Tag: followers

  • ಫೋಟೋಗೆ ಪೋಸ್ ಕೊಡೋಕೆ ಸಹಾಯ ಮಾಡ್ತಾರೆ- ಅಪ್ಪಚ್ಚು ರಂಜನ್ ಬೆಂಬಲಿಗರ ವಿರುದ್ಧ ಆಕ್ರೋಶ

    ಫೋಟೋಗೆ ಪೋಸ್ ಕೊಡೋಕೆ ಸಹಾಯ ಮಾಡ್ತಾರೆ- ಅಪ್ಪಚ್ಚು ರಂಜನ್ ಬೆಂಬಲಿಗರ ವಿರುದ್ಧ ಆಕ್ರೋಶ

    ಮಡಿಕೇರಿ: ಕಷ್ಟದಲ್ಲಿದ್ದಾಗ ಬಂದಿಲ್ಲ, ಈಗ ಫೋಟೋಗೆ ಪೋಸ್ ಕೊಡೋಕೆ ಸಹಾಯ ಮಾಡುತ್ತಾರೆ ಎಂದು ಕೊಡಗಿನಲ್ಲಿ ಶಾಸಕರ ಅಪ್ಪಚ್ಚು ರಂಜನ್ ಬೆಂಬಲಿಗರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೊಡಗು ಜಿಲ್ಲೆಯ ಗುಡ್ಡೆಹೊಸರು ಸಮೀಪದ ತೆಪ್ಪದಕಂಡಿಯಲ್ಲಿ ಶನಿವಾರ ಕಾವೇರಿ ನೀರಿನ ರಭಸಕ್ಕೆ 4 ಮನೆಗಳು ಕುಸಿದು ಬಿದ್ದಿದ್ದವು. ಈ ವೇಳೆ ಯಾರೂ ಕೂಡ ಸಹಾಯಕ್ಕೆ ಬಾರದ ಹಿನ್ನೆಲೆಯಲ್ಲಿ ಸ್ವತಃ ತೆಪ್ಪದಕಂಡಿ ಗ್ರಾಮಸ್ಥರು ಮನೆಗಳ ಸಾಮಾಗ್ರಿಗಳನ್ನು ತೆರವು ಮಾಡಿದ್ದರು. ಆದರೆ ಇಂದು ಪರಿಸ್ಥಿತಿ ಹೇಗಿದೆ ಎಂದು ತಿಳಿಯಲು ಎರಡು ಜೀಪ್‍ನಲ್ಲಿ ಅಪ್ಪಚ್ಚು ರಂಜನ್ ಫೋಟೋ ಅಂಟಿಸಿಕೊಂಡು ಅವರ ಬೆಂಬಲಿಗರು ಸ್ಥಳಕ್ಕೆ ಬಂದಿದ್ದರು. ಆಗ ಗ್ರಾಮಸ್ಥರು, ಮನೆಗಳು ಬಿದ್ದು ಜನರು ಸಂಕಷ್ಟದಲ್ಲಿ ಇದ್ದಾಗ ಬಾರದ ನೀವು ಈವಾಗ ಏಕೆ ಬಂದಿದ್ದೀರಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಬೆಂಬಲಿಗರು ಅಪ್ಪಚ್ಚು ರಂಜನ್ ಕ್ಷೀಪ್ರ ಕಾರ್ಯಾಚರಣೆ ತಂಡ ಕಟ್ಟಿಕೊಂಡು ಸಹಾಯ ಮಾಡುತ್ತಿದ್ದಾರೆ. ಆದರೆ ಇವರು ಶ್ರೀಮಂತರಿಗೆ ಮಾತ್ರ ಸಹಾಯ ಮಾಡುತ್ತಾರೆ. ಫೋಟೋಗೆ ಪೋಸ್ ಕೊಡೋಕೆ ಸಹಾಯ ಮಾಡ್ತಾರೆ ಎಂದು ತೆಪ್ಪದಕಂಡಿಯ ಜನರು ಅಪ್ಪಚ್ಚು ರಂಜನ್ ವಿರುದ್ಧ ಘೋಷಣೆ ಕೂಗಿ, ತಾರತಮ್ಯ ಮಾಡುತ್ತಿದ್ದೀರಾ ಎಂದು ಕಿಡಿಕಾರಿದ್ದಾರೆ.

    ಕೊಡಗಿನಲ್ಲಿ ಸುರಿಯುತ್ತಿರುವ ಮಳೆ ಭಾರೀ ಅವಾಂತರವನ್ನು ಸೃಷ್ಟಿಸಿದೆ. ಒಂದೆಡೆ ಪ್ರವಾಹದಿಂದ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಇನ್ನೊಂದೆಡೆ ಕಡೆ ಪದೇ ಪದೇ ಗುಡ್ಡ ಹಾಗೂ ಭೂ ಕುಸಿತ ಉಂಟಾಗಿ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಅಲ್ಲದೆ ಎನ್‍ಡಿಆರ್‍ಎಫ್ ತಂಡ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.

  • ನಟಿಗಾಗಿ ದೇವಾಲಯ ಕಟ್ಟಿದ್ದನ್ನು ಸ್ಮರಿಸಿ ಅಭಿಮಾನಿಗಳನ್ನು ಹೊಗಳಿದ ರಶ್ಮಿಕಾ

    ನಟಿಗಾಗಿ ದೇವಾಲಯ ಕಟ್ಟಿದ್ದನ್ನು ಸ್ಮರಿಸಿ ಅಭಿಮಾನಿಗಳನ್ನು ಹೊಗಳಿದ ರಶ್ಮಿಕಾ

    ಹೈದರಾಬಾದ್: ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಅವರು ನಟಿ ಖುಷ್ಬೂಗಾಗಿ ದೇವಾಲಯ ಕಟ್ಟಿದ್ದನ್ನು ಸ್ಮರಿಸಿ ಅಭಿಮಾನಿಗಳನ್ನು ಹೊಗಳಿದ್ದಾರೆ.

    ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರು ತೆಲುಗು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ರಶ್ಮಿಕಾ, “90ರ ದಶಕದಲ್ಲಿ ನಟಿ ಖುಷ್ಬೂ ಅವರಿಗೆ ಅಭಿಮಾನಿಗಳು ದೇವಾಲಯ ಕಟ್ಟಿಸಿದ್ದರು ಎಂದು ನನ್ನ ತಂದೆ ನನಗೆ ಹೇಳಿದ್ದರು. ಹಾಗೆಯೇ ನಾನು ಕೂಡ ಒಳ್ಳೆಯ ಸಿನಿಮಾ ಮಾಡುವ ಮೂಲಕ ನಾನು ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಇರಬೇಕು” ಎಂಬ ಆಸೆಯನ್ನು ಹೊರಹಾಕಿದ್ದರು.

    ಅಭಿಮಾನಿಗಳು ದೇವಾಲಯ ಕಟ್ಟಿಸಲಿ ಎಂದು ರಶ್ಮಿಕಾ ನೇರವಾಗಿ ಹೇಳಲಿಲ್ಲ. ಆದರೆ ಅವರ ಮಾತಿನ ಅರ್ಥ ಅಭಿಮಾನಿಗಳು ದೇವಾಲಯ ಕಟ್ಟಿಸಲಿ ಎಂದು ಹೇಳಲಾಗುತ್ತಿದೆ. 90ರ ದಶಕದಲ್ಲಿ ಕಟ್ಟಿಸಿದ ಖುಷ್ಬೂ ದೇವಾಲಯವನ್ನು ಅವರ ಅಭಿಮಾನಿಗಳೇ ಒಡೆದು ಹಾಕಿದ್ದಾರೆ. ಆದರೆ ಈ ವಿಷಯವನ್ನು ರಶ್ಮಿಕಾ ಅವರ ತಂದೆ ತಮ್ಮ ಮಗಳ ಬಳಿ ರಿವೀಲ್ ಮಾಡಲಿಲ್ಲ ಎಂದು ವರದಿಯಾಗಿದೆ.

    ರಶ್ಮಿಕಾ ಮಂದಣ್ಣ ಕೊನೆಯದಾಗಿ ನಟ ವಿಜಯ್ ದೇವರಕೊಂಡ ಜೊತೆ ‘ಡಿಯರ್ ಕಾಮ್ರೆಡ್’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಜುಲೈ 26ರಂದು ನಾಲ್ಕು ಭಾಷೆಯಲ್ಲಿ ಬಿಡುಗಡೆಯಾಗಿದ್ದು, ಭರತ್ ಕಮ್ಮಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರ ವಿದ್ಯಾರ್ಥಿ ಸಂಘದ ನಾಯಕ ಓರ್ವ ಕ್ರಿಕೆಟ್ ಆಟಗಾರ್ತಿಗೆ ಮನಸೋತು, ಅವರಿಬ್ಬರ ನಡುವಿನ ಪ್ರೀತಿ, ಸಿಟ್ಟು, ಗಲಾಟೆಗಳ ರೋಮ್ಯಾಂಟಿಕ್ ಪ್ರೇಮ ಕಥನವಾಗಿದೆ.

  • ಅಭಿಮಾನಿ ಬಳಿ ಕ್ಷಮೆ ಕೇಳಿದ ಸನ್ನಿ ಲಿಯೋನ್

    ಅಭಿಮಾನಿ ಬಳಿ ಕ್ಷಮೆ ಕೇಳಿದ ಸನ್ನಿ ಲಿಯೋನ್

    ಮುಂಬೈ: ಬಾಲಿವುಡ್ ನಟಿ ಸನ್ನಿ ಲಿಯೋನ್ ಸಿನಿಮಾದಲ್ಲಿ ಫೋನ್ ನಂಬರ್ ಬಳಸಿಕೊಂಡಿದ್ದಕ್ಕೆ ಅಭಿಮಾನಿ ಬಳಿ ಕ್ಷಮೆ ಕೇಳಿದ್ದಾರೆ.

    ಇತ್ತೀಚೆಗೆ ಸನ್ನಿ ಲಿಯೋನ್ ಖಾಸಗಿ ಚಾನೆಲ್‍ನ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಸನ್ನಿ ಲಿಯೋನ್ ಚಿತ್ರದ ದೃಶ್ಯವೊಂದರಲ್ಲಿ ನಿಮ್ಮ ಫೋನ್ ನಂಬರ್ ದುರುಪಯೋಗಿಸಿದ್ದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಅಲ್ಲದೆ ನಿಮಗೆ ಈ ರೀತಿ ಆಗಬೇಕು ಎಂದು ನಾನು ಮಾಡಿಲ್ಲ ಎಂದು ಹೇಳಿದ್ದಾರೆ.

    ಜುಲೈ 26ರಂದು ‘ಅರ್ಜುನ ಪಟಿಯಾಲಾ’ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾದ ದೃಶ್ಯವೊಂದರಲ್ಲಿ ನಟಿ ಸನ್ನಿ ಲಿಯೋನ್ ತಮ್ಮ ಮೊಬೈಲ್ ನಂಬರ್ ತಿಳಿಸುತ್ತಾರೆ. ಇದು ನಿಜವಾಗಿಯೂ ಸನ್ನಿ ಲಿಯೋನ್ ನಂಬರ್ ಎಂದು ತಿಳಿದುಕೊಂಡಿದ್ದ ಅಭಿಮಾನಿಗಳು ಕರೆ ಮಾಡಲು ಶುರು ಮಾಡಿದ್ದಾರೆ. ಆದರೆ ಈ ನಂಬರ್ ದೆಹಲಿಯ ಪೀತಮಪುರದ ಯುವಕ ಪುನೀತ್ ಅಗರ್ ವಾಲ್ ಅವರ ಆಗಿದ್ದು, ನಾನು ಬಾಲಿವುಡ್ ನಟಿ ಸನ್ನಿ ಲಿಯೋನ್ ಅಲ್ಲ, ಪ್ಲೀಸ್ ಕರೆ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದರು.

    ಈ ರೀತಿಯ ಕರೆಗಳಿಂದ ಬೇಸತ್ತ ಪುನೀತ್ ಜುಲೈ 30ರಂದು ಸ್ಥಳೀಯ ಮೌರ್ಯ ಏಕಲವ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡಿರುವ ಪೊಲೀಸರು, ಸೈಬರ್ ತಜ್ಞರೊಂದಿಗೆ ಚರ್ಚಿಸಿ ತನಿಖೆ ಆರಂಭಿಸಿದ್ದರು. ಸನ್ನಿ ಲಿಯೋನ್ ಸಿನಿಮಾದಲ್ಲಿ ನನ್ನ ನಂಬರ್ ಹೇಳಿದ್ದರಿಂದ ಹಲವರು ವಿದೇಶಗಳಿಂದಲೂ ಕರೆ ಮಾಡಿ ಮಾತನಾಡುತ್ತಿದ್ದಾರೆ. ನಾನು ಸನ್ನಿ ಲಿಯೋನ್ ಅಲ್ಲ ಎಂದು ತಿಳಿಸಲು ಪ್ರಯತ್ನಿಸಿದ್ರೆ ಅವಾಚ್ಯ ಪದಗಳಿಂದ ನಿಂದಿಸಲು ಆರಂಭಿಸುತ್ತಾರೆ ಎಂದು ಪುನೀತ್ ದೂರಿನಲ್ಲಿ ಉಲ್ಲೇಖಿಸಿದ್ದರು.

    ಸಿನಿಮಾ ಬಿಡುಗಡೆಯಾಗಿದ್ದು, ಇದೂವರೆಗೂ ಸುಮಾರು 500ಕ್ಕೂ ಹೆಚ್ಚು ಕರೆಗಳನ್ನು ನಾನು ಸ್ವೀಕರಿಸಿದ್ದೇನೆ. ಆದರೆ ಎಲ್ಲ ಕರೆಗಳಿಗೂ ನಾನು ಸನ್ನಿ ಲಿಯೋನ್ ಅಲ್ಲ ಎಂದು ಹೇಳುತ್ತಿದ್ದೇನೆ. ಮೊಬೈಲ್ ನಂಬರ್ ಬಳಸುವ ಮುನ್ನ ಚಿತ್ರತಂಡ ನನ್ನ ಅನುಮತಿ ಪಡೆದುಕೊಂಡಿಲ್ಲ ಎಂದು ಪುನೀತ್ ಆರೋಪಿಸಿದ್ದಾರೆ. ಕರೆ ಮಾಡಿದ ಬಹುತೇಕರು ಭೇಟಿಯಾಗುವ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದಾರೆ. ಭೇಟಿಗೆ ಒಪ್ಪದಿದ್ದರೆ ನಿಂದಿಸಲು ಆರಂಭಿಸುತ್ತಾರೆ. ಇದರಿಂದ ಮಾನಸಿಕವಾಗಿ ನೊಂದು ಪುನೀತ್ ದೂರು ದಾಖಲಿಸಿದ್ದರು.

  • ಸಿಂಧೂರ, ತಾಳಿ ಹಾಕಿ ಅಭಿಮಾನಿಗಳ ಮುಂದೆ ಬಂದ ರಾಖಿ ಸಾವಂತ್

    ಸಿಂಧೂರ, ತಾಳಿ ಹಾಕಿ ಅಭಿಮಾನಿಗಳ ಮುಂದೆ ಬಂದ ರಾಖಿ ಸಾವಂತ್

    ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಹಣೆಯಲ್ಲಿ ಸಿಂಧೂರ ಇಟ್ಟು, ತಾಳಿ ಕಟ್ಟಿಸಿಕೊಂಡು ಇನ್‍ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ರಾಖಿ ಸಾವಂತ್ ಮದುವೆ ಮಾಡಿಕೊಂಡರಾ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

    ರಾಖಿ ಸಾವಂತ್ ತನ್ನ ಇನ್‍ಸ್ಟಾಗ್ರಾಂನಲ್ಲಿ ವೆಬ್ ಸಿರೀಸ್ ಬಗ್ಗೆ ಮಾತನಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಾಖಿ ಅವರ ಕುತ್ತಿಗೆಯಲ್ಲಿ ತಾಳಿ ಹಾಗೂ ಹಣೆಯಲ್ಲಿ ಸಿಂಧೂರ ಇಟ್ಟುಕೊಂಡಿದ್ದಾರೆ. ಹಾಗಾಗಿ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ರಾಖಿ ಅವರನ್ನು ಪ್ರಶ್ನಿಸುತ್ತಿದ್ದಾರೆ.

    ಈ ಪೋಸ್ಟ್ ನೋಡಿ ಕೆಲವರು, ಅರೇ. ಏನಿದು? ನಿಮ್ಮನ್ನು ಯಾರು ಮದುವೆ ಮಾಡಿಕೊಂಡಿದ್ದಾರೆ? ಎಂದು ಆಶ್ಚರ್ಯವಾಗುವ ರೀತಿ ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನೀವು ಕ್ರೈಸ್ತ ಧರ್ಮದವರು ಹಣೆಯಲ್ಲಿ ಏಕೆ ಸಿಂಧೂರ ಇಟ್ಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

    ಮೂರು ದಿನಗಳ ಹಿಂದೆ ರಾಖಿ ಸಾವಂತ್ ಅವರು ಎನ್‍ಆರ್‍ಐ ಯುವಕನ ಜೊತೆ ಗೌಪ್ಯವಾಗಿ ಮದುವೆ ಆಗಿದ್ದಾರೆ ಎಂಬ ಸುದ್ದಿ ಬಿ-ಟೌನ್‍ನಲ್ಲಿ ಹರಿದಾಡುತಿತ್ತು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ರಾಖಿ, “ನಾನು ಮದುವೆಯಾಗಿಲ್ಲ. ಕೆಲವು ಓಟಿಟಿ ಪ್ಲಾಟ್‍ಫಾರ್ಮ್ ಗೆ ನಾನು ಬ್ರೈಡಲ್ ಲುಕ್‍ನಲ್ಲಿ ಫೋಟೋಶೂಟ್ ಮಾಡಿಸಿದೆ ಎಂದು ಸ್ಪಷ್ಟನೆ ನೀಡಿದ್ದರು.

    ಕಳೆದ ವರ್ಷ ರಾಖಿ ಸಾವಂತ್ ಖಾಸಗಿ ಕಾರ್ಯಕ್ರಮದಲ್ಲಿ ಪ್ರಸಾರವಾಗುವ ‘ಇಂಡಿಯಾ ಗಾಟ್ ಟ್ಯಾಲೆಂಟ್’ನ ಸ್ಪರ್ಧಿ ದೀಪಕ್ ಕಲಾಲ್ ಅವರನ್ನು ಮದುವೆ ಆಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಆದರೆ ರಾಖಿ ಅವರನ್ನು ಮದುವೆಯಾಗಲಿಲ್ಲ.

  • ಒಂದು ಪೋಸ್ಟ್ ಮೂಲಕ ಕನ್ನಡಿಗರ ಮನಸ್ಸು ಗೆದ್ದ ಅನುಷ್ಕಾ

    ಒಂದು ಪೋಸ್ಟ್ ಮೂಲಕ ಕನ್ನಡಿಗರ ಮನಸ್ಸು ಗೆದ್ದ ಅನುಷ್ಕಾ

    ಹೈದರಾಬಾದ್: ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ತಮ್ಮ ತಾಯಿಗೆ ಕನ್ನಡದಲ್ಲಿ ಹುಟ್ಟುಹಬ್ಬ ಶುಭಾಶಯ ತಿಳಿಸುವ ಮೂಲಕ ಕೋಟ್ಯಂತರ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ.

    ಅನುಷ್ಕಾ ಶೆಟ್ಟಿ ಅವರ ತಾಯಿ ಪ್ರಫುಲ್ಲಾ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ನಟಿ ಅನುಷ್ಕಾ ಶೆಟ್ಟಿ ಅವರು ತಮ್ಮ ತಾಯಿ ಸೇರಿದಂತೆ ಹಾಗೂ ಬೇರೆಯವರ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಈ ಫೋಟೋ ಹಾಕಿ ಅದಕ್ಕೆ, “ಜನ್ಮ ದಿನದ ಹಾರ್ದಿಕ ಶುಭಾಶಯಗಳು ಅಮ್ಮಾ” ಎಂದು ಬರೆದಿದ್ದಾರೆ. ಅನುಷ್ಕಾ ಶೆಟ್ಟಿ ಅವರ ಕನ್ನಡ ಪ್ರೇಮ ನೋಡಿ ಅಭಿಮಾನಿಗಳು ಖುಷಿಯಾಗಿದ್ದು, ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಕೆಲವರು ಈ ಪೋಸ್ಟ್ ಗೆ “ಅನುಷ್ಕಾ ಶೆಟ್ಟಿಯವರೆ ನಿಮ್ಮ ಕನ್ನಡ ಪ್ರೇಮ ಕಂಡು ಸಂತೋಷವಾಯಿತು. ಪರಭಾಷೆಯಲ್ಲಿ ಅತ್ಯಂತ ಬೇಡಿಕೆ ನಟಿ ನೀವು. ನಾನು ಅಂದುಕೊಂಡಿದ್ದೆ ನೀವು ಕನ್ನಡ ಮರಿಯುತ್ತಿದ್ದಿರಾ ಎಂದು ಆದರೆ ಅದನ್ನು ನೀವು ಸುಳ್ಳಾಗಿಸಿದಿರಿ. ನಿಮ್ಮ ಕನ್ನಡ ಪ್ರೇಮ ಕಂಡು ನಿಮ್ಮ ಬಗ್ಗೆ ನನಗೆ ಗೌರವ ಉಂಟಾಗಿದೆ. ನಿಮಗೆ ನನ್ನ ಕಡೆಯಿಂದ ಧನ್ಯವಾದಗಳು. ಹಾಗೆಯೇ ನನ್ನ ಕಡೆಯಿಂದ ನಿಮ್ಮ ಅಮ್ಮನಿಗೆ ಹುಟ್ಟು ಹಬ್ಬದ ಶುಭಾಶಯಗಳು” ಎಂದು ಕಮೆಂಟ್ ಮಾಡಿದ್ದಾರೆ.

    ಮತ್ತೆ ಕೆಲವರು, “ಈ ಒಂದು ಪೋಸ್ಟ್ ನಿಂದ ನೀವು ಕೋಟ್ಯಂತರ ಕನ್ನಡಿಗರ ಅಭಿಮಾನ ಗೆದ್ದುಬಿಟ್ಟಿರಿ” ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು “ತನ್ನ ತಾಯಿಗೆ ತನ್ನ ಮಾತೃ ಭಾಷೆ ಮೂಲಕ ಶುಭಾಶಯ ಕೋರಿದ ಕನ್ನಡತಿ ಅನುಷ್ಕಾ ಶೆಟ್ಟಿ ಅವರಿಗೆ ಧನ್ಯವಾದಗಳು. ನೀವು ಮನಸ್ಸು ಮಾಡಿದರೆ ನಿಮಗೆ ಅಪಾರ ಯಶಸ್ಸು, ಜನಪ್ರಿಯತೆ ತಂದು ಕೊಟ್ಟ ತೆಲುಗು ಭಾಷೆಯಲ್ಲಿ ಶುಭಾಶಯ ಹೇಳಬಹುದಿತ್ತು. ಆದರೆ ನೀವು ನಿಮ್ಮ ತಾಯ್ನಾಡು ಹಾಗೂ ತಾಯ್ನುಡಿಯನ್ನು ಮರೆಯಲಿಲ್ಲ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಹಿಂದೆ ಅಭಿಮಾನಿಯೊಬ್ಬರು ಅನುಷ್ಕಾರಿಗೆ ಕನ್ನಡ ಸಿನಿಮಾದಲ್ಲಿ ನೀವು ನಟಿಸುತ್ತೀರಾ ಎಂದು ಪ್ರಶ್ನಿಸಿದ್ದರು. ಈ ವೇಳೆ ಅನುಷ್ಕಾ ಶೆಟ್ಟಿ ಸ್ಕ್ರಿಪ್ಟ್ ಚೆನ್ನಾಗಿದ್ದರೆ ಖಂಡಿತ ನಟಿಸುತ್ತೇನೆ ಎಂದು ಕನ್ನಡದಲ್ಲಿ ಉತ್ತರಿಸಿದ್ದರು. ಮೂಲತಃ ಕನ್ನಡ ಕರಾವಳಿಯ ಹುಡುಗಿಯಾಗಿರುವ ಅನುಷ್ಕಾ ಬೆಂಗಳೂರು ಮಹಾನಗರದಲ್ಲಿ ಹುಟ್ಟಿ ಬೆಳೆದಿದ್ದಾರೆ.

  • ಅಸ್ಸಾಂ ರಾಯಭಾರಿಯಾಗಿ ಜನ್ರಿಗೆ ಸಹಾಯ ಮಾಡ್ಬೇಕು, ಪತಿ ಜೊತೆ ರೊಮ್ಯಾನ್ಸ್ ಅಲ್ಲ: ಪ್ರಿಯಾಂಕಾ ಟ್ರೋಲ್

    ಅಸ್ಸಾಂ ರಾಯಭಾರಿಯಾಗಿ ಜನ್ರಿಗೆ ಸಹಾಯ ಮಾಡ್ಬೇಕು, ಪತಿ ಜೊತೆ ರೊಮ್ಯಾನ್ಸ್ ಅಲ್ಲ: ಪ್ರಿಯಾಂಕಾ ಟ್ರೋಲ್

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಪತಿ, ಗಾಯಕ ನಿಕ್ ಜೋನಸ್ ಅವರ ಜೊತೆ ರೊಮ್ಯಾಂಟಿಕ್ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಇದೀಗ ಟ್ರೋಲ್ ಆಗುತ್ತಿದ್ದಾರೆ.

    ಪ್ರಿಯಾಂಕಾ ತಮ್ಮ ಹುಟ್ಟುಹಬ್ಬವನ್ನು ಮಿಯಾಮಿಯಲ್ಲಿ ಆಚರಿಸಿಕೊಂಡಿದ್ದಾರೆ. ಮಿಯಾಮಿಯಲ್ಲಿ ತೆಗೆದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈಗ ಅವರು ತಮ್ಮ ಪತಿ ನಿಕ್ ಜೊತೆಯಿರುವ ರೊಮ್ಯಾಂಟಿಕ್ ಫೋಟೋ ಪೋಸ್ಟ್ ಮಾಡಿ ಟ್ರೋಲ್ ಆಗುತ್ತಿದ್ದಾರೆ.

     

    View this post on Instagram

     

    My ????

    A post shared by Priyanka Chopra Jonas (@priyankachopra) on

    ಪ್ರಿಯಾಂಕಾ ನೀವು ಅಸ್ಸಾಂನ ರಾಯಭಾರಿ. ಅಸ್ಸಾಂನ ಜನರು ಈಗ ತೊಂದರೆಯಲ್ಲಿ ಇದ್ದಾರೆ. ಹೀಗಿರುವಾಗ ನೀವು ಬಹಿರಂಗವಾಗಿ ರೊಮ್ಯಾನ್ಸ್ ಮಾಡುತ್ತಿರುವುದು ನಿಮಗೆ ಶೋಭೆ ತರುವುದಿಲ್ಲ ಎಂದು ಕೆಲವರು ಕಮೆಂಟ್ ಮಾಡಿ ಟ್ರೋಲ್ ಮಾಡಿದ್ದಾರೆ. ಮತ್ತೆ ಕೆಲವರು ಪ್ರಿಯಾಂಕಾ ಅವರ ಉಡುಪು ನೋಡಿ ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

    ಅಲ್ಲದೆ ಕೆಲವರು, “ನಿಮಗೆ ಸ್ವಲ್ಪ ಕೂಡ ನಾಚಿಕೆ ಆಗುವುದಿಲ್ವಾ? ಅಸ್ಸಾಂನಲ್ಲಿ ಪ್ರವಾಹ ಬಂದಿದೆ. ಅಸ್ಸಾಂನ ರಾಯಭಾರಿ ಆಗಿ ನೀವು ಅಲ್ಲಿನ ಜನರಿಗೆ ಸಹಾಯ ಮಾಡಬೇಕು. ಅದನ್ನು ಬಿಟ್ಟು ನೀವು ಧೂಮಪಾನ ಮಾಡುತ್ತಾ ಪತಿ ಜೊತೆ ಎಂಜಾಯ್ ಮಾಡುತ್ತಿದ್ದೀರಾ. ನೀವು ಅಸ್ಸಾಂನ ರಾಯಭಾರಿ ಆಗಿರಬಾರದು. ನಿಮ್ಮಗಿಂತ ಒಳ್ಳೆಯವರು ಇಲ್ಲಿ ತುಂಬಾ ಜನ ಇದ್ದಾರೆ ಎಂದು ಕಮೆಂಟ್ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

    ಈ ಹಿಂದೆ ಪ್ರಿಯಾಂಕಾ ಪತಿ ನಿಕ್, ತಾಯಿ ಮಧು ಚೋಪ್ರಾ ಹಾಗೂ ಆತ್ಮೀಯ ಸ್ನೇಹಿತರ ಜೊತೆಗೆ ಕುಳಿತು ಸಿಗರೇಟ್ ಸೇದುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ಫೋಟೋವನ್ನು ಶೇರ್ ಮಾಡುತ್ತಿರುವ ಟ್ವಿಟ್ಟರಿಗರು ಪ್ರಿಯಾಂಕಾ ಅವರ ಕಾಲೆಳೆದಿದ್ದರು. ಪ್ರಿಯಾಂಕಾ ಸಿಗರೇಟ್ ಸೇದುತ್ತಿರುವ ಫೋಟೋವನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡ ನೆಟ್ಟಿಗರು, ದೀಪಾವಳಿಯ ಪಟಾಕಿಯಿಂದ ಹೆಚ್ಚಾಗಿದ್ದ ಅಸ್ತಮಾವನ್ನು ಸಿಗರೇಟ್ ಸೇದುವ ಮೂಲಕ ಗುಣಪಡಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದರು.

  • ಅದ್ಭುತ ಆತ್ಮ ಇನ್ನಿಲ್ಲವೆಂದು ಒಪ್ಪಿಕೊಳ್ಳಲು ಸಾಧ್ಯವಾಗ್ತಿಲ್ಲ: ಸುದೀಪ್ ಕಂಬನಿ

    ಅದ್ಭುತ ಆತ್ಮ ಇನ್ನಿಲ್ಲವೆಂದು ಒಪ್ಪಿಕೊಳ್ಳಲು ಸಾಧ್ಯವಾಗ್ತಿಲ್ಲ: ಸುದೀಪ್ ಕಂಬನಿ

    ಬೆಂಗಳೂರು: ಕಿಚ್ಚ ಸುದೀಪ್ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಅಭಿಮಾನಿಗಾಗಿ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

    ಕಿಚ್ಚ ಸುದೀಪ್ ಅಭಿಮಾನಿ ಸಂಘದ ತುಮಕೂರು ಜಿಲ್ಲಾ ಮಾಜಿ ಉಪಾಧ್ಯಕ್ಷರಾಗಿದ್ದ ಪುನೀತ್ ಶನಿವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ವಿಷಯ ತಿಳಿದ ಕಿಚ್ಚ ಸುದೀಪ್ ಅವರು ತಮ್ಮ ಅಭಿಮಾನಿಯ ಬಗ್ಗೆ ಟ್ವೀಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಪುನೀತ್ ಆರ್ಯ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ. ಈ ಅದ್ಭುತ ಆತ್ಮ ಇನ್ನಿಲ್ಲ ಎಂದು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಲವು ವರ್ಷಗಳಿಂದ ಪುನೀತ್ ನನ್ನ ಅಭಿಮಾನಿ ಹಾಗೂ ಸಹೋದರರಾಗಿದ್ದರು. ಬಹಳ ಬೇಸರವಾಗುತ್ತಿದೆ. ನಾನು ಪುನೀತ್‍ರನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಬರೆದುಕೊಳ್ಳುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

    ಆಗಿದ್ದೇನು?
    ಶನಿವಾರ ರಾತ್ರಿ ತುಮಕೂರಿನ ಹನುಮಂತಪುರದ ಪಂಜಾಬಿ ಡಾಬಾ ಬಳಿ ಪು-ನೀತ್ ಬೈಕ್ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದಿತ್ತು. ಅಪಘಾತ ಬಳಿಕ ಪುನೀತ್ ಇಬ್ಬರು ಸ್ನೇಹಿತರಿಗೆ ಫೋನ್ ಮಾಡಿದ್ದರು. ಆದರೆ ತಡರಾತ್ರಿಯಾಗಿದ್ದರಿಂದ ಇಬ್ಬರು ಸ್ನೇಹಿತರು ಫೋನ್ ರಿಸೀವ್ ಮಾಡಿಲ್ಲ. ಕೊನೆಗೆ ಅಪಘಾತದಲ್ಲಿ ತೀವ್ರ ರಕ್ತ ಸ್ರಾವದಿಂದ ನಿತ್ರಾಣಗೊಂಡು ಸ್ಥಳದಲ್ಲೇ ಪುನೀತ್ ಮೃತಪಟ್ಟಿದ್ದರು.

  • 4 ಲಕ್ಷ ಇನ್‍ಸ್ಟಾ ಅಭಿಮಾನಿಗಳಿಗಾಗಿ ಪ್ರಿಯಕರನಿಗೆ ಕೈಕೊಟ್ಟ ಮಾಡೆಲ್

    4 ಲಕ್ಷ ಇನ್‍ಸ್ಟಾ ಅಭಿಮಾನಿಗಳಿಗಾಗಿ ಪ್ರಿಯಕರನಿಗೆ ಕೈಕೊಟ್ಟ ಮಾಡೆಲ್

    ವಾಷಿಂಗ್ಟನ್: ತನ್ನನ್ನು ತಾನು ಇನ್‍ಸ್ಟಾಗ್ರಾಂ ಮಾಡೆಲ್ ಎಂದು ತಿಳಿದಿರುವ ಯುವತಿಯೊಬ್ಬಳು ಅಭಿಮಾನಿಗಳಿಗಾಗಿ ಪ್ರಿಯಕರನಿಗೆ ಕೈಕೊಟ್ಟಿದ್ದಾಳೆ.

    22 ವರ್ಷದ ಯುವತಿ ಇನ್‍ಸ್ಟಾಗ್ರಾಂನಲ್ಲಿ 4,50,000 ಫಾಲೋವರ್ಸ್​​​ಗಳನ್ನು ಹೊಂದಿದ್ದಾಳೆ. ಅಲ್ಲದೆ ಯುವತಿ ತನ್ನ ಪ್ರಿಯಕರನ ಜೊತೆ ರಜೆ ದಿನಗಳನ್ನು ಕಳೆಯಲು ಮೆಕ್ಸಿಕೋಗೆ ಹೋಗಿದ್ದಳು. ಈ ವೇಳೆ ಪ್ರಿಯಕರ ತನ್ನ ಜೊತೆಗಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಲು ಹೇಳಿದ್ದಾನೆ. ಆದರೆ ಯುವತಿ ಫೋಟೋ ಅಪ್ಲೋಡ್ ಮಾಡಿದ್ದರೆ ಫಾಲೋವರ್ಸ್ ಹಾಗೂ ಬುಸಿನೆಸ್ ಪ್ರಾಯೋಜಕರು ಕಡಿಮೆ ಆಗುತ್ತಾರೆ ಎಂಬ ಭಯದಿಂದ ತನ್ನ ಪ್ರಿಯಕರನ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾಳೆ.

    ಯುವತಿ IGAZmodel ಎಂಬ ಹೆಸರಿನಲ್ಲಿ ಇನ್‍ಸ್ಟಾಗ್ರಾಂ ಖಾತೆ ತೆರೆದಿದ್ದಾಳೆ. ಯುವತಿ ತನ್ನ ರೇಡಿಟ್ ಅಕೌಂಟ್‍ನಲ್ಲಿ, ನಾನು ಯಶಸ್ವಿ ಇನ್‍ಸ್ಟಾಗ್ರಾಂ ಖಾತೆಯನ್ನು ಹೊಂದಿದ್ದೇನೆ. ನನ್ನ ಪ್ರಿಯಕರನ ಜೊತೆಗಿರುವ ಫೋಟೋವನ್ನು ಹಂಚಿಕೊಂಡರೆ ನನ್ನ ಹಾಗೂ ನನ್ನ ಫಾಲೋವರ್ಸ್ ಮೇಲೆ ಪ್ರಭಾವ ಬೀರುತ್ತದೆ. ಇದರಿಂದಾಗಿ ನನಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಬಹುದು ಎಂದು ಬರೆದುಕೊಂಡಿದ್ದಾಳೆ.

    ನಾವು ಎಷ್ಟು ಬೇಕಾದರೂ ಪ್ರೈವೇಟ್ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಬಹುದು, ನಾವು ಲಾಂಗ್ ವಾಕ್‍ಗೆ ಹೋಗಬಹುದು, ಸೆಕ್ಸ್ ಮಾಡಬಹುದು, ಸ್ವಿಮ್ಮಿಂಗ್ ಪೂಲ್‍ನಲ್ಲಿ ಮಲಗುವುದರಿಂದ ನನಗೆ ಯಾವುದೇ ತೊಂದರೆ ಇಲ್ಲ. ಆದರೆ ನನಗೆ ನನ್ನ ಇನ್‍ಸ್ಟಾಗ್ರಾಂ ಖಾತೆ ಪ್ರತ್ಯೇಕವಾಗಿರಬೇಕು ಎಂದು ಅದರಲ್ಲಿ ಉಲ್ಲೇಖಿಸಿದ್ದಾಳೆ.

    ಯುವತಿ ತನ್ನ ಹೆಸರನ್ನು ಹೇಳಿಕೊಂಡಿಲ್ಲ. ಅಲ್ಲದೆ ತನ್ನ ಪ್ರಿಯಕರ ಹೆಸರನ್ನು ಹಾಗೂ ವಯಸ್ಸನ್ನು ಕೂಡ ಹೇಳಲಿಲ್ಲ. ಈ ಬಗ್ಗೆ ಮಾತನಾಡಿದ ಯುವತಿ, ನಾನು ವಸ್ತುಗಳನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಮಾರಾಟ ಮಾಡುತ್ತೇನೆ. ನಾನು ನನ್ನ ಪ್ರಿಯಕರನ ಜೊತೆಯಿರುವ ಫೋಟೋ ಹಾಕಿದರೆ, ನನ್ನ ಬಿಸಿನೆಸ್ ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾಳೆ. ಇತ್ತ ಪ್ರಿಯಕರ ನಾನು ತುಂಬಾ ದುಃಖದಲ್ಲಿದ್ದೇನೆ. ಆಕೆಯ ಜೊತೆ ರಜೆಗೆ ಹೋದಾಗ ನಾನು ಸಾಕಷ್ಟು ಖರ್ಚು ಮಾಡಿದ್ದೇನೆ ಎಂದು ಹೇಳಿದ್ದಾನೆ.

  • ಶ್ರುತಿ ಪೋಸ್ಟ್‌‌ಗೆ ಅಭಿಮಾನಿಗಳ ಕಮೆಂಟ್ – ರೊಚ್ಚಿಗೆದ್ದ ಪ್ರಥಮ್

    ಶ್ರುತಿ ಪೋಸ್ಟ್‌‌ಗೆ ಅಭಿಮಾನಿಗಳ ಕಮೆಂಟ್ – ರೊಚ್ಚಿಗೆದ್ದ ಪ್ರಥಮ್

    ಬೆಂಗಳೂರು: ಲೂಸಿಯಾ ಬೆಡಗಿ ಶ್ರುತಿ ಹರಿಹರನ್ ತಾವು ಗರ್ಭಿಣಿ ಆಗಿರುವ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಅಭಿಮಾನಿಗಳು ಶ್ರುತಿ ಅವರ ಪೋಸ್ಟಿಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದರು. ಇದನ್ನು ಗಮನಿಸಿದ ಬಿಗ್ ಬಾಸ್ ವಿಜೇತ ಪ್ರಥಮ್ ರೊಚ್ಚಿಗೆದ್ದಿದ್ದಾರೆ.

    ಶ್ರುತಿ ಬ್ಲರ್ ಆಗಿ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್, ಫೇಸ್‍ಬುಕ್ ನಲ್ಲಿ ಮಂಗಳವಾರ ಪೋಸ್ಟ್ ಮಾಡಿದ್ದರು. “ಈ ಸರ್ಕಸ್‍ಗೆ ನಿನಗೆ ಸ್ವಾಗತ ಪುಟ್ಟ. ನಿನ್ನನ್ನು ನೋಡಲು ನಮಗೆ ಕಾಯಲು ಆಗುತ್ತಿಲ್ಲ. ನಿನ್ನ ತಂದೆ ರಾಮ್ ಕಳಾರಿ ಉತ್ಸುಕರಾಗಿದ್ದಾರೆ” ಎಂದು ಬರೆದುಕೊಂಡಿದ್ದರು.

    ಈ ಪೋಸ್ಟ್‌‌ಗೆ ಹಲವರು ಶ್ರುತಿ ಅವರನ್ನು ನಿಂದಿಸಿ ಮಗುವಿನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಅಲ್ಲದೆ ನಟ ಅರ್ಜುನ್ ಸರ್ಜಾ ಅವರನ್ನು ಟ್ಯಾಗ್ ಮಾಡುವ ಮೂಲಕ ಕಮೆಂಟ್ ಮಾಡುತ್ತಿದ್ದರು. ಇದನ್ನು ಗಮನಿಸಿದ ಪ್ರಥಮ್ ಅಭಿಮಾನಿಗಳ ವಿರುದ್ಧ ರೊಚ್ಚಿಗೆದ್ದಿದ್ದಾರೆ.

    ಪ್ರಥಮ್ ಹೇಳಿದ್ದೇನು?
    ಮುಖ್ಯವಾದ ವಿಷಯ. ನಾನು ಸಾಮಾನ್ಯವಾಗಿ ಯಾರ ಪ್ರೊಫೈಲ್‍ನಲ್ಲೂ ಕಮೆಂಟ್ ಮಾಡಲ್ಲ. ನಿಮಗೆ ಯಾರ ಮೇಲೆ ಎಷ್ಟೇ ವಿರೋಧ ಇದ್ದರೂ ಇಟ್ಟುಕೊಳ್ಳಿ. ಅದು ನಿಮ್ಮ ಇಷ್ಟ. ಇನ್ನೂ ಹೊಟ್ಟೆಯಲ್ಲಿರೋ ಮಗುವಿನ ಬಗ್ಗೆ ಇಷ್ಟೆಲ್ಲಾ ವಿರೋಧವೇ? ಗುರು ಆ ಮಗುವಿನ ಚರಿತ್ರೆ ನೀವೆಲ್ಲ ಯಾರಪ್ಪ ಸರ್ಟಿಫಿಕೇಟ್ ಕೊಡೋಕೆ? ಮುಖ್ಯವಾದ ವಿಷಯ ಏನೆಂದರೆ ಅರ್ಜುನ್ ಸರ್ಜಾರಿಗೆ ಟ್ಯಾಗ್ ಮಾಡೋ ಚಿಲ್ಲರೆ ಬುದ್ಧಿ ಬಿಡಿ.

    ಪ್ರಪಂಚನೇ ನೋಡದೇ ಇರೋ ಮಗು ಬಗ್ಗೆ ಯಾಕ್ರೋ ಪಾಪದ ಮಾತಾಡ್ತೀರಾ? ನೆನಪಿರಲಿ. ನಿಮ್ಮಿಷ್ಟ ನಿಮ್ಮ ಲೈಫ್. ಆದರೆ ಇನ್ನೂ ಹುಟ್ಟದೇ ಇರೋ ಮಗುವಿಗೆ ಕ್ಯಾರೆಕ್ಟರ್ ಸರ್ಟಿಫಿಕೇಟ್ ಬೇಡ. ಅವರ ಲೈಫ್ ಅವರ ಇಷ್ಟ. ಯಾರನ್ನೂ ಮುಜಗರ ಮಾಡಬೇಡಿ. ಇದರ ಬಗ್ಗೆ ಯಾರು ಮಾತಾಡಲಿಲ್ಲ. ಹಾಗಾಗಿ ನಾನು ಮಾತನಾಡಿದೆ ಎಂದು ಕಮೆಂಟ್ ಮಾಡುವ ಮೂಲಕ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    ಪ್ರಥಮ್ ಕಮೆಂಟ್ ನೋಡಿದ ಶ್ರುತಿ ಹರಿಹರನ್ ಪ್ರತಿಕ್ರಿಯೆ ನೀಡಿ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ನಿಮ್ಮ ಕಮೆಂಟ್ ಅನ್ನು ನಾನು ಪ್ರಶಂಶಿಸುತ್ತೇನೆ. ಧನ್ಯವಾದಗಳು” ಎಂದು ಪ್ರತಿಕ್ರಿಯಿಸಿದ್ದಾರೆ.

  • ಶಿವರಾಜ್‌ಕುಮಾರ್‌ಗೆ 57ನೇ ಹುಟ್ಟುಹಬ್ಬದ ಸಂಭ್ರಮ – ಅಭಿಮಾನಿಗಳಿಗೆ ಸರ್ಪ್ರೈಸ್

    ಶಿವರಾಜ್‌ಕುಮಾರ್‌ಗೆ 57ನೇ ಹುಟ್ಟುಹಬ್ಬದ ಸಂಭ್ರಮ – ಅಭಿಮಾನಿಗಳಿಗೆ ಸರ್ಪ್ರೈಸ್

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ಇಂದು ತಮ್ಮ 57ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಅಲ್ಲದೆ ಈ ಹುಟ್ಟುಹಬ್ಬದಂದು ಅವರು ತಮ್ಮ ಟ್ವಿಟ್ಟರ್ ಹಾಗೂ ಫೇಸ್‍ಬುಕ್‍ನಲ್ಲಿ ಅಧಿಕೃತ ಖಾತೆ ತೆರೆಯುವ ಮೂಲಕ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.

    ಶಿವಣ್ಣ ಅವರು ಕಳೆದ ಆರು ತಿಂಗಳಿನಿಂದ ಭುಜದ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಕೆಲ ದಿನಗಳ ಹಿಂದೆಯಷ್ಟೇ ಶಸ್ತ್ರ ಚಿಕಿತ್ಸೆಗಾಗಿ ಲಂಡನ್‍ಗೆ ತೆರಳಿದ್ದರು. ಗುರುವಾರ ಅವರ ಶಸ್ತ್ರಚಿಕಿತ್ಸೆ ಯಶ್ವಸಿಯಾಗಿ ನಡೆದಿತ್ತು. ಶಿವಣ್ಣ ಅವರ ಜೊತೆ ಪತ್ನಿ ಗೀತಾ ಶಿವರಾಜ್ ಕುಮಾರ್, ಪುತ್ರಿ ನಿವೇದಿತಾ ಕೂಡ ಲಂಡನ್‍ಗೆ ತೆರಳಿದ್ದಾರೆ. ಪುನೀತ್ ರಾಜಕುಮಾರ್ ಅವರು ಕೂಡ ಲಂಡನ್‍ಗೆ ತೆರಳಿ ಅವರ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದಾರೆ.

    ಶಿವರಾಜ್‍ಕುಮಾರ್ ಕೇಕ್ ಕತ್ತರಿಸುವ ಮೂಲಕ ತಮ್ಮ ಕುಟುಂಬದ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವೇಳೆ ನಟ ಪುನೀತ್ ರಾಜ್‍ಕುಮಾರ್ ಅವರು ಕೂಡ ತಮ್ಮ ಅಣ್ಣನ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ವಿಶೇಷ ಎಂದರೆ ಈ ಹುಟ್ಟುಹಬ್ಬದಂದು ಶಿವಣ್ಣ ಅಧಿಕೃತವಾಗಿ ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಖಾತೆಯನ್ನು ತೆರೆದಿದ್ದಾರೆ. ಈ ಬಗ್ಗೆ ಅವರು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

     

    View this post on Instagram

     

    Welcome to official twitter account ಈಗಲೇ ಫಾಲೋ ಮಾಡಿ..

    A post shared by Dr.Shivarajkumar (@dr.shivarajkumar) on

    ಶಿವಸೈನ್ಯೆ ತಂಡ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದಂದು 11 ಗಂಟೆಗೆ ರಾಜ್ಯ ಕುಮಾರ್ ಪುಣ್ಯ ಭೂಮಿಯಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರು ಕೇಕ್ ಕತ್ತರಿಸಿ, ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ಆಚರಣೆಗೆ ಮೆರಗು ನೀಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಶಿವಣ್ಣ ಅವರಿಗೋಸ್ಕರ ಡೆಡಿಕೇಟ್ ಮಾಡಲು ಶಿವಸೈನ್ಯದವರು ಸಿದ್ಧ ಮಾಡಿರುವ ಮಹಾನ್ ಕಲಾವಿದ ಹಾಡನ್ನು, ನಿರ್ಮಾಪಕರು ಮತ್ತು ರಾಜ್ ಕುಮಾರ್ ಕುಟುಂಬದ ಆಪ್ತ ಕೆ.ಪಿ.ಶ್ರೀಕಾಂತ್ ಅವರು ಬಿಡುಗಡೆಗೊಳಿಸಲಿದ್ದಾರೆ.

     

    View this post on Instagram

     

    Happy Birthday Shivanna…. ????????

    A post shared by Puneeth Rajkumar (@puneethrajkumar.official) on

    ಶಿವಣ್ಣ ಮತ್ತು ಪುನೀತ್ ರಾಜ್‍ಕುಮಾರ್ ಅವರು ಇಬ್ಬರೂ ಸಹ ಲಂಡನ್‍ನಲ್ಲಿ ಇದ್ದಾರೆ. ಹೀಗಾಗಿ ಶುಕ್ರವಾರ ಮಧ್ಯಾಹ್ನ 1:00ಕ್ಕೆ ಅಭಿಮಾನಿಗಳೊಂದಿಗೆ ಮಾತನಾಡಲು ಅಣ್ಣಾವ್ರ ಪುಣ್ಯಭೂಮಿಯಲ್ಲಿ ಎಲ್‍ಇಡಿ ಸ್ಕ್ರೀನ್ ಮುಖಾಂತರ ವಿಡಿಯೋದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಅನ್ನದಾನ ಸಹ ಏರ್ಪಡಿಸಲಾಗಿದ್ದು, ಸಂತೃಪ್ತಿಯ ಹುಟ್ಟಹಬ್ಬಕ್ಕೆ ಸಾಕ್ಷಿಯಾಗಲಿದೆ.

     

    View this post on Instagram

     

    ????????????

    A post shared by Dr.Shivarajkumar (@dr.shivarajkumar) on