Tag: Follwers

  • ಇನ್‍ಸ್ಟಾಗ್ರಾಮ್‍ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊಗೆ 40 ಕೋಟಿ ಫಾಲೋವರ್ಸ್ – ನಂ.1

    ಇನ್‍ಸ್ಟಾಗ್ರಾಮ್‍ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊಗೆ 40 ಕೋಟಿ ಫಾಲೋವರ್ಸ್ – ನಂ.1

    ಲಂಡನ್: ಖ್ಯಾತ ಫುಟ್‍ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಸ್ವಲ್ಪ ಸಮಯದವರೆಗೆ ಫಾರ್ಮ್‍ನಿಂದ ಹೊರಗುಳಿದಿರಬಹುದು. ಆದರೆ ಮ್ಯಾಂಚೆಸ್ಟರ್ ಯುನೈಟೆಡ್ ಸ್ಟ್ರೈಕರ್ ರೊನಾಲ್ಡೊ ಇನ್‍ಸ್ಟಾಗ್ರಾಮ್‍ನಲ್ಲಿ 400 ಮಿಲಿಯನ್ (40 ಕೋಟಿ) ಫಾಲೋವರ್ಸ್‍ಗಳ ಸಂಖ್ಯೆಯನ್ನು ದಾಟಿದ ವಿಶ್ವದ ಏಕೈಕ ವ್ಯಕ್ತಿಯಾಗಿದ್ದಾರೆ.

    ಇನ್‍ಸ್ಟಾಗ್ರಾಮ್‍ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸೆಲೆಬ್ರೆಟಿಗಳ ಪಟ್ಟಿಯಲ್ಲಿ, ಪೋರ್ಚುಗಲ್ ನಾಯಕ ಕೈಲಿ ಜೆನ್ನರ್ ಅವರು 309 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ರೊನಾಲ್ಡೊ ಅವರ ಅತಿದೊಡ್ಡ ಫುಟ್‍ಬಾಲ್ ಪ್ರತಿಸ್ಪರ್ಧಿ ಮೆಸ್ಸಿ ಪ್ರಸ್ತುತ 306 ಮಿಲಿಯನ್ ಫಾಲೋವರ್ಸ್ ಪಡೆದು ನಂತರದ ಸ್ಥಾನದಲ್ಲಿದ್ದಾರೆ. ಪಾಪ್ ಗಾಯಕಿ ಸೆಲೆನಾ ಗೊಮೆಜ್ ಮತ್ತು ನಟ ಡ್ವೇನ್ ಜಾನ್ಸನ್ ತಲಾ 295 ಮಿಲಿಯನ್ ಫಾಲೋವರ್ಸ್‍ಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಜಯ – ಸರಣಿ ಕೈವಶಪಡಿಸಿಕೊಂಡ ಟೀಂ ಇಂಡಿಯಾ

    ವರದಿಯ ಪ್ರಕಾರ ರೊನಾಲ್ಡೊ ಇನ್‍ಸ್ಟಾಗ್ರಾಮ್‍ನ ಎಲ್ಲಾ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಹೆಚ್ಚು ಶುಲ್ಕವನ್ನು ವಿಧಿಸುತ್ತಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಪ್ರತಿ ಪೋಸ್ಟ್‌ಗೆ (ಯುಎಸ್‍ಡಿ) 1.6 ಮಿಲಿಯನ್ (ಐಎನ್‍ಆರ್ 11.9 ಕೋಟಿ) ಚಾರ್ಜ್ ಮಾಡುತ್ತಾರೆ.

    ಇದರ ಮಧ್ಯೆ ಒಂದೆರಡು ದಿನಗಳ ಹಿಂದೆ ರೊನಾಲ್ಡೊ ತನ್ನ 37 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಹುಟ್ಟುಹಬ್ಬದ ಪ್ರಯುಕ್ತ ತಮಗೆ ಶುಭಾಶಯಗಳನ್ನು ಕಳುಹಿಸಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದರು.

    ಜೀವನವು ರೋಲರ್ ಕೋಸ್ಟರ್ ಆಗಿದೆ. ಕಠಿಣ ಪರಿಶ್ರಮ, ಹೆಚ್ಚಿನ ವೇಗ, ಗುರಿಗಳು, ಬೇಡಿಕೆಯ ನಿರೀಕ್ಷೆಗಳು. ಆದರೆ ಕೊನೆಯಲ್ಲಿ ಇದು ಕುಟುಂಬ, ಪ್ರೀತಿ, ಪ್ರಾಮಾಣಿಕತೆ, ಸ್ನೇಹ ಎಲ್ಲವನ್ನೂ ಮೌಲ್ಯಯುತವಾಗಿಸುತ್ತದೆ ಎಂದು ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದರು. ಇದನ್ನೂ ಓದಿ:  7.47 ಕೋಟಿ ರೂ.ಗೆ ವಿಮೆ ಮಾಡಿಸಿದ್ದ ಪೇಂಟಿಂಗ್ ನಾಶ ಮಾಡಿದ ಸೆಕ್ಯೂರಿಟಿ!

    ತಮ್ಮ ಭವಿಷ್ಯದ ಮುಂದಿನ ಯೋಜನೆಗಳ ಬಗ್ಗೆ ಮಾತನಾಡುತ್ತಾ ರೊನಾಲ್ಡೊ, ನಾನು ಫುಟ್‍ಬಾಲ್ ಕ್ಷೇತ್ರದಲ್ಲಿ ಇನ್ನೂ 40ರ ವಯಸ್ಸಿನವರೆಗೂ ಆಡಲು ನಿರ್ಧರಿಸಿದ್ದೇನೆ. ಇದೀಗ ನಾನು ಅಲ್ಪಾವಧಿಯ ಗುರಿಗಳತ್ತ ಗಮನ ಹರಿಸಿದ್ದೇನೆ ಎಂದು ತಿಳಿಸಿದ್ದಾರೆ.

     

    View this post on Instagram

     

    A post shared by Cristiano Ronaldo (@cristiano)

    ನನಗೆ ಈಗ 30 ವರ್ಷ ವಯಸ್ಸಾಗಿದೆ. ನಾನು ನನ್ನ ದೇಹ ಮತ್ತು ಮನಸ್ಸಿನ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇನೆ. 33ರ ವಯಸ್ಸಿನ ನಂತರ ದೇಹವು ಕುಗ್ಗಲಾರಂಭಿಸುತ್ತದೆ. ಆದರೆ ನಾನು ಮಾನಸಿಕವಾಗಿ ಸಧೃಢನಾಗಿದ್ದೇನೆ. ಹಾಗೆ ನೋಡಿದರೆ ನಿಜವಾದ ಜೀವನದ ಯುದ್ಧವು 40ರ ನಂತರ ಪ್ರಾರಂಭವಾಗುತ್ತದೆ. ವಯಸ್ಸು ಕೇವಲ ಎಣಿಕೆಗಾಗಿ. ನಾವು ನಮ್ಮ ದೇಹವನ್ನು ಎಷ್ಟು ಚಟುವಟಿಕೆಯಿಂದ ಇಡುತ್ತೇವೋ ಅಷ್ಟು ಸಧೃಡರಾಗಿರಬಹುದು ಎಂದು ಇತ್ತೀಚಿನ ಸಂದರ್ಶನ ಒಂದರಲ್ಲಿ ಹೇಳಿದ್ದರು.

  • ಗೆದ್ದೇ ಗೆಲ್ಲುವೆ ಒಂದು ದಿನ, ಗೆಲ್ಲಲೇಬೇಕು ಒಳ್ಳೆತನ: ಚಂದನ್ ಶೆಟ್ಟಿ

    ಗೆದ್ದೇ ಗೆಲ್ಲುವೆ ಒಂದು ದಿನ, ಗೆಲ್ಲಲೇಬೇಕು ಒಳ್ಳೆತನ: ಚಂದನ್ ಶೆಟ್ಟಿ

    ಬೆಂಗಳೂರು: ಗಾಂಜಾ ವಿವಾದ ಮುಗಿದ ನಂತರ ಚಂದನ್ ಶೆಟ್ಟಿ ಗೆದ್ದೇ ಗೆಲ್ಲುವೆ ಒಂದು ದಿನ. ಗೆಲ್ಲಲೇಬೇಕು ಒಳ್ಳೆತನ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    ಕಳೆದ ನಾಲ್ಕಾರು ದಿನಗಳಿಂದ ಚಂದನ್ ಶೆಟ್ಟಿ ಗಾಯನದ `ಅಂತ್ಯ’ ಸಿನಿಮಾದ ಗಾಂಜಾ ಕುರಿತಾದ ಹಾಡೊಂದು ಸಾಕಷ್ಟು ವಿವಾದವಾಗಿತ್ತು. ಈ ಸಂಬಂಧ ಚಂದನ್ ಶೆಟ್ಟಿಯವರಿಗೆ ಸಿಸಿಬಿ ಪೊಲೀಸರು ಸಮನ್ಸ್ ಸಹ ಜಾರಿ ಮಾಡಿದ್ದರು. ವಿಚಾರಣೆಗೆ ಹಾಜರಾಗಿದ್ದ ಚಂದನ್, ತಮ್ಮ ಮೇಲಿನ ಆರೋಪಗಳು ಅಸಮಂಜಸ. ನಾನು ಕೇವಲ ಹಾಡನ್ನು ಹಾಡಿದ್ದೇನೆ ಹೊರತು ಸಾಹಿತ್ಯ ಬರೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

    ಚಂದನ್ ಶೆಟ್ಟಿ ಅವರಿಗೆ ನೋಟಿಸ್ ನೀಡಿದ್ದನ್ನು ಅವರ ಅಭಿಮಾನಿಗಳು ವಿರೋಧಿಸಿದ್ದರು. ಅಲ್ಲದೇ ಚಂದನ್ ಶೆಟ್ಟಿ ಈ ಹಾಡು ಹಾಡಿದರಿಂದ ಅವರ ಯಾವ ಅಪರಾಧವೂ ಇಲ್ಲ ಎಂದು ಅಭಿಮಾನಿಗಳು ಚಂದನ್ ಬೆಂಬಲಕ್ಕೆ ನಿಂತಿದ್ದರು. ಸದ್ಯ ಈ ಬೆಂಬಲ ನೋಡಿ ಚಂದನ್ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳ ಬಗ್ಗೆ ಪೋಸ್ಟ್ ಹಾಕಿದ್ದಾರೆ. ಇದನ್ನೂ ಓದಿ: ಖಾಕಿ ವರ್ಸಸ್ ಸ್ಯಾಂಡಲ್‍ವುಡ್: ಪೊಲೀಸರ ವಿರುದ್ಧ ದೂರ ನೀಡಲು ಸಿದ್ಧವಾಯ್ತು ‘ಅಂತ್ಯ’ ಚಿತ್ರ ತಂಡ

    ಪೋಸ್ಟ್ ನಲ್ಲಿ ಏನಿದೆ?
    ನಿಂದಿಸಿದವರ ನಾಲಿಗೆಯಲ್ಲಿ ನಲಿದಾಡುವಂತೆ ಗೆಲ್ಲಬೇಕು..
    ಹೀಯಾಳಿಸಿದವರೇ ಸನ್ಮಾನಿಸುವಂತೆ ಗೆಲ್ಲಬೇಕು..
    ದೂರತಳ್ಳಿದವರೇ ಬಾಚಿ ತಬ್ಬಿಕೊಳ್ಳುವಂತೆ ಗೆಲ್ಲಬೇಕು..
    ಗೆದ್ದೇ ಗೆಲ್ಲುವೆ ಒಂದು ದಿನ..
    ಗೆಲ್ಲಲೇಬೇಕು ಒಳ್ಳೆತನ..
    -ಅನಾಮಿಕ

    ನನ್ನನು ನಿಜವಾಗಿಯೂ ಪ್ರೀತಿಸುವವರು ಎಷ್ಟು ಮಂದಿ ಇದ್ದಾರೆ ಅಂತ ಈಗ ತಿಳಿಯಿತು. ನಾನು ಈಗ ಮತ್ತಷ್ಟು ಬಲಿಷ್ಟನಾಗಿದ್ದೇನೆ. ಗೆದ್ದೇ ಗೆಲ್ಲುವೆ ಒಂದು ದಿನ. ನನ್ನ ಗುರಿ ಮುಟ್ಟುವೆ ಒಂದು ದಿನ. ನಿಮ್ಮ ಪ್ರೀತಿ ಆಶೀರ್ವಾದ ನನ್ನ ಮೇಲೆ ಸದಾ ಇರಲಿ. ಸತ್ಯ ಮೇವ ಜಯತೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಸಿಸಿಬಿ ಪೊಲೀಸರ ಮುಂದೆ ಪ್ರಶ್ನೆಗಳ ಸುರಿಮಳೆಗೈದ ಚಂದನ್ ಶೆಟ್ಟಿ

    ಏನಿದು ಪ್ರಕರಣ?
    ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಚಂದನ್ ಶೆಟ್ಟಿಗೆ ಬಂಧನ ಭೀತಿ ಎದುರಾಗಿತ್ತು. ಚಂದನ್ ಶೆಟ್ಟಿ ಸಂಗೀತ ಸಂಯೋಜನೆಯ ಅಂತ್ಯ ಸಿನಿಮಾದ ಗಾಂಜಾ ಕಿಕ್ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿತ್ತು. ಆದರೆ ಗಾಂಜಾ ಕಿಕ್ ಹಾಡಿನಲ್ಲಿ ಮಾದಕ ವಸ್ತುಗಳನ್ನು ಸೇವಿಸುವ ಕುರಿತು ವೈಭವಿಕರಿಸಿ ತೋರಿಸಲಾಗಿದೆ. ಹೀಗಾಗಿ ಖುದ್ದು ಸ್ವಯಂ ದೂರು ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಚಂದನ್ ಶೆಟ್ಟಿಗೆ ಸಮನ್ಸ್ ಜಾರಿ ಮಾಡಿದ್ದರು. ಇದನ್ನೂ ಓದಿ: ಗಾಂಜಾ ಸಾಂಗ್ ವಿವಾದದಲ್ಲಿ ನನ್ನದೇನು ತಪ್ಪಿಲ್ಲ: ಚಂದನ್ ಶೆಟ್ಟಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ನಿಂದಿಸಿದವರ ನಾಲಿಗೆಯಲ್ಲಿ ನಲಿದಾಡುವಂತೆ ಗೆಲ್ಲಬೇಕು.. ಹೀಯಾಳಿಸಿದವರೇ ಸನ್ಮಾನಿಸುವಂತೆ ಗೆಲ್ಲಬೇಕು.. ದೂರತಳ್ಳಿದವರೇ ಬಾಚಿ ತಬ್ಬಿಕೊಳ್ಳುವಂತೆ ಗೆಲ್ಲಬೇಕು.. ಗೆದ್ದೇ ಗೆಲ್ಲುವೆ ಒಂದು ದಿನ.. ಗೆಲ್ಲಲೇಬೇಕು ಒಳ್ಳೆತನ.. -ಅನಾಮಿಕ ನನ್ನನು ನಿಜವಾಗಿಯೂ ಪ್ರೀತಿಸುವವರು ಎಷ್ಟು ಮಂದಿ ಇದ್ದಾರೆ ಅಂತ ಈಗ ತಿಳಿಇತು..ನಾನು ಈಗ ಮತಷ್ಟು ಬಲಿಷ್ಟನಾಗಿದ್ದೇನೆ..ಗೆದ್ದೇ ಗೆಲ್ಲುವೆ ಒಂದುದಿನ ..ನನ್ನ ಗುರಿ ಮುಟ್ಟುವೆ ಒಂದು ದಿನ..ನಿಮ್ಮ ಪ್ರೀತಿ ಆಶೀರ್ವಾದ ನನ್ನ ಮೇಲೆ ಸದಾ ಇರಲಿ..ಸತ್ಯ ಮೇವ ಜಯತೆ✊????????❤️

    A post shared by Chandan Shetty (@chandanshettyofficial) on