Tag: followers

  • ರನ್‍ನಂತೆ ಏರುತ್ತಿದೆ ವಿರಾಟ್ ಕೊಹ್ಲಿ ಫಾಲೋವರ್ಸ್ ಸಂಖ್ಯೆ

    ರನ್‍ನಂತೆ ಏರುತ್ತಿದೆ ವಿರಾಟ್ ಕೊಹ್ಲಿ ಫಾಲೋವರ್ಸ್ ಸಂಖ್ಯೆ

    ಮುಂಬೈ: ಭಾರತ ಕ್ರಿಕೆಟ್ ತಂಡದ ರನ್ ಮಿಷನ್ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೆ ವೇಗವಾಗಿ 23 ಸಾವಿರ ರನ್‍ಗಳ ಸಾಧನೆ ಮಾಡಿದ್ದಾರೆ. ಇದೀಗ ಕೊಹ್ಲಿ ಅವರ ರನ್ ಸಾಧನೆಯಂತೆ ಅವರ ಇನ್‍ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಕೂಡ ಏರಿಕೆ ಕಂಡಿದೆ.

    ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ತನ್ನ ಅದ್ಭುತ ಬ್ಯಾಟಿಂಗ್ ಮೂಲಕ ರನ್ ಶಿಖರವೇರುತ್ತಿದ್ದಾರೆ. ಇದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಿಂಬಾಲಕರ ಸಂಖ್ಯೆಯು ಏರಿಕೆ ಕಾಣುತ್ತಿದ್ದು, ಇದೀಗ ವಿರಾಟ್ ಇನ್‍ಸ್ಟಾಗ್ರಾಂನಲ್ಲಿ 150 ದಶಲಕ್ಷ ಫಾಲೋವರ್ಸ್‍ಗಳನ್ನು ಹೊಂದಿದ್ದು, ಈ ಮೂಲಕ ಭಾರತ ಮತ್ತು ಏಷ್ಯಾದಲ್ಲಿ 150 ದಶಲಕ್ಷ ಹಿಂಬಾಲಕರನ್ನು ಹೊಂದಿದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಸಿಕ್ಸರ್‌ನೊಂದಿಗೆ ಅರ್ಧಶತಕ – ಭಾರತದ ಪರ ವಿಶೇಷ ಸಾಧನೆಗೈದ ಶಾರ್ದೂಲ್

    ವಿರಾಟ್ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿದ ಕ್ರೀಡಾಪಟುಗಳಲ್ಲಿ 4ನೇ ಸ್ಥಾನ ಸಂಪಾದಿಸಿದ್ದು, ಫುಟ್‍ಬಾಲ್ ತಾರೆಗಳಾದ ಕ್ರಿಶ್ಚಿಯಾನೊ ರೊನಾಲ್ಡ್ 337 ದಶಲಕ್ಷ, ಲಿಯೋನೆಲ್ ಮೆಸ್ಸಿ 260 ದಶಲಕ್ಷ, ನೇಮರ್ 160 ದಶಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಇದನ್ನೂ ಓದಿ : ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ಸ್ಮಾರ್ಟ್ ಬಾಲ್

  • ಇನ್‍ಸ್ಟಾಗೆ ಎಂಟ್ರಿಕೊಟ್ಟ ನಾಗರಹಾವು ನಟಿ ಜ್ಯೋತಿಕಾ- 2 ಗಂಟೆಯಲ್ಲಿ ಮಿಲಿಯನ್ ಫಾಲೋವರ್ಸ್

    ಇನ್‍ಸ್ಟಾಗೆ ಎಂಟ್ರಿಕೊಟ್ಟ ನಾಗರಹಾವು ನಟಿ ಜ್ಯೋತಿಕಾ- 2 ಗಂಟೆಯಲ್ಲಿ ಮಿಲಿಯನ್ ಫಾಲೋವರ್ಸ್

    ಚೆನ್ನೈ: ಕಾಲಿವುಡ್ ನಟಿ ಜ್ಯೋತಿಕಾ ಇನ್‍ಸ್ಟಾಗ್ರಾಮ್‍ಗೆ ಎಂಟ್ರಿಕೊಟ್ಟಿದ್ದಾರೆ. 2 ಗಂಟೆಯಲ್ಲಿ ಮಿಲಿಯನ್ ಫಾಲೋವರ್ಸ್ ಪಡೆದುಕೊಳ್ಳುವ ಮೂಲಕವಾಗಿ ದಾಖಲೆ ಮಾಡಿದ್ದಾರೆ.

    ಸ್ಟಾರ್ ಹೀರೋ ಸೂರ್ಯ ಅವರನ್ನು ಮದುವೆಯಾಗಿರುವ ಜ್ಯೋತಿಕಾ ಅವರು ಸಾಮಾಜಿಕ ಜಾಲತಾಣದಿಂದ ಸಾಕಷ್ಟು ದೂರ ಉಳಿದಿದ್ದರು. ಹಾಗಾಗಿ ಅವರ ಕುರಿತಾಗಿ ಯಾವುದೇ ಮಾಹಿ ತಿಳಿಯದೆ ಅಭಿಮಾನಿಗಳು ಅವರನ್ನು ಮರೆತಂತೆ ಆಗಿತ್ತು. ಆದರೆ ಇನ್‍ಸ್ಟಾಗ್ರಾಮ್ ಖಾತೆ ತೆರೆದು ಫೋಟೋ ಫೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 2ನೇ ಮಗು ನಿರೀಕ್ಷೆಯಲ್ಲಿ ಫ್ರೆಂಚ್ ಬಿರಿಯಾನಿ ನಟಿ ದಿಶಾ ಮದನ್

     

    View this post on Instagram

     

    A post shared by Jyotika (@jyotika)

    ಜಮ್ಮು ಕಾಶ್ಮೀರಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದ ಫೋಟೋಗಳನ್ನು ಹಂಚಿಕೊಂಡು ಶುಭಾರಂಭ ಮಾಡಿದ್ದಾರೆ. ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ನನ್ನ ಲಾಕ್‍ಡೌನ್ ಡೈರಿಯಿಂದ ಕೆಲವು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಸ್ವಾಂತಂತ್ರ್ಯ ದಿನಾಚರಣೆಯಂದು ಹಿಮಾಲಯ ಪರ್ವತಗಳಲ್ಲಿ ಸುಂದರವಾದ ಕಾಶ್ಮೀರ ಗ್ರೇಟ್ ಲೆಕ್ಸ್ ನಲ್ಲಿ 70 ಕಿಮೀ ಟ್ರಕ್, ಅದ್ಭುತ ಸಹಾಸ ತಂಡದೊಂದಿಗೆ ಕೈಗೊಂಡಿದ್ದ ನನ್ನ ಕೆಲವು ಸ್ನೇಹಿತರಿಗೆ ಧನ್ಯವಾದ. ಭಾರತ ದೇಶದ ಸುಂದರವಾಗಿದೆ ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.

    ಜ್ಯೋತಿಕಾ ಇನ್‍ಸ್ಟಾಗ್ರಾಮ್ ಖಾತೆ ತೆರೆದು ಪೋಸ್ಟ್ ಮಾಡುತ್ತಿದ್ದಂತೆ ಕೆಲವೇ ಗಂಟೆಯಲ್ಲಿ 1.3 ಮಿಲಿಯನ್ ಫಾಲೋವರ್ಸ್ ಪಡೆದುಕೊಂಡಿದ್ದು, 447,045 ಲೈಕ್‍ಗಳನ್ನು ಇದುವರೆಗೂ ಮೊದಲ ಪೋಸ್ಟ್ ಗೆ ಪಡೆದುಕೊಂಡಿದ್ದಾರೆ. ಪತ್ನಿಗೆ ಇನ್‍ಸ್ಟಾಗೆ ಸ್ವಾಗತ ಕೋರಿರುವ ನಟ ಸೂರ್ಯ ನಿನ್ನನ್ನು ಇನ್‍ಸ್ಟಾದಲ್ಲಿ ನೋಡಲು ಥ್ರಿಲ್ ಆಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಾರೆಯಾಗಿ ಜ್ಯೋತಿಕಾ ಇನ್‍ಸ್ಟಾಗೆ ಎಂಟ್ರಿಕೊಟ್ಟಿರುವುದು ಅಭಿಮಾನಿಗಳಿಗೂ ಸಖತ್ ಸಂತೋಷವಾಗಿದೆ.

  • ನ್ಯಾಷನಲ್ ಕ್ರಷ್‍ಗೆ ಸೋಶಿಯಲ್ ಮೀಡಿಯಾದಲ್ಲಿ 2ಕೋಟಿ ಫಾಲೋವರ್ಸ್

    ನ್ಯಾಷನಲ್ ಕ್ರಷ್‍ಗೆ ಸೋಶಿಯಲ್ ಮೀಡಿಯಾದಲ್ಲಿ 2ಕೋಟಿ ಫಾಲೋವರ್ಸ್

    ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ ಎನ್ನುವುದ ಗೊತ್ತಿರುವ ವಿಚಾರವಾಗಿದೆ. ಆದರೆ ಇವರು ಇನ್‍ಸ್ಟಾಗ್ರಾಮ್‍ನಲ್ಲಿ ಬರೋಬ್ಬರಿ 2 ಕೋಟಿ ಫಾಲೋವರ್ಸ್ ಹೊಂದಿದ್ದಾರೆ.

    ಇನ್‍ಸ್ಟಾಗ್ರಾಮ್‍ನಲ್ಲಿ ಬರೋಬ್ಬರಿ 2 ಕೋಟಿ ಬೆಂಗಬಲಿಗರನ್ನು ಹೊಂದುವ ಮೂಲಕವಾಗಿ ದಕ್ಷಿಣ ಭಾರತದಲ್ಲೇ ಹೆಚ್ಚನ ಫಾಲೋವರ್ಸ್ ಹೊಂದಿರುವ ನಟಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೇ ಖುಷಿಯಲ್ಲಿ ರಶ್ಮಿಕಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಒಂದು ಅಪರೂಪದ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕ ಕರೀನಾ 2ನೇ ಪುತ್ರ

    ಸಿನಿ ದುನಿಯಾದಲ್ಲಿ ನಂಬರ್ ಒನ್ ನಟಿಯಾಗಿರುವ ರಶ್ಮಿಕಾ ಮಂದಣ್ಣ ತನ್ನ ಜೀವನದ ಸವಿ ಸವಿ ನೆನಪನ್ನು ಹಂಚಿ ಸಂಭ್ರಮಿಸುತ್ತಿದ್ದಾರೆ. ಹ್ಯಾಪಿ ಮೂಡ್‍ನಲ್ಲಿ ಇರುವ ರಶ್ಮಿಕಾ ತನ್ನ ಜೀವನದ ಸವಿ ಸವಿ ನೆನಪನ್ನು ಹಂಚಿಕೊಂಡಿದ್ದಾರೆ. ಮೊದಲು ಥಿಯೇಟರ್‍ನಲ್ಲಿ ನೋಡಿದ ಸಿನಿಮಾ, ಮೊದಲ ಆಡಿಷನ್, ಮೊದಲ ಸಿನಿಮಾ, ಮೊದಲ ತಮಿಳು ಸಿನಿಮಾ, ಮೊದಲ ಹಿಂದಿ ಸಿನಿಮಾ, ಬಾಲಿವುಡ್ ಹಾಡು, ಮೊದಲ ಸ್ಟೇಜ್ ಫರ್ಫಾಮೆನ್ಸ್, ಫಸ್ಟ್ ಇನ್‍ಸ್ಟಾಗ್ರಾಮ್ ಪೋಸ್ಟ್, ಫಸ್ಟ್ ಇನ್‍ಸ್ಟಾಗ್ರಾಮ್ ರೀಲ್ಸ್, ಸಾಕು ನಾಯಿ ಜೊತೆಗೆ ಫಸ್ಟ್ ಪೋಸ್, ಬಾಲ್ಯದ ಫೋಟೋಸ್, ಮೊದಲ ಅವಾರ್ಡ್ ಹೀಗೆ ಹಲವು ನೆನೆಪುಗಳು ತುಂಬಿರುವ ಒಂದು ವೀಡಿಯೋವನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.

    ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಯ ಸಿನಿಮಾಗಳಲ್ಲಿ ಸಖತ್ ಬೇಡಿಕೆ ಇರುವ ನಟಿಯಾಗಿದ್ದಾರೆ. ಅಲ್ಲದೆ ಸೋಶಿಯಲ್ ಮೋಡಿಯಾದಲ್ಲಿ ಹೆಚ್ಚು ಫಾಲೋವರ್ಸ್‍ಗಳನ್ನು ಹೊಂದಿದ್ದಾರೆ. ಸಿನಿಮಾಗಳಲ್ಲಿ ಮೋಡಿ ಮಾಡಿರುವ ನಟಿ ಮಿಲಿಯನ್ ಗಟ್ಟಲೇ ಜನರ ಪ್ರೀತಿಯನ್ನು ಸೋಶಿಯಲ್ ಮೀಡಿಯಾದಲ್ಲಿಗಳಿಸಿದ್ದಾರೆ. ಸೌತ್ ಇಂಡಿಯಾದ ಸ್ಟಾರ್ ನಟಿ ಮಣಿಯರಿಗಿಂತ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ ಈ ಕನ್ನಡದ ಬೆಡಗಿ.

  • ಕಾಜಲ್, ಸಮಂತಾ, ವಿಜಯ್ ದೇವರಕೊಂಡ ಹಿಂದಿಕ್ಕಿದ ರಶ್ಮಿಕಾ

    ಕಾಜಲ್, ಸಮಂತಾ, ವಿಜಯ್ ದೇವರಕೊಂಡ ಹಿಂದಿಕ್ಕಿದ ರಶ್ಮಿಕಾ

    ಬೆಂಗಳೂರು: ಚೆಷ್ಮಾ ಚೆಲುವೆ ರಶ್ಮಿಕಾ ಮಂದಣ್ಣ ಟಾಲಿವುಡ್ ಸೇರಿದಂತೆ ಇದೀಗ ಬಾಲಿವುಡ್ ಸಿನಿಮಾಗಳಲ್ಲಿ ಸಹ ಸಖತ್ ಬ್ಯುಸಿಯಾಗಿದ್ದು, ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಅದೇ ರೀತಿ ಜನಪ್ರಿಯತೆ ಸಹ ಹೆಚ್ಚುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಫಾಲೋವರ್ಸ್ ಜಾಸ್ತಿಯಾಗುತ್ತಿದ್ದಾರೆ. ಇದೀಗ ಖುಷಿ ವಿಚಾರವೊಂದನ್ನು ಅವರು ಹಂಚಿಕೊಂಡಿದ್ದಾರೆ.

    ರಶ್ಮಿಕಾ ಮಂದಣ್ಣ ಇದೀಗ ನ್ಯಾಷನಲ್ ಕ್ರಶ್ ಆಗಿದ್ದು, ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಹೀಗಾಗಿ ಫ್ಯಾನ್ ಫಾಲೋವರ್ಸ್ ಪ್ರಮಾಣ ಸಹ ಏರುತ್ತಲೇ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಸಹ ಭಾರೀ ಜನಪ್ರಿಯತೆ ಗಳಿಸುತ್ತಿದ್ದಾರೆ. ಹೀಗಾಗಿ ಫಾಲೋವರ್ಸ್ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರುತ್ತಿದೆ. ಇನ್‍ಸ್ಟಾಗ್ರಾಂನಲ್ಲಿ ಇದೀಗ ರಶ್ಮಿಕಾ ಮಂದಣ್ಣ ಬರೋಬ್ಬರಿ 20 ಮಿಲಿಯನ್, ಅಂದರೆ 2 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಅರಿಶಿಣ ಬಣ್ಣದ ಟ್ಯೂಬ್ ಟಾಪ್ ಹಾಕಿರುವ ಫೋಟೋ ಪೋಸ್ಟ್ ಮಾಡುವ ಮೂಲಕ ಈ ಖುಷಿ ವಿಚಾರವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಕಾಜಲ್ ಅಗರ್ವಾಲ್ ಅವರಿಗೆ ಇನ್‍ಸ್ಟಾದಲ್ಲಿ 19.3 ಮಿಲಿಯನ್ ಹಿಂಬಾಲಕರಿದ್ದರೆ, ಕಿಯಾರಾ ಅಡ್ವಾಣಿಯವರಿಗೆ 1.83 ಕೋಟಿ, ಸಮಂತಾ ಅವರಿಗೆ 1.80, ಪೋಜಾ ಹೆಗ್ಡೆ 1.48 ಹಾಗೂ ವಿಜಯ್ ದೇವರಕೊಂಡ ಅವರು 1.26 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಈ ಮೂಲಕ ಪ್ರಸಿದ್ಧ ನಟ, ನಟಿಯರನ್ನು ಸಹ ರಶ್ಮಿಕಾ ಮಂದಣ್ಣ ಹಿಂದಿಕ್ಕಿದ್ದಾರೆ.

    ಕನ್ನಡ, ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ, ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಹೀಗಾಗಿ ಜಾಲತಾಣಗಳಲ್ಲಿ ಫಾಲೋವರ್ಸ್‍ಗಳ ಸಂಖ್ಯೆ ಏರುತ್ತಲೇ ಇದೆ. ಬ್ಯಾಕ್ ಟು ಬ್ಯಾಕ್ ಎರಡು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ, ಸಾಮಾಜಿಕ ಜಾಲತಾಣಗಳಲ್ಲಿ ಸಹ ಸಖತ್ ಆ್ಯಕ್ಟಿವ್ ಆಗಿದ್ದಾರೆ.

    ನೆಚ್ಚಿನ ನಟಿಯ ಜನಪ್ರಿಯತೆ ಕಂಡು ಅಭಿಮಾನಿಗಳು ಸಂತಸಪಟ್ಟಿದ್ದಾರೆ. ಲಕ್ಷಾಂತರ ಜನ ಅವರ ಇನ್‍ಸ್ಟಾ ಪೋಸ್ಟ್ ಲೈಕ್ ಮಾಡುತ್ತಿದ್ದಾರೆ. ಬಾಲಿವುಡ್‍ನಲ್ಲಿ ಮಿಷನ್ ಮಜ್ನು, ಗುಡ್ ಬೈ ಚಿತ್ರಗಳಲ್ಲಿ ತೊಡಗಿದ್ದಾರೆ. ಅದೇ ರೀತಿ ತಮಿಳಿನ ಸುಲ್ತಾನ್ ಚಿತ್ರದಲ್ಲಿ ಕಾರ್ತಿಕ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ತೆಲುಗಿನ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.

  • ಜೆ.ಸಿ ಮಾಧುಸ್ವಾಮಿಗೆ ಸಚಿವ ಸ್ಥಾನ – ಹರಕೆ ತೀರಿಸಿದ ಅಭಿಮಾನಿಗಳು

    ಜೆ.ಸಿ ಮಾಧುಸ್ವಾಮಿಗೆ ಸಚಿವ ಸ್ಥಾನ – ಹರಕೆ ತೀರಿಸಿದ ಅಭಿಮಾನಿಗಳು

    ತುಮಕೂರು: ಜೆ.ಸಿ ಮಾಧುಸ್ವಾಮಿ ಅವರು ಎರಡನೇ ಬಾರಿ ಸಚಿವರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಳೆಯೂರು ಆಂಜನೇಯಸ್ವಾಮಿಗೆ 101 ತೆಂಗಿನಕಾಯಿ ಒಡೆಯುವ ಮೂಲಕ ಸಚಿವರ ಸಮ್ಮುಖದಲ್ಲಿ ಹರಕೆ ತೀರಿಸಿದರು.

    ಮುಖ್ಯಮಂತ್ರಿ ಬದಲಾವಣೆ ಹಿನ್ನೆಲೆಯಲ್ಲಿ ಮಂತ್ರಿಮಂಡಲ ವಿಸರ್ಜನೆಯಾಗಿದ್ದು ಮಾಧುಸ್ವಾಮಿಗೆ ಸಚಿವ ಸ್ಥಾನ ಕೈತಪ್ಪುವ ಭೀತಿ ಬಿಜೆಪಿ ಕಾರ್ಯಕರ್ತರಲ್ಲಿ ಮನೆಮಾಡಿತ್ತು. ಸಚಿವ ಸ್ಥಾನ ಕೈತಪ್ಪಿದರೆ ತಾಲೂಕಿನಲ್ಲಿ ನಡೆಯುವ ಅಭಿವೃದ್ಧಿ ಕಾರ್ಯ ಕುಂಠಿತವಾಗುವ ಭಯ ಅವರ ಅಭಿಮಾನಿಗಳಲ್ಲಿ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ಯೋಧ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಿಲಿಟರಿ ಶಿವಣ್ಣನವರು ಮಧುಸ್ವಾಮಿ ಅವರಿಗೆ ಸಚಿವ ಸ್ಥಾನ ಲಭಿಸಿದರೆ ಆಂಜನೇಯಸ್ವಾಮಿ 101 ತೆಂಗಿನಕಾಯಿ ಪಡೆಯುವುದಾಗಿ ಹರಕೆ ಹೊತ್ತಿದ್ದರು. ಅದರಂತೆ ಸಚಿವರಿಗೆ ಮಂತ್ರಿಸ್ಥಾನ ಸಿಕ್ಕಿದ ಖುಷಿಯಲ್ಲಿ ಮಾಧುಸ್ವಾಮಿ ಅವರನ್ನು ದೇವಾಲಯಕ್ಕೆ ಬರಮಾಡಿಕೊಂಡು ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ದೇವರಿಗೆ 101 ತೆಂಗಿನಕಾಯಿ ಪಡೆಯಲಾಯಿತು.

    ಈ ಸಂದರ್ಭದಲ್ಲಿ ಸಚಿವರು ಮತ ಹಾಕಿದ ತಾಲೂಕಿನ ಜನರ ಋಣ ತೀರಿಸಲು ಅಭಿವೃದ್ಧಿ ಕೆಲಸ ಮಾಡುತ್ತೇನೆ. ರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇನೆ ಎಂಬ ಭರವಸೆ ನೀಡಿದರು. ಮಿಲಿಟರಿ ಶಿವಣ್ಣ, ಪುರಸಭೆ ಸದಸ್ಯ ರೇಣುಕಾ ಪ್ರಸಾದ್, ನಿರಂಜನ್ ಕೇಶವಮೂರ್ತಿ ನಾಮಿನಿ ಸದಸ್ಯರಾದ ಗೋವಿಂದರಾಜ್ ದೇವರಾಜ್ ಬಿಜೆಪಿ ಮುಖಂಡ ರಾಮು ಶೆಟ್ಟಿಕೆರೆ ವಿನಯ್ ಸೇರಿದಂತೆ ಹಲವರು ಮುಖಂಡರುಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಯಕ್ಷಗಾನ ರಂಗಸ್ಥಳದಲ್ಲೇ ಕುಸಿದು ಬಿದ್ದ ಅಮ್ಮುಂಜೆ ಮೋಹನ್ ಕುಮಾರ್

  • ಕುಮಾರಣ್ಣ ಕೈಕಟ್ಟಿ ನಿಲ್ಲುವುದು ಭಯದಿಂದ ಅಲ್ಲ, ಸಂಸ್ಕಾರದಿಂದ – ಜೆಡಿಎಸ್ ಅಭಿಮಾನಿಗಳು

    ಕುಮಾರಣ್ಣ ಕೈಕಟ್ಟಿ ನಿಲ್ಲುವುದು ಭಯದಿಂದ ಅಲ್ಲ, ಸಂಸ್ಕಾರದಿಂದ – ಜೆಡಿಎಸ್ ಅಭಿಮಾನಿಗಳು

    ಮಂಡ್ಯ: ಒಂದು ಕಡೆ ಜೆಡಿಎಸ್ ನಾಯಕರು ಮತ್ತು ಸಂಸದೆ ಸುಮಲತಾ ಅಂಬರೀಶ್ ನಡುವೆ ಟಾಕ್ ವಾರ್ ನಡೆಯುತ್ತಿದ್ರೆ ಮತ್ತೊಂದು ಕಡೆ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಅಭಿಮಾನಿಗಳ ವಾರ್ ಕೂಡ ಮುಂದುವರಿದಿದೆ.

    ಮೊದಲು ಅಂಬರೀಶ್ ಅವರ ಜೊತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಕೈ ಕಟ್ಟಿ ನಿಂತಿರುವ ಫೋಟೋ ಹಾಕಿ ‘ಸಿಂಹದ ಎದುರು ಕೈ ಕಟ್ಟಿ ನಿಂತುಕೊಂಡು ತುಟಿ ಬಿಚ್ಚದವರು ಈಗ ಮಾತಮಾಡುತ್ತಿದ್ದಾರೆ’ ಎಂದು ಸುಮಲತಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದೀಗ ಈ ಪೋಸ್ಟ್ ಗೆ ಜೆಡಿಎಸ್ ಹಾಗೂ ಕುಮಾರಸ್ವಾಮಿ ಫ್ಯಾನ್ಸ್ ಒಂದಷ್ಟು ಫೋಟೋಗಳನ್ನು ಹಾಕಿ ಸುಮಲತಾ ಫ್ಯಾನ್ಸ್ ಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಅಕ್ಕಾ ನಮ್ಮ ಕ್ಷೇತ್ರಕ್ಕೂ ಬನ್ನಿ, ಅಕ್ರಮ ಗಣಿಗಾರಿಕೆ ನಿಲ್ಲಿಸಿಕೊಡಿ: ಸುರೇಶ್‍ಗೌಡ

    ಕುಮಾರಸ್ವಾಮಿ ಅವರು ಜನರೊಂದಿಗೆ ಹಾಗೂ ಇತರ ನಾಯಕರುಗಳೊಂದಿಗೆ ಕೈ ಕಟ್ಟಿ ಹಾಕಿಕೊಂಡು ನಿಂತಿರುವ ಫೋಟೋಗಳನ್ನು ಹಾಕಿ, ‘ಕುಮಾರಸ್ವಾಮಿ ಯಾರ ಮೇಲಿನ ಭಯದಿಂದ ಕೈ ಕಟ್ಟಿಕೊಂಡು ನಿಲ್ಲುವುದಿಲ್ಲ. ದೇವೇಗೌಡರು ಹೇಳಿಕೊಟ್ಟಿರುವ ಸಂಸ್ಕಾರದಿಂದ ಅವರು ಕೈ ಕಟ್ಟಿ ಹಾಕಿಕೊಂಡು ನಿಲ್ಲುತ್ತಾರೆ. ಸಣ್ಣ ಮಗುವಿನ ಎದುರುಗಡೆ ಕೂಡ ಕೈ ಕಟ್ಟಿಕೊಂಡು ನಿಲ್ಲುವ ಸಂಸ್ಕಾರ ಅವರಿಗೆ ಇದೆ. ಅಂಬರೀಶ್ ಅವರು ಸಹ ಅವರ ಮುಂದೆ ಇದ್ದಾಗ ಕೈ ಕಟ್ಟಿಕೊಂಡ ಉದಾಹರಣೆಗಳು ಇವೆ. ಇಷ್ಟಕ್ಕೆ ಭಯ ಎಂದೆಲ್ಲಾ ಉಲ್ಲೇಖ ಮಾಡುವುದು ಸಂಸ್ಕಾರ ಇಲ್ಲದವರು ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಸ್ವಾಭಿಮಾನಿ ಪಕ್ಷ ಸ್ಥಾಪಿಸ್ತಾರಾ ಸಂಸದೆ ಸುಮಲತಾ ಅಂಬರೀಶ್..?

  • 10 ಕೋಟಿ ಇನ್‍ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿದ ಕೊಹ್ಲಿ

    10 ಕೋಟಿ ಇನ್‍ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿದ ಕೊಹ್ಲಿ

    ನವದೆಹಲಿ: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಇನ್‍ಸ್ಟಾಗ್ರಾಮ್‍ನಲ್ಲಿ 10 ಕೋಟಿ ಜನರು ಫಾಲೋ ಮಾಡುತ್ತಿದ್ದಾರೆ. ಈ ಮೂಲಕವಾಗಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಇನ್‍ಸ್ಟಾಗ್ರಾಮ್‍ನಲ್ಲಿ 10 ಕೋಟಿ ದಾಟಿದ್ದು, ಈ ಸಾಧನೆಗೆ ಮಾಡಿದ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಗಿರುವ ಕೊಹ್ಲಿ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಅಭಿನಂದನೆ ಸಲ್ಲಿಸಿದೆ.

     

    View this post on Instagram

     

    A post shared by Virat Kohli (@virat.kohli)

    ಪೋರ್ಚುಗಲ್‍ನ ಕ್ರಿಶ್ಚಿಯಾನೊ ರೊನಾಲ್ಡೋ(26.6) ಕೋಟಿ, ಅರ್ಜೆಂಟಿನಾದ ಲಿಯೊನಲ್ ಮೆಸ್ಸಿ(18.7) ಕೋಟಿ, ಬ್ರೆಜಿಲ್‍ನ ನೆಯ್ಮರ್(14.7) ಇದ್ದಾರೆ. ಪಾಪ್ ಸ್ಟಾರ್ ಡಮಿ ಲೆವೆಟೋ(9.9 ಕೋಟಿ) ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ಕ್ಲಬ್(9.5ಕೋಟಿ) ಬಾರ್ಸಿಲೋನಾ ಎಫ್.ಸಿ(9.4ಕೋಟಿ)ಯನ್ನು ಹೊಂದಿದ್ದಾರೆ. ಆದರೆ ಇವರೆಲ್ಲರನ್ನು ವಿರಾಟ್ ಹಿಂದಿಕ್ಕಿದ್ದಾರೆ.

    ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಇನ್‍ಸ್ಟಾಗ್ರಾಮ್‍ನಲ್ಲಿ 60.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, 2 ನೇ ಸ್ಥಾನದಲ್ಲಿದ್ದಾರೆ.

  • ಕೋಲಾರದಲ್ಲಿ ಧ್ರುವ ಸರ್ಜಾ ನೋಡಲು ಮುಗಿಬಿದ್ದ ಅಭಿಮಾನಿಗಳು

    ಕೋಲಾರದಲ್ಲಿ ಧ್ರುವ ಸರ್ಜಾ ನೋಡಲು ಮುಗಿಬಿದ್ದ ಅಭಿಮಾನಿಗಳು

    – ಲಾಠಿ ರುಚಿ ತೋರಿಸಿದ ಪೊಲೀಸರು

    ಕೋಲಾರ: ಸ್ಯಾಂಡಲ್‍ವುಡ್ ನಟ ಧ್ರುವ ಸರ್ಜಾ ನೋಡಲು ಬಂದ ಅಭಿಮಾನಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದ ಪ್ರಸಂಗ ಕೋಲಾರದ ಮಾಲೂರು ಪಟ್ಟಣದಲ್ಲಿ ನಡೆದಿದೆ.

    ಹೌದು. ಧ್ರುವ ಅವರು ಇಂದು ಮಾಲೂರು ಪಟ್ಟಣದ ಕೊಂಡಯ್ಯ ಹಾರ್ಡ್ ವೇರ್ ಮಳಿಗೆ ಉದ್ಘಾಟಿಸಲೆಂದು ಕೋಲಾರದ ಮಾಲೂರು ಪಟ್ಟಣಕ್ಕೆ ಬಂದಿದ್ದರು. ಈ ವೇಳೆ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ರಸ್ತೆಯುದ್ದಕ್ಕೂ ಜಮಾಯಿಸಿದ್ದರು. ಈ ವೇಳೆ ಎಸ್ಕಾರ್ಟ್ ಭದ್ರತೆಯಲ್ಲೂ ಧ್ರುವ ತಮ್ಮ ಅಭಿಮಾನಿಗಳತ್ತ ಕೈ ಬೀಸಿದರು.

    ಇತ್ತ ಧ್ರುವನನ್ನು ನೋಡುತ್ತಿದ್ದಂತೆಯೇ ಅಭಿಮಾನಿಗಳು ಜೋರಾಗಿ ಕೂಗುತ್ತಾ ಸಾವಿರಾರು ಸಂಖ್ಯೆಯಲ್ಲಿ ಮುಗಿಬಿದ್ದರು. ಅಭಿಮಾನಿಗಳನ್ನ ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟರು. ಕೊನೆಗೆ ಸಾಧ್ಯವಾಗದೆ ಲಾಠಿ ಬೀಸಿದ್ದಾರೆ. ಪೊಲೀಸರು ಲಾಠಿ ಬೀಸುತ್ತಿದ್ದಂತೆ ಅಭಿಮಾನಿಗಳು ಚದುರಿದ್ದಾರೆ. ನಟನ ನೋಡಲು ಅಭಿಮಾನಿಗಳು ಜಮಾಯಿಸಿದ್ದರಿಂದ ಕೋಲಾರ – ಹೊಸೂರು- ಬೆಂಗಳೂರು ರಸ್ತೆಯಲ್ಲಿ ಫುಲ್ ಟ್ರಾಫಿಕ್ ಉಂಟಾಯಿತು. ಕಿಮೀ ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು.

    ಬಳಿಕ ಮಾತನಾಡಿದ ಧ್ರುವ, ಕೊರೊನಾ ಸಂದರ್ಭದಲ್ಲಿ ನಿಮ್ಮನ್ನು ಭೇಟಿ ಮಾಡಿಲ್ಲ. ಇದೀಗ ಇಷ್ಟು ಜನರನ್ನು ನೋಡಿ ತುಂಬಾ ಖುಷಿಯಾಯ್ತು ಎಂದು ಹೇಳಿದರು.

  • ನಾಳೆ ವಿನಯ್ ಕುಲಕರ್ಣಿ ಹುಟ್ಟುಹಬ್ಬ – ಬ್ಯಾನರ್ ಹಾಕಿದ ಅಭಿಮಾನಿಗಳು

    ನಾಳೆ ವಿನಯ್ ಕುಲಕರ್ಣಿ ಹುಟ್ಟುಹಬ್ಬ – ಬ್ಯಾನರ್ ಹಾಕಿದ ಅಭಿಮಾನಿಗಳು

    ಧಾರವಾಡ: ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರದ್ದು ನಾಳೆ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಈಗಾಗಲೇ ಭರದ ಸಿದ್ಧತೆ ನಡೆಸುತ್ತಿದ್ದಾರೆ.

    ಹೌದು. ನಾಳೆ ವಿನಯ್ ಕುಲಕರ್ಣಿ ಅವರ 55ನೇ ಹುಟ್ಟುಹಬ್ಬವಾಗಿದ್ದು, ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಧಾರವಾಡದ ಎಲ್ಲ ಕಡೆ ಶುಭಾಶಯ ಕೋರಿ ಬ್ಯಾನರ್ ಗಳನ್ನು ಹಾಕಿದ್ದಾರೆ. ಅಲ್ಲದೆ ಮುಖವಾಡ ಗಳನ್ನು ಕೂಡ ತಯಾರಿಸಿದ್ದಾರೆ.

    ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಕುಲಕರ್ಣಿಯವರು ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಎದುರಿಸುತ್ತಿದ್ದಾರೆ. ಈ ಮಧ್ಯೆ ತಮ್ಮ ಫೇಸ್ ನುಕ್ ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಅವರು, ಬಿದ್ದು, ಎದ್ದು, ಗೆದ್ದು ಬರುವೆನು. ಸತ್ಯದ ತಳಹದಿಯಿಂದ ಎದ್ದು, ಗೆದ್ದು ಬರುವೆನು. ಸುಳ್ಳು ಕುಣಿಯುತ್ತಿರುವಾಗ ಸತ್ಯ ಅಳುತ್ತದೆ. ಆದರೆ ಸತ್ಯ ಎದ್ದು ನಿಂತಾಗ ಸುಳ್ಳು ಸತ್ತೆ ಹೋಗುತ್ತದೆ. ಸತ್ಯಕ್ಕೆ ಸೋಲಿಲ್ಲ, ನನ್ನೆಲ್ಲಾ ಪ್ರೀತಿ ಪಾತ್ರರಿಗೆ ನನ್ನ ಮೇಲಿಟ್ಟಿರುವ ನಂಬಿಕೆಗೆ ನಾನು ಚಿರಋಣಿ, ನಿಮ್ಮೆಲ್ಲರ ಹಾರೈಕೆ ಹಾಗೂ ನಂಬಿಕೆ ಎಂದೂ ಸುಳ್ಳಾಗುವುದಿಲ್ಲ. ಇಂತಿ ನಿಮ್ಮ ವಿನಯ ಕುಲಕರ್ಣಿ ಎಂದು ಬರೆದುಕೊಂಡಿದ್ದಾರೆ.

    ಅಲ್ಲದೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರ ಸಾಮಾಜಿಕ ಜಾಲತಾಣಗಳ ಪೋಸ್ಟ್ ಫೋಟೋ ಹಾಕಿ ವಿನಯ್ ಕುಲಕರ್ಣಿ ಸಾಲುಗಳನ್ನು ಬರೆದಿದ್ದಾರೆ.

  • ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದ ತಿಳಿಸಿದ ‘ಯಜಮಾನ’

    ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದ ತಿಳಿಸಿದ ‘ಯಜಮಾನ’

    ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇದೀಗ ತಮ್ಮ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

    ಹೌದು. ಬಹುನಿರೀಕ್ಷಿತ ಚಿತ್ರ ರಾಬರ್ಟ್ ಸಿನಿಮಾ ಟೀಸರ್ ರಿಲೀಸ್ ಆಗಿ ಕೇವಲ ಒಂದು ಗಂಟೆಯ ಒಳಗೆ 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದರು. ಜೊತೆಗೆ 16 ಸಾವಿರಕ್ಕೂ ಅಧಿಕ ಮಂದಿ ಕಾಮೆಂಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ‘ದಾಸ’ ತನ್ನ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ.

    ಈ ಸಂಬಂಧ ಟೀಸರ್ ಜೊತೆಗೆ ಟ್ವೀಟ್ ಮಾಡಿರುವ ಸಾರಥಿ, ರಾಬರ್ಟ್ ಚಿತ್ರದ ಟೀಸರ್ 5 ಮಿಲಿಯನ್(50 ಲಕ್ಷ) ಬಾರಿ ವೀಕ್ಷಣೆಯಾಗಿದೆ. ಇದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು, ನಿಮ್ಮ ದಾಸ ದರ್ಶನ್ ಎಂದು ಬರೆದುಕೊಂಡಿದ್ದಾರೆ.

    ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಇನ್ನೇನು ತೆರೆಗಪ್ಪಲಿಸಲು ಸಜ್ಜಾಗಿದೆ. ಕಳೆದ ಏಪ್ರಿಲ್‍ನಲ್ಲಿಯೇ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಲಾಕ್‍ಡೌನ್ ಪರಿಣಾಮ ರಾಬರ್ಟ್ ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಪ್ರತಿ ಹಬ್ಬಕ್ಕೂ ಚಿತ್ರತಂಡದ ಕಡೆಯಿಂದ ಅಭಿಮಾನಿಗಳಿಗೆ ಒಂದಿಲ್ಲೊಂದು ಸಪ್ರ್ರೈಸ್ ನೀಡಲಾಗುತ್ತಿದೆ.

    ದರ್ಶನ್ ಅವರ ಹುಟ್ಟುಹಬ್ಬದಂದು (ಫೆಬ್ರವರಿ 16)ರಂದು ಅಭಿಮಾನಿಗಳಿಗೆಂದೇ ರಾಬರ್ಟ್ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿತ್ತು. ಪೋಸ್ಟರ್, ಮೋಷನ್ ಪೋಸ್ಟರ್ ನಿಂದಲೇ ಭಾರೀ ಸದ್ದು ಮಾಡಿದ್ದ ರಾಬರ್ಟ್ ಸಿನಿಮಾದ ಟೀಸರ್ ನೋಡಿರುವ ಅಭಿಮಾನಿಗಳು ಸಿನಿಮಾಗಾಗಿ ತುದಿಗಾಲಲ್ಲಿ ನಿಂತಿದ್ದಾರೆ. ಈ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದು, ಉಮಾಪತಿ ಅವರು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಐರಾವತನಿಗೆ ನಾಯಕಿಯಾಗಿ ಕನ್ನಡತಿ ಆಶಾ ಭಟ್ ನಟಿಸಿದ್ದಾರೆ.