Tag: Food Department

  • ಕಾಳಸಂತೆ ಸೇರುತ್ತಿದೆ ಅನ್ನಭಾಗ್ಯ ಅಕ್ಕಿ – ಪಾಲಿಶ್‌ ನೀಡಿ ಹೆಚ್ಚಿನ ಬೆಲೆಗೆ ಮಾರಾಟ?

    ಕಾಳಸಂತೆ ಸೇರುತ್ತಿದೆ ಅನ್ನಭಾಗ್ಯ ಅಕ್ಕಿ – ಪಾಲಿಶ್‌ ನೀಡಿ ಹೆಚ್ಚಿನ ಬೆಲೆಗೆ ಮಾರಾಟ?

    – ಕೊಡಗಿನಲ್ಲಿ 8 ಕ್ವಿಂಟಲ್ ರೇಷನ್ ಅಕ್ಕಿ ಜಪ್ತಿ

    ಮಡಿಕೇರಿ: ಅನ್ನಭಾಗ್ಯ ಯೋಜನೆ (Annabhagya Scheme) ಅಡಿಯಲ್ಲಿ ಸರ್ಕಾರ ನೀಡುವ ಪಡಿತರ ಅಕ್ಕಿಯನ್ನು ಕಾಳಸಂತೆಗೆ ಕೊಂಡೊಯುತ್ತಿದ್ದ ಕಿಡಿಗೇಡಿಗಳನ್ನ ಕೊಡಗು ಕಂದಾಯ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ. ಪೋನ್ನಂಪೇಟೆ ತಾಲ್ಲೂಕಿನ ಗೋಣಿಕೋಪ್ಪ ಗ್ರಾಮದಲ್ಲಿ ಸುಮಾರು 8 ಕ್ವಿಂಟಲ್ ರೇಷನ್ ಅಕ್ಕಿಯನ್ನ (Rice) ಕಂದಾಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಹೌದು. ರಾಜ್ಯ ಸರ್ಕಾರ ಬಡವರಿಗಾಗಿ ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ವಿತರಿಸುವ ಪಡಿತರ ಅಕ್ಕಿ ಕಾಳಸಂತೆಗೆ ಸೇರುತ್ತಿದೆ. ಬಡವರಿಗೆ ಹಣದ ಆಮಿಷವೊಡ್ಡಿ ಕಡಿಮೆ ಬೆಲೆಗೆ ಅನ್ನಭಾಗ್ಯ ಅಕ್ಕಿ ಖರೀದಿಸುತ್ತಿರುವ ಇಡಿಗೇಡಿಗಳು ಬಳಿಕ ಪಾಲಿಶ್‌ ಕೊಟ್ಟು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದೆ. ಅದರಂತೆ ಕೊಡಗು ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟದ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ.

    ಕಳೆದ 4-5 ದಿನಗಳ ಹಿಂದೆ ಕೊಡಗಿನ ಕುಶಾಲನಗರದಲ್ಲಿ ಕ್ವಿಟಲ್ ಗಂಟಲ್ಲೇ ಅಕ್ಕಿಯನ್ನ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು (Food Department Officers) ದಾಳಿ ನಡೆಸಿದ್ದರು. ಅಕ್ಕಿಯನ್ನು ವಶಕ್ಕೆ ಪಡೆದು, ಆರೋಪಿಗಳ ವಿರುದ್ಧ ಪ್ರಕರಣ ಕೂಡ ದಾಖಲಿಸಿದ್ರು. ಈ ಬೆನ್ನಲ್ಲೇ ಇಂದು ಪೋನ್ನಂಪೇಟೆ ತಾಲ್ಲೂಕಿನ ಗೋಣಿಕೋಪ್ಪ ಗ್ರಾಮದಲ್ಲಿ ಕಾಳಸಂತೆಗೆ ಕೊಂಡೊಯ್ಯುತ್ತಿದ್ದ ಸುಮಾರು 8 ಕ್ವಿಂಟಲ್ ರೇಷನ್ ಅಕ್ಕಿಯನ್ನ ಕಂದಾಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಗ್ರಾಮದ ವಿಠಲ ಎಂಬುವವರು ಗೋಣಿಕೋಪ್ಪದಿಂದ ಮೈಸೂರು ಕಡೆಗೆ ವಾಹನದಲ್ಲಿ ಸಾಗಟ ಮಾಡುವ ಸಂದರ್ಭದಲ್ಲಿ ರೆವಿನ್ಯೂ ಇಲಾಖೆಯ ಅಧಿಕಾರಿಗಳು ವಾಹನ ತಡೆದು ತಪಾಸಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವಾಹನದಲ್ಲಿ ಸುಮಾರು 8 ಕ್ವಿಂಟಲ್ ಪಡಿತರ ಅಕ್ಕಿ ಇರುವುದು ಕಂಡು ಬಂದಿದೆ.

    ಈ ಹಿನ್ನೆಲೆಯಲ್ಲಿ ಇಲಾಖೆಯ ಅಧಿಕಾರಿಗಳು ಪೋನ್ನಂಪೇಟೆ ಪೊಲೀಸರಿಗೆ ದೂರು ನೀಡಿ ವಾಹನ ಹಾಗೂ ವಿಠಲ ಅವರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • PUBLiC TV Impact| ಸರ್ಕಾರಕ್ಕೆ ರೇಷನ್ ಕಾರ್ಡ್ ಪರಿಷ್ಕರಣೆ ವರದಿ ಸಲ್ಲಿಕೆ: ರದ್ದಿಗೆ ಮಾನದಂಡ ಏನು?

    PUBLiC TV Impact| ಸರ್ಕಾರಕ್ಕೆ ರೇಷನ್ ಕಾರ್ಡ್ ಪರಿಷ್ಕರಣೆ ವರದಿ ಸಲ್ಲಿಕೆ: ರದ್ದಿಗೆ ಮಾನದಂಡ ಏನು?

    – ಅಧಿಕಾರಿಗಳ ಯಡವಟ್ಟಿಗೆ ಬಳಲಿದ್ದ ಬಡವರು
    – 13ಲಕ್ಷಕ್ಕೂ ಹೆಚ್ಚು ಕಾರ್ಡ್ ಪರಿಷ್ಕರಣೆಗೆ ಪ್ಲಾನ್

    ಬೆಂಗಳೂರು: ಬಿಪಿಎಲ್‌ ಕಾರ್ಡ್ (BPL Card) ಪರಿಷ್ಕರಣೆಯಲ್ಲಿ ಯಡವಿದ್ದ ಸರ್ಕಾರ ಕೊನೆಗೂ ಎಚ್ಚೆತ್ತುಕೊಂಡಿದೆ. ತೆರಿಗೆ (Tax) ಪಾವತಿಸುತ್ತಿದ್ದಾರೆಂಬ ಕಾರಣ ನೀಡಿ ಅಧಿಕಾರಿಗಳು ಸಾವಿರಾರು ಸಂಖ್ಯೆಯ ಬಿಪಿಎಲ್ ಕಾರ್ಡ್ ರದ್ದು ಮಾಡಿದ್ದರು. ಅಧಿಕಾರಿಗಳ ಯಡವಟ್ಟಿನ ಕಥೆಯನ್ನು ಎಳೆ ಎಳೆಯಾಗಿ ಪಬ್ಲಿಕ್‌ ಟಿವಿ (PUBLiC TV) ಬಿಚ್ಚಿಟ್ಟ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ (CM Siddaramaiah) ರದ್ದಾದ ಅರ್ಹ ಬಿಪಿಎಲ್ ಕಾರ್ಡ್ ವಾಪಸ್‌ಗೆ ಆದೇಶ ಪ್ರಕಟಿಸಿದ್ದಾರೆ.

    ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ (Income Tax) ಪಾವತಿಸುವವರನ್ನು ಹೊರತುಪಡಿಸಿ ಉಳಿದಂತೆ ಯಾರೊಬ್ಬರ ಪಡಿತರ ಚೀಟಿ ರದ್ದು ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಹಾರ ಇಲಾಖೆ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದಾರೆ.

    ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿದಂತೆ ಉಳಿದ ಯಾವುದೇ ಕುಟುಂಬದವರ ಪಡಿತರ ಚೀಟಿ ರದ್ದಾಗಿದ್ದರೆ ತಕ್ಷಣ ವಾಪಸ್ ನೀಡುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಬಡ ಕುಟುಂಗಳವರ ಪಡಿತರ ಚೀಟಿಗಳನ್ನು ವಿನಾಕಾರಣ ರದ್ದು ಮಾಡಿದರೆ ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದ್ದಾರೆ.

    ಆಹಾರ ಇಲಾಖೆಗೆ 13,87,652 ರೇಷನ್ ಕಾರ್ಡ್ ಪರಿಷ್ಕರಣೆಗೆ ಸಿದ್ಧತೆ ನಡೆಸಿದ ಬಗ್ಗೆ ಸಿದ್ದರಾಮಯ್ಯನವರಿಗೆ ವರದಿ ಸಲ್ಲಿಸಿದೆ. ಇಲ್ಲಿಯವರೆಗೆ 3,81,983 ರೇಷನ್‌ ಕಾರ್ಡ್‌ಗಳನ್ನು ರದ್ದು/ ಅಮಾನತು ಮಾಡಲಾಗಿದ್ದು 10,05,669 ರೇಷನ್‌ ಕಾರ್ಡ್‌ ಪರಿಷ್ಕರಣೆ ಮಾಡಬೇಕಿದೆ ತಿಳಿಸಿದೆ. ಸಿಎಂಗೆ ಕೊಟ್ಟ ವರದಿಯಲ್ಲಿ ಆಹಾರ ಇಲಾಖೆ ಹಲವು ಮಾನದಂಡಗಳನ್ನು ಉಲ್ಲೇಖಿಸಿದೆ.

    ಯಾರಿಗೆ ಬಿಪಿಎಲ್ ಕಾರ್ಡ್‌ ಸಿಗಲ್ಲ?
    ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ನೌಕರರು, ನಿಗಮ, ಮಂಡಳಿ, ಪ್ರಾಧಿಕಾರಗಳ ನೌಕರರು, ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿದಾರರಿಗಿಲ್ಲ ಬಿಪಿಎಲ್ ಕಾರ್ಡ್, ಸ್ವಂತ ಬಳಕೆಗೆ ಕಾರು ಹೊಂದಿರುವವರು, ನಗರಗಳಲ್ಲಿ 1,000 ಚದರಡಿಗೂ ಹೆಚ್ಚು ವಿಸ್ತೀರ್ಣದ ಸೈಟ್‌ನಲ್ಲಿ ಮನೆ ಹೊಂದಿರುವರಿಗೆ ಬಿಪಿಎಲ್‌ ಕಾರ್ಡ್‌ ಸಿಗಲ್ಲ.

     

    ಯರ‍್ಯಾರಿಗೆ ಬಿಪಿಎಲ್ ಕಾರ್ಡ್‌?
    ಅಂತ್ಯೋದಯ ಅನ್ನ ಯೋಜನೆಯಡಿ ಮಾನದಂಡಗಳು, ವಿಧವೆಯರು, ಮಾರಣಾಂತಿಕ ಅನಾರೋಗ್ಯದ ವ್ಯಕ್ತಿಗಳು, ವಿಶೇಷ ಚೇತನರಿಗೆ ಅಂತ್ಯೋದಯ ಕಾರ್ಡ್ ಯಾವುದೇ ಜೀವನಾಧಾರ ಇಲ್ಲದೇ ಇರುವವರಿಗೆ, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಬಿಪಿಎಲ್‌ ಕಾರ್ಡ್‌ ಸಿಗಲಿದೆ.

    ಅಂತ್ಯೋದಯ ಕಾರ್ಡ್ ಮಾನದಂಡಗಳು ಏನು?
    ಭೂರಹಿತ ಕೃಷಿ ಕಾರ್ಮಿಕರು, ಕನಿಷ್ಠ ರೈತರು ಆಗಿರಬೇಕು. ಗ್ರಾಮೀಣ ಕುಶಲಕರ್ಮಿಗಳು, ಚರ್ಮಕಾರರು, ನೇಕಾರರಾಗಿರಬೇಕು. ಕಮ್ಮಾರರು, ಬಡಗಿಗಳು, ಕೊಳೆಗೇರಿ ನಿವಾಸಿ, ಕುಂಬಾರರು, ಕೂಲಿಗಳು, ರಿಕ್ಷಾ ಚಾಲಕರು, ಗಾಡಿ ಎಳೆಯುವವರು, ಹಣ್ಣು, ಹೂವು ಮಾರುವವರು, ಹಾವು ಮೋಡಿ ಮಾಡುವವರು, ಚಿಂದಿ ಆಯುವವರು, ನಿರ್ಗತಿಕರು, ಅನೌಪಚಾರಿಕ ವಲಯದಲ್ಲಿ ಜೀವನ ಸಾಗಿಸುವವರು ಅರ್ಹರಾಗಿರುತ್ತಾರೆ.

  • ಆಹಾರ, ಶಿಕ್ಷಣ ಇಲಾಖೆಯ ಅಕ್ಕಿ ಖರೀದಿಯಲ್ಲಿ 120 ಕೋಟಿ ರೂ. ವ್ಯತ್ಯಾಸ: ಎನ್.ರವಿಕುಮಾರ್

    ಆಹಾರ, ಶಿಕ್ಷಣ ಇಲಾಖೆಯ ಅಕ್ಕಿ ಖರೀದಿಯಲ್ಲಿ 120 ಕೋಟಿ ರೂ. ವ್ಯತ್ಯಾಸ: ಎನ್.ರವಿಕುಮಾರ್

    ಬೆಂಗಳೂರು: ಆಹಾರ ಇಲಾಖೆ ಮತ್ತು ಶಿಕ್ಷಣ ಇಲಾಖೆ (Education Department) ಅಕ್ಕಿ ಖರೀದಿಸಿದ್ದರಲ್ಲಿ ದೊಡ್ಡ ಪ್ರಮಾಣದಲ್ಲಿ ಹಣದ ವ್ಯತ್ಯಾಸವಾಗಿದೆ ಎಂದು ಬಿಜೆಪಿ (BJP) ಮುಖಂಡ ಎನ್.ರವಿಕುಮಾರ್ (N.Ravikumar) ಆರೋಪಿಸಿದ್ದಾರೆ.

    ವಿಧಾನ ಪರಿಷತ್ ಕಲಾಪದಲ್ಲಿ ಆಹಾರ ಸಚಿವ ಮುನಿಯಪ್ಪರಿಗೆ ಪ್ರಶ್ನಿಸಿದ ಅವರು, ಆಹಾರ ಇಲಾಖೆ ಒಂದು ಕೆಜಿಗೆ 34 ರೂ. 60 ಪೈಸೆ ಖರ್ಚು ಮಾಡುತ್ತಿದೆ. ಶಿಕ್ಷಣ ಇಲಾಖೆ ಅಕ್ಷರ ದಾಸೋಹಗೆ ಪ್ರತಿ ಕೆಜಿ ಅಕ್ಕಿಗೆ 29ರೂ. 30 ಪೈಸೆ ಕೊಡ್ತಿದ್ದಾರೆ. ಸರ್ಕಾರ ಒಂದೇ ಇದ್ದರೂ ಯಾಕೆ ಬೇರೆ ದರದಲ್ಲಿ ಅಕ್ಕಿ ಖರೀದಿ ಆಗ್ತಿದೆ? ಅಕ್ಕಿ ಖರೀದಿಯಲ್ಲಿ ಸುಮಾರು 5 ರೂ. ಹಣ ಎಲ್ಲಿಗೆ ಹೋಗುತ್ತಿದೆ ಎಂದು ಗೊತ್ತಿಲ್ಲ. ಸುಮಾರು 120 ಕೋಟಿ ರೂ. ಹಣ ವ್ಯತ್ಯಾಸ ಬರುತ್ತಿದೆ. ಇದಕ್ಕೆ ಉತ್ತರ ಕೊಡಿ ಎಂದು ಅವರು ಕೇಳಿದರು. ಇದನ್ನೂ ಓದಿ: ಕಾವೇರಿ ನೀರು ಬಿಡುಗಡೆ ವಿಚಾರ; ರಾಜ್ಯ ಸರ್ಕಾರ ನಿರ್ಧಾರದ ಬೆನ್ನಲ್ಲೇ ಸರ್ವಪಕ್ಷಗಳ ಸಭೆ ಕರೆದ ತ.ನಾಡು ಸರ್ಕಾರ

    ಈ ವೇಳೆ ಉತ್ತರಿಸಿದ ಸಚಿವ ಮುನಿಯಪ್ಪ, ಆಹಾರ ಇಲಾಖೆ, ಎನ್‍ಸಿಎಫ್ ಮತ್ತು ಕೇಂದ್ರ ಭಂಡಾರದ ಮೂಲಕವೇ ಅಕ್ಕಿ ಖರೀದಿ ಮಾಡ್ತಿದೆ. ಕೇಂದ್ರವೇ ನಿಗದಿ ಮಾಡಿದ ಮೊತ್ತವನ್ನು ಪ್ರತಿ ಕೆಜಿಗೆ 34 ರೂ. 60 ಪೈಸೆ ಕೊಡಲಾಗುತ್ತಿದೆ. ನಾವು ಕೇಂದ್ರ ಸರ್ಕಾರಕ್ಕೆ 5 ಕೆಜಿ ಅಕ್ಕಿ ಕೊಡಿ ಎಂದರೂ ಕೊಡಲಿಲ್ಲ. ನಾವು ಖರೀದಿ ಮಾಡುತ್ತಿರುವ ಅಕ್ಕಿ ನಾವು ಟೆಂಡರ್ ಕರೆದಿಲ್ಲ. ಕೇಂದ್ರ ನಿಗದಿ ಮಾಡಿದ ಹಣವನ್ನೇ ಕೊಟ್ಟು ಅಕ್ಕಿ ಖರೀದಿ ಮಾಡ್ತಿದ್ದೇವೆ. ಇದರಲ್ಲಿ ಯಾವುದೇ ಅಕ್ರಮ ಆಗಿಲ್ಲ ಎಂದು ಅವರು ಹೇಳಿದರು.

    2 ಕೋಟಿ ಮೆಟ್ರಿಕ್ ಟನ್ ಕೇಂದ್ರದ ಬಳಿ ಅಕ್ಕಿ ದಾಸ್ತಾನಿದೆ. 28 ರೂ.ಗೆ ಅಕ್ಕಿ ಮಾರ್ಕೆಟ್‍ನಲ್ಲಿ ಮಾರಾಟ ಮಾಡ್ತಿದ್ದಾರೆ. ನಮಗೆ ಅಕ್ಕಿ ಕೊಡಿ ಎಂದರೂ ಕೊಡುತ್ತಿಲ್ಲ. ಕೇಂದ್ರ ಸರ್ಕಾರ ಮಾರ್ಕೆಟ್ ಹಾಳು ಮಾಡುತ್ತಿದೆ. ಲಕ್ಷಾಂತರ ರೂ. ಹಣವನ್ನ ಕೇಂದ್ರ ನಷ್ಟ ಮಾಡ್ತಿದೆ ಎಂದು ಅವರು ಆರೋಪಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ರವಿಕುಮಾರ್, ಸಚಿವ ಮಧು ಬಂಗಾರಪ್ಪ ಮಕ್ಕಳಿಗೆ ಯಾವ ಗ್ರೇಡ್ ಅಕ್ಕಿಯನ್ನು ಕೊಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಈ ವೇಳೆ ಮಧು ಬಂಗಾರಪ್ಪ ಒಳ್ಳೆಯ ಅಕ್ಕಿಯನ್ನು ಕೊಡುತ್ತಿದ್ದೇವೆ ಎಂದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಭಾಪತಿ ಬಸವರಾಜ್ ಹೊರಟ್ಟಿ, ಇದು ಗಂಭೀರ ವಿಚಾರ, ಸರ್ಕಾರ ಇದ್ಕಕೆ ಸ್ಪಷ್ಟನೆ ನೀಡಬೇಕು ಎಂದು ಸೂಚಿಸಿದರು. ಇದನ್ನೂ ಓದಿ: Assembly Session: ಪರಿಷತ್‌ನಲ್ಲಿ ವಾಲ್ಮೀಕಿ ನಿಗಮ ಹಗರಣದ ಗದ್ದಲ; ಚರ್ಚೆಗೆ ಅವಕಾಶ ಕೊಡುವಂತೆ ಬಿಜೆಪಿ ಬಿಗಿಪಟ್ಟು!

  • ಗೋಬಿ, ಕಬಾಬ್ ಬಳಿಕ ಪಾನಿಪುರಿಯಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ

    ಗೋಬಿ, ಕಬಾಬ್ ಬಳಿಕ ಪಾನಿಪುರಿಯಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ

    ಬೆಂಗಳೂರು: ಗೋಬಿ, ಕಬಾಬ್ ಬಳಿಕ ಪಾನಿಪುರಿಯಲ್ಲಿ (Panipuri) ಕ್ಯಾನ್ಸರ್‌ಕಾರಕ (Cancer) ಅಂಶಗಳು ಪತ್ತೆಯಾಗಿದೆ. ಬೆಂಗಳೂರಿನ 49 ಪ್ರದೇಶಗಳಿಂದ ಸಂಗ್ರಹಿಸಿದ ಪಾನಿಪುರಿ ತಯಾರಿಕೆ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ಇರೋದು ಪತ್ತೆಯಾಗಿದೆ.

    ವಿದ್ಯಾರ್ಥಿಗಳು, ಯುವತಿಯರು ಪಾನಿಪುರಿ ಅಂದರೆ ಬಾಯಿ ಬಾಯಿ ಬಿಡುತ್ತಾರೆ. ಪಾನಿಪುರಿ ತಿನ್ನೋಕೆ ಸಾಲು ಗಟ್ಟಿ ನಿಲ್ಲುತ್ತಾರೆ. ಅಂತಹ ಪಾನಿಪುರಿ ಪ್ರಿಯರಿಗೆ ಇದು ಶಾಕಿಂಗ್ ನ್ಯೂಸ್. ಪಾನಿಪುರಿಗೆ ಬಳಸುವ ಸಾಸ್ ಮತ್ತು ಮೀಟಾ ಖಾರದ ಪುಡಿಯಲ್ಲಿ ಕ್ಯಾನ್ಸರ್‌ಕಾರಕ ಇರೋದು ಪತ್ತೆಯಾಗಿದೆ. ಜೊತೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (Department of Food Safety and Quality) ಬೆಂಗಳೂರು ಸೇರಿದಂತೆ ರಾಜ್ಯದ 79 ಕಡೆ ಪಾನಿಪುರಿ ಮಾದರಿಗಳನ್ನು ಸಂಗ್ರಹ ಮಾಡಿ ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಹಾನಿಕಾರಕ ಅಂಶ ಇರೋದು ಪತ್ತೆಯಾಗಿದೆ. ಇನ್ನು ಬೆಂಗಳೂರಿನ 19 ಕಡೆಗಳಲ್ಲಿ ಕ್ಯಾನ್ಸರ್‌ಕಾರಕವಿರುವ ಸಾಸ್, ಮೀಟಾ ಖಾರದ ಪುಡಿ ಬಳಸುತ್ತಿರೋದು ವರದಿಯಾಗಿದೆ. ಇದನ್ನೂ ಓದಿ: ಆಗುಂಬೆ ಘಾಟಿಯಲ್ಲಿ ನಾಳೆಯಿಂದ ಭಾರಿ ವಾಹನಗಳ ಸಂಚಾರ ನಿಷೇಧ

    ಆಹಾರ ಮತ್ತು ಸುರಕ್ಷತಾ ಇಲಾಖೆ ಟೆಸ್ಟ್‌ನಲ್ಲಿ ಸನ್‌ಸೆಟ್ ಯಲ್ಲೋ 1, ಸನ್‌ಸೆಟ್ ಯಲ್ಲೋ 2 ಜೊತೆಗೆ ಬ್ರಿಲಿಯಂಟ್ ಬ್ರೂ ಮತ್ತು ಕಾರ್ಮೋಸಿಯಸ್ ರಾಸಾಯನಿಕ ಅಂಶ ಬೆರಕೆ ಆಗಿರೋದು ಪತ್ತೆಯಾಗಿದೆ. ಈ ಹಾನಿಕಾರಕ ಅಂಶಗಳು ಮನುಷ್ಯನ ದೇಹ ಸೇರಿದರೆ ಆರೋಗ್ಯ ಕ್ಷೀಣಿಸುತ್ತಾ ಹೋಗಲಿದೆ. ಹಾಗಾಗಿ ಕ್ಯಾನ್ಸರ್‌ಕಾರಕ ಆಗಿರೋ ಕಲಬೆರಕೆ ಬೆರೆಸಬಾರದು ಎನ್ನುತ್ತಿದ್ದಾರೆ. ಈ ವಾರದಲ್ಲಿ ಪಾನಿಪುರಿಗೆ ಹಾಕೋ ಸಾಸ್ ಮತ್ತು ಮಿಟಾ ಬ್ಯಾನ್ ಮಾಡೋಕೆ ನಿರ್ಧರಿಸಿದ್ದು, ಅಧಿಕೃತ ಘೋಷಣೆ ಮಾಡಲಿದ್ದಾರೆ. ಇದನ್ನೂ ಓದಿ: ಜುಲೈ 3 ರಿಂದ ಜಿಯೋದಿಂದ ಹೊಸ ಅನ್‌ಲಿಮಿಟೆಡ್ ಪ್ಲಾನ್‌

    ಒಟ್ಟಾರೆ ಕಾಟನ್ ಕ್ಯಾಂಡಿ, ಗೋಬಿ, ಕಬಾಬ್ ಬಳಿಕ ಪಾನಿಪುರಿ ತಯಾರಿಕೆಯಲ್ಲಿ ಬಳಸುವ ಸಾಸ್‌ನಲ್ಲೂ ಹಾನಿಕಾರಕ ಇರೋದು ಪತ್ತೆಯಾಗಿದೆ. ಈ ವಾರದಲ್ಲಿ ಹಾನಿಕಾರಕ ರಾಸಾಯನಿಕ ಅಂಶಗಳನ್ನು ಬ್ಯಾನ್ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಕೊಡಗಿನಲ್ಲಿ ಭಾರೀ ಮಳೆ- ದುಬಾರೆ ಆನೆ ಶಿಬಿರಕ್ಕೆ ಪ್ರವಾಸಿಗರಿಗೆ ನಿಷೇಧ

  • ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಲಂಚದ ಬಾಂಬ್ – ಸಿಎಂ, ಸಚಿವರಿಗೆ ಪತ್ರ

    ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಲಂಚದ ಬಾಂಬ್ – ಸಿಎಂ, ಸಚಿವರಿಗೆ ಪತ್ರ

    ಬೆಂಗಳೂರು: ರಾಜ್ಯ ಸರ್ಕಾರದ (State Government) ವಿರುದ್ಧ ನಿರಂತರವಾಗಿ ಭ್ರಷ್ಟಾಚಾರ ಆರೋಪ ಕೇಳಿಬರುತ್ತಿದೆ. ಇತ್ತೀಚೆಗೆ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರ ವಿರುದ್ಧ ಅನಾಮಿಕರೊಬ್ಬರು ಬರೆದ ಪತ್ರ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಬೆನ್ನಲ್ಲೇ ಆಹಾರ ಇಲಾಖೆಯಲ್ಲೂ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ.

    ಆಹಾರ ಇಲಾಖೆ (Food Department) ಅಧಿಕಾರಿಗಳ ವಿರುದ್ಧ ಲಂಚದ ಬಾಂಬ್ ಹಾಕಿದ್ದಾರೆ. ಪಡಿತರ ವಿತರಕರೇ ಸಿಎಂ ಸೇರಿದಂತೆ ಸಚಿವ ಕೆ.ಹೆಚ್ ಮುನಿಯಪ್ಪ ಅವರಿಗೆ ಪಿನ್ ಟು ಪಿನ್ ಮಾಹಿತಿ ಕೊಟ್ಟು ಪತ್ರ ಬರೆದಿದ್ದಾರೆ. ತುಮಕೂರಿನ ಪಾವಗಡದ ಶಿರಸ್ತೇದಾರ ಕೃಷ್ಣಮೂರ್ತಿ ಹಾಗೂ ಆಹಾರ ನಿರೀಕ್ಷಕ ಮಂಜುನಾಥ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.  

    ಅಧಿಕಾರಿಗಳು ಪ್ರತೀ ನ್ಯಾಯಬೆಲೆ ಅಂಗಡಿಯವರಿಂದ ಲಂಚ ಕೊಡುವಂತೆ ಪೀಡಿಸುತ್ತಿದ್ದಾರೆ. ಕಮಿಷನ್ ಕೊಡದೇ ಇದ್ದರೇ ಕೇಸ್ ಹಾಕುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. ಇದನ್ನೂ ಓದಿ: ಕಿಂಗ್ ಫಿಷರ್ ಬಿಯರ್‌ನಲ್ಲಿ ಅಪಾಯಕಾರಿ ಅಂಶ ಪತ್ತೆ – 25 ಕೋಟಿ ರೂ. ಮೌಲ್ಯದ ಬಿಯರ್ ಜಪ್ತಿ

    ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಹೆಚ್ ಮುನಿಯಪ್ಪ, ಲಂಚಾವತಾರದ ಆರೋಪದ ಬಗ್ಗೆ ಆರೋಪ ಕೇಳಿಬಂದಿದೆ. 15 ದಿನಗಳ ಹಿಂದೆಯೇ ಪತ್ರ ಬಂದಿದೆ. ಅಧಿಕಾರಿಗಳಿಗೆ ತನಿಖೆ ಮಾಡಲು ಆದೇಶ ನೀಡಿದ್ದೇನೆ. ತನಿಖೆ ವರದಿ ಬಂದ ಬಳಿಕ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ತೀನಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ನವೆಂಬರ್ 30ರ ವರೆಗೆ ಕಾಲುವೆಗೆ ನೀರು – ಐಸಿಸಿ ಸಭೆ ಬಳಿಕ ಶಿವರಾಜ್ ತಂಗಡಗಿ ಮಾಹಿತಿ

    ಅಹಾರ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಜ್ಞಾನೇಂದ್ರ ಮಾತನಾಡಿ, ಈ ಆರೋಪದ ಬಗ್ಗೆ ಇಲಾಖೆಯ ಗಮನಕ್ಕೆ ಬಂದಿದೆ. ಆದ್ರೆ ಅನ್ನಭಾಗ್ಯದ ಕೆಲಸ ಕಾರ್ಯದಲ್ಲಿ ನಾವು ಒತ್ತಡದಲ್ಲಿದ್ದೆವು. ಆರೋಪ ಎದುರಿಸುತ್ತಿರುವ ಇಬ್ಬರು ಸಿಬ್ಬಂದಿಗೂ ನಾವು ನೋಟಿಸ್ ನೀಡಿದ್ದೇವೆ. ಈ ಬಗ್ಗೆ ವಿಚಾರಣೆ ಕೂಡ ನಡೆಯುತ್ತಿದೆ. ಈಗಾಗಲೇ ಆಂತರಿಕ ವಿಚಾರಣೆಗೆ ಪ್ರತ್ಯೇಕ ಟೀಂ ರಚನೆ ಆಗಿದೆ. ಈ ತಿಂಗಳ ಅಂತ್ಯದಲ್ಲಿ ತನಿಖಾ ವರದಿ ನಮ್ಮ ಕೈಸೇರಲಿದೆ. ಒಂದು ವೇಳೆ ಆರೋಪ ನಿಜವಾಗಿದ್ರೆ ಕಠಿಣ ಕ್ರಮ ವಹಿಸುತ್ತೇವೆ. ತನಿಖಾ ವರದಿ ಬಾರದೇ ಏನೂ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಡಿತರ ಚೀಟಿ ಹೊಂದಿದ್ದ ಸರ್ಕಾರಿ ನೌಕರರಿಗೆ ಶಾಕ್ ಕೊಟ್ಟ ಆಹಾರ ಇಲಾಖೆ

    ಪಡಿತರ ಚೀಟಿ ಹೊಂದಿದ್ದ ಸರ್ಕಾರಿ ನೌಕರರಿಗೆ ಶಾಕ್ ಕೊಟ್ಟ ಆಹಾರ ಇಲಾಖೆ

    ಧಾರವಾಡ: ಸರ್ಕಾರಿ ಕೆಲಸ ದೇವರ ಕೆಲಸ ಅಂತಾರೆ. ಆದ್ರೆ ಅಂತಹ ಸರ್ಕಾರಿ ನೌಕರರೇ (Government Employees) ಸರ್ಕಾರಕ್ಕೆ ಮೋಸ ಮಾಡುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ.

    ಸರ್ಕಾರ ಬಡವರಿಗಾಗಿ ಅನೇಕ ಯೋಜನೆಗಳನ್ನು ನೀಡುತ್ತಿದೆ. ಆದರೆ ಸರ್ಕಾರಿ ಕೆಲಸವಿದ್ದವರೂ ಬಡವರಿಗೆ ನೀಡುವ ಸೌಲಭ್ಯವನ್ನು ಪಡೆದು ಮೋಸ ಮಾಡಿದ್ದಾರೆ. ಅಂತಹವರಿಗೆ ಬುದ್ಧಿ ಕಲಿಸಲು ಸರ್ಕಾರ ದಂಡದ ಬಿಸಿ ಮುಟ್ಟಿಸಿದೆ. ಕೂಡಲೇ ಎಚ್ಚೆತ್ತ ಆಹಾರ ಇಲಾಖೆ (Food Department), ಸುಳ್ಳು ಮಾಹಿತಿ ನೀಡಿ ಪಡಿತರ (Ration Card) ದುರ್ಬಳಕೆ ಮಾಡಿಕೊಂಡ 339 ಸರ್ಕಾರಿ ನೌಕಕರರಿಂದ 36.73 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದೆ. ಇದನ್ನೂ ಓದಿ: ವ್ಯಕ್ತಿ ಹೊಟ್ಟೆಯಲ್ಲಿತ್ತು 62 ಚಮಚ – ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

    ಮತ್ತೊಂದು ಕಡೆ ಆದಾಯ ತೆರಿಗೆ ಪಾವತಿಸುತ್ತಿದ್ದರೂ ಬಿಪಿಎಲ್ ಕಾರ್ಡ್ ಹೊಂದಿರುವವರ ಮೇಲೆ ಕ್ರಮಕ್ಕೆ ಮುಂದಾಗಿದೆ. 1945ರ ಕಾಯ್ದೆಯ ಅನ್ವಯ ಆದಾಯ ತೆರಿಗೆ ಪಾವತಿಸುವವರ ಕಾರ್ಡ್‌ಗಳನ್ನು ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾವಣೆ ಮಾಡಿದೆ. ಜೊತೆಗೆ ಸ್ವಂತ ಕಾರು ಇದ್ದವರ ಬಗ್ಗೆ ಆರ್‌ಟಿಒನಿಂದ ಮಾಹಿತಿ ಪಡೆದು ಅಂತಹ ಕಾರ್ಡ್‌ಗಳನ್ನು ಅಮಾನ್ಯ ಮಾಡಲು ಮುಂದಾಗಿದ್ದಾರೆ. ಸದ್ಯ ಅಧಿಕಾರಿಗಳು, 4 ಅಂತಸ್ತಿನ ಮನೆ ಇದ್ದವರು ಹಾಗೂ 10 ರಿಂದ 12 ಎಕರೆ ನೀರಾವರಿ ಜಮೀನು ಇದ್ದವರು ಕೂಡಾ ಆಹಾರ ಇಲಾಖೆ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ. ಇಂಥವರನ್ನ ಮಟ್ಟಹಾಕುವಂತೆಯೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾಲ್ಕು ಚಕ್ರದ ಸ್ವಂತ ವಾಹನ ಹೊಂದಿದ ಅಂತ್ಯೋದಯ, ಬಿಪಿಎಲ್ ಪಡಿತರದಾರರ ಮೇಲಿನ ಕ್ರಮಕ್ಕೆ ಬ್ರೇಕ್

    ನಾಲ್ಕು ಚಕ್ರದ ಸ್ವಂತ ವಾಹನ ಹೊಂದಿದ ಅಂತ್ಯೋದಯ, ಬಿಪಿಎಲ್ ಪಡಿತರದಾರರ ಮೇಲಿನ ಕ್ರಮಕ್ಕೆ ಬ್ರೇಕ್

    ಬೆಂಗಳೂರು: ನಾಲ್ಕು ಚಕ್ರದ ಸ್ವಂತ ವಾಹನ ಹೊಂದಿದವರ ಅಂತ್ಯೋದಯ, ಬಿಪಿಎಲ್‌ ಕಾರ್ಡ್‌ಗಳನ್ನು ಎಪಿಎಲ್‌ ಕಾರ್ಡ್‌ಗಳಾಗಿ ಪರಿವರ್ತಿಸುವ ಪ್ರಕ್ರಿಯೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬ್ರೇಕ್‌ ನೀಡಿದೆ.

    ಅಂತ್ಯೋದಯ, ಬಿಪಿಎಲ್‌ ಪಡಿತರ ಚೀಟಿಯನ್ನು ಅಕ್ರಮವಾಗಿ ಪಡೆದು ಬಡವರ ʼಅನ್ನಭಾಗ್ಯʼಕ್ಕೆ ಕನ್ನ ಹಾಕಿದವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯನ್ನು ಆಹಾರ ಇಲಾಖೆ ಆರಂಭಿಸಿತ್ತು. ಅನರ್ಹ ಪಡಿತರ ಚೀಟಿಗಳನ್ನು ಎಪಿಎಲ್‌ಗೆ ಪರಿವರ್ತಿಸುವ ಪ್ರಕ್ರಿಯೆ ನಡೆಸಿತ್ತು. ಇದನ್ನೂ ಓದಿ: ಮದರಸಾಗಳಿಗಾಗಿ ವಿಶೇಷ ಮಂಡಳಿ ರಚನೆಗೆ ಪ್ಲಾನ್- ತಜ್ಞರ ವರದಿ ಕೇಳಿದ ಸಚಿವ ನಾಗೇಶ್

    ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು, 3 ಹೆಕ್ಟೇರ್‌ಗಿಂತ ಹೆಚ್ಚು ಜಮೀನು ಹೊಂದಿದವರು, 1.20 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿದವರು ಮತ್ತು ನಾಲ್ಕು ಚಕ್ರದ ವೈಯಕ್ತಿಕ ವಾಹನ ಇರುವವರು ಅಂತ್ಯೋದಯ ಅಥವಾ ಬಿಪಿಎಲ್‌ ಪಡಿತರ ಚೀಟಿ ಪಡೆಯಲು ಅರ್ಹರಲ್ಲ ಎಂದು ಇಲಾಖೆ ಪಟ್ಟಿ ಮಾಡಿತ್ತು.

    ಈ ಸಂಬಂಧ ಕ್ರಮ ಕೈಗೊಳ್ಳಲು ಎಲ್ಲ ಡಿಸಿಗಳು ಮತ್ತು ಇಲಾಖೆ ಜಂಟಿ/ಉಪನಿರ್ದೇಶಕರಿಗೂ ಈ ಹಿಂದೆ ಆಹಾರ ಇಲಾಖೆ ಸೂಚನೆ ನೀಡಿತ್ತು. ಆದರೆ ನಾಲ್ಕು ಚಕ್ರದ ಸ್ವಂತ ವಾಹನ ಹೊಂದಿದವರನ್ನು ಅನರ್ಹ ಪಟ್ಟಿಗೆ ಸೇರಿಸಿರುವುದಕ್ಕೆ ಸರ್ಕಾರ ಹಾಗೂ ಪಕ್ಷದವರಲ್ಲೇ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಆದೇಶ ವಾಪಸ್‌ ತೆಗೆದುಕೊಳ್ಳಲು ಸಿಎಂ ಮೇಲೆ ಒತ್ತಡ ಕೂಡ ಹೇರಲಾಗಿತ್ತು. ಇದನ್ನೂ ಓದಿ: ಶಾಸಕ ಪ್ರೀತಂಗೌಡ ಭರ್ಜರಿ ಗಿಫ್ಟ್ – ಗೌರಿ ಹಬ್ಬಕ್ಕೆ ಸೀರೆ, ಬಳೆ, ಕುಂಕುಮ ಭಾಗ್ಯ

    ಇದೀಗ ತನ್ನ ಸುತ್ತೋಲೆಯನ್ನು ಮುಂದಿನ ಆದೇಶದವರೆಗೆ ಆಹಾರ ಇಲಾಖೆ ತಡೆ ಹಿಡಿದಿದೆ. ಆ ಸಂಬಂಧ ಆದೇಶವನ್ನು ಹೊರಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಅಕ್ರಮ ಅಕ್ಕಿ ಸಂಗ್ರಹ ಅಡ್ಡೆ ಮೇಲೆ ದಾಳಿ- ಆರು ಮಂದಿ ಬಂಧನ

    ಅಕ್ರಮ ಅಕ್ಕಿ ಸಂಗ್ರಹ ಅಡ್ಡೆ ಮೇಲೆ ದಾಳಿ- ಆರು ಮಂದಿ ಬಂಧನ

    ಬಾಗಲಕೋಟೆ: ಅಕ್ರಮವಾಗಿ ಅಕ್ಕಿ ಸಂಗ್ರಹ ಮಾಡಿದ್ದ ಗೋದಾಮಿನ ಮೇಲೆ ಅಧಿಕಾರಿಗಳು ದಾಳಿ ನಡೆಸಿ 6 ಮಂದಿ ಅಕ್ಕಿ ಖದೀಮರನ್ನು ಬಂಧಿಸಿದ ಘಟನೆ ನಿನ್ನೆ ರಾತ್ರಿ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದಲ್ಲಿ ನಡೆದಿದೆ.

    ದೇಸಾಯಿ ಬಾವಿ ಪ್ರದೇಶದಲ್ಲಿ ಇರುವ ಗೋದಾಮಿಗೆ ಭೇಟಿ ನೀಡಿದ ಅಧಿಕಾರಿಗಳು, 16 ಕ್ವಿಂಟಾಲ್ 40 ಕೆಜಿ ಅಕ್ಕಿ ವಶಪಡಿಸಿಕೊಂಡಿದ್ದಾರಲ್ಲದೇ, ಯಾಸೀನ್ ಹಾಗೂ ರಿಯಾಜ್‍ನನ್ನು ಅಕ್ರಮ ಅಕ್ಕಿ ಸಂಗ್ರಹದ ಆರೋಪದ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಸಂಗ್ರಹವಾದ ಅಕ್ಕಿ ಬಡವರ ಪಾಲಿನ ಪಡಿತರ ಅಕ್ಕಿಯಾಗಿದ್ದು, ಬಡವರು ಅಕ್ಕಿ ಪಡೆದು ಮನೆಗೆ ಹೋದ ಬಳಿಕ ದುಡ್ಡಿನಾಸೆ ತೋರಿಸಿ ಅವರಿಂದ ಖರೀದಿ ಮಾಡುತ್ತಿದ್ದರು ಎನ್ನಲಾಗಿದೆ.

    ಆಹಾರ ಇಲಾಖೆ ತಾಲೂಕು ಅಧಿಕಾರಿ ಬಸವರಾಜ್ ಜಗಳೂರ, ಪಿಎಸ್ ಐ ವಿಜಯ ಕಾಂಬಳೆ, ಗ್ರಾಮ ಲೆಕ್ಕಾಧಿಕಾರಿ ಮಠಪತಿ ಸೇರಿ ಗೋದಾಮಿನ ಮೇಲೆ ದಾಳಿ ನಡೆಸಿ, ಅಕ್ರಮ ಅಕ್ಕಿಯನ್ನ ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನ ಬಂದಿಸಿದ್ದಾರೆ. ಅಲ್ಲದೇ ರಬಕವಿ ಪಟ್ಟಣದಲ್ಲಿ ನಾಲ್ವರು ಆರೋಪಿಗಳು ಸೇರಿ ಒಂದು ಕಡೆಗೆ ಅಕ್ರಮವಾಗಿ ಅಕ್ಕಿ ಸಂಗ್ರಹಿಸಿದ್ದರು. ದಾಳಿ ನಡೆಸಿದ ಅಧಿಕಾರಿಗಳ ತಂಡ ವೇಳೆ ಒಟ್ಟು 32 ಕ್ವಿಂಟಲ್ 50 ಕೆಜಿ ಅಕ್ಕಿ ಜಪ್ತಿ ಮಾಡಿದೆ. ಅಲ್ಲದೇ ಅಕ್ರಮ ಅಕ್ಕಿ ಸಂಗ್ರಹಣೆಕಾರರಾದ ರಿಯಾಜ್, ಕರೀಂ, ಅಬೂಕರ, ಕಾಶೀಮ್ ಸಾಬ ನಾಲ್ವರ ವಿರುದ್ದ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ. ಅಕ್ರಮವಾಗಿ ಸಂಗ್ರಹಿಸಿದ ಅಕ್ಕಿಯನ್ನು ಈ ಆರೋಪಿಗಳು ಮಹಾರಾಷ್ಟ್ರಕ್ಕೆ ಸರಬರಾಜು ಮಾಡುತ್ತಿದ್ದರು ಎನ್ನಲಾಗುತ್ತಿದೆ.