Tag: followers

  • ಅಭಿಮಾನಿಗಳಿಗೆ ಷರತ್ತು ವಿಧಿಸಿದ ಚಾಲೆಂಜಿಂಗ್ ಸ್ಟಾರ್!

    ಅಭಿಮಾನಿಗಳಿಗೆ ಷರತ್ತು ವಿಧಿಸಿದ ಚಾಲೆಂಜಿಂಗ್ ಸ್ಟಾರ್!

    ಬೆಂಗಳೂರು: ಶನಿವಾರ ಸಂಜೆ ಆರ್ ಆರ್ ನಗರದ ತಮ್ಮ ನಿವಾಸಕ್ಕೆ ಫಾನ್ಸ್ ಗಳನ್ನು ಕರೆದು ಸಭೆ ನಡೆಸಿ, ಅಭಿಮಾನಿಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಷರತ್ತು ಹಾಕಿದ್ದಾರೆ.

    ಅಭಿಮಾನಿಗಳೊಂದಿಗೆ ನೇರವಾಗಿ ಮಾತನಾಡಿದ ದರ್ಶನ್, ಯಾವುದೇ ಬೇರೆ ನಟರ ವಿರುದ್ಧ ಕಮೆಂಟ್ ಮಾಡೋದು, ಟ್ರೋಲ್ ಮಾಡೋದು ಅಥವಾ ನೆಗೆಟೀವ್ ಹೇಳಿಕೆಗಳನ್ನು ನೀಡಬಾರದು ಎಂದು ಬುದ್ಧಿ ಮಾತು ಹೇಳಿದ್ದಾರಂತೆ.

    ಸ್ಯಾಂಡಲ್‍ವುಡ್ ‘ಬಾಸ್` ಯಾರು ಎಂಬುದರ ಬಗ್ಗೆ ಕಳೆದ ಒಂದು ತಿಂಗಳಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಸಂಬಂಧ ನಟರ ಅಭಿಮಾನಿಗಳು ಬೇರೆ ಕಲಾವಿದರ ಬಗ್ಗೆ ಕೆಟ್ಟದಾಗಿ ಕಮೆಂಟ್, ಟ್ರೋಲ್ ಮಾಡತೊಡಗಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ತಮ್ಮ ಅಭಿಮಾನಿಗಳು ಶಿಸ್ತಿನಿಂದ ನಡೆದುಕೊಳ್ಳುವಂತೆ ಹೇಳಿದ್ದಾರೆ.

    ಸಭೆಯಲ್ಲಿ ಭಾಗವಹಿಸಿದ್ದ 40ಕ್ಕೂ ಹೆಚ್ಚು ಅಭಿಮಾನಿಗಳು ದರ್ಶನ್ ಹೇಳಿದಂತೆ ನಡೆದುಕೊಳ್ಳುವುದಾಗಿ ಅಂತಾ ಮಾತು ನೀಡಿ ಹಿಂದಿರುಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

  • ಹೆಬ್ಬಾಳದ ಭೂಪಸಂದ್ರದಲ್ಲಿ ಬಿಡಿಎ ಸೈಟ್ ಪರರ ಪಾಲು – ಕೇಳಿದ್ರೆ ಭೈರತಿ ಬೆಂಬಲಿಗರು ಧಮ್ಕಿ

    ಹೆಬ್ಬಾಳದ ಭೂಪಸಂದ್ರದಲ್ಲಿ ಬಿಡಿಎ ಸೈಟ್ ಪರರ ಪಾಲು – ಕೇಳಿದ್ರೆ ಭೈರತಿ ಬೆಂಬಲಿಗರು ಧಮ್ಕಿ

    ಬೆಂಗಳೂರು: ನಗರದ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಭೈರತಿ ಸುರೇಶ್ ಬೆಂಬಲಿಗರ ಆಟಾಟೋಪ ಜೋರಾಗಿದೆ.

    ಭೂಪಸಂದ್ರದಲ್ಲಿರೋ ಬಿಡಿಎ ಸೈಟನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡು ಬಿಲ್ಡಿಂಗ್ ಎಬ್ಬಿಸ್ತಿದ್ದಾರೆ. ಯಾಕಪ್ಪ ಬಿಡಿಎ ಸೈಟ್‍ನಲ್ಲಿ ಕಟ್ಟಡ ಕಟ್ತಾಯಿದ್ದೀರ ಅಂತ ಕೇಳಿದ್ರೆ ನೀವ್ಯಾರು ಕೇಳೋದಕ್ಕೆ. ನಾವ್ಯಾರು ಗೊತ್ತಾ ಎಂಎಲ್‍ಎ ಭೈರತಿ ಸುರೇಶ್ ಕಡೆಯವರು ಅಂತಾ ಸ್ಥಳೀಯರಿಗೆ ಧಮ್ಕಿ ಹಾಕಿದ್ದಾರೆ ಎಂಬ ಆರೋಪವೊಂದು ಕೇಳಿಬಂದಿದೆ.

    ಒತ್ತುವರಿ ಸೈಟ್ ಬಳಿ ಯಾರಾದ್ರೂ ನಿಂತರೂ ಸಹ ಅವಾಜ್ ಹಾಕ್ತಿದ್ದಾರೆ. ಈ ಬಗ್ಗೆ ಬಿಡಿಎ ಅಧಿಕಾರಿಗಳಿಗೆ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ. ಇದುವರೆಗೂ ಕಟ್ಟಡ ಕಾಮಗಾರಿ ತಡೆಯೋ ಕೆಲಸ ಮಾಡಿಲ್ಲ ಅಂತ ಸ್ಥಳೀಯರು ದೂರಿದ್ದಾರೆ.

  • ಅಭಿಮಾನಿಗಳ ದೇಶಭಕ್ತಿ ಕಂಡು ಎಮೋಶನಲ್ ಆದ್ರು ವಿರಾಟ್: ವಿಡಿಯೋ ವೈರಲ್

    ಅಭಿಮಾನಿಗಳ ದೇಶಭಕ್ತಿ ಕಂಡು ಎಮೋಶನಲ್ ಆದ್ರು ವಿರಾಟ್: ವಿಡಿಯೋ ವೈರಲ್

    ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲಂಡ್‍ನಲ್ಲಿರುವ ಅಭಿಮಾನಿಗಳ ದೇಶಭಕ್ತಿಯನ್ನು ಕಂಡು ಎಮೋಶನಲ್ ಆಗಿದ್ದಾರೆ.

    ಇಂದು ಭಾರತ ತಂಡ ಮೂರನೇ ಏಕದಿನ ಪಂದ್ಯವಾಡುತ್ತಿದೆ. ಪಂದ್ಯವಾಡುವ ಮೊದಲು ವಿರಾಟ್ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಶೇರ್ ಮಾಡಿ ಭಾವನಾತ್ಮಕ ಸಂದೇಶವನ್ನು ಬರೆದುಕೊಂಡಿದ್ದಾರೆ. ಅಲ್ಲದೇ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

    ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಕ್ರಿಕೆಟ್ ಮೈದಾನದಲ್ಲಿ ರಾಷ್ಟ್ರಗೀತೆ ಮೊಳಗುವಾಗ ಅಭಿಮಾನಿಗಳು ಸ್ಟೇಡಿಯಂನಲ್ಲಿ ನಿಂತಿದ್ದಾರೆ. ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಅಭಿಮಾನಿಗಳು ಒಂದೇ ರಾಗದಲ್ಲಿ ತುಂಬು ಹೃದಯದಿಂದ ರಾಷ್ಟ್ರಗೀತೆ ಹಾಡಿದ್ದಾರೆ. ಇಡೀ ಸ್ಟೇಡಿಯಂನಲ್ಲಿ ‘ಜನ ಗಣ ಮನ’ ಹಾಡು ಕೇಳಿಬರುತ್ತಿತ್ತು.

    ಈ ವಿಡಿಯೋವನ್ನು ನೋಡಿದ ವಿರಾಟ್ ಅಭಿಮಾನಿಗಳ ಅಭಿಮಾನಿ ಆಗಿದ್ದಾರೆ. “ಈ ವಿಡಿಯೋ ನೋಡಿ ನನಗೆ ತುಂಬಾ ಖುಷಿಯಾಯಿತ್ತು. ನಿರಂತರವಾಗಿ ಯಾವುದೇ ಷರತ್ತಿಲ್ಲದೇ ನಮ್ಮನ್ನು ಬೆಂಬಲಿಸುತ್ತಿರುವುದ್ದಕ್ಕೆ ಧನ್ಯವಾದಗಳು. ನಿಮ್ಮ ಈ ಪ್ರೀತಿ ನಮಗೆ ಇನ್ನಷ್ಟು ಪರಿಶ್ರಮ ಪಡಲು ಪ್ರೇರೆಪಿಸುತ್ತದೆ” ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.

    ಸದ್ಯ ಟೀಂ ಇಂಡಿಯಾ ಏಕದಿನ ಪಂದ್ಯದಲ್ಲಿ ಒಂದು ಪಂದ್ಯವನ್ನು ಗೆದ್ದು, ಮತ್ತೊಂದು ಪಂದ್ಯದಲ್ಲಿ ಸೋತಿದ್ದು, ಇಂದು ಕೊನೆಯ ಪಂದ್ಯವನ್ನು ಆಡುತ್ತಿದೆ.

  • ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹುಟ್ಟುಹಬ್ಬ- 4 ಸಾವಿರ ಬಾದುಷಾ ಹಂಚಿದ ಅಭಿಮಾನಿಗಳು!

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹುಟ್ಟುಹಬ್ಬ- 4 ಸಾವಿರ ಬಾದುಷಾ ಹಂಚಿದ ಅಭಿಮಾನಿಗಳು!

    ದಾವಣಗೆರೆ: ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 56 ನೇ ಹುಟ್ಟುಹಬ್ಬವನ್ನು ದಾವಣಗೆರೆಯಲ್ಲಿ ಅಭಿಮಾನಿಗಳು ಅದ್ಧೂರಿಯಾಗಿ ಆಚರಣೆ ಮಾಡಿದ್ರು.

    ನಗರದ ಜಯದೇವ ಸರ್ಕಲ್ ಬಳಿ ಜಿಲ್ಲಾ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಆಚರಣೆ ಮಾಡಿದ್ದು, ಕೇಕ್ ಕಟ್ ಮಾಡಿ ಪಟಕಿ ಸಿಡಿಸಿ ಸಂಭ್ರಮಿಸಿದ್ರು. ಶಿವರಾಜ್ ಕುಮಾರ್ ಆರೋಗ್ಯವಾಗಿ ಇರಲಿ ಎಂದು ಹಾರೈಸಿದ್ರು. ಅಲ್ಲದೆ ನಾಲ್ಕು ಸಾವಿರ ಬಾದುಷಾವನ್ನು ತಂದು ಹಂಚಿದ್ರು. ಇನ್ನು ಕಾರ್ಯಕ್ರಮದಲ್ಲಿ ವಿರಕ್ತ ಮಠದ ಬಸವ ಪ್ರಭು ಸ್ವಾಮೀಜಿಗಳು ಭಾಗವಹಿಸಿ ಅಭಿಮಾನಿಗಳಿಗೆ ಸಿಹಿ ಹಂಚಿದ್ರು.

    ನಟ ಶಿವರಾಜ್ ಕುಮಾರ್ ಗುರುವಾರ ತಮ್ಮ 56 ನೇ ಹುಟ್ಟು ಹಬ್ಬವನ್ನು ತಮ್ಮ ನಿವಾಸದಲ್ಲಿ ತಡರಾತ್ರಿ ಕುಟುಂಬಸ್ಥರು, ಸ್ನೇಹಿತರ ಹಾಗೂ ನೂರಾರು ಜನ ಅಭಿಮಾನಿಗಳ ಸಮ್ಮುಖದಲ್ಲಿ ಸರಳವಾಗಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಪತ್ನಿ ಗೀತಾ ಶಿವರಾಜ್ ಕುಮಾರ್ ಜೊತೆ ಕೇಕ್ ಕತ್ತರಿಸಿ, ಬಳಿಕ ಸ್ನೇಹಿತರು ಮತ್ತು ಅಭಿಮಾನಿಗಳ ಜೊತೆ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿದರು. ತಮ್ಮ ನೆಚ್ಚಿನ ನಟನಿಗೆ ಶುಭ ಕೋರಲು ನಾನಾ ಜಿಲ್ಲೆಗಳಿಂದ ಅಭಿಮಾನಿಗಳು ನಿವಾಸಕ್ಕೆ ಆಗಮಿಸಿದ್ದರು.

  • ಆಡಿ ಕ್ಯೂ 7 ನಲ್ಲಿ ಮೂಡಿತು ದರ್ಶನ್ ಆಟೋಗ್ರಾಫ್!

    ಆಡಿ ಕ್ಯೂ 7 ನಲ್ಲಿ ಮೂಡಿತು ದರ್ಶನ್ ಆಟೋಗ್ರಾಫ್!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಅಭಿಮಾನಿಗಳ ಆಟೋ ಮೇಲೆ ತಮ್ಮ ಆಟೋಗ್ರಾಫ್ ನೀಡಿದ್ದರು. ಆದರೆ ಈಗ ದರ್ಶನ್ ಅಭಿಮಾನಿಯೊಬ್ಬರ ಆಡಿ ಕ್ಯೂ 7 ಕಾರಿನ ಮೇಲೆ ತಮ್ಮ ಆಟೋಗ್ರಾಫ್ ನೀಡಿದ್ದಾರೆ.

    ಅಭಿಮಾನಿಗಳು ತಾವು ಖರೀದಿಸಿದ ಕಾರಿನ ಮೇಲೆ ದರ್ಶನ್ ಅವರ ಆಟೋಗ್ರಾಫ್ ಹಾಕಿಸಿಕೊಳ್ಳಬೇಕು ಎಂದುಕೊಳ್ಳುತ್ತಾರೆ. ಅಂತೆಯೇ ದರ್ಶನ್ ಅವರ ಅಭಿಮಾನಿಯೊಬ್ಬರು ಆಡಿ ಕ್ಯೂ 7 ಕಾರನ್ನು ಖರೀದಿ ಮಾಡಿ ಅದಕ್ಕೆ ದರ್ಶನ್ ಅವರ ಆಟೋಗ್ರಾಫ್ ಪಡೆಯಬೇಕೆಂದುಕೊಂಡಿದ್ದರು. ದರ್ಶನ್ ಕೂಡ ಇದೀಗ ಆ ಅಭಿಮಾನಿಯ ಆಸೆಯನ್ನು ನೆರವೇರಿಸಿದ್ದಾರೆ. ಅಭಿಮಾನಿಯ ಆಡಿ ಕಾರ್ ಮೇಲೆ ದರ್ಶನ್ ತಮ್ಮ ಆಟೋಗ್ರಾಫ್ ನೀಡಿದ್ದಾರೆ.

    ಈ ಹಿಂದೆ ಅಭಿಮಾನಿಯೊಬ್ಬರು ವಾಹನದಲ್ಲಿ ದರ್ಶನ್ ಇರೋದು ನೋಡಿ ತಮ್ಮ ಗಾಡಿ ನಿಲ್ಲಿಸಿ ಮಾತನಾಡಿಸಿದ್ದರು. ಆಗ ಅಭಿಮಾನಿ ಪೆನ್ನು ಪೇಪರ್ ಹಿಡಿದು ದರ್ಶನ್‍ಗೆ ಆಟೋಗ್ರಾಫ್ ಕೇಳಿದ್ದರು. ಆಗ ದರ್ಶನ್ ಆಟೋಗ್ರಾಫ್ ನೀಡಿ ವಿಭಿನ್ನವಾಗಿ “ಡ್ರೈವ್ ಸೇಫ್” ಎಂದು ಬರೆದಿದ್ದರು.

    ಸದ್ಯ ದರ್ಶನ್ ಅವರಿಗೆ ಈಗ ‘ಮೊನಾರ್ಕ್ ಆಫ್ ಸ್ಯಾಂಡಲ್‍ವುಡ್’ ಬಿರುದು ಸಿಕ್ಕಿದೆ. ಮೊನಾರ್ಕ್ ಆಫ್ ಸ್ಯಾಂಡಲ್‍ವುಡ್ ಎಂದರೆ `ಸ್ಯಾಂಡಲ್‍ವುಡ್ ರಾಜಪ್ರಭುತ್ವದ ಸಾರ್ವಭೌಮ’ ಎಂಬ ಅರ್ಥ ಎಂದು ಹೇಳಲಾಗಿದೆ. ದರ್ಶನ್ ಅವರ `ಡಿ ಲಿಗಸ್ಸಿ’ ಅಭಿಮಾನಿಗಳ ತಂಡ ಈ ಬಿರುದನ್ನು ನೀಡಿದೆ.

  • ರಾತ್ರೋರಾತ್ರಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ರು ಯಶ್!

    ರಾತ್ರೋರಾತ್ರಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ರು ಯಶ್!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ರಾತ್ರೋರಾತ್ರಿ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.

    ನಟ ಯಶ್ ಬೆಂಗಳೂರಿನ ರಸ್ತೆಗಳಲ್ಲಿ ರಾತ್ರಿ ಹೊತ್ತು ಯಾರಿಗೂ ಗೊತ್ತಾಗದಂತೆ ರೌಂಡ್ಸ್ ಹೊಡೆಯುತ್ತಾ ಸೈಕಲ್ ಸವಾರಿ ಮಾಡಿದ್ದಾರೆ. ಈ ಮೂಲಕ ರಾತ್ರೋರಾತ್ರಿ ಅಭಿಮಾನಿಗಳ ಮುಂದೆ ಪ್ರತ್ಯಕ್ಷರಾಗಿದ್ದಾರೆ.

    ಯಶ್ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸೈಕಲ್ ಸವಾರಿ ಮಾಡಿದ್ದಾರೆ. ಈ ವೇಳೆ ಈ ಮುಸುಕುಧಾರಿ ಯಾರೆಂದು ಹಿಂದೆ ಬಿದ್ದು ನೋಡಲು ಹೋದ ಅಭಿಮಾನಿಗಳಿಗೆ ಸೈಕಲ್ ಸವಾರಿ ಮಾಡುತ್ತಿರುವುದು ಯಶ್ ಎಂಬುದು ತಿಳಿದುಬಂದಿದೆ.

    ಯಶ್ ಸೈಕಲ್ ಸವಾರಿ ಮಾಡುತ್ತಿರುವುದನ್ನು ಅಲ್ಲಿದ್ದ ಅಭಿಮಾನಿಗಳು ವಿಡಿಯೋ ಮಾಡಿದ್ದಾರೆ. ಅಲ್ಲದೇ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದೆ.

    ಈ ಹಿಂದೆ ನಟ ದರ್ಶನ್ ಹಾಗೂ ಕಿಚ್ಚ ಸುದೀಪ್ ರಾತ್ರಿ ವೇಳೆ ತಮ್ಮ ಬೈಕಿನಲ್ಲಿ ಬೆಂಗಳೂರಿನ ಬೀದಿಗಳಲ್ಲಿ ರೌಂಡ್ ಹೊಡೆದಿದ್ದರು. ದರ್ಶನ್ ತಮ್ಮ ಗೆಳೆಯ ಧರ್ಮ ಕೀರ್ತಿರಾಜ್ ರಾಯಲ್ ಎನ್‍ಫೀಲ್ಡ್ ಬೈಕ್ ಖರೀದಿಸಿದಾಗ ಅವರ ಜೊತೆ ರಾತ್ರಿ ಜಾಲಿ ರೈಡ್ ಮಾಡಿದ್ದರು. ಇನ್ನೂ ಕಿಚ್ಚ ಸುದೀಪ್ ಕೂಡ ಬಿಎಂಡಬ್ಲ್ಯೂ ಆರ್ 1200 ಬೈಕ್ ಖರೀದಿಸಿದಾಗ ನಟ ಚಂದನ್ ಜೊತೆ ರಾತ್ರಿ ಹೊತ್ತು ಬೆಂಗಳೂರಿನ ಬೀದಿಗಳಲ್ಲಿ ಸುತ್ತಿದ್ದರು.

    https://www.youtube.com/watch?v=MphoTidE1vo

  • ದರ್ಶನ್ ಮನೆ ಮುಂದೆ ನಿಂತಿವೆ ಸಾಲು ಸಾಲು ಆಟೋಗಳು!

    ದರ್ಶನ್ ಮನೆ ಮುಂದೆ ನಿಂತಿವೆ ಸಾಲು ಸಾಲು ಆಟೋಗಳು!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮುಂದೆ 2 ದಿನಗಳಿಂದ ಆಟೋಗಳು ಸಾಲುಸಾಲಾಗಿ ನಿಂತಿವೆ. ದರ್ಶನ್ ಅವರನ್ನು ಭೇಟಿ ಮಾಡಲು ಚಾಲಕರು ತಮ್ಮ ಆಟೋ ಸಮೇತ ದರ್ಶನ್ ಅವರನ್ನು ಭೇಟಿ ಮಾಡುತ್ತಿದ್ದಾರೆ.

    ದರ್ಶನ್ ಅವರ ಅಭಿಮಾನಿಗಳು ಈಗ ಹೊಸ ಆಲೋಚನೆಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ತಮ್ಮ ಹೊಸ ಆಲೋಚನೆಯೊಂದಿಗೆ ಅಭಿಮಾನಿಗಳು ತಮ್ಮ ಆಟೋ ಸಮೇತ ದರ್ಶನ್ ಅವರ ಮನೆಮುಂದೆ ಹೋಗಿದ್ದಾರೆ.

    ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಆಟೋಗ್ರಾಫ್ ಅನ್ನು ಕೈ ಮೇಲೆ ಅಥವಾ ಪುಸ್ತಕದಲ್ಲಿ ತೆಗೆದುಕೊಳ್ಳುತ್ತಾರೆ. ಆದರೆ ಆಟೋ ಚಾಲಕರು ತಮ್ಮ ನೆಚ್ಚಿನ ನಟನ ನೆನಪು ಶಾಶ್ವತವಾಗಿ ಉಳಿಯಲಿ ಎಂದು ತಮ್ಮ ಆಟೋ ಮೇಲೆ ದರ್ಶನ್ ಅವರ ಆಟೋಗ್ರಾಫ್ ಅನ್ನು ಪಡೆದಿದ್ದಾರೆ.

    ದರ್ಶನ್ ಅವರ ಆಟೋಗ್ರಾಫ್ ಸದಾ ನೆನಪಿನಲ್ಲಿ ಇರಬೇಕೆಂದು ಅವರ ಅಭಿಮಾನಿಗಳು ತಮ್ಮ ಪ್ರತಿನಿತ್ಯ ದುಡಿಮೆಗೆ ಆಧಾರವಾಗಿರುವ ಆಟೋಗಳ ಮೇಲೆಯೇ ಹಾಕಿಸಿಕೊಳ್ಳುತ್ತಿದ್ದಾರೆ. ಸದ್ಯ ಆಟೋಗಳ ಮೇಲೆ ದರ್ಶನ್ ಹಾಕಿರುವ ಆಟೋಗ್ರಾಫ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಈ ಹಿಂದೆ ಒಬ್ಬ ಅಭಿಮಾನಿ ವಾಹನದಲ್ಲಿ ಬಂದು ದರ್ಶನ್ ಇರೋದು ನೋಡಿ ವಾಹನ ನಿಲ್ಲಿಸಿ ಮಾತನಾಡಿಸಿದ್ದರು. ಆಗ ಅಭಿಮಾನಿ ಪೆನ್ನು ಪೇಪರ್ ಹಿಡಿದು ದರ್ಶನ್‍ಗೆ ಆಟೋಗ್ರಾಫ್ ಕೇಳಿದ್ದರು. ಯಜಮಾನ ಚಿತ್ರದ ಶೂಟಿಂಗ್‍ನಲ್ಲಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಹಳ ತಾಳ್ಮೆಯಿಂದ ಹಸ್ತಾಕ್ಷರ ಬರೆದುಕೊಟ್ಟರು. ಸಾಮಾನ್ಯವಾಗಿ ತಾರೆಯರು ಅಭಿಮಾನಿಗಳಿಗೆ ಆಟೋಗ್ರಾಫ್‍ನಲ್ಲಿ ಶುಭವಾಗಲಿ, ಒಳ್ಳೆಯದಾಗಲಿ, ಪ್ರೀತಿ ಇರಲಿ ಹೀಗೆ ಏನೇನೋ ಬರೆಯುತ್ತಾರೆ. ಪ್ರೀತಿಪೂರ್ವಕ ಮಾತು, ಜೀವನಕ್ಕೆ ಶುಭ ಕೋರುತ್ತಾರೆ. ಆದರೆ ದರ್ಶನ್ ಆಟೋಗ್ರಾಫ್ ನೀಡಿ ವಿಭಿನ್ನವಾಗಿ “ಡ್ರೈವ್ ಸೇಫ್” ಎಂದು ಬರೆದಿದ್ದರು.

     

  • ಕಾರ್ಯಕರ್ತರ ಪ್ರತಿಭಟನೆ ಬಗ್ಗೆ ಸ್ಪಷ್ಟನೆ ನೀಡಿದ ಜಿ.ಟಿ ದೇವೇಗೌಡ

    ಕಾರ್ಯಕರ್ತರ ಪ್ರತಿಭಟನೆ ಬಗ್ಗೆ ಸ್ಪಷ್ಟನೆ ನೀಡಿದ ಜಿ.ಟಿ ದೇವೇಗೌಡ

    ಬೆಂಗಳೂರು: ಕಾರ್ಯಕರ್ತರಿಗೆ ನಾವು ಮೊದಲು ನಮ್ಮ ಕ್ಷೇತ್ರವನ್ನು ನೋಡಿಕೊಳ್ಳೋಣ ಹಾಗೂ ನಮ್ಮ ಕ್ಷೇತ್ರವನ್ನು ಅಭಿವೃದ್ಧಿ ಮಾಡೋಣ. ನಂತರ ಮಂತ್ರಿ, ಮಂತ್ರಿ ಆದ್ಮೇಲೆ ಖಾತೆಯನ್ನು ನೋಡಿಕೊಳ್ಳೋಣ. ಈಗ ಇಡೀ ಮೈಸೂರು ಹಾಗೂ ನಮ್ಮ ಕ್ಷೇತ್ರ ಅಭಿವೃದ್ಧಿ ಆಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಹೇಳಿದ್ದಾರೆ.

    ಉನ್ನತ ಶಿಕ್ಷಣ ಖಾತೆ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಕಂದಾಯ ಹಾಗೂ ನೀರಾವರಿ ಖಾತೆಗಳನ್ನು ನೀಡುವಂತೆ ಕೇಳಿದ್ದೆ. ಆದರೆ ಆ ಖಾತೆಗಳು ಕಾಂಗ್ರೆಸ್‍ಗೆ ಹೋಗಿದೆ. ನಂತರ ನನಗೆ ಸಾರಿಗೆ ಖಾತೆ ಕೊಡಲು ನಿರ್ಧರಿಸಿದ್ದರು. ಆಗ ನನಗೆ ಕೋಪ ಬಂದಿತ್ತು. ಏಕೆಂದರೆ ನಾನು ಕುಮಾರಸ್ವಾಮಿ ಹಾಗೂ ಹಿರಿಯ ನಾಯಕರೊಂದಿಗೆ ಈ ಬಗ್ಗೆ ಮೊದಲೇ ಮಾತನಾಡಿದೆ. ಇನ್ನೂ ಎರಡು ದಿನದಲ್ಲಿ ಕುಮಾರಸ್ವಾಮಿ ಅವರ ಜೊತೆ ಮಾತಾಡಿ ವಿಷಯ ತಿಳಿಸುತ್ತೇನೆ ಎಂದರು.

    ಕಾರ್ಯಕರ್ತರ ಪ್ರತಿಕ್ರಿಯೆ ಬಗ್ಗೆ ಮಾತನಾಡಿದ ಅವರು, ಉನ್ನತ ಶಿಕ್ಷಣ ಖಾತೆ ಶಿಕ್ಷಣಕ್ಕೆ ಸಂಬಂಧಪಟ್ಟಿದ್ದು. ಆ ಕ್ಷೇತ್ರದ ಪರಿಚಯವಿಲ್ಲದ ವ್ಯಕ್ತಿ ನಾನು. ಏಕೆಂದರೆ ನಾನು ಕಾಲೇಜಿಗೆ ಹೋಗಿ ಓದಿಲ್ಲ. ಪದವಿ ಕೂಡ ಪಡೆದುಕೊಂಡಿಲ್ಲ. ಬಹಳ ಎತ್ತರವಿರುವಂತಹ ಕ್ಷೇತ್ರ ಉನ್ನತ ಶಿಕ್ಷಣ ಆಗಿದ್ದು, ಅಂತಹವರು ನಮಲ್ಲಿ ಇದ್ದಾರೆ. ಅಂತವರಿಗೆ ಈ ಖಾತೆ ನೀಡಲಿ ಎಂಬುದು ಕಾರ್ಯಕರ್ತರ ಆಸೆ ಎಂದು ತಿಳಿಸಿದರು.

    ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದರು ಕೂಡ ಜಿಲ್ಲೆಯಲ್ಲಿ ಬಹಳಷ್ಟು ಅಭಿವೃದ್ಧಿ ಆಗಲಿಲ್ಲ ಎಂದು ಜನರು ಕೊರಗುತ್ತಿದ್ದಾರೆ. ಈಗ ನಾವು ಮೈಸೂರು ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕೆಂದು ನಾವು ಚುನಾವಣೆ ಎದುರಿಸಿದ್ದೇವೆ. ಈಗ ಅವರು ನನಗೆ ಉನ್ನತ ಶಿಕ್ಷಣ ಖಾತೆ ನೀಡಿದ್ದಾರೆ ಎಂದು ಹೇಳಿದರು.

    ಸಚಿವರಿಗೆ ಖಾತೆ ಹಂಚಿಕೆ ನಡೆದ ಬಳಿಕ ದೇವೇಗೌಡರಿಗೆ ಉನ್ನತ ಶಿಕ್ಷಣ ಖಾತೆ ನೀಡಿದ್ದು ಯಾಕೆ? ಅವರಿಗೆ ಬೇರೆ ಖಾತೆಗಳನ್ನು ನೀಡಬಹುದಿತ್ತು. ಅಂತಹ ಖಾತೆಗಳು ಸಂಬಂಧಪಟ್ಟ ವ್ಯಕ್ತಿಗಳಿಗೆ ನೀಡಲಿ ಎಂದು ಕಾರ್ಯಕರ್ತರು ತಮ್ಮ ಅಭಿಪ್ರಾಯವನ್ನು ಆಕ್ರೋಶದ ಮೂಲಕ ಹೊರಹಾಕುತ್ತಿದ್ದಾರೆ.

  • ಜೂನ್ 6ರಂದು ರಕ್ಷಿತ್ ಶೆಟ್ಟಿಯಿಂದ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್!

    ಜೂನ್ 6ರಂದು ರಕ್ಷಿತ್ ಶೆಟ್ಟಿಯಿಂದ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್!

    ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಸಿನಿಮಾಗಳು ತೆರೆ ಕಂಡು ಎರಡು ವರ್ಷಗಳೇ ಕಳೆದಿವೆ. ಆದರೆ ಈಗ ರಕ್ಷಿತ್ ಎರಡೂ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಜೂನ್ 6ಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಕೊಡಲಿದ್ದಾರೆ.

    ಜೂನ್ 6 ರಕ್ಷಿತ್ ಶೆಟ್ಟಿ ಅವರು ತಮ್ಮ 35ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಹುಟ್ಟುಹಬ್ಬದಂದು ರಕ್ಷಿತ್ ಶೆಟ್ಟಿಗೆ ಸ್ಯಾಂಡಲ್‍ವುಡ್ ಮಂದಿ ಕೂಡ ಸರ್ಪ್ರೈಸ್ ನೀಡಲು ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಈ ಗಿಫ್ಟ್ ಪ್ರೇಮಿಗಳಿಗಾಗಿ ಎಂಬ ಸುದ್ದಿ ಕೇಳಿಬರುತ್ತಿದೆ.

    ಜೂನ್ 6 ಅಂದರೆ ರಕ್ಷಿತ್ ಹುಟ್ಟುಹಬ್ಬದಂದು ‘ಅವನೇ ಶ್ರೀಮನ್ನಾರಾಯಣ’ ಹಾಗೂ ‘777 ಚಾರ್ಲಿ’ ಸಿನಿಮಾ ಪೋಸ್ಟರ್ ಗಳು ಬಿಡುಗಡೆಯಾಗುತ್ತದೆ ಎಂದು ಹೇಳಲಾಗುತ್ತಿದೆ.

    ರಕ್ಷಿತ್ ‘777 ಚಾರ್ಲಿ’ ಸಿನಿಮಾದಲ್ಲಿ ನಟಿಸುತ್ತಿದ್ದು, ಆ ಚಿತ್ರದಲ್ಲಿ ಶ್ವಾನ ಹಾಗೂ ಮನುಷ್ಯನ ಬಾಂಡಿಂಗ್ ಇರುವಂತಹ ಕಥೆಯನ್ನು ಹೊಂದಿದೆ. ಈ ಚಿತ್ರದಲ್ಲಿ ಶ್ವಾನದ ಹೆಸರು ಚಾರ್ಲಿ ಆಗಿದ್ದು, ಅದಕ್ಕೆ ಲೈಸನ್ಸ್ ನಂಬರ್ 777 ಎಂದು ಹೇಳಲಾಗಿದೆ. ಅದಕ್ಕಾಗಿ ಚಿತ್ರದ ಹೆಸರನ್ನು ಚಾರ್ಲಿ 777 ಎಂದು ಇಡಲಾಗಿದೆ. ರಕ್ಷಿತ್ ಶೆಟ್ಟಿ ಜೊತೆ ‘ರಿಕ್ಕಿ’ ಹಾಗೂ ‘ಕಿರಿಕ್ ಪಾರ್ಟಿ’ ಚಿತ್ರಗಳಲ್ಲಿ ಕೆಲಸ ಮಾಡಿರುವ ನಿರ್ದೇಶಕ ಕಿರಣ್ ರಾಜ್ ಅವರೇ 777 ಚಾರ್ಲಿ ಸಿನಿಮಾವನ್ನು ಕೂಡ ನಿರ್ದೇಶನ ಮಾಡುತ್ತಿದ್ದಾರೆ.

    ‘ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ರಕ್ಷಿತ್‍ಗೆ ನಾಯಕಿಯಾಗಿ ಸಾನ್ವಿ ಶ್ರೀವತ್ಸವ್ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಕ್ಷಿತ್ ಐದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಭ್ರಷ್ಟ ಪೊಲೀಸ್ ಅಧಿಕಾರಿ ಪಾತ್ರವನ್ನು ಇವರೇ ನಿರ್ವಹಿಸುತ್ತಿದ್ದಾರೆ.

  • ಸಂಸದ ಪ್ರತಾಪ್ ಸಿಂಹ ಬೆಂಬಲಿಗರ ವಿರುದ್ಧ ದೂರು ದಾಖಲು

    ಸಂಸದ ಪ್ರತಾಪ್ ಸಿಂಹ ಬೆಂಬಲಿಗರ ವಿರುದ್ಧ ದೂರು ದಾಖಲು

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮರ ಬಗ್ಗೆ ಪ್ರತಾಪ್ ಸಿಂಹ ಬೆಂಬಲಿಗರು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಸಂಜಯನಗರ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಕರ್ನಾಟಕ ಲಿಂಗಾಯತ ಪ್ರದೇಶ ಸಂಘದ ಕವನ ಅನ್ನೋರು ಈ ಕುರಿತು ದೂರು ನೀಡಿದ್ದಾರೆ. ದೂರಿನಂತೆ ಪೊಲೀಸರು ಪೋಸ್ಟ್ ಕಾರ್ಡ್ ಕನ್ನಡ ಎಡಿಟರ್ ಹಾಗೂ ಐ ಸಪೋರ್ಟ್ ಪ್ರತಾಪ್ ಸಿಂಹ, ಐ ಸಪೋರ್ಟ್ ಫೇಸ್ ಬುಕ್ ಪೇಜ್ ಅಡ್ಮಿನ್ ಗಳ ವಿರುದ್ದ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.

    ಇದೇ ವೇಳೆ ಪೋಸ್ಟ್ ಕಾರ್ಡ್ ಕನ್ನಡ ವೆಬ್ ಸೈಟ್ ಬ್ಯಾನ್ ಮಾಡುವಂತೆ ಕವನ ಆಗ್ರಹಿಸಿದ ಅವರು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಹೋರಾಟ ಮಾಡೋದಾಗಿ ಅವರು ಎಚ್ಚರಿಕೆ ನಿಡಿದ್ದಾರೆ.

    ಇದನ್ನೂ ಓದಿ: ಓಬವ್ವ, ಕಿತ್ತೂರು ರಾಣಿ ಬಗ್ಗೆ ಪ್ರಕಟವಾದ ಪೋಸ್ಟಿಗೂ ನನಗೂ ಸಂಬಂಧವಿಲ್ಲ: ಪ್ರತಾಪ್ ಸಿಂಹ

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್, ಸಿಡಿದೆದ್ದಂತಹ ಸಿಡಿಲ ಮರಿ ರಾಣಿ ಕಿತ್ತೂರು ಚೆನ್ನಮ್ಮನ ಬಗ್ಗೆ ಅವಹೇಳಕಾರಿ ಆಗಿ ಪೋಸ್ಟ್ ಬರುತ್ತೆ. ಆದ್ರೆ ಪ್ರತಾಪ್ ಸಿಂಹ ಅವರು ಇದು ನಾನು ಮಾಡಿದ್ದಲ್ಲ. ನಾನು ಇತಿಹಾಸವನ್ನು ತಿಳಿದುಕೊಂಡಿದ್ದೀನಿ. ನನ್ನ ಬೆಂಬಲಿಗರು ಈ ತರ ಮಾಡಿದ್ದಾರೆ ಅಂತಾ ಹೇಳ್ತಾ ಇದ್ದಾರೆ. ಇದು ಬಿಜೆಪಿ ಸಂಸ್ಕೃತಿ ಹಾಗೂ ಬಿಜೆಪಿ ನಾಯಕರ ಫಾಲೋವರ್ಸ್ ಗಳಿಗೆ ಕನ್ನಡಿ ಹಿಡಿದಿದೆ. ಯಥಾ ರಾಜ ತಥಾ ಪ್ರಜೆ. ನಾಯಕ ಹೆಂಗಿರ್ತಾನೋ, ಹಿಂಬಾಲಕರು ಕೂಡ ನಿಮ್ಮ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುತ್ತಾರೆ ಅಂದ್ರು.

    ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆಯವರು ಬೂಟು ನೆಕ್ಕುವಂತಹ ಸಂಸ್ಕೃತಿ ಬಗ್ಗೆ ಹೇಳಿದ್ರು. ಬಿಜೆಪಿ ಶಾಸಕ ಸಂಜಯ್ ಪಾಟೀಲ್ ಅವರು ಮುಖ್ಯಮಂತ್ರಿಗಳು ಸೆಗಣಿ ತಿಂದು ಬಂದಿದ್ರು ಅಂತ ಹೇಳಿದ್ರು. ನಾಲ್ಕೈದು ತಿಂಗಳ ಹಿಂದೆ ಗುಂಡ್ಲು ಪೇಟೆ ಚುನಾವಣೆ ಸಂದರ್ಭದಲ್ಲಿ ಪ್ರತಾಪ್ ಸಿಂಹ ಅವರು ಗೀತಾ ಮಹದೇವ ಪ್ರಸಾದ್ ವಿರುದ್ಧ ಹಾಲು-ತುಪ್ಪ ಆರೋಕ್ಕಿಂತ ಮುಂಚೆ ಅಧಿಕಾರ ದಾಹ ಬಂದಿದೆ ಅಂತ ಹೇಳಿದ್ದರು. ಇವರ ಇಂತಹ ಹೇಳಿಕೆಗಳು ಬಿಜೆಪಿ ಸಂಸ್ಕೃತಿಯನ್ನು ಎತ್ತಿತೋರಿಸುತ್ತದೆ ಅಂತ ಕಿಡಿಕಾರಿದ್ರು.

    ಬಾಯಿ ತೆಗೆದ್ರೆ ಬರೀ ರಾಮ ರಾಮ ರಾಮ ಅನ್ನೋ ನೀವೆಲ್ಲರೂ ರಾವಣನ ಕೆಲಸ ಮಾಡುತ್ತಿದ್ದೀರಾ. ದೇಶದಲ್ಲಿ ಸಂಸ್ಕೃತಿ ಅಂದ್ರೆ ಬರೀ ಬಿಜೆಪಿಯ ಬಳುವಳಿ ಅಂತಾ ಹೇಳ್ತಾ ಇರೋ ಇಂದು ಸಂಸ್ಕೃತಿಯನ್ನು ರಾಜ್ಯದ ಜನರಿಗೆ ತೋರಿಸ್ತಾ ಇದ್ದೀರಾ. ನಿಮಗೆಲ್ಲರಿಗೂ ಒಳ್ಳೆಯದಾಗಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ನಾಯಕರುಗಳಿಗೆ ತಕ್ಕ ಶಾಸ್ತಿ ಆಗುತ್ತೆ ಅಂತ ಹೇಳಿದ್ರು.

    ಕರ್ನಾಟಕ ರಾಜ್ಯದ ಸ್ವಾಭಿಮಾನಿ ಮಹಿಳಾ ಮಣಿಗಳಿಗೆ ನೀವು ಇಂದು ಅಗೌರವ ತೋರಿದ್ದೀರಿ. ಹೀಗಾಗಿ ನಿಮಗೆ ಶಾಪ ಕಾಡುತ್ತೆ. ಬಿಜೆಪಿಯ ಕುಲಕ್ಕೆ ಮಹಿಳೆಯ ಶಾಪ ಖಂಡಿತಾ ಕಾಡುತ್ತೆ ಅಂತ ಅತ್ಯಂತ ಕಠಿಣ ಶಬ್ದದಲ್ಲಿ ಅವರು ನಿಂದಿಸಿದ್ರು.

    https://www.youtube.com/watch?v=oIwYWxoSjNA