Tag: Food Delivery Boys

  • ಬೆಂಗಳೂರು| ರೆಸ್ಟೋರೆಂಟ್ ಸಿಬ್ಬಂದಿಯಿಂದ ಫುಡ್ ಡೆಲಿವರಿ ಬಾಯ್ ಮೇಲೆ ಹಲ್ಲೆ ಆರೋಪ

    ಬೆಂಗಳೂರು| ರೆಸ್ಟೋರೆಂಟ್ ಸಿಬ್ಬಂದಿಯಿಂದ ಫುಡ್ ಡೆಲಿವರಿ ಬಾಯ್ ಮೇಲೆ ಹಲ್ಲೆ ಆರೋಪ

    – ಫುಡ್ ತಡವಾಗಿ ಕೊಟ್ಟಿದ್ದನ್ನು ಪ್ರಶ್ನಿಸಿದ್ದಕ್ಕೆ ಥಳಿತ

    ಬೆಂಗಳೂರು: ರೆಸ್ಟೋರೆಂಟ್ ಸಿಬ್ಬಂದಿ ಬಳಿ ಪಾರ್ಸೆಲ್ ಕೊಟ್ಟಿಲ್ಲ ಎಂದು ಪ್ರಶ್ನೆ ಮಾಡಿದ್ದ ಫುಡ್ ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆಸಿರುವ ಆರೋಪವೊಂದು ಕೇಳಿಬಂದಿದೆ. ಘಟನೆ ಹೆಸರಘಟ್ಟ ರಸ್ತೆಯ ಗಬ್ರು ಬ್ರಿಸ್ಟೋ ಆ್ಯಂಡ್ ಕೆಫೆ ರೆಸ್ಟೋರೆಂಟ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ.

    ಡೆಲಿವರಿ ಬಾಯ್‌ಯೊಬ್ಬ ರೆಸ್ಟೋರೆಂಟ್‌ನಿಂದ ಫುಡ್ ಪಡೆದು ಡೆಲಿವರಿ ಮಾಡಬೇಕಿತ್ತು. ಆದರೆ ಅರ್ಧ ಗಂಟೆಯಾದರೂ ರೆಸ್ಟೋರೆಂಟ್ ಸಿಬ್ಬಂದಿ ಪಾರ್ಸೆಲ್ ಕೊಟ್ಟಿರಲಿಲ್ಲ. ಇದನ್ನು ಪ್ರಶ್ನಿಸಿದ್ದ ಡೆಲಿವರಿ ಬಾಯ್‌ಗೆ ರೆಸ್ಟೋರೆಂಟ್ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಹಲ್ಲೆಗೊಳಗಾದ ಡೆಲಿವರಿ ಬಾಯ್ ಯಾರು ಎಂಬ ಮಾಹಿತಿ ತಿಳಿದುಬಂದಿಲ್ಲ. ಹಲ್ಲೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರೋಪಿಗಳನ್ನು ಬಂಧಿಸುವಂತೆ ಸಾರ್ವಜನಿಕರು ಎಕ್ಸ್‌ನಲ್ಲಿ ಪೋಸ್ಟ್ ಹಾಕಿ ಆಗ್ರಹಿಸಿದ್ದಾರೆ.

    ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಫುಡ್‌ ಡೆಲಿವರಿ ಬಾಯ್ಸ್‌ ಸೇರಿದಂತೆ ಎಲ್ಲಾ ಗಿಗ್‌ ಕಾರ್ಮಿಕರಿಗೆ 4 ಲಕ್ಷ ವಿಮೆ ಘೋಷಣೆ

    ಫುಡ್‌ ಡೆಲಿವರಿ ಬಾಯ್ಸ್‌ ಸೇರಿದಂತೆ ಎಲ್ಲಾ ಗಿಗ್‌ ಕಾರ್ಮಿಕರಿಗೆ 4 ಲಕ್ಷ ವಿಮೆ ಘೋಷಣೆ

    ಬೆಂಗಳೂರು: ಸ್ವಿಗ್ಗೀ, ಝೋಮ್ಯಾಟೋ  (Food Delivery Boys) ಸೇರಿದಂತೆ ಎಲ್ಲಾ ಗಿಗ್‌ ಕಾರ್ಮಿಕರಿಗೆ (Gig Worker) 4 ಲಕ್ಷ ರೂ. ವಿಮೆ (Life Insurance) ಘೋಷಣೆ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.

    2 ಲಕ್ಷ ರೂ. ಅಪಘಾತ ವಿಮೆ, 2 ಲಕ್ಷ ರೂ. ಜೀವವಿಮೆ ಸೇರಿದಂತೆ 4 ಲಕ್ಷ ರೂ. ವಿಮೆ ಘೋಷಣೆ ಮಾಡಿ ಕರ್ನಾಟಕ ಸರ್ಕಾರ (Karnataka Government) ಅಧಿಸೂಚನೆ ಹೊರಡಿಸಿದೆ. ಈ ಯೋಜನೆಗೆ ಕರ್ನಾಟಕ ರಾಜ್ಯ ಗಿಗ್‌ ಕಾರ್ಮಿಕರ ವಿಮಾ ಯೋಜನೆಯನ್ನು ರೂಪಿಸಲಾಗಿದೆ.  ಇದನ್ನೂ ಓದಿ: ಬಿ.ಕೆ ಹರಿಪ್ರಸಾದ್ ಈ ರೀತಿ ಮಾತಾಡೋದು ಸರಿಯಲ್ಲ: ದಿನೇಶ್ ಗುಂಡೂರಾವ್

     

    Swiggy, Zomato ಮತ್ತು Amazon ನಂತಹ ಎಲ್ಲಾ ಇ-ಕಾಮರ್ಸ್ ಡೆಲಿವರಿ ಉದ್ಯೋಗಿಗಳಿಗೆ 4 ಲಕ್ಷಗಳ ಜೀವ ಮತ್ತು ಅಪಘಾತ ವಿಮೆಯನ್ನು ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್‌ ಭಾಷಣದಲ್ಲಿ ತಿಳಿಸಿದ್ದರು.

    ಗಿಗ್‌ ಕಾರ್ಮಿಕರು ರಾಜ್ಯ ಸರ್ಕಾರದ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಅರ್ಜಿ ಸಲ್ಲಿಸಿ ಗುರುತಿನ ಚೀಟಿ ಪಡೆಯಬೇಕಾಗುತ್ತದೆ. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 18 ರಿಂದ 60 ವರ್ಷದ ಎಲ್ಲ ಪ್ಲಾಟ್‌ಫಾರಂ ಆಧಾರಿತ ಗಿಗ್‌ ಕಾರ್ಮಿಕರು ಯೋಜನೆಗೆ ಒಳಪಡುತ್ತಾರೆ. ಆದಾಯ ತೆರಿಗೆ ಪಾವತಿದಾರರಾಗಿಬಾರದು. ಇಎಸ್‌ಐ ಮತ್ತು ಇಪಿಎಫ್‌ ಸೌಲಭ್ಯ ಹೊಂದಿರಬಾರದು. ನೋಂದಣಿಗೆ ಅರ್ಜಿ ಸಲ್ಲಿಸುವ ವೇಳೆ ಉದ್ಯೋಗದಾತರಿಂದ ಪಡೆದ ಉದ್ಯೋಗ ಪ್ರಮಾಣ ಪತ್ರ/ಗುರುತಿನ ಚೀಟಿ, ಆಧಾರ ಸಂಖ್ಯೆ, ಇ-ಶ್ರಮ ಗುರುತಿನ ಚೀಟಿ ಸಂಖ್ಯೆ, ಪಾಸ್‌ ಪೋರ್ಚ್‌ ಅಳತೆಯ ಇತ್ತೀಚಿನ ಭಾವಚಿತ್ರ , ವಿಳಾಸ ಪುರಾವೆಗಾಗಿ ಯಾವುದಾದರೂ ದಾಖಲೆ (ಮತದಾರರ ಗುರುತಿನ ಚೀಟಿ, ಚಾಲನ ಪರವಾನಗಿ/ ಆಧಾರ್‌/ ಪಾಸ್‌ ಪೋರ್ಚ್‌/ ಬ್ಯಾಂಕ್‌ ಪಾಸ್‌ ಬುಕ್‌ ಇತ್ಯಾದಿ) ಸಲ್ಲಿಸಬೇಕು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫುಡ್ ಡೆಲಿವರಿ ನೆಪದಲ್ಲಿ ಕಳ್ಳತನ – ಇಬ್ಬರು ಆರೋಪಿಗಳ ಬಂಧನ

    ಫುಡ್ ಡೆಲಿವರಿ ನೆಪದಲ್ಲಿ ಕಳ್ಳತನ – ಇಬ್ಬರು ಆರೋಪಿಗಳ ಬಂಧನ

    ಲಕ್ನೋ: ಮನೆಗಳಿಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ ಇಬ್ಬರು ಸ್ವಿಗ್ಗಿ ಡೆಲಿವರಿ ಬಾಯ್ಸ್‍ನನ್ನು ಪೊಲೀಸರು ಬಂಧಿಸಿರುವ ಘಟನೆ ಮಂಗಳವಾರ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

    ಆರೋಪಿಗಳನ್ನು ಮೊಹಮ್ಮದ್ ಕಫೀಲ್ ಮತ್ತು ರವಿಶಂಕರ್ ಎಂದು ಗುರುತಿಸಲಾಗಿದೆ. ಇವರು ಪಶ್ಚಿಮ ಉತ್ತರ ಪ್ರದೇಶದ ಪಕ್ಕದ ಬುಲಂದರ್‍ಶಹರ್ ಜಿಲ್ಲೆಯ ನೋಯ್ಡಾದ ನಿವಾಸಿಗಳು. ಇಬ್ಬರು ಎರಡು ವರ್ಷದ ಒಪ್ಪಂದದ ಮೇಲೆ ಸ್ವಿಗ್ಗಿ ಡೆಲಿವರಿ ಬಾಯ್ಸ್ ಆಗಿ ಕೆಲಸಕ್ಕೆ ಸೇರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಕುರಿತಂತೆ ಮಾತನಾಡಿದ ನೋಯ್ಡಾದ ಹೆಚ್ಚುವರಿ ಜಿಲ್ಲಾಧಿಕಾರಿ ರಣವಿಜಯ್ ಸಿಂಗ್, ಆರೋಪಿಗಳಿಬ್ಬರು ಗಾಲ್ಫ್ ಕೋರ್ಸ್ ಪ್ರದೇಶದ ಸುತ್ತಮುತ್ತಲಿರುವ ಮನೆಗಳಿಗೆ ಫುಡ್ ಡೆಲಿವರಿ ಮಾಡಲು ಹೋಗುತ್ತಿದ್ದರು. ಈ ವೇಳೆ ಖಾಲಿ ಇರುವ ಮನೆ ಮತ್ತು ಭದ್ರತೆ ಹೊಂದಿರದ ಮನೆಗಳ ಕುರಿತಂತೆ ಮಾಹಿತಿ ಸಂಗ್ರಹಿಸಿಸುತ್ತಿದ್ದರು. ಬಳಿಕ ಅಂತಹ ಮನೆಗಳಿಗೆ ರಾತ್ರಿ ವೇಳೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಮತ್ತು ನಗದು ದರೋಡೆ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

    ಇದೀಗ ಆರೋಪಿಗಳನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಭಾರತೀಯ ದಂಡ ಸಂಹಿತೆಯ ಕೆಲವು ಸೆಕ್ಷನ್‍ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ ಆರೋಪಿಗಳ ಬಳಿ ಇದ್ದ 32 ಇಂಚಿನ ಎಲ್‍ಇಡಿ ಟಿವಿ, ಎರಡು ಟ್ರ್ಯಾಕ್ ಸೂಟ್, ಒಂದು ವಾಚ್, ಮೋಟಾರ್ ಬೈಸಿಕಲ್, ಸ್ವಿಗ್ಗಿ ಬ್ಯಾಗ್ ಮತ್ತು ಕಳ್ಳತನ ಮಾಡಲು ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

  • ಫುಡ್ ಡೆಲೆವರಿ ಬಾಯ್ಸ್ ಕೈಗೆ ಸಿಕ್ಕಿ ಬಿದ್ರು ದರೋಡೆಕೋರರು!

    ಫುಡ್ ಡೆಲೆವರಿ ಬಾಯ್ಸ್ ಕೈಗೆ ಸಿಕ್ಕಿ ಬಿದ್ರು ದರೋಡೆಕೋರರು!

    ಬೆಂಗಳೂರು: ಗ್ರಾಹಕರಂತೆ ಫುಡ್ ಆರ್ಡರ್ ಮಾಡಿ, ದರೋಡೆ ಮಾಡುತ್ತಿದ್ದ ಐದು ಮಂದಿ ಆರೋಪಿಗಳನ್ನು ಫುಡ್ ಡೆಲಿವರಿ ಬಾಯ್ಸ್ ತಂಡವೊಂದು ಗುರುವಾರ ರಾತ್ರಿ ಸೆರೆ ಹಿಡಿದು, ಪೊಲೀಸರಿಗೆ ಒಪ್ಪಿಸಿದ ಘಟನೆ ಶೇಷಾದ್ರಿಪುರಂನಲ್ಲಿ ನಡೆದಿದೆ.

    ಬುಧವಾರ ರಾತ್ರಿ ಊಟ ಬುಕ್ ಮಾಡಿ ಮಲ್ಲೇಶ್ವರಂಗೆ ತಂದುಕೊಡುವಂತೆ ವ್ಯಕ್ತಿಯೊಬ್ಬ ಆರ್ಡರ್ ಮಾಡಿದ್ದ. ರಾಜಾಜಿನಗರದ ಫುಡ್ ಕೋರ್ಟ್ ನಿಂದ ಮುಬಾರಕ್ ಎನ್ನುವವರು ಊಟವನ್ನು ಬೈಕಿನಲ್ಲಿ ತಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಐದು ಜನ ಮುಬಾರಕ್ ಅವರಿಗೆ ಅಡ್ಡಗಟ್ಟಿ, ಚಾಕು ಇರಿದು, ಮೊಬೈಲ್ ಹಾಗೂ ಹಣ ದರೋಡೆ ಮಾಡಿದ್ದರು.

    ಘಟನೆಯಿಂದಾಗಿ ಫುಡ್ ಡೆಲಿವರಿ ಬಾಯ್ಸ್ ಜಾಗೃತಗೊಂಡಿದ್ದು, ಗುರುವಾರ ರಾತ್ರಿಯೂ ಇಂತಹದ್ದೇ ಕರೆ ಬಂದಿತ್ತು. ಹೀಗಾಗಿ ಒಬ್ಬ ಹುಡುಗನನ್ನು ಮುಂದೆ ಕಳುಹಿಸಿ, ಹಿಂದೆ ತಂಡವಾಗಿ ಹುಡುಗರು ಹೋಗಿದ್ದರು. ದಾರಿಯಲ್ಲಿ ಒಬ್ಬಂಟಿಯಾಗಿ ಸಿಕ್ಕಿದ್ದ ಹುಡುಗನಿಂದ ಹಣ, ಮೊಬೈಲ್ ದರೋಡೆ ಮಾಡುತ್ತಿದ್ದಂತೆ, ಎಲ್ಲ ಹುಡುಗರು ದರೋಡೆಕೋರರನ್ನು ಸೆರೆ ಹಿಡಿದು ಶೇಷಾದ್ರಿಪುರಂ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ಕುರಿತು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.