Tag: followers

  • ಹುಟ್ಟುಹಬ್ಬದಂದೇ ಮದ್ವೆ ದಿನ ಅನೌನ್ಸ್ ಮಾಡಿದ ಧ್ರುವ

    ಹುಟ್ಟುಹಬ್ಬದಂದೇ ಮದ್ವೆ ದಿನ ಅನೌನ್ಸ್ ಮಾಡಿದ ಧ್ರುವ

    ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ತಮ್ಮ ಹುಟ್ಟುಹಬ್ಬದ ದಿನವೇ ಮದುವೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

    ಇಂದು ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ ಧ್ರುವ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಧ್ರುವ ನವೆಂಬರ್ 24 ಹಾಗೂ 25ರಂದು ವೈವಾಹಿಕ ಜೀವನಕ್ಕೆ ಕಾಲಿಡುವುದಾಗಿ ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ. ಈ ಮೂಲಕ ಸರ್ಜಾ ಕುಟುಂಬದಲ್ಲಿ ಮದುವೆ ಸಂಭ್ರಮಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇದನ್ನೂ ಓದಿ: 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಆ್ಯಕ್ಷನ್ ಪ್ರಿನ್ಸ್

    2018ರ ಡಿಸೆಂಬರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಧ್ರುವ ಸರ್ಜಾ ಮತ್ತು ಪ್ರೇರಣಾ ಜೋಡಿ ನವೆಂಬರ್ ನಲ್ಲಿ ಮದುವೆಯಾಗಲಿದ್ದಾರೆ. ಧ್ರುವ ಮತ್ತು ಪ್ರೇರಣಾ 14 ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯಲ್ಲಿ ಪ್ರೀತಿಯ ವಿಚಾರವನ್ನು ತಿಳಿಸಿ ಒಪ್ಪಿಗೆ ಪಡೆದುಕೊಂಡು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

    ಈಗಾಗಲೇ ಇಬ್ಬರ ಮನೆಯಲ್ಲಿ ಮದುವೆ ತಯಾರಿಗಳು ಜೋರಾಗಿ ಸಾಗುತ್ತಿದ್ದು, ಧ್ರುವ ಸದ್ಯ ಪೊಗರು ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಿ, ಬಳಿಕ ಮದುವೆಗಾಗಿ ತಮ್ಮ ಲುಕ್ ಬದಲಾಯಿಸಿಕೊಳ್ಳಲಿದ್ದಾರೆ. ತಮ್ಮ ನೆಚ್ಚಿನ ನಟನ ಮದುವೆ ವಿಷಯ ತಿಳಿದ ಅಭಿಮಾನಿಗಳು ಅವರಿಗೆ ಶುಭಾಷಯ ಕೋರುತ್ತಿದ್ದಾರೆ.

    ಧ್ರುವ ಶನಿವಾರ ತಮ್ಮ ಟ್ವಿಟ್ಟರಿನಲ್ಲಿ, “ಪೊಗರು ಚಿತ್ರದ ಪೋಸ್ಟರ್ ಟ್ವೀಟ್ ಮಾಡಿದ್ದರು. ಈ ಫೋಟೋದಲ್ಲಿ ಅಕ್ಟೋಬರ್ 24ರಂದು ಡೈಲಾಗ್ ಟ್ರೈಲರ್ ಬಿಡುಗಡೆಯಾಗಲಿದೆ” ಎಂದು ಬರೆಯಲಾಗಿತ್ತು. ಈ ಫೋಟೋಗೆ ಧ್ರುವ “ಪೊಗರು ನಮ್ಮನ್ನು ಬೆಂಬಲಿಸಿ” ಎಂದು ಬರೆದುಕೊಂಡಿದ್ದರು.

    ಪೊಗರು ರೊಮ್ಯಾಂಟಿಕ್ ಆ್ಯಕ್ಷನ್ ಚಿತ್ರವಾಗಿದ್ದು, ಧ್ರುವ ಸರ್ಜಾ ಅವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಹಾಗೂ ಶಾನ್ವಿ ಶ್ರೀವಾತ್ಸವ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ನಂದಕಿಶೋರ್ ನಿರ್ಮಿಸುತ್ತಿದ್ದು, ಬಿ.ಕೆ ಗಂಗಾಧರ್ ನಿರ್ಮಿಸುತ್ತಿದ್ದಾರೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲೂ ಪೊಗರು ರಿಲೀಸ್ ಆಗಲಿದೆ.

  • 15 ದಿನದೊಳಗಡೆ ಡಿಕೆಶಿಗೆ ಬಿಡುಗಡೆ ಭಾಗ್ಯ- ಕೌಡೇಪೀರ್ ಲಾಲ್‍ಸಾಬ್ ದೇವರ ನುಡಿ

    15 ದಿನದೊಳಗಡೆ ಡಿಕೆಶಿಗೆ ಬಿಡುಗಡೆ ಭಾಗ್ಯ- ಕೌಡೇಪೀರ್ ಲಾಲ್‍ಸಾಬ್ ದೇವರ ನುಡಿ

    ಕೊಪ್ಪಳ: ಜಾರಿ ನಿರ್ದೇಶನಾಲಯ (ಇಡಿ) ತೆಕ್ಕೆಗೆ ಸಿಲುಕಿ ಜೈಲು ಪಾಲಾಗಿರುವ ಡಿಕೆಶಿ ಯಾವಾಗ ಬಿಡುಗಡೆ ಆಗುತ್ತಾರೆ ಅಥವಾ ಜೈಲಿನಲ್ಲಿಯೇ ಮುಂದುವರಿಯುತ್ತಾರಾ ಎನ್ನುವ ಪ್ರಶ್ನೆ ಇದೀಗ ಎಲ್ಲರಲ್ಲೂ ಮೂಡಿದೆ. ಇದರ ಬೆನ್ನೆಲ್ಲೇ ಕೊಪ್ಪಳದ ಕೌಡೇಪೀರ್ ಲಾಲ್ ಸಾಬ್ ದೇವರ ವಿಸರ್ಜನೆ ವೇಳೆ ಕನಕಪುರ ಬಂಡೆಯ ಭವಿಷ್ಯ ನುಡಿದು ಡಿಕೆಶಿ ಅಭಿಮಾನಿಗಳಲ್ಲಿ ಕೊಂಚ ರಿಲ್ಯಾಕ್ಸ್ ತಂದಿದೆ.

    ಕೊಪ್ಪಳದ ಕನಕಗಿರಿಯಲ್ಲಿ ಕಳೆದ ಎರಡು ದಿನದ ಹಿಂದೆ ಮೊಹರಂ ನಂತರದ ಕೌಡೇಪೀರ್ ದೇವರ ವಿಸರ್ಜನೆ ನಡೆದಿತ್ತು. ಈ ವೇಳೆ ಕನಕಗಿರಿಯ ಕೆಲವರು ಡಿಕೆ ಶಿವಕುಮಾರ್ ಬಿಡುಗಡೆ ಬಗ್ಗೆ ದೇವರು ಹೊತ್ತವರನ್ನು ಕೇಳಿದ್ದಾರೆ. ಇದಕ್ಕೆ ಕೊಂಚ ಯೋಚನೆ ಮಾಡಿದ ಲಾಲ್ ಸಾಬ್ ದೇವರು ಪಂದ್ರಾ-ಬಿಸ್ ದಿನ್ ಆಯಾ ಎಂದು ಹೇಳಿದೆ.

    ದೇವರ ಹೇಳಿಕೆ ನೀಡುತ್ತಲೇ ದೇವರ ಸ್ಮರಣೆಯ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ. ಕಳೆದ ವಾರವಷ್ಟೇ ಮಳೆಗಾಗಿ ಹಲಾಯಿ ದೇವರ ಮುಂದೆ ಧರಣಿ ಕುಳಿತು ಜಿಲ್ಲೆಯಲ್ಲಿ ಮಳೆಯಾಗುವುದರ ಬಗ್ಗೆ ಪ್ರಶ್ನೆ ಕೇಳಿದ್ದರು. ಅಂದು ಹಲಾಯಿ ದೇವರು ಹೇಳಿದಂತೆ ಒಂದೇ ವಾರದಲ್ಲಿ ಜಿಲ್ಲಾದ್ಯಂತ ಮಳೆ ಸುರಿದಿತ್ತು. ಹಲಾಯಿ ದೇವರ ಮೇಲೆ ಇಟ್ಟಿದ್ದ ನಂಬಿಕೆ ಯಶಸ್ವಿಯಾಗಿತ್ತು.

    ಇದೀಗ ಅದೇ ನಂಬಿಕೆ ಮೇಲೆ ಕೆಲ ಮಂದಿ ಕೌಡೇಪೀರ್ ಬಳಿ ಡಿಕೆಶಿ ಬಿಡುಗಡೆ ಕುರಿತು ಪ್ರಶ್ನೆ ಕೇಳಿದ್ದಾರೆ. ಡಿಕೆಶಿ ಬಿಡುಗಡೆ ಕುರಿತು ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ ಕೌಡೇಪೀರ್ ಭವಿಷ್ಯ ಏನಾಗುತ್ತೆ ಎಂದು ಕಾದು ನೋಡಬೇಕಿದೆ.

  • ಪೈರಸಿ ಮಾಡಿ ಅರೆಸ್ಟ್ ಆದ ಆರೋಪಿ ಬಗ್ಗೆ ಪೈಲ್ವಾನ್ ಪ್ರತಿಕ್ರಿಯೆ

    ಪೈರಸಿ ಮಾಡಿ ಅರೆಸ್ಟ್ ಆದ ಆರೋಪಿ ಬಗ್ಗೆ ಪೈಲ್ವಾನ್ ಪ್ರತಿಕ್ರಿಯೆ

    ಬೆಂಗಳೂರು: ಕಿಚ್ಚ ಸುದೀಪ್ ಅವರು ಪೈಲ್ವಾನ್ ಸಿನಿಮಾ ಪೈರಸಿ ಮಾಡಿ ಅರೆಸ್ಟ್ ಆದ ಆರೋಪಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಕಿಚ್ಚ, ಎಲ್ಲದಕ್ಕೂ ಒಂದು ನ್ಯಾಯ ಇದೆ. ನ್ಯಾಯ ಆಗಬೇಕು, ಆದರೆ ಅನ್ಯಾಯ ಆಗಬಾರದು. ಅನ್ಯಾಯವಾಗಿ ಯಾರು ಸಿಕ್ಕಿಹಾಕಿಕೊಳ್ಳಬಾರದು. ಯಾರು ತಪ್ಪು ಮಾಡಿದ್ದಾರೋ ಅವರು ತಪ್ಪಿಸಿಕೊಳ್ಳಬಾರದು. ಅಡುಗೆ ಮಾಡಿ ಎಲ್ಲರೂ ಊಟಕ್ಕೆ ಕುಳಿತಿರುವಾಗ ಕಾಲು ಎಡವಿ ಅನ್ನ ಚೆಲ್ಲಿದ್ದರೆ, ಬಡಿಸುವುದಕ್ಕೆ ಆಗಿಲ್ಲ ಎನ್ನುವ ನೋವು ಇರುತ್ತದೆ. ಹಾಗಂತ ಇನ್ನೊಬ್ಬರು ಮಾಡಿದ ಅಡುಗೆ ಹಾಳಾಗಬಾರದು ಎಂದರು.  ಇದನ್ನು ಓದಿ: ಪೈರಸಿ ಮಾಡೋದಕ್ಕೆ ತುಂಬಾ ಶ್ರಮಪಟ್ಟಿದ್ದಾರೆ, ದೇವ್ರು ಅವ್ರನ್ನು ಚೆನ್ನಾಗಿ ಇಟ್ಟಿರಲಿ: ಸುದೀಪ್

    ಕನ್ನಡ ಚಿತ್ರರಂಗದಲ್ಲಿ ಈಗ ಕೆಲವರು ದೊಡ್ಡ ಸಿನಿಮಾ ಎಂದು ಮಾಡಿದಾಗ ಕೆಲವೊಂದು ವಿಷಯಗಳನ್ನು ತಡೆದುಕೊಳ್ಳಬಹುದು. ಆದರೆ ಕಳ್ಳತನ ಎಂಬುದು ಅಭ್ಯಾಸವಾದರೆ ಅದಕ್ಕೆ ಈಗಾಗಲೇ ಒಂದು ದಾರಿ ಇರುತ್ತದೆ. ಈ ದಾರಿಯಲ್ಲೂ ಮಾಡಬಹುದು ಎಂದು ನಮ್ಮವರೇ ಹೇಳಿಕೊಟ್ಟರೆ, ನಾಳೆ ಚಿಕ್ಕಪುಟ್ಟ ನಿರ್ಮಾಪಕರು ತುಂಬಾ ಕಷ್ಟದಿಂದ ಸಿನಿಮಾ ಮಾಡಿರುತ್ತಾರೆ. ಮೊದಲ ದಿನವೇ ಸಿನಿಮಾ ಪೈರಸಿಯಾದರೆ ಅವರ ಗತಿ ಏನಾಗಬೇಕು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಾನು ಟ್ವಿಟ್ಟರನ್ನು ದುರುಪಯೋಗ ಪಡಿಸಿಕೊಂಡಿಲ್ಲ: ಸುದೀಪ್

    ಇದು ನನ್ನ ಹೋರಾಟ ಅಲ್ಲ. ಬೇರೆಯವರಿಗೆ ಈ ರೀತಿ ಆಗಬಾರದು. ಇದರಲ್ಲಿ ಜಿದ್ದುಗಿದ್ದು ಬರುವುದಿಲ್ಲ. ತಪ್ಪು ಮಾಡದೇ ಇರುವವರು ಹೆದರುಕೊಳ್ಳುವ ಅವಶ್ಯಕತೆ ಇಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ದೊಡ್ಡ ಸಿನಿಮಾ ಬಿಡುಗಡೆ ಆಗಬೇಕಿದೆ. ಜೊತೆಯಲ್ಲಿ ಮನೆ ಅಡಯಿಟ್ಟು ಮಾಡಿದ ಸಿನಿಮಾಗಳು ಕೂಡ ಬಿಡುಗಡೆಗೆ ತಯಾರಿದೆ. ಈ ರೀತಿ ಯಾರಿಗೂ ಆಗುವುದು ಬೇಡ. ಆದರೆ ಈ ಉದ್ದೇಶ ಚಿತ್ರರಂಗದಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದ್ದಾರೆ.

    ಅಭಿಮಾನಿಗಳಿಗೆ ಏನೂ ಹೇಳುತ್ತೀರಾ ಎಂದು ಪ್ರಶ್ನಿಸಿದಾಗ, ನಾನು ಯಾರಿಗೂ ಏನೂ ಹೇಳುವುದಿಲ್ಲ. ತಪ್ಪು ಮಾಡಬೇಡಿ. ಇನ್ನೊಬ್ಬರ ಹೊಟ್ಟೆಗೆ ಹೊಡೆಯಬೇಡಿ. ನಿಮ್ಮಿಂದ ಒಳ್ಳೆಯದು ಮಾಡಲು ಆಗಲ್ಲ ಎಂದರೆ ತಪ್ಪು ಮಾಡಬೇಡಿ. ಏನಾದರೂ ಹೆಚ್ಚುಕಮ್ಮಿ ಆಗಿ ಅವರು ಹಣ ಕಳೆದುಕೊಂಡರೆ ಅವರ ಪಾಲಿಗೆ ಯಾರು ಬರುತ್ತಾರೆ. ಅವರಿಗೆ ಸಹಾಯ ಮಾಡೋಣ ಎಂದರೆ ಮತ್ತೊಂದು ಸಿನಿಮಾ ಮಾಡುವುದಕ್ಕೆ ನನಗೆ ಒಂದು ವರ್ಷ ಬೇಕು. ನಮಗೆ ಮಗು ಬೇರೆ ಅಲ್ಲ, ಸಿನಿಮಾ ಬೇರೆ ಅಲ್ಲ. ಎರಡು ಒದ್ದಾಡುತ್ತಿದೆ. ನೋಡಿಕೊಂಡು ಯಾರು ಸುಮ್ಮನೆ ಇರಬಾರದು. ಯಾಕೆ ಎಲ್ಲವನ್ನು ಸುಮ್ಮನೆ ಅನುಭವಿಸಿಕೊಂಡು ಇರಬೇಕು ಎಂದು ಸುದೀಪ್ ಉತ್ತರಿಸಿದ್ದಾರೆ.

  • ನನಗೆ ನಿದ್ದೆಯಲ್ಲಿ ನಡೆದಾಡುವ ಕಾಯಿಲೆ ಇದೆ: ನಟಿ ಇಲಿಯಾನಾ

    ನನಗೆ ನಿದ್ದೆಯಲ್ಲಿ ನಡೆದಾಡುವ ಕಾಯಿಲೆ ಇದೆ: ನಟಿ ಇಲಿಯಾನಾ

    ಮುಂಬೈ: ಬಹುಭಾಷಾ ನಟಿ ಇಲಿಯಾನಾ ಅವರು ತಮಗೆ ನಿದ್ದೆಯಲ್ಲಿ ನಡೆದಾಡುವ ಕಾಯಿಲೆ ಇದೆ ಎಂಬ ವಿಷಯವನ್ನು ರಿವೀಲ್ ಮಾಡಿದ್ದಾರೆ.

    ಇಲಿಯಾನಾ ಅವರು ತಮ್ಮ ಟ್ವಿಟ್ಟರಿನಲ್ಲಿ ತನಗಿರುವ ಕಾಯಿಲೆ ಬಗ್ಗೆ ರಿವೀಲ್ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ನನಗೆ ನಿದ್ದೆಯಲ್ಲಿ ನಡೆದಾಡುವ ಕಾಯಿಲೆ ಇದೆ ಎಂದು ನಾನು ಒಪ್ಪಿಕೊಂಡಿದ್ದೇನೆ. ಅಲ್ಲದೇ ಬೆಳಗ್ಗೆ ಎದ್ದಾಗ ನನ್ನ ಕಾಲಿನಲ್ಲಿ ಊತ ಕಾಣಿಸಿಕೊಳ್ಳುವುದರ ಜೊತೆಗೆ ಕಾಲಿಗೆ ಗಾಯಗಳಾಗಿರುತ್ತವೆ. ಇದನ್ನು ಹೇಗೆ ಎಂದು ಹೇಳಲು ನನಗೆ ಬೇರೆ ದಾರಿಯಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

    https://twitter.com/Ileana_Official/status/1172727205064916995?ref_src=twsrc%5Etfw%7Ctwcamp%5Etweetembed%7Ctwterm%5E1172727205064916995&ref_url=https%3A%2F%2Fmovies.publictv.in%2Factress-ileana-dcruz-reveals-her-disease%2F

    ನಟಿ ಇಲಿಯಾನಾ ಈ ಟ್ವೀಟ್ ಮಾಡುತ್ತಿದ್ದಂತೆ, ಕೆಲವರು ರೂಮಿನಲ್ಲಿ ಮತ್ತು ಮನೆಯಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿಸಿಕೊಳ್ಳುವಂತೆ ಸಲಹೆ ಕೊಟ್ಟಿದ್ದಾರೆ. ಮತ್ತೆ ಕೆಲವರು ತಕ್ಷಣವೇ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಕಮೆಂಟ್ ಮಾಡಿದ್ದಾರೆ.

    ಇತ್ತೀಚೆಗೆ ಇಲಿಯಾನಾ ಅವರು ತಮ್ಮ ಬಹುಕಾಲದ ಆಸ್ಟ್ರೇಲಿಯಾ ಗೆಳೆಯನ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಬಿ-ಟೌನ್‍ನಲ್ಲಿ ಹರಿದಾಡುತ್ತಿತ್ತು. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಇಲಿಯಾನಾ ಹಾಗೂ ಅವರ ಗೆಳೆಯ ಆ್ಯಂಡ್ರ್ಯೂ ನೀಬೋನ್ ಪರಸ್ಪರ ಅನ್‍ಫಾಲೋ ಮಾಡಿದ್ದಾರೆ. ಬಳಿಕ ಸ್ವತಃ ಇಲಿಯಾನಾ ಅವರೇ ಬ್ರೇಕಪ್ ಮಾಡಿಕೊಂಡಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದರು.

    ಸದ್ಯ ಇಲಿಯಾನಾ `ಪಾಗಲ್‍ಪಂತಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟ ಜಾನ್ ಅಬ್ರಾಹಂ, ಅನಿಲ್ ಕಪೂರ್, ಅರ್ಷದ್ ವಾರ್ಸಿ ಹಾಗೂ ನಟಿ ಕೃತಿ ಕರಬಂಧ ಅಭಿನಯಿಸುತ್ತಿದ್ದಾರೆ. ನವೆಂಬರ್ 22ರಂದು ಈ ಚಿತ್ರ ಬಿಡುಗಡೆ ಆಗಲಿದೆ.

  • ಅಭಿಮಾನಿಗಳಲ್ಲಿ ನಟ ಸೂರ್ಯ ಕಳಕಳಿಯ ಮನವಿ

    ಅಭಿಮಾನಿಗಳಲ್ಲಿ ನಟ ಸೂರ್ಯ ಕಳಕಳಿಯ ಮನವಿ

    ಚೆನ್ನೈ: ಕಾಲಿವುಡ್ ನಟ ಸೂರ್ಯ ಅವರು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ನಟ ಸೂರ್ಯ ಅವರು ತಮ್ಮ ಅಭಿಮಾನಿಗಳಲ್ಲಿ, “ತಮಿಳುನಾಡಿನ ಯಾವುದೇ ಭಾಗದಲ್ಲಿ ನನ್ನ ಕಟೌಟ್ ಅಥವಾ ಬ್ಯಾನರ್ ಹಾಕಬೇಡಿ. ದಯವಿಟ್ಟು ಆ ಹಣವನ್ನು ಶಾಲೆಗಳಿಗೆ ದಾನ ಮಾಡಿ” ಎಂದು ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ. ತಮ್ಮ ನೆಚ್ಚಿನ ನಟನ ಮಾತು ಕೇಳಿದ ಅಭಿಮಾನಿಗಳು ಅವರ ‘ಕಾಪ್ಪನ್’ ಚಿತ್ರದ ಬಿಡುಗಡೆಯ ದಿನ ಕಟೌಟ್ ಹಾಗೂ ಬ್ಯಾನರ್ ಹಾಕುವ ಬದಲು 200 ಜನರಿಗೆ ಹೆಲ್ಮೆಟ್ ನೀಡುವುದಾಗಿ ನಿರ್ಧರಿಸಿದ್ದಾರೆ.

    ಆಗಿದ್ದೇನು?
    ಕಳೆದ ಶುಕ್ರವಾರ ಟೆಕ್ಕಿ ಶುಭಾಶ್ರೀ(23) ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಅಕ್ರಮವಾಗಿ ಹಾಕಲಾಗಿದ್ದ ಎಐಎಡಿಎಂಕೆಯ ಬ್ಯಾನರ್ ಆಕೆಯ ತಲೆಯ ಮೇಲೆ ಬಿದ್ದಿತ್ತು. ಪರಿಣಾಮ ಶುಭಾಶ್ರೀ ಗಾಯಗೊಂಡು ಕೆಳಗೆ ಬಿದ್ದಿದ್ದಳು. ಇದೇ ವೇಳೆ ಹಿಂಬದಿಯಿಂದ ಲಾರಿಯೊಂದು ಯುವತಿಯ ಮೇಲೆ ಹರಿದು ಹೋಗಿತ್ತು. ಈ ಅಪಘಾತದಲ್ಲಿ ಶುಭಾಶ್ರೀ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಸ್ಪತ್ರೆಗೆ ಹೋಗುವಷ್ಟರಲ್ಲಿ ಶುಭಾಶ್ರೀ ಮೃತಪಟ್ಟಿದ್ದಳು.

    ಬ್ಯಾನರ್ ಬಿದ್ದು ಶುಭಾಶ್ರೀ ಮೃತಪಟ್ಟ ಪರಿಣಾಮ ಸಾರ್ವಜನಿಕರು ರಾಜಕೀಯ ವ್ಯಕ್ತಿಗಳ ವಿರುದ್ಧ ಹಾಗೂ ಸಿನಿಮಾ ಕಲಾವಿದರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದರು. ಈ ಕಾರಣಕ್ಕಾಗಿ ಸೂರ್ಯ ಅವರು ತಮಿಳುನಾಡಿನ ಯಾವುದೇ ಭಾಗದಲ್ಲಿ ತಮ್ಮ ಬ್ಯಾನರ್ ಹಾಗೂ ಕಟೌಟ್ ಹಾಕದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

    2017ರಲ್ಲಿ ಮದ್ರಾಸ್ ಹೈಕೋರ್ಟ್ ತಮಿಳುನಾಡಿನಾದ್ಯಂತ ಎಲ್ಲಾ ರೀತಿಯ ಬ್ಯಾನರ್ ಗಳು, ಹೋರ್ಡಿಂಗ್‍ಗಳು ಹಾಗೂ ಜಾಹೀರಾತುಗಳನ್ನು ನಿಷೇಧಿಸುವ ಆದೇಶವನ್ನು ನೀಡಿತ್ತು. ಹೈಕೋರ್ಟ್ ಹಲವು ಬಾರಿ ಎಚ್ಚರಿಕೆ ಹಾಗೂ ಆದೇಶ ನೀಡಿದರು ಸಹ ರಾಜಕೀಯ ಪಕ್ಷಗಳು ಹಾಗೂ ಅವರ ಬೆಂಬಲಿಗರು ಇಂತಹ ಅಕ್ರಮ ಬ್ಯಾನರ್ ಹಾಕುವ ಮೂಲಕ ಜನರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತಿದ್ದಾರೆ.

  • ಟ್ವಿಟ್ಟರ್‌ನಲ್ಲಿ 5 ಕೋಟಿ ಫಾಲೋವರ್ಸ್ – ವಿಶ್ವದ ಮೂರನೇ ಜನಪ್ರಿಯ ರಾಜಕಾರಣಿಯಾದ ಮೋದಿ

    ಟ್ವಿಟ್ಟರ್‌ನಲ್ಲಿ 5 ಕೋಟಿ ಫಾಲೋವರ್ಸ್ – ವಿಶ್ವದ ಮೂರನೇ ಜನಪ್ರಿಯ ರಾಜಕಾರಣಿಯಾದ ಮೋದಿ

    – ಇನ್‍ಸ್ಟಾ, ಎಫ್‍ಬಿಯಲ್ಲೂ ಸಿಕ್ಕಾಪಟ್ಟೆ ಫೇಮಸ್

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎಲ್ಲೆಡೆ ಸಿಕ್ಕಾಪಟ್ಟೆ ಫೇಮಸ್ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಮೋದಿ ಅವರಿಗೆ ಬರೋಬ್ಬರಿ 50 ದಶಲಕ್ಷ(5 ಕೋಟಿ) ಮಂದಿ ಫಾಲೋವರ್ಸ್ ಹೊಂದುವ ಮೂಲಕ ವಿಶ್ವದ ಮೂರನೇ ಜನಪ್ರಿಯ ರಾಜಕಾರಣಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

    ಕ್ರಿಕೆಟ್ ಆಟಗಾರರು, ಸಿನಿಮಾ ತಾರೆಯರು, ಕ್ರೀಡಾಪಟುಗಳಂತೆ ಪ್ರಧಾನಿ ಮೋದಿ ನವ ಪೀಳಿಗೆ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ಟ್ವಿಟ್ಟರ್ ಮಾತ್ರವಲ್ಲದೆ ಫೇಸ್‍ಬುಕ್, ಇನ್‍ಸ್ಟಾಗ್ರಾಮ್ ಮತ್ತು ಯೂಟ್ಯೂಬ್‍ನಲ್ಲಿಯೂ ಪ್ರಧಾನಿ ಸಕ್ರಿಯವಾಗಿದ್ದು ಜನರ ಜೊತೆ ಸಂಪರ್ಕದಲ್ಲಿದ್ದಾರೆ.

    ಮೋದಿ ಅವರು 2009ರಲ್ಲಿ ಗುಜರಾತಿನ ಸಿಎಂ ಆಗಿದ್ದಾಗ ಟ್ವಿಟರ್ ಅಕೌಂಟ್ ಹೊಂದುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾದ ಜನಪ್ರತಿನಿಧಿಗಳಲ್ಲಿ ಒಬ್ಬರಾಗಿದ್ದರು. ಪ್ರಧಾನಿಯಾಗಿ ಆಯ್ಕೆಯಾದ ಬಳಿಕವಂತೂ ಮೋದಿ ಟ್ವಿಟ್ಟರ್‌ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ. ತಮ್ಮ ನಿರಂತರವಾದ ಟ್ವೀಟ್‍ಗಳ ಮೂಲಕ ಸಕ್ರಿಯವಾಗಿದ್ದು, ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟಿದ್ದಾರೆ.

    ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಟ್ವಿಟ್ಟರ್‌ನಲ್ಲಿ 10.84 ಕೋಟಿ ಫಾಲೋವರ್ಸ್ ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ 6.4 ಕೋಟಿ ಫಾಲೋವರ್ಸ್ ಇದ್ದಾರೆ. ಈ ಎರಡು ನಾಯಕರ ನಂತರ ಮೋದಿ ಅವರು ವಿಶ್ವದಲ್ಲೇ ಅತ್ಯಂತ ಹೆಚ್ಚು ಫಾಲೋವರ್ಸ್ ಹೊಂದಿರುವ ಮೂರನೇ ರಾಜಕಾರಣಿಯಾಗಿದ್ದಾರೆ.

    ಕೇವಲ ಟ್ವಿಟ್ಟರ್ ಮಾತ್ರವಲ್ಲದೆ ಫೇಸ್‍ಬುಕ್ ಮತ್ತು ಇನ್‌‌ಸ್ಟಾಗ್ರಾಮ್‌ನಲ್ಲಿಯೂ ಮೋದಿ ಜನಪ್ರಿಯತೆಗೆ ಕೊರತೆಯಿಲ್ಲ. ಮೋದಿ ಅವರು ಫೇಸ್‍ಬುಕ್‍ನಲ್ಲಿ 44 ದಶಲಕ್ಷ(4.4 ಕೋಟಿ) ಫಾಲೋವರ್ಸ್ ಹೊಂದಿದ್ದಾರೆ. ಹಾಗೆಯೇ ಇನ್‍ಸ್ಟಾಗ್ರಾಮ್‍ನಲ್ಲಿ 28 ದಶಲಕ್ಷಕ್ಕೂ(2.8 ಕೋಟಿ) ಅಧಿಕ ಮಂದಿ ಮೋದಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಜೊತೆಗೆ ಮೋದಿ ಅವರ ಅಧಿಕೃತ ಯೂಟ್ಯೂಬ್ ಖಾತೆಯನ್ನು 3.4 ದಶಲಕ್ಷ(34 ಲಕ್ಷ) ಮಂದಿ ಸಬ್‍ಸ್ಕ್ರೈಬ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ವೃತ್ತಿಪರರ ಸಾಮಾಜಿಕ ಜಾಲತಾಣ ಲಿಂಕ್ಡ್‌ಇನ್‌ನಲ್ಲಿ ಕೂಡ ಮೋದಿ ಸಕ್ರಿಯವಾಗಿದ್ದು, ಅದರಲ್ಲಿ 3 ದಶಲಕ್ಷ(30 ಲಕ್ಷ) ಫಾಲೋವರ್ಸ್ ಹೊಂದಿದ್ದಾರೆ.

  • ಅನುಷ್ಕಾ ತೂಕದ ಬಗ್ಗೆ ವರದಿ ಮಾಡಿದ್ದಕ್ಕೆ ರೊಚ್ಚಿಗೆದ್ದ ಅಭಿಮಾನಿಗಳು

    ಅನುಷ್ಕಾ ತೂಕದ ಬಗ್ಗೆ ವರದಿ ಮಾಡಿದ್ದಕ್ಕೆ ರೊಚ್ಚಿಗೆದ್ದ ಅಭಿಮಾನಿಗಳು

    ಹೈದರಾಬಾದ್: ಬಾಹುಬಲಿ ಬೆಡಗಿ ಅನುಷ್ಕಾ ಶೆಟ್ಟಿ ದಪ್ಪ ಆಗಿದ್ದಾರೆ ಎಂದು ವರದಿ ಮಾಡಿದ ತೆಲುಗು ವೆಬ್‍ಸೈಟ್ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದಾರೆ.

    ಇತ್ತೀಚೆಗೆ ಅನುಷ್ಕಾ ಶೆಟ್ಟಿ ಅವರು ತಮ್ಮ ಮುಂಬರುವ ‘ನಿಶಾಬ್ದಂ’ ಚಿತ್ರದ ಶೂಟಿಂಗ್ ಮುಗಿಸಿ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದರು. ಈ ವೇಳೆ ಅಲ್ಲಿದ್ದ ಸ್ಥಳೀಯರು ಅನುಷ್ಕಾ ಅವರ ಫೋಟೋ ಕ್ಲಿಕ್ಕಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.

    https://twitter.com/Mirchi9/status/1168832293877637120?ref_src=twsrc%5Etfw%7Ctwcamp%5Etweetembed%7Ctwterm%5E1169492168932655104&ref_url=https%3A%2F%2Fwww.indiatoday.in%2Fmovies%2Fregional-cinema%2Fstory%2Ftelugu-website-fat-shames-baahubali-star-anushka-shetty-gets-roasted-online-1595848-2019-09-05

    ಈ ಫೋಟೋ ನೋಡಿ ತೆಲುಗು ವೆಬ್‍ಸೈಟ್ ಅನುಷ್ಕಾ ತೂಕದ ಬಗ್ಗೆ ವರದಿ ಮಾಡಿದೆ. ಅನುಷ್ಕಾ ಅವರು ‘ತುಂಬಾ ದಪ್ಪ’ ಆಗಿದ್ದಾರೆ ಹಾಗೂ ಅವರು ‘ಡಬಲ್ ಚಿನ್’ ಹೊಂದಿದ್ದಾರೆ ಎನ್ನುವ ಮಟ್ಟಕ್ಕೆ ವರದಿ ಮಾಡಿತ್ತು. ಈ ವರದಿ ನೋಡಿ ಅನುಷ್ಕಾ ಅಭಿಮಾನಿಗಳು ಗರಂ ಆಗಿದ್ದಾರೆ.

    ಅನುಷ್ಕಾ ಬಗ್ಗೆ ವರದಿ ನೋಡಿ ಕೆಲವು ಅಭಿಮಾನಿಗಳು, “ಒಬ್ಬರು ದೈಹಿಕವಾಗಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದರ ಆಧಾರದ ಮೇಲೆ ನೀವು ಅವರನ್ನು ಹೇಗೆ ವಿವರಿಸಬಹುದು? ನೀವು ಅವರ ಕಾಲ ಬೆರಳುಗಳಿಗೆ ಸಮವಲ್ಲ. ನೀವು ಮಾತನಾಡುವಾಗ ನಿಮ್ಮ ಬಾಯಿ ಹಾಗೂ ಟೈಪ್ ಮಾಡುವಾಗ ನಿಮ್ಮ ಕೈ ಸರಿಯಾಗಿ ಇರಲಿ. ನೀವು ಭಾರತದ ಮಹಿಳಾ ಸೂಪರ್ ಸ್ಟಾರ್ ರನ್ನು ನಿಂದಿಸಿದ್ದೀರಾ. ನೀವು ಈ ರೀತಿ ನಡೆದುಕೊಳ್ಳಬಾರದು” ಎಂದು ಕಮೆಂಟ್ ಮಾಡಿದ್ದಾರೆ.

    2018ರಲ್ಲಿ ಬಿಡುಗಡೆಯಾದ ‘ಭಾಗಮತಿ’ ಚಿತ್ರದ ನಂತರ ಅನುಷ್ಕಾ ಯಾವ ಸಿನಿಮಾದಲ್ಲೂ ನಟಿಸಿಲ್ಲ. ಸದ್ಯ ಅವರು ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ ‘ಸೈರಾ ನರಸಿಂಹರೆಡ್ಡಿ’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಅಕ್ಟೋಬರ್ 2ರಂದು ಬಿಡುಗಡೆ ಆಗಲಿದೆ.

  • ಡಿಸಿಎಂ ಮಾಡದ್ದಕ್ಕೆ ಈಶ್ವರಪ್ಪ, ಶ್ರೀರಾಮುಲು ಬೆಂಬಲಿಗರ ಆಕ್ರೋಶ

    ಡಿಸಿಎಂ ಮಾಡದ್ದಕ್ಕೆ ಈಶ್ವರಪ್ಪ, ಶ್ರೀರಾಮುಲು ಬೆಂಬಲಿಗರ ಆಕ್ರೋಶ

    ಬೆಂಗಳೂರು: ಖಾತೆ ಹಂಚಿಕೆಯಲ್ಲಿ ಆರ್ ಅಶೋಕ್, ಜಗದೀಶ್ ಶೆಟ್ಟರ್, ಸಿಟಿ ರವಿ ಹಾಗೂ ಸೋಮಣ್ಣ ಅಸಮಾಧಾನ ಹೊರ ಹಾಕುತ್ತಿದ್ದಂತೆಯೇ ಇತ್ತ ಈಶ್ವರಪ್ಪ ಮತ್ತು ಶ್ರೀರಾಮುಲು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

    ಕಳೆದ ಬಾರಿಯ ಬಿಜೆಪಿ ಸರ್ಕಾರದಲ್ಲಿ ಡಿಸಿಎಂ ಸ್ಥಾನ ಪಡೆದಿದ್ದ ಕೆ.ಎಸ್.ಈಶ್ವರಪ್ಪ ಅವರಿಗೆ ಈ ಬಾರಿ ನಿರಾಸೆಯಾಗಿದೆ. ಈಶ್ವರಪ್ಪಗೆ ಡಿಸಿಎಂ ಪೋಸ್ಟ್ ನೀಡದ್ದಕ್ಕೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮತ್ತೆ ಆಕ್ಟೀವ್ ಆಗಿದೆ.

    ಇಂಧನ ಖಾತೆ ಕೇಳಿದ್ದ ಈಶ್ವರಪ್ಪಗೆ ಗ್ರಾಮೀಣಾಭಿವೃದ್ಧಿ ಖಾತೆ ನೀಡಿದ್ದಾರೆ. ಈ ಮೂಲಕ ಹಿಂದುಳಿದ ವರ್ಗಕ್ಕೆ ಅಪಮಾನ ಮಾಡಿದ್ದಾರೆಂದು ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈಶ್ವರಪ್ಪರಿಗೆ ಡಿಸಿಎಂ ಹುದ್ದೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಭಾರೀ ಹೊಡೆತ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    ಇತ್ತ ಶ್ರೀರಾಮುಲು ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ಹೊರಹಾಕಿದ್ದಾರೆ. ಶ್ರೀರಾಮುಲು ಒಬ್ಬರೇ ಡಿಸಿಎಂ ಹುದ್ದೆ ಬೇಡಿದ್ದರು. ಆದರೆ ಡಿಸಿಎಂ ಪಟ್ಟ ಕೇಳದವರಿಗೆ ನೀಡಲಾಗಿದೆ. 80ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಶ್ರೀರಾಮುಲು ಪ್ರಚಾರ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ. ಶ್ರೀರಾಮುಲು ಅವರೇ ದಯಮಾಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕೇವಲ ಶಾಸಕರಾಗಿರಿ. ಇಡೀ ವಾಲ್ಮೀಕಿ, ಎಸ್‍ಸಿ, ಎಸ್‍ಟಿ, ಓಬಿಸಿ ಸಮುದಾಯ ನಿಮ್ಮ ಬೆಂಬಲಕ್ಕಿದೆ ಎಂದು ಹೈಕಮಾಂಡ್ ವಿರುದ್ಧ ಕಿಡಿಕಾರಿದ್ದಾರೆ.

    ಸಿಎಂ ಯಡಿಯೂರಪ್ಪ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿರುವ ಅಭಿಮಾನಿಗಳು, ವಾಲ್ಮೀಕಿ ಸಮುದಾಯಕ್ಕೆ ಕೇವಲ ಒಂದು ಸಚಿವ ಸ್ಥಾನವನ್ನು ನೀಡಿದ್ದೀರಿ. ಈ ಜಾತಿ ರಾಜಕಾರಣ ಹೆಚ್ಚು ದಿನ ನಡೆಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧವೂ ಶ್ರೀರಾಮುಲು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಸನ್ನಿ ಲಿಯೋನ್‍ಗೆ ಇನ್‍ಸ್ಟಾದಲ್ಲಿ ಎರಡೂವರೆ ಕೋಟಿ ಫಾಲೋವರ್ಸ್!

    ಸನ್ನಿ ಲಿಯೋನ್‍ಗೆ ಇನ್‍ಸ್ಟಾದಲ್ಲಿ ಎರಡೂವರೆ ಕೋಟಿ ಫಾಲೋವರ್ಸ್!

    ಮುಂಬೈ: ಬಾಲಿವುಡ್ ಸನ್ನಿ ಲಿಯೋನ್ ಅವರು ತನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ 25 ಮಿಲಿಯನ್ (2.5 ಕೋಟಿ) ಫಾಲೋವರ್ಸ್ ಹೊಂದಿದ್ದು, ಈ ಕುರಿತು ಸಂತಸ ವ್ಯಕ್ತಪಡಿಸಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆಯಷ್ಟೇ ಅಂತರ್ಜಾಲದಲ್ಲಿ ಅತಿ ಹೆಚ್ಚು ಹುಡುಕಾಡಿದ ನಟಿ ಎಂಬ ಹೆಗ್ಗಳಿಕೆಗೆ ಕಾರಣರಾಗಿದ್ದ ಸನ್ನಿ ಲಿಯೋನ್ ಅಭಿಮಾನಿಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಈ ಸಂದರ್ಭದಲ್ಲಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲು ವಿಡಿಯೋ ಬಿಡುಗಡೆ ಮಾಡಿರುವ ಸನ್ನಿ, 25 ಮಿಲಿಯನ್ ಮಂದಿ ಇನ್‍ಸ್ಟಾಗ್ರಾಮ್ ಕುಟುಂಬವನ್ನು ಗಳಿಸಿದ್ದು, ಮತ್ತಷ್ಟು ಬಲಶಾಲಿ ಆಗಲು ಕಾರಣವಾಗಿದ್ದೇವೆ. ನಿಮ್ಮ ಬೆಂಬಲಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.

    https://www.instagram.com/p/B1eBm5Dh7fa/

    ಸದ್ಯ ವಿವಿಧ ಸಿನಿಮಾಗಳಲ್ಲಿ ನಟಿಸುತ್ತಿರುವ ಸನ್ನಿ ಲಿಯೋನ್ ಅವರು ತಮಿಳಿನ ‘ವೀರಾ ಮಹಾದೇವಿ’ ಸಿನಿಮಾ ಮೂಲಕ ಐತಿಹಾಸಿಕ ಪಾತ್ರವನ್ನು ನಿರ್ವಹಿಸಿದ್ದಾರೆ. ಅಲ್ಲದೇ ‘ಹೆಲೆನ್’, ‘ಕೋಕಾ ಕೋಲಾ’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

    ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗಿರುವ ಸನ್ನಿ ಲಿಯೋನ್ ವಿಭಿನ್ನ ಡ್ರೆಸ್ ನಲ್ಲಿ ಫೋಟೋ ಶೂಟ್ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾರೆ. ಇತ್ತೀಚೆಗೆ ಪಿಂಕ್ ಡ್ರೆಸ್ ತೊಟ್ಟು ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

    https://www.instagram.com/p/B1WOxhtBmgd/

    ಇತ್ತ ರಕ್ಷಾ ಬಂಧನ ದಿನದಂದು ರಿಯಾಲಿಟಿ ಶೋ ಜಡ್ಜ್ ರನವಿಜಯ್ ಸಂಘಾ ಅವರಿಗೆ ರಾಖಿ ಕಟ್ಟಿದ್ದ ಸನ್ನಿ ಲಿಯೋನ್, ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿದ್ದರು. ಈ ಪೋಸ್ಟ್ ಗೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿ ಅಣ್ಣ-ತಂಗಿ ಇಬ್ಬರಿಗೂ ರಕ್ಷಾ ಬಂಧನದ ಶುಭಾಶಯ, ಇದಕ್ಕಿಂತ ಅತ್ಯುತ್ತಮ ಫೋಟೋ ಮತ್ತೊಂದಿಲ್ಲ ಎಂದಿದ್ದರು.

  • ನಮಗೆ ಶಾಕ್ ಆಗಿದೆ, ಮೊದ್ಲ ಪಟ್ಟಿಯಲ್ಲೇ ಹೆಸರು ಇರಬೇಕಿತ್ತು – ಜಾರಕಿಹೊಳಿ ಬೆಂಬಲಿಗರ ಆಕ್ರೋಶ

    ನಮಗೆ ಶಾಕ್ ಆಗಿದೆ, ಮೊದ್ಲ ಪಟ್ಟಿಯಲ್ಲೇ ಹೆಸರು ಇರಬೇಕಿತ್ತು – ಜಾರಕಿಹೊಳಿ ಬೆಂಬಲಿಗರ ಆಕ್ರೋಶ

    ಬೆಂಗಳೂರು: ಸಚಿವ ಸಂಪುಟದ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಬಿಜೆಪಿ ವಲಯದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗದ್ದಕ್ಕೆ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಾಲಚಂದ್ರ ಜಾರಕಿಹೊಳಿಗೆ ಪ್ರಮಾಣ ವಚನ ಸ್ವೀಕಾರ ಮಾಡಿಯೇ ಮಾಡುತ್ತಾರೆ ಎಂದು ಅರಭಾವಿ ಕ್ಷೇತ್ರದಿಂದ ಜನರು ಬೆಂಗಳೂರಿಗೆ ಬಂದಿದ್ದರು. ಈಗ ಪಟ್ಟಿಯಲ್ಲಿ ಜಾರಕಿಹೊಳಿ ಹೆಸರು ಕೈ ಬಿಟ್ಟಿರುವುದಕ್ಕೆ ಬೆಂಗಲಿಗರು ಬೇಸರ ವ್ಯಕ್ತಪಡಿಸಿದ್ದಾರೆ.

    ಬಾಲಚಂದ್ರ ಜಾರಕಿಹೊಳಿ ಸಂಪುಟಕ್ಕೆ ಸೇರುವುದು ಖಚಿತವಾಗಿತ್ತು. ಸಚಿವರ ಪಟ್ಟಿಯಲ್ಲಿ ಅವರ ಹೆಸರು ಕೂಡ ಇತ್ತು. ಆದರೆ ಕೊನೆ ಕ್ಷಣದಲ್ಲಿ ಅವರ ಹೆಸರನ್ನು ಕೈಬಿಡಲಾಗಿದೆ. ನಮಗೆ ಶಾಕ್ ಆಗಿದೆ. ಬಾಲಚಂದ್ರ ಜಾರಕಿಹೊಳಿ ಅವರು ಮುತುವರ್ಜಿ ವಹಿಸಿ ಕ್ಷೇತ್ರದ ತುಂಬಾ ಓಡಾಡಿಕೊಂಡಿದ್ದರು. ಬಹುಶಃ ಇದೆಲ್ಲ ಹೈಕಮಾಂಡ್ ನಿರ್ಧಾರವಾಗಿದೆ. ಮೊದಲ ಲಿಸ್ಟ್ ಗೆ ಅವರನ್ನು ಪರಿಗಣಿಸಬೇಕಾಗಿತ್ತು. ಇದರಿಂದ ನಮಗೆಲ್ಲಾ ಬೇಸರ ತಂದಿದೆ ಎಂದು ಬೆಂಬಲಿಗರು ಹೇಳಿದ್ದಾರೆ.

    ಈ ಹಿಂದೆ ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ ಅವರು ಒಂದಲ್ಲ ಒಂದು ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೆ ಇದೇ ಮೊದಲ ಬಾರಿಗೆ 15 ವರ್ಷಗಳ ಬಳಿಕ ಜಾರಕಿಹೊಳಿ ಕುಟುಂಬಕ್ಕೆ ಮಂತ್ರಿಗಿರಿ ಕೈ ತಪ್ಪಿದೆ. ಬಾಲಚಂದ್ರ ಜಾರಕಿಹೊಳಿ ಜೊತೆಗೆ ಉಮೇಶ್ ಕತ್ತಿ ಅವರಿಗೂ ಮಂತ್ರಿಸ್ಥಾನ ತಪ್ಪಿದೆ.