Tag: food grains

  • ಬೇಳೆಕಾಳುಗಳ ದರ ಏರಿಕೆ – ಯಾವುದಕ್ಕೆ ಎಷ್ಟು ರೂ.?

    ಬೇಳೆಕಾಳುಗಳ ದರ ಏರಿಕೆ – ಯಾವುದಕ್ಕೆ ಎಷ್ಟು ರೂ.?

    ಬೆಂಗಳೂರು: ದಿನೇ ದಿನೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗುತ್ತಿದ್ದು, ಇದರ ನೇರ ಪರಿಣಾಮ ಬೇಳೆಕಾಳುಗಳ ಮೇಲೆ ಬಿದ್ದಿದ್ದು ದರ ಏರಿಕೆ ಆಗತೊಡಗಿದೆ.

    ಹೊಲಸೇಲ್ ಗಿಂತ ರಿಟೇಲ್ ಅಂಗಡಿಗಳಲ್ಲಿ ದರ ಏರಿಕೆಯಾಗಿದೆ. ಅದ್ರಲ್ಲೂ ಬಟಾಣಿ ಬೆಲೆ ಕೆ.ಜಿಗೆ 150 ರೂಪಾಯಿ ಏರಿಕೆಯಾಗಿದೆ. ದೋಸೆ, ಪಡ್ಡು ಹಾಗೂ ಇಡ್ಲಿಗೆ ಅವಶ್ಯವಾದ ಉದ್ದಿನ ಬೇಳೆ ಕೆಜಿಗೆ 130 ರೂಪಾಯಿ ಆಗಿದೆ. ತೋಗರಿಬೇಳೆ ಕೆ.ಜಿಗೆ 150 ರೂಪಾಯಿ ಆಗಿದೆ.

    ಬಹುತೇಕ ಎಲ್ಲಾ ಅಡುಗೆ ಸಾಮಗ್ರಿಗಳಲ್ಲೂ ಕಳೆದ ಒಂದು ತಿಂಗಳಿನಲ್ಲಿ 5-10 ರೂ. ಹೆಚ್ಚಳವಾಗಿದೆ. ಈ ಬೆಲೆ ಹೆಚ್ಚಳ, ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

    ಎಷ್ಟು ದರ ಇದೆ?
    ಪದಾರ್ಥಗಳ ಹೆಸರು – ಹೋಲ್ ಸೇಲ್ ರೇಟ್(ಕೆ.ಜಿಗೆ) ರಿಟೈಲ್ ರೇಟ್(ಕೆ.ಜಿಗೆ)
    ತೊಗರಿಬೇಳೆ – 100 ರೂ. – 120 ರೂ.
    ಉದ್ದಿನಬೇಳೆ – 115 ರೂ. – 130 ರೂ.
    ಹೆಸರಬೇಳೆ – 95 ರೂ. – 110 ರೂ.
    ಕಡಲೆಬೇಳೆ – 60 ರೂ. – 75 ರೂ.
    ಹೆಸರಕಾಳು – 105 ರೂ. -120 ರೂ.
    ಕಡಲೆಕಾಳು – 50 ರೂ. -70 ರೂ.
    ಅಳಸಂದಿ – 60 ರೂ. – 80 ರೂ.
    ಬಟಾಣಿ – 120 ರೂ. – 150 ರೂ.
    ಸೋನಾಮಸೂರಿ ಅಕ್ಕಿ – 50 ರೂ. – 56 ರೂ.
    ರಾ ರೈಸ್ – 50 ರೂ. – 56 ರೂ.

  • ನೊಂದವರ ಹೊಟ್ಟೆ ಸೇರದೆ ಕೊಳೀತಿದೆ ದವಸ-ಧಾನ್ಯ

    ನೊಂದವರ ಹೊಟ್ಟೆ ಸೇರದೆ ಕೊಳೀತಿದೆ ದವಸ-ಧಾನ್ಯ

    ಕೊಪ್ಪಳ: ರಾಜ್ಯದಲ್ಲಿ ನೆರೆ ಹಾವಳಿಗೆ ಜನರು ತತ್ತರಿಸಿ ಹೋಗಿದ್ದು, ತುತ್ತು ಅನ್ನಕ್ಕೂ ಪಡಬಾರದ ಕಷ್ಟಪಟ್ಟಿದ್ದಾರೆ. ಇವರ ಕಷ್ಟ ನೋಡಲಾಗದೆ ರಾಜ್ಯದ ಜನರ ಮನಮಿಡಿದು ಕೈಲಾದ ಸಹಾಯ ಮಾಡಿದ್ದರು. ದವಸಧಾನ್ಯ, ಉಡುಪುಗಳನ್ನ ನೀಡಿ ಸಹಾಯ ಹಸ್ತ ಚಾಚಿದ್ದರು. ಆದರೆ ಕೊಪ್ಪಳ ಜಿಲ್ಲೆಯಲ್ಲಿ ದಾನಿಗಳು ನೀಡಿದ ಆಹಾರಧಾನ್ಯ, ಉಡುಪುಗಳನ್ನ ನೆರೆ ಸಂತ್ರಸ್ತರಿಗೆ ತಪುಪಿಸದೇ ಅಧಿಕಾರಿಗಳು ಕಳ್ಳಾಟ ನಡೆಸಿದ್ದಾರೆ.

    ಕೊಪ್ಪಳದ ಗಂಗಾವತಿಯಲ್ಲಿ ಸಂಗ್ರಹ ಮಾಡಿರೋ ಆಹಾರ ಧಾನ್ಯಗಳು ಸಂತ್ರಸ್ತರಿಗೆ ಸೇರುತ್ತಿಲ್ಲ. ಅತ್ತ ಪ್ರವಾಹಕ್ಕೆ ಸರ್ಕಾರ ಸರಿಯಾಗಿ ಸ್ಪಂದಿಸಿಲ್ಲ ಎಂದು ಜನರು ಕಂಗಾಲಾಗಿದ್ದಾರೆ. ಇತ್ತ ರಾಜ್ಯದ ಜನ ಕೈಲಾದ ಸಹಾಯ ಮಾಡಿ ಸಂತ್ರಸ್ತರ ನೆರವಿಗೆ ನಿಂತು ಆಹಾರ ಧಾನ್ಯ, ಅಗತ್ಯ ವಸ್ತುಗಳನ್ನು ಸಂಗ್ರಹ ಮಾಡಿ ಕಳುಹಿಸಿದ್ದರೂ ಅವು ನಿರಾಶ್ರಿತರಿಗೆ ತಲುಪಿಲ್ಲ. ಸಂಗ್ರಹಿಸಿದ ಆಹಾರ ಧಾನ್ಯ, ಅಗತ್ಯ ವಸ್ತುಗಳನ್ನು ನೊಂದವರಿಗೆ ತಲುಪಿಸದೆ ಅಧಿಕಾರಿಗಳು ಮಾತ್ರ ತಾಲೂಕು ಪಂಚಾಯ್ತಿಯ ಹಿಂದಿನ ಸಾಮಥ್ರ್ಯ ಸೌಧ ಕೊಠಡಿಯಲ್ಲಿ ಅವುಗಳನ್ನು ಶೇಖರಣೆ ಮಾಡಿಟ್ಟು, ಧೂಳು ಹಿಡಿಸುತ್ತಿದ್ದಾರೆ.

    ಮೂರ್ನಾಲ್ಕು ತಿಂಗಳ ಹಿಂದೆ ನೂರಾರು ಕ್ವಿಂಟಾಲ್ ಅಕ್ಕಿ ಸಂಗ್ರಹವಾಗಿದೆ. ಉಡುಪುಗಳು ಹಾಸಿಗೆ, ಹೊದಿಕೆಗಳು ಕೂಡ ಜನ ಸಂತ್ರಸ್ತರಿಗೆ ನೀಡಿದ್ದಾರೆ. ಇತ್ತ ಜನ ನೆರೆ ಸಂತ್ರಸ್ತರಿಗೆ ನಾವು ನೀಡಿದ ಅಲ್ಪ ಸಹಾಯ ಮುಟ್ಟುತ್ತೆ ಅಂದುಕೊಂಡಿದ್ದರೆ ಇಲ್ಲಿನ ಅಧಿಕಾರಿಗಳು ಮಾತ್ರ ಇದಕ್ಕೆ ತಣ್ಣೀರೆರಚಿದ್ದಾರೆ. ಜೊತೆಗೆ, ಇಲ್ಲಿರೋ ಅಕ್ಕಿಯನ್ನು ಮಾರಿಕೊಳ್ಳುತ್ತಿದ್ದಾರೆ ಅನ್ನೋ ಆರೋಪ ಕೂಡ ಕೇಳಿಬರುತ್ತಿದೆ.

    ಚೇತರಿಸಿಕೊಳ್ಳಲಾಗದಷ್ಟರ ಮಟ್ಟಿಗೆ ಪ್ರವಾಹ ಬದುಕು ಕಸಿದಿದೆ. ಆದರೆ ಈ ನಡುವೆ ಅಧಿಕಾರಿಗಳ ನಿರ್ಲಕ್ಷ್ಯವೂ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನಾದರೂ ಈ ಬಗ್ಗೆ ಅಧಿಕಾರಿಗಳು ಗಮನವಹಿಸಿ, ಸಂತ್ರಸ್ತರಿಗೆ ಸೇರಬೇಕಾಗಿರುವ ಆಹಾರ ಧಾನ್ಯ, ವಸ್ತುಗಳನ್ನು ನೀಡಿ ಸಹಕರಿಸಬೇಕಿದೆ.

  • ಅಂಗನವಾಡಿ ಧಾನ್ಯ ಕಳ್ಳತನ ಮಾಡುತ್ತಿದ್ದವರನ್ನ ಕೂಡಿಹಾಕಿದ ಗ್ರಾಮಸ್ಥರು

    ಅಂಗನವಾಡಿ ಧಾನ್ಯ ಕಳ್ಳತನ ಮಾಡುತ್ತಿದ್ದವರನ್ನ ಕೂಡಿಹಾಕಿದ ಗ್ರಾಮಸ್ಥರು

    ದಾವಣಗೆರೆ: ಅಂಗನವಾಡಿ ಧಾನ್ಯ ಕಳ್ಳತನ ಮಾಡುತ್ತಿದ್ದವರನ್ನ ಗ್ರಾಮಸ್ಥರೇ ಹಿಡಿದು ಕೂಡಿಹಾಕಿದ ಘಟನೆ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಮಾಚಿಹಳ್ಳಿ ಕೊರಚರಹಟ್ಟಿಯಲ್ಲಿ ನಡೆದಿದೆ.

     

     

     

    ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ, ಹಾಗೂ ಖಾಸಗಿ ವ್ಯಕ್ತಿಯ ಆಟೋವನ್ನ ಹಿಡಿದಿದ್ದು, ಮೂವರನ್ನೂ ಅಂಗನವಾಡಿಯಲ್ಲಿ ಕೂಡಿ ಹಾಕಿದ್ದಾರೆ. ಹಲವು ದಿನಗಳಿಂದ ಅಂಗನವಾಡಿಯಲ್ಲಿದ್ದ ಪಡಿತರವನ್ನು ಮಕ್ಕಳಿಗೆ ಕೊಡದೇ ಬೇರೆಡೆಗೆ ಸಾಗಿಸುತ್ತಿದ್ದರು. ಇಂದು ಬೆಳಗ್ಗಿನ ಜಾವ ಅಕ್ಕಿ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಸಾಗಿಸುತ್ತಿರುವಾಗ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

    ಘಟನೆ ಬಗ್ಗೆ ವಿಷಯ ತಿಳಿಸಿದ್ರೂ ಇದುವರೆಗೆ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ.