Tag: Food festival

  • ಕಾಲೇಜು, ಓದು, ಎಕ್ಸಾಂ ಟೆನ್ಷನ್‍ನಿಂದ ಹೊರಬಂದು ವಿದ್ಯಾರ್ಥಿಗಳಿಂದ ಫುಡ್ ಫೆಸ್ಟಿವಲ್

    ಕಾಲೇಜು, ಓದು, ಎಕ್ಸಾಂ ಟೆನ್ಷನ್‍ನಿಂದ ಹೊರಬಂದು ವಿದ್ಯಾರ್ಥಿಗಳಿಂದ ಫುಡ್ ಫೆಸ್ಟಿವಲ್

    ದಾವಣಗೆರೆ: ಪ್ರತಿದಿನ ಕಾಲೇಜು, ಓದು, ಎಕ್ಸಾಂ ಅಂತ ಟೆನ್ಷನ್‍ನಲ್ಲಿರುತ್ತಿದ್ದ ಸ್ಟೂಡೆಂಟ್ಸ್ ಗೆ ಸುಂದರೇ ಲೋಕವೇ ತೆರೆದುಕೊಂಡಿತ್ತು. ಇಲ್ಲಿ ಕೇವಲ ಎಂಜಾಯ್ ಮಾಡೋದಷ್ಟೇ ಅಲ್ಲ, ಮುಂದಿನ ಭವಿಷ್ಯವೇ ಕಣ್ಣಿಗೆ ಕಟ್ಟುವಂತಿತ್ತು.

    ದಾವಣಗೆರೆಯ ಬಿ.ಎಸ್.ಚನ್ನಬಸಪ್ಪ ಕಾಲೇಜಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯು ಕಾಲೇಜಿನಲ್ಲಿ ಫುಡ್ ಫೆಸ್ಟಿವಲ್ ಆಯೋಜಿಸಲಾಗಿತ್ತು. ಬಿಬಿಎಂ, ಕಾಮರ್ಸ್ ಸ್ಟೂಡೆಂಟ್ಸ್ ಪಾಲ್ಗೊಂಡಿದ್ದು ತಾವು ಶಿಕ್ಷಣ ಮುಗಿಸಿದ ನಂತರ ಬ್ಯುಸಿನೆಸ್ ಮಾಡೋವಾಗ ಏನೆಲ್ಲ ಸ್ಟ್ರಾಟಜಿ ಮಾಡಬೇಕು ಎನ್ನುವುದನ್ನು ಕಲಿತರು.

    ಫುಡ್ ಫೆಸ್ಟಿವಲ್‍ಗೂ ಮುನ್ನ ವಿದ್ಯಾರ್ಥಿಗಳು ತಯಾರಿಸುವ ಖಾದ್ಯಕ್ಕೆ ಟಿಕೆಟ್ ನೀಡಿದರು. ಸುಮಾರು 3 ಸಾವಿರ ಟಿಕೆಟ್‍ಗಳು ಸೋಲ್ಡ್ ಔಟ್ ಆಗಿದ್ದವು. ಕಾಲೇಜು ಹೊರತಾಗಿ ಹೊರಗಿನವರು ಬಂದು ಖಾದ್ಯವನ್ನು ಸವಿದು ಸಂತಸಪಟ್ಟರು. ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಇದೊಂದು ಉತ್ತಮ ಅಡಿಪಾಯ ಆಗಿದೆ ಎಂದು ಉಪನ್ಯಾಸಕರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ವೀಕೆಂಡ್‍ನಲ್ಲಿ ವೆರೈಟಿ ತಿಂಡಿಗಳ ಫುಡ್ ಫೆಸ್ಟಿವಲ್

    ವೀಕೆಂಡ್‍ನಲ್ಲಿ ವೆರೈಟಿ ತಿಂಡಿಗಳ ಫುಡ್ ಫೆಸ್ಟಿವಲ್

    ಬೆಂಗಳೂರು: ಸಿಲಿಕಾನ್ ಸಿಟಿ ಹೃದಯ ಭಾಗವಾದ ಫ್ರೀಡಂ ಪಾರ್ಕ್ ನಲ್ಲಿ ಆಹಾರ ಮೇಳವನ್ನು ಆಯೋಜನೆ ಮಾಡಲಾಗಿದೆ.

    ರೆಡ್ ರಿಬ್ಬನ್ ಪ್ರೊ ಸಂಸ್ಥೆಯು ಲಯನ್ಸ್ ಕ್ಲಬ್ ಸಹಯೋಗದೊಂದಿಗೆ 2ನೇ ಸಸ್ಯಹಾರ ಫುಡ್‍ಫೆಸ್ಟ್ ಆಯೋಜನೆ ಮಾಡಿದೆ. ಈ ಆಹಾರ ಮೇಳದಲ್ಲಿ ಆಂಧ್ರ ಪ್ರದೇಶದ ಪೋತರೇಕಲ್, ಎರಕಾರಮ್ ದೋಸೆ, ಬಾಳೆಕಾಯಿ ಬಿರಿಯಾನಿ, ಮಹಾರಾಷ್ಟ್ರದ ಮಿಸಲ್ ಪಾವ್, ತಮಿಳುನಾಡಿನ ಬ್ರಿಂಜಾಲ್ ಬಿರಿಯಾನಿ, ಬಿಹಾರದ ಲಿಟ್ಟಿ ಚೋಕಾ, ಗುಜರಾತ್ ನಫೆಡ್ಕಾ, ಉತ್ತರ ಕರ್ನಾಟಕದ ಶೈಲಿಯ ವಿವಿಧ ಬಗೆಯ ವಿಶೇಷ ಖಾದ್ಯಗಳನ್ನು ಸವಿಯಬಹುದಾಗಿದೆ. ಅದರಲ್ಲೂ ಪಂಜಾಬಿನ ಉಪ್ಪಿನಕಾಯಿ ಮತ್ತು ಹೋಂಮೇಡ್ ಐಸ್‍ಕ್ರೀಂಗಳು ಕೂಡ ದೊರೆಯುತ್ತವೆ.

    ಬೆಳಗ್ಗೆ 10 ರಿಂದ ರಾತ್ರಿ 8 ರವರೆಗೆ ಈ ಮೇಳವು ನಡೆಯಲಿದೆ. ದೆಹಲಿ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ಆಂಧ್ರ, ಬಿಹಾರ ಸೇರಿದಂತೆ ದೇಶದ ಇತರ 15 ರಾಜ್ಯಗಳ ಸಾಂಪ್ರದಾಯಿಕ ತಿನಿಸುಗಳು ಇಲ್ಲಿ ದೊರೆಯುತ್ತವೆ. ವಿದೇಶಿಗರೂ ಮೇಳದಲ್ಲಿ ಮಳಿಗೆಗಳನ್ನು ತೆರೆದಿದ್ದಾರೆ. ಎರಡು ಸಾವಿರಕ್ಕೂ ಅಧಿಕ ತಿನಿಸುಗಳು ಹಾಗೂ ಖಾದ್ಯಗಳು ಇಲ್ಲಿ ಸವಿಯಲು ಸಿಗುತ್ತವೆ.

    ಮೇಳದಲ್ಲಿ 150 ಮಳಿಗೆಗಳಿದ್ದು, ಎಂಟ್ರಿ ಫೀ 20 ರಿಂದ 150 ರೂಪಾಯಿಯಾಗಿದೆ. ಮೂರು ದಿನ ನಡೆಯುವ ಈ ಮೇಳದಲ್ಲಿ ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಮನೆಯ ತಿಂಡಿಗಳನ್ನ ತಿಂದು ಬೇಸರವಾಗಿದ್ದರೆ ಒಮ್ಮೆ ಫ್ರೀಡಂ ಪಾರ್ಕ್ ಗೆ ಭೇಟಿ ನೀಡಿ ವಿದೇಶದ ತಿಂಡಿಗಳ ರುಚಿ ನೋಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv