Tag: Food and Civil Supplies Department

  • ಆಹಾರ ಮತ್ತು ನಾಗರೀಕ ಪೂರೈಕೆಗೆ ಸಿದ್ದು ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಆಹಾರ ಮತ್ತು ನಾಗರೀಕ ಪೂರೈಕೆಗೆ ಸಿದ್ದು ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ತಮ್ಮ 12ನೇ ಬಜೆಟ್ ಮಂಡಿಸಿದ್ದಾರೆಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಗೆ ಸಂಬಂಧಿಸಂತೆ ಬಜೆಟ್‍ನಲ್ಲಿ ಹೇಳಿರುವ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.

    ಒಟ್ಟು ಅನುದಾನ – 3636 ಕೋಟಿ ರೂ.

    * ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ನೀಡಲಾಗುತ್ತಿರುವ 5 ಕೆಜಿ ಆಹಾರಧಾನ್ಯ ಪ್ರಮಾಣ 7 ಕೆಜಿಗೆ ಏರಿಕೆ.
    * ಹೊಸ ಪಡಿತರ ಚೀಟಿ ವಿತರಣೆ – ಸಕಾಲ ಯೋಜನೆಯಡಿ 15 ದಿನಗಳೊಳಗೆ ಅರ್ಜಿದಾರರ ಮನೆಬಾಗಿಲಿಗೆ ಸ್ಪೀಡ್ ಪೋಸ್ಟ್ ಮುಖಾಂತರ ಪಡಿತರ ಚೀಟಿ
    * ಸೀಮೆಎಣ್ಣೆ ಮುಕ್ತ ರಾಜ್ಯವನ್ನಾಗಿ ಮಾಡಲು ಅನಿಲಭಾಗ್ಯ ಯೋಜನೆ – 5 ಲಕ್ಷ ಕುಟುಂಬಗಳಿಗೆ ಉಚಿತ ಅನಿಲ ಸಂಪರ್ಕ – ಪ್ರತಿ ಫಲಾನುಭವಿಗೆ 1600 ಸಹಾಯ ಧನ ವಿತರಣೆ
    * ಕಲ್ಯಾಣ ಸಂಸ್ಥೆಗಳಾದ ನಾರಿನಿಕೇತನ, ವೃದ್ಧಾಶ್ರಮ, ಅಂಧಮಕ್ಕಳ ಶಾಲೆ, ಬಡ ವಿದ್ಯಾರ್ಥಿಗಳ ವಿದ್ಯಾರ್ಥಿನಿಲಯ, ಭಿಕ್ಷುಕರ ಪುನರ್ವಸತಿ ಕೆಂದ್ರಗಳಿಗೆ ಅನ್ನಭಾಗ್ಯ ಮಾದರಿಯಲ್ಲಿ ಉಚಿತ ಆಹಾರ ಧಾನ್ಯ

    * ಇ- ಆಡಳಿತ ಇಲಾಖೆಯೊಂದಿಗೆ ಎಲಲಾ ನ್ಯಾಯಬೆಲೆ ಅಂಗಡಿಗಳನ್ನ ಸೇವಾ ಸಿಂಧು ಕೇಂದ್ರವಾಗಿ ಪರಿವರ್ತನೆ.
    * ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಹೆಚ್ಚುವರಿ ಗ್ರಾಹಕ ವಾಜ್ಯ ಪೀಠಗಳ ಸ್ಥಾಪನೆ – 3 ತಿಂಗಳ ಅವಧಿಯೊಳಗೆ ಎಲ್ಲಾ ಬಾಕಿ ಉಳಿದ ವ್ಯಾಜ್ಯಗಳ ವಿಲೇವಾರಿಗೆ ಅನುವು.