Tag: food delivery boy

  • 2 ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ – ಝೊಮ್ಯಾಟೋ ಡೆಲಿವರಿ ಬಾಯ್ ಸ್ಥಳದಲ್ಲೇ ಸಾವು

    2 ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ – ಝೊಮ್ಯಾಟೋ ಡೆಲಿವರಿ ಬಾಯ್ ಸ್ಥಳದಲ್ಲೇ ಸಾವು

    ಹಾಸನ: 2 ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ, ಝೊಮ್ಯಾಟೋ ಫುಡ್ ಡೆಲಿವರಿ ಬಾಯ್ (Food Delivery Boy) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ (Hassan) ಹೊರವಲಯದ ಬೂವನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 75ರ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

    ಮುತ್ತತ್ತಿ ಗ್ರಾಮದ ಎಸ್.ಬಿ.ಎಂ. ಲೇಔಟ್‌ನ ನಿವಾಸಿ ಶರತ್(40) ಮೃತ ದುರ್ದೈವಿ. ಇದನ್ನೂ ಓದಿ: ಚಿತ್ರದುರ್ಗ | ಬೆಲೆ ಕುಸಿತ – ಕಟಾವು ಮಾಡದೇ ಹೊಲದಲ್ಲೇ ಟೊಮೆಟೊ ಬಿಟ್ಟ ರೈತರು

    ಶರತ್ ಭಾನುವಾರ ರಾತ್ರಿ 11 ಗಂಟೆಯಲ್ಲಿ ಫುಡ್ ಡೆಲಿವರಿ ಮಾಡಲು ಹಾಸನ ನಗರದಿಂದ ಗೆಂಡೆಗಟ್ಟೆಗೆ ತೆರಳುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿಗೆ ತಿರುವು ತೆಗೆದುಕೊಳ್ಳುತ್ತಿದ್ದಾಗ ಬೆಂಗಳೂರು ಕಡೆಯಿಂದ ಬಂದ ಮತ್ತೊಂದು ಬೈಕ್ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಶರತ್ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪತಿಗೆ ಉಗ್ರರ ಸಂಪರ್ಕ ಇದೆ, ನನ್ನ ಮೇಲೆ ವಿಷಪ್ರಾಶನ ಮಾಡಲಾಗಿದೆ: ಓಂ ಪ್ರಕಾಶ್‌ ಪತ್ನಿ

    ಶರತ್ ಹೆಲ್ಮೆಟ್ ಧರಿಸದ ಕಾರಣ ತಲೆಗೆ ಬಲವಾದ ಪೆಟ್ಟಾಗಿದ್ದು, ತೀವ್ರ ರಕ್ತಸ್ರಾವವಾಗಿ ಶರತ್ ಸ್ಥಳದಲ್ಲೇ ಮೃತಪಟ್ಟದ್ದಾರೆ. ಮತ್ತೊಬ್ಬ ಬೈಕ್ ಸವಾರನಿಗೂ ಗಂಭೀರ ಗಾಯಗಳಾಗಿದ್ದು, ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದೆ. ಇದನ್ನೂ ಓದಿ: ಚಿನ್ನದ ಬೆಲೆ ಗಗನಕ್ಕೆ – ಮಾರುಕಟ್ಟೆ ಏರಿಳಿತದ ನಡುವೆಯೂ ನೆಚ್ಚಿನ ಹೂಡಿಕೆಯಾಗಲು ಕಾರಣವೇನು?

    ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ನೀರು ಕುಡಿಯೋ ನೆಪದಲ್ಲಿ ಬಂದು ಎಳೆದಾಡಿದ – ಡೆಲಿವರಿ ಬಾಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ

    ನೀರು ಕುಡಿಯೋ ನೆಪದಲ್ಲಿ ಬಂದು ಎಳೆದಾಡಿದ – ಡೆಲಿವರಿ ಬಾಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ

    ಬೆಂಗಳೂರು: ಫುಡ್ ಡೆಲಿವರಿ ಬಾಯ್‌ (Food Delivery Boy) ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ತಡವಾಗಿ ಬೆಳಕಿಗೆ ಬಂದಿದ್ದು, ಇಲ್ಲಿನ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಡೆಲಿವರಿ ಬಾಯ್ ಬಿ.ಆಕಾಶ್ ವಿರುದ್ಧ ದೂರು ದಾಖಲಾಗಿದೆ.

    ನಡೆದಿದ್ದೇನು?
    ಕಳೆದ ಮಾರ್ಚ್ 17ರಂದು (ಭಾನುವಾರ) ಸಂಜೆ 6:30ರ ವೇಳೆಗೆ ಹೆಚ್‌ಎಎಲ್ ಪೊಲೀಸ್ ಠಾಣಾ (HAL Police Station) ವ್ಯಾಪ್ತಿಯ ಮನೆಯೊಂದಕ್ಕೆ ಫುಡ್ ಡೆಲಿವರಿ ನೀಡಲು ಹೋಗಿದ್ದ. ಫುಡ್ ನೀಡಿದ ಬಳಿಕ ವಾಶ್‌ ರೂಂ ಉಪಯೋಗಿಸಲು ಮನವಿ ಮಾಡಿ, ಮನೆಯೊಳಕ್ಕೆ ಎಂಟ್ರಿಕೊಟ್ಟಿದ್ದಾನೆ. ಇದನ್ನೂ ಓದಿ: ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಟ್ವಿಸ್ಟ್ – ಲವ್ ಜಿಹಾದ್‌ಗೆ ಮುಂದಾಗಿದ್ದ, ಮತಾಂತರಕ್ಕೆ ಯತ್ನಿಸಿದ್ದನಂತೆ ಯುವಕ

    ಬಳಿಕ ಯುವತಿಗೆ ಕುಡಿಯಲು ನೀರು ಕೊಡುವಂತೆ ಕೇಳಿದ್ದಾನೆ. ಆಕೆ ನೀರು ತರಲು ಒಳಗೆ ಹೋದಾಗ ತಾನೂ ಹಿಂಬಾಲಿಸಿ ಹೋಗಿದ್ದಾನೆ. ನಂತರ ಯುವತಿಯ ಕೈ ಹಿಡಿದು ಎಳೆದಾಡಿದ್ದಾನೆ, ಅನುಚಿತವಾಗಿ ವರ್ತಿಸಿದ್ದಾನೆ.

    ಘಟನೆ ಸಂಬಂಧ ಯುವತಿ ಹೆಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಯುವತಿ ನೀಡಿದ ದೂರಿನ ಅನ್ವಯ ಪೊಲೀಸರು ಐಪಿಸಿ ಸೆಕ್ಷನ್ 354-ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಬಚ್ಚೇಗೌಡ ರಾಜೀನಾಮೆ

  • ಕೆಎಸ್‌ಆರ್‌ಟಿಸಿ ಬಸ್‌ಗೆ ಫುಡ್‌ ಡೆಲಿವರಿ ಬಾಯ್‌ ಬಲಿ

    ಕೆಎಸ್‌ಆರ್‌ಟಿಸಿ ಬಸ್‌ಗೆ ಫುಡ್‌ ಡೆಲಿವರಿ ಬಾಯ್‌ ಬಲಿ

    ಬೆಂಗಳೂರು: ಕೆಎಸ್‌ಆರ್‌ಟಿಸಿ (KSRTC) ಬಸ್‌ ಚಾಲಕನ ನಿರ್ಲಕ್ಷ್ಯ ಹಾಗೂ ಅತಿ ವೇಗದ ಬಸ್‌ ಚಾಲನೆಗೆ ಫುಡ್‌ ಡೆಲಿವರಿ ಬಾಯ್‌ ಬಲಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಬಸವಾರಾಜು ಮೃತ ಫುಡ್ ಡೆಲಿವರಿ ಬಾಯ್. ತಡರಾತ್ರಿ 2 ಗಂಟೆ ವೇಳೆ ಸ್ಯಾಟಲೈಟ್ ಬಸ್ ನಿಲ್ದಾಣದ ಮುಂಭಾಗ ಈ ಅಪಘಾತ ಸಂಭವಿಸಿದೆ. ಫುಡ್‌ ಡೆಲಿವರಿ ಬಾಯ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಪ್ರೇಯಸಿಯ ಬದಲು ಎಕ್ಸಾಂ ಬರೆಯಲು ಹೆಣ್ಣಿನಂತೆ ವೇಷ ತೊಟ್ಟು ಪೊಲೀಸರ ಅತಿಥಿಯಾದ!

    ಮೈಸೂರು ರೋಡ್‌ ಕಡೆಗೆ ರಾತ್ರಿ ಫುಡ್ ಡೆಲಿವರಿ ಮಾಡಲು ಬಸವರಾಜು ತೆರಳುತ್ತಿದ್ದ. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿಯಾದ ರಭಸಕ್ಕೆ ಸ್ಥಳದಲ್ಲೇ ಬಸವರಾಜು ಮೃತಪಟ್ಟಿದ್ದಾನೆ.

    ಸ್ಥಳಕ್ಕೆ ಬ್ಯಾಟರಾಯನಪುರ ಸಂಚಾರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಚಾಲಕನನ್ನ ವಶಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಓವರ್ ಟೇಕ್ ಭರದಲ್ಲಿ ಅಪಘಾತ- ಒಂದೇ ಕುಟುಂಬದ ನಾಲ್ವರ ದುರ್ಮರಣ

  • ಫುಡ್ ಡೆಲಿವರಿ ಬಾಯ್ ಜೊತೆ ರಾಹುಲ್ ಗಾಂಧಿ ಬೈಕ್‍ ರೈಡ್‌

    ಫುಡ್ ಡೆಲಿವರಿ ಬಾಯ್ ಜೊತೆ ರಾಹುಲ್ ಗಾಂಧಿ ಬೈಕ್‍ ರೈಡ್‌

    ಬೆಂಗಳೂರು: ಸೆಕ್ಯುರಿಟಿ ಬಿಟ್ಟು ಫುಡ್ ಡೆಲಿವರಿ ಬಾಯ್ ಜೊತೆ ಕಾಂಗ್ರೆಸ್ (Congress) ಮುಖಂಡ ರಾಹುಲ್ ಗಾಂಧಿ (Rahul Gandhi) ಬೈಕ್‍ನಲ್ಲಿ (Bike) ಸಂಚರಿಸಿದರು.

    ರಾಜ್ಯ ವಿಧಾನಸಭೆ ಚುನಾವಣೆಗೆ 3 ದಿನಗಳು ಬಾಕಿಯಿದೆ. ನಾಳೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ವಿವಿಧ ರಾಷ್ಟ್ರೀಯ ನಾಯಕರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇದೀಗ ರಾಹುಲ್ ಗಾಂಧಿ ಅವರು ಫುಡ್ ಡೆಲಿವರಿ ಬಾಯ್ ಜೊತೆ ದ್ವಿಚಕ್ರ ವಾಹನದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಸಂಚಾರಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಹೌದು ದ್ವಿಚಕ್ರ ವಾಹನದಲ್ಲಿ ಡೆಲಿವರಿ ಬಾಯ್ ಜೊತೆ ಬೆಂಗಳೂರಿನಲ್ಲಿ ಸುತ್ತಾಟ ನಡೆಸಿದ್ದು, ಏರ್‌ಲೈನ್ಸ್ ಹೋಟೆಲ್ ಅಲ್ಲಿ ರಾಹುಲ್ ಗಾಂಧಿ ತಿಂಡಿ ಸವಿದರು. ಫುಡ್ ಡೆಲಿವರಿ ಬಾಯ್ ಜೊತೆ ಏರ್‌ಲೈನ್ಸ್ ಹೋಟೆಲ್, ಚಿನ್ನಸ್ವಾಮಿ, ರಾಜಭವನ ರಸ್ತೆಯಲ್ಲಿ ಸಂಚಾರ ನಡೆಸಿದರು. ಇದನ್ನೂ ಓದಿ: ರೇಟ್ ಕಾರ್ಡ್ ಕೊಟ್ಟಿದ್ದು ಬಿಜೆಪಿಯವರು, ನಾವು ಪ್ರಿಂಟ್‌ ಮಾಡಿದ್ದೇವೆ: ಡಿಕೆಶಿ

    ದ್ವಿಚಕ್ರ ವಾಹನದಲ್ಲಿ ಬೆಂಗಳೂರಿನ ಎಸ್‍ಸಿಜೆ ಆಸ್ಪತ್ರೆಯಲ್ಲಿ ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮಾನ್ ಚಾಂಡಿ ಅವರನ್ನು ರಾಹುಲ್ ಗಾಂಧಿ ಭೇಟಿ ಮಾಡಿದರು. ಅನಾರೋಗ್ಯದಿಂದ ಬಳಲುತ್ತಿರುವ ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮಾನ್ ಚಾಂಡಿ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ, ಉಮ್ಮಾನ್ ಚಾಂಡಿ ಅವರ ಆರೋಗ್ಯ ವಿಚಾರಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಚನ್ನಬಸಪ್ಪ ಹುಲ್ಲತ್ತಿ ಮನೆ ಮೇಲೆ IT ರೇಡ್ – ಕೋಟಿ ಕೋಟಿ ಹಣ ಸೀಜ್

  • ಕಾಲಿನಲ್ಲಿ ಬಲವಿಲ್ಲದಿದ್ದರೂ ಮಂಗಳೂರಿನ ಯಶಸ್ವಿ ಫುಡ್ ಡೆಲಿವರಿ ಬಾಯ್!

    ಕಾಲಿನಲ್ಲಿ ಬಲವಿಲ್ಲದಿದ್ದರೂ ಮಂಗಳೂರಿನ ಯಶಸ್ವಿ ಫುಡ್ ಡೆಲಿವರಿ ಬಾಯ್!

    ಮಂಗಳೂರು: ಕಾಲಿನಲ್ಲಿ ಬಲವಿಲ್ಲದ ಅಂಗವಿಕಲರೊಬ್ಬರು ಯಶಸ್ವಿ ಫುಡ್ ಡೆಲಿವರಿ ಬಾಯ್ (Food Delivery Boy)  ಆಗಿ ಕಾರ್ಯನಿರ್ವಹಿಸುತ್ತಾ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.

    ಅಂಗಾಂಗ ಸರಿ ಇದ್ದವರನ್ನೂ ಮೀರಿಸುವಂತೆ ದುಡಿದು ಸಾಧನೆ ಮಾಡುತ್ತಿರುವ ಇವರ ಹೆಸರು ಪರಶುರಾಮ (Parashurama). ಇವರ ಹೆತ್ತವರು ಮೂಲತಃ ಬಿಜಾಪುರದವರಾಗಿದ್ದು (Vijayapura) , ಕಳೆದ 30 ವರ್ಷಗಳಿಂದ ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಸ್ಕೀಮ್ ಒಂದರಲ್ಲಿ ದೊರೆತ ದ್ವಿಚಕ್ರ ವಾಹನ ಇವರ ಸ್ವಾವಲಂಬಿ ಬದುಕಿಗೆ ಸಾಥ್ ನೀಡಿತು. ಬಳಿಕ ಪರಶುರಾಮ ಸ್ವಿಗ್ಗಿ (Swiggy) ಡೆಲಿವರಿ ಬಾಯ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಇದೀಗ ಯಶಸ್ವಿ ಫಡ್ ಡೆಲಿವರಿ ಬಾಯ್ ಆಗಿ ಸಮಾಜಕ್ಕೆ ಹಾಗೂ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಇದನ್ನೂ ಓದಿ: ಮರಿಯಪ್ಪನ ಪಾಳ್ಯದಲ್ಲಿ ಸಿಲಿಂಡರ್ ದುರಂತ- 13 ಜನರಿಗೆ ಗಾಯ

    ಹುಟ್ಟಿದ ಒಂದು ವರ್ಷದವರೆಗೆ ಸರಿಯಾಗಿಯೇ ಇದ್ದ ಪರಶುರಾಮ ಜ್ವರಕ್ಕೆ ತುತ್ತಾದರು. ಇದಕ್ಕೆ ವೈದ್ಯರೊಬ್ಬರು ನೀಡಿದ ಇಂಜೆಕ್ಷನ್‌ನಿಂದಾಗಿ ಇವರ ಒಂದು ಕಾಲು ಸಂಪೂರ್ಣ ಸ್ವಾಧೀನ ಕಳೆದುಕೊಂಡಿತು. ಮತ್ತೊಂದು ಕಾಲಿನಲ್ಲಿ ಸ್ವಲ್ಪ ಬಲವಿದ್ದರೂ ಜೀವನ ಪರ್ಯಂತ ಅಂಗವೈಕಲ್ಯಕ್ಕೆ (Disability) ತುತ್ತಾದರು. 9ನೇ ತರಗತಿಯವರೆಗೆ ಶಿಕ್ಷಣ ಪಡೆದ ಇವರು ಮನೆಯಲ್ಲಿ ಕಡು ಬಡತನವಿದ್ದರಿಂದ ಭಿಕ್ಷಾಟನೆಗೆ (Begging) ಇಳಿದಿದ್ದರು. ನಂತರ ಭಿಕ್ಷೆ ಬೇಡುವ ಕಾಯಕ ಇವರಿಗೆ ಹಿಂಸೆಯೆನಿಸಿ ಒಬ್ಬರ ಮನೆಯಲ್ಲಿ ಸೆಕ್ಯೂರಿಟಿ ಗಾರ್ಡ್ (Security Guard) ಆಗಿ ದುಡಿಯಲಾರಂಭಿಸಿದ್ದರು. ಬಳಿಕ ದೈಹಿಕ ನ್ಯೂನ್ಯತೆಗೆ ಸೆಡ್ಡು ಹೊಡೆದು ಭಿಕ್ಷಾಟನೆ ಬಿಟ್ಟು ಪ್ರಸ್ತುತ ಫುಡ್ ಡೆಲಿವರಿ ಬಾಯ್ ಆಗಿದ್ದಾರೆ. ಇದನ್ನೂ ಓದಿ: ನಟ ಶಾರುಖ್ ಮನೆಗೆ ನುಗ್ಗಿದ ಫ್ಯಾನ್ಸ್ ವಿರುದ್ಧ ದಾಖಾಲಾಯ್ತು ಕೇಸ್

    ಕಷ್ಟವನ್ನು ಎದುರಿಸುವ ಛಲವೊಂದಿದ್ದರೆ ಎಂತಹ ಬರಸಿಡಿಲು ಎದುರಾದರೂ ಅದನ್ನು ಜಯಿಸಬಹುದು ಎನ್ನುವುದಕ್ಕೆ ಮಂಗಳೂರಿನ (Mangaluru) ಪರಶುರಾಮ ಉತ್ತಮ ಉದಾಹರಣೆ. ಕೈಕಾಲು ಸರಿ ಇದ್ದೂ ಭಿಕ್ಷಾಟನೆ ಮಾಡುವವರು ಇವರನ್ನು ನೋಡಿ ಕಲಿತುಕೊಳ್ಳಬೇಕು ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇದನ್ನೂ ಓದಿ: ನನ್ನ ಕ್ರೀಡಾ ಜೀವನದ ಆರಂಭ ಸುಖಕರವಾಗಿರಲಿಲ್ಲ- ಬೆಳ್ಳಿ ಗೆದ್ದ ಸಹಾನಿ

  • ನಾಯಿಯ ಮೇಲೆ ಅತ್ಯಾಚಾರ – ಫುಡ್ ಡೆಲಿವರಿ ಬಾಯ್ ಅರೆಸ್ಟ್

    ನಾಯಿಯ ಮೇಲೆ ಅತ್ಯಾಚಾರ – ಫುಡ್ ಡೆಲಿವರಿ ಬಾಯ್ ಅರೆಸ್ಟ್

    ಮುಂಬೈ: ಇತ್ತೀಚೆಗೆ ದುರುಳರು ಮೂಕ ಪ್ರಾಣಿಗಳ ಮೇಲೆಯೂ ದಯೆ ತೋರದೆ ಅತ್ಯಾಚಾರ (Rape) ಎಸಗುವ ಪ್ರಕರಣಗಳು ಆಗಾಗ ಕೇಳಿಸುತ್ತಲೇ ಇದೆ. ಇಂತಹುದೇ ಮತ್ತೊಂದು ಘಟನೆ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ. ನಾಯಿಯೊಂದಿಗೆ (Dog) ಲೈಂಗಿಕ ಕ್ರಿಯೆ ನಡೆಸಿರುವ ಆರೋಪದ ಮೇಲೆ ಪೊಲೀಸರು ಫುಡ್ ಡೆಲಿವರಿ ಬಾಯ್ (Food Delivery Boy) ಒಬ್ಬನನ್ನು ಬಂಧಿಸಿದ್ದಾರೆ.

    ಘಟನೆಯ ಬಗ್ಗೆ ಪ್ರಾಣಿ ಕಾರ್ಯಕರ್ತೆ, ಹಾಗೂ ಎನ್‌ಜಿಒ ಬಾಂಬೆ ಅನಿಮಲ್ ರೈಟ್ಸ್‌ನ ಸದಸ್ಯೆ ಮಿನು ಶೇಠ್ ಪೊಲೀಸರಿಗೆ ದೂರು ನೀಡಿದ್ದಾರೆ.

     

    ಮೂಲಗಳ ಪ್ರಕಾರ, ಶೇಠ್ ಪ್ರತಿ ದಿನ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದರು. ಅಕ್ಟೋಬರ್ 29ರಂದು ಬಾಂಬೆ ಅನಿಮಲ್ ರೈಟ್ಸ್ ಅಧ್ಯಕ್ಷೆ ವಿಜತ್ ಮೊಹಾನಿ ಅವರು ಶೇಠ್‌ಗೆ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಹೀರಾ ಪನ್ನಾ ಮಾಲ್‌ನ 2ನೇ ಮಹಡಿಯ ಬಾಲ್ಕನಿಯಲ್ಲಿ ವ್ಯಕ್ತಿಯೊಬ್ಬ 6 ತಿಂಗಳ ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು ಕಂಡುಬಂದಿದೆ. ಈ ವೀಡಿಯೋ ಸಾಕ್ಷಿಯ ಆಧಾರದ ಮೇಲೆ ಪೊಲೀಸರಿಗೆ ದೂರು ನೀಡುವಂತೆ ಮೊಹಾನಿ ಅವರು ಶೇಠ್‌ಗೆ ಸೂಚಿಸಿದ್ದಾರೆ. ಇದನ್ನೂ ಓದಿ:  ಎಮ್ಮೆ ಕರುವಿನ ಮೇಲೆ ರೇಪ್ ಮಾಡಿದ್ದ ವ್ಯಕ್ತಿ ಅರೆಸ್ಟ್

    ವರದಿಗಳ ಪ್ರಕಾರ ಆರೋಪಿ ಮಾಲ್‌ನಲ್ಲಿದ್ದ ರೆಸ್ಟೊರೆಂಟ್‌ನ ಸಿಬ್ಬಂದಿಯಾಗಿದ್ದು, ಹಲವು ದಿನಗಳಿಂದ ನಾಯಿಯ ಮೇಲೆ ಅತ್ಯಾಚಾರ ನಡೆಸಿದ್ದ. ಆತನ ಕೃತ್ಯವನ್ನು ಕಂಡಿದ್ದ ಇನ್ನೊಬ್ಬ ಡೆಲಿವರಿ ಬಾಯ್ ಅದರ ವೀಡಿಯೋವನ್ನು ಮಾಡಿ, ತನ್ನ ಸಹೋದ್ಯೋಗಿಗಳಿಗೆ ಹಾಗೂ ಅಪರಿಚಿತ ವ್ಯಕ್ತಿಗಳಿಗೆ ಕಳುಹಿಸಿದ್ದ. ಇದರಿಂದ ವೀಡಿಯೋ ವಿಜಯ್ ಮೊಹಾನಿ ಅವರನ್ನು ತಲುಪಿದೆ.

    dog

    ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಮೊಹಾನಿ, ಇದು ಪೊವೈ ಪ್ರದೇಶದಲ್ಲಿ ನಡೆದ 2ನೇ ಘಟನೆ. ಕಳೆದ ವರ್ಷ ಇದೇ ಸ್ಥಳದಲ್ಲಿ ನೂರಿ ಎಂಬ ನಾಯಿಯ ಮೇಲೆ ಒಬ್ಬ ವ್ಯಕ್ತಿ ಅತ್ಯಾಚಾರ ಮಾಡಿದ್ದ. ಮಾತ್ರವಲ್ಲದೇ ನಾಯಿಯ ಖಾಸಗಿ ಭಾಗಕ್ಕೆ ಕೋಲನ್ನು ತುರುಕಿಸಿದ್ದ ಎಂದು ತಿಳಿಸಿದರು.

    ಇದೀಗ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. ಐಸಿಪಿ ಐಪಿಸಿ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧಗಳು) ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟುವ ಕಾಯ್ದೆ, 1960ರ ಅಡಿಯಲ್ಲಿ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಆನ್‍ಲೈನ್‍ನಲ್ಲಿ ಬಿಯರ್ ಆರ್ಡರ್ ಮಾಡಲು ಹೋಗಿ 45,000 ರೂ. ಕಳ್ಕೊಂಡ

    Live Tv
    [brid partner=56869869 player=32851 video=960834 autoplay=true]

  • ಕುದುರೆ ಏರಿ ಫುಡ್ ಡೆಲಿವರಿ ಮಾಡಿದ ವ್ಯಕ್ತಿ ಪತ್ತೆ- ಆದರೆ ಈತ ಸ್ವಿಗ್ಗಿ ಉದ್ಯೋಗಿಯಲ್ಲ!

    ಕುದುರೆ ಏರಿ ಫುಡ್ ಡೆಲಿವರಿ ಮಾಡಿದ ವ್ಯಕ್ತಿ ಪತ್ತೆ- ಆದರೆ ಈತ ಸ್ವಿಗ್ಗಿ ಉದ್ಯೋಗಿಯಲ್ಲ!

    ಮುಂಬೈ: ಇತ್ತೀಚೆಗಷ್ಟೇ ಕುದುರೆ ಸವಾರಿ ಮಾಡಿ ಫುಡ್ ಡೆಲವರಿ ಮಾಡಿದ್ದ ವ್ಯಕ್ತಿಯೊಬ್ಬ ಭಾರೀ ವೈರಲ್ ಆಗಿದ್ದ. ಈ ಹಿನ್ನೆಲೆಯಲ್ಲಿ ಸ್ವಿಗ್ಗಿ ಕಂಪನಿಯು ಫುಡ್ ಡೆಲಿವರಿ ಮಾಡಿದವನ ಸುಳಿವು ನೀಡಿದವರಿಗೆ ಬಹುಮಾನ ಘೋಷಿಸಿತ್ತು. ಇದೀಗ ಈ ವ್ಯಕ್ತಿ ಯಾರೆಂದು ಪತ್ತೆ ಆಗಿದ್ದಾನೆ.

    ಈ ಬಗ್ಗೆ ಸ್ವಿಗ್ಗಿ ಟ್ವೀಟ್ ಮಾಡಿದ್ದು, ಕುದುರೆ ಹಾಗೂ ಯುವಕರಿಬ್ಬರು ಪತ್ತೆ ಆಗಿದ್ದಾರೆ ಎನ್ನುವ ಮೂಲಕ ಸ್ಪಷ್ಟೀಕರಣ ನೀಡಿದೆ. ಕುದುರೆಯಲ್ಲಿದ್ದ ಯುವಕನ ಹೆಸರು ಸುಶಾಂತ್(17). ಆದರೆ ಈತ ಸ್ವಿಗ್ಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿಲ್ಲ. ಈತನಿಗೆ ವಿಚಿತ್ರ ಕಾಯಿಲೆಯೊಂದಿದೆ. ಯಾವುದಾದರೂ ವಸ್ತುವನ್ನು ತೆಗೆದುಕೊಂಡರೆ ಅದನ್ನು ವಾಪಸ್ ಕೊಡುವುದನ್ನು ಮರೆತು ಬಿಡುತ್ತಾನೆ. ಇದೇ ರೀತಿಯೇ ಸ್ವಿಗ್ಗಿ ಬ್ಯಾಗ್‍ನ್ನು ತೆಗೆದುಕೊಂಡಿದ್ದ. ಆದರೆ ಇದೇ ರೀತಿ ಮರೆತಿದ್ದಾನೆ.

    ಪ್ರಸ್ತುತ ಸುಶಾಂತ್ ಮದುವೆ ಕಾರ್ಯಕ್ರಮಗಳಿಗೆ ಕುದುರೆಯನ್ನು ಕಳುಹಿಸುವ ಏರ್ಪಾಟು ಮಾಡುವವನಾಗಿದ್ದಾನೆ. ಹಾಗೆಯೇ ಆ ಸ್ವಿಗ್ಗಿ ಬ್ಯಾಗ್‍ನಲ್ಲಿ ತಿಂಡಿಯ ಬದಲಿಗೆ ಮದುವೆ ಮೆರವಣಿಗೆಗಳಲ್ಲಿ ಕುದುರೆಗಳ ಮೇಲೆ ಹಾಕುವ ಕಸೂತಿ ಬಟ್ಟೆ ಹಾಗೂ ಪರಿಕರಗಳನ್ನು ಇಟ್ಟುಕೊಂಡು ಹೋಗುತ್ತಿದ್ದ ಎಂದು ಕಂಪನಿ ತಿಳಿಸಿದೆ. ಜೊತೆಗೆ ವೀಡಿಯೋವನ್ನು ಚಿತ್ರೀಕರಿಸಿದ ಅವಿ ಹಾಗೂ ಆತನ ಸ್ನೇಹಿತರಿಗೆ ಬಹುಮಾನವನ್ನು ನೀಡಿದೆ. ಇದನ್ನೂ ಓದಿ: ಕಾರು ಹೊಳೆಗೆ ಬಿದ್ದ ಪ್ರಕರಣ- ನಾಪತ್ತೆಯಾಗಿದ್ದ ಇಬ್ಬರ ಮೃತದೇಹವೂ ಪತ್ತೆ

    ಇತ್ತೀಚೆಗಷ್ಟೇ ಸ್ವಿಗ್ಗಿ ಕಂಪನಿಯ ಬ್ಯಾಗ್ ಹಾಕಿಕೊಂಡು ಕುದುರೆ ಸವಾರಿ ಮಾಡಿ ಫುಡ್ ಡೆಲಿವರಿ ಮಾಡಿದವನ ಸುಳಿವು ಕೊಟ್ಟವರಿಗೆ 5,000 ರೂ. ಬಹುಮಾನ ನೀಡಲಾಗುವುದು ಎಂದು ಸ್ವಿಗ್ಗಿ ಕಂಪನಿ ಘೋಷಿಸಿತ್ತು. ಮುಂಬೈನಲ್ಲಿ ಮಳೆಯ ನಡುವೆಯೂ ಆಹಾರವನ್ನು ತಲುಪಿಸಲು ಕುದುರೆಯ ಮೇಲೆ ಸವಾರಿ ಮಾಡುತ್ತಿರುವ ಡೆಲಿವರಿ ಬಾಯ್ ಗುರುತಿಸಲು ಸಹಾಯ ಮಾಡುವಂತೆ ಸಾರ್ವಜನಿಕರಲ್ಲಿ ಕಂಪನಿ ಮನವಿ ಮಾಡಿತ್ತು. ವೈರಲ್ ಆಗಿರುವ ವೀಡಿಯೋದಲ್ಲಿ ಆತನನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ಕಂಪನಿ ಹೇಳಿತ್ತು. ಇದನ್ನೂ ಓದಿ: ಕುದುರೆ ಸವಾರಿ ಮಾಡಿ ಫುಡ್‌ ಡೆಲಿವರಿ ಮಾಡಿದ ವ್ಯಕ್ತಿ – ಉದ್ಯೋಗಿ ಸುಳಿವು ಕೊಟ್ಟರೆ ಬಹುಮಾನ ನೀಡ್ತೀವಿ ಎಂದ ಕಂಪನಿ

    Live Tv
    [brid partner=56869869 player=32851 video=960834 autoplay=true]

  • ಕುದುರೆ ಸವಾರಿ ಮಾಡಿ ಫುಡ್‌ ಡೆಲಿವರಿ ಮಾಡಿದ ವ್ಯಕ್ತಿ – ಉದ್ಯೋಗಿ ಸುಳಿವು ಕೊಟ್ಟರೆ ಬಹುಮಾನ ನೀಡ್ತೀವಿ ಎಂದ ಕಂಪನಿ

    ಕುದುರೆ ಸವಾರಿ ಮಾಡಿ ಫುಡ್‌ ಡೆಲಿವರಿ ಮಾಡಿದ ವ್ಯಕ್ತಿ – ಉದ್ಯೋಗಿ ಸುಳಿವು ಕೊಟ್ಟರೆ ಬಹುಮಾನ ನೀಡ್ತೀವಿ ಎಂದ ಕಂಪನಿ

    ಮುಂಬೈ: ಸಾಮಾನ್ಯವಾಗಿ ಬೈಕ್‌ಗಳಲ್ಲಿ ಸಂಚರಿಸಿ ಫುಡ್‌ ಡೆಲಿವರಿ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಕುದುರೆ ಸವಾರಿ ಮಾಡಿ ಫುಡ್‌ ಡೆಲಿವರಿ ಮಾಡಿದ್ದಾನೆ. ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ವೈರಲ್‌ ಆಗಿದ್ದು, ಇದಕ್ಕೆ ಕಂಪನಿ ಅಚ್ಚರಿ ವ್ಯಕ್ತಪಡಿಸಿದೆ.

    ಡೆಲಿವರಿ ಬಾಯ್‌ ಸುಳಿವು ಕೊಟ್ಟವರಿಗೆ ಬಹುಮಾನ
    ಸ್ವಿಗ್ಗಿ ಕಂಪನಿಯ ಬ್ಯಾಗ್‌ ಹಾಕಿಕೊಂಡು ಕುದುರೆ ಸವಾರಿ ಮಾಡಿ ಫುಡ್‌ ಡೆಲಿವರಿ ಮಾಡಿದವನ ಸುಳಿವು ಕೊಟ್ಟವರಿಗೆ 5,000 ರೂ. ಬಹುಮಾನ ನೀಡಲಾಗುವುದು ಎಂದು ಸ್ವಿಗ್ಗಿ ಕಂಪನಿ ಘೋಷಿಸಿದೆ. ಇದನ್ನೂ ಓದಿ: ಗುಂಡು ಹಾರಿಸಿ ಮುಸ್ಲಿಂ ಆಧ್ಯಾತ್ಮಿಕ ನಾಯಕ ಸೂಫಿ ಬಾಬಾನ ಹತ್ಯೆ

    ಮುಂಬೈನಲ್ಲಿ ಮಳೆಯ ನಡುವೆಯೂ ಆಹಾರವನ್ನು ತಲುಪಿಸಲು ಕುದುರೆಯ ಮೇಲೆ ಸವಾರಿ ಮಾಡುತ್ತಿರುವ ಡೆಲಿವರಿ ಬಾಯ್‌ ಗುರುತಿಸಲು ಸಹಾಯ ಮಾಡುವಂತೆ ಸಾರ್ವಜನಿಕರಲ್ಲಿ ಕಂಪನಿ ಮನವಿ ಮಾಡಿದೆ. ಈಗ ವೈರಲ್ ಆಗಿರುವ ವೀಡಿಯೋದಲ್ಲಿ ಆತನನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ಕಂಪನಿ ಹೇಳಿದೆ.

    ಮುಂಬೈ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಸ್ವಿಗ್ಗಿ ಕಂಪನಿಯ ಬ್ಯಾಗ್‌ ಹಾಕಿಕೊಂಡು ಕುದುರೆ ಸವಾರಿ ಮಾಡಿ ಆರ್ಡರ್‌ ತಲುಪಿಸುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಂಪನಿ, ಆತನ ಬಗ್ಗೆ ನಮಗೆ ಸರಿಯಾದ ಮಾಹಿತಿ ಇಲ್ಲ. ಮಾಹಿತಿ ಸಿಕ್ಕರೆ ತಿಳಿಸಿ. ಅಂತಹವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಸ್ವಿಗ್ಗಿ ತಿಳಿಸಿದೆ. ಇದನ್ನೂ ಓದಿ: ಡೋಲೋ 650 ಮಾತ್ರೆ ತಯಾರಿಕಾ ಸಂಸ್ಥೆ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ದಾಳಿ

    ಸ್ವಿಗ್ಗಿ ಕಂಪನಿ ಪೋಸ್ಟ್‌ಗೆ ಅನೇಕರು ನಾನಾ ರೀತಿಯಲ್ಲಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ʻನೀವು ಯಾರನ್ನೋ ಹುಡುಕುತ್ತಿದ್ದೀರಿ ಎನಿಸುತ್ತೆʼ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಈ ವೈರಲ್‌ ವೀಡಿಯೋ ಬಗ್ಗೆ ನೀವೇನು ಹೇಳುತ್ತೀರಿʼ ಎಂದು ಮತ್ತೊಬ್ಬರು ಕಂಪನಿಗೆ ಪ್ರಶ್ನೆ ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 50 ರೂಪಾಯಿಗಾಗಿ ಸ್ನೇಹಿತನನ್ನೇ ಕೊಲೆಗೈದ

    50 ರೂಪಾಯಿಗಾಗಿ ಸ್ನೇಹಿತನನ್ನೇ ಕೊಲೆಗೈದ

    ಬೆಂಗಳೂರು: ಕೇವಲ 50 ರೂ.ಗಾಗಿ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರು ನಗರದ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುರಬರಹಳ್ಳಿ ಸರ್ಕಲ್ ಬಳಿ ನಡೆದಿದೆ.

    ಯುವಕ ಶಿವಮಾಧು(24)ನನ್ನು ಆತನ ಸ್ನೇಹಿತ ಶಾಂತಕುಮಾರ್ ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಕೊಲೆಯಾದ ಶಿವಮಾಧು ಹಾಗೂ ಆರೋಪಿ ಶಾಂತಕುಮಾರ್ ಇಬ್ಬರೂ ಸ್ನೇಹಿತರು. ಚಿಕ್ಕಂದಿನಿಂದ ಆಡಿ ಬೆಳೆದವರು. ಕುರಬರಹಳ್ಳಿ ಸರ್ಕಲ್ ಬಳಿ ಹುಟ್ಟಿ ಬೆಳೆದವರು ಕೆಲ ವರ್ಷಗಳ ಹಿಂದೆ ಲಗ್ಗೆರೆ ಬ್ರಿಡ್ಜ್ ಬಳಿ ಶಿಫ್ಟ್ ಆಗಿದ್ದರು. ಆದರೂ ಹಳೆ ಅಡ್ಡ ಎಂದು ಆಗಾಗ ಕುರುಬರಹಳ್ಳಿ ಕಡೆ ಬರುತ್ತಿದ್ದರು. ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಬಿತ್ತು ಎರಡು ಹೆಣ – ಪ್ರೇಯಸಿ ಮಣ್ಣಲ್ಲಿ, ಪ್ರಿಯಕರ ಮರದ ಕೊಂಬೆಯಲ್ಲಿ

    ಆರೋಪಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರೆ, ಮೃತ ಶಿವಮಾಧು ಆಟೋ ಡ್ರೈವರ್ ಆಗಿದ್ದ. ಎಂದಿನಂತೆ ಕುರಬರಹಳ್ಳಿ ಸರ್ಕಲ್ ಕಡೆ ಬಂದಿದ್ದ ಶಿವಮಾಧು, ಶಾಂತಕುಮಾರ್ ಮತ್ತು ಸ್ನೇಹಿತರು ಹತ್ತಿರದಲ್ಲೇ ಇದ್ದ ಗ್ರೌಂಡ್‌ಗೆ ಕ್ರಿಕೆಟ್ ಆಡಲು ಹೋಗಿದ್ದರು. ಕ್ರಿಕೆಟ್ ಆಡಿ ಬಂದವರೇ ಏನೋ ಕೆಲಸಕ್ಕೆ ರಾತ್ರಿ 8:30ರ ಸುಮಾರಿಗೆ ಸರ್ಕಲ್ ಬಳಿ ಇರುವ ಸೈಬರ್ ಸೆಂಟರ್‌ಗೂ ಹೋಗಿದ್ದರು.

    ಈ ವೇಳೆ ಶಾಂತಕುಮಾರ್ ಜೇಬಿನಿಂದ ಶಿವಮಾಧು 50 ರೂ. ತೆಗೆದಿದ್ದಾನೆ. ಯಾಕೋ 50 ರೂ. ತಗೊಂಡೆ? ವಾಪಸ್ ಕೊಡು ಎಂದು ಕೇಳಿದ್ದ ಶಾಂತಕುಮಾರ್‌ಗೆ ಶಿವಮಾಧು ಕೊಡಲ್ಲ ಎಂದಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಜಗಳವಾಗಿದ್ದು, ಜೊತೆಯಲ್ಲೇ ತಂದಿದ್ದ ಚಾಕು ತೆಗೆದುಕೊಂಡು ಶಾಂತಕುಮಾರ್ ಶಿವಮಾಧು ಎದೆಗೆ ಚುಚ್ಚಿ ಎಸ್ಕೇಪ್ ಆಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಿದ್ದಿದ್ದ ಶಿವಮಾಧುನನ್ನು ಸ್ನೇಹಿತರು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೂ ಆತ ತೀವ್ರ ಗಾಯಗಳಿಂದ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದ 5 ವಸತಿ ಗೃಹ ಜಪ್ತಿ

    ಬಳಿಕ ಘಟನಾ ಸ್ಥಳಕ್ಕೆ ಬಂದ ಬಸವೇಶ್ವರ ನಗರ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ಫುಟೇಜ್ ಆಧರಿಸಿ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಯಾಕೆ ಚಾಕು ಇಟ್ಟುಕೊಂಡಿದ್ದ ಎಂಬ ಪ್ರಶ್ನೆ ಮೂಡಿದೆ. ಈ ರೀತಿ ಡೆಲಿವರಿ ಬಾಯ್‌ಗಳು ಚಾಕು ಇಟ್ಟುಕೊಂಡರೆ, ಊಟ ಆರ್ಡರ್ ಮಾಡುವವರಿಗೆ ಅದೆಷ್ಟು ಸೇಫ್ಟಿ ಇದೆ ಎಂಬ ಆತಂಕವೂ ಮೂಡುತ್ತಿದೆ. ಎಲ್ಲವೂ ತನಿಖೆ ಬಳಿಕವೇ ಹೊರ ಬರಬೇಕಿದೆ.

    Live Tv

  • ಫುಡ್ ಡೆಲಿವರಿ ಬಾಯ್ ಮೇಲೆ ಟ್ರಾಫಿಕ್ ಪೊಲೀಸ್‍ ಹಲ್ಲೆ

    ಫುಡ್ ಡೆಲಿವರಿ ಬಾಯ್ ಮೇಲೆ ಟ್ರಾಫಿಕ್ ಪೊಲೀಸ್‍ ಹಲ್ಲೆ

    ಚೆನ್ನೈ: ಫುಡ್ ಡೆಲಿವರಿ ಬಾಯ್ ಮೇಲೆ ಟ್ರಾಫಿಕ್ ಪೊಲೀಸ್ ಹಲ್ಲೆ ನಡೆಸಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.

    ಮಹಿಳಾ ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದ ಶಾಲಾ ವ್ಯಾನ್ ನಿಲ್ಲಿಸಲು ಪ್ರಯತ್ನಿಸಿದ ಫುಡ್ ಡೆಲಿವರಿ ಬಾಯ್ ಮೋಹನ್ ಸುಂದರಂ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಜಾಗತಿಕ ಪರಿಸರ ಉಪಕ್ರಮ ‘ಲೈಫ್ ಮೂವ್ಮೆಂಟ್’ಗೆ ಚಾಲನೆ ನೀಡಲಿರುವ ಮೋದಿ

    ಮಹಿಳೆ ಮತ್ತು ವ್ಯಕ್ತಿಯೊಬ್ಬರು ರಸ್ತೆ ದಾಟುವಾಗ ಶಾಲಾ ವ್ಯಾನ್ ಮಹಿಳೆಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಮಹಿಳೆಯೊಂದಿಗಿದ್ದವ್ಯಕ್ತಿ ವ್ಯಾನ್ ನಿಲ್ಲಿಸಲು ಯತ್ನಿಸಿದ್ದಾರೆ ಮತ್ತು ನಿಂದಿಸಿದ್ದಾರೆ. ಇದನ್ನು ಕಂಡ ಮೋಹನ್ ಸುಂದರಂ ಶಾಲಾ ವಾಹನವನ್ನು ಹಿಂಬಾಲಿಸಿ ಬೈಕ್‍ನಿಂದ ಅಡ್ಡ ಹಾಕಲು ಯತ್ನಿಸಿದ್ದಾರೆ. ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್ – ಸ್ಟೆಷನರಿ, ಕಿರಾಣಿ ಅಂಗಡಿಗೆ ಬೆಂಕಿ 

    ಈ ಗಲಾಟೆ ನೋಡಿ ಕೋಪಗೊಂಡ ಟ್ರಾಫಿಕ್ ಪೊಲೀಸ್ ಅಧಿಕಾರಿ ಮೋಹನಸುಂದರಂಗೆ ಕಪಾಳಮೋಕ್ಷ ಮಾಡಿದ್ದಾರೆ. ಅದರಲ್ಲಿಯೂ ಟ್ರಾಫಿಕ್ ಪೊಲೀಸ್ ಫುಡ್ ಡೆಲಿವರಿ ಬಾಯ್‍ಗೆ ಹಲವು ಬಾರಿ ಕಪಾಳಮೋಕ್ಷ ಮಾಡಿ, ಆತನ ಕೈಯಲ್ಲಿದ್ದ ಕೀ ಮತ್ತು ಹೆಡ್‍ಸೆಟ್ ಕಿತ್ತುಕೊಳ್ಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಸದ್ಯ ಈ ಸಂಬಂಧ ತನಿಖೆಗೆ ಆದೇಶಿಸಲಾಗಿದ್ದು, ಪೊಲೀಸ್ ಅಧಿಕಾರಿಯನ್ನು ನಿಯಂತ್ರಣ ಕೊಠಡಿಗೆ ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ.