Tag: followers

  • ಪತ್ನಿ ಪ್ರಿಯಾಗೆ ಶುಭ ಕೋರಿದ ಸುದೀಪ್

    ಪತ್ನಿ ಪ್ರಿಯಾಗೆ ಶುಭ ಕೋರಿದ ಸುದೀಪ್

    ಬೆಂಗಳೂರು: ಕಿಚ್ಚ ಸುದೀಪ್ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ತಮ್ಮ ಅಭಿಮಾನಿಗಳು ಮಾಡುವ ಟ್ವೀಟ್ ಗೆ ರೀ-ಟ್ವೀಟ್ ಮಾಡಿ ಅವರಿಗೆ ಸಂತೋಷಪಡಿಸುತ್ತಾರೆ. ಈಗ ಅವರ ಪತ್ನಿ ಪ್ರಿಯಾ ರಾಧಾ ಕೃಷ್ಣನ್ ಅವರಿಗೆ ಶುಭಾಶಯ ಕೋರಿದ್ದಾರೆ.

    ಹೌದು. ಸುದೀಪ್ ಅವರ ಪತ್ನಿ ಪ್ರಿಯಾ ಅವರು ಯಾವುದೇ ಸೆಲೆಬ್ರಿಟಿ ಅಲ್ಲ, ಆದರೂ ಅವರು ಯಾವುದೇ ಸೆಲೆಬ್ರಿಟಿಗೂ ಕಮ್ಮಿಯಿಲ್ಲ. ಟ್ವಿಟ್ಟರ್ ನಲ್ಲಿ ಅವರನ್ನು 50 ಸಾವಿರ ಮಂದಿ ಫಾಲೋ ಮಾಡುತ್ತಿದ್ದಾರೆ.

    ಪ್ರಿಯಾ ಅವರ ಹಿಂಬಾಲಕರ ಸಂಖ್ಯೆ 50 ಸಾವಿರ ದಾಟಿದ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ. ಇದಕ್ಕೆ ಪ್ರಿಯಾ ಥಾಂಕ್ಯೂ ಎಂದು ರಿಪ್ಲೈ ಕೂಡ ಮಾಡಿದ್ದಾರೆ.

    “ನನಗೆ 50 ಸಾವಿರ ಫಾಲೋವರ್ಸ್ ಆಗಿದ್ದು, ನನಗೆ ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ. ನಿಮ್ಮ ಪ್ರೀತಿ ನನ್ನ ಜೊತೆ ಹಂಚಿಕೊಂಡಿದಕ್ಕೆ ಧನ್ಯವಾದಗಳು” ಎಂದು ಪ್ರಿಯಾ ಅವರು ಬರೆದುಕೊಂಡಿದ್ದಾರೆ.

    2016 ಮೇ ತಿಂಗಳಲ್ಲಿ ಟ್ವಿಟ್ಟರ್ ಗೆ ಎಂಟ್ರಿ ಕೊಟ್ಟ ಪ್ರಿಯಾ 18 ಜನರನ್ನು ಫಾಲೋ ಮಾಡುತ್ತಿದ್ದು, 50 ಸಾವಿರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. 214 ಟ್ವೀಟ್ ಗಳನ್ನು ಮಾಡಿರುವ ಪ್ರಿಯಾ ಅವರು 1031 ಟ್ವೀಟ್ ಗಳಿಗೆ ಲೈಕ್ ಮಾಡಿದ್ದಾರೆ.

    18 ಜನರನ್ನು ಫಾಲೋ ಮಾಡುತ್ತಿದ್ದು, ಅದರಲ್ಲಿ ಕಿಚ್ಚ ಸುದೀಪ್, ನರೇಂದ್ರ ಮೋದಿ, ಶಾರೂಖ್ ಖಾನ್, ಫಾರ್ಹನ್ ಅಖ್ತರ್, ಅಮಿತಾಬ್ ಬಚ್ಚನ್, ಟ್ವಿಂಕಲ್ ಖನ್ನಾ, ರಿತೇಶ್ ದೇಶ್ ಮುಕ್, ಆಮಿ ಜಾಕ್ಸೆನ್, ಸದ್ಗುರು, ಮೋಹನ್ ಲಾಲ್, ರಣ್‍ವೀರ್ ಸಿಂಗ್, ಸ್ಮೃತಿ ಇರಾನಿ ಅವರನ್ನು ಫಾಲೋ ಮಾಡುತ್ತಿದ್ದಾರೆ.

    ಈ ಹಿಂದೆ ಸುದೀಪ್ ಅವರಿಗೆ 11 ಲಕ್ಷ ಅಭಿಮಾನಿ ಕಮ್ ಫಾಲೋವರ್ಸ್ ಆದಾಗ “ನಿಮ್ಮ ಜೀವನದಲ್ಲಿ ನನ್ನನ್ನೂ ಒಬ್ಬ ಸ್ನೇಹಿತನನ್ನಾಗಿ ಮಾಡಿದ್ದಕ್ಕೆ ಧನ್ಯವಾದಗಳು ಹಾಗೂ ನಿಮ್ಮ ಜೀವನದಲ್ಲಿ ಇನ್ನೂ ನನ್ನನ್ನು ಒಬ್ಬನನ್ನು ಆಗಿಸಿದ್ದಕ್ಕೆ ಆ ಎಲ್ಲಾ 11 ಲಕ್ಷ ಜನರಿಗೆ ನನ್ನ ಧನ್ಯವಾದಗಳು” ಎಂದು ಸುದೀಪ್ ಟ್ವೀಟ್ ಮಾಡಿದ್ದರು.

  • 11 ಲಕ್ಷ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಸುದೀಪ್

    11 ಲಕ್ಷ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಸುದೀಪ್

    ಬೆಂಗಳೂರು: ಎಲ್ಲರಿಗೂ ಗೊತ್ತಿರೋ ಹಾಗೆ ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಆ್ಯಕ್ಟೀವ್ ಆಗಿರುತ್ತಾರೆ. ಈಗ ಸುದೀಪ್ ಟ್ವಿಟ್ಟರ್ ನಲ್ಲಿ 11 ಲಕ್ಷ ಅಭಿಮಾನಿಗಳನ್ನು ಕಮ್ ಫಾಲೋವರ್ಸ್ ರನ್ನು ಹೊಂದಿದ್ದು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

    2009ರಲ್ಲಿ ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯನ್ನು ತೆರೆದಿದ್ದರು. ಆದರೆ ಈಗ ಅವರ ಫಾಲೋವರ್ಸ್ ಗಳ ಸಂಖ್ಯೆ 11 ಲಕ್ಷ ಏರಿದೆ. ಸುದೀಪ್ ಇದೂವರೆಗೂ ಟ್ವಿಟ್ಟರ್ ನಲ್ಲಿ 10 ಸಾವಿರಕ್ಕೂ ಹೆಚ್ಚು ಟ್ವೀಟ್ ಮಾಡಿದ್ದಾರೆ.

    ಶಾರೂಖ್ ಖಾನ್, ಸಲ್ಮಾನ್ ಖಾನ್, ರಾಜ್‍ಮೌಳಿ, ದರ್ಶನ್ ತುಗೂದೀಪ್, ರಕ್ಷಿತ್ ಶೆಟ್ಟಿ ಸೇರಿ 47ಕ್ಕೂ ಹೆಚ್ಚು ಮಂದಿಯನ್ನು ಸುದೀಪ್ ಫಾಲೋ ಮಾಡುತ್ತಿದ್ದಾರೆ. ಇದರಲ್ಲಿ 26 ಅವರ ಫ್ಯಾನ್ ಕ್ಲಬ್‍ಗಳನ್ನು ಫಾಲೋ ಮಾಡುತ್ತಿರುವುದು ವಿಶೇಷ.

    ನಿಮ್ಮ ಜೀವನದಲ್ಲಿ ನನ್ನನ್ನೂ ಒಬ್ಬ ಸ್ನೇಹಿತನನ್ನಾಗಿ ಮಾಡಿದ್ದಕ್ಕೆ ಧನ್ಯವಾದಗಳು ಹಾಗೂ ನಿಮ್ಮ ಜೀವನದಲ್ಲಿ ಇನ್ನೂ ನನ್ನನ್ನು ಒಬ್ಬನನ್ನು ಆಗಿಸಿದ್ದಕ್ಕೆ ಆ ಎಲ್ಲಾ 11 ಲಕ್ಷ ಜನರಿಗೆ ನನ್ನ ಧನ್ಯವಾದಗಳು ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

  • ಕ್ಯಾಮೆರಾ ಎಳೆದಾಡಿ ಬಾಬಾನ ರೌಡಿ ಬೆಂಬಲಿಗರಿಂದ ಪತ್ರಕರ್ತರ ಮೇಲೆ ಅಟ್ಯಾಕ್: ವಿಡಿಯೋ ನೋಡಿ

    ಕ್ಯಾಮೆರಾ ಎಳೆದಾಡಿ ಬಾಬಾನ ರೌಡಿ ಬೆಂಬಲಿಗರಿಂದ ಪತ್ರಕರ್ತರ ಮೇಲೆ ಅಟ್ಯಾಕ್: ವಿಡಿಯೋ ನೋಡಿ

    ಚಂಡೀಗಢ: ಅತ್ಯಾಚಾರ ಆರೋಪಿ ಬಾಬಾ ಗುರ್ಮಿತ್ ರಾಮ್ ರಹೀಂ ಸಿಂಗ್ ಗೆ ಸಿಬಿಐ ಕೋರ್ಟ್ ಸೋಮವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.

    ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆಗಳಿರುವುದರಿಂದ ಬಾಬಾ ಭಕ್ತರಲ್ಲಿ ಇದೀಗ ಆತಂಕ ಮಡುಗಟ್ಟಿದೆ. ಈ ನಡುವೆ ಸಿರ್ಸಾದಲ್ಲಿರುವ ಮುಖ್ಯ ಆಶ್ರಮದಿಂದ ಬಾಬಾ ಭಕ್ತರನ್ನು ಹೊರಗೆ ಕಳಿಸಲು ಸೇನೆ ಹರಸಾಹಸ ಪಡುತ್ತಿದೆ. ಆದ್ರೆ, 30 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಬಾಬಾ ಭಕ್ತರು ಆಶ್ರಮದಿಂದ ಹೊರಬರಲು ನಿರಾಕರಿಸುತ್ತಿದ್ದಾರೆ. ಸದ್ಯ ಆಶ್ರಮವನ್ನು ಸೇನೆ ಸುತ್ತುವರೆದಿದೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ ಆಗಿದೆ.

    ಬಾಬಾ ಗುರ್ಮಿತ್ ರಾಮ್ ರಹೀಂ ಸಿಂಗ್ ಬಂಧನದ ಬಳಿಕ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಒಂದು ದಿನ ಶಾಂತವಾಗಿದ್ದಂತೆ ಕಂಡುಬಂದಿದ್ದ ಪರಿಸ್ಥಿತಿ ಶಿಕ್ಷೆ ಪ್ರಮಾಣ ಪ್ರಕಟ ಮಾಡುವ ಕೆಲವೇ ಗಂಟೆಗಳಿಗೆ ಮೊದಲು ಮತ್ತೆ ಹಿಂಸೆ ಭುಗಿಲೆದ್ದಿದೆ. ದೇರಾ ಸಾಚಾ ಸೌದ(ಡಿಎಸ್‍ಎಸ್) ಮುಖ್ಯ ಆಶ್ರಮ ಇರುವ ಸಿರ್ಸಾದಲ್ಲಿ ಮಾಧ್ಯಮಗಳನ್ನು ಗುರಿಯಾಗಿಸಿಕೊಂಡು ಬಾಬಾನ ಗೂಂಡಾ ಬೆಂಬಲಿಗರು ಕಲ್ಲು ತೂರಾಟ ನಡೆಸಿದ್ದಾರೆ.

    ಆಶ್ರಮದ ಆವರಣಕ್ಕೆ ಮಾಧ್ಯಮದವರು ತಮ್ಮ ಕಾರಿನಲ್ಲಿ ಚಲಿಸುತ್ತಿದ್ದಂತೆಯೇ ಬಾಬಾ ಅನುಯಾಯಿಗಳು ಕಾರನ್ನು ಚೇಸ್ ಮಾಡಿದ್ದಾರೆ. ಅಲ್ಲದೇ ಪತ್ರಕರ್ತರ ಮೇಲೆ ದಾಳಿ ನಡೆಸಿದ್ದಾರೆ. ಇದರಿಂದ ಕ್ಯಾಮೆರಾಕ್ಕೆ ಹಾನಿಯಾಗಿದ್ದು, ಕಾರಿನ ಗಾಜು ಪುಡಿಪುಡಿಯಾಗಿದೆ. ಅಲ್ಲದೇ ವರದಿಗಾರರ ಕೈಗೆ ಹಾಗೂ ಕಾಲಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ನಾಳೆ ಅತ್ಯಾಚಾರಿ ಬಾಬಾಗೆ ಶಿಕ್ಷೆ ಪ್ರಕಟವಾಗ್ತಿದ್ದು, ಕೋರ್ಟ್ ಪ್ರಕ್ರಿಯೆ ಎಲ್ಲವೂ ರೋಹ್ತಕ್ ಜೈಲಿಗೆ ಸ್ಥಳಾಂತರವಾಗುತ್ತಿದೆ. ಸಿಬಿಐ ಸ್ಪೆಷಲ್ ಕೋರ್ಟ್ ಜಡ್ಜ್ ಜಗದೀಪ್ ಸಿಂಗ್‍ಗೆ ಎಸ್‍ಎಂಜಿ ಭಕ್ತರಿಂದ ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಮಾಣವನ್ನು ಕಾರಾಗೃದಲ್ಲೇ ಪ್ರಕಟಿಸಲಿದ್ದಾರೆ. ಹೀಗಾಗಿ ಜೈಲು ಬಿಗಿ ಭದ್ರತೆ ಕೋಟೆಯಂತಾಗಿದೆ. ಅಲ್ಲದೇ ನ್ಯಾಯಾಧೀಶರಿಗೂ ಕೂಡ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಕೆಲ ರೌಡಿ ಭಕ್ತರನ್ನು ಪೊಲೀಸರು ತಮ್ಮ ವಶದಲ್ಲಿರಿಸಿಕೊಂಡಿದ್ದಾರೆ. ಇಷ್ಟಾದ್ರೂ ಕೆಲ ಪುಂಡ ಭಕ್ತರು ಒಂದೆಡೆ ಸೇರಿ ನಾಳೆಗೆ ವ್ಯವಸ್ಥಿತ ಸಂಚು ರೂಪಿಸುತ್ತಿದ್ದಾರೆ ಎನ್ನಲಾಗುತ್ತಿದೆ.

    https://twitter.com/tanbirdhaliwal/status/900255071497211904

    https://twitter.com/tanbirdhaliwal/status/900232375442984960