Tag: Food Kit

  • ಸಚಿವ ಜಗದೀಶ್ ಶೆಟ್ಟರ್ ಪುತ್ರನಿಂದ ಆಹಾರ ಕಿಟ್ ವಿತರಣೆ

    ಸಚಿವ ಜಗದೀಶ್ ಶೆಟ್ಟರ್ ಪುತ್ರನಿಂದ ಆಹಾರ ಕಿಟ್ ವಿತರಣೆ

    ಹುಬ್ಬಳ್ಳಿ: ಕೊರೊನಾ ವೈರಸ್ ಲಾಕ್‍ಡೌನ್ ನಡುವೆ ಸಚಿವ ಜಗದೀಶ್ ಶೆಟ್ಟರ್ ಅವರ ಮಗ ಸರ್ಕಾರದ ಆಹಾರ ಕಿಟ್ ವಿತರಣೆ ಮಾಡಿರುವುದು ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.

    ಹೌದು, ಯಾವುದೇ ಚುನಾಯಿತ ಪ್ರತಿನಿಧಿ ಅಲ್ಲದಿದ್ದರು ಕೂಡ ಜಗದೀಶ್ ಶೆಟ್ಟರ್ ಅವರ ಪುತ್ರ ಸಂಕಲ್ಪ ಶೆಟ್ಟರ್ ಕಾರ್ಮಿಕ ಇಲಾಖೆಯ ವತಿಯಿಂದ ವಿತರಿಸಲಾಗುತ್ತಿರುವ ಆಹಾರ ಕಿಟ್ ವಿತರಣೆ ಮಾಡಿ ಫೇಸ್‍ಬುಕ್ ಪೋಸ್ಟ್ ಹಾಕಿರುವುದು ಟೀಕೆಗೆ ಗುರಿಯಾಗಿದೆ. ಅಲ್ಲದೇ ಯಾವುದೇ ಚುನಾಯಿತ ವ್ಯಕ್ತಿ ಆಗಿಲ್ಲದಿದ್ದರು ಕೂಡ ತಂದೆಯ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

    ಕಾರ್ಮಿಕ ಇಲಾಖೆಯ ಆಹಾರ ಕಿಟ್ ವಿತರಣೆ ಮಾಡಲು ಶೆಟ್ಟರ್ ಅವರ ಪುತ್ರ ಸಂಕಲ್ಪ ಶೆಟ್ಟರ್ ಗೆ ಅವಕಾಶ ಕೊಟ್ಟವರು ಯಾರು? ಸಚಿವರು ಮಾಡಬೇಕಾದ ಕಾರ್ಯವನ್ನು ಅವರ ಪುತ್ರ ಮಾಡಿದ್ಯಾಕೆ ಅನ್ನೋ ಅನುಮಾನ ಹುಟ್ಟುಹಾಕಿದೆ. ಜೊತೆಗೆ ಮುಂದಿನ ಚುನಾವಣೆಯಲ್ಲಿ ತಂದೆಯ ಬದಲಾಗಿ ಸಚಿವ ಜಗದೀಶ್ ಶೆಟ್ಟರ್ ಪುತ್ರ ಸ್ಪರ್ಧೆ ಮಾಡುವ ಉದ್ದೇಶದಿಂದ ಈಗಿನಿಂದಲೇ ಚುನಾವಣಾ ತಯಾರಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.

    ಒಟ್ಟಿನಲ್ಲಿ ಕಾರ್ಮಿಕ ಇಲಾಖೆಯ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ತಂದೆಯ ಹೆಸರಿನಲ್ಲಿ ಮಗ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಕ್ರಮ ಜರುಗಿಸಬೇಕು ಎಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.

  • ಅನಾಮಧೇಯ ವ್ಯಕ್ತಿಗಳಿಂದ ಫುಡ್ ಕಿಟ್ ವಿತರಣೆ- ಗ್ರಾಮಸ್ಥರಲ್ಲಿ ಆತಂಕ

    ಅನಾಮಧೇಯ ವ್ಯಕ್ತಿಗಳಿಂದ ಫುಡ್ ಕಿಟ್ ವಿತರಣೆ- ಗ್ರಾಮಸ್ಥರಲ್ಲಿ ಆತಂಕ

    ಗದಗ: ಕೊರೊನಾ ಲಾಕ್‍ಡೌನ್ ವೇಳೆ ಅನ್ಯಕೋಮಿನ ಅನಾಮಧೇಯ ವ್ಯಕ್ತಿಗಳು ದಿನಸಿ ಕಿಟ್ ವಿತರಿಸಿದ್ದು, ಗ್ರಾಮಸ್ಥರು ಆತಂಕಕ್ಕೊಳಗಾಗಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರ ಗ್ರಾಮದಲ್ಲಿ ನಡೆದಿದೆ.

    ಗುರುವಾರ ರಾತ್ರಿ 3 ಜನರ ಯುವಕರು, ಗ್ರಾಮದ ಹತ್ತಾರು ಮನೆಗಳಿಗೆ ಅಕ್ಕಿ, ಗೋಧಿ, ಬೆಳೆ, ಸಕ್ಕರೆ, ಎಣ್ಣೆ ಪ್ಯಾಕೆಟ್ ಹೀಗೆ ಅನೇಕ ವಸ್ತುವಿನ ದಿನಸಿ ಕಿಟ್ ವಿತರಿಸಿದ್ದಾರೆ. ನಮಗೆ ಬೇಡ ಅಂದರೂ ಕೊಟ್ಟು ಹೋಗಿದ್ದಾರೆ ಎಂದು ಸ್ಥಳೀಯ ಅಜ್ಜಿಯರಿಬ್ಬರು ಹೇಳುತ್ತಿದ್ದಾರೆ. ಇವರು ವಯಸ್ಸಾದವರು ಹಾಗೂ ಹೆಚ್ಚು ಮಕ್ಕಳಿದ್ದ ಮನೆಯೇ ಟಾರ್ಗೆಟ್ ಮಾಡಿ ಕೇವಲ ಬೆರಳೆಣಿಕೆಯಷ್ಟು ಮನೆಗಳಿಗೆ ಮಾತ್ರ ಹಂಚಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

    ತಾಲೂಕಾಡಳಿತ ಅನುಮತಿ ಇಲ್ಲದೇ ಯಾರು ಎಲ್ಲಿಂದ ಬಂದರು ಏನು ಎಂಬುದನ್ನು ತಿಳಿಸದೇ ಕಿಟ್ ನೀಡಿ ಪರಾರಿಯಾಗಿದ್ದಾರೆ. ಇದು ಈ ಸಂದರ್ಭದಲ್ಲಿ ಗ್ರಾಮದ ಜನರಲ್ಲಿ ಮತ್ತಷ್ಟು ಆತಂಕ ಹುಟ್ಟಿಸಿದೆ. ಸುದ್ದಿ ತಿಳಿದು ಸ್ಥಳಕ್ಕೆ ಗದಗ ಎಸ್.ಪಿ ಯತೀಶ್ ಎನ್, ರೋಣ ತಹಶೀಲ್ದಾರ್ ಜಕ್ಕನಗೌಡ ತಾಲೂಕ ಆಹಾರ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಅನುಮಾನಸ್ಪದ ವ್ಯಕ್ತಿಗಳು ಗುರುತು ಸಿಕ್ಕಿದ್ದು, ಈ ಕುರಿತು ಪೊಲೀಸರ ತನಿಖೆ ನಂತರ ಸತ್ಯಾಸತ್ಯತೆ ಗೊತ್ತಾಗಲಿದೆ.

  • ಪಬ್ಲಿಕ್ ಚಾಲೆಂಜ್ ಸ್ವೀಕರಿಸಿದ ಶಾಸಕ – 8 ಸಾವಿರ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ

    ಪಬ್ಲಿಕ್ ಚಾಲೆಂಜ್ ಸ್ವೀಕರಿಸಿದ ಶಾಸಕ – 8 ಸಾವಿರ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ

    ಚಾಮರಾಜನಗರ: ಲಾಕ್‍ಡೌನ್ ಸಂದರ್ಭದಲ್ಲಿ ಅನೇಕರು ಬಡವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಇದೀಗ ಗಡಿ ಜಿಲ್ಲೆ ಚಾಮರಾಜನಗರ ಕ್ಷೇತ್ರದ ಶಾಸಕ, ಮಾಜಿ ಸಚಿವ ಪಬ್ಲಿಕ್ ಟಿವಿ ಚಾಲೆಂಜ್ ಸ್ವೀಕಾರ ಮಾಡಿದ್ದಾರೆ. ಈ ಮೂಲಕ ಲಾಕ್‍ಡೌನ್ ನಡುವೆ ಕ್ಷೇತ್ರದ ಜನತೆಗೆ ಸಹಾಯ ಹಸ್ತ ಚಾಚುವ ಕೆಲಸಕ್ಕೆ ಮುಂದಾಗಿದ್ದಾರೆ.

    ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಬಡವರು, ನಿರ್ಗತಿಕರಿಗೆ ಆಹಾರ ಸಮಸ್ಯೆ ಉಲ್ಬಣವಾಗಿರುವ ಹಿನ್ನೆಲೆಯಲ್ಲಿ ಆಹಾರದ ಕಿಟ್ ವಿತರಿಸಿದ್ದಾರೆ. ಸುಮಾರು ಎಂಟು ಸಾವಿರ ಬಡ ಕುಟುಂಬಗಳಿಗೆ ವೈಯಕ್ತಿಕವಾಗಿ ಆಹಾರ ಧಾನ್ಯ ವಿತರಿಸಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಬಡವರಿಗೆ ಅಕ್ಕಿ ವಿತರಿಸುತ್ತಿದೆ. ಆದರೆ ಉಳಿದ ಪದಾರ್ಥಗಳಿಗೆ ಜನರು ಪರದಾಡುವಂತಾಗಿದೆ. ಇದನ್ನು ಮನಗಂಡ ಶಾಸಕ ಸಿ.ಪುಟ್ಟರಂಗಶೆಟ್ಟಿ ಅಕ್ಕಿ, ಬೇಳೆ, ಅವರೆಕಾಳು, ಹುರುಳಿ ಕಾಳು, ಹಲಸಂದೆ, ಅಡುಗೆ ಎಣ್ಣೆ, ಸಕ್ಕರೆ, ಟೀ ಪುಡಿ, ಉಪ್ಪು ಸೇರಿದಂತೆ ಅತ್ಯಗತ್ಯ ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಿ ಬಡವರಿಗೆ ಹಂಚುತ್ತಿದ್ದಾರೆ.

    ಒಂದೂವರೆ ಸಾವಿರಕ್ಕೂ ಹೆಚ್ಚು ಬುಡಕಟ್ಟು ಸೋಲಿಗರು ಸೇರಿದಂತೆ ಎಂಟು ಸಾವಿರ ಬಡ ಕೂಲಿಕಾರ್ಮಿಕ ಕುಟುಂಬಗಳಿಗೆ ಅವರು ಆಹಾರ ಧಾನ್ಯ ವಿತರಿಸಿದ್ದಾರೆ. ನನಗೆ ಪ್ರಚಾರ ಬೇಡ, ಕ್ಷೇತ್ರದ ಜನರ ಹಿತ ಕಾಯವುದು ನನ್ನ ಧರ್ಮ. ಜನರ ಕಷ್ಟಸುಖಗಳಲ್ಲಿ ಭಾಗಿಯಾಗುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.

  • ಆಹಾರ ಕಿಟ್‍ಗಾಗಿ ನೂಕು ನುಗ್ಗಲು- ಲಾಕ್‍ಡೌನ್ ವಿಸ್ತರಣೆಯಾದ್ರೂ  ಪಾಲನೆಯಾಗದ ಸಾಮಾಜಿಕ ಅಂತರ

    ಆಹಾರ ಕಿಟ್‍ಗಾಗಿ ನೂಕು ನುಗ್ಗಲು- ಲಾಕ್‍ಡೌನ್ ವಿಸ್ತರಣೆಯಾದ್ರೂ ಪಾಲನೆಯಾಗದ ಸಾಮಾಜಿಕ ಅಂತರ

    ರಾಯಚೂರು: ಕೊರೊನಾ ಮಹಾಮಾರಿ ತಲ್ಲಣ ಉಂಟು ಮಾಡಿದ್ದು ಎಷ್ಟೇ ಕಠೀಣ ನಿರ್ಧಾರ ಕೈಗೊಂಡರೂ ಹತೋಟಿಗೆ ಬರುತ್ತಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಲಾಕ್‍ಡೌನ್ ಅವಧಿಯನ್ನು ಮೇ 3ರ ವರೆಗೆ ವಿಸ್ತರಿಸಿದ್ದಾರೆ. ಇಷ್ಟಾದರೂ ಬುದ್ಧಿ ಕಲಿಯದ ಜನ ಮಾತ್ರ ಆಹಾರ ಕಿಟ್‍ಗಾಗಿ ಮುಗಿಬಿದ್ದಿದ್ದಾರೆ.

    ರಾಯಚೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಆಹಾರ ಕಿಟ್‍ಗಾಗಿ ಜನ ನೂಕುನುಗ್ಗಲು ಮಾಡಿ ಕಿತ್ತಾಡಿಕೊಂಡಿದ್ದಾರೆ. ಇದರಿಂದಾಗಿ ಆಹಾರ ಕಿಟ್ ವಿತರಣೆಯನ್ನೇ ನಿಲ್ಲಿಸಲಾಯಿತು.

    ಕೆಲ ದಾನಿಗಳು ನಗರದ ಎಪಿಎಂಸಿಯಲ್ಲಿ ಹಮಾಲರು ಸೇರಿ 1,500 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆಗೆ ಮುಂದಾಗಿದ್ದರು. ಆದರೆ ಕೆಲಸವಿಲ್ಲದೆ ಕಾಲ ಕಳೆಯುತ್ತಿದ್ದ ಹಮಾಲರು ಹಾಗೂ ಅವರ ಕುಟುಂಬ ಆಹಾರ ಕಿಟ್‍ಗಾಗಿ ನೂಕುನುಗ್ಗಲು ಮಾಡಿದರು. ಕಿಟ್ ಪಡೆಯಲು ಮಹಿಳೆಯರು ಹಾಗೂ ಪುರುಷರು ಗುಂಪು ಸೇರಿ ಸಾಮಾಜಿಕ ಅಂತರವನ್ನೇ ಮರೆತರು. ಎಪಿಎಂಸಿ ಅಧಿಕಾರಿಗಳ ಮಾತಿಗೂ ಬೆಲೆ ಕೊಡದೆ ಆಹಾರ ಕಿಟ್ ಗಾಗಿ ಕಿತ್ತಾಡಿದರು. ಇದರಿಂದಾಗಿ ಕೆಲಕಾಲ ಆಹಾರ ವಿತರಣೆಯನ್ನು ಅಧಿಕಾರಿಗಳು ಸ್ಥಗಿತಗೊಳಿಸಿದರು.

  • ಇನ್ಫೋಸಿಸ್ ಆಹಾರ ಕಿಟ್ ವಿತರಣೆಯಲ್ಲಿ ಬಿಜೆಪಿ ಮುಖಂಡರ ಪ್ರಚಾರ

    ಇನ್ಫೋಸಿಸ್ ಆಹಾರ ಕಿಟ್ ವಿತರಣೆಯಲ್ಲಿ ಬಿಜೆಪಿ ಮುಖಂಡರ ಪ್ರಚಾರ

    ರಾಯಚೂರು: ಕೊರೊನಾ ವೈರಸ್ ನಿಂದ ಇಡೀ ದೇಶವೇ ಲಾಕ್‍ಡೌನ್ ಆಗಿರುವ ಹಿನ್ನೆಲೆ ಕೆಲವು ಸಂಘಸಂಸ್ಥೆಗಳು ಆಹಾರ ಕಿಟ್ ಹಂಚಿಕೆ ಮಾಡುತ್ತಿವೆ. ಆದರೆ ರಾಯಚೂರು ಸೇರಿದಂತೆ ಹಲವೆಡೆ ಕೆಲ ಬಿಜೆಪಿ ಮುಖಂಡರು ಕಿಟ್ ಹಂಚಿಕೆಯಲ್ಲೂ ಪ್ರಚಾರ ರಾಜಕಾರಣ ಮಾಡುತ್ತಿದ್ದಾರೆ.

    ಇನ್ಫೋಸಿಸ್ ನೀಡಿದ ಕಿಟ್ ವಿತರಣೆಯಲ್ಲಿ ಬಿಜೆಪಿ ಮುಖಂಡರ ರಾಜಕಾರಣ ನಡೆಸಿದ್ದಾರೆ. ಅಕ್ಷಯ ಪಾತ್ರೆ ಯೋಜನೆಯಡಿ ಇನ್ಫೋಸಿಸ್ ನಿಂದ ನೀಡಲಾಗಿದ್ದ ಕಿಟ್ ಗಳ ಮೇಲೆ ತಮ್ಮ ಫೋಟೋ ತಮ್ಮ ಸಂಸ್ಥೆ ಹೆಸರು ಹಾಕಿಕೊಂಡು ರಾಜಕಾರಣಿಗಳು ಕಿಟ್ ವಿತರಿಸುತ್ತಿದ್ದಾರೆ. ಇದನ್ನು ಓದಿ: ಇನ್ಫೋಸಿಸ್ ಫೌಂಡೇಶನ್‍ನಿಂದ 220ಕ್ಕೂ ಅಧಿಕ ಕಾರ್ಮಿಕರಿಗೆ ಆಹಾರದ ಕಿಟ್

    ರಾಯಚೂರಿನ ಬಿಜೆಪಿ ಮುಖಂಡ ತ್ರಿವಿಕ್ರಮ ಜೋಶಿ, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದ ಮೂರ್ತಿಯಿಂದ ಪ್ರಚಾರ ನಡೆದಿದೆ. ಬಿಜೆಪಿ ಮುಖಂಡರ ಕೀಳು ಮಟ್ಟದ ಪ್ರಚಾರ ರಾಜಕೀಯಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕಾಡಂಚಿನ 5 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ಹಂಚಿಕೆ – ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ

    ಕಾಡಂಚಿನ 5 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ಹಂಚಿಕೆ – ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ

    ಚಾಮರಾಜನಗರ: ಕೊರೊನಾ ವೈರಸ್ ಭೀತಿಯಿಂದ ಕಾಡಂಚಿನ ಗ್ರಾಮದ ಜನರಲ್ಲಿ ಆಹಾರದ ಕೊರತೆ ಉಂಟಾಗಿದೆ. ಈ ಹಿನ್ನೆಲೆ ಪಬ್ಲಿಕ್ ಟಿವಿಯ ಚಾಲೆಂಜ್ ಸ್ವೀಕರಿಸಿದ ಚಾಮರಾಜನಗರದ ಹನೂರು ಪಟ್ಟಣದ ಜನಾಶ್ರಯ ಟ್ರಸ್ಟ್ ಕಾಡಂಚಿನ ಐದು ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಿದೆ.

    ಕಾಡಂಚಿನ ಗ್ರಾಮಗಳಾದ ಶಾಗ್ಯ, ಗಾಣಿಗಮಂಗಲ, ಉಯಿಲನತ್ತ, ಪಡಿಸಲನತ್ತ, ಚೆಂಗಡಿ ಜನರಿಗೆ ಜನಾಶ್ರಯ ಟ್ರಸ್ಟ್ ನೆರವಿನ ಹಸ್ತ ಚಾಚಿದ್ದಾರೆ. ಜನಾಶ್ರಯ ಟ್ರಸ್ಟ್ ವತಿಯಿಂದ ಐದು ಸಾವಿರ ಕುಟುಂಬಗಳಿಗೆ ಅಕ್ಕಿ, ಅಡುಗೆ ಎಣ್ಣೆ, ಕಾಳುಗಳನ್ನು ಒಳಗೊಂಡ ಆಹಾರ ಕಿಟ್ ನೀಡಿ ಮಾನವೀಯತೆ ಮೆರೆದಿದ್ದಾರೆ.

    ಆಹಾರ ಕಿಟ್ ಅಷ್ಟೇ ಅಲ್ಲದೇ ಐದು ಸಾವಿರ ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಕೂಡ ಮಾಡಲಾಗಿದೆ. ಜೊತೆಗೆ ಕಾಡಂಚಿನ ಜನರಿಗೆ ಥರ್ಮಲ್ ಸ್ಕ್ರೀನಿಂಗ್ ಕೂಡ ಟ್ರಸ್ಟ್ ಸದಸ್ಯರು ಮಾಡಿದ್ದಾರೆ. ಅಲ್ಲದೇ ಕಾಡಂಚಿನ ಜನರಿಗೆ ಸಾಮಾಜಿಕ ಅಂತರದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

    ಹಳ್ಳಿಯನ್ನು ಶುಚಿತ್ವವಾಗಿಟ್ಟುಕೊಂಡು ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಹಾಗೆಯೇ ಮುಂದೆಯೂ ಕೂಡ ಕರ್ನಾಟಕ ಲಾಕ್‍ಡೌನ್ ಮುಂದುವರೆದರೆ ಉಚಿತ ಊಟದ ವ್ಯವಸ್ಥೆ ಕೂಡ ಮಾಡ್ತಿವಿ ಎಂದು ಜನಾಶ್ರಯ ಟ್ರಸ್ಟ್ ನ ಗೌರವಾದ್ಯಕ್ಷ ವೆಂಕಟೇಶ್ ಹೇಳಿದ್ದಾರೆ.

  • ಮಾನವೀಯತೆ ಮೆರೆದ ಪೇದೆ – ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

    ಮಾನವೀಯತೆ ಮೆರೆದ ಪೇದೆ – ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

    ಶಿವಮೊಗ್ಗ: ಕೊರೊನಾ ಮಹಾಮಾರಿಯಿಂದ ಈಡೀ ದೇಶವೇ ಲಾಕ್‍ಡೌನ್ ಆಗಿದ್ದು, ಬಡ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ. ಇದನ್ನರಿತ ಶಿವಮೊಗ್ಗದ ಪೊಲೀಸ್ ಪೇದೆಯೊಬ್ಬರು ತಮ್ಮ ಸ್ವಂತ ಖರ್ಚಿನಲ್ಲಿ ಬಡವರಿಗೆ ದಿನಸಿ ವಸ್ತುಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

    ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯ ಪೇದೆ ಲಕ್ಷ್ಮಣ್ ಅವರು ಸದ್ಯ ಭದ್ರಾವತಿ ತಾಲೂಕಿನ ಉಂಬ್ಳೆಬೈಲು ಉಪ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಂಬ್ಳೆಬೈಲು ಗ್ರಾಮದಲ್ಲಿ ಕಡು ಬಡವರನ್ನು ಗುರುತಿಸಿ ಅವರಿಗೆ ಅಕ್ಕಿ, ಬೇಳೆ, ಸಕ್ಕರೆ, ಎಣ್ಣೆ, ಟೀ ಪುಡಿ, ಖಾರದ ಪುಡಿ ಸೇರಿದಂತೆ ದಿನ ಬಳಕೆಯ ವಸ್ತುಗಳ ಕಿಟ್‍ನ್ನು ಸ್ವತಃ ತಾವೇ ವಿತರಿಸಿದ್ದಾರೆ.

    ಉಂಬ್ಳೆಬೈಲು ಗ್ರಾಮದ 10 ಕುಟುಂಬಗಳಿಗೆ ಆಹಾರದ ಕಿಟ್ ಅನ್ನು ವಿತರಿಸಿದ್ದು, ಪೇದೆ ಲಕ್ಷ್ಮಣ್ ಮಾಡಿರುವ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.