– ಈಗ ಜಿಎಸ್‌ಟಿ 2 ಸ್ಲ್ಯಾಬ್ ಮಾಡಿದ್ದಾರೆ, ಹಾಗಿದ್ರೆ 8 ವರ್ಷದಿಂದ ತೆಗೆದುಕೊಂಡ ಟ್ಯಾಕ್ಸ್ ಕೊಟ್ಟುಬಿಡಿ
– ಅನ್ನ ಉಣ್ಣುವಂತೆ ಮಾಡಿದ್ದು ನಾವು, ವೋಟ್ ಬಿಜೆಪಿಗೆ ಹಾಕ್ತೀರ ಎಂದ ಸಿಎಂ
ಮೈಸೂರು: ನರೇಂದ್ರ ಮೋದಿ (PM Modi) ಅವರು ಹೇಗೆ ಟೋಪಿ ಹಾಕ್ತಾರೆ ಅಂತ ನೀವು ತಿಳಿದುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಮೈಸೂರಿನಲ್ಲಿ ದಸರಾ ಆಹಾರ ಮೇಳಕ್ಕೆ (Mysuru Dasara Food Festival )ಚಾಲನೆ ನೀಡಿದ ಬಳಿಕ ವೇದಿಕೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ 8 ವರ್ಷದ ಹಿಂದೆ ಜಿಎಸ್‌ಟಿ (GST) ಶುರುಮಾಡಿದ್ರು. ಈಗ ಕಡಿಮೆ ಮಾಡಿದ್ದೇವೆ, ಎರಡು ಸ್ಲ್ಯಾಬ್ ಮಾಡಿದ್ದೇವೆ ಅಂತ ಹೆಸರು ತೆಗೆದುಕೊಳ್ಳುತ್ತಿದ್ದಾರೆ. ನರೇಂದ್ರ ಮೋದಿ ಹೇಗೆ ಟೋಪಿ ಹಾಕ್ತಾರೆ ಅಂತ ನೀವು ತಿಳಿದುಕೊಳ್ಳಬೇಕು ಎಂದರಲ್ಲದೇ ಸ್ಲ್ಯಾಬ್ ಮಾಡಿದವರು ಯಾರು…? ಎಂದು ಪ್ರಶ್ನಿಸಿದ್ದಾರೆ.
ಮೋದಿಯವರೆ, ಹಾಗಿದ್ರೆ 8 ವರ್ಷದಿಂದ ತೆಗೆದುಕೊಂಡ ಟ್ಯಾಕ್ಸ್ ಕೊಟ್ಟುಬಿಡಿ. ಈಗ ಹೆಸರು ತೆಗೆದುಕೊಳ್ಳಲು ಇದೆಲ್ಲ ಮಾಡುತ್ತಿದ್ದಾರೆ. ನಾವು ಮಾಡಿದ್ದಕ್ಕೆ ಇವರು ಹೆಸರು ತೆಗೆದುಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಮುಂದುವರಿದು.. ಹಿಂದೆಲ್ಲ ನೆಂಟರು ಬಂದಾಗ ಮಾತ್ರ ಅನ್ನ ತಿನ್ನೋಕೆ ಆಗ್ತಿತ್ತು. ಆದ್ರೆ ಪ್ರತಿದಿನ ಅನ್ನ ಉಣ್ಣುವಂತೆ ಮಾಡಿದ್ದು ಯಾರು? ವೋಟ್ ಮಾತ್ರ ಬಿಜೆಪಿಗೆ ಹಾಕ್ತೀರ. ಕೇಂದ್ರದಲ್ಲಿ ಬಿಜೆಪಿ, ರಾಜ್ಯದಲ್ಲಿ ಕಾಂಗ್ರೆಸ್ ಅಂತಾರೆ ಎಂದರು.
ಪುಳಿಯೊಗರೆಯನ್ನ ಒಂದು ಜನಾಂಗದವರು ಚೆನ್ನಾಗಿ ಮಾಡ್ತಾರೆ
ಇನ್ನೂ ಆಹಾರ ಮೇಳದ ಬಗ್ಗೆ ಮಾತನಾಡಿ, ನಾನು ಪುಳಿಯೊಗರೆ ತಿಂದೆ. ಅದನ್ನ ಒಂದು ಜನಾಂಗದವರು ಹೆಚ್ಚು ಮಾಡ್ತಾರೆ. ಅಯ್ಯಂಗಾರ್ ಅಂತೆ, ನಾನು ಇದನ್ನ ಹೇಳಿದ್ರೆ ಕೆಲವರಿಗೆ ಬೇಜಾರಾಗುತ್ತೆ. ಇದು ಈ ರೀತಿಯ ಆಹಾರ ಎಲ್ಲರಿಗೂ ಪರಿಚಯ ಆಗಬೇಕು ಅಂತಾನೆ ಆಹಾರ ಮೇಳ ಮಾಡಿರೋದು. ಉತ್ತರ ಕರ್ನಾಟಕದಲ್ಲಿ ಹೆಚ್ಚು ಅಡುಗೆ ಎಣ್ಣೆ ಬಳಸಿ ಅಡುಗೆ ಮಾಡುತ್ತಾರೆ. ಆದ್ರೆ ನಾವು ಹಾಗೇ ಮಾಡಿ, ತಿಂದ್ರೆ ಭೇದಿ ಕಿತ್ಕೊಬಿಡುತ್ತೆ. ರಾಜ್ಯದಲ್ಲಿ ಹಲವು ಆಹಾರ ಪದ್ದತಿ ಇದೆ. ಆಹಾರ ಯಾವಾಗಲೂ ಸಮತೋಲನ ಆಹಾರ ತೆಗೆದುಕೊಳ್ಳಬೇಕು. ಜಂಬೂ ಸವಾರಿ ಆದ ಮೇಲೂ 5ನೇ ತಾರೀಖಿನ ತನಕ ಆಹಾರ ಮೇಳ ಇರಲಿದೆ ಎಲ್ಲರೂ ಬಂದು ಭಾಗವಹಿಸಿ ಎಂದು ಸಿಎಂ ಕರೆ ನೀಡಿದರು.
ಬೆಂಗಳೂರು : ಪಬ್ಲಿಕ್ ಟಿವಿ ಆಯೋಜನೆಯ ಎರಡನೇ ವರ್ಷದ ಆಹಾರ ಮೇಳಕ್ಕೆ ಅದ್ಧೂರಿಯಾಗಿ ತೆರೆಬಿದ್ದಿದೆ. ನಗರದ ಮಲ್ಲೇಶ್ವರಂ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಈ ಆಹಾರ ಮೇಳದಲ್ಲಿ ಮೂವತ್ತಕ್ಕೂ ಹೆಚ್ಚು ಮಳಿಗೆಗಳು ಮತ್ತು ನೂರಕ್ಕೂ ಹೆಚ್ಚು ಆಹಾರ ಖಾದ್ಯಗಳು ಒಂದೇ ಸೂರಿನಡಿ ಸಿಕ್ಕಿತ್ತು.
ಕಡೆ ದಿನವಾದ ಇಂದು ಆಹಾರ ಮೇಳಕ್ಕೆ ಜನಸಾಗರವೇ ಹರಿದು ಬಂತು. ಸಿಲಿಕಾನ್ ಸಿಟಿಯ ಜನರು ಆಹಾರ ಮೇಳಕ್ಕೆ ಆಗಮಿಸಿ ಇಷ್ಟವಾದ ಆಹಾರ ಖಾದ್ಯಗಳನ್ನ ಸೇವನೆ ಮಾಡಿದ್ದಾರೆ. ಎರಡು ದಿನಗಳ ಕಾಲದ ಆಹಾರ ಮೇಳಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂದು ಪುರುಷರಿಗಾಗಿ ಇಡ್ಲಿ ತಿನ್ನುವ ಸ್ಫರ್ಧೆಯನ್ನ ಏರ್ಪಡಿಸಲಾಗಿತ್ತು. ಒಂದು ನಿಮಿಷದಲ್ಲಿ ಅತಿ ಹೆಚ್ಚು ಇಡ್ಲಿ ತಿಂದವರಿಗೆ ಪ್ರಥಮ, ದ್ವೀತಿಯ ಮತ್ತು ತೃತೀಯ ಬಹುಮಾನವನ್ನ ನೀಡಲಾಯಿತು. ಇದರಲ್ಲಿ ಗೆದ್ದ ಮೂರು ಜನಕ್ಕೆ ಪ್ರಶಸ್ತಿ ನೀಡಲಾಯಿತು. ಈ ಆಹಾರ ಮೇಳದಲ್ಲಿ ಭಾಗವಹಿಸಿದ್ದ ಮೂವತ್ತಕ್ಕೂ ಹೆಚ್ಚು ಸ್ಟಾಲ್ ಮಾಲೀಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯ್ತು.
ಡಿಸಿಪಿ ಶಶಿಕುಮಾರ್ ಆಗಮಿಸಿ ವಿವಿಧ ಖಾದ್ಯಗಳನ್ನ ಸವಿದು, ಪಬ್ಲಿಕ್ ಟಿವಿ ವೇದಿಕೆಯಲ್ಲೇ ಗೊಂಬೆ ಹೇಳುತೈತ್ತೆ ಹಾಡನ್ನು ಹಾಡಿದರು. ಇನ್ನೂ ಅಹಂ ಆತ್ಮ ಸೂಲ್ಕ್ ನ ವಿದ್ಯಾರ್ಥಿಗಳು ಭರತನಾಟ್ಯ ಮಾಡಿ ಎಲ್ಲರ ಹುಬ್ಬೇರಿಸಿದರು.
ಬೆಂಗಳೂರು: ಪಬ್ಲಿಕ್ ಟಿವಿಯ ಎರಡನೇ ಆವೃತ್ತಿಯ ಆಹಾರ ಮೇಳಕ್ಕೆ ಯಶಸ್ವಿ ಚಾಲನೆ ಸಿಕ್ಕಿದೆ.
ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಇಂದು ಮತ್ತು ನಾಳೆ ಆಹಾರ ಮೇಳ ನಡೆಯಲಿದ್ದು, ಅತಿಥಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್. ಆರ್ ರಂಗನಾಥ್, ಪೆಪ್ಸ್ ಮ್ಯಾಟ್ರಿಸ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಕೆ. ಮಾಧವನ್, ಟೈಟಲ್ ಸ್ಪಾನ್ಸರ್ ನಿತ್ಯಾಮೃತ ನೋನಿಯ ಕಮಲಾಕರ್ ಭಟ್, ಎಂ.ಕೆ ಆಗ್ರೋಟೆಕ್ ಸನ್ ಫ್ಯೂರ್ ಸನ್ ಪ್ಲವರ್ ಆಯಿಲ್ ರಿಜಿನಲ್ ಮ್ಯಾನೇಜರ್ ಸುಹೇಲ್ ಎಂ.ಎನ್, ಕೆಎಂಎಫ್ ಎಂಡಿ ಬಿ.ಸಿ ಸತೀಶ್, ಥ್ಯಾಂಕೋಸ್ ನ್ಯಾಚುರಲ್ ಐಸ್ ಕ್ರೀಮ್ ಎಂಡಿ ರಾಘವೇಂದ್ರ ಥಾಣೆ, ಥಾಟ್ ಬಾಕ್ಸ್ ಡೈರೆಕ್ಟರ್ ಕರಣ್, ನಟ ಪ್ರಜ್ವಲ್ ದೇವರಾಜ್, ನಟಿ ನಿಶ್ವಿಕಾ ನಾಯ್ಡು, ನಿರ್ದೇಶಕ ಗುರು ದೇಶಪಾಂಡೆ ಉಪಸ್ಥಿತರಿದ್ದರು.
ಆಹಾರ ಮೇಳದಲ್ಲಿ 30 ಬಗೆಯ ಆಹಾರ ಮಳಿಗೆಗಳು ಇದೆ. ಕರ್ನಾಟಕ ಸೇರಿದಂತೆ ಭಾರತದ ವಿವಿಧ ಪ್ರಸಿದ್ಧ ಆಹಾರ ಖಾದ್ಯಗಳು ಆಹಾರ ಮೇಳದಲ್ಲಿ ಲಭ್ಯವಿದೆ. ಒಂದೇ ಸೂರಿನಡಿ ನೂರಾರು ಆಹಾರ ಖಾದ್ಯಗಳು ದೊರೆಯಲಿದೆ. ಆಹಾರ ಮೇಳಕ್ಕೆ ಬರಲು ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಆಹಾರ ಮೇಳಕ್ಕೆ ಬಂದು ಹೆಸರು ನೋಂದಾಯಿಸಿದ ಗ್ರಾಹಕರಿಗೆ ಪ್ರತಿ ಅರ್ಧ ಗಂಟೆಗೆ ಒಮ್ಮೆ ಲಕ್ಕಿ ಕೂಪನ್ ಬಹುಮಾನ ನೀಡಲಾಗುತ್ತದೆ. ಜೊತೆಗೆ ಇಂದು ಮಹಿಳೆಯರಿಗೆ ಪಾನಿಪೂರಿ ತಿನ್ನುವ ಸ್ಫರ್ಧೆ ಆಯೋಜಿಸಲಾಗಿದೆ. ಭಾನುವಾರ ಪುರುಷರಿಗೆ ಇಡ್ಲಿ ತಿನ್ನುವ ಸ್ಫರ್ಧೆ ಇರಲಿದ್ದು, ಆಹಾರ ಮೇಳಕ್ಕೆ ಭೇಟಿ ಕೊಟ್ಟು ಇಷ್ಟವಾದ ಖಾದ್ಯವನ್ನ ಸೇವನೆ ಮಾಡಿ, ಸ್ಪರ್ಧೆಗಳಲ್ಲೂ ಗ್ರಾಹಕರು ಭಾಗವಹಿಸಬಹುದು.
ಕಾರ್ಯಕ್ರಮ ಉದ್ಘಾಟನೆ ಬಳಿಕ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್. ಆರ್ ರಂಗನಾಥ್ ಅವರು ಮಾತನಾಡಿ, ಎಲ್ಲ ರೋಗಗಳು ಆಹಾರದಿಂದಲೇ ಆರಂಭವಾಗುತ್ತದೆ. ಆದರೆ ಸರಿಯಾಗಿ ತಿನ್ನಿ, ಎಂಜಾಯ್ ಮಾಡಿ. ರಂಗೋಲಿ ಸ್ಫರ್ಧೆಗೆ ಬಂದವರಿಗೆ ಧನ್ಯವಾದ, ಚೆನ್ನಾಗಿ ರಂಗೋಲಿ ಬಿಡಿಸಿದ್ದೀರಿ. ಹಾಗೆಯೇ ಭಾಗವಹಿಸಿದ ಎಲ್ಲ ಸ್ಟಾಲ್ ನವರಿಗೆ ಧನ್ಯವಾದ ಎಂದರು.
ಆಹಾರ ಮೇಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೆಎಂಎಫ್ ಎಂಡಿ ಬಿ.ಸಿ ಸತೀಶ್ ಅವರು ಮಾತನಾಡಿ, ಈ ಕಾರ್ಯಕ್ರಮ ಆಯೋಜಿಸಿದಕ್ಕೆ ಧನ್ಯವಾದ. ಇಪ್ಪತ್ತೈದು ಲಕ್ಷ ರೈತ ಸಮೂದಾಯ ಹಾಗೂ ಐದು ಕೋಟಿಗೂ ಅಧಿಕ ಗ್ರಾಹಕರನ್ನು ಕೆಎಂಎಫ್ ಹೊಂದಿದೆ. ನಾವು ಗ್ರಾಹಕರಿಗೆ ಉತ್ಕೃಷ್ಟ ಉತ್ಪನ್ನ ನೀಡುತ್ತಿದ್ದೇವೆ. ನಮ್ಮನ್ನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಿದಕ್ಕೆ ಪಬ್ಲಿಕ್ ಟಿವಿಗೆ ಧನ್ಯವಾದ. ರಂಗೋಲಿ ಸ್ಫರ್ಧೆ ಏರ್ಪಡಿಸಿರುವುದು ಉತ್ತಮವಾದದ್ದು, ನಮ್ಮ ಸಂಸ್ಕøತಿ, ಸಂಸ್ಕಾರವನ್ನು ಈ ರಂಗೋಲಿಯಲ್ಲಿ ಬಿಡಿಸಿದಂತಹ ಎಲ್ಲಾ ಹೆಣ್ಣು ಮಕ್ಕಳಿಗೆ ಧನ್ಯವಾದ ಹೇಳುತ್ತೇನೆ ಎಂದು ಖುಷಿಯನ್ನು ಹಂಚಿಕೊಂಡರು.
ಕಮಲಾಕರ್ ಭಟ್ ಅವರು ಮಾತನಾಡಿ, ಆಹಾರ ಮೇಳ ಬೆಂಗಳೂರು ನಗರಕ್ಕೆ ಹಬ್ಬ. ಆಹಾರಕ್ಕೆ ಮಾತ್ರ ಇಲ್ಲಿ ಪ್ರಾಮುಖ್ಯತೆ ಕೊಟ್ಟಿಲ್ಲ. ರಂಗೋಲಿ ಸ್ವರ್ಧೆಯ ಮೂಲಕ ಸಂಸ್ಕಾರ, ಪರಂಪರೆ ನೆನಪಿಸಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಹಾಗೆಯೇ ಎಂ.ಕೆ ಆಗ್ರೋಟೆಕ್‍ನ ರಿಜಿನಲ್ ಮ್ಯಾನೇಜರ್ ಸೊಹೈಲ್ ಅವರು ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿ, ಈ ರೀತಿ ಕಾರ್ಯಕ್ರಮ ಹೆಚ್ಚು ಹೆಚ್ಚು ಆಗಲಿ. ಸದಾ ನಾವು ನಿಮ್ಮೊಂದಿಗೆ ಇರುತ್ತೇವೆ. ಈ ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕೆ ಧನ್ಯವಾದಗಳು ಎಂದರು.
ಪ್ರಜ್ವಲ್ ದೇವರಾಜ್ ಅವರು ಪ್ರತಿಕ್ರಿಯಿಸಿ, ಈ ಫುಡ್ ನೋಡಿದರೆ ನಂಗೆ ಡಯೆಟ್ ಮರಿಬೇಕು ಅನಿಸುತ್ತಿದೆ. ದಾರಿಯುದ್ದಕ್ಕೂ ರಂಗೋಲಿ ತುಂಬಾ ಚೆನ್ನಾಗಿತ್ತು. ಶನಿವಾರ, ಭಾನುವಾರ ಡಯೆಟ್ ಮರೆತು ಇಲ್ಲಿ ಬಂದು ಫುಡ್ ತಿಂದು ಎಂಜಾಯ್ ಮಾಡಿ ಎಂದು ಹೇಳಿದರು. ಇತ್ತ ನಟಿ ನಿಶ್ವಿಕಾ ನಾಯ್ಡು ಅವರು ಮಾತನಾಡಿ, ಈ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿದ್ದಕ್ಕೆ ಪಬ್ಲಿಕ್ ಟಿವಿಗೆ ಧನ್ಯವಾದ. ಡಯೆಟ್ ಎಲ್ಲಾ ಮರೆತು ಫುಡ್ ಫೆಸ್ಟ್ ನಲ್ಲಿ ಭಾಗಿಯಾಗಿ ಎಂದರು. ಹಾಗೆಯೇ ನಿರ್ದೇಶಕ ಗುರು ದೇಶಪಾಂಡೆ ಅವರು ಮಾತನಾಡಿ, ಆಹಾರವನ್ನು ವ್ಯರ್ಥ ಮಾಡಬೇಡಿ, ಹೆಚ್ಚು ಉಪಯೋಗ ಮಾಡಿಕೊಳ್ಳೋಣ. ಇಲ್ಲದೇ ಇರೋರಿಗೆ ಆಹಾರ ಕೊಡೋಣ. ಇದು ಎರಡನೇ ವರ್ಷ ನಾನು ಆಹಾರ ಮೇಳಕ್ಕೆ ಬರುತ್ತಿರೋದು. ಇಲ್ಲಿ ಆಹಾರ ರುಚಿ ಚೆನ್ನಾಗಿ ಇರುತ್ತೆ. ಎಲ್ಲರೂ ಬಂದು ಆಹಾರ ಸವಿಯಿರಿ ಎಂದು ಹೇಳಿದರು.
ಆಹಾರ ಮೇಳಕ್ಕೆ ಚಾಲನೆಗೂ ಮುನ್ನ ರಂಗೋಲಿ ಸ್ಫರ್ಧೆ ನಡೆದಿದ್ದು, 120 ನಿಮಿಷದ ಒಳಗೆ ರಂಗೋಲಿಯನ್ನ ಬಿಡಿಸಿದ್ದಾರೆ. ರಂಗೋಲಿ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು. ಈ ಸ್ಪರ್ಧೆಯ ತೃತೀಯ ಬಹುಮಾನ ವಿಜೇತೆ ಭಾಗ್ಯ, ದ್ವೀತಿಯ ಬಹುಮಾನ ವಿಜೇತೆ ಪ್ರತಿಮಾ ಉಡುಪ, ಪ್ರಥಮ ಬಹುಮಾನ ವಿಜೇತೆ ನಿರ್ಮಲ ಅವರಿಗೆ ಪೆಪ್ಸ್ ಮ್ಯಾಟ್ರಿಸ್ ವತಿಯಿಂದ ಹಾಸಿಗೆ ನೀಡಲಾಯ್ತು. ಇದೇ ವೇಳೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸ್ಪರ್ಧಿಗಳಿಗೂ ಪೆಪ್ಸ್ ಮ್ಯಾಟ್ರಿಸ್ ದಿಂಬುಗಳನ್ನು ಸಮಾಧಾನಕರ ಬಹುಮಾನವಾಗಿ ನೀಡಿ ಅಭಿನಂದಿಸಲಾಯಿತು.
-ಆಹಾರ ಮೇಳಕ್ಕೆ ಬನ್ನಿ, ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿ
ಬೆಂಗಳೂರು: ಆಹಾರ ಪ್ರಿಯರಿಗೊಂದು ಸಿಹಿ ಸುದ್ದಿ. ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುವ ಆಹಾರ ಮೇಳ ಮತ್ತೆ ಬಂದಿದೆ. ಮೊದಲನೇ ವರ್ಷದ ಅಹಾರ ಮೇಳ ಯಶಸ್ವಿಯಾದ ಬಳಿಕ ನಿಮ್ಮ ಪಬ್ಲಿಕ್ ಟಿವಿ ಎರಡನೇ ವರ್ಷ ಆಹಾರ ಮೇಳವನ್ನು ಆಯೋಜಿಸಿದ್ದು, ಇಂದಿನಿಂದ ಎರಡು ದಿನಗಳ ಕಾಲ ಆಹಾರ ಮೇಳ ನಡೆಯಲಿದೆ.
ಒಂದನೇ ವರ್ಷದ ಆಹಾರ ಮೇಳ ಯಶಸ್ವಿಯಾದ ಬಳಿಕ ಪಬ್ಲಿಕ್ ಟಿವಿ ಎರಡನೇ ವರ್ಷದ ಆಹಾರ ಮೇಳವನ್ನು ಆಯೋಜಿಸಲಾಗಿದೆ. ಜನವರಿ 25 ಮತ್ತು 26 ಅಂದರೆ ಇಂದಿನಿಂದ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಈ ಆಹಾರ ಮೇಳ ಇರಲಿದೆ. ಆಹಾರ ಮೇಳ ಮಲ್ಲೇಶ್ವರಂ ಮೈದಾನದ ಮುಂಭಾಗದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದ್ದು, ಒಂದೇ ಸೂರಿನಡಿಯಲ್ಲಿ 30ಕ್ಕೂ ಹೆಚ್ಚು ಆಹಾರ ಮಳಿಗೆಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಈ ವಿಶೇಷ ಆಹಾರ ಮೇಳದಲ್ಲಿ ಕರ್ನಾಟಕ ಹಾಗೂ ಭಾರತದ ಇತರೇ ರಾಜ್ಯಗಳ ಪ್ರಸಿದ್ಧ ಖಾದ್ಯಗಳನ್ನು ಪ್ರದರ್ಶಿಸಲಾಗುತ್ತಿದೆ.
ಈ ಮೇಳಕ್ಕೆ ಆಗಮಿಸುವ ಸಾರ್ವಜನಿಕರಿಗೆ ಸ್ಥಳದಲ್ಲಿಯೇ ಇಷ್ಟವಾಗುವ ಆಹಾರಗಳನ್ನು ತಯಾರಿಸಿ ಸರ್ವ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಸಸ್ಯಾಹಾರ ಹಾಗೂ ಮಾಂಸಾಹಾರ ಎರಡು ರೀತಿಯ ಅಡುಗೆ ರುಚಿಯನ್ನು ಸ್ಥಳದಲ್ಲಿಯೇ ಸವಿಯಬಹುದು. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಬೆಳಗ್ಗೆ 10:30 ರಿಂದ ರಾತ್ರಿ 9 ಗಂಟೆಯವರೆಗೆ ಈ ಆಹಾರ ಮೇಳಕ್ಕೆ ಭೇಟಿ ನೀಡಬಹುದು. ಆಹಾರ ಮೇಳ ಅಂಗವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದರ ಜೊತೆಯಲ್ಲಿ ಜ.25 ರಂದು ಮಹಿಳೆಯರಿಗೆ ಪಾನಿಪುರಿ, ಜ.26 ರಂದು ಪುರುಷರಿಗೆ ಇಡ್ಲಿ ತಿನ್ನುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಉಚಿತ ಪ್ರವೇಶ ಇರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ಮತ್ತು ಗಿಫ್ಟ್ ಹ್ಯಾಂಪರ್ ಗಳನ್ನು ಗೆಲ್ಲಬಹುದಾಗಿದೆ.
ಆಹಾರ ಮೇಳದಲ್ಲಿ ಏನಿರಲಿದೆ?
* 30ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಿವಿಧ ಆಹಾರಗಳ ಪ್ರದರ್ಶನ
* ಕರ್ನಾಟಕ ಹಾಗೂ ಭಾರತದ ಇತರೇ ರಾಜ್ಯಗಳ ಪ್ರಸಿದ್ಧ ಖಾದ್ಯಗಳ ಪ್ರದರ್ಶನ
* ಸ್ಥಳದಲ್ಲೇ ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾದ್ಯದ ಲೈವ್ ಕೌಂಟರ್
* ಪ್ರತಿ 30 ನಿಮಿಷಕ್ಕೆ ನೋಂದಾಯಿತ ಗ್ರಾಹಕರಿಗೆ ಲಕ್ಕಿ ಡ್ರಾ ಮೂಲಕ ಸಿಗಲಿದೆ ಗಿಫ್ಟ್
ಆಹಾರ ಮೇಳದ ಮೊದಲ ದಿನವೇ ರಂಗೋಲಿ ಸ್ಪರ್ಧೆ ನಡೆಯಲಿದೆ. ಮಹಿಳೆಯರಿಗಾಗಿ ಈ ರಂಗೋಲಿ ಸ್ಫರ್ಧೆ ಆಯೋಜನೆ ಮಾಡಿದ್ದು, ಗಣರಾಜ್ಯೋತ್ಸವಕ್ಕೆ ಸಂಬಂಧಿಸಿದ ಚಿತ್ರಗಳನ್ನ ಬಿಡಿಸಬಹುದಾಗಿದೆ. ಮಲ್ಲೇಶ್ವರದ 6ನೇ ಕ್ರಾಸ್‍ನಲ್ಲಿ ಜನವರಿ 25 ಶನಿವಾರ ಬೆಳಗ್ಗೆ 8 ಗಂಟೆಗೆ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು 96209 40365 ನಂಬರಿಗೆ ಎಸ್‍ಎಂಎಸ್ ಅಥವಾ ವಾಟ್ಸಪ್ ಮೆಸೇಜ್ ಮಾಡಿ ಹೆಸರು ನೋಂದಾಯಿಸಬೇಕು. ಮೊದಲು ಹೆಸರು ನೋಂದಾಯಿಸಿದವರಿಗೆ ಮತ್ತು 100 ಮಂದಿಗೆ ಮಾತ್ರ ಸ್ಪರ್ಧಿಸಲು ಅವಕಾಶ ಸಿಗಲಿದೆ.
ಇಂದಿನಿಂದ ಎರಡು ದಿನಗಳಿಂದ ಕಾಲ ಆಹಾರ ಮೇಳ ನಡೆಯಲಿದ್ದು. ಹಲವಾರು ಖಾದ್ಯ ಪ್ರದರ್ಶನಗಳ ಜೊತೆಗೆ ಸ್ಪರ್ಧೆಗಳನ್ನು ಕೂಡ ಆಯೋಜನೆ ಮಾಡಲಾಗಿದೆ. ಎರಡು ದಿನ ವೀಕೆಂಡ್ ಮತ್ತು ಸರ್ಕಾರಿ ರಜೆ ಇದ್ದು ಪಬ್ಲಿಕ್ ಟಿವಿ ಆಯೋಜನೆಯ ಆಹಾರ ಮೇಳಕ್ಕೆ ಭೇಟಿ ನೀಡಿ ನಿಮಗೆ ಇಷ್ಟವಾದ ಖಾದ್ಯವನ್ನ ಸೇವಿಸಿ.
ಬೆಂಗಳೂರು: ಒಂದನೇ ವರ್ಷದ ಆಹಾರ ಮೇಳ ಯಶಸ್ವಿಯಾದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಎರಡನೇ ವರ್ಷದ ಆಹಾರ ಮೇಳವನ್ನು ಆಯೋಜಿಸುತ್ತಿದೆ.
ಜನವರಿ 25 ಮತ್ತು 26ರಂದು ಆಹಾರ ಮೇಳವನ್ನು ಆಯೋಜಿಸಲಾಗಿದೆ. ಆಹಾರ ಮೇಳ ಮಲ್ಲೇಶ್ವರಂ ಮೈದಾನದ ಮುಂಭಾಗದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದ್ದು, ಒಂದೇ ಸೂರಿನಡಿಯಲ್ಲಿ 30ಕ್ಕೂ ಹೆಚ್ಚು ಆಹಾರ ಮಳಿಗೆಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಈ ವಿಶೇಷ ಆಹಾರ ಮೇಳದಲ್ಲಿ ಕರ್ನಾಟಕ ಹಾಗೂ ಭಾರತದ ಇತರೇ ರಾಜ್ಯಗಳ ಪ್ರಸಿದ್ಧ ಖಾದ್ಯಗಳನ್ನು ಪ್ರದರ್ಶಿಸಲಾಗುತ್ತಿದೆ.
ಈ ಮೇಳಕ್ಕೆ ಆಗಮಿಸುವ ಸಾರ್ವಜನಿಕರಿಗೆ ಸ್ಥಳದಲ್ಲಿಯೇ ಇಷ್ಟವಾಗುವ ಆಹಾರಗಳನ್ನು ತಯಾರಿಸಿ ಸರ್ವ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಸಸ್ಯಾಹಾರ ಹಾಗೂ ಮಾಂಸಾಹಾರ ಎರಡು ರೀತಿಯ ಅಡುಗೆ ರುಚಿಯನ್ನು ಸ್ಥಳದಲ್ಲಿಯೇ ಸವಿಯಬಹುದು. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಬೆಳಗ್ಗೆ 10:30 ರಿಂದ ರಾತ್ರಿ 9 ಗಂಟೆಯವರೆಗೆ ಈ ಆಹಾರ ಮೇಳಕ್ಕೆ ಭೇಟಿ ನೀಡಬಹುದು. ಆಹಾರ ಮೇಳ ಅಂಗವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದರ ಜೊತೆಯಲ್ಲಿ ಜ.25 ರಂದು ಮಹಿಳೆಯರಿಗೆ ಪಾನಿಪುರಿ, ಜ.26 ರಂದು ಪುರುಷರಿಗೆ ಇಡ್ಲಿ ತಿನ್ನುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಉಚಿತ ಪ್ರವೇಶ ಇರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ಮತ್ತು ಗಿಫ್ಟ್ ಹ್ಯಾಂಪರ್ ಗಳನ್ನು ಗೆಲ್ಲಬಹುದಾಗಿದೆ.
ಆಹಾರ ಮೇಳದಲ್ಲಿ ಏನಿರಲಿದೆ? * 30 ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಿವಿಧ ಆಹಾರಗಳ ಪ್ರದರ್ಶನ * ಕರ್ನಾಟಕ ಹಾಗೂ ಭಾರತದ ಇತರೇ ರಾಜ್ಯಗಳ ಪ್ರಸಿದ್ಧ ಖಾದ್ಯಗಳ ಪ್ರದರ್ಶನ * ಸ್ಥಳದಲ್ಲೇ ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾದ್ಯದ ಲೈವ್ ಕೌಂಟರ್ * ಪ್ರತಿ 30 ನಿಮಿಷಕ್ಕೆ ನೋಂದಾಯಿತ ಗ್ರಾಹಕರಿಗೆ ಲಕ್ಕಿ ಡ್ರಾ ಮೂಲಕ ಸಿಗಲಿದೆ ಗಿಫ್ಟ್
ರಂಗೋಲಿ ಸ್ಪರ್ಧೆ: * ರಂಗೋಲಿ ಸ್ಪರ್ಧೆ ಮಲ್ಲೇಶ್ವರದ 6ನೇ ಕ್ರಾಸ್‍ನಲ್ಲಿ ಜನವರಿ 25 ಶನಿವಾರ ಬೆಳಗ್ಗೆ 8 ಗಂಟೆಗೆ ನಡೆಯಲಿದೆ * ಸ್ಪರ್ಧೆಯಲ್ಲಿ ಭಾಗವಹಿಸುವವರು 96209 40365 ನಂಬರಿಗೆ ಎಸ್‍ಎಂಎಸ್ ಅಥವಾ ವಾಟ್ಸಪ್ ಮೆಸೇಜ್ ಮಾಡಿ ಹೆಸರು ನೋಂದಾಯಿಸಬೇಕು * ಮೊದಲು ಹೆಸರು ನೋಂದಾಯಿಸಿದವರಿಗೆ ಮತ್ತು 100 ಮಂದಿಗೆ ಮಾತ್ರ ಸ್ಪರ್ಧಿಸಲು ಅವಕಾಶ * ವಿಜೇತರಾದವರಿಗೆ ಸಿಗಲಿದೆ ಬಹುಮಾನ
ರಂಗೋಲಿ ಸ್ಪರ್ಧೆಯ ನಿಯಮಗಳು: * ಮಹಿಳೆಯರಿಗೆ ಮಾತ್ರ ಅವಕಾಶ * 120 ನಿಮಿಷದಲ್ಲಿ ರಂಗೋಲಿ ಬಿಡಿಸಬೇಕು * ಸ್ಪರ್ಧೆಗೆ ಹೆಸರು ನೋಂದಾಯಿಸಿದವರು ಬೆಳಗ್ಗೆ 7.30ಕ್ಕೆ ಸ್ಥಳದಲ್ಲಿ ಹಾಜರಿರಬೇಕು * ನಾವು ರಂಗೋಲಿ ಪುಡಿಯನ್ನು ಮಾತ್ರ ನೀಡುತ್ತೇವೆ * ಗಣರಾಜ್ಯೋತ್ಸವಕ್ಕೆ ಸಂಬಂಧಿಸಿದ ವಿಷಯವನ್ನು ರಂಗೋಲಿಯಲ್ಲಿ ಬಿಡಿಸಬೇಕು * ಸ್ಪರ್ಧೆಯಲ್ಲಿ ಭಾಗವಹಿಸುವರು ತಾವೇ ತಮಗೆ ಬೇಕಾದ ವಸ್ತುಗಳನ್ನು ತರಬೇಕು ಮತ್ತು ಒಂದೇ ಮಾದರಿಯನ್ನು ಬಳಸಬೇಕು. ಬಣ್ಣಗಳು/ ಪುಷ್ಪ ದಳಗಳು/ ಪುಡಿ/ ಧಾನ್ಯಗಳು/ ಅಕ್ಕಿ ಇತ್ಯಾದಿಗಳ ಪೈಕಿ ಒಂದು ವಸ್ತುವನ್ನು ಮಾತ್ರ ಬಳಸಿ ರಂಗೋಲಿ ಹಾಕಬೇಕು * ಸಂಘಟಕರು ನೀಡುವ ಸ್ಥಳದಲ್ಲಿ ಸ್ಪರ್ಧಿಗಳು ರಂಗೋಲಿಯನ್ನು ಸಿದ್ಧ ಪಡಿಸಬೇಕು * ಕೊರೆಯಚ್ಚನ್ನು ಬಳಸುವಂತಿಲ್ಲ * ಒಬ್ಬರಿಗೆ ಮಾತ್ರ ಅವಕಾಶ * ಸ್ಪರ್ಧೆ ಒಂದೇ ಸುತ್ತಿನಲ್ಲಿ ಮುಗಿಯಲಿದೆ * ಸ್ಪರ್ಧಿಗಳು ರಂಗೋಲಿ ಬಿಡಿಸಲು ಯಾವುದೇ ಮುದ್ರಿತ ವಸ್ತುಗಳನ್ನು ಬಳಸುವಂತಿಲ್ಲ * ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ
ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸುವವರು ಎಸ್‍ಎಂಎಸ್ ಅಥವಾ ವಾಟ್ಸಪ್ ಮೂಲಕ 96209 40365 ಮಸೇಜ್ ಕಳುಹಿಸಿ ಹೆಸರು ನೋಂದಾಯಿಸಬೇಕು.
ಮಡಿಕೇರಿ: ಕೊಡಗು ಅಂದ್ರೆ ವಿಶಿಷ್ಟ ಸಂಸ್ಕೃತಿ ಆಚಾರ ವಿಚಾಗಳಂತೆ ವಿಭಿನ್ನ ಆಹಾರ ಪದ್ಧತಿಯೂ ಎಲ್ಲರ ಗಮನ ಸೆಳೆಯುತ್ತದೆ. ಒಂದೊಂದು ಕಾಲಕ್ಕೂ ಒಂದೊಂದು ರುಚಿ ರುಚಿಯಾದ ಅಡುಗೆ ಮಾಡಿ ಬಾಯಚಪ್ಪರಿಸಿ ತಿನ್ನೋ ಕೊಡಗಿನ ಜನರ ಫುಡ್ ವೆರೈಟಿ ನಿಜಕ್ಕೂ ವಾವ್ ಅನಿಸುತ್ತದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದಲ್ಲಿ ನಡೆದ ಕೊಡವರ ಕಕ್ಕಡ 18 ತಿನ್ನಿ ನಮ್ಮೆ ಪ್ರಯುಕ್ತ ನಡೆದ ಆಹಾರಮೇಳ ಎಲ್ಲರನ್ನು ಗಮನ ಸೆಳೆಯಿತು.
ಆಧುನಿಕತೆಯ ಭರಾಟೆಯಲ್ಲಿ ಕೊಡಗಿನ ಪಾರಂಪರಿಕ ಆಹಾರ ಪದ್ಧತಿ ಮರೆಯಾಗುತ್ತಿದ್ದು, ಯುವ ಪೀಳಿಗೆಗೆ ಪರಿಚಯಿಸಲೆಂದು ನಾಪೋಕ್ಲು ಕೊಡವ ಸಮಾಜ ಈ ಕಕ್ಕಡ 18 ತಿನ್ನಿ ನಮ್ಮೆ ಆಯೋಜಿಸಿತ್ತು. ಇದೇ ಮೊದಲ ವರ್ಷ ನಾಪೋಕ್ಲು ಕೊಡವ ಸಮಾಜ ಕಟ್ಟಡದಲ್ಲಿ ಕಕ್ಕಡ 18 ತಿನ್ನಿ ನಮ್ಮೆಯಲ್ಲಿ ಜಿಲ್ಲೆಯ ಮೂಲೆ ಮೂಲೆಗಳಿಂದ ಬಂದ ಜನರು ಭಾಗಿಯಾಗಿದ್ದರು. ಒಂದೊಂದು ಕುಟುಂಬವೂ ತಮ್ಮ ತಮ್ಮ ಪಾರಂಪರಿಕವಾದ ಒಂದೊಂದು ಆಹಾರವನ್ನು ತಯಾರಿಸಿ ತಂದು ಪ್ರದರ್ಶನ ಮಾಡುತ್ತಾರೆ. ಇರೋದ್ರಿಂದ ಅಪರೂಪಕ್ಕೆ ಸಿಗೋ ಬಗೆ ಬಗೆಯ ತಿನಿಸುಗಳನ್ನ ಸವಿದು ಎಲ್ಲರೂ ಎಂಜಾಯ್ ಮಾಡುತ್ತಾರೆ.
ವಿಶೇಷವಾಗಿ ಜಿಲ್ಲೆಯಲ್ಲಿ ತಿಂಗಳುಗಟ್ಟಲೆ ಸುರಿಯೋ ಮಳೆಯ ನಡುವೆಯೇ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಂಡು ಬಳಲಿರೋ ಜನರು ಒಂದೆಡೆ ಸೇರಿ ಎಂಜಾಯ್ ಮಾಡುತ್ತಾರೆ. ಆಶಾಢ ಮಾಸದಲ್ಲಿ 18 ಗಿಡಮೂಲಿಕೆಗಳಿಂದ ತುಂಬಿರೋ ಆಟಿಸೊಪ್ಪಿನ ಅಕ್ಕಿಪಾಯಸ ಸವಿದು ಇನ್ನೂ ಅಬ್ಬರಿಸೋ ಮಳೆಯಲ್ಲಿ ಯಾವುದೇ ಕಾಯಿಲೆ ಬರದಂತೆ ರಕ್ಷಣೆ ಪಡೆಯುತ್ತಾರೆ.
-ಮಿಸ್ ಮಾಡ್ಕೊಂಡ್ರಾ ಡೋಂಟ್ ವರಿ ನಾಳೆನೂ ಬನ್ನಿ, ಉಚಿತ ಪ್ರವೇಶ
ಬೆಂಗಳೂರು: ಪಬ್ಲಿಕ್ ಟಿವಿ ಆಯೋಜನೆಯ ಫುಡ್ ಫೆಸ್ಟಿವಲ್ ಕಾರ್ಯಕ್ರಮಕ್ಕೆ ಸಿಲಿಕಾನ್ ಸಿಟಿಯ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಹಾರ ಮೇಳಕ್ಕೆ ಆಗಮಿಸಿದ ಸಾರ್ವಜನಿಕರು ಬಗೆ ಬಗೆಯ ಖಾದ್ಯಗಳನ್ನು ಸವಿದು ವೀಕೆಂಡ್ ಫುಲ್ ಎಂಜಾಯ್ ಮಾಡುತ್ತಿದ್ದಾರೆ. ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಇಂದು ರಂಗೋಲಿ ಸ್ಪರ್ಧೆಯನ್ನ ಸಹ ಆಯೋಜಿಸಲಾಗಿತ್ತು. ಇಂದು ರಾತ್ರಿ 10.30ರವರೆಗೂ ಆಹಾರ ಮೇಳೆ ಓಪನ್ ಇರಲಿದ್ದು, ಭಾನುವಾರ ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆವರೆಗೆ ನೀವು ಫುಡ್ ಫೆಸ್ಟಿವಲ್ ಗೆ ಭೇಟಿ ನೀಡಬಹುದು.
ಈ ಮೊದಲೇ ನೋಂದಣಿ ಮಾಡಿಕೊಂಡಿದ್ದ ಮಹಿಳೆಯರು ಇಂದು ಬೆಳಗ್ಗೆ ಗಣರಾಜ್ಯೋತ್ಸವ ಥೀಮ್ ನಲ್ಲಿ ಹಾಕಿದ ಬಣ್ಣ ಬಣ್ಣದ ರಂಗೋಲಿ ಎಲ್ಲರನ್ನು ಸೆಳೆದವು. ರಂಗೋಲಿ ಸ್ಪರ್ಧೆಯಲ್ಲಿ ಪ್ರತಿಮಾ ಉಡುಪ ಮೊದಲ ಸ್ಥಾನ ಪಡೆದು 8 ಗ್ರಾಂ ಚಿನ್ನ ಮತ್ತು ಗಿಫ್ಟ್ ತಮ್ಮದಾಗಿಸಿಕೊಂಡರು. ಎರಡನೇ ಬಹುಮಾನ ನಿಖಿತಾ ಆರಾಧ್ಯ (4ಗ್ರಾಂ ಚಿನ್ನ+ಗಿಫ್ಟ್) ಮತ್ತು ಮೂರನೇ ಬಹುಮಾನವನ್ನು ಸರಸ್ವತಿ (4 ಗ್ರಾಂ ಚಿನ್ನ+ ಗಿಫ್ಟ್) ಪಡೆದುಕೊಂಡರು. ಸಮಾಧಾನಕರ ಬಹುಮಾನವಾಗಿ ಪೂನಂ ಎಂಬವರು 10 ಗ್ರಾಂ ಬೆಳ್ಳಿ ಮತ್ತು ಸೀರೆಯನ್ನು ತಮ್ಮದಾಗಿಸಿಕೊಂಡರು. ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ಸ್ಪರ್ಧಿಗಳಿಗೆ 10 ಗ್ರಾಂ ಬೆಳ್ಳಿಯನ್ನು ಬಹುಮಾನವಾಗಿ ನೀಡಲಾಯ್ತು.
ನಟಿ ಆಶಿಕಾ ರಂಗನಾಥ್, ಗಾಯಕಿ ಅರ್ಚನಾ ಉಡುಪಾ, ಪಬ್ಲಿಕ್ ಟಿವಿ ಸಿಇಓ ಅರುಣ್, ಸಿಓಓ ಸಿಕೆ ಹರೀಶ್ ಕುಮಾರ್ ಮತ್ತು ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಉಪಾಧ್ಯಾಯಿನಿ ರೇಣುಕಾ ಎಲ್ಲರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇಲ್ಲಿ ಕರ್ನಾಟಕ ಮತ್ತು ಭಾರತದ ವಿವಿಧ ಭಾಗದ ಸಾಂಪ್ರದಾಯಿಕ ಮತ್ತು ವಿಭಿನ್ನ ಆಹಾರಗಳು ಒಂದೇ ಸೂರಿನಡಿ ಲಭ್ಯವಿದೆ. ಸುಮಾರು 40ಕ್ಕೂ ಹೆಚ್ಚು ಮಳಿಗೆಗಳಲ್ಲಿ 200ಕ್ಕೂ ಹೆಚ್ಚು ಖಾದ್ಯಗಳ ಪ್ರದರ್ಶನ ನಡೆಯುತ್ತಿದೆ.
ಬಿಸಿ-ಬಿಸಿ ವಡೆ, ಗರಿ ಗರಿ ದೋಸೆ, ನೋಟದಲ್ಲೇ ಸೆಳೆಯೋ ಪುಳಿಯೋಗರೆ, ಪಲಾವ್, ಉತ್ತರ ಕರ್ನಾಟಕದ ಖಡಕ್ ರೊಟ್ಟಿ, ಎಣ್ಣೆಗಾಯಿ ಪಲ್ಯ, ಭಿನ್ನ ಭಿನ್ನ ಹೋಳಿಗೆಗಳು ನಿಮ್ಮನ್ನು ಫೆಸ್ಟೀವ್ ಮೂಡ್ ಗೆ ಕರೆದುಕೊಂಡು ಹೋಗುತ್ತಿವೆ. ಕೇವಲ ವೆಜ್ ಅಲ್ಲದೇ ನಾನ್ ವೆಜ್ ಆಹಾರ ಮೇಳದಲ್ಲಿ ಲಭ್ಯವಿದೆ. ಕೆಂಪ್ ಕೆಂಪಾಗಿರುವ ಫಿಶಸ್ ಗೆ ಬೇಡಿಕೆ ಹೆಚ್ಚಾಗಿದೆ. ಫಿಶ್ ಫಿಂಗರ್, ಹುರಿದ ಸಿಗಡಿ, ಮೀನಿನ ಕಟ್ಲೆಟ್, ರವಾ ಬಂಗಡೆ ನೋಡತ್ತಿದ್ದರೆ ಬಾಯಲ್ಲಿ ನೀರು ಬರೋದು ಸತ್ಯ. ದೊನ್ನೆ ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ ಸಹ ಆಹಾರ ಪ್ರಿಯರನ್ನು ಸೆಳೆಯುತ್ತಿವೆ.
ಒಂದೇ ಸೂರಿನಡಿ ವಿವಿಧ ಸ್ಟಾಲ್ ಗಳನ್ನು ಹಾಕಿರೋದನ್ನು ನೋಡುವುದೇ ಚೆಂದ. ಬಗೆ ಬಗೆಯ ಖಾದ್ಯಗಳೆಂದ್ರೆ ನನಗೆ ತುಂಬಾನೇ ಇಷ್ಟ. ರಂಗೋಲಿ ಸ್ಪರ್ಧೆಯಲ್ಲಿ ಭಾಗಿಯಾದ ಎಲ್ಲ ಸ್ಪರ್ಧಿಗಳು ಚೆಂದವಾಗಿ ಬಣ್ಣ ಬಣ್ಣಗಳಲ್ಲಿ ಗಣರಾಜ್ಯೋತ್ಸವ ಶುಭಾಶಯ ತಿಳಿಸಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ವಿನ್ನರ್. ಈ ವಿಶೇಷ ಕಾರ್ಯಕ್ರಮಕ್ಕೆ ಆಗಮಿಸಿದ ಪಬ್ಲಿಕ್ ಟಿವಿಗೆ ಧನ್ಯವಾದಗಳನ್ನು ನಟಿ ಆಶಿಕಾ ರಂಗನಾಥ್ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ರಂಗೋಲಿ ಮರೆಯಾಗುತ್ತಿದೆ. ಈ ಕಲೆಯನ್ನು ಉಳಿಸಲು ಪಬ್ಲಿಕ್ ಒಳ್ಳೆ ವೇದಿಕೆ ಒದಗಿಸಿದೆ. ಮಹಿಳೆಯರ ಎರಡು ಮುಖ್ಯವಾದ ಕಲೆಗಳು ಅಡುಗೆ ಹಾಗೂ ರಂಗೋಲಿ. ಹಾಗಾಗಿ ಎರಡು ಕಲೆಗಳನ್ನು ನಾವು ಇಲ್ಲಿ ಕಾಣಬಹುದು. ಬೆಳಗ್ಗೆನೇ ಕಣ್ಣಿಗೆ ಮತ್ತು ಮೂಗಿಗೆ ರಸದೌತಣ ಸಿಗುತ್ತಿದೆ. ಪ್ರತಿಯೊಬ್ಬ ಸ್ಪರ್ಧಿಗಳು ತಮ್ಮದೇ ಶೈಲಿಯಲ್ಲಿ ರಂಗೋಲಿ ಸುಂದರವಾಗಿ ರಂಗೋಲಿ ಬಿಡಿಸಿದ್ದರು. ಎಲ್ಲ ರಂಗೋಲಿಗಳನ್ನು ನೋಡಿದ್ದು ತುಂಬಾನೇ ಖುಷಿ ನೀಡ್ತು ಎಂದು ಗಾಯಕಿ ಅರ್ಚನಾ ಉಡುಪ ಹೇಳಿದರು.
ಬೆಂಗಳೂರು: ನೀವು ಆಹಾರ ಪ್ರಿಯರೇ? ಬಗೆ ಬಗೆಯ ಆಹಾರದ ಬಗ್ಗೆ ನಿಮಗೆ ತಿಳಿಯಬೇಕೇ? ಹಾಗಾದರೆ ಪಬ್ಲಿಕ್ ಟಿವಿ ಆಯೋಜಿಸಿರುವ ಫುಡ್ ಫೆಸ್ಟ್‌ಗೆ ಬನ್ನಿ.
ಪಬ್ಲಿಕ್ ಟಿವಿ ಜನವರಿ 26 ಮತ್ತು 27ರಂದು ಆಹಾರ ಮೇಳವನ್ನು ಆಯೋಜಿಸಿದೆ. ಆಹಾರ ಮೇಳ ಮಲ್ಲೇಶ್ವರಂ ಮೈದಾನದ ಮುಂಭಾಗದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದ್ದು, ಒಂದೇ ಸೂರಿನಡಿಯಲ್ಲಿ 40ಕ್ಕೂ ಹೆಚ್ಚು ಆಹಾರ ಮಳಿಗೆಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಈ ವಿಶೇಷ ಆಹಾರ ಮೇಳದಲ್ಲಿ ಕರ್ನಾಟಕ ಹಾಗೂ ಭಾರತದ ಇತರೇ ರಾಜ್ಯಗಳ ಪ್ರಸಿದ್ಧ ಖಾದ್ಯಗಳನ್ನು ಪ್ರದರ್ಶಿಸಲಾಗುತ್ತಿದೆ.
ಈ ಮೇಳಕ್ಕೆ ಆಗಮಿಸುವ ಸಾರ್ವಜನಿಕರಿಗೆ ಸ್ಥಳದಲ್ಲಿಯೇ ಇಷ್ಟವಾಗುವ ಆಹಾರಗಳನ್ನು ತಯಾರಿಸಿ ಸರ್ವ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಸಸ್ಯಾಹಾರ ಹಾಗೂ ಮಾಂಸಾಹಾರ ಎರಡು ರೀತಿಯ ಅಡುಗೆ ರುಚಿಯನ್ನು ಸ್ಥಳದಲ್ಲಿಯೇ ಸವಿಯಬಹುದು. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಬೆಳಗ್ಗೆ 10:30 ರಿಂದ ರಾತ್ರಿ 9 ಗಂಟೆಯವರೆಗೆ ಈ ಆಹಾರ ಮೇಳಕ್ಕೆ ಭೇಟಿ ನೀಡಬಹುದು.
ಈ ಕಾರ್ಯಕ್ರಮದ ಬಗ್ಗೆ ಪಬ್ಲಿಕ್ ಟಿವಿಯ ಸಿಒಒ ಹರೀಶ್ ಕುಮಾರ್ ಮಾತನಾಡಿ, ಗಣರಾಜ್ಯೋತ್ಸವದ ನಿಮಿತ್ತ ಒಂದು ವಿಭಿನ್ನ ಕಾರ್ಯಕ್ರಮವನ್ನು ಪಬ್ಲಿಕ್ ಟಿವಿಯಿಂದ ಆಯೋಜಿಸಲಾಗಿದೆ. ಹೆಣ್ಣು ಮಕ್ಕಳಿಗೆ ರಂಗೋಲಿ ಸ್ಪರ್ಧೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ವ್ಯವಸ್ಥೆ ಕೂಡ ಮಾಡಲಾಗಿದೆ. ಈಗಾಗಲೇ ಅನೇಕರು ಎಸ್‍ಎಂಎಸ್ ಹಾಗೂ ವಾಟ್ಸಪ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಈ ಫುಡ್ ಫೆಸ್ಟ್ ಅನ್ನು ಅಂತರಾಷ್ಟ್ರೀಯ ಮಾದರಿಯಲ್ಲಿ ನಡೆಸಲಾಗುತ್ತಿದೆ. ಇಲ್ಲಿ ವಿವಿಧ ಬಗೆಯ ತಿನಿಸು, ಆಹಾರ, ಪಾನಿಯ ಸಿಗುತ್ತದೆ ಎಂದು ತಿಳಿಸಿದರು.
ಆಹಾರ ಮೇಳದಲ್ಲಿ ಏನಿರಲಿದೆ?
ದಕ್ಷಿಣ ಭಾರತದ ತಿನಿಸು, ಉತ್ತರ ಭಾರತದ ತಿನಿಸು, ಕಾಂಟಿನೆಂಟಲ್, ಸಮುದ್ರ ಆಹಾರ, ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ, ಗ್ರಿಲ್ಸ್ ಮತ್ತು ರೋಲ್ಸ್, ಮಸಾಲೆ ಮತ್ತು ಕಾಂಡಿಮೆಂಟ್ಸ್, ಸಿಹಿತಿಂಡಿ, ಐಸ್‍ಕ್ರೀಂ, ಕಾಫಿ, ಟೀ, ಚಾಟ್ ಇರಲಿದೆ. ಅಷ್ಟೇ ಅಲ್ಲದೇ ಪ್ರತಿ 30 ನಿಮಿಷಗಳಿಗೊಮ್ಮೆ ನೋಂದಾಯಿಸಲ್ಪಟ್ಟ ಸಂದರ್ಶಕರಿಗೆ ಲಕ್ಕಿ ಡ್ರಾ ಮೂಲಕ ಉಡುಗೊರೆ ಸಿಗಲಿದೆ.
https://youtu.be/KMbntfnjIPk
ರಂಗೋಲಿ ಸ್ಪರ್ಧೆ:
ಸ್ಥಳದಲ್ಲಿಯೇ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಮಲ್ಲೇಶ್ವರಂ 6ನೇ ಕ್ರಾಸ್ ನಲ್ಲಿ ಜನವರಿ 26ರಂದು ಶನಿವಾರ ಬೆಳಗ್ಗೆ 8 ಗಂಟೆಗೆ ನಡೆಯಲಿದೆ. ಸ್ಪರ್ಧಿಗಳು 96066 66031 ವಾಟ್ಸಪ್ ಸಂಖ್ಯೆಗೆ ಮೆಸೇಜ್ ಮಾಡಿ ಹೆಸರನ್ನು ನೋಂದಾಯಿಸಬೇಕಾಗುತ್ತದೆ. ಮೊದಲು ರಿಜಿಸ್ಟರ್ ಮಾಡಿಕೊಳ್ಳುವ 100 ಸ್ಪರ್ಧಿಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು, ವಿಜೇತರಿಗೆ ಬಹುಮಾನ ನೀಡಲಾಗುವುದು.
ರಂಗೋಲಿ ಸ್ಪರ್ಧೆಯ ನಿಯಮಗಳು:
* ಮಹಿಳೆಯರಿಗೆ ಮಾತ್ರ ಅವಕಾಶ.
* 120 ನಿಮಿಷದಲ್ಲಿ ರಂಗೋಲಿ ಬಿಡಿಸಬೇಕು.
* ರಿಜಿಸ್ಟರ್ ಮಾಡಿಕೊಂಡಿದ್ದ ಸ್ಪರ್ಧಿಗಳ ಹೆಸರು ಖಚಿತವಾದವರು ಶನಿವಾರ ಬೆಳಗ್ಗೆ 7.30ಕ್ಕೆ ಸ್ಥಳದಲ್ಲಿ ಹಾಜರಿರಬೇಕು.
* ನಾವು ರಂಗೋಲಿ ಪುಡಿಯನ್ನು ಮಾತ್ರ ನೀಡುತ್ತೇವೆ.
* ಗಣರಾಜ್ಯೋತ್ಸವಕ್ಕೆ ಸಂಬಂಧಿಸಿದ ವಿಷಯವನ್ನು ರಂಗೋಲಿಯಲ್ಲಿ ಬಿಡಿಸಬೇಕು.
* ಸ್ಪರ್ಧೆಯಲ್ಲಿ ಭಾಗವಹಿಸುವರು ತಾವೇ ತಮಗೆ ಬೇಕಾದ ವಸ್ತುಗಳನ್ನು ತರಬೇಕು ಮತ್ತು ಒಂದೇ ಮಾದರಿಯನ್ನು ಬಳಸಬೇಕು. ಬಣ್ಣಗಳು/ ಪುಷ್ಪ ದಳಗಳು/ ಪುಡಿ/ ಧಾನ್ಯಗಳು/ ಅಕ್ಕಿ ಇತ್ಯಾದಿಗಳ ಪೈಕಿ ಒಂದು ವಸ್ತುವನ್ನು ಮಾತ್ರ ಬಳಸಿ ರಂಗೋಲಿ ಹಾಕಬೇಕು.
* ಸಂಘಟಕರು ನೀಡುವ ಸ್ಥಳದಲ್ಲಿ ಸ್ಪರ್ಧಿಗಳು ರಂಗೋಲಿಯನ್ನು ಸಿದ್ಧ ಪಡಿಸಬೇಕು.
* ಕೊರೆಯಚ್ಚನ್ನು ಬಳಸುವಂತಿಲ್ಲ.
* ಒಂದು ತಂಡದಲ್ಲಿ ಇಬ್ಬರಿಗೆ ಮಾತ್ರ ಅವಕಾಶ.
* ಸ್ಪರ್ಧೆ ಒಂದೇ ಸುತ್ತಿನಲ್ಲಿ ಮುಗಿಯಲಿದೆ.
* ಸ್ಪರ್ಧಿಗಳು ರಂಗೋಲಿ ಬಿಡಿಸಲು ಯಾವುದೇ ಮುದ್ರಿತ ವಸ್ತುಗಳನ್ನು ಬಳಸುವಂತಿಲ್ಲ.
* ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ಮೈಸೂರು: ದಸರಾ ಫುಡ್ ಫೆಸ್ಟಿವಲ್ ನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅವರ ಲೇಟೆಸ್ಟು ಸ್ಟೈಲ್ ಗೆ ಕೆಲವ್ರು ಫಿದಾ ಆದ್ರೇ ಇನ್ನು ಕೆಲವ್ರು ಇರಿಸುಮುರಿಸು ಅನುಭವಿಸಿದ್ರು.
ಸಂಭ್ರಮದ ದರ್ಬಾರ್ ನಲ್ಲಿ ಫುಲ್ ರೌಂಡ್ ಹೊಡೆಯುತ್ತಿರುವ ಜಮೀರ್ ಸಾಹೇಬ್ರಿಗೆ ಏನು ಹೊಸ ಐಡಿಯಾ ಹೊಡೆಯಿತೋ ಗೊತ್ತಿಲ್ಲ. ಸ್ಕೌಡ್ಸ್ ಅಂಡ್ ಗೈಡ್ ಗ್ರೌಂಡ್ ನಲ್ಲಿ ಫುಡ್ ಫೆಸ್ಟ್ ನಲ್ಲಿ ಭಾಗವಹಿಸಿದ್ದ ಸಾಹೇಬ್ರು ಊಟಕ್ಕೆ ಕೂತ್ರು.
ಮೈಸೂರು ಊಟ ಗಡದ್ದಾಗಿ ತಿಂದು ತೇಗೋದು ಬಿಟ್ಟು ಗ್ಯಾಪ್ ನಲ್ಲಿ ಹೊಸ ವಿವಾದ ಮಾಡ್ಕೊಂಡ್ರು. ಊಟದ ಕೊನೆಯಲ್ಲಿ ಅನ್ನ ಮಿಕ್ಕಿತ್ತೋ ಅಥ್ವಾ ಪೊಲೀಸರ ಮೇಲೆ ಹೆವಿ ಪ್ರೀತಿ ಉಕ್ಕಿ ಹರಿಯಿತೋ ಗೊತ್ತಿಲ್ಲ. ಇಧರ್ ಆವೋ ಅಂತಾ ಖಾಕಿಯವರನ್ನು ಕರೆದ್ರು. ಮಿನಿಸ್ಟ್ರು ಕರೆಯುತ್ತಾರೆ ಅಂತಾ ಓಡೋಡಿ ಬಂದ ಪೊಲೀಸ್ ಪೇದೆಗಳಿಗೆ ಬಾಯಿ ಹಾ ಅನ್ನು ಅಂತಾ ಹೇಳಿ ಅನ್ನ ಕಲಸಿ ಹಂಗಂಗೆ ತುರುಕಿದ್ರು. ಅದು ಮೂರು ಜನ್ರಿಗೂ ಎಂಜಲೆಲೆ ಊಟ ನಾ ಬಾಯಿಗೆ ತುರುಕಿದ್ರು.
ಇತ್ತ ಸಚಿವರ ಕೈ ತುತ್ತಿಗೆ ಬೇಡ ಅನ್ನೋದಕ್ಕೂ ಆಗದೇ ಪೇದೆಗಳು ಬಾಯಿ ಒರೆಸಿಕೊಂಡು ಸುಮ್ಮನಾದ್ರು. ಇದು ಮಿನಿಸ್ಟ್ರ ಸಿಂಪ್ಲಿಸಿಟಿ ಅಂತಾ ಅಂದ್ ಕೊಂಡ್ರು. ಈಗ ಈ ರೀತಿ ಎಂಜಲೆಲೆ ಊಟ ಕೊಟ್ಟಿದ್ದು ಎಷ್ಟು ಸರಿ ಎನ್ನುವ ಚರ್ಚೆ ಆರಂಭವಾಗಿದೆ.
ಬೆಂಗಳೂರು: ಈಗ ಹೊಗೆ ಐಸ್‍ಕ್ರೀಂ ಹವಾ ಶುರುವಾಗಿದೆ. ದೇಶದಲ್ಲಿ ಬ್ಯಾನ್ ಆಗಿರುವ ಡೇಂಜರಸ್ ನೈಟ್ರೋಜನ್ ಐಸ್ ಕ್ರೀಂ ಈಗ ಬೆಂಗಳೂರಿನ ಫುಡ್ ಫೆಸ್ಟ್‍ಗಳಲ್ಲಿ ಖುಲ್ಲಾಂ ಖುಲ್ಲಾ ಮಾರಾಟ ಮಾಡಲಾಗುತ್ತಿದೆ. ಇದನ್ನು ಪ್ರಶ್ನಿಸೋದಕ್ಕೆ ಹೋದ ನಾಗರಿಕನ ಮೇಲೆ ಐಸ್ ಕ್ರೀಂ ಅಂಗಡಿ ಮಾಲೀಕ ಹಲ್ಲೆಗೆ ಮುಂದಾಗಿದ್ದಾನೆ.
ನೈಟ್ರೋಜನ್ ನ್ನು ವೈದ್ಯರು ಸರ್ಜರಿ ಸಮಯದಲ್ಲೂ ಕೂಡ ಅತ್ಯಂತ ಜಾಗರೂಕತೆಯಿಂದ ಬಳಕೆ ಮಾಡುತ್ತಾರೆ. ದೇಶದಲ್ಲಿ ಇದು ಬ್ಯಾನ್ ಆಗಿದ್ರೂ ಈ ನೈಟ್ರೋಜನ್ ಐಸ್‍ಕ್ರೀಂನ್ನು ಫ್ರೀಡಂಪಾರ್ಕ್ ನಲ್ಲಿ ಮಂಗಳವಾರ ನಡೆದ ತಿಂಡಿಪೋತರ ಹಬ್ಬದಲ್ಲಿ ರಾಜಾರೋಷವಾಗಿ ಮಾರಾಟ ಮಾಡಲಾಗಿದೆ.
ಈ ಐಸ್ ಕ್ರೀಂಗಳಲ್ಲಿ ಅತಿ ಹೆಚ್ಚು ನೈಟ್ರೋಜನ್ ಕೂಡ ಬಳಸಲಾಗಿತ್ತು. ಇದನ್ನು ಪ್ರಶ್ನಿಸಿದಕ್ಕೆ ನಾಗರಿಕರೊಬ್ಬರ ಮೇಲೆ ಅಂಗಡಿ ಮಾಲೀಕ ಹಲ್ಲೆಗೆ ಮುಂದಾಗಿದ್ದಾನೆ. ಅದೇನ್ ಮಾಡ್ಕೋತಿಯೋ ಮಾಡ್ಕೋ ನಂಗೆ ಅನುಮತಿ ಕೊಟ್ಟಿದ್ದಾರೆ ಅಂತಾ ದರ್ಪ ಮೆರೆದಿದ್ದಾನೆ. ಅಸಲಿಗೆ ಹರಿಯಾಣದಲ್ಲಿ ಈ ಐಸ್ ಕ್ರೀಂನಿಂದಾಗಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ನಂತರ ದೇಶದ್ಯಾಂತ ನಿಷೇಧ ಮಾಡಲಾಗಿತ್ತು.
ಹೊಗೆ ಐಸ್ ಕ್ರೀಂ ತಿಂದರೆ ಏನಾಗುತ್ತೆ? 1. ಕರುಳು ಹುಣ್ಣು, 2. ಅನ್ನನಾಳ ಸುಟ್ಟು ಹೋಗಲಿದೆ 3. ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳಲಿದೆ. 4. ಉಸಿರಾಟದ ತೊಂದರೆ 5. ಚರ್ಮ ಸಂಬಂಧಿ ಕಾಯಿಲೆ
ಮೈಸೂರಿನಲ್ಲಿ ಐಸ್ ಕ್ರೀಂ ಮಾರಾಟ ಅಡ್ಡೆಯ ಮೇಲೆ ದಾಳಿ ಕೂಡ ನಡೆಸಲಾಗಿತ್ತು. ಆದರೆ ಬೆಂಗಳೂರಿನಲ್ಲಿ ಮಾತ್ರ ರಾಜರೋಷವಾಗಿ ಅನುಮತಿ ಕೊಟ್ಟಿರೋದು ಚರ್ಚೆಗೆ ಗ್ರಾಸವಾಗಿದೆ. ಹಾಗಿದ್ರೇ ಅಲ್ಲಿ ಗ್ರಾಹಕ ಮತ್ತು ವ್ಯಾಪಾರಿ ನಡುವಿನ ಸಂಭಾಷಣೆ ಹೀಗಿತ್ತು.
ಯುವಕ : ಇಟ್ಸ್ ಟೂ ಡೇಂಜರ್ಸ್ -ಮೈ ಗಾಡ್ ಇದ್ರ ಪಿಎಚ್ ಲೆವೆಲ್ ನಾಲ್ಕು ಇದೆ. ಏನನ್ನು ಹಾಕ್ತಾ ಇದ್ದೀಯಾ, ಎಲ್ಲರನ್ನು ಸಾಯಿಸಬೇಕು ಅಂತಿದ್ದೀಯಾ? ವ್ಯಾಪಾರಿ : ಹೇ ಏನ್ ಮಾತಾನಾಡ್ತಾ ಇದ್ದೀಯಾ – ಹೋಗ್ ಇಲ್ಲಿಂದ ! ಯುವಕ : ಹೇ ಕರಿ ಯಾರನ್ನು ಕರೀತಿಯೋ , ನಾನೇ ಕರೀತಿನಿ, ಏನ್ ಕೆಮಿಕಲ್ ಮಿಕ್ಸ್ ಮಾಡಿದ್ದೀಯಾ ಹೇಳು ನಾನೇ ಟೆಸ್ಟ್ ಮಾಡಿದ್ದೀನಿ.
(ಅಷ್ಟರಲ್ಲಿ ಯುವಕನನ್ನು ತಳ್ಳಿದ ವ್ಯಾಪಾರಿ)
ವ್ಯಾಪಾರಿ : ಹೋಗ್ ಇಲ್ಲಿಂದ ಔಟ್, ನನ್ನ ಬಳಿ ಫುಡ್ ಲೈಸೆನ್ಸ್ ಇದೆ, ಎಫ್‍ಎಸ್‍ಎಸ್‍ಐ ಪ್ರತಿ ಇದೆ. ಯುವಕ : ಯಾಕೆ ತಳ್ತಾ ಇದ್ದೀಯಾ , ತೋರಿಸು ನಿನ್ನಾ ಲೈಸೆನ್ಸ್ ವ್ಯಾಪಾರಿ : ನೀನ್ಯಾರು ಇದನ್ನು ಕೇಳೋಕೆ? ನೀನ್ಯಾಕೆ ಇಶ್ಯೂ ಮಾಡ್ತಾ ಇದ್ದೀಯಾ? ಯುವಕ : ನೋಡಿಲ್ಲಿ ಡ್ರೈ ಐಸ್ ನೈಟ್ರೋಜನ್‍ದು, ಇವನ ಮುಂದೆಯೇ ನಾನಿದನ್ನು ಟೆಸ್ಟ್ ಮಾಡಿದ್ದೀನಿ..! ವ್ಯಾಪಾರಿ : ನೀನ್ ಹೇಗೆ ಟೆಸ್ಟ್ ಮಾಡ್ತೀಯಾ, ನಾನು ಆರ್ಗನೈಸರ್‍ಗೆ ಹೇಳ್ತೀನಿ, ಸಿಕ್ಕಾಪಟ್ಟೆ ನಾಟಕ ಆಡಬೇಡ
ಯುವಕ : ಹೇ ಕಾಲ್ ಮಾಡು ನೋಡೋಣ , ವ್ಯಾಪಾರಿ : ಗಾಂಚಲಿ ಮಾಡಬೇಡಿ, ನೀವ್ಯಾರು, ನಿಮಗ್ಯಾಕೆ ತೋರಿಸಬೇಕು ಲೈಸೆನ್ಸ್ ನ್ನು? ಯುವಕ : ಗಾಂಚಲಿ ಅಲ್ಲ ಪ್ರೂಫ್ ತೋರಿಸಿದ್ದೀನಿ, ಅವನು ಯ್ಯೂಸ್ ಮಾಡಿರೋದು ಫುಡ್ ಗ್ರೇಡ್ ಅಲ್ಲ , ಅದನ್ನು ಕುಡಿದ್ರೇ ಪ್ರಾಬ್ಲಂ ಸರ್ , ತಪ್ಪದು