Tag: Food Kit

  • ಪ್ಯಾರಾ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಆಹಾರ ಕಿಟ್ ವಿತರಣೆ

    ಪ್ಯಾರಾ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಆಹಾರ ಕಿಟ್ ವಿತರಣೆ

    ಬೆಂಗಳೂರು: ರಾಜ್ಯ ಮತ್ತು ರಾಷ್ಟ್ರವನ್ನು ಪ್ಯಾರಾ ಒಲಿಂಪಿಕ್ಸ್ ಕ್ರೀಡೆಯಲ್ಲಿ ಪ್ರತಿನಿಧಿಸೋ ವಿಕಲಚೇತನ ಕ್ರೀಡಾಪಟುಗಳಿಗೆ ಲಾಕ್‍ಡೌನ್ ನಿಂದ ಮನೆಯಲ್ಲೇ ಕೂರುವ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಅವರಿಗೆ ಸಂಸ್ಥೆಯೊಂದು ಫುಡ್ ಕಿಟ್ ವಿತರಣೆ ಮಾಡಿ ಮಾನವೀಯತೆ ಮೆರೆದಿದೆ.

    ರಾಜ್ಯ ಸರ್ಕಾರ ನೀಡಬೇಕಾಗಿದ್ದ ಪಿಂಚಿಣಿ ಹಣವನ್ನು ನೀಡಿಲ್ಲ. ರಾಜ್ಯದ ಹೆಸರನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಗೊಳಿಸಿರೋ ಇವರಿಗೆ ಪ್ರೋತ್ಸಾಹ ಹಣ ಸಿಕ್ಕಿಲ್ಲ. ಹಣವಿಲ್ಲದೇ ಜೀವನ ನಡೆಸುವುದೇ ದುಸ್ತರವಾಗಿದೆ. ಇತಂಹ ಸಮಯಲ್ಲಿ ವಿಜಯನಗರದ ಮ್ಯಾಟ್ರಿಕ್ಸ್ ಫಿಟ್ನೇಸ್ ಮಾಲೀಕರಾದ ನವೀನ್ ಮತ್ತು ಎನರ್ಜಿಟಿಕ್ ಗ್ರೀನ್ ಸಂಸ್ಥೆಯ ಅನೂಪ ರೆಡ್ಡಿ ಅವ್ರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ಯಾರಾ ಕ್ರೀಡಾಪಟುಗಳಿಗೆ ಆಹಾರ ಕಿಟ್ ವಿತರಣೆ ಮಾಡಿದ್ದಾರೆ. ಇದನ್ನೂ ಓದಿ:  ಚಾರ್ಮಾಡಿ ಘಾಟಿಯಲ್ಲಿ ಮಂಗಗಳಿಗೆ ಬಾಳೆ ಹಣ್ಣು ನೀಡಿದ ಕಟೀಲ್

    ಲಾಕ್‍ಡೌನ್ ಸಮಯದಲ್ಲಿ ಮ್ಯಾಟ್ರಿಕ್ಸ್ ಫಿಟ್ನೇಸ್, ಎನರ್ಜಿಟಿಕ್ ಗ್ರೀನ್ ಸಂಸ್ಥೆಯ ಮಾಲೀಕರು ಸೇರಿಕೊಂಡು ಸಮಾಜದ ಕಡುವಬಡವರಿಗೆ ಇಲ್ಲಿವರೆಗೆ 1000ಕ್ಕೂ ಹೆಚ್ಚು ಆಹಾರದ ಕಿಟ್ಗಳನ್ನ ವಿತರಣೆ ಮಾಡಿದ್ದಾರೆ.  ಪ್ಯಾರಾ ಒಲಿಂಪಿಕ್ಸ್ ಕ್ರೀಡಾಪಟುಗಳಿಗೂ ಆಹಾರ ಕಿಟ್ ವಿತರಣೆ ಮಾಡಿದ್ದಾರೆ.

    ರಾಜ್ಯ ಸರ್ಕಾರ ಇತರ ವರ್ಗದವರಿಗೆ ನೀಡಿದಂತೆ ವಿಶೇಪ ಪ್ಯಾಕೇಜ್ ಅನ್ನ ವಿಕಲಾಂಗಚೇತನರಿಗೂ ವಿಶೇಷ ಪ್ಯಾಕೇಜ್ ನೀಡಿಬೇಕು ಅಂತಾ ವಿಕಲಚೇತನ ಕ್ರೀಡಾಪಟುಗಳು ಒತ್ತಾಯ ಮಾಡಿದ್ದಾರೆ. ಜೊತೆಗೆ ಇತಂಹ ಸಮಯದಲ್ಲಿ ನಿಮ್ಮ ನಿಮ್ಮ ಕೈಲಾದ ಸಹಾಯವನ್ನ ಮಾಡಿ ಎಂದು ನವೀನ್ ಹಾಗೂ ಅನೂಪ ರೆಡ್ಡಿ ಹೇಳಿದ್ದಾರೆ.

  • ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಎಲ್ಲದಕ್ಕೂ ಕ್ಯೂ: ಡಿ.ಕೆ.ಶಿವಕುಮಾರ್ ತರಾಟೆ

    ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಎಲ್ಲದಕ್ಕೂ ಕ್ಯೂ: ಡಿ.ಕೆ.ಶಿವಕುಮಾರ್ ತರಾಟೆ

    ಬೆಂಗಳೂರು:ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಆಸ್ಪತೆಯಲ್ಲಿ ಹಾಸಿಗೆ, ಚಿಕಿತ್ಸೆ, ಆಕ್ಸಿಜನ್, ಔಷಧಿ, ಕೊನೆಗೆ ಶವ ಸಂಸ್ಕಾರ ಸೇರಿ ಎಲ್ಲದಕ್ಕೂ ಜನ ಕ್ಯೂ ನಿಲ್ಲುವಂತೆ ಮಾಡಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

    ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಬಡವರಿಗೆ ಆಹಾರ ಕಿಟ್ ಹಾಗೂ ಆರ್ಥಿಕ ನೆರವು ವಿತರಣೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಿಷ್ಟು:

    ದೇಶದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಪ್ರತಿಯೊಂದು ವಿಚಾರಕ್ಕೂ ನಿಮ್ಮನ್ನೆಲ್ಲ ಕ್ಯೂ ನಿಲ್ಲಿಸಿದರಲ್ಲಾ ಅಂತಾ ಸಂಕಟವಾಗುತ್ತಿದೆ. ನೋಟು ರದ್ದು ಮಾಡಿ, ನಿಮ್ಮ ದುಡ್ಡು ನೀವು ತೆಗೆದುಕೊಳ್ಳಲು ಕ್ಯೂ ನಿಲ್ಲಿಸಿ ಸಾಯಿಸಿದರು. ನಂತರ ಆಧಾರ್ ಜೋಡಣೆ ವಿಚಾರವಾಗಿ ಮತ್ತೆ ಬ್ಯಾಂಕ್ ಮುಂದೆ ಕ್ಯೂ ನಿಲ್ಲಿಸಿದರು. ದೇಶಕ್ಕೆ ಮಹಾಮಾರಿ ಕರೆತಂದು, ಆಸ್ಪತ್ರೆ ಮುಂದೆ ಕ್ಯೂ, ಆಂಬುಲೆನ್ಸ್ ಗೂ ಕ್ಯೂ, ಔಷಧಿಗೂ ಕ್ಯೂ, ಆಕ್ಸಿಜನ್ ಗೂ ಕ್ಯೂ, ಕೊನೆಗೆ ಶವ ಸಂಸ್ಕಾರಕ್ಕೂ ಕ್ಯೂ ನಿಲ್ಲಿಸಿದರು.

    ಈಗ ಆಹಾರ ಕಿಟ್ ಕೊಡಲು ನಾವು ನಿಮ್ಮನ್ನು ಕ್ಯೂ ನಿಲ್ಲಿಸಿದ್ದೇವೆ. ಇದು ಸರ್ಕಾರದ ಆಹಾರ ಕಿಟ್ ಅಲ್ಲ, ಕಾಂಗ್ರೆಸ್ ನಾಯಕರು ತಮ್ಮ ಶ್ರಮದಿಂದ ಸಂಪಾದಿಸಿದ ಸ್ವಂತ ಹಣದಲ್ಲಿ ನೀಡುತ್ತಿರುವ ಕಿಟ್. ಬೆಂಗಳೂರಿನಿಂದ ದಿಲ್ಲಿವರೆಗೆ ದೇಶದಲ್ಲಿ ನೀವು ಬದಲಾವಣೆ ತರಬೇಕು. ಇದನ್ನೂ ಓದಿ: ಕೋವಿಡ್ ಮೂರನೇ ಅಲೆ ಎದುರಿಸಲು ಎಲ್ಲಾ ಮುಂಜಾಗರೂಕತಾ ಕ್ರಮ: ಸಿಎಂ ಬಿ.ಎಸ್.ಯಡಿಯೂರಪ್ಪ

    ಚುನಾವಣೆ ಕಾರಣಕ್ಕೆ ನಾವು ಇಲ್ಲಿಗೆ ಬಂದು ಈ ಕಾರ್ಯಕ್ರಮ ಮಾಡುತ್ತಿಲ್ಲ. ದೇಶದೆಲ್ಲೆಡೆ ಜನ ಸಂಕಟದಲ್ಲಿದ್ದು, ಅವರಿಗೆ ಸಹಾಯ ಮಾಡಲು ನಾವು ಈ ಇಲ್ಲಿಗೆ ಬಂದಿದ್ದೇವೆ. ನಾವು ಮಾಡುವ ಸಹಾಯದಿಂದ ನಿಮ್ಮ ಜೀವನ ಉದ್ಧಾರವಾಗುತ್ತದೆ ಎಂದು ಹೇಳುತ್ತಿಲ್ಲ. ಆದರೆ ಕಷ್ಟದಲ್ಲಿರುವ ಜನರ ಭಾರವನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ.

    ಬಡವರು, ಮಧ್ಯಮ ವರ್ಗದವರು ತಮ್ಮ ಬಳಿ ಇದ್ದ ಅಲ್ಪಸ್ವಲ್ಪ ಚಿನ್ನ ಅಡವಿಟ್ಟು ಜೀವನ ಮಾಡಲು ಮುಂದಾಗಿದ್ದಾರೆ. ಅನೇಕರು ಉದ್ಯೋಗ ಕಳೆದುಕೊಂಡರು. ಉದ್ಯೋಗ ಕೊಡುತ್ತೇವೆ ಎಂದವರು ವಿದ್ಯಾವಂತರಿಗೆ ಪಕೋಡಾ ಮಾರಲು ಹೇಳಿದರು. ಪಕೋಡಾ ಮಾಡುವ ಅಡುಗೆ ಎಣ್ಣೆ ಬೆಲೆಯನ್ನು ರೂ.200ಕ್ಕೆ ಹೆಚ್ಚಿಸಿದ್ದಾರೆ. ಇಡೀ ದೇಶದ ಜನರನ್ನು ಬಡತನಕ್ಕೆ ನೂಕಿದ್ದಾರೆ.

    ದೇಶದಲ್ಲಿ ಪೆಟ್ರೋಲ್ ಮೂಲಬೆಲೆ 35 ರೂ., ಅದಕ್ಕೆ ತೆರಿಗೆ 65 ರೂ. ನೆರೆ ರಾಷ್ಟ್ರಗಳಲ್ಲಿ ಅರ್ಧದಷ್ಟಿದ್ದರೂ ನಮ್ಮಲ್ಲಿ ಮಾತ್ರ ಬೆಲೆ ಹೆಚ್ಚುತ್ತಲೇ ಇದೆ. ಈ ಸರ್ಕಾರ ದಿನಾ ಜನರ ಜೇಬು ಪಿಕ್ ಪಾಕೆಟ್ ಮಾಡುತ್ತಿದೆ. ಇದನ್ನೂ ಓದಿ: ಎಲ್ಲರಿಗೂ ಲಸಿಕೆ ನೀಡುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು: ಜೋಶಿ

    ಆರ್ಥಿಕ ನೆರವು:
    ನಮ್ಮ ನಾಯಕರು ತಮ್ಮ ಸ್ವಂತ ಹಣದಲ್ಲಿ ನಿಮಗೆ ಸಹಾಯ ಮಾಡಲು ಮುಂದಾಗಿದ್ದಾರೆ. ನಮ್ಮ ನಾಯಕರೆಲ್ಲರೂ ಹಣ ಸೇರಿಸಿ ಈ ಕ್ಷೇತ್ರದ ಬಡ ಕುಟುಂಬಗಳಿಗೆ ತಲಾ 1 ಸಾವಿರ ರೂ. ನೀಡುತ್ತಿದ್ದಾರೆ. ಅವರಿಗೆ ಶಕ್ತಿ ತುಂಬಲು ನಾನಿಲ್ಲಿಗೆ ಬಂದಿದ್ದೇನೆ. ಈ ಹಣ ನಿಮ್ಮ ಎಲ್ಲಾ ಸಮಸ್ಯೆ ಬಗೆಹರಿಸದೆ ಇರಬಹುದು. ಆದರೆ ಕಷ್ಟಕಾಲದಲ್ಲಿ ನಿಮ್ಮ ಜತೆ ನಿಲ್ಲಲು ನಮ್ಮ ನಾಯಕರು ಮುಂದೆ ಬಂದಿದ್ದಾರೆ. ಅನೇಕರಿಗೆ ಊಟಕ್ಕೆ, ಔಷಧಿಗೆ ಹಣವಿರುವುದಿಲ್ಲ. ಹೀಗಾಗಿ ನಿಮ್ಮ ಕಷ್ಟಕ್ಕೆ ಸ್ಪಂದಿಸಲು ಈ ಹೆಜ್ಜೆ ಇಟ್ಟಿದ್ದಾರೆ. ಆ ಮೂಲಕ ನಿಮ್ಮ ಋಣ ತೀರಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದಾರೆ.

    ಕಳೆದ ಬಾರಿ ಹಾಲು ಕೇಳಿದವರಿಗೆ ಐಪಿಸಿ ಸೆಕ್ಷನ್ 307 ರ ಅಡಿ ಪ್ರಕರಣ ದಾಖಲಿಸಿದ್ದಾರೆ. ಇಲ್ಲಿನ ಬಿಜೆಪಿ ನಾಯಕರು ಪೊಲೀಸರನ್ನು ಬಳಸಿಕೊಂಡು ಮೂರ್ನಾಲ್ಕು ಕೇಸ್ ಹಾಕಿಸಿದ್ದಾರೆ ಎಂದು ಒಬ್ಬರು ಹೆಣ್ಣು ಮಗಳು ಹೇಳುತ್ತಿದ್ದರು. ಆ ರೀತಿ ನಿಮಗೆ ಯಾರಾದರೂ ಯಾವುದೇ ತೊಂದರೆ ಕೊಟ್ಟರೆ ನಮ್ಮನ್ನು ಭೇಟಿ ಮಾಡಿ. ನಿಮ್ಮ ರಕ್ಷಣೆಗೆ ಕಾಂಗ್ರೆಸ್ ಸದಾ ನಿಲ್ಲಲಿದೆ. ಮುಂದಿನ ದಿನಗಳಲ್ಲಿ ಕಾರ್ಪೊರೇಷನ್ ಚುನಾವಣೆ ಬರುತ್ತಿದೆ, ವಿಧಾನಸಭೆ ಚುನಾವಣೆಯೂ ಬರಲಿದೆ. ನೀವು ಬಿಜೆಪಿಯವರಿಗೆ ಬುದ್ದಿ ಕಲಿಸಬೇಕು. ನಾವು ನಿಮ್ಮ ಜತೆ ಇರುತ್ತೇವೆ.

  • ಪಕ್ಷ ಹೇಳಿದ್ದಕ್ಕಿಂತ ಹೆಚ್ಚು ಸೇವೆ ಮಾಡುತ್ತಿದ್ದಾರೆ- ಜಮೀರ್ ಗೆ ಸಿದ್ದರಾಮಯ್ಯ ಬಹುಪರಾಕ್

    ಪಕ್ಷ ಹೇಳಿದ್ದಕ್ಕಿಂತ ಹೆಚ್ಚು ಸೇವೆ ಮಾಡುತ್ತಿದ್ದಾರೆ- ಜಮೀರ್ ಗೆ ಸಿದ್ದರಾಮಯ್ಯ ಬಹುಪರಾಕ್

    ಬೆಂಗಳೂರು: ಶಾಸಕ ಜಮೀರ್ ಅಹಮದ್ ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಹುಪರಾಕ್ ಹೇಳಿದ್ದು, ಪಕ್ಷ ಹೇಳಿದ್ದಕ್ಕಿಂತ ಹೆಚ್ಚು ಜನರ ಸೇವೆ ಮಾಡುತ್ತಿದ್ದಾರೆ. ಜಮೀರ್ ಆಡಳಿತ ಪಕ್ಷದವರಿಗಿಂತ ಹೆಚ್ಚು ಕೆಲಸ ಮಾಡುತ್ತಿದ್ದಾರೆ ಎಂದು ಕೊಂಡಾಡಿದ್ದಾರೆ.

    ರಾಯಪುರ ವಾರ್ಡ್ ನಲ್ಲಿ ಜಮೀರ್ ಅಹಮದ್ ಆಯೋಜಿಸಿದ್ದ ದಿನಸಿ ಕಿಟ್ ಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಮೀರ್ ಮನುಷ್ಯತ್ವ ಇರುವ ಶಾಸಕ. ಯಾರೇ ಬಂದರೂ, ಸಾಲ ಮಾಡಿಯಾದರೂ ಜನರಿಗೆ ಸಹಾಯ ಮಾಡುತ್ತಾರೆ. ಇಂಥ ಶಾಸಕರನ್ನು ಪಡೆದ ಚಾಮರಾಜಪೇಟೆ ಜನರು ಧನ್ಯರು. ಜಮೀರ್ ಇಲ್ಲೇ ಗೆದ್ದು ಮುಂದೆ ಸಚಿವರಾಗಲಿ ಎಂದು ಹಾಡಿ ಹೊಗಳಿದ್ದಾರೆ.

    ಇದೇ ವೇಳೆ ಚಾಮರಾಜಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಚಾಮರಾಜಪೇಟೆ ಕ್ಷೇತ್ರಕ್ಕೆ ಸಿದ್ದರಾಮಯ್ಯ ಯಾಕೆ ಪದೇ ಪದೇ ಹೋಗುತ್ತಾರೆ ಎಂದು ಬಹಳ ಜನ ಪ್ರಶ್ನಿಸುತ್ತಾರೆ. ತಮ್ಮ ಕ್ಷೇತ್ರಕ್ಕೆ ಜಮೀರ್ ಪದೇ ಪದೇ ಕರೆಯುತ್ತಾರೆ, ಅದಕ್ಕೆ ಬರುತ್ತಿರುತ್ತೇನೆ. ಬಾದಾಮಿ ಬಿಟ್ಟು ಚಾಮರಾಜಪೇಟೆಯಲ್ಲೇ ಸ್ಪರ್ಧಿಸಲು ಜಮೀರ್ ಹೇಳುತ್ತಾರೆ. ಅದು ಜಮೀರ್ ಖಾನ್ ಔದಾರ್ಯ, ಈ ಕ್ಷೇತ್ರಕ್ಕೆ ಬನ್ನಿ ಎಂದು ಔದಾರ್ಯ ತೋರಿಸುತ್ತಿದ್ದಾರೆ. ಆದರೆ ನಾನು ಬಾದಾಮಿಯಲ್ಲೇ ಸ್ಪರ್ಧಿಸುತ್ತೇನೆ ಎಂದರು. ಈ ವೇಳೆ ಸಿದ್ದರಾಮಯ್ಯನವರಿಗೆ ಚಾಮರಾಜಪೇಟೆಯಲ್ಲೇ ಸ್ಪರ್ಧಿಸಿ ಎಂದು ಜಮೀರ್ ಒತ್ತಾಯಿಸಿದ್ದು, ಜಮೀರ್ ಬೆಂಬಲಿಗರು ಸಹ ಇದಕ್ಕೆ ದನಿಗೂಡಿಸಿದರು. ಬಳಿಕ ಅದೇನೇ ಇರಲಿ, ಅದರ ಬಗ್ಗೆ ಆಮೇಲೆ ಯೋಚನೆ ಮಾಡೋಣ ಎಂದು ಸಿದ್ದರಾಮಯ್ಯ ತಿಳಿಸಿದರು.

    ರಾಯಪುರ ವಾರ್ಡ್ ನಲ್ಲಿ ಶಾಸಕ ಜಮೀರ್ ಅಹಮದ್ ರಿಂದ ದಿನಸಿ ಕಿಟ್ ಗಳ ವಿತರಣೆ ಕಾರ್ಯಕ್ರಮ ನಡೆಸಲಾಯಿತು. 300 ಜನ ಪೌರ ಕಾರ್ಮಿಕರಿಗೆ ಉಚಿತ ಕಿಟ್ ಗಳ ವಿತರಣೆ ಮಾಡಲಾಯಿತು.

  • ಕೊರೊನಾದಿಂದ ನಿಧನವಾಗಿದ್ದ ಗ್ರಾಮ ಪಂಚಾಯಿತಿ ಸದಸ್ಯನ ಜನ್ಮದಿನಾಚರಣೆಯಲ್ಲಿ ಡಿಕೆಶಿ ಭಾಗಿ

    ಕೊರೊನಾದಿಂದ ನಿಧನವಾಗಿದ್ದ ಗ್ರಾಮ ಪಂಚಾಯಿತಿ ಸದಸ್ಯನ ಜನ್ಮದಿನಾಚರಣೆಯಲ್ಲಿ ಡಿಕೆಶಿ ಭಾಗಿ

    – ಆಹಾರ, ತರಕಾರಿ ಕಿಟ್ ವಿತರಣೆ

    ಬೆಂಗಳೂರು: ಕೊರೊನಾದಿಂದ ನಿಧನವಾಗಿದ್ದ ಗ್ರಾಮ ಪಂಚಾಯಿತಿ ಸದಸ್ಯನ ಹುಟ್ಟುಹಬ್ಬದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗವಹಿಸಿ, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಫುಡ್ ಕಿಟ್ ವಿತರಿಸಿದ್ದಾರೆ.

    ಕಳೆದ ತಿಂಗಳು ಕೊರೊನಾದಿಂದ ನಿಧನರಾದ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಕಾಂತರಾಜು ಅವರ ಜನ್ಮದಿನದ ಅಂಗವಾಗಿ ಮಾಗಡಿ ವಿಧಾನಸಭೆ ಕ್ಷೇತ್ರದ ಬಿಡದಿಯ ಹೆಜ್ಜಾಲದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಡಿ.ಕೆ.ಶಿವಕುಮಾರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದನ್ನೂ ಓದಿ: 10 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆಗೆ ನಿಖಿಲ್ ಕುಮಾರಸ್ವಾಮಿ ಚಾಲನೆ

    ಬಳಿಕ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಡವರಿಗೆ ಆಹಾರ ಮತ್ತು ತರಕಾರಿ ಕಿಟ್ ಗಳನ್ನು ವಿತರಿಸಿದರು. ಸಂಸದ ಡಿ.ಕೆ.ಸುರೇಶ್, ಮಾಜಿ ಶಾಸಕ ಬಾಲಕೃಷ್ಣ ಮತ್ತಿತರ ಮುಖಂಡರು ಭಾಗವಹಿಸಿದ್ದರು.

  • 10 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆಗೆ ನಿಖಿಲ್ ಕುಮಾರಸ್ವಾಮಿ ಚಾಲನೆ

    10 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆಗೆ ನಿಖಿಲ್ ಕುಮಾರಸ್ವಾಮಿ ಚಾಲನೆ

    ತುಮಕೂರು: ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತುಮಕೂರಿನಲ್ಲಿಂದು 10 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ತುಮಕೂರು ಗ್ರಾಮಾಂತರ ಕ್ಷೇತ್ರದ ಬಳ್ಳಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಮಾರು 10 ಸಾವಿರ ಕುಟುಂಬಗಳಿಗೆ ಕಿಟ್ ಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ಇದನ್ನೂ ಓದಿ: ಕೊರೊನಾ ವಾರಿಯರ್​​​ಗಳಿಗೆ ಆಹಾರ ಕಿಟ್ ವಿತರಿಸಿದ ನಿಖಿಲ್ ಕುಮಾರಸ್ವಾಮಿ

    ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ. ಗೌರಿಶಂಕರ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ದಿನಸಿ ಪದಾರ್ಥಗಳ ಕಿಟ್, ತರಕಾರಿ, ಹಣ್ಣು-ಹಂಪಲು ಹಾಗೂ ಮಾಸ್ಕ್ ವಿತರಣೆ ಮಾಡಲಾಯಿತು. ಕೊರೊನಾದಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದ ಜನರಿಗೆ ಆಹಾರ ಕಿಟ್ ಉಚಿತವಾಗಿ ನೀಡುವ ಮೂಲಕ ನಿಖಿಲ್ ಕುಮಾರಸ್ವಾಮಿ ಜನ ಸೇವೆಗೆ ಮುಂದಾಗಿದ್ದಾರೆ.

  • ಯಡಿಯೂರಪ್ಪನವರು ಸಿಎಂ ಆದಾಗೆಲ್ಲಾ ಕಷ್ಟ ಬರುತ್ತವೆ: ಗೂಳಿಹಟ್ಟಿ ಶೇಖರ್

    ಯಡಿಯೂರಪ್ಪನವರು ಸಿಎಂ ಆದಾಗೆಲ್ಲಾ ಕಷ್ಟ ಬರುತ್ತವೆ: ಗೂಳಿಹಟ್ಟಿ ಶೇಖರ್

    ಚಿತ್ರದುರ್ಗ: ರಾಜ್ಯದ ಚುಕ್ಕಾಣಿ ಹಿಡಿದರೆ ಸಾಕು ನಮ್ಮ ಹಣೆ ಬರಹವೇ ಬದಲಾಗುತ್ತದೆ ಅಂತ ಕೆಲ ರಾಜಕಾರಣಿಗಳು ಕನಸು ಕಾಣುತ್ತಾರೆ. ಆದರೆ ನಮ್ಮ ಬಿ.ಎಸ್. ಯಡಿಯೂರಪ್ಪನವರ ಗ್ರಹಚಾರವೋ ಏನೋ ಗೊತ್ತಿಲ್ಲ. ಅವರು ಸಿಎಂ ಆದಾಗೆಲ್ಲಾ ಕಷ್ಟಗಳು ಬಂದೇ ಬರುತ್ತಿವೆ ಎಂದು ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅನುಕಂಪ ವ್ಯಕ್ತಪಡಿಸಿದ್ದಾರೆ.

    ಹೊಸದುರ್ಗ ನಗರದ ಸ್ಲಂ ನಿವಾಸಿಗಳು ಹಾಗೂ ಕಡು ಬಡವರಿಗೆ ಉಚಿತವಾಗಿ 6,500 ಆಹಾರ ಕಿಟ್ ವಿತರಿಸಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬಿಎಸ್ ವೈ ಬದಲಾವಣೆ ವಿಚಾರದ ಚರ್ಚೆ ನಡೆಯುತ್ತಿದೆ. ಆದರೆ ರಾಜ್ಯದ ಸಿಎಂ ಆಗಿ ಬಿಎಸ್‍ವೈ ಅವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಆದರೆ ಅವರ ಗ್ರಹಚಾರವೋ, ಏನೋ ಗೊತ್ತಿಲ್ಲ ಅವರು ಕಳೆದ ಬಾರಿ ಮುಖ್ಯಮಂತ್ರಿಯಾದಾಗ ಎಲ್ಲೆಡೆ ನೆರೆ ಹಾವಳಿಯ ಸಂಕಷ್ಟ ಎದುರಾಗಿತ್ತು. ಆಗ ಎದೆಗುಂದದೇ ನೆರೆಹಾವಳಿಯನ್ನು ಸಿಎಂ ಎದುರಿಸಿದರು. ಈ ಬಾರಿಯು ಸಹ ನೆರೆ ಹಾವಳಿ ಜೊತೆಗೆ ಕೋವಿಡ್ ಸಂಕಷ್ಟ ಎದುರಾಗಿದೆ ಎಂದರು.ಇದನ್ನು ಓದಿ: 8 ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಸಭೆ – ಏನು ಚರ್ಚೆ ನಡೆಯಿತು?

    ಹೀಗಾಗಿ ಪ್ರತಿದಿನ ತೀವ್ರ ಒತ್ತಡದಲ್ಲಿ ಸಿಎಂ ಕೆಲಸ ಮಾಡುವಂತಾಗಿದೆ. ಇಂತಹ ಸಮಯದಲ್ಲಿ ಮುಖ್ಯಮಂತ್ರಿಯಾಗಿ ನೆಮ್ಮದಿಯಿಂದ ಎಲ್ಲಾ ಪೂರೈಸುವುದು ಕಷ್ಟ ಎನಿಸುತ್ತಿದೆ. ಆದರೆ ಸಿಎಂ ಸ್ಥಾನದ ಬಗ್ಗೆ ಪಕ್ಷದ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ. ಸಿಎಂ ಬದಲಾವಣೆ ಬಗ್ಗೆ ನಾನೇನು ಹೇಳಿಕೆ ನೀಡಲ್ಲ, ನಮ್ಮ ಪಕ್ಷದ ತೀರ್ಮಾನವೇ ಅಂತಿಮ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಸ್ಪಷ್ಟಪಡಿಸಿದ್ದಾರೆ. ಇದನ್ನು ಓದಿ: ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಎಂಟ್ರಿ..!

  • ಮಂಗಳಮುಖಿಯರಿಗೆ ಲಸಿಕೆಯೊಂದಿಗೆ ದಿನಸಿ ಕಿಟ್ ವಿತರಣೆ

    ಮಂಗಳಮುಖಿಯರಿಗೆ ಲಸಿಕೆಯೊಂದಿಗೆ ದಿನಸಿ ಕಿಟ್ ವಿತರಣೆ

    ಬೆಂಗಳೂರು: ಮಂಗಳಮುಖಿಯರಿಗೆ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ನೇತೃತ್ವದಲ್ಲಿ ಉಚಿತ ದಿನಸಿ ಕಿಟ್ ವಿತರಣೆ ಮಾಡಲಾಯ್ತು. ಇದೇ ವೇಳೆ ಹಲವು ಮಂಗಳಮುಖಿಯರಿಗೆ ಕೋವಿಡ್-19 ಲಸಿಕೆ ಸಹ ಹಾಕಿಸಲಾಯಿತು.


    ಬೆಳಗ್ಗೆ 9ಗಂಟೆಗೆ ನಗರದ ಟೌನ್ ಹಾಲ್ ಮುಂದೆ ಸುಮಾರು 1 ಸಾವಿರ ಮಂಗಳಮುಖಿಯರಿಗೆ ರೇಷನ್ ಕಿಟ್ ವಿತರಿಸುದರೊಂದಿಗೆ, ಕೆಲವರಿಗೆ ಕೋವಿಡ್ ಲಸಿಕೆಯನ್ನು ಪೊಲೀಸ್ ಸಿಬ್ಬಂದಿ ವರ್ಗದವರಿಂದ ಉಚಿತವಾಗಿ ಹಾಕಿಸಲಾಯಿತು. ಇದನ್ನೂ ಓದಿ: ಮಂಗಳಮುಖಿಯರಿಗೆ ಕಿಚ್ಚನ ನೆರವು

    ಶಾಸಕ ಉದಯ್ ಗರುಡಾಚಾರ್, ಐಪಿಎಸ್, ಟ್ರಾಫಿಕ್ ಜಾಯಿಂಟ್ ಕಮಿಷನರ್ ಡಾ. ರವಿಕಾಂತೆಗೌಡ, ಎಸಿಪಿಗಳಾದ ನಜ್ಮಾ ಫಾರೂಕಿ, ರಮೇಶಬಾಬು ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

  • ಅಧಿಕಾರ ಶಾಶ್ವತವಲ್ಲ, ಜನರ ಸೇವೆ ಪೂರ್ವಜನ್ಮದ ಪುಣ್ಯದ ಕೆಲಸ – ಕಿಟ್ ವಿತರಿಸಿದ ಶಾಸಕ ಮುನಿರತ್ನ

    ಅಧಿಕಾರ ಶಾಶ್ವತವಲ್ಲ, ಜನರ ಸೇವೆ ಪೂರ್ವಜನ್ಮದ ಪುಣ್ಯದ ಕೆಲಸ – ಕಿಟ್ ವಿತರಿಸಿದ ಶಾಸಕ ಮುನಿರತ್ನ

    ಬೆಂಗಳೂರು: ಕೊರೊನಾದಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಜನರ ನೆರವಿಗೆ ಮುಂದಾಗಿರುವ ಶಾಸಕ ಮುನಿರತ್ನ ಅವರು, ರಾಜರಾಜೇಶ್ವರಿ ನಗರದ ಎಲ್ಲಾ ವಾರ್ಡ್‍ನ ಜನರಿಗೆ ಉಚಿತ ದಿನಸಿ ಪದಾರ್ಥಗಳನ್ನು ಹಂಚುತ್ತಿದ್ದಾರೆ.

    ಇಂದು ಕೊಟ್ಟಿಗೆಪಾಳ್ಯದಲ್ಲಿ ಜನರಿಗೆ ಉಚಿತ ದಿನಸಿ ಪದಾರ್ಥಗಳ ಹಂಚಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕರು, ತರಕಾರಿ ಹಾಗೂ ದಿನಸಿ ಪದಾರ್ಥಗಳನ್ನು ಒಳಗೊಂಡಿರುವ ಕಿಟ್‍ನ್ನು ನೂರಾರು ಜನರಿಗೆ ಹಂಚುವ ಮೂಲಕ ಕೊರೊನಾ ಕಷ್ಟಕಾಲದಲ್ಲಿ ಸಮಸ್ಯೆ ಎದುರಿಸುತ್ತಿರುವ ಜನರಿಗೆ ನೆರವಿನ ಹಸ್ತ ಚಾಚಿದ್ದಾರೆ. ಇದನ್ನೂ ಓದಿ: ಆರ್‌ಆರ್‌ ನಗರದಲ್ಲಿ 400 ಹಾಸಿಗೆಗಳ ಸುಸಜ್ಜಿತ ಕೋವಿಡ್ ಆಸ್ಪತ್ರೆ ನಿರ್ಮಾಣ: ಶಾಸಕ ಮುನಿರತ್ನ

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುನಿರತ್ನ ಅವರು, ಅಧಿಕಾರ ಶಾಶ್ವತವಲ್ಲ ಅಧಿಕಾರ ಇರಲಿ, ಇಲ್ಲದೆ ಇರಲಿ ಆ ಜನರ ಸೇವೆ ಮಾಡುವುದು ಪೂರ್ವಜನ್ಮದ ಪುಣ್ಯ ಆ ಕೆಲಸ ನಾನು ಮಾಡುತ್ತಿದ್ದೇನೆ. ಇಂತಹ ಕಷ್ಟ ಕಾಲದಲ್ಲಿ ಮತದಾರ ಬಂಧುಗಳಿಗೆ ಮೊದಲಿಗೆ ನೆನಪಿಗೆ ಬರುವುದು ರಾಜಕಾರಣಿಗಳು. ಆಯಾ ಕ್ಷೇತ್ರದಲ್ಲಿರುವ ಸಣ್ಣ ಮಟ್ಟಿನಿಂದ ಹಿಡಿದು ದೊಡ್ಡ ಮಟ್ಟದ ರಾಜಕಾರಣಿ ಅಂದರೆ ತಾಲೂಕು, ಜಿಲ್ಲೆ, ನಗರ ಪ್ರದೇಶದಲ್ಲಿರುವ ರಾಜಕಾರಣಿಗಳು ಅಥವಾ ಶಾಸಕರು, ಸಂಸದರು ಇರಬಹುದು. ಕಷ್ಟ ಎಂದು ಬಂದಾಗ ಸಾರ್ವಜನಿಕರು ಮೊದಲಿಗೆ ಅವರನ್ನು ನೆನಪಿಸಿಕೊಳ್ಳುತ್ತಾರೆ. ಆ ರಾಜಕಾರಣಿ ಆ ಸಂದರ್ಭದಲ್ಲಿ ಜನರಿಗೆ ನೆರವಿನ ಹಸ್ತ ಚಾಚಿಲ್ಲ ಅಂದರೆ ಅವರನ್ನು ದೇವರು ಕೂಡ ಮೆಚ್ಚುವುದಿಲ್ಲ ಎಂದರು. ಇದನ್ನೂ ಓದಿ: ಬಡಜನರ ಕಷ್ಟ ಅರಿತು ದಿನಸಿ, ತರಕಾರಿ ವಿತರಿಸಿದ ಶಾಸಕ ಮುನಿರತ್ನ 

    ನನ್ನ ಕ್ಷೇತ್ರದಲ್ಲಿ ನನ್ನ ಮತದಾರರ ಸೇವೆ ಮಾಡುವಂತಹ ಭಾಗ್ಯ ಜನ ನನಗೆ ಕಲ್ಪಿಸಿಕೊಟ್ಟಿದ್ದಾರೆ. ಅವರ ಋಣದಲ್ಲಿ ನಾನು ಇದ್ದೇನೆ. ಅವರ ಋಣ ತೀರಿಸುವ ಕೆಲಸ ನಾನು ಮಾಡುತ್ತಾ ಇರುತ್ತೇನೆ. ಕೊರೊನಾ ಮೊದಲನೇ ಅಲೆಯಲ್ಲೂ ನಾನು ಸಹಾಯ ಮಾಡಿದ್ದೇನೆ. ಎರಡನೇ ಅಲೆಯಲ್ಲೂ ಮಾಡುತ್ತಿದ್ದೇನೆ. ಮೊದಲನೇ ಅಲೆಯ ಸಂದರ್ಭ ನಾನು ಶಾಸಕನಾಗದೆ ಇದ್ದರು ಜನರ ಸೇವೆ ಮಾಡಿದ್ದೇನೆ. ಇದೀಗ ಶಾಸಕನಾಗಿ ಕೂಡ ಜನರ ಸೇವೆ ಮುಂದಾಗಿದ್ದೇನೆ ಎಂದು ಅಭಿಪ್ರಾಯಪಟ್ಟರು.

  • ಉಡುಪಿ ಮಲಬಾರ್  ಗೋಲ್ಡ್‌ನಿಂದ 18 ಲಕ್ಷ ರೂ. ಫುಡ್ ಕಿಟ್ ವಿತರಣೆ

    ಉಡುಪಿ ಮಲಬಾರ್  ಗೋಲ್ಡ್‌ನಿಂದ 18 ಲಕ್ಷ ರೂ. ಫುಡ್ ಕಿಟ್ ವಿತರಣೆ

    ಉಡುಪಿ: ಕೊರೊನಾ ಎರಡನೇ ಅಲೆಯ ಸಂದರ್ಭ ಉಡುಪಿಯ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಸಂಸ್ಥೆ 18 ಲಕ್ಷ ರೂಪಾಯಿ ವೆಚ್ಚದ ಕಿಟ್ ಗಳನ್ನು ಸಾರ್ವಜನಿಕರಿಗೆ ಹಂಚಿ ಮಾನವೀಯತೆ ಮೆರೆದಿದೆ.

    ಉಡುಪಿಯ ಜ್ಯುವೆಲ್ಲರಿ ಮಳಿಗೆ ಮಲಬಾರ್ ಗೋಲ್ಡ್ ಚಾರಿಟೇಬಲ್ ಟ್ರಸ್ಟ್ ನ ಸಾಮಾಜಿಕ ಸೇವೆ ಮುಂದುವರಿದಿದೆ. ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 25 ಅರ್ಹ ಫಲಾನುಭವಿಗಳಿಗೆ ದಿನಸಿ ಸಾಮಾನುಗಳನ್ನು ವಿತರಣೆ ಮಾಡಲಾಯಿತು. ಮಲಬಾರ್ ಗೋಲ್ಡ್ ಸಿಬ್ಬಂದಿಗಳು, ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರು ಕಿಟ್ ಗಳನ್ನು ವಿತರಣೆ ಮಾಡಿದರು.

    ಉಪ್ಪೂರು ಪಂಚಾಯತ್ ವ್ಯಾಪ್ತಿಯ ಆರ್ಥಿಕವಾಗಿ ಸಂಕಷ್ಟದಲ್ಲಿರುವ, ಕೂಲಿಕಾರ್ಮಿಕ ಕುಟುಂಬಗಳಿಗೆ ಫುಡ್ ಕಿಟ್ ವಿತರಿಸಲಾಯ್ತು. ಈ ಸಂದರ್ಭದಲ್ಲಿ, ಚಾರಿಟಿ ಉಸ್ತುವಾರಿ ತಂಝೀಮ್ ಶಿರ್ವ, ಇರ್ಷಾದ್, ನಿತಿನ್ ಶೇಟ್, ತಸ್ಲೀಮ್, ಫಯಾಜ್ ಉಪಸ್ಥಿತರಿದ್ದರು. ಕಳೆದ ಒಂದು ತಿಂಗಳಲ್ಲಿ ಮಲಬಾರ್ ಗೋಲ್ಡ್ 18 ಲಕ್ಷ ರುಪಾಯಿ ವೆಚ್ಚದ, 3000 ಫುಡ್ ಕಿಟ್ ವಿತರಣೆ ಮಾಡಿದೆ. ಜಿಲ್ಲೆಯ 80 ಕ್ಕೂ ಹೆಚ್ಚು ಗ್ರಾಮಗಳಿಗೆ ಟ್ರಸ್ಟ್ ದಿನಸಿಯನ್ನು ಒದಗಿಸಿದೆ.

    ಮಲಬಾರ್ ಗೋಲ್ಡ್ ಉಡುಪಿ ಇದರ ಸ್ಟೋರ್ ಹೆಡ್ ಹಫೀಜ್ ರೆಹಮಾನ್ ಮಾತನಾಡಿ, ನಮ್ಮ ಸಂಸ್ಥೆ ಆರಂಭದ ದಿನಗಳಿಂದಲೂ ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿದೆ. ಕೊರೊನಾ ಸಂದರ್ಭದಲ್ಲಿ ಬಹಳಷ್ಟು ಜನ ಇಕ್ಕಟ್ಟಿಗೆ ಸಿಲುಕಿದ್ದಾರೆ. ಆರ್ಥಿಕವಾಗಿ ಬಹಳ ಹಿಂದುಳಿದ ಜನಗಳನ್ನು ಗುರುತಿಸಿ ಅವರ ದೈನಂದಿನ ಜೀವನಕ್ಕೆ ಬಳಕೆಯಾಗುವ ವಸ್ತುಗಳನ್ನು ಕೊಡುತ್ತಿದ್ದೇವೆ. ಸಂಕಷ್ಟದ ಕಾಲದಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲದಿದ್ದರೆ ದೇವರು ಮೆಚ್ಚುವುದಿಲ್ಲ. ದಿನಸಿ ಕಿಟ್ ಗಳ ಜೊತೆ ಅನಾರೋಗ್ಯ ಪೀಡಿತರಿಗೆ ಹೆಲ್ತ್ ಕಿಟ್ ಗಳನ್ನು ಕೂಡ ಕೊಟ್ಟಿದ್ದೇವೆ ಎಂದರು.

  • ಏಳೆಂಟು ಕಿ.ಮೀ. ಹೆಗಲ ಮೇಲೆ ಫುಡ್ ಕಿಟ್ ಹೊತ್ತು ಬಡವರಿಗೆ ನೀಡಿದ ಹೃದಯವಂತರು

    ಏಳೆಂಟು ಕಿ.ಮೀ. ಹೆಗಲ ಮೇಲೆ ಫುಡ್ ಕಿಟ್ ಹೊತ್ತು ಬಡವರಿಗೆ ನೀಡಿದ ಹೃದಯವಂತರು

    – ಆಶಾ ಕಾರ್ಯಕರ್ತೆಯರಿಗೆ ಬಾಗಿನ ನೀಡಿ ಗೌರವ ಸಮರ್ಪಣೆ

    ಚಿಕ್ಕಮಗಳೂರು: ನಕ್ಸಲ್ ಪೀಡಿತ ಪ್ರದೇಶ ಹಾಗೂ ಕುಗ್ರಾಮಗಳಲ್ಲಿರುವ ಬಡವರು, ನಿರ್ಗತಿಕರು, ವಿಕಲಚೇತನರನ್ನ ಗುರುತಿಸಿ ಅವರ ಮನೆ ಬಾಗಿಲಿಗೆ ಹೋಗಿ ಕಿಟ್ ವಿತರಿಸಿರುವಂತಹ ಹೃದಯ ವೈಶಾಲ್ಯತೆಯ ಘಟನೆಗೆ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಹೋಬಳಿ ಸಾಕ್ಷಿಯಾಗಿದೆ.

    ಜಯಪುರದಲ್ಲಿರುವ ಸ್ಪಂದನಾ ಟ್ರಸ್ಟ್‍ನ ಸದಸ್ಯರು ತಮ್ಮ ಹೋಬಳಿ ವ್ಯಾಪ್ತಿಯಲ್ಲಿ ಬರುವ ನಿರ್ಗತಿಕರು, ನಿರಾಶ್ರಿತರು, ಅಂಗವಿಕಲರು, ವೃದ್ಧರಿಗೆ ಕಿಟ್ ನೀಡಿ ಧೈರ್ಯ ತುಂಬಿದ್ದಾರೆ. ಜೊತೆಗೆ ಮೆಣಸಿನ ಹಾಡ್ಯ, ಇಡಗುಂದ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿರುವ ವಿವಿಧ ನಕ್ಸಲ್ ಪೀಡಿತ ಪ್ರದೇಶಗಳ ಬಡವರಿಗೂ ಕಿಟ್ ನೀಡಿದ್ದಾರೆ. ಇದೇ ವೇಳೆ, ಜೀವದ ಹಂಗನ್ನ ತೊರೆದು ಕುಗ್ರಾಮಗಳ ಜನರ ಜೀವವನ್ನು ಉಳಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೂ ಬಾಗಿನ ನೀಡಿ ಗೌರವಿಸಿದ್ದಾರೆ.

    ಹೆಮ್ಮಾರಿ ಕೊರೊನಾ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಎರಡನೇ ಅಲೆಯ ಅಬ್ಬರ ಗ್ರಾಮೀಣ ಭಾಗದ ಜನರ ಕಷ್ಟವನ್ನು ಹೇಳುವಂತಿಲ್ಲ. ಅದರಲ್ಲೂ ಮಲೆನಾಡ ಕುಗ್ರಾಮಗಳು, ನಕ್ಸಲ್ ಪೀಡಿತ ಪ್ರದೇಶದ ಜನರ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗಿದೆ. ಮಲೆನಾಡ ಬಹುತೇಕ ಭಾಗದಲ್ಲಿ ಜನ ಅಂದೇ ದುಡಿದು ಅಂದೇ ಊಟ ಮಾಡುವವರೇ ಹೆಚ್ಚು. ಕೊರೊನಾ ಕಾಲದಲ್ಲಂತೂ ಕೈಯಲ್ಲಿ ಹಣವಿಲ್ಲ, ಕೂಲಿಯೂ ಇಲ್ಲ. ಸಾರಿಗೆ ಸಂಪರ್ಕವೂ ಇಲ್ಲ. ನಗರ ಪ್ರದೇಶಕ್ಕೂ ಬರುವಂತಿಲ್ಲ. ಹೀಗಾಗಿ ಜನರ ಕಷ್ಟವನ್ನು ಕಣ್ಣಲ್ಲಿ ನೋಡದಿದ್ದರೂ ಸಹ ಸ್ಪಂದನ ಟ್ರಸ್ಟ್‍ನ ಸದಸ್ಯರು ಅವರ ಸಂಕಟವನ್ನ ಮನಗಂಡು ಕಿಟ್ ನೀಡಿ ಅವರ ನೆರವಿಗೆ ನಿಂತಿದ್ದಾರೆ. ದಟ್ಟ ಕಾನನ, ರಸ್ತೆ ಸಂಪರ್ಕವೂ ಇರಲ್ಲ. ಸಾರಿಗೆ ವ್ಯವಸ್ಥೆಯಂತೂ ಮೊದಲೇ ಇಲ್ಲ. ಅಂತಹ ಹಲವು ಗ್ರಾಮಗಳಿವೆ. ಗ್ರಾಮಗಳ ಬಡಕುಟುಂಬಗಳನ್ನು ಗುರುತಿಸಿ ಕಿಟ್ ನೀಡಲು ಕಾಡು-ಮೇಡು ಸುತ್ತಿ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ.

    ಕೊರೊನಾ ಲಾಕ್‍ಡೌನ್‍ನಲ್ಲಿ ನಗರಕ್ಕೆ ಬರಲು ಸಾಧ್ಯವಾಗದೆ ಹಸಿವಿನ ಸಂಕಟದಲ್ಲಿರುವ ಜನರ ನೆರವಿಗೆ ನಿಂತಿದ್ದಾರೆ. ಗುಡ್ಡಗಾಡಿನ ಸ್ಥಳಗಳಿಗೆ ಹೋಗಿ ಅಲ್ಲಿರುವ ಬಡ ಕುಟುಂಬಗಳಿಗೆ ಕಿಟ್ ವಿತರಿಸಿ ಅವರಿಗೆ ಸಹಾಯದ ಹಸ್ತ ತೋರಿದ್ದಾರೆ. ಸ್ಪಂದನ ಟ್ರಸ್ಟ್‍ನ ಈ ಸೇವಾ ಕಾರ್ಯಕ್ಕೆ ರಾಷ್ಟ್ರೀಯ ಸ್ವಯಂ ಸೇವಕರ ತಂಡ ಕೂಡ ಸಹಕಾರ ನೀಡಿದೆ.

    ಸ್ಪಂದನ ಟ್ರಸ್ಟಿಗಳ ಕೆಲಸಕ್ಕೆ ಅಲ್ಲಿನ ಜನ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ಇದರ ಜೊತೆ, ಜೀವದ ಹಂಗು ತೊರೆದು ಕೊರೋನಾ ವಿರುದ್ಧ ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೂ ಸೀರೆ ಸೇರಿದಂತೆ ಬಾಗಿನ ನೀಡಿ ಗೌರವಿಸಿ ಅವರ ಸೇವೆಯನ್ನ ಶ್ಲಾಘಿಸಿದರು.