Tag: food poisoning

  • ರಣ್ವೀರ್ ಸಿಂಗ್ ಸಿನಿಮಾ ಸೆಟ್ಟಲ್ಲಿ ನೂರಕ್ಕೂ ಹೆಚ್ಚು ತಂತ್ರಜ್ಞರಿಗೆ ಫುಡ್ ಪಾಯ್ಸನ್!

    ರಣ್ವೀರ್ ಸಿಂಗ್ ಸಿನಿಮಾ ಸೆಟ್ಟಲ್ಲಿ ನೂರಕ್ಕೂ ಹೆಚ್ಚು ತಂತ್ರಜ್ಞರಿಗೆ ಫುಡ್ ಪಾಯ್ಸನ್!

    ಣ್ವೀರ್ ಸಿಂಗ್ (Ranveer Singh) ನಟನೆಯ ಸಿನಿಮಾ `ಧುರಂಧರ್’ (Dhurandhar) ಚಿತ್ರೀಕರಣ ಭರದಿಂದ ಸಾಗಿದೆ. ಆದರೆ, ಚಿತ್ರೀಕರಣದ ವೇಳೆಯಲ್ಲಿ ನಡೆದ ಮಹಾ ದುರಂತವೊಂದು ತಡವಾಗಿ ಬೆಳಕಿಗೆ ಬಂದಿದೆ. ಲೇಹ್ ಪ್ರದೇಶದಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಚಿತ್ರತಂಡಕ್ಕೆ ಸಂಬಂಧಿಸಿದ ನೂರಕ್ಕೂ ಹೆಚ್ಚು ಕಾಸ್ಟ್ & ಕ್ರೂ ಸದಸ್ಯರಿಗೆ ಫುಡ್ ಪಾಯ್ಸನ್ ಆಗಿರುವ ಮಾಹಿತಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ದೂರು ದಾಖಲಾಗಿದೆ. ತನಿಖೆ ನಡೆಯುತ್ತಿದೆ.

    ಕಳೆದ ಭಾನುವಾರ (ಆ.17) ಲೇಹ್ ಸುತ್ತಮುತ್ತಲಿನ ಜಾಗದಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಊಟ ಸೇವಿಸಿದ ಬಳಿಕ ಅನೇಕರಿಗೆ ತೀವ್ರ ವಾಂತಿ, ಹೊಟ್ಟೆನೋವು, ತಲೆಸುತ್ತುವಿಕೆ, ಅಸ್ವಸ್ಥತೆ ಉಂಟಾಗುತ್ತೆ. ಕೂಡಲೇ ಅವರನ್ನ ಸಜಲ್ ನರಬೂ ಮೆಮೋರಿಯಲ್ ಆಸ್ಪತ್ರೆಗೆ ದಾಖಲು ಮಾಡಲಾಗುತ್ತೆ. ಅಸ್ವಸ್ಥರೆಲ್ಲರಿಗೂ ಚಿಕಿತ್ಸೆ ನೀಡಿದ ಬಳಿಕ ಮರುದಿನವೇ ಎಲ್ಲರೂ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿರುತ್ತಾರೆ. ಮಕ್ಕಳೂ ಸೇರಿದಂತೆ ಬಹಳಷ್ಟು ಮಂದಿ ತೀವ್ರ ಅಸ್ವಸ್ಥಗೊಂಡಿದ್ದರು. ಸರ್ಕಾರಿ ಆರೋಗ್ಯಾಧಿಕಾರಿಗಳು ಆಹಾರದ ಸ್ಯಾಂಪಲ್‌ನ್ನು ವಶಕ್ಕೆ ಪಡೆದು ತನಿಖೆ ನಡೆಯುತ್ತಿದ್ದಾರೆ. ಅದೃಷ್ಟವಶಾತ್ ಯಾರಿಗೂ ತೀವ್ರ ಗಂಭೀರ ಸಮಸ್ಯೆ ಉಂಟಾಗಲಿಲ್ಲ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಆಹಾರ ಹೇಗೆ ವಿಷಪೂರಿತವಾಗಿದೆ. ನೀರು ಪೂರೈಕೆ ಎಲ್ಲಿಂದ ನಡೆದಿದೆ. ಸ್ಥಳದಲ್ಲಿ ವಿಷಪೂರಿತ ಅಂಶಗಳು ಪತ್ತೆಯಾಗಿವೆಯೇ ಅನ್ನೋದ್ರ ಕುರಿತು ತನಿಖೆ ನಡೆಯುತ್ತಿದೆ. ಇದನ್ನೂ ಓದಿ: `ನಮ್ಮ ಹತ್ರ ಬರೋ ಅವಶ್ಯಕತೆ ಇಲ್ಲ’ – ಪುಷ್ಪಮ್ಮನಿಗೆ ಮತ್ತೆ ಟಾಂಗ್ ಕೊಟ್ಟ ದೀಪಿಕಾ ದಾಸ್

    ಅಂದಹಾಗೆ ಆರಂಭಿಕ ಮಾಹಿತಿ ಪ್ರಕಾರ ರಣ್ವೀರ್ ಸಿಂಗ್ ಸೆಟ್ಟಲ್ಲಿ ಇರಲಿಲ್ಲ ಎನ್ನಲಾಗುತ್ತಿದೆ. ಈ ಚಿತ್ರವನ್ನು ಆದಿತ್ಯ ಧರ್ ನಿರ್ದೇಶಿಸಿ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಸಂಜಯ್ ದತ್, ಮಾಧವನ್, ಅಕ್ಷಯ ಖನ್ನಾ ಸೇರಿದಂತೆ ಹಲವರು ನಟಿಸಿದ್ದಾರೆ. ಹೀಗೆ ಧುರಂಧರ್ ಸೆಟ್ಟಲ್ಲಿ ಮಹಾ ದುರಂತವೊಂದು ಸೈಲೆಂಟಾಗೇ ನಡೆದುಹೋಗಿದೆ.

  • ರಾಯಚೂರು | ಫುಡ್ ಪಾಯಿಸನ್‌ನಿಂದ ತಂದೆ, ಇಬ್ಬರು ಮಕ್ಕಳು ಸಾವು

    ರಾಯಚೂರು | ಫುಡ್ ಪಾಯಿಸನ್‌ನಿಂದ ತಂದೆ, ಇಬ್ಬರು ಮಕ್ಕಳು ಸಾವು

    ರಾಯಚೂರು: ಫುಡ್ ಪಾಯಿಸನ್‌ನಿಂದಾಗಿ (Food poisoning) ತಂದೆ, ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ರಾಯಚೂರಿನ (Raichur) ಸಿರವಾರ ತಾಲೂಕಿನ ಕೆ.ತಿಮ್ಮಾಪುರ (K Thimmapura) ಗ್ರಾಮದಲ್ಲಿ ಘಟನೆ ನಡೆದಿದೆ.

    ತಂದೆ ರಮೇಶ್(38), ಮಗಳು ನಾಗಮ್ಮ(8), ದೀಪಾ(6) ಮೃತ ದುರ್ವೈವಿಗಳು. ತಾಯಿ ಪದ್ಮಾ, ಮಕ್ಕಳಾದ ಕೃಷ್ಣ, ಚೈತ್ರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಸೋಶಿಯಲ್‌ ಮೀಡಿಯಾದಲ್ಲಿ ಫೋಟೋ ವೈರಲ್‌ ಮಾಡಿ ಕಿರುಕುಳ – ಡ್ಯಾಂಗೆ ಹಾರಿ ಯುವತಿ ಆತ್ಮಹತ್ಯೆ

    ಬೆಂಗಳೂರಿಗೆ ಗುಳೆ ಹೋಗಿದ್ದ ರಮೇಶ್ ಕುಟುಂಬವು 4 ದಿನಗಳ ಹಿಂದೆ ಗ್ರಾಮಕ್ಕೆ ಬಂದಿದ್ದರು. ಸೋಮವಾರ ಜಮೀನಿನಲ್ಲಿ ಬೆಳೆದಿದ್ದ ತೊಗರಿ ಬೆಳೆಗೆ ರಮೇಶ್ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದರು. ಇದನ್ನೂ ಓದಿ: ಲವ್ವರ್‌ ಜೊತೆ ಸೇರಿ ಪತಿ ಹತ್ಯೆ – ಟೈಲ್ಸ್‌ನ ಕೆಳಗೆ ಮೃತದೇಹ ಹೂತಿಟ್ಟ ಪತ್ನಿ!

    ಬಳಿಕ ರಾತ್ರಿ ರೊಟ್ಟಿ ಚವಳೆಕಾಯಿ ಪಲ್ಯ, ಅನ್ನ, ಸಾಂಬರ್ ಊಟ ಮಾಡಿದ್ದರು. ರಾತ್ರಿ 3 ಗಂಟೆ ಸುಮಾರಿಗೆ ಕುಟುಂಬಸ್ಥರಿಗೆ ಹೊಟ್ಟೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ಬಳಿಕ ಅವರನ್ನು ಲಿಂಗಸುಗೂರು ಆಸ್ಪತ್ರೆಗೆ ದಾಖಲಾಗಿತ್ತು.

    ಆಸ್ಪತ್ರೆಗೆ ರವಾನಿಸುವ ವೇಳೆ ಮಾರ್ಗ ಮಧ್ಯದಲ್ಲೇ ದೀಪಾ ಕೊನೆಯುಸಿರೆಳೆದಿದ್ದಾಳೆ. ಬಳಿಕ ರಮೇಶ್ ಹಾಗೂ ನಾಗಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇನ್ನುಳಿದ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯು ಕವಿತಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಮಳವಳ್ಳಿ ಕಲುಷಿತ ಆಹಾರ ಸೇವನೆ ಕೇಸ್‌ – ಮತ್ತೋರ್ವ ವಿದ್ಯಾರ್ಥಿ ಮೃತ, ಸಾವಿನ ಸಂಖ್ಯೆ 2ಕ್ಕೆ ಏರಿಕೆ

    ಮಳವಳ್ಳಿ ಕಲುಷಿತ ಆಹಾರ ಸೇವನೆ ಕೇಸ್‌ – ಮತ್ತೋರ್ವ ವಿದ್ಯಾರ್ಥಿ ಮೃತ, ಸಾವಿನ ಸಂಖ್ಯೆ 2ಕ್ಕೆ ಏರಿಕೆ

    ಮಂಡ್ಯ/ ಮೈಸೂರು: ಕಲುಷಿತ ಆಹಾರ (Food Poison) ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದ ಮತ್ತೊಬ್ಬ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೇ ಮೈಸೂರಿನ (Mysuru) ಖಾಸಗಿ ಆಸ್ಪತ್ರೆಯಲ್ಲಿ ಮಧ್ಯರಾತ್ರಿ ಮೃತಪಟ್ಟಿದ್ದಾನೆ.

    ನಮೀಬ್ ಮಾಂತೆ ಮೃತ ವಿದ್ಯಾರ್ಥಿ. ಈ ಮೂಲಕ ಮೃತ ವಿದ್ಯಾರ್ಥಿಗಳ ಸಂಖ್ಯೆ 2ಕ್ಕೆ ಏರಿಕೆಯಾಗಿದೆ. ಉಳಿದ 46 ಮಂದಿಯ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿದೆ.

    ಮಳವಳ್ಳಿ (Malavalli) ತಾಲ್ಲೂಕಿನ ಟಿ.ಕಾಗೇಪುರದ ಗೋಕುಲ ವಿದ್ಯಾಸಂಸ್ಥೆಯ ಮಕ್ಕಳ ಪೈಕಿ 6ನೇ ತರಗತಿ ವಿದ್ಯಾರ್ಥಿ, ಮೇಘಾಲಯದ ಕಿರ್ಶನ್‌ ಲ್ಯಾಂಗ್‌ (13) ಭಾನುವಾರ ಮೃತಪಟ್ಟಿದ್ದ.

    ಈ ಪ್ರಕರಣದ ಭೇದಿಸಲು ಮಳವಳ್ಳಿ ಡಿವೈಎಸ್ಪಿ ವಿ.ಕೃಷ್ಣಪ್ಪ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಆಕಸ್ಮಿಕವಾಗಿ ಆಹಾರ ಪದಾರ್ಥಗಳಿಂದ ಫುಡ್ ಪಾಯಿಸನ್ ಆಗಿದ್ಯಾ? ಅಥವಾ ಉದ್ದೇಶ ಪೂರ್ವಕವಾಗಿ ಯಾರೋ ಊಟವನ್ನು ಕಲುಷಿತ ಮಾಡಿದ್ದಾರಾ ಎಂಬುದರ ಬಗ್ಗೆ ಖುದ್ದು ಮಂಡ್ಯ ಎಸ್ಪಿ ಮಾರ್ಗದರ್ಶನದಲ್ಲಿ ತನಿಖೆ ನಡೆಯಲಿದೆ. ಇದನ್ನೂ ಓದಿ: ಮಳವಳ್ಳಿ ವಸತಿ ಶಾಲೆಯ ದುರ್ಘಟನೆ – ಅಧಿಕಾರಿಗಳಿಂದ ಮಾಹಿತಿ ಪಡೆದ ಹೆಚ್‌ಡಿಕೆ; ಮೃತ ವಿದ್ಯಾರ್ಥಿಗೆ ಸಂತಾಪ

     

    ಏನಿದು ಪ್ರಕರಣ?
    ಶುಕ್ರವಾರ (ಮಾ.14) ಮಳವಳ್ಳಿ ಪಟ್ಟಣದ ಮದನ್ ಲಾಲ್ ಕಲ್ಯಾಣ ಮಂಟಪದಲ್ಲಿ ಪುಷ್ಪೇಂದ್ರ ಕುಮಾರ್ ಹೋಳಿ ಹಬ್ಬ ಆಚರಣೆ ಮಾಡಿದ್ದರು. ಈ ಹೋಳಿ ಹಬ್ಬಕ್ಕೆ ಸಿದ್ದರಾಜು ಎಂಬವರ ಹೋಟೆಲ್‌ನಲ್ಲಿ ಪಲಾವ್ ಮಾಡಿಸಲಾಗಿತ್ತು. ಉಳಿಕೆಯಾದ ಪಲಾವ್‌ ಅನ್ನು ಕಾಗೇಪುರದ ಗೋಕುಲ ವಿದ್ಯಾ ಸಂಸ್ಥೆಗೆ ಕಳುಹಿಸಲಾಗಿತ್ತು.

    ಈ ವಸತಿ ಶಿಕ್ಷಣ ಸಂಸ್ಥೆಯಾದ ಅಲ್ಲಿ ಮೇಘಾಲಯ ಹಾಗೂ ನೇಪಾಳ ಮೂಲದ ಮಕ್ಕಳು ಕಲಿಯುತ್ತಿದ್ದಾರೆ. ಊಟ ಸೇವಿಸಿದ್ದ ಮಕ್ಕಳು ಶನಿವಾರ ಬೆಳಿಗ್ಗೆ ಅಸ್ವಸ್ಥಗೊಂಡಿದ್ದರು. ಅವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಭಾನುವಾರ ಬೆಳಿಗ್ಗೆ ಮಕ್ಕಳಲ್ಲಿ ತೀವ್ರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದರಿಂದಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಮಂಡ್ಯದ ಮಿಮ್ಸ್ ಮತ್ತು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಹೋಳಿ ಕಾರ್ಯಕ್ರಮದಲ್ಲಿ ಭಾಗಿಯಾದ 30ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಈ ಪ್ರಕರಣ ಸಂಬಂಧ ಹೋಳಿ ಆಯೋಜಕ ಪುಷ್ಪೇಂದ್ರ, ಹೋಟೆಲ್ ಮಾಲೀಕ ಸಿದ್ದರಾಜು, ಕಲ್ಯಾಣ ಮಂಟಪ ಸಿಬ್ಬಂದಿ ಕೃಷ್ಣ, ಗೋಕುಲ ವಿದ್ಯಾ ಸಂಸ್ಥೆ ಮುಖ್ಯಸ್ಥ ಲಂಕೇಶ್, ಕಾರ್ಯದರ್ಶಿ ಜಗದೀಶ್, ಕೆಲಸಗಾರ ಅಭಿಷೇಕ್ ಮೇಲೆ ಬಿಇಓ ಉಮಾ ನೀಡಿದ ಮೇರೆಗೆ ಎಫ್‌ಐಆರ್ ದಾಖಲಾಗಿದೆ.

     

  • ಮಾಂಸಾಹಾರ ಸೇವನೆಯಿಂದ ಫುಡ್ ಪಾಯಿಸನ್ – 20 ಮಂದಿ ಅಸ್ವಸ್ಥ, 10 ಮಂದಿ ಆಸ್ಪತ್ರೆಗೆ ದಾಖಲು

    ಮಾಂಸಾಹಾರ ಸೇವನೆಯಿಂದ ಫುಡ್ ಪಾಯಿಸನ್ – 20 ಮಂದಿ ಅಸ್ವಸ್ಥ, 10 ಮಂದಿ ಆಸ್ಪತ್ರೆಗೆ ದಾಖಲು

    ರಾಯಚೂರು: ದೇವರ ಕಾರ್ಯಕ್ಕೆ ಮಾಡಿದ್ದ ಮಾಂಸಾಹಾರ ಸೇವಿಸಿದ ಬಳಿಕ ವಾಂತಿ ಭೇದಿಯಾಗಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ಲಿಂಗಸುಗೂರು (Lingasuguru) ತಾಲೂಕಿನ ಪರಂಪೂರ ತಾಂಡದಲ್ಲಿ ನಡೆದಿದೆ.

    ಬುಧವಾರ ಮಧ್ಯಾಹ್ನದ ಊಟದ ಬಳಿಕ ಸಂಜೆ ವೇಳೆಗೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. ಮಕ್ಕಳು ಹಿರಿಯರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದ್ದು ಸುಮಾರು 10 ಜನರಿಗೆ ವಾಂತಿ ಭೇದಿಯಿಂದ ನಿರ್ಜಲೀಕರಣವಾಗಿದೆ. ತೀವ್ರ ಅಸ್ವಸ್ಥಗೊಂಡ 10 ಜನರನ್ನ ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರಿಗೆ ಗ್ರಾಮದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಎಫ್‌16 ಯುದ್ಧ ವಿಮಾನ ಹಾರಿಸಿದ್ದ ರತನ್‌ ಟಾಟಾ

    ಸುಮಾರು 250 ಕುಟುಂಬಗಳು ವಾಸಿಸುವ ತಾಂಡದಲ್ಲಿ ಘಟನೆ ನಡೆದಿದೆ. ದೇವರ ಕಾರ್ಯಕ್ಕಾಗಿ ಮಾಡಿದ್ದ ಮಾಂಸಾಹಾರ ಸೇವಿಸಿದವರು ಮಾತ್ರ ಅನಾರೋಗ್ಯಕ್ಕೀಡಾಗಿದ್ದಾರೆ. ಸ್ಥಳಕ್ಕೆ ತಾಲೂಕು ಆರೋಗ್ಯಾಧಿಕಾರಿ ಅಮರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಹೋಗಿ ಬಾ ನನ್ನ ಗೆಳೆಯ – ರತನ್ ಟಾಟಾ ನಿಧನಕ್ಕೆ ಸ್ನೇಹಿತೆ ಸಿಮಿ ಭಾವುಕ ಪೋಸ್ಟ್​

     

  • ಮದುವೆ ಊಟ ಸೇವಿಸಿ ಅಸ್ವಸ್ಥ- 85ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು

    ಮದುವೆ ಊಟ ಸೇವಿಸಿ ಅಸ್ವಸ್ಥ- 85ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು

    ಶಿವಮೊಗ್ಗ: ಮದುವೆ ಸಮಾರಂಭದಲ್ಲಿ ಆಹಾರ ಸೇವಿಸಿದ್ದ 85ಕ್ಕೂ ಅಧಿಕ ಮಂದಿಗೆ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥರಾದ ಪರಿಣಾಮ ಆಸ್ಪತ್ರೆಗೆ ದಾಖಲಾದ ಘಟನೆ ಶಿವಮೊಗ್ಗದ ಗೆಜ್ಜೇನಹಳ್ಳಿಯಲ್ಲಿ ನಡೆದಿದೆ.

    ಶಿವಮೊಗ್ಗದ ಗೆಜ್ಜೇನಹಳ್ಳಿಯಲ್ಲಿ ಶುಕ್ರವಾರ ಮದುವೆ ಸಮಾರಂಭ ನಡೆದಿತ್ತು. ಈ ಸಮಾರಂಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿ ಊಟ ಮಾಡಿದ್ದರು. ಊಟ ಮಾಡಿದ್ದ ಮಕ್ಕಳು ಸೇರಿದಂತೆ ಕೆಲವರಿಗೆ ವಾಂತಿ, ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ಅಸ್ವಸ್ಥಗೊಂಡವರನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಬಿಜೆಪಿಯಲ್ಲಿ ಸಿಎಂ ಸಚಿವ ಸ್ಥಾನ ಲಾಭಿಗೆ ಅವಕಾಶವಿಲ್ಲ, ಯತ್ನಾಳ್ ಹೇಳಿಕೆ ತಪ್ಪು: ರೇಣುಕಚಾರ್ಯ

    crime

    ಸದ್ಯ ಎಲ್ಲರಿಗೂ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಆಹಾರದಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ ಈ ರೀತಿ ಆಗಿದೆ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕ ಡಾ.ಶ್ರೀಧರ್ ತಿಳಿಸಿದ್ದಾರೆ. ಇದನ್ನೂ ಓದಿ: ಸಾಹುಕಾರ ಪಾಪರ್ ಆಗ್ತಿದ್ದಾರೆ: ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ವಾಗ್ದಾಳಿ

  • ತುಮಕೂರು ಹಾಸ್ಟೆಲ್ ಮಕ್ಕಳ ಸಾವು: ಶಾಲೆಯ ಮಾಜಿ ಪ್ರಾಂಶುಪಾಲ ವಶಕ್ಕೆ

    ತುಮಕೂರು ಹಾಸ್ಟೆಲ್ ಮಕ್ಕಳ ಸಾವು: ಶಾಲೆಯ ಮಾಜಿ ಪ್ರಾಂಶುಪಾಲ ವಶಕ್ಕೆ

    ತುಮಕೂರು: ಹಾಸ್ಟೆಲ್‍ನಲ್ಲಿ ವಿಷದೂಟ ಸೇವಿಸಿ ಮೂರು ಮಕ್ಕಳು ಮೃತರಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾವಾರಿಧಿ ಶಾಲೆಯ ಮಾಜಿ ಪ್ರಾಂಶುಪಾಲ ರವಿಕುಮಾರ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಮಾರ್ಚ್ 9 ರಂದು ಮಾಜಿ ಶಾಸಕ ಕಿರಣ್‍ಕುಮಾರ್ ಒಡೆತನದ ವಿದ್ಯಾವಾರಿಧಿ ಶಾಲೆಯ ಹಾಸ್ಟೆಲ್‍ನಲ್ಲಿ ಮಕ್ಕಳು ವಿಷಾಹಾರ ಸೇವನೆಯಿಂದ ಮೃತಪಟ್ಟಿದ್ದರು. ಇನ್ನೂ ವಿಷಾಹಾರ ಸೇವನೆಯಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸೆಕ್ಯೂರಿಟಿ ಗಾರ್ಡ್ ರಮೇಶ್ ಮಾರ್ಚ್ 11 ರಂದು ಸಾವನ್ನಪ್ಪಿದ್ದರು.

    ಇದನ್ನೂ ಓದಿ: ತುಮಕೂರು: ವಸತಿ ಶಾಲೆಯಲ್ಲಿ ಫುಡ್ ಪಾಯ್ಸನ್- 3 ವಿದ್ಯಾರ್ಥಿಗಳ ದುರ್ಮರಣ

    ವಿಷಾಹಾರ ಸೇವಿಸಿ ಸಾವನ್ನಪ್ಪಿದ್ದ ಮಕ್ಕಳ ಮರಣೋತ್ತರ ಪರೀಕ್ಷೆ ನಡೆದಿದ್ದು, ಮಕ್ಕಳ ದೇಹದಲ್ಲಿ ದ್ರವರೂಪದ ವಿಷಕಾರಿ ಅಂಶವಿರುವುದು ಪತ್ತೆಯಾಗಿತ್ತು. ವಿದ್ಯಾವಾರಿಧಿ ಶಾಲೆಯ ಮಾಜಿ ಪ್ರಾಂಶುಪಾಲ ರವಿಕುಮಾರ್ ಕೂಡ ಘಟನೆ ಬಳಿಕ ತಲೆ ಮರೆಸಿಕೊಂಡಿದ್ದರು.

    ಮಾರ್ಚ್ 8ರ ರಾತ್ರಿ ನಡೆದಿದ್ದೇನು?: ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿಯ ವಿದ್ಯಾವಾರಿಧಿ ಇಂಟರ್‍ನ್ಯಾಷನಲ್ ಬೋರ್ಡಿಂಗ್ ಶಾಲೆಯಲ್ಲಿ ವಿಷಯುಕ್ತ ಆಹಾರ ಸೇವಿಸಿ 15 ವರ್ಷದ ಶ್ರೇಯಸ್, ಆಕಾಂಕ್ಷ್ ಪಲ್ಲಕ್ಕಿ ಹಾಗೂ ಶಾಂತಮೂರ್ತಿ ಎಂಬ ಮೂವರು ಅಮಯಾಕ ಮಕ್ಕಳು ಸಾವನಪ್ಪಿದ್ದರು. ಈ ಶಾಲೆ ಬಿಜೆಪಿಯ ಮಾಜಿ ಶಾಸಕ ಕಿರಣ್ ಕುಮಾರ್ ಅವರಿಗೆ ಸೇರಿದ್ದಾಗಿದೆ.

    ಕಿರಣ್ ಅವರೊಂದಿಗಿನ ವೈಮನಸ್ಸಿನಿಂದ ರವಿ ಶಾಲೆಯಿಂದ ಹೋರಹೋಗಿದ್ದರು ಎಂದು ಹೇಳಲಾಗಿದೆ. ಪ್ರಕರಣದ ನಂತರ ನಾಪತ್ತೆಯಾಗಿದ್ದ ರವಿಕುಮಾರ್ ಅವರನ್ನು ವಶಕ್ಕೆ ಪಡೆದಿದ್ದು, ತಿಪಟೂರು ಡಿವೈಎಸ್‍ಪಿ ವೇಣುಗೋಪಾಲ್ ನೇತೃತ್ವದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

  • ಚಿಕ್ಕಮಗಳೂರು: ಮೇವಿನಲ್ಲಿ ವಿಷಾಹಾರ ಸೇವನೆ ಆರು ಹಸು ಸಾವು

    ಚಿಕ್ಕಮಗಳೂರು: ವಿಷಾಹಾರ ಸೇವನೆ ಹಿನ್ನೆಲೆಯಲ್ಲಿ 6 ಹಸುಗಳು ಸಾವನ್ನಪ್ಪಿರುವ ಘಟನೆ ಶುಕ್ರವಾರ ರಾತ್ರಿ ಚಿಕ್ಕಮಗಳೂರು ತಾಲೂಕಿನ ಗಿಡ್ಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ರೈತ ರೇಣುಕಪ್ಪ ಎಂಬುವರಿಗೆ ಸೇರಿದ ಸುಮಾರು 7 ಲಕ್ಷ ರೂಪಾಯಿ ಬೆಲೆಬಾಳುವ ಆರು ಹಸುಗಳು ಸಾವನ್ನಪ್ಪಿವೆ. ಶುಕ್ರವಾರ ರಾತ್ರಿ ಹಸುಗಳು ಮೇವು ತಿಂದ ನಂತರ ಏಕಾಏಕಿ ಹಸುಗಳು ಸಾವಿಗೀಡಾಗಿದ್ದು, ತನಗಾಗದೇ ಇರುವರು ಮೇವಿನಲ್ಲಿ ವಿಷ ಬೆರೆಸಿದ್ದಾರೆಂದು ರೇಣುಕಪ್ಪ ದುಃಖದಿಂದ ಹೇಳುತ್ತಾರೆ.

    ಮನೆಗೆ ಆಸರೆಯಾಗಿದ್ದ ಹಸುಗಳು ಏಕಾಏಕಿ ಸಾವನನಪ್ಪಿದ ಪರಿಣಾಮ ರೈತ ರೇಣುಕಪ್ಪ ದಿಕ್ಕು ತೋಚದಂತಾಗಿದೆ ಎಂದು ತಿಳಿಸಿದರು. ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.