ಮತ್ತೆ ಅದೇ ಬೇಕು ಅಂತೀರ

    ಕೇರಳ ಶೈಲಿಯ ಫಿಶ್ ಫ್ರೈ ಸವಿದರೆ ಮತ್ತೆ ಮತ್ತೆ ಅದೇ ಬೇಕು ಅಂತೀರ

    ಕೇರಳ ಅಂದ್ರೆ ಮೀನಿನ ರೆಸಿಪಿಗೆ ಫೇಮಸ್. ಕೇರಳಕ್ಕೆ ಹೋದ ನಾನ್‍ವೆಜ್ ಪ್ರಿಯರು ‘ಫಿಶ್ ಫ್ರೈ’ ತಿನ್ನದೆ ಬರಲ್ಲ. ಆದ್ರೆ ಈ ಕೆರಳ ಶೈಲಿಯ ಫಿಶ್ ತಿನ್ನೋಕೆ ನೀವು ಅಲ್ಲಿಗೇ ಹೋಗಬೇಕಿಲ್ಲ, ಮನೆಯಲ್ಲೇ ಸುಲಭವಾಗಿ ಮಾಡಬಹುದು. ಒಮ್ಮೆ ಅದರ ರುಚಿ ನೋಡಿದ್ರೆ ಮತ್ತೆ ಮತ್ತೆ ಅದೇ ಕೇಳೋದಂತೂ ಖಂಡಿತ. ಅದಕ್ಕೆ ನಾವು ಕೇರಳ ಶೈಲಿಯಲ್ಲಿ ಸಿಂಪಲ್ ಆಗಿ ‘ಫಿಶ್ ಫ್ರೈ’ ಮಾಡುವುದು ಹೇಗೆ ಎಂದು ಹೇಳಿಕೊಡುತ್ತಿದ್ದೇವೆ.

    ಬೇಕಾಗಿರುವ ಸಾಮಾಗ್ರಿಗಳು:
    * ಅವೊಲಿ ಮೀನು – 1
    * ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    * ಮೆಣಸಿನ ಪುಡಿ – 1 ಟೀಸ್ಪೂನ್
    * ಅರಿಶಿನ ಪುಡಿ – ಅರ್ಧ ಟೀಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ನಿಂಬೆ ರಸ – 2 ಟೀಸ್ಪೂನ್
    * ಕರಿಬೇವು – 10 ರಿಂದ 15 ಎಲೆಗಳು
    * ಎಣ್ಣೆ – ಅರ್ಧ ಕಪ್
    * ನಿಂಬೆ ಹೋಳು – 2
    * ಕಟ್ ಮಾಡಿದ ಈರುಳ್ಳಿ – 1 ಕಪ್

    ಮಾಡುವ ವಿಧಾನ:
    * ಮೀನುಗಳನ್ನು ಸ್ವಚ್ಛಗೊಳಿಸಿ, ಅದರ ಎರಡೂ ಬದಿಗಳನ್ನು ಕಟ್ ಮಾಡಿ.
    * ಕೆಂಪು ಮೆಣಸಿನ ಪುಡಿ, ಮೆಣಸಿನ ಪುಡಿ, ಅರಿಶಿನ ಪುಡಿ, ಉಪ್ಪು ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡುವ ಮೂಲಕ ಮಸಾಲಾವನ್ನು ತಯಾರಿಸಿ.
    * ಎರಡೂ ಬದಿಗಳಲ್ಲಿ ಮೀನಿನ ಮಸಾಲಾವನ್ನು ಸಮವಾಗಿ ಲೇಪಿಸಿ, 30 ನಿಮಿಷಗಳ ಕಾಲ ಮಸಾಲಾ ಜೊತೆಗೆ ಬಿಡಿ.
    * ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಕರಿಬೇವಿನ ಎಲೆಗಳನ್ನು ಹಾಕಿ. ನಂತರ ಮಸಾಲಾ ಮೀನನ್ನು ಮಧ್ಯಮ ಉರಿಯಲ್ಲಿ ಫ್ರೈ(ಕಡಿಮೆ ಎಣ್ಣೆಯನ್ನು ಬಳಸಿ) ಮಾಡಿ.
    * ಅದು ಚೆನ್ನಾಗಿ ಸುಟ್ಟು, ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ ತದನಂತರ ಇನ್ನೊಂದು ಬದಿ ಬೇಯಿಸಲು ತಿರುಗಿಸಿ.
    * ಕೊನೆಗೆ ಕರಿದ ಮೀನಿನ ಫ್ರೈ ಮೇಲೆ ಪೇಪರ್ ಪೌಡರ್, ನಿಂಬೆ ರಸ ಮತ್ತು ಈರುಳ್ಳಿ ಹಾಕಿ ಬಡಿಸಿ.

  • ಯಾವುದೇ ಹಬ್ಬಕ್ಕೆ ಮನೆಯಲ್ಲೇ ಮಾಡಿ ಸಿಹಿಯಾದ, ರುಚಿಯಾದ ಎರಿಯಪ್ಪ

    ಯಾವುದೇ ಹಬ್ಬಕ್ಕೆ ಮನೆಯಲ್ಲೇ ಮಾಡಿ ಸಿಹಿಯಾದ, ರುಚಿಯಾದ ಎರಿಯಪ್ಪ

    ದಸರಾ ಹಬ್ಬದ ಸಂಭ್ರಮ ಎಲ್ಲಡೆ ಮನೆಮಾಡಿದೆ. ಹಬ್ಬ ಎಂದರೆ ನೆನಪಾಗೋದು, ಸಂಭ್ರಮ, ಉಡುಗೆ-ತೊಡುಗೆ ಜೊತೆಗೆ ಸಿಹಿತಿಂಡಿಗಳು. ಅಮ್ಮ ಮಾಡೋ ವಿವಿಧ ತರಹದ ಸ್ವೀಟ್‍ಗಳು ಎಲ್ಲರ ಫೇವರೆಟ್. ಇದು ದಸರಾಗೆ ಮಾತ್ರವಲ್ಲ ಯಾವುದೇ ಹಬ್ಬದಲ್ಲೂ ಮನೆಯಲ್ಲೇ ರುಚಿರುಚಿಯಾಗಿ ಮಾಡಿ ಸವಿಯಬಹುದು. ನಾವಿಂದು ಎರಿಯಪ್ಪ ಮಾಡುವ ವಿಧಾನವನ್ನು ಹೇಳಿಕೊಡ್ತಿವಿ ನೋಡಿ, ಎಲ್ಲರಿಗೂ ಇಷ್ಟವಾಗೋದ್ರಲ್ಲಿ ಡೌಟೇ ಇಲ್ಲ. ಈ ವರ್ಷದ ಹಬ್ಬವನ್ನ ನೀವು ಈ ಸಿಹಿ ತಿಂಡಿ ಜೊತೆಗೆ ವಿಶೇಷವಾಗಿ ಆಚರಿಸಬಹುದಾಗಿದೆ.


    ಬೇಕಾಗುವ ಸಾಮಗ್ರಿಗಳು:
    * ಅಕ್ಕಿ – 1 ಕಪ್
    * ಕಾಯಿತುರಿ- ಅರ್ಧ ಕಪ್
    * ಬೆಲ್ಲದ- 1 ಕಪ್,
    * ಉಪ್ಪು- ಸ್ವಲ್ಪ
    * ಗಸಗಸೆ- 1 ಟೀ ಚಮಚ
    * ಏಲಕ್ಕಿ ಪುಡಿ-1 ಟೀ ಚಮಚ,
    * ಅಡುಗೆ ಎಣ್ಣೆ- 2ಕಪ್

    ಮಾಡುವ ವಿಧಾನ:
    * ಅಕ್ಕಿಯನ್ನು 4-5 ಗಂಟೆಗಳ ಕಾಲ ನೆನೆ ಹಾಕಿ. ನಂತರ ಅಕ್ಕಿಯ ಜೊತೆಗೆ ತೆಂಗಿನತುರಿ, ಬೆಲ್ಲದ ಪುಡಿ, ಉಪ್ಪು ಮತ್ತು ಅರ್ಧ ಕಪ್ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

    * ರುಬ್ಬಿದ ಮಿಶ್ರಣ ದೋಸೆ ಹಿಟ್ಟಿನ ಹದಕ್ಕೆ ಇರಲಿ. ಹಿಟ್ಟಿಗೆ ಗಸಗಸೆ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ.

    * ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಕಾದ ಎಣ್ಣೆಗೆ ಚಿಕ್ಕ ಸೌಟಿನಲ್ಲಿ 1 ಸೌಟು ಹಿಟ್ಟನ್ನು ಹಾಕಿ.
    * ಈ ಮಿಶ್ರಣ ಹಿಟ್ಟು ಕಜ್ಜಾಯದ ರೀತಿಯಲ್ಲಿ ಎಣ್ಣೆಯಿಂದ ಮೇಲಕ್ಕೆ ತೇಲಿಕೊಂಡು ಬರುತ್ತದೆ. ಎರಡೂ ಬದಿಯನ್ನೂ ಕೆಂಬಣ್ಣ ಬರುವಂತೆ ಬೇಯಿಸಿ. ಇದನ್ನೂ ಓದಿ: ಹಬ್ಬಕ್ಕೆ ಮಾಡಲು ಮರೆಯದಿರಿ ಸಿಹಿಯಾದ ಬಾಸುಂದಿ

    * ಈಗ ರುಚಿಕರವಾದ ಎರಿಯಪ್ಪ ಸವಿಯಲು ಸಿದ್ಧವಾಗುತ್ತದೆ. ನೀವು ಇದನ್ನು ತುಪ್ಪದ ಜೊತೆಗೆ ತಿಂದರೆ ಇನ್ನಷ್ಟು ರುಚಿಯಾಗಿರುತ್ತದೆ.

  • ಆರೋಗ್ಯಕರ ಮೆಕ್ಕೆ ಜೋಳದ ಇಡ್ಲಿ ಮಾಡಿ ಸವಿಯಿರಿ

    ಆರೋಗ್ಯಕರ ಮೆಕ್ಕೆ ಜೋಳದ ಇಡ್ಲಿ ಮಾಡಿ ಸವಿಯಿರಿ

    ವಾರದಲ್ಲೊಮ್ಮೆಯಾದ್ರೂ ಮನೆಯಲ್ಲಿ ಇಡ್ಲಿ ಮಾಡುತ್ತೇವೆ. ಇಡ್ಲಿಯಲ್ಲಿ (Mekke Jowar Idli) ಹಲವಾರು ವಿಧಗಳಿವೆ. ರವೆ ಇಡ್ಲಿ, ಬಾಳೆ ಹಣ್ಣಿನ ಇಡ್ಲಿ, ಅಕ್ಕಿ ಇಡ್ಲಿ ಹೀಗೆ. ಆದ್ರೆ ಮೆಕ್ಕೆ ಜೋಳದ ಇಡ್ಲಿ ಹೆಚ್ಚು ವಿಶೇಷ. ಮೆಕ್ಕೆ ಜೋಳದಲ್ಲಿ ಹೆಚ್ಚಿನ ಪ್ರೊಟೀನ್ ಮತ್ತು ಪೋಷಕಾಂಶಗಳಿದ್ದು, ಇದು ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು ಕೂಡ.

    mekke jowar idli

    ಬೇಕಾಗುವ ಸಾಮಗ್ರಿಗಳು:
    * ಮೆಕ್ಕೆ ಜೋಳ -2 ಕಪ್
    * ಉದ್ದಿನ ಬೇಳೆ – ಅರ್ಧ ಕಪ್
    * ಹುರಿದ ಕಡ್ಲೆಬೇಳೆ- 2 ಚಮಚ
    * ಇಂಗು -ಅರ್ಧ ಚಮಚ
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಅಡುಗೆ ಎಣ್ಣೆ- ಅರ್ಧ ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಹಸಿ ಮೆಣಸು – ಐದು
    * ತುರಿದ ತೆಂಗಿನಕಾಯಿ- ಅರ್ಧ ಚಮಚ
    * ಸಾಸಿವೆ- ಒಂದು ಚಮಚ

    ಮಾಡುವ ವಿಧಾನ:
    * ಮೆಕ್ಕೆಜೋಳ, ಉದ್ದಿನ ಬೇಳೆಗಳನ್ನು ಸುಮಾರು ಎರಡರಿಂದ 3 ಗಂಟೆಗಳ ಕಾಲ ನೆನೆಸಿಡಿ. ಬಳಿಕ ನೀರನ್ನು ಚೆನ್ನಾಗಿ ಸೋಸಿ ಹುರಿದ ಕಡಲೆ ಬೇಳೆ ಮತ್ತು ಹಸಿಮೆಣಸಿಕಾಯಿಯೊಂದಿಗೆ ಚೆನ್ನಾಗಿ ರುಬ್ಬಿಕೊಳ್ಳಬೇಕು.
    * ಇಡ್ಲಿಯ ಹಿಟ್ಟಿನ ಹದಕ್ಕೆ ಬರುವವರೆಗೂ ನುಣ್ಣಗೆ ರುಬ್ಬಿ ಇಟ್ಟುಕೊಳ್ಳಿ.

    * ಈಗ ತೆಂಗಿನ ತುರಿ, ಉಪ್ಪು ಹಾಕಿ ಚನ್ನಾಗಿ ಕಲಸಿ. ಒಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಎಣ್ಣೆ ಕಾದ ನಂತರ ಸಾಸಿವೆ ಹಾಕಿ ಸಿಡಿಸಿ, ಇಂಗು ಸೇರಿಸಿ ಒಗ್ಗರಣೆ ಮಾಡಿಕೊಳ್ಳಿ. ಇದನ್ನೂ ಓದಿ:  ಕಡಿಮೆ ಸಾಮಾಗ್ರಿ ಬಳಸಿ ಈರುಳ್ಳಿ ಚಟ್ನಿ ಮಾಡಿ
    * ಈ ಒಗ್ಗರಣೆಗೆ ರುಬ್ಬಿದ ಹಿಟ್ಟನ್ನು ಹಾಕಿ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಕಲಸಿ. ಎಲ್ಲವೂ ಚೆನ್ನಾಗಿ ಮಿಶ್ರವಾಗುವ ರೀತಿ ಕಲಸಿ. ಈ ಹಿಟ್ಟನ್ನು ಇಡ್ಲಿ ಪಾತ್ರೆಯಲ್ಲಿ ಹಾಕಿ ಬೇಯಿಸಿದರೆ ಮೆಕ್ಕೆ ಜೋಳದ ಇಡ್ಲಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ

  • ರುಚಿ ರುಚಿಯಾದ ಹರಿಯಾಲಿ ಮಟನ್ ಗ್ರೇವಿ ಮಾಡಿ ಬಾಯಿ ಚಪ್ಪರಿಸಿ

    ರುಚಿ ರುಚಿಯಾದ ಹರಿಯಾಲಿ ಮಟನ್ ಗ್ರೇವಿ ಮಾಡಿ ಬಾಯಿ ಚಪ್ಪರಿಸಿ

    ರುಚಿಯಾದ ಆಹಾರ (Food) ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ.. ಪ್ರತಿದಿನ ಚಿಕನ್‌ ಕಬಾಬ್‌, ಫಿಶ್‌ ಇವುಗಳನ್ನೇ ತಿಂದು ಬೇಸರ ಅನಿಸಿದ್ರೆ ಹೊಸದೇನಾದ್ರೂ ಟ್ರೈ ಮಾಡ್ಲೇಬೇಕಲ್ವಾ? ಅದ್ರಲ್ಲೂ ಮಾಂಸಾಹಾರ (Nonveg) ಪ್ರಿಯರಿಗೆ ಬಾಡೂಟ ಅಂದ್ರೆ ಬಾಯಲ್ಲಿ ನೀರೂರಿಸುತ್ತೆ. ಅತಿಥಿಗಳು ಬಂದಾಗ ಅಥವಾ ನಾಲಿಗೆ ರುಚಿಯಾದ ಆಹಾರ ತಿನ್ನಲು ಬಯಸಿದಾಗ, ನೀವೂ ಮನೆಯಲ್ಲಿ ಸುಲಭ ವಿಧಾನಗಳ ಮೂಲಕ ಹರಿಯಾಲಿ ಮಟನ್ ಗ್ರೇವಿ (Hariyali Mutton Recipe) ತಯಾರಿಸಬಹುದಾಗಿದೆ. ಅದರ ಸಿಂಪಲ್‌ ಟಿಪ್ಸ್‌ ಇಲ್ಲಿದೆ…

    ಬೇಕಾಗುವ ಸಾಮಗ್ರಿಗಳು:
    * ಮಟನ್- 1 ಕೆಜಿ
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಹಸಿ ಮೆಣಸಿನಕಾಯಿ- 3
    * ಈರುಳ್ಳಿ- 1
    * ಶುಂಠಿ-ಬೆಳ್ಳುಳ್ಳಿ- ಪೇಸ್ಟ್
    * ಗೋಡಂಬಿ- 6-7
    * ಚಕ್ಕೆ-1
    * ಜೀರಿಗೆ ಪುಡಿ- 1 ಚಮಚ
    * ದನಿಯಾ ಪೌಡರ್-2 ಚಮಚ
    * ರುಚಿಗೆ ತಕ್ಕ ಉಪ್ಪು
    * ಎಣ್ಣೆ – ಅರ್ಧ ಕಪ್

    ಮಾಡುವ ವಿಧಾನ:
    * ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಈರುಳ್ಳಿ, ಗೋಡಂಬಿ, ಚಕ್ಕೆ, ಲವಂಗ, ಕರಿ ಮೆಣಸು ಹಾಕಿ ಪೇಸ್ಟ್ ಮಾಡಿಕೊಳ್ಳಿ.

    * ಪಾತ್ರೆಯಲ್ಲಿ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ, ಈಗಾಗಲೇ ತಯಾರು ಮಾಡಿದ ಮಿಶ್ರಣದ ಪೇಸ್ಟ್ ಹಾಕಿ ಚೆನ್ನಾಗಿ ಬೇಯಿಸಬೇಕು.

    * ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಜೀರಿಗೆ, ದನಿಯಾ ಪೌಡರ್, ಜೀರಿಗೆ ಪುಡಿ ಹಾಗೂ ರುಬ್ಬಿದ ಕೊತ್ತಂಬರಿ ಸೊಪ್ಪಿನ ಪೇಸ್ಟ್ ಹಾಕಿ ಸ್ವಲ್ಪ ಬೇಯಿಸಿಕೊಳ್ಳಿ.

    * ನೀರು ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಮಟನ್ ಹಾಕಿ ಪಾತ್ರೆಯ ಬಾಯಿ ಮುಚ್ಚಿ ಅರ್ಧ ಗಂಟೆ ಬೇಯಿಸಿದರೆ ರುಚಿಯಾದ ಹರಿಯಾಲಿ ಮಟನ್ ಸವಿಯಲು ಸಿದ್ಧವಾಗುತ್ತದೆ.

  • ಟೇಸ್ಟಿ ಚೈನೀಸ್‌ ಪಾಸ್ತಾ ಮಂಚೂರಿಯನ್‌ ನೀವೂ ಟ್ರೈ ಮಾಡಿ

    ಟೇಸ್ಟಿ ಚೈನೀಸ್‌ ಪಾಸ್ತಾ ಮಂಚೂರಿಯನ್‌ ನೀವೂ ಟ್ರೈ ಮಾಡಿ

    ಪಾಸ್ತಾ ಅಂತಾ ಹೇಳಿದ್ರೆ ಎಲ್ಲರಿಗೂ ಇಷ್ಟ. ಇತ್ತೀಚಿನ ಮಕ್ಕಳಂತೂ ಪಾಸ್ತಾದ ಹೆಸರು ಕೇಳಿದ ಕೂಡಲೇ ಬಾಯಲ್ಲಿ ನೀರೂರಿಸುತ್ತಾರೆ. ಪಾಸ್ತಾದಲ್ಲೂ (Pasta) ವಿಧವಿಧವಾದ ರೆಸಿಪಿಗಳಿವೆ. ವೈಟ್‌ ಸಾಸ್‌ ಪಾಸ್ತಾ, ರೆಡ್‌ ಸಾಸ್‌ ಪಾಸ್ತಾ ಅಂತಾ ಹಲವು ವೆರೈಟಿಗಳಿವೆ. ಸಾಸೇಜ್‌ ರೀತಿಯ ಪಾಸ್ತಾವನ್ನು ಇಷ್ಟಪಡುವವರಿಗೆ ಇಲ್ಲಿದೆ ಚೈನೀಸ್‌ ಪಾಸ್ತಾ ಮಂಚೂರಿಯನ್‌ (Chinese Pasta Manchurian). ಇದನ್ನು ಒಮ್ಮೆ ತಿಂದ್ರೆ ಮತ್ತೆ ಮತ್ತೆ ತಿನ್ಬೇಕು ಅನ್ಸೋದಂತು ಪಕ್ಕಾ. ಹೌದು, ನಾವಿವತ್ತು ಚೈನೀಸ್‌ ಪಾಸ್ತಾ ಮಂಚೂರಿಯನ್‌ ಮಾಡೋದು ಹೇಗೆ ಅಂತಾ ಹೇಳ್ಕೊಡ್ತೀವಿ..

    ಬೇಕಾಗಿರುವ ಸಾಮಾಗ್ರಿಗಳು:
    ಪಾಸ್ತಾ – 1½ ಕಪ್
    ಮೈದಾ – ¾ ಕಪ್
    ಕಾರ್ನ್ ಹಿಟ್ಟು – 1 ½ ಕಪ್
    ಮೆಣಸಿನ ಪುಡಿ – 1 ಟೀಸ್ಪೂನ್
    ಉಪ್ಪು
    ಎಣ್ಣೆ
    ಹಸಿಮೆಣಸು – 2
    ಬೆಳ್ಳುಳ್ಳಿ – 2 ಎಸಳು
    ಶುಂಠಿ
    ಈರುಳ್ಳಿ – ½
    ಕ್ಯಾಪ್ಸಿಕಂ – ½
    ಟೊಮೆಟೊ ಸಾಸ್ – 2 ಚಮಚ
    ವಿನೆಗರ್ – 2 ಟೀಸ್ಪೂನ್
    ಸೋಯಾ ಸಾಸ್ – 2 ಟೀಸ್ಪೂನ್
    ಕಾಳುಮೆಣಸಿನ ಪುಡಿ – ½ ಟೀಸ್ಪೂನ್
    ಮೆಣಸಿನ ಪುಡಿ – ½ ಟೀಸ್ಪೂನ್
    ಎಲೆಕೋಸು – ½ ಕಪ್‌
    ಕ್ಯಾರೆಟ್ – ½ ಕಪ್‌
    ಸ್ಪ್ರಿಂಗ್ ಆನಿಯನ್‌ – ಸ್ವಲ್ಪ

    ಮಾಡುವ ವಿಧಾನ:
    ಮೊದಲನೆಯದಾಗಿ ಒಂದು ದೊಡ್ಡ ಪಾತ್ರೆಯಲ್ಲಿ ನೀರು ತೆಗೆದುಕೊಂಡು 1 ಟೀಸ್ಪೂನ್ ಉಪ್ಪು ಸೇರಿಸಿ ಪಾಸ್ತಾವನ್ನು 4 ನಿಮಿಷ ಕುದಿಸಬೇಕು. ಪಾಸ್ತಾ ಸರಿಯಾಗಿ ಬೆಂದ ಬಳಿಕ ನೀರನ್ನು ಬಸಿದು ತಣ್ಣೀರಿನಿಂದ ಪಾಸ್ತಾವನ್ನು ತೊಳೆಯಬೇಕು.

    ನಂತರ ಒಂದು ದೊಡ್ಡ ಬಟ್ಟಲಿನಲ್ಲಿ ¾ ಕಪ್ ಮೈದಾ, ½ ಕಪ್ ಕಾರ್ನ್ ಹಿಟ್ಟು, 1 ಟೀಸ್ಪೂನ್ ಮೆಣಸಿನ ಪುಡಿ ಮತ್ತು ½ ಟೀಸ್ಪೂನ್ ಉಪ್ಪು ತೆಗೆದುಕೊಳ್ಳಬೇಕು. ಇದಕ್ಕೆ ಅಗತ್ಯವಿರುವಷ್ಟು ನೀರು ಸೇರಿಸಿ, ಹಿಟ್ಟು ಗಂಟು ಕಟ್ಟದಂತೆ ನೋಡಿಕೊಳ್ಳಬೇಕು. ಬಳಿಕ ಬೇಯಿಸಿದ ಪಾಸ್ತಾವನ್ನು ಬ್ಯಾಟರ್‌ಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು.

    ನಂತರ ಸ್ಟವ್‌ ಅನ್ನು ಮಧ್ಯಮ ಉರಿಯಲ್ಲಿಟ್ಟು ಪಾಸ್ತಾವನ್ನು ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಬೇಕು. ಪಾಸ್ತಾ ಚಿನ್ನದ ಬಣ್ಣಕ್ಕೆ ತಿರುಗುವವರೆಗೆ ಎಣ್ಣೆಯಲ್ಲಿ ಹುರಿಯಬೇಕು. ಈಗ ಹುರಿದ ಪಾಸ್ತಾವನ್ನು ತೆಗೆದು ಪಕ್ಕಕ್ಕೆ ಇಟ್ಟುಕೊಳ್ಳಿ.

    ಇನ್ನು ಒಂದು ದೊಡ್ಡ ಬಾಣಲೆಯಲ್ಲಿ 2 ಟೇಬಲ್‌ಸ್ಪೂನ್‌ ಎಣ್ಣೆ ಬಿಸಿ ಮಾಡಿ ಅದಕ್ಕೆ 2 ಸಣ್ಣಗೆ ಹೆಚ್ಚಿಕೊಂಡ ಹಸಿ ಮೆಣಸು, ಹೆಚ್ಚಿಕೊಂಡ 2 ಬೆಳ್ಳುಳ್ಳಿ ಎಸಳು ಹಾಗೂ ಶುಂಠಿಯನ್ನು ಸೇರಿಸಿ ಚೆನ್ನಾಗಿ ಹುರಿಯಬೇಕು. ನಂತರ ಹೆಚ್ಚಿಕೊಂಡ ½ ಈರುಳ್ಳಿ, ½ ಕ್ಯಾಪ್ಸಿಕಂ ಸೇರಿಸಿ ಚೆನ್ನಾಗಿ ಫ್ರೈ ಮಾಡಬೇಕು. ಇದಕ್ಕೆ 2 ಟೇಬಲ್‌ಸ್ಪೂನ್‌ ಟೊಮೆಟೊ ಸಾಸ್, 2 ಟೇಬಲ್‌ಸ್ಪೂನ್‌ ವಿನೆಗರ್, 2 ಟೇಬಲ್‌ಸ್ಪೂನ್‌ ಸೋಯಾ ಸಾಸ್, ½ ಟೀಸ್ಪೂನ್ ಮೆಣಸಿನ ಪುಡಿ, ½ ಟೀಸ್ಪೂನ್ ಮೆಣಸಿನ ಪುಡಿ ಮತ್ತು ¼ ಟೀಸ್ಪೂನ್ ಉಪ್ಪು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಬೇಕು.

    ಮುಂದೆ ಸ್ಲರಿ ತಯಾರಿಸಲು, 1 ಚಮಚ ಕಾರ್ನ್ ಫ್ಲೋರ್ ಅನ್ನು ಅರ್ಧ ಕಪ್ ನೀರಿನಲ್ಲಿ ಮಿಶ್ರಣ ಮಾಡಬೇಕು. ಸ್ಲರಿ ಹೊಳಪು ಬರುವವರೆಗೆ ಬೇಯಿಸಿಕೊಳ್ಳಬೇಕು. ನಂತರ ಹುರಿದ ಪಾಸ್ತಾ, ಹೆಚ್ಚಿಕೊಂಡ ಎಲೆಕೋಸು, ½ ಕ್ಯಾರೆಟ್ ಮತ್ತು ಸ್ಪಲ್ಪ ಸ್ಪ್ರಿಂಗ್ ಆನಿಯನ್ ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಬೇಕು. ಇದಕ್ಕೆ ವೃತ್ತಾಕಾರವಾಗಿ ಕತ್ತರಿಸಿದ ಈರುಳ್ಳಿ ಹಾಗೂ ಸ್ಪ್ರಿಂಗ್ ಆನಿಯನ್‌ ಹಾಕಿ ಅಲಂಕರಿಸಬಹುದು. ಈಗ ಟೇಸ್ಟಿ ಹಾಗೂ ಸ್ಪೈಸಿ ಚೈನೀಸ್‌ ಪಾಸ್ತಾ ಮಂಚೂರಿಯನ್ನು ಸವಿಯಲು ರೆಡಿ.

  • 20 ನಿಮಿಷದಲ್ಲೇ ಮಾಡ್ಬೋದು 7 ಲೇಯರ್‌ನ ಚಿಕನ್ ಟಾಕೋ – ತರಕಾರಿ ಇದ್ರೂ ಮಕ್ಕಳು ಇಷ್ಟಪಟ್ಟು ಸವೀತಾರೆ

    20 ನಿಮಿಷದಲ್ಲೇ ಮಾಡ್ಬೋದು 7 ಲೇಯರ್‌ನ ಚಿಕನ್ ಟಾಕೋ – ತರಕಾರಿ ಇದ್ರೂ ಮಕ್ಕಳು ಇಷ್ಟಪಟ್ಟು ಸವೀತಾರೆ

    ಆರೋಗ್ಯಕರ ತರಕಾರಿಗಳನ್ನು ಮಕ್ಕಳಿಗೆ ತಿನ್ನಿಸುವ ಕಷ್ಟ ತಾಯಂದಿರಿಗೇ ಗೊತ್ತು. ತರಕಾರಿಗಳನ್ನ ಅಡಗಿಸಿ ಬೇರೆ ಬೇರೆ ರೆಸಿಪಿಗಳನ್ನು ಮಾಡಿ ಮಕ್ಕಳಿಗೆ ತಿನ್ನಿಸುವ ಹೊತ್ತಿಗೆ ದಿನಕಳೆದಿರುತ್ತೆ. ಆದ್ರೆ ನಾವಿಂದು ಹೇಳಿಕೊಡುತ್ತಿರೋ ರೆಸಿಪಿ ಈ ಒಂದು ಸಮಸ್ಯೆಗೆ ಖಂಡಿತಾ ಪರಿಹಾರವಾಗುತ್ತೆ. ಕೇವಲ 20 ನಿಮಿಷಗಳಲ್ಲಿ ಮಾಡಬಹುದಾದ 7 ಲೇಯರ್ ಚಿಕನ್ ಟಾಕೋ (7 Layer Chicken Taco) ಮನೆಯಲ್ಲೇ ಟ್ರೈ ಮಾಡಬಹುದು. ನೀವು ಮಕ್ಕಳಿಗೆ ತಿನ್ನಸಬೇಕೆಂದಿರೋ ತರಕಾರಿಗಳನ್ನೂ ಇದರಲ್ಲಿ ಅಡಗಿಸಿ ನೀಡಿ. ಮಕ್ಕಳು ಇದನ್ನು ಖಂಡಿತವಾಗಿಯೂ ಕಣ್ಣು ಮುಚ್ಚಿ ನಾಲಿಗೆ ಚಪ್ಪರಿಸಿಕೊಂಡು ಸವಿಯುತ್ತಾರೆ. ಈ ಚಿಕನ್ ಟಾಕೋ ಹೇಗೆ ಮಾಡೋದು ಎಂಬುದನ್ನು ನೋಡೋಣ…

    Chicken Taco

    ಬೇಕಾಗುವ ಪದಾರ್ಥಗಳು:
    ಬೇಯಿಸಿದ ಚಿಕನ್ ಬ್ರೆಸ್ಟ್ – 4 (ಮೂಳೆ ರಹಿತ)
    ಹಸಿರು ಮೆಣಸಿನಕಾಯಿ – 1
    ಜೇನುತುಪ್ಪ – ಕಾಲು ಕಪ್
    ಹುಳಿ ಕ್ರೀಮ್ – 1 ಕಪ್
    ಕರಿ ಮೆಣಸಿನಪುಡಿ – ಅರ್ಧ ಟೀಸ್ಪೂನ್
    ಗಟ್ಟಿಯಾದ ಟಾಕೋ ಶೆಲ್‌ಗಳು – 10
    ಫ್ರೈ ಮಾಡಿದ ಬೀನ್ಸ್ – ಮುಕ್ಕಾಲು ಕಪ್ (ಸೌತೆಕಾಯಿ, ಕುಂಬಳಕಾಯಿ, ಪಾಲಕ್ ಸೊಪ್ಪು, ಕ್ಯಾಬೇಜ್, ಹುರುಳಿ ಹೀಗೆ ಹಲವು ಬೇಯಿಸಿದ ತರಕಾರಿಗಳನ್ನೂ ನೀವಿದರಲ್ಲಿ ಸೇರಿಸಬಹುದು)
    ತುರಿದ ಚೀಸ್ – ಅರ್ಧ ಕಪ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – ಕಾಲು ಕಪ್
    ಸಣ್ಣಗೆ ಹೆಚ್ಚಿದ ಟೊಮೆಟೊ – 2
    ಸಣ್ಣಗೆ ಕತ್ತರಿಸಿದ ಆವಕಾಡೋ – 1

    Chicken Taco 1ಮಾಡುವ ವಿಧಾನ:
    * ಮೊದಲಿಗೆ ಓವನ್ ಅನ್ನು 350 ಡಿಗ್ರಿಗಳಿಗೆ ಪೂರ್ವಭಾವಿಯಾಗಿ ಕಾಯಿಸಿಕೊಳ್ಳಿ.
    * ಬೇಯಿಸಿದ ಚಿಕನ್ ಬ್ರೆಸ್ಟ್ ಅನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿಟ್ಟಿರಿ.
    * ಒಂದು ಬಟ್ಟಲಿನಲ್ಲಿ ಚೂರು ಮಾಡಿದ ಚಿಕನ್, ಹಸಿರು ಮೆಣಸಿನಕಾಯಿ, ಜೇನುತುಪ್ಪ, ಹುಳಿ ಕ್ರೀಮ್ ಮತ್ತು ಕರಿ ಮೆಣಸಿನಪುಡಿ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಬೇಕಿಂಗ್ ಪ್ಯಾನ್ ತೆಗೆದುಕೊಂಡು, ಅದರಲ್ಲಿ ಟಾಕೋ ಶೆಲ್‌ಗಳನ್ನು ಇರಿಸಿ. ಪ್ರತಿ ಶೆಲ್‌ಗಳಲ್ಲಿ ಒಂದೊಂದು ಟೀಸ್ಪೂನ್‌ಗಳಷ್ಟು ಹೆಚ್ಚಿ, ಬೇಯಿಸಿದ ತರಕಾರಿಗಳನ್ನು ಹರಡಿ.
    * ಈಗ ತರಕಾರಿ ಮೇಲೆ ಚಿಕನ್ ಮಿಶ್ರಣವನ್ನು ಟಾಕೋ ಶೆಲ್‌ನ ಮುಕ್ಕಾಲು ಭಾಗದವರೆಗೆ ಬರುವಷ್ಟು ತುಂಬಿಕೊಳ್ಳಿ.
    * ಈಗ ಅದರ ಮೇಲೆ ಚೀಸ್ ಅನ್ನು ಸಿಂಪಡಿಸಿ.
    * ಬಳಿಕ ಪ್ಯಾನ್ ಅನ್ನು ಓವನ್‌ನಲ್ಲಿ ಇರಿಸಿ, ಸುಮಾರು 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
    * ಬಳಿಕ ಟಾಕೋಗಳ ಮೇಲೆ ಹುಳಿ ಕ್ರೀಮ್, ಕೊತ್ತಂಬರಿ ಸೊಪ್ಪು, ಟೊಮೆಟೊ ಹಾಗೂ ಆವಕಾಡೋ ಹರಡಿ.
    * ಇದೀಗ 7 ಲೇಯರ್ ಚಿಕನ್ ಟಾಕೋ ತಯಾರಾಗಿದ್ದು, ಇದನ್ನು ಬಿಸಿ ಬಿಸಿಯಾಗಿಯೇ ಸವಿಯಲು ಮಕ್ಕಳಿಗೆ ನೀಡಿ.

  • ನಾಲಿಗೆಯಲ್ಲಿ ನೀರೂರಿಸುವ ಸಿಗಡಿ ಸುಕ್ಕ ಮನೆಯಲ್ಲೇ ಮಾಡಿ ಸವಿಯಿರಿ

    ನಾಲಿಗೆಯಲ್ಲಿ ನೀರೂರಿಸುವ ಸಿಗಡಿ ಸುಕ್ಕ ಮನೆಯಲ್ಲೇ ಮಾಡಿ ಸವಿಯಿರಿ

    ಪ್ರತಿದಿನ ಚಿಕನ್‌.. ಮಟನ್‌ (Chicken Mutton) ತಿಂದು ಬೇಸರ ಆಗಿದ್ಯಾ… ಹೊಸದೇನಾದ್ರೂ ಟ್ರೈ ಮಾಡ್ಬೇಕು ಅಂದ್ಕೊಂಡಿದ್ದೀರಾ… ಅಥವಾ ಸಮಯ ಸಾಕಾಗ್ತಿಲ್ವಾ? ಇನ್ಮುಂದೆ ಯೋಚನೆಯೇ ಮಾಡ್ಬೇಕಾಗಿಲ್ಲ.. ಮನೆಯಲ್ಲೇ ಸಿಂಪಲ್ಲಾಗಿ ಮಾಡಬಹುದಾದ ಸ್ಪೆಷಲ್‌ ಫುಡ್‌ ಬಗ್ಗೆ ನಾವು ನಿಮಗೆ ತಿಳಿಸಿಕೊಡ್ತೇವೆ.. ರುಚಿಯಾದ ಆಹಾರ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅನ್ನದೊಂದಿಗೆ ಸಿಗಡಿ ಸುಕ್ಕ (Prawns Sukka) ಇದ್ರೆ ಎಷ್ಟು ಚಂದ ಅಲ್ವಾ? ರುಚಿಯಾದ ಸಿಗಡಿ ಸುಕ್ಕ ನೀವೂ ಒಮ್ಮೆ ಟ್ರೈ ಮಾಡಿ. ನಿಮ್ಮ ಮನೆ ಮಂದಿ ಇಷ್ಟ ಪಟ್ಟು ಸವಿಯುವುದರಲ್ಲಿ ಯಾವುದೇ ಅನುಮಾನ ಇಲ್ಲ..

    ಬೇಕಾಗುವ ಸಾಮಗ್ರಿಗಳು:
    * ಸಿಗಡಿ- ಅರ್ಧ ಕೆಜಿ
    * ಹಸಿಮೆಣಸು- 2
    * ಈರುಳ್ಳಿ-1
    * ಟೊಮೆಟೊ – 1
    * ತೆಂಗಿನತುರಿ – 1 ಕಪ್
    * ಅಡುಗೆ ಎಣ್ಣೆ- ಅರ್ಧ ಕಪ್
    * ಅರಿಸಿನಪುಡಿ- ಅರ್ಧ ಚಮಚ
    * ಹುಣಸೆಹಣ್ಣು- ಸ್ವಲ್ಪ
    * ನಿಂಬೆಹಣ್ಣಿನ-1
    * ಕರಿಬೇವು- ಸ್ವಲ್ಪ
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ದನಿಯಾ ಪೌಡರ್- ಸ್ವಲ್ಪ

    ಮಾಡುವ ವಿಧಾನ:
    * ಒಂದು ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಕರಿಬೇವು, ತೆಂಗಿನತುರಿ ಸೇರಿಸಿ ಹುರಿದಿಟ್ಟಕೊಳ್ಳಿ.

    * ಬಾಣಲೆಗೆ ಅಡುಗೆ ಎಣ್ಣೆ ಹಾಕಿ ಕರಿಬೇವು, ಈರುಳ್ಳಿ ಹಾಕಿ ಅದನ್ನೂ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ. ಅದಕ್ಕೆ ತೊಳೆದು ಸ್ವಚ್ಛ ಮಾಡಿದ ಸಿಗಡಿ, ರುಚಿಗೆ ತಕ್ಕಷ್ಟು ಉಪ್ಪು, ಅರಿಸಿಣ ಪುಡಿ, ಹಸಿಮೆಣಸು ಹಾಕಿ ಎಲ್ಲವನ್ನೂ ಮಿಶ್ರಣ ಮಾಡಿ ಪಾತ್ರೆಯನ್ನು ಮುಚ್ಚಿ ಬೇಯಿಸಿ.

    * ದನಿಯಾ, ಹುಣಸೆರಸ ಹಾಗೂ ಅಗತ್ಯವಿದ್ದಷ್ಟು ನೀರು ಸೇರಿಸಿ ಮಿಶ್ರಣ ಮಾಡಿ, ಕೊತ್ತಂಬರಿ ಸೊಪ್ಪನ್ನು ಹಾಕಿ ಸುಕ್ಕ ಸ್ವಲ್ಪ ಗಟ್ಟಿಯಾದಾಗ ಅದಕ್ಕೆ ಹುರಿದುಕೊಂಡ ತೆಂಗಿನತುರಿ ಸೇರಿಸಿ ಮಿಶ್ರಣ ಮಾಡಿದರೆ ರುಚಿಯಾದ ಸಿಗಡಿ ಸುಕ್ಕಾ ಸವಿಯಲು ಸಿದ್ಧವಾಗುತ್ತದೆ.

  • ಮನೆಯಲ್ಲೇ ಮಾಡಿ ರುಚಿರುಚಿಯಾದ ಮಂಗಳೂರು ಶೈಲಿಯ ಬನ್ಸ್

    ಮನೆಯಲ್ಲೇ ಮಾಡಿ ರುಚಿರುಚಿಯಾದ ಮಂಗಳೂರು ಶೈಲಿಯ ಬನ್ಸ್

    ಮಂಗಳೂರು ಕಡೆ ಹೋದ್ರೆ ಅಂತೂ ಈ ತಿಂಡಿ ಸ್ಪೆಷಲ್. ಇಲ್ಲಿ ಬೆಳಗ್ಗೆ ಬ್ರೇಕ್ ಫಾಸ್ಟ್ ಗೂ ಇದನ್ನೇ ತಿಂತಾರೆ ಸಂಜೆ ತಿಂಡಿಗೂ ಇದನ್ನೇ ಮಾಡ್ತಾರೆ. ಹೌದು, ಇದೇ ನಮ್ಮ ರುಚಿ ರುಚಿಯಾದ ಮಂಗಳೂರು ಬನ್ಸ್. ಪೂರಿ ಹೋಲಿಕೆಯ ಬನ್ಸ್ ಗೆ ಚಟ್ನಿ ಅಂತೂ ಸೂಪರ್ ಕಾಂಬಿನೇಷನ್. ಈ ಮಂಗಳೂರು ಬನ್ಸ್ ಸುಲಭವಾಗಿ ಮನೆಯಲ್ಲೇ ತಯಾರಿಸುವುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಾದ್ರೆ ತಡ ಮಾಡದೆ ನೀವು ಸಹ ಮನೆಯಲ್ಲೇ ಮಂಗಳೂರು ಶೈಲಿಯ ಬನ್ಸ್ ತಯಾರಿಸಿ.

    ಬೇಕಾಗುವ ಸಾಮಗ್ರಿಗಳು:
    ಬಲಿತ ಬಾಳೆಹಣ್ಣು-2-3
    ಮೈದಾ ಹಿಟ್ಟು – 2 ಕಪ್
    ಸಕ್ಕರೆ-3 ಟೇಬಲ್ ಚಮಚ
    ಜೀರಿಗೆ-1 ಟೀ ಚಮಚ
    ಮೊಸರು- 1/4 ಕಪ್
    ಬೇಕಿಂಗ್ ಸೋಡಾ- ಚಿಟಿಕೆಯಷ್ಟು
    ಉಪ್ಪು-1/2 ಟೀ ಚಮಚ
    ಅಡುಗೆ ಎಣ್ಣೆ- ಕರಿಯಲು ಬೇಕಾಗುವಷ್ಟು

    ಮಾಡುವ ವಿಧಾನ:
    *ಸಿಪ್ಪೆ ತೆಗೆದ ಬಾಳೆಹಣ್ಣುಗಳನ್ನು ಒಂದು ಪಾತ್ರೆಗೆ ಹಾಕಿ ಚಮಚ ಅಥವಾ ಕೈಯಿಂದ ನಯವಾದ ಪೇಸ್ಟ್ ರೀತಿ ಮಾಡಿಕೊಳ್ಳಿ.
    * ಇದಕ್ಕೆ 2 ಟೇಬಲ್ ಚಮಚ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
    * ಬಳಿಕ ಜೀರಿಗೆ ಮತ್ತು ಉಪ್ಪು ಸೇರಿಸಿ. ಇದೇ ಮಿಶ್ರಣಕ್ಕೆ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
    * ಈ ಮಿಶ್ರಣಕ್ಕೆ ಮೈದಾ ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
    * ಹಿಟ್ಟು ಮೃದುವಾಗಲು 5 ನಿಮಿಷ ನಾದಿಕೊಳ್ಳಿ. ಬಳಿಕ ಇದನ್ನು ದೊಡ್ಡ ಉಂಡೆಯನ್ನಾಗಿ ಮಾಡಿ ಅದಕ್ಕೆ ಎಣ್ಣೆ ಹಚ್ಚಿ.
    * ಒಂದು ತೆಳುವಾದ ಬಟ್ಟೆಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ತೊಳೆದು ಹಿಂಡಿಕೊಳ್ಳಿ. ಬಟ್ಟೆಯಲ್ಲಿರುವ ನೀರನ್ನು ಸಂಪೂರ್ಣವಾಗಿ ಹಿಂಡಿಕೊಳ್ಳಿ. ಒದ್ದೆ ಬಟ್ಟೆಯನ್ನು ಹಿಟ್ಟಿನ ಮೇಲೆ ಮುಚ್ಚಿದ ಬಳಿಕ ಅದನ್ನು ಬೆಚ್ಚಗಿನ ಸ್ಥಳದಲ್ಲಿ 8 ಗಂಟೆಗಳ ಕಾಲ ಇಡಿ.
    * 8 ಗಂಟೆಗಳಾದ ಬಳಿಕ ಈ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ.
    * ಉಂಡೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಮೈದಾವನ್ನು ಮೇಲೆ ಹಾಕಿ ಪೂರಿಗಿಂತ ಸ್ವಲ್ಪ ದಪ್ಪವಿರುವಂತೆ ಲಟ್ಟಿಸಿಕೊಳ್ಳಿ.
    * ಬಳಿಕ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ.
    * ಎಣ್ಣೆ ಬಿಸಿಯಾದ ಬಳಿಕ ಲಟ್ಟಿಸಿಕೊಂಡ ಬನ್ಸ್ ಹಾಕಿ ಕಂದು ಬಣ್ಣ ಬರುವ ತನಕ ಕರಿಯಿರಿ.
    * ಬನ್ಸ್ ನ ಎರಡೂ ಬದಿಯನ್ನು ಚೆನ್ನಾಗಿ ಕರಿಯಬೇಕು.
    * ಈಗ ರುಚಿರುಚಿಯಾದ ಮಂಗಳೂರು ಬನ್ಸ್ ಅನ್ನು ಚಟ್ನಿಯೊಂದಿಗೆ ಸವಿಯಿರಿ.

  • ಸಂಡೇ ಸ್ಪೆಷಲ್ – ಫಟಾಫಟ್ ಅಂತಾ ಮಾಡಿ ಹೊಸ‌ ರುಚಿಯ ಫಿಶ್ ಫ್ರೈಡ್‌ರೈಸ್

    ಸಂಡೇ ಸ್ಪೆಷಲ್ – ಫಟಾಫಟ್ ಅಂತಾ ಮಾಡಿ ಹೊಸ‌ ರುಚಿಯ ಫಿಶ್ ಫ್ರೈಡ್‌ರೈಸ್

    ಮಾಂಸಾಹಾರಗಳಲ್ಲಿಯೇ ಅತಿ ಸುರಕ್ಷಿತವಾದ, ಕೊಲೆಸ್ಟ್ರಾಲ್‌ ಇಲ್ಲದ ಮತ್ತು ಪೌಷ್ಟಿಕ ಆಹಾರವೆಂದರೆ ಮೀನು. ಮಧ್ಯಾಹ್ನದ ಊಟ ಕೊಂಚ ಟೇಸ್ಟಿಯಾಗಿರಲು ಎಗ್ ಪ್ರೈಡ್ ರೈಸ್, ಚಿಕನ್ ಪ್ರೈಡ್ ರೈಸ್ (Chicken) Fried Rice ಈಗ ಹಳೆಯದಾಯಿತು. ಅಷ್ಟೇ ಏಕೆ ತೂಕ ಏರುತ್ತದೆಂಬ ಭಯದಿಂದ ಕೆಲವರು ತಿನ್ನುವುದೂ ಇಲ್ಲ. ಹಾಗಾಗಿ ಮಕ್ಕಳಿಗೂ ಹಿರಿಯರಿಗೂ ಹಿಡಿಸುವ, ಅತೀ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಮೀನಿನ ಪ್ರೈಡ್ ರೈಸ್ (Fish Fried Rice) ಮಾಡುವ ವಿಧಾನ ಇಲ್ಲಿದೆ. ಇದಕ್ಕಾಗಿ ಅಗತ್ಯವಾಗಿ ಬೇಕಾಗಿರುವುದು ಮುಳ್ಳಿಲ್ಲದ ಮೀನು (Fish). ಇತ್ತೀಚೆಗೆ ಈ ಪರಿಯ ಮೀನು ಪ್ಯಾಕೆಟ್ಟುಗಳಲ್ಲಿ ದೊರಕುತ್ತಿದೆ.

    ಇಲ್ಲದಿದ್ರೆ ನಿಮ್ಮ ನೆಚ್ಚಿನ ಮೀನನ್ನು ಬರೆಯ ನೀರಿನಲ್ಲಿ ಬೇಯಿಸಿ ಬಸಿದು ಮುಳ್ಳನ್ನು ನಾಜೂಕಿನಿಂದ ನಿವಾರಿಸಿದರೂ ಸರಿ. ಅನ್ನವನ್ನೂ ಮೊದಲೇ ಮಾಡಿಟ್ಟುಕೊಂಡಿರಬೇಕು. ಇವೆರಡೂ ತಯಾರಿದ್ದರೆ ಉಳಿದ ಕೆಲಸ ಕೆಲವೇ ನಿಮಿಷಗಳದ್ದು ಮಾತ್ರ…!

    ಅಗತ್ಯ ಸಾಮಾಗ್ರಿಗಳು

    • ಮುಳ್ಳಿಲ್ಲದ ಮೀನು: ಅರ್ಧ ಕೇಜಿ
    • ಬೇಯಿಸಿದ ಅಕ್ಕಿ: ಮೂರು ಕಪ್
    • ಮೆಣಸು: ಎರಡು ಕಪ್ (ಚಿಕ್ಕದಾಗಿ ಹೆಚ್ಚಿದ್ದು)
    • ಈರುಳ್ಳಿ: ಮೂರು (ಮಧ್ಯಮ ಗಾತ್ರದ್ದು, ಚಿಕ್ಕದಾಗಿ ಹೆಚ್ಚಿದ್ದು)
    • ಸೆಲೆರಿ ದಂಟುಗಳು: ಅರ್ಧ ಕಪ್ (ಇದು ಲಭ್ಯವಿಲ್ಲದಿದ್ದರೆ ಸಿಹಿಯಾಗಿರುವ ಎಲೆಕೋಸು ಸಹಾ ನಡೆಯುತ್ತದೆ)
    • ಮೀನಿನ ಸಾಸ್: ಒಂದು ದೊಡ್ಡ ಚಮಚ
    • ಚಿಲ್ಲಿ ಸಾಸ್: 2 ದೊಡ್ಡ ಚಮಚ
    • ಬೆಳ್ಳುಳ್ಳಿ: 3-4 ಎಸಳುಗಳು
    • ಸೋಯಾ ಸಾಸ್: 3 ಚಿಕ್ಕ ಚಮಚ
    • ಕ್ಯಾರೆಟ್ : 2 ಚಿಕ್ಕದ್ದು (ಹೆಚ್ಚಿದ್ದು)
    • ಕಾಳುಮೆಣಸಿನ ಪುಡಿ- 1 ಚಿಕ್ಕ ಚಮಚ
    • ಮೆಕ್ಕೆ ಜೋಳದ ಹಿಟ್ಟು (ಕಾರ್ನ್ ಸ್ಟಾರ್ಚ್)- 1 ದೊಡ್ಡ ಚಮಚ
    • ಎಣ್ಣೆ : ಕರಿಯಲು ಅಗತ್ಯವಿದ್ದಷ್ಟು
    • ಉಪ್ಪು: ರುಚಿಗನುಸಾರ

    ಮಾಡುವ ವಿಧಾನ:
    1) ಮೀನಿನ ತುಂಡುಗಳನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಸೋಯಾ ಸಾಸ್, ಫಿಶ್ ಸಾಸ್, ಚಿಲ್ಲಿ ಸಾಸ್ ಮತ್ತು ಕಾಳುಮೆಣಸಿನ ಪುಡಿಗಳೊಂದಿಗೆ ಬೆರೆಸಿ ಹೀರಿಕೊಳ್ಳಲು ಸಾಧ್ಯವಾಗುವಂತೆ ಸುಮಾರು 15 ನಿಮಿಷ ತೆಗೆದಿಡಿ.
    3) ಕರಿಯುವ ಎಣ್ಣೆಯನ್ನು ಬಿಸಿಮಾಡಿ, ಕರಿಯುವಷ್ಟು ಬಿಸಿಯಾಗಿದೆ ಎಂದ ಬಳಿಕ ಮೀನಿಗೆ ಕಾರ್ನ್ ಸ್ಟಾರ್ಚ್ ಹಾಕಿ ಮಿಶ್ರಣ ಮಾಡಿ ಹಾಗೂ ಕೂಡಲೇ ಕರಿಯುವ ಎಣ್ಣೆಗೆ ಬಿಡಿ.
    4) ಸುಮಾರು ನಸುಗಂದು ಬರುವಷ್ಟು ಮಾತ್ರ ಕರಿದು ಹೊರತೆಗೆಯಿರಿ.
    5) ಬೆಳ್ಳುಳ್ಳಿ ಎಸಳುಗಳನ್ನೂ ಕರಿಯುವ ಎಣ್ಣೆಯಲ್ಲಿ ಕೊಂಚ ಕೆಂಪಗಾಗುವವರೆಗೆ ಹುರಿಯಿರಿ.
    6) ಈಗ ಎಣ್ಣೆಯಲ್ಲಿ ಈರುಳ್ಳಿ, ಸೆಲೆರಿ, ಮೆಣಸು ಮತ್ತು ಕ್ಯಾರೆಟ್ಟುಗಳನ್ನು ಸುಮಾರು ಹತ್ತು ನಿಮಿಷಗಳವರೆಗೆ ಅಥವಾ ಎಲ್ಲವೂ ಕೆಂಪಗಾಗುವವರೆಗೆ ಹುರಿಯಿರಿ.
    7) ಕರಿದ ಎಲ್ಲವನ್ನೂ ಮೀನಿನ ತುಂಡುಗಳೊಡನೆ ಚೆನ್ನಾಗಿ ಮಿಶ್ರಣ ಮಾಡಿ
    8) ನಂತರ ಬೆಂದ ಅನ್ನವನ್ನು ಈ ಮಿಶ್ರಣಕ್ಕೆ ಹಾಕಿ ಕಲಸಿ
    9) ಬಿಸಿ-ಬಿಸಿಯಿರುವಂತೆಯೇ ತಿಂದರೆ ಆಹಾ.. ಎನಿಸುತ್ತೆ. ಜೊತೆಗೆ ಹಸಿ ತರಕಾರಿಗಳ ಸಾಲಾಡ್ ಇದ್ದರೆ ರುಚಿ ಇನ್ನಷ್ಟು ಹೆಚ್ಚುವುದು. ಕೆಲವರಿಗೆ ಇದು ಟೊಮೇಟೊ ಸಾಸ್ ನೊಂದಿಗೂ ರುಚಿಸುತ್ತದೆ.

    Live Tv
    [brid partner=56869869 player=32851 video=960834 autoplay=true]