Tag: followers

  • ಮನೆಯಿಂದ ಹೊರಬಂದು ಅಭಿಮಾನಿಗಳಿಗೆ ಶಾರೂಕ್ ಸರ್ಪ್ರೈಸ್

    ಮನೆಯಿಂದ ಹೊರಬಂದು ಅಭಿಮಾನಿಗಳಿಗೆ ಶಾರೂಕ್ ಸರ್ಪ್ರೈಸ್

    ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ತಮ್ಮ ‘ಮನ್ನತ್’ ಮನೆಯಿಂದ ಹೊರಬಂದು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.

    ಶಾರೂಕ್ ಖಾನ್ ಪ್ರತಿ ವರ್ಷ ತಮ್ಮ ಮನ್ನತ್ ಮನೆಯಲ್ಲಿ ಈದ್ ಆಚರಿಸುತ್ತಾರೆ. ಬಳಿಕ ತಮ್ಮ ಟೆರೇಸ್‍ಗೆ ಹೋಗಿ ಮನೆಯ ಹೊರಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸುತ್ತಾರೆ. ಹಾಗೆಯೇ ರಂಜಾನ್ ಹಬ್ಬದಂದು ಕೂಡ ಶಾರೂಕ್ ಮನೆಯ ಹೊರಗೆ ಬಂದು ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ.

    ಶಾರೂಕ್ ಈ ಬಾರಿ ತಮ್ಮ ಕಿರಿಯ ಮಗ ಅಬ್ರಾಹಂ ಹಾಗೂ ಅಮೆರಿಕ ಚ್ಯಾಟ್ ಶೋ ನಿರೂಪಕ ಡೇವಿಡ್ ಲೆಟರ್‍ಮ್ಯಾನ್ ಜೊತೆ ಮನೆಯ ಟೆರೇಸ್ ಬದಲು ಕಾರಿನ ಮೇಲೆ ನಿಂತುಕೊಂಡು ಅಭಿಮಾನಿಗಳಿಗೆ ಶುಭಾಶಯ ತಿಳಿಸುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಕೆಲವು ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಶಾರೂಕ್ ಕಾರಿನ ಮೇಲೆ ನಿಂತು ಅಭಿಮಾನಿಗಳತ್ತ ಕೈಬೀಸಿದ್ದಾರೆ. ಈ ವೇಳೆ ಶಾರೂಕ್ ಕಪ್ಪು ಬಣ್ಣದ ಟೀ-ಶರ್ಟ್‍ಗೆ ಶರ್ಟ್ ಧರಿಸಿ ಅದಕ್ಕೆ ನೀಲಿ ಬಣ್ಣದ ಡೆನಿಮ್ ಧರಿಸಿದ್ದರು.

    ಇತ್ತೀಚೆಗೆ ಶಾರೂಕ್ ಖಾನ್ ತನ್ನ ಕೇಶವಿನ್ಯಾಸಕನ ಸಹೋದರಿಯ ಮದುವೆಗೆ ಆಗಮಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಶಾರೂಕ್ ಹಿಂದುಗಡೆ ಗೇಟ್ ಮೂಲಕ ನೇರವಾಗಿ ವೇದಿಕೆ ಮೇಲೆ ಹೋಗಿ ವಧು-ವರನನ್ನು ತಬ್ಬಿಕೊಂಡು ಶುಭಾಶಯ ತಿಳಿಸಿದ್ದರು.

    ಶಾರೂಕ್ ಖಾನ್ ಕೊನೆಯದಾಗಿ `ಝೀರೋ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಬಾಕ್ಸ್ ಆಫೀಸ್‍ನಲ್ಲಿ ಅಷ್ಟು ಸದ್ದು ಮಾಡಲಿಲ್ಲ. ಈ ಚಿತ್ರ ಸೋಲು ಕಂಡಿದ್ದಕ್ಕೆ ಶಾರೂಕ್ ಖಾನ್ ಜೂನ್ ತಿಂಗಳಿನವರೆಗೂ ಯಾವುದೇ ಚಿತ್ರವನ್ನು ಸಹಿ ಮಾಡಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

  • ಸಾಮಾಜಿಕ ಜಾಲತಾಣಕ್ಕೆ ನಟ ರಕ್ಷಿತ್ ಶೆಟ್ಟಿ ರೀ-ಎಂಟ್ರಿ

    ಸಾಮಾಜಿಕ ಜಾಲತಾಣಕ್ಕೆ ನಟ ರಕ್ಷಿತ್ ಶೆಟ್ಟಿ ರೀ-ಎಂಟ್ರಿ

    ಬೆಂಗಳೂರು: ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಕೆಲವು ತಿಂಗಳು ಸಾಮಾಜಿಕ ಜಾಲತಾಣದಿಂದ ಬ್ರೇಕ್ ತೆಗೆದುಕೊಂಡಿದ್ದರು. ಈಗ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ರಕ್ಷಿತ್ ಸಾಮಾಜಿಕ ಜಾಲತಾಣಕ್ಕೆ ರೀ-ಎಂಟ್ರಿ ಕೊಡಲಿದ್ದಾರೆ.

    ಸಾಮಾಜಿಕ ಜಾಲತಾಣಕ್ಕೆ ಹಿಂತಿರುವಂತೆ ರಕ್ಷಿತ್ ಅಭಿಮಾನಿಗಳು ಅವರಲ್ಲಿ ಕೇಳಿಕೊಳ್ಳುತ್ತಿದ್ದರು. ಇದೇ ಜೂನ್ 6ರಂದು ರಕ್ಷಿತ್ ತಮ್ಮ ಹುಟ್ಟುಹಬ್ಬ ಇದ್ದು, ಇದೇ ದಿನ ಸಾಮಾಜಿಕ ಜಾಲತಾಣಕ್ಕೆ ರೀ-ಎಂಟ್ರಿ ಕೊಡುವ ಮೂಲಕ ಅಭಿಮಾನಿಗಳಿಗೆ ಗಿಫ್ಟ್ ನೀಡಲು ನಿರ್ಧರಿಸಿದ್ದಾರೆ.

    ರಕ್ಷಿತ್ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣವನ್ನು ಬಳಸುವುದಿಲ್ಲ. ಅವರ ಬದಲಾಗಿ ಅವರ ಟೀಂ ಸದಸ್ಯರು ಅವರ ಸಾಮಾಜಿಕ ಜಾಲತಾಣವನ್ನು ನೋಡಿಕೊಳ್ಳುತ್ತಾರೆ. ರಕ್ಷಿತ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಅವರ ಮುಂದಿನ ಚಿತ್ರದ ಟ್ರೈಲರ್, ಪೋಸ್ಟರ್ ಹಾಗೂ ಫಸ್ಟ್ ಲುಕ್ ಇದರಲ್ಲಿ ಪೋಸ್ಟ್ ಹಾಗೂ ಟ್ವೀಟ್ ಮಾಡಲಾಗುತ್ತದೆ.

    ರಕ್ಷಿತ್ ಅಭಿನಯದ ಬಹುನಿರೀಕ್ಷಿತ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಚಿತ್ರೀಕರಣ ಇಂದು ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಬಗ್ಗೆ ಯಾವುದೇ ವಿಷಯವನ್ನು ಅವರ ಅಭಿಮಾನಿಗಳು ಮಿಸ್ ಮಾಡಿಕೊಳ್ಳಬಾರದು ಎಂದು ರಕ್ಷಿತ್ ರೀ-ಎಂಟ್ರಿ ಕೊಡಲಿದ್ದಾರೆ.

    ರಕ್ಷಿತ್ ಶೆಟ್ಟಿ ಮೊದಲು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗುತ್ತಿದ್ದರು. ತಮ್ಮ ವೈಯಕ್ತಿಕ ಹಾಗೂ ಸಿನಿಮಾಗಳ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರು. ಈಗ ಅವರು ಮತ್ತೆ ಸೋಶಿಯಲ್ ಮೀಡಿಯಾಗೆ ರೀ-ಎಂಟ್ರಿ ಕೊಡುತ್ತಿರುವುದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.

  • ನಿಖಿಲ್ ಸೋತಿದ್ದಕ್ಕೆ ಬೆರಳನ್ನೇ ಕತ್ತರಿಸಿಕೊಂಡ ಅಭಿಮಾನಿ?

    ನಿಖಿಲ್ ಸೋತಿದ್ದಕ್ಕೆ ಬೆರಳನ್ನೇ ಕತ್ತರಿಸಿಕೊಂಡ ಅಭಿಮಾನಿ?

    ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋತಿದ್ದಕ್ಕೆ ಅಭಿಮಾನಿಯೊಬ್ಬ ತನ್ನ ಬೆರಳನ್ನು ಕತ್ತರಿಸಿಕೊಂಡಿದ್ದಾನೆ.

    ಜಿಲ್ಲೆಯ ಮದ್ದೂರು ತಾಲೂಕಿನ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. ನಿಖಿಲ್ ಸೋತಿದ್ದಕ್ಕೆ ಅಭಿಮಾನಿ ಮತದಾನ ಮಾಡಿದ ನಂತರ ಕೈಗೆ ಶಾಯಿ ಹಾಕಿಸಿಕೊಂಡಿದ್ದ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ ಎಂದು ಹೇಳಲಾಗುತ್ತದೆ.

    ಸಾಮಾಜಿಕ ಜಾಲತಾಣದಲ್ಲಿ ಬೆರಳು ಕತ್ತರಿಸಿಕೊಂಡಿದ್ದ ಫೋಟೋ ಹರಿದಾಡುತ್ತಿದೆ. ನಿಖಿಲ್ ಸೋತ ಮೇಲೆ ಅವರಿಗೆ ಮತ ಹಾಕಿ ಶಾಹಿ ಹಾಕಿಸಿಕೊಂಡ ಬೆರಳು ಇರಬಾರದೆಂದು ಕತ್ತರಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

    ಚುನಾವಣೆಯಲ್ಲಿ ನಿಖಿಲ್ ಅವರಿಗೆ 5,71,777 ಮತ ಲಭಿಸಿದ್ದರೆ, ಸುಮಲತಾ ಅವರಿಗೆ 6,98,213 ಮತ ಲಭಿಸಿದೆ. ಆ ಮೂಲಕ ಸುಮಲತಾ ಅವರು ಬರೋಬ್ಬರಿ 1,26,436 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.

  • ಚುನಾವಣೆ ನಂತ್ರ ಪ್ರಥಮ ಬಾರಿಗೆ ಮಂಡ್ಯಕ್ಕೆ ಆಗಮಿಸಲಿದ್ದಾರೆ ಯಶ್

    ಚುನಾವಣೆ ನಂತ್ರ ಪ್ರಥಮ ಬಾರಿಗೆ ಮಂಡ್ಯಕ್ಕೆ ಆಗಮಿಸಲಿದ್ದಾರೆ ಯಶ್

    ಮಂಡ್ಯ: ಲೋಕಸಭಾ ಚುನಾವಣೆ ನಂತರ ರಾಕಿಂಗ್ ಸ್ಟಾರ್ ಯಶ್ ಮೊದಲ ಬಾರಿಗೆ ಮಂಡ್ಯಗೆ ಆಗಮಿಸಲಿದ್ದಾರೆ.

    ಯಶ್ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆರೆಮೇಗಳದೊಡ್ಡಿ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಗೆ ಅಭಿಮಾನಿಯೊಬ್ಬರ ಮನೆಯ ಗೃಹಪ್ರವೇಶ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಯಶ್ ಆಗಮಿಸಲಿದ್ದಾರೆ ಎಂದು ಉಚ್ಚಾಟಿತ ಕೆಪಿಸಿಸಿ ಸದಸ್ಯ, ಸುಮಲತಾ ಬೆಂಬಲಿಗ ಇಂಡವಾಳು ಸಚ್ಚಿದಾನಂದ ಹೇಳಿದ್ದಾರೆ.

    ಚುನಾವಣೆ ಮುಗಿದ ಬಳಿಕ ಯಶ್ ಹಾಗೂ ದರ್ಶನ್ ಮಂಡ್ಯಕ್ಕೆ ಬರುವುದಿಲ್ಲ ಎಂದು ಜೆಡಿಎಸ್ ನಾಯಕರು ಹೇಳುತ್ತಿದ್ದರು. ಇದೀಗ ಅಭಿಮಾನಿಯ ಮನೆಯ ಗೃಹ ಪ್ರವೇಶಕ್ಕೆ ಯಶ್ ಆಗಮಿಸುತ್ತಿದ್ದಾರೆ. ಅದೇ ರೀತಿ ಮಂಡ್ಯ ಜನರ ಕಷ್ಟ ಹಾಗೂ ಸುಖಗಳಿಗೆ ಯಶ್ ಹಾಗೂ ದರ್ಶನ್ ಸ್ಪಂದಿಸುತ್ತಾರೆ. ತಮ್ಮ ಕೆಲಸದ ನಡುವೆ ಬಿಡುವಾದಾಗ ಯಶ್ ಹಾಗೂ ದರ್ಶನ್ ಮಂಡ್ಯಕ್ಕೆ ಬರುತ್ತಾರೆ. ಇಲ್ಲಿಯ ಜನರ ಜೊತೆ ಇರುತ್ತಾರೆ ಎಂದು ಸಚ್ಚಿದಾನಂದ ತಿಳಿಸಿದ್ದಾರೆ.

    ಸದ್ಯ ಯಶ್ ಆಗಮನದ ಹಿನ್ನೆಲೆಯಲ್ಲಿ ಸಚ್ಚಿದಾನಂದ ಅವರ ನೇತೃತ್ವದಲ್ಲಿ ಅದ್ಧೂರಿ ಸ್ವಾಗತಕ್ಕೆ ಬೆಸಗರಹಳ್ಳಿಯಲ್ಲಿ ಸಿದ್ಧತೆ ನಡೆಯುತ್ತಿದೆ.

  • ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಕನ್ನಡದಲ್ಲಿ ಧನ್ಯವಾದ

    ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಕನ್ನಡದಲ್ಲಿ ಧನ್ಯವಾದ

    ಬೆಂಗಳೂರು: ಐಪಿಎಲ್ 2019ನೇ ಆವೃತ್ತಿಯಿಂದ ರಾಯಲ್ ಚಾಲೆಂಜರ್ಸ್ ತಂಡ ಹೊರಬಿದ್ದಿದ್ದರೂ ಅಭಿಮಾನಿಗಳು ತಂಡಕ್ಕೆ ಬೆಂಬಲ ನೀಡಿದ್ದರು. ಈಗ ಅಭಿಮಾನಿಗಳ ಪ್ರೋತ್ಸಾಹ ನೋಡಿ ನಾಯಕ ವಿರಾಟ್ ಕೊಹ್ಲಿ ಕನ್ನಡದಲ್ಲೇ ಧನ್ಯವಾದ ತಿಳಿಸಿದ್ದಾರೆ.

    ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಫೋಟೋ, ತಮ್ಮ ತಂಡದ ಫೋಟೋ ಹಾಗೂ ಬೆಂಗಳೂರಿನ ಚಿನ್ನಾಸ್ವಾಮಿ ಕ್ರೀಡಾಂಗಣ ಸಿಬ್ಬಂದಿಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಕನ್ನಡದಲ್ಲಿಯೇ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ನಮಗೆ ಪ್ರೀತಿ ಹಾಗೂ ಬೆಂಬಲ ನೀಡಿದ್ದ ನನ್ನ ತಂಡಕ್ಕೆ, ಅಭಿಮಾನಿಗಳಿಗೆ, ಕ್ರೀಡಾಂಗಣದ ಸಿಬ್ಬಂದಿಗೆ ಹಾಗೂ ನಮ್ಮನ್ನು ಬೆಂಬಲಿದ ಸಿಬ್ಬಂದಿಗೆ ಧನ್ಯವಾದಗಳು. ನಾವು ಮುಂದಿನ ವರ್ಷ ಮತ್ತಷ್ಟು ಶಕ್ತಿಶಾಲಿಯಾಗಿ ಬರುತ್ತೇವೆಂದು ಮಾತು ನೀಡುತ್ತೇನೆ. “ನೀವು ಇಲ್ಲಾಂದ್ರೆ ನಾವು ಏನು ಅಲ್ಲಾ” ಎಂದು ಕನ್ನಡದಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

    ವಿರಾಟ್ ಅವರ ಈ ಪೋಸ್ಟ್ ಗೆ ಹೆಚ್ಚು ಲೈಕ್ಸ್ ಹಾಗೂ ಕಮೆಂಟ್ಸ್ ಬರುತ್ತಿದೆ. ಆರ್‌ಸಿಬಿ ತಂಡ ಯಾವ ರೀತಿಯಾಗಿ ಆಡಿದರೂ ನಾವು ಯಾವಾಗಲೂ ಬೆಂಬಲ ನೀಡುತ್ತೇವೆ. ಮುಂದಿನ ವರ್ಷ ಚೆನ್ನಾಗಿ ಆಟವನ್ನು ಆಡಿ ಎಂದು ಕಮೆಂಟ್ ಮಾಡಿದ್ದಾರೆ.

    ಆರ್‌ಸಿಬಿ ಒಟ್ಟು 14 ಪಂದ್ಯದಲ್ಲಿ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿ, 8 ಪಂದ್ಯದಲ್ಲಿ ಸೋಲು ಕಂಡಿದೆ. ಸದ್ಯ ಆರ್‌ಸಿಬಿ 11 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ.

  • ಅಭಿಮಾನಿಗಳ ಜೊತೆ ಕಾಲ ಕಳೆದ ಆರ್‌ಸಿಬಿ ಆಟಗಾರರು

    ಅಭಿಮಾನಿಗಳ ಜೊತೆ ಕಾಲ ಕಳೆದ ಆರ್‌ಸಿಬಿ ಆಟಗಾರರು

    ಬೆಂಗಳೂರು: ಐಪಿಎಲ್‍ನಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಗೆಲ್ಲಲಿ ಅಥವಾ ಸೋಲಲಿ. ಅಭಿಮಾನಿಗಳ ಕ್ರೇಜ್ ಮಾತ್ರ ಕಡಿಮೆ ಆಗುವುದಿಲ್ಲ. ಆರ್‌ಸಿಬಿ ತಂಡದ ಕ್ರಿಕೆಟರ್ಸ್ ತಮ್ಮ ತಂಡದ ಫ್ಯಾನ್ಸ್ ಗಳಿಗೆ ವಿಭಿನ್ನವಾಗಿ ಚಿಯರ್ ಮಾಡಿದ್ದಾರೆ.

    ನಗರದ ಖಾಸಗಿ ಮಾಲ್ ನಲ್ಲಿ ಕಿಂಗ್ ಫಿಶರ್ ಬೌಲ್ ಔಟ್ ಸೀಸನ್-6 ಎಂಬ ಹೆಸರಿನಲ್ಲಿ, ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಆರ್‌ಸಿಬಿ ತಂಡದ ಮೂವರು ಆಟಗಾರರಾದ ಪಾರ್ಥಿವ್ ಪಟೇಲ್, ಹೈನ್ರಿಚ್ ಕ್ಲಾಸೆನ್ ಮತ್ತು ನವದೀಪ ಸೈನಿ ಆಗಮಿಸಿದ್ದರು.

    ಈ ಕಾರ್ಯಕ್ರಮದಲ್ಲಿ ಮೂವರು ಆಟಗಾರರು 25 ಅದೃಷ್ಟಶಾಲಿ ಅಭಿಮಾನಿಗಳು ಬೌಲಿಂಗ್ ಹಾಕಿದ್ದರು. ಅಭಿಮಾನಿಗಳ ಬೌಲಿಂಗ್‍ಗೆ ಕ್ರಿಕೆಟರ್ಸ್ ಗಳು ಬ್ಯಾಟ್ ಬೀಸಿದರು. ಅಲ್ಲದೆ ಕ್ರಿಕೆಟರ್ಸ್ ಅಭಿಮಾನಿಗಳ ಜೊತೆ ಸಮಯ ಕಳೆದಿದ್ದಾರೆ. ಈ ವೇಳೆ ಅಭಿಮಾನಿಗಳ ಆರ್‌ಸಿಬಿ, ಆರ್‌ಸಿಬಿ ಎಂಬ ಕೇಕೆ ಮುಗಿಲು ಮುಟ್ಟಿತ್ತು.

  • ಆರ್‌ಸಿಬಿ ಪಂದ್ಯ ವೀಕ್ಷಿಸಲು ಹೋಗಿದ್ದ ಅಭಿಮಾನಿಗಳಿಗೆ ಸಿಕ್ತು ಸರ್ಪ್ರೈಸ್

    ಆರ್‌ಸಿಬಿ ಪಂದ್ಯ ವೀಕ್ಷಿಸಲು ಹೋಗಿದ್ದ ಅಭಿಮಾನಿಗಳಿಗೆ ಸಿಕ್ತು ಸರ್ಪ್ರೈಸ್

    ಬೆಂಗಳೂರು: ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ಪಂದ್ಯ ನಡೆಯಿತು. ಅಲ್ಲದೆ ಬುಧವಾರ ವರನಟ ಡಾ. ರಾಜ್‍ಕುಮಾರ್ ಅವರ ಹುಟ್ಟುಹಬ್ಬ ಆಗಿದ್ದರಿಂದ ಕ್ರೀಡಾಂಗಣದ ಸ್ಕ್ರೀನ್‍ನಲ್ಲಿ ಅವರ ಫೋಟೋ ಹಾಕಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದೆ.

    ಬುಧವಾರ ರಾಜ್‍ಕುಮಾರ್ ಅವರ ಹುಟ್ಟುಹಬ್ಬ ಇರುವುದರಿಂದ ಕ್ರೀಡಾಂಗಣದ ಎಲ್‍ಇಡಿ ಸ್ಕ್ರೀನ್‍ನಲ್ಲಿ ಅವರ ಫೋಟೋ ಹಾಕುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿತ್ತು. ಫೋಟೋ ಕೆಳಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಕೂಡ ಬರೆದಿತ್ತು. ಇದನ್ನು ನೋಡಿದ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

    ರಾಯಲ್ ಚಾಲೆಂಜರ್ಸ್ ಕೂಡ ಡಾ. ರಾಜ್‍ಕುಮಾರ್ ಅವರ ಹುಟ್ಟುಹಬ್ಬದ ಬಗ್ಗೆ ಟ್ವೀಟ್ ಮಾಡಿತ್ತು. ರಾಯಲ್ ಚಾಲೆಂಜರ್ಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ, “ಅಣ್ಣಾವ್ರ ಹುಟ್ಟುಹಬ್ಬವನ್ನು ಯಾವ ರೀತಿ ಆಚರಿಸಿದ್ದೇವೆ, ಅಲ್ವಾ?” ಎಂದು ಬರೆದು ಹುಟ್ಟುಹಬ್ಬದ ಶುಭಾಶಯಗಳು ಡಾ. ರಾಜ್‍ಕುಮಾರ್ ಎಂದು ಹ್ಯಾಶ್‍ಟ್ಯಾಗ್ ಬಳಸಿ ಟ್ವೀಟ್ ಮಾಡಿತ್ತು.

    ಇನ್ನೊಂದು ವಿಶೇಷ ಏನೆಂದರೆ ಆರ್‌ಸಿಬಿ ಪಂದ್ಯವನ್ನು ವೀಕ್ಷಿಸಲು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಆಗಮಿಸಿದರು. ಶಿವರಾಜ್‍ಕುಮಾರ್ ಅವರ ಜೊತೆ ನಿರ್ದೇಶಕ ರಘುರಾಮ್ ಹಾಗೂ ನಿರ್ಮಾಪಕ ಶ್ರೀಕಾಂತ್ ಆಗಮಿಸಿದರು. ಮೂವರು ಪಂದ್ಯವನ್ನು ಸಾಕಷ್ಟು ಎಂಜಾಯ್ ಮಾಡಿದರು.

    ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ 202 ರನ್ ಬಾರಿಸಿ ಪಂಜಾಬ್‍ಗೆ 203 ರನ್ ಗುರಿ ನೀಡಿತ್ತು. 203 ಗುರಿ ಬೆನ್ನತ್ತ ಪಂಜಾಬ್ ತಂಡ 185 ರನ್ ಸಿಡಿಸಿ 17 ರನ್‍ಗಳಿಂದ ಸೋಲನ್ನು ಕಂಡಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ ಆಟಗಾರ ಎಬಿಡಿ 44 ಎಸೆತಗಳಲ್ಲಿ 82 ರನ್ ಸಿಡಿಸಿದರು.

  • ಎಫ್‍ಬಿ ವಾರ್ – ಡಿಸಿಎಂ ಬೆಂಬಲಿಗನ ಮೇಲೆ ಹಲ್ಲೆ

    ಎಫ್‍ಬಿ ವಾರ್ – ಡಿಸಿಎಂ ಬೆಂಬಲಿಗನ ಮೇಲೆ ಹಲ್ಲೆ

    ತುಮಕೂರು: ಮಾಜಿ ಸಚಿವ ರಮೇಶ್ ಜಾರಕಿಹೋಳಿಯನ್ನು ಫೇಸ್‍ಬುಕ್‍ನಲ್ಲಿ ನಿಂದಿಸಿದ್ದ ಡಿಸಿಎಂ ಜಿ. ಪರಮೇಶ್ವರ್ ಅವರ ಬೆಂಬಲಿಗನಿಗೆ ಜಾರಕಿಹೊಳಿ ಬೆಂಬಲಿಗರು ಗೂಸಾ ನೀಡಿದ್ದಾರೆ.

    ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಉಸ್ತುವಾರಿಯಾದ ಡಿಸಿಎಂ ಬೆಂಬಲಿಗ ದರ್ಶನ್ ಹಲ್ಲೆಗೊಳಗಾದ ವ್ಯಕ್ತಿ. ರಾಜೀನಾಮೆ ವಿಚಾರವಾಗಿ ಪೋಸ್ಟ್ ಮಾಡಿದ್ದ ದರ್ಶನ್, ರಮೇಶ್ ಜಾರಕಿಹೊಳಿ ಅವರನ್ನು ವೇಶ್ಯೆಗೆ ಹೋಲಿಕೆ ಮಾಡುವ ಮೂಲಕ ಟೀಕಿಸಿದ್ದರು.

    ಪೋಸ್ಟ್ ನಲ್ಲಿ ಏನಿದೆ?
    ಕಾಂಗ್ರೆಸ್ ಪಕ್ಷದಿಂದ ನೀನು ಅಷ್ಟೆ. ನಿನ್ನಿಂದ ಕಾಂಗ್ರೆಸ್ ಪಕ್ಷ ಅಲ್ಲಾ. ಅಲ್ಲದೆ ನೀನು ತುಕಾಲಿ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಲಾಗಿತ್ತು. ಬಳಿಕ ಎಂಜಲು ಕಾಸಿಗೆ ವೇಶ್ಯೆಯಂತೆ ಮೈಮಾರಿಕೊಳ್ತಿಯಾ ಎಂದು ಬರೆದು ಪೋಸ್ಟ್ ಮಾಡಲಾಗಿತ್ತು.

    ಈ ಪೋಸ್ಟ್ ನಿಂದ ರೊಚ್ಚಿಗೆದ್ದ ಜಾರಕಿಹೊಳಿ ಬೆಂಬಲಿಗರು ದರ್ಶನ್ ಮೇಲೆ ಹಲ್ಲೆ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಹಲ್ಲೆ ನಡೆಸಿ ಕ್ಷಮೆ ಕೇಳಿಸಿ ಜಾರಕಿಹೊಳಿ ಬೆಂಬಲಿಗರು ಫೇಸ್‍ಬುಕ್‍ನಲ್ಲಿ ಮತ್ತೆ ಪೋಸ್ಟ್ ಮಾಡಿದ್ದಾರೆ.

  • ನಿಖಿಲ್ ಗೆಲುವಿಗಾಗಿ ರಥೋತ್ಸವದಲ್ಲಿ ಹರಕೆ ಹೊತ್ತ ಅಭಿಮಾನಿಗಳು

    ನಿಖಿಲ್ ಗೆಲುವಿಗಾಗಿ ರಥೋತ್ಸವದಲ್ಲಿ ಹರಕೆ ಹೊತ್ತ ಅಭಿಮಾನಿಗಳು

    ಮಂಡ್ಯ: ಲೋಕಸಭಾ ಚುನಾವಣೆಯ ಮೈತ್ರಿ ಪಕ್ಷದ ಸ್ಪರ್ಧಿ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಅವರ ಅಭಿಮಾನಿಗಳು ರಥೋತ್ಸವದ ಸಂದರ್ಭದಲ್ಲಿ ಹರಕೆ ಹೊತ್ತಿದ್ದಾರೆ.

    ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ 7 ಗ್ರಾಮಗಳು ಸೇರಿ ಆಚರಿಸುವ ಪಟ್ಟಲದಮ್ಮ ದೇವಿ ರಥೋತ್ಸವದಲ್ಲಿ ಅಭಿಮಾನಿಗಳು ಹರಕೆ ಹೊತ್ತಿದ್ದರು. ಈ ರಥೋತ್ಸವ ಶನಿವಾರ ರಾತ್ರಿ ನಡೆದಿದ್ದು, ಈ ವೇಳೆ ಅಭಿಮಾನಿಗಳು ತಮ್ಮ ಹರಕೆಯನ್ನು ತೀರಿಸಿದ್ದಾರೆ.

    ಅಭಿಮಾನಿಗಳು ರಥೋತ್ಸವದ ವೇಳೆ ಎಸೆಯುವ ಬಾಳೆಹಣ್ಣಿನ ಮೇಲೆ ‘ನಿಖಿಲ್ ಎಲ್ಲಿದ್ದಿಯಪ್ಪ, ಸಂಸತ್ ಹೋಗೋಕ್ಕೆ ರೆಡಿ ಆಗುತ್ತಿದ್ದೀನಿ’, ‘ಕರ್ನಾಟಕಕ್ಕೆ ಕುಮಾರಣ್ಣ, ಮಂಡ್ಯಕ್ಕೆ ನಿಖಿಲ್ ಅಣ್ಣ’ ಹಾಗೂ ‘ಮಂಡ್ಯದ ಹೆಮ್ಮೆಯ ಎಂಪಿ ನಿಖಿಲ್’ ಎಂದು ಬರೆದಿದ್ದರು.

    ನಾವು ಹರಕೆ ಹೊತ್ತಿದ್ದನು ನೆನಪು ಮಾಡಿಕೊಂಡು ಶ್ರದ್ಧೆಯಿಂದ ರಥದ ಮೇಲೆ ಎಸದರೆ ತಮ್ಮ ಹರಕೆ ಈಡೇರುತ್ತದೆ ಎಂಬ ಪ್ರತೀತಿ ಇದೆ. ಹೀಗಾಗಿ ಅಭಿಮಾನಿಗಳು ಈ ರೀತಿ ಬಾಳೆಹಣ್ಣಿನ ಮೇಲೆ ಬರೆದು, ರಥೋತ್ಸವದ ವೇಳೆ ರಥದ ಮೇಲೆ ಹರಕೆಯಿಟ್ಟು ಎಸೆದಿದ್ದಾರೆ.

  • ನೀನು ಸಣ್ಣವನು, ಸಮಾಜ ಸೇವೆ ಮಾಡುವುದು ಹೇಗೆ ಎಂದು ಯಶ್ ನೋಡಿ ಕಲಿ: ನಿಖಿಲ್‍ಗೆ ಫ್ಯಾನ್ಸ್ ತಿರುಗೇಟು

    ನೀನು ಸಣ್ಣವನು, ಸಮಾಜ ಸೇವೆ ಮಾಡುವುದು ಹೇಗೆ ಎಂದು ಯಶ್ ನೋಡಿ ಕಲಿ: ನಿಖಿಲ್‍ಗೆ ಫ್ಯಾನ್ಸ್ ತಿರುಗೇಟು

    ಕೊಪ್ಪಳ: ರಾಕಿಂಗ್ ಸ್ಟಾರ್ ಯಶ್ ತಮ್ಮ ಮನೆ ಬಾಡಿಗೆ ಕಟ್ಟದವರು ನಮ್ಮ ಬಗ್ಗೆ ಟೀಕೆ ಮಾಡ್ತಾರೆ ಎಂದು ಮಂಡ್ಯ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ಕೊಪ್ಪಳದಲ್ಲಿ ಯಶ್ ಅಭಿಮಾನಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ನಿಖಿಲ್ ಹೇಳಿಕೆಗೆ ಯಶ್ ಅಭಿಮಾನಿಗಳು ತೀವ್ರವಾಗಿ ಆಕ್ಷೇಪ ಮಾಡುತ್ತಿದ್ದಾರೆ.

    ಯಶ್ ಏನು ಮಾಡಿದ್ದಾನೆ ಎಂದು ಕೊಪ್ಪಳಕ್ಕೆ ಬಂದು ನೋಡಿ. ಯಶ್ ಸ್ವತಃ ತಮ್ಮ ಹಣದಲ್ಲಿ ತಲ್ಲೂರು ಕೆರೆ ಹೂಳು ತೆಗೆಯುವ ಕೆಲಸ ಮಾಡಿದ್ದಾರೆ. ಯಶ್ ಕೆಲಸದಿಂದ ತಲ್ಲೂರು ಕೆರೆ ಸಂಪೂರ್ಣವಾಗಿ ಭರ್ತಿಯಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಯಶ್ 4 ಕೋಟಿ ವೆಚ್ಚದಲ್ಲಿ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆ ಅಭಿವೃದ್ಧಿಯಾಗಿದೆ. ಅಲ್ಲದೆ ಯಶೋಮಾರ್ಗದ ಮೂಲಕ ಯಶ್ ಕೆರೆ ಹೂಳೆತ್ತಿದ್ದಾರೆ. ನೀನು ಸಣ್ಣವನು, ಸಮಾಜ ಸೇವೆ ಮಾಡುವುದು ಹೇಗೆ ಎಂದು ಯಶ್ ನೋಡಿ ಕಲಿ ಎಂದು ಅಭಿಮಾನಿಗಳು ನಿಖಿಲ್‍ಗೆ ಟಾಂಗ್ ಕೊಟ್ಟಿದ್ದಾರೆ. ಸದ್ಯ ಯಶ್ ಅಭಿಮಾನಿಗಳ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

    ನಿಖಿಲ್ ಹೇಳಿದ್ದೇನು?
    ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಹಿರಿಮಗನೋ ಕಿರಿ ಮಗನೋ ಗೊತ್ತಿಲ್ಲ. ಬಾಡಿಗೆ ಮನೆಯವರಿಗೆ ಬಾಡಿಗೆ ಕೊಡದೇ ಇದ್ದವರು ನನ್ನ ಯೋಗ್ಯತೆ ಬಗ್ಗೆ ಮಾತನಾಡ್ತಾರೆ ಎಂದು ಬಹಿರಂಗವಾಗಿ ಯಶ್‍ಗೆ ಟಾಂಗ್ ಕೊಟ್ಟಿದ್ದರು.

    ಪಾಪ ಎಸಿಯಲ್ಲಿ ಕುಳಿತುಕೊಂಡು ಛತ್ರಿ ಹಿಡ್ಕೊಂಡು ಓಡಾಡುವವರಿಗೆ ಬಿಸಿಲಿನಲ್ಲಿ ಓಡಾಡೋದು ಕಷ್ಟ ಆಗ್ತಿರಬಹುದೆಂದು ಕುಮಾರಣ್ಣ ಹೇಳಿದ್ದರು. ಅದಕ್ಕೆ ಯಶ್, ದರ್ಶನ್ ಹಾಗೂ ಸುಮಲತಾ ಅವರು ಪ್ರತಿಕ್ರಿಯೆ ನೀಡಿದ್ದರು. ನಮ್ಮ ತಾತ ದೇವೇಗೌಡರು ಪ್ರಧಾನಿಯಾದಾಗ ನಾವು ಕತ್ರಿಗುಪ್ಪೆಯಲ್ಲಿ ಬಾಡಿಗೆ ಮನೆಯಲ್ಲಿದ್ದವರು. ಆಗ ನಮ್ಮ ತಾಯಿ 5 ಸಾವಿರ ರೂಪಾಯಿನಲ್ಲಿ ಮನೆ ನಿಭಾಯಿಸುತ್ತಿದ್ದರು. ಆದರೆ ಇವತ್ತು ಬಾಡಿಗೆ ಕೊಡದೇ ಇದ್ದವರು ಇಷ್ಟೆಲ್ಲಾ ಮಾತನಾಡುತ್ತಾರೆ. ನೀವು ನಮ್ಮ ತಂದೆ ತಾಯಂದಿರು. ನನ್ನ ತಂದೆ ಹಾಗೂ ತಾತನಿಗೆ ಹೃದಯದಲ್ಲಿ ಸ್ಥಾನ ಕೊಟ್ಟಿದ್ದೀರಿ. ಹಾಗೆಯೇ ನನಗೂ ಕೊಡುತ್ತೀರಿ ಅಂತ ಬಂದಿದ್ದೀನಿ ಎಂದು ಪ್ರಚಾರ ಮುಂದುವರಿಸಿದರು.