Tag: followers

  • ಪುನೀತ್ ಅಭಿಮಾನಿಗಳಿಗೆ ಖ್ಯಾತ ನಿರ್ದೇಶಕನಿಂದ ಸ್ಪೆಷಲ್ ಗಿಫ್ಟ್

    ಪುನೀತ್ ಅಭಿಮಾನಿಗಳಿಗೆ ಖ್ಯಾತ ನಿರ್ದೇಶಕನಿಂದ ಸ್ಪೆಷಲ್ ಗಿಫ್ಟ್

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಗೆ ಖ್ಯಾತ ನಿರ್ದೇಶಕ ಪವನ್ ಒಡೆಯರ್ ವಿಶೇಷವಾದ ಉಡುಗೊರೆ ನೀಡಿದ್ದಾರೆ.

    ಪುನೀತ್ ನಟನೆಯ ‘ನಟಸಾರ್ವಭೌಮ’ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಪವನ್ ತಮ್ಮ ಟ್ವಿಟ್ಟರಿನಲ್ಲಿ, “ಕನ್ನಡ ಚಿತ್ರರಂಗದ ಅನ್ನದಾತರಾದ ನಮ್ಮ ಇಷ್ಟ ದೈವಗಳಾದ ಅಭಿಮಾನಿ ದೇವರುಗಳಿಗೆ ನನ್ನ ಸಿನಿಮಾ ನಟಸಾರ್ವಭೌಮ ಚಿತ್ರದ ಹೊಚ್ಚ ಹೊಸ ದೀಪಾವಳಿ ಹಬ್ಬದ ವಿಶೇಷ ಪೋಸ್ಟರ್ ಗಳು ನಿಮ್ಮ ಸನ್ನಿಧಾನಕ್ಕೆ” ಎಂದು ಬರೆದು ನಟಸಾರ್ವಭೌಮದ ಪೋಸ್ಟರ್ ಗಳನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

    ಪವನ್ ಒಡೆಯರ್ ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭಮ ಚಿತ್ರದ ಎರಡು ಪೋಸ್ಟರ್ ಗಳನ್ನು ಟ್ವಿಟ್ಟರಿನಲ್ಲಿ ಹಾಕುವುದರ ಮೂಲಕ ಅಭಿಮಾನಿಗಳಿಗೆ ದೀಪಾವಳಿಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಪವನ್ ಮತ್ತೊಂದು ಟ್ವೀಟ್‍ನಲ್ಲಿ ತಮ್ಮ ಪತ್ನಿ ಅಪೇಕ್ಷಾ ಜೊತೆಗಿರುವ ಫೋಟೋವನ್ನು ಹಾಕಿದ್ದಾರೆ.

    ನಟಸಾರ್ವಭೌಮ ಚಿತ್ರವನ್ನು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅವರು ನಿರ್ಮಿಸುತ್ತಿದ್ದಾರೆ. ಈ ಹಿಂದೆ ಪವನ್ ಒಡೆಯರ್, ಪುನೀತ್ ರಾಜ್‍ಕುಮಾರ್ ಅವರ `ರಣವಿಕ್ರಮ’ ಚಿತ್ರವನ್ನು ನಿರ್ದೇಶಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಾಲಿವುಡ್ ಬಾದ್‍ಶಾಗಿಂದು 53ನೇ ಹುಟ್ಟುಹಬ್ಬದ ಸಂಭ್ರಮ

    ಬಾಲಿವುಡ್ ಬಾದ್‍ಶಾಗಿಂದು 53ನೇ ಹುಟ್ಟುಹಬ್ಬದ ಸಂಭ್ರಮ

    ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ಇಂದು ತಮ್ಮ 53ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸದ್ಯ ಶಾರೂಕ್ ಅವರ ಮನ್ನತ್ ಮನೆ ಮುಂದೆ ಸಾವಿರಾರು ಅಭಿಮಾನಿಗಳು ಭೇಟಿ ನೀಡಿ ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.

    ಪ್ರತಿ ವರ್ಷದಂತೆ ಈ ವರ್ಷವೂ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭಾಶಯ ತಿಳಿಸಲು ಮುಂಬೈನ ಮನ್ನತ್ ಮನೆಗೆ ಭೇಟಿ ನೀಡಿದರು. ಇದೇ ವೇಳೆ ಶಾರೂಕ್ ಮನೆಯಿಂದ ಹೊರಗೆ ಬಂದು ತನ್ನ ಅಭಿಮಾನಿಗಳತ್ತ ಕೈ ಬೀಸಿದ್ದಾರೆ.

    ಸದ್ಯ ಶಾರೂಕ್ ತಮ್ಮ ಹುಟ್ಟುಹಬ್ಬದ ದಿನವೂ ಕೆಲಸದಲ್ಲಿ ತೊಡಗಲಿದ್ದಾರೆ. ಶಾರೂಕ್ ತಮ್ಮ ಮುಂಬರುವ ‘ಝೀರೋ’ ಚಿತ್ರದ ಟ್ರೈಲರ್ ಲಾಂಚ್‍ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಟ್ರೈಲರ್ 3 ನಿಮಿಷ 13 ಸೆಕೆಂಡ್‍ಗಳಿದೆ. ಚಿತ್ರದ ಟ್ರೈಲರ್ ಅನ್ನು ಮುಂಬೈನಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಬಿಡುಗಡೆ ಮಾಡಲಿದ್ದಾರೆ.

    ಝೀರೋ ಚಿತ್ರವನ್ನು ನಿರ್ದೇಶಕ ಆನಂದ್ ಎಲ್ ರೈ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶಾರೂಕ್‍ಗೆ ನಾಯಕಿಯಾಗಿ ಕತ್ರಿನಾ ಕೈಫ್ ಹಾಗೂ ಅನುಷ್ಕಾ ಶರ್ಮಾ ನಟಿಸಿದ್ದು, ಈ ಮೂವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 80 ಅಡಿಯ ಬೃಹತ್ ಕನ್ನಡ ಧ್ವಜವನ್ನು ಹಾರಿಸಿದ ಡಾ. ರಾಜ್ ಅಭಿಮಾನಿ ಬಳಗ

    80 ಅಡಿಯ ಬೃಹತ್ ಕನ್ನಡ ಧ್ವಜವನ್ನು ಹಾರಿಸಿದ ಡಾ. ರಾಜ್ ಅಭಿಮಾನಿ ಬಳಗ

    ಬೆಂಗಳೂರು: 80 ಅಡಿಯ ಬೃಹತ್ತಾದ ಕನ್ನಡ ಧ್ವಜವನ್ನು ಬೆಟ್ಟದ ತುತ್ತ ತುದಿಯಲ್ಲಿ ಹಾರಿಸುವ ಮೂಲಕ ಯುವಕರ ತಂಡ ನಾಡಪ್ರೇಮ ಮೆರೆದಿದ್ದಾರೆ.

    ಮಾಗಡಿ ತಾಲೂಕಿನ ಕುದೂರು ಬಳಿ ಇರುವ ಐತಿಹಾಸಿಕ ಭೈರವದುರ್ಗ ಬೆಟ್ಟದ ತುತ್ತತುದಿಯಲ್ಲಿ ಡಾ.ರಾಜ್ ಕುಮಾರ್ ಅಭಿಮಾನಿ ಬಳಗ ಸತತ ಹನ್ನೇರಡು ವರ್ಷಗಳಿಂದ ಬೃಹತ್ತಾದ ಕನ್ನಡದ ಬಾವುಟವನ್ನು ಹಾರಿಸುತ್ತಿದ್ದಾರೆ.

    ವರನಟ ಡಾ. ರಾಜ್ ಕುಮಾರ್ ಸೇರಿದಂತೆ ಕನ್ನಡದ ಕಟ್ಟಾಳುಗಳಿಗೆ ಜಯಘೋಷಗಳನ್ನು ಕೂಗುವುದರ ಮೂಲಕ ಯುವಕರ ತಂಡ ಬೆಟ್ಟದ ತುತ್ತ ತುದಿಯಲ್ಲಿ ಕನ್ನಡ ಬಾವುಟವನ್ನು ಹಾರಿಸಿ ಕನ್ನಡ ಅಭಿಮಾನವನ್ನು ಮೆರೆದಿದ್ದಾರೆ. ಭೈರವದುರ್ಗ ಬೆಟ್ಟದ ತಪ್ಪಲಿನಿಂದ ಕನ್ನಡ ಬಾವುಟ ಹಾಗೂ ಧ್ವಜ ಸ್ತಂಭವನ್ನು ಗ್ರಾಮಸ್ಥರು ಹೆಗಲ ಮೇಲೆ ಎತ್ತಿಕೊಂಡು ಹೋಗಿ ಬೆಟ್ಟದ ಮೇಲೆ ಸ್ಥಾಪಿಸಿ ತಮ್ಮ ಕನ್ನಡ ಅಭಿಮಾನವನ್ನು ಮೆರೆದರು.

    ಡಾ. ರಾಜ್ ಅಭಿಮಾನಿಗಳು ಪ್ರತಿ ವರ್ಷದಂತೆ ಈ ವರ್ಷವೂ ಸಹ ಗಿಡಗಳನ್ನು ನೆಟ್ಟು, ಗಿಡಗಳಿಗೆ ನೀರು ಎರೆಯುವ ಮೂಲಕ ಪರಿಸರ ಪ್ರಜ್ಞೆಯ ಜೊತೆಗೆ ಬೆಟ್ಟದ ತುದಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ‘ದಿ-ವಿಲನ್’ ಚಿತ್ರ ನೋಡಿದ ಅಭಿಮಾನಿಗಳಿಗೆ ವಿಶೇಷ ಪತ್ರ ಬರೆದ ಕಿಚ್ಚ

    ‘ದಿ-ವಿಲನ್’ ಚಿತ್ರ ನೋಡಿದ ಅಭಿಮಾನಿಗಳಿಗೆ ವಿಶೇಷ ಪತ್ರ ಬರೆದ ಕಿಚ್ಚ

    ಬೆಂಗಳೂರು: ಸ್ಯಾಂಡಲ್‍ವುಡ್ ಬಹು ನಿರೀಕ್ಷಿತ ‘ದಿ-ವಿಲನ್’ ಚಿತ್ರ ವಿಶ್ವದ್ಯಾಂತ ಯಶಸ್ಸು ಕಾಣುತ್ತಿದೆ. ಸದ್ಯ ಕಿಚ್ಚ ಸುದೀಪ್ ದಿ-ವಿಲನ್ ಚಿತ್ರ ವೀಕ್ಷಿಸಿದ ಅಭಿಮಾನಿಗಳಿಗೆ ವಿಶೇಷ ಪತ್ರ ಬರೆದಿದ್ದಾರೆ.

    ಕಿಚ್ಚ ಸುದೀಪ್ ದಿ-ವಿಲನ್ ಸಿನಿಮಾ ನೋಡಿದ ಅಭಿಮಾನಿಗಳಿಗೆ ತಮ್ಮ ಗೂಗಲ್ ಪ್ಲಸ್ ಪತ್ರವನ್ನು ಬರೆದು ಟ್ವಿಟ್ಟರಿನಲ್ಲಿ ಹಾಕಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

    ಪತ್ರದಲ್ಲಿ ಏನಿದೆ?
    ನನ್ನ ಎಲ್ಲ ಅಭಿಮಾನಿ ಸ್ನೇಹಿತರೇ, ಅಭಿಮಾನಿ ಸಂಘಗಳ ಸದಸ್ಯರು ಹಾಗೂ ಮುಖ್ಯಸ್ಥರೇ, ನಿಮ್ಮೆಲ್ಲರಿಗೂ ನನ್ನ ಪ್ರೀತಿಯ ಅಪ್ಪುಗೆ. ಇದು ನೀವೆಲ್ಲರೂ “ದಿ ವಿಲನ್” ಚಿತ್ರವನ್ನು ಉದಾರವಾಗಿ ಬರಮಾಡಿಕೊಂಡಿದಕ್ಕೆ, ಶಿವಣ್ಣ ಹಾಗೂ ಪ್ರೇಮ್ ರವರ ಮೇಲೆ ತೋರಿಸಿದ ಪ್ರೀತಿಗಾಗಿ, ಚಿತ್ರದ ಎರಡೂ ನಾಯಕ ನಟರ ಮೇಲೆ ಸಮನಾದ ಆದರ ವ್ಯಕ್ತಪಡಿಸಿದ್ದಕ್ಕೆ ಮತ್ತು ಚಿತ್ರಮಂದಿರಗಳಲ್ಲಿ ಶಾಂತಿಯನ್ನು ಕಾಪಾಡಿಕೊಂಡಿದ್ದಕ್ಕೆ.

    ನಾನು ನಿಮ್ಮೆಲ್ಲರ ಮನಸಿನಲ್ಲಿ ನೆಲೆಸಿದ್ದೇನೆ. ಆದ್ದರಿಂದಲೇ ನೀವು ಈ ಚಿತ್ರಕ್ಕೆ ಸ್ಪಂದಿಸಿದ ರೀತಿಯಲ್ಲಿ ನನ್ನದೇ ಪ್ರತಿಬಿಂಬ ಕಾಣುತಿದ್ದೇನೆ. ನನ್ನನ್ನು ಹೆಮ್ಮೆಪಡುವಂತೆ ಮಾಡಿದ ನನ್ನ ಕುಟುಂಬದ ಸದಸ್ಯರೇ ಆದ ನಿಮ್ಮ ಪ್ರತಿಯೊಬ್ಬರಿಗೂ ನಾನು ಎಂದೆಂದಿಗೂ ಚಿರಋಣಿ. ನಿಮ್ಮ ಕಿಚ್ಚ ಎಂದು ಬರೆದಿದ್ದಾರೆ.

    ಸದ್ಯ ದಿ ವಿಲನ್ ಚಿತ್ರ ನೋಡಲು ಮಲ್ಟಿಪ್ಲೆಕ್ಸ್ ಗಳಲ್ಲಿಯೂ ಹೌಸ್‍ಫುಲ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಇದೇ ಮೊದಲ ಬಾರಿಗೆ ಹಿರಿಯ ನಟ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಒಟ್ಟಾಗಿ ನಟಿಸಿದ್ದಾರೆ. ಆಮಿ ಜಾಕ್ಸನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ವಿಲನ್ ಹಾಡುಗಳು ಕಮಾಲ್ ಮಾಡಿದ್ದು, ಚಿತ್ರ ಯಶಸ್ವಿಯಾಗಿ ಮುಂದೆ ಸಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಭಿಮಾನಿಗಳ ಪೈಶಾಚಿಕ ಕೃತ್ಯಕ್ಕೆ ಕಿಚ್ಚ ಸುದೀಪ್ ಪ್ರತಿಕ್ರಿಯೆ

    ಅಭಿಮಾನಿಗಳ ಪೈಶಾಚಿಕ ಕೃತ್ಯಕ್ಕೆ ಕಿಚ್ಚ ಸುದೀಪ್ ಪ್ರತಿಕ್ರಿಯೆ

    ಬೆಂಗಳೂರು: ಕಿಚ್ಚ ಸುದೀಪ್ ಅಭಿಮಾನಿಗಳು ಪ್ರಾಣಿಗಳನ್ನು ಬಲಿ ಕೊಟ್ಟು ಕಟೌಟ್ ಹಾಗೂ ಪೋಸ್ಟರ್ ಗೆ ರಕ್ತದ ಅಭಿಷೇಕ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ಈಗ ಸುದೀಪ್ ತಮ್ಮ ಅಭಿಮಾನಿಗಳ ಈ ಪೈಶಾಚಿಕ ಕೃತ್ಯಕ್ಕೆ ಪ್ರತಿಕ್ರಿಯಿಸಿದ್ದಾರೆ.

    ಅಭಿಮಾನಿಗಳ ಈ ಕೃತ್ಯಕ್ಕೆ ಕಿಚ್ಚ ಸುದೀಪ್ ಟ್ವಿಟ್ಟರಿನಲ್ಲಿ, “ಈ ರೀತಿಯ ಕೃತ್ಯಗಳನ್ನು ನಡೆಸುತ್ತಿರುವುದು ನಿಜಕ್ಕೂ ಅಮಾನವೀಯ. ನಾನು ನಿಮ್ಮ ಬಳಿ ಮನವಿ ಮಾಡಿಕೊಳ್ಳುತ್ತೇನೆ ದಯವಿಟ್ಟು ಇದನ್ನು ನಿಲ್ಲಿಸಿ. ವಿಲನ್ ಚಿತ್ರತಂಡ ನಿಮ್ಮ ಈ ರೀತಿಯ ಪ್ರೀತಿ ಹಾಗೂ ಗೌರವ ನೋಡಲು ಇಷ್ಟಪಡುವುದಿಲ್ಲ. ದಯವಿಟ್ಟು ಪ್ರಾಣಿಗಳನ್ನು ಬಲಿ ಕೊಡುವುದನ್ನು ನಿಲ್ಲಿಸಿ” ಎಂದು ಟ್ವೀಟ್ ಮಾಡಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ನೆಲಮಂಗಲದಲ್ಲಿ ದಿ-ವಿಲನ್ ಚಿತ್ರದ ಕಿಚ್ಚ ಸುದೀಪ್ ಕಟೌಟ್‍ಗೆ ಅಭಿಮಾನಿಗಳು ಮೇಕೆ ಬಲಿಕೊಟ್ಟು ರಕ್ತದ ಅಭಿಷೇಕ ಮಾಡಿ ಕೌರ್ಯ ಮೆರೆದರು. ಅಭಿಮಾನಿಗಳು ಮಾರಕಾಸ್ತ್ರಗಳನ್ನು ಬಳಸಿ ಮೇಕೆ ಬಲಿಕೊಟ್ಟು ರಕ್ತದ ಅಭಿಷೇಕ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನೂ ಓದಿ: ‘ದಿ-ವಿಲನ್’ ಚಿತ್ರದ ಕಿಚ್ಚ ಸುದೀಪ್ ಕಟೌಟಿಗೆ ಮೇಕೆ ಬಲಿಕೊಟ್ಟು ರಕ್ತದ ಅಭಿಷೇಕ

    ಅಲ್ಲದೇ ಮತ್ತೊಂದು ಚಿತ್ರಮಂದಿರದ ಬಳಿ ಅಭಿಮಾನಿಗಳು ಕೋಣವನ್ನು ಬಲಿ ಕೊಟ್ಟಿದ್ದರು. ಥಿಯೇಟರ್ ಮುಂದೆ ಕೋಣದ ತಲೆಯನ್ನು ಒಂದೇ ಏಟಿಗೆ ಕತ್ತರಿಸಿ, ಬಳಿಕ ಆ ತಲೆಯನ್ನು ಹಿಡಿದು ಅಭಿಮಾನಿಯೊಬ್ಬ ವಿಲನ್ ಪೋಸ್ಟರ್ ಗೆ ರಕ್ತದ ಅಭಿಷೇಕ ಮಾಡಿದ್ದ. ಕೋಣ ಕಡಿದು ರಕ್ತದ ಅಭಿಷೇಕ ಮಾಡಿದ್ದು ಎಲ್ಲಿ ಎನ್ನುವುದು ತಿಳಿದು ಬಂದಿಲ್ಲ. ಆದರೆ ಈ ಕೃತ್ಯದ ಫೋಟೋ ಮತ್ತು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಕೋಣ ಬಲಿ ಕೊಟ್ಟ ರಕ್ತದಿಂದ ವಿಲನ್ ಪೋಸ್ಟರಿಗೆ ಅಭಿಷೇಕ!

    ಅಭಿಮಾನವಿದ್ದರೆ ಅನಾಥಾಶ್ರಮದಲ್ಲಿರುವ ಮಕ್ಕಳಿಗೆ ನಟನ ಹೆಸರಿನಲ್ಲಿ ಆಹಾರ ನೀಡಲಿ ಅಥವಾ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲಿ. ಅದನ್ನು ಬಿಟ್ಟು ಪ್ರಾಣಿಗಳನ್ನು ಸಾರ್ವಜನಿಕವಾಗಿ ಕಡಿದು ಅಜ್ಞಾನಿಗಳಂತೆ ವರ್ತಿಸಿರುವುದು ಸರಿಯಲ್ಲ ಎಂದು ಜನ ಕ್ರೌರ್ಯ ಮರೆದ ಅಭಿಮಾನಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ‘ದಿ-ವಿಲನ್’ ಚಿತ್ರದ ಕಿಚ್ಚ ಸುದೀಪ್ ಕಟೌಟಿಗೆ ಮೇಕೆ ಬಲಿಕೊಟ್ಟು ರಕ್ತದ ಅಭಿಷೇಕ

    ‘ದಿ-ವಿಲನ್’ ಚಿತ್ರದ ಕಿಚ್ಚ ಸುದೀಪ್ ಕಟೌಟಿಗೆ ಮೇಕೆ ಬಲಿಕೊಟ್ಟು ರಕ್ತದ ಅಭಿಷೇಕ

    ಬೆಂಗಳೂರು: ವಿಶ್ವಾದ್ಯಂತ ಸದ್ದು ಮಾಡುತ್ತಿರುವ ‘ದಿ-ವಿಲನ್’ ಚಿತ್ರದ ಕಿಚ್ಚ ಸುದೀಪ್ ಕಟೌಟ್‍ಗೆ ಅಭಿಮಾನಿಗಳು ಮೇಕೆ ಬಲಿಕೊಟ್ಟು ರಕ್ತದ ಅಭಿಷೇಕ ಮಾಡಿ ಕೌರ್ಯ ಮೆರೆದಿದ್ದಾರೆ.

    ಅಭಿಮಾನಿಗಳು ಮಾರಕಾಸ್ತ್ರಗಳನ್ನು ಬಳಸಿ ಮೇಕೆ ಬಲಿಕೊಟ್ಟು ರಕ್ತದ ಅಭಿಷೇಕ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನೆಲಮಂಗಲದ ವಲಯದಲ್ಲಿ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

    ಅಭಿಮಾನಿಗಳ ಈ ವರ್ತನೆ ನೋಡಿ ಶಿವಣ್ಣ ಹಾಗೂ ಸುದೀಪ್ ಅಭಿನಯದ ‘ದಿ ವಿಲನ್’ ಸಿನಿಮಾ ತಾರಕಕ್ಕೇರುತ್ತಿದ್ದೀಯಾ ಎಂಬ ಪ್ರಶ್ನೆ ಶುರುವಾಗಿದೆ. ಶಿವಣ್ಣ ಹಾಗೂ ಸುದೀಪ್ ಅಭಿಮಾನಿಗಳ ನಡುವಿನ ಸಮರದ ಸಂಭ್ರಮ ಇದೇನಾ ಎಂದು ಜನರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ. ಅಭಿಮಾನಿಗಳು ತಾಲಿಬಾನ್ ರೀತಿಯಲ್ಲಿ ಕೌರ್ಯ ಮೆರೆದಿದ್ದಾರೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸದ್ಯ ದಿ ವಿಲನ್ ಚಿತ್ರ ನೋಡಲು ಮಲ್ಟಿಪ್ಲೆಕ್ಸ್ ಗಳಲ್ಲಿಯೂ ಹೌಸ್‍ಫುಲ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಇದೇ ಮೊದಲ ಬಾರಿಗೆ ಹಿರಿಯ ನಟ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಒಟ್ಟಾಗಿ ನಟಿಸಿದ್ದಾರೆ. ಆಮಿ ಜಾಕ್ಸನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ವಿಲನ್ ಹಾಡುಗಳು ಕಮಾಲ್ ಮಾಡಿದ್ದು, ಚಿತ್ರ ಯಶಸ್ವಿಯಾಗಿ ಮುಂದೆ ಸಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಿ ವಿಲನ್ ಸಿನಿಮಾ ಎಫೆಕ್ಟ್- ಮೈಸೂರು ಚಿತ್ರಮಂದಿರ ಧ್ವಂಸ!

    ದಿ ವಿಲನ್ ಸಿನಿಮಾ ಎಫೆಕ್ಟ್- ಮೈಸೂರು ಚಿತ್ರಮಂದಿರ ಧ್ವಂಸ!

    ಮೈಸೂರು: ಸ್ಯಾಂಡಲ್ ವುಡ್ ನ ಬಹುನೀರಿಕ್ಷಿತ ಚಿತ್ರ ದಿ ವಿಲ್ ಸಿನಿಮಾ ಗುರುವಾರ ರಿಲೀಸ್ ಆಗಿದ್ದು, ಚಿತ್ರ ವೀಕ್ಷಿಸಿದ ಬಳಿಕ ಶಿವಣ್ಣ ಅಭಿಮಾನಿಗಳು ನಿರ್ದೇಶಕ ಪ್ರೇಮ್ ವಿರುದ್ಧ ಕೆಂಡಾಲರಾಗಿದ್ದರು. ಈ ಬೆನ್ನಲ್ಲೇ ಮೈಸೂರಿನಲ್ಲಿ ಥಿಯೇಟರ್ ಒಂದನ್ನು ಧ್ವಂಸಗೊಳಿಸಲಾಗಿದೆ.

    ಮೈಸೂರಿನ ತಿ.ನರಸೀಪುರ ತಾಲೂಕಿನಲ್ಲಿರೋ ಮುರುಗನ್ ಚಿತ್ರಮಂದಿರವನ್ನು ದಿ ವಿಲನ್ ಚಿತ್ರದ ಅಭಿಮಾನಿಗಳು ಪುಡಿಗೈದಿದ್ದಾರೆ. ಶುಕ್ರವಾರ ರಾತ್ರಿಯ ಶೋ ವೇಳೆ ಈ ಘಟನೆ ನಡೆದಿದೆ.

    ಧ್ವಂಸಗೊಳಿಸಿದ್ದು ಯಾಕೆ?:
    ಶುಕ್ರವಾರ ರಾತ್ರಿ ದಿ ವಿಲನ್ ಚಿತ್ರದ ಸೆಕೆಂಡ್ ಶೋ ನಡೆಯುತ್ತಿತ್ತು. ಈ ವೇಳೆ ಥಿಯೇಟರ್ ನಲ್ಲಿ ಸರಿಯಾಗಿ ಸೌಂಡ್ ಹಾಗೂ ಚಿತ್ರ ಪ್ರದರ್ಶನ ಆಗುತ್ತಿಲ್ಲವೆಂದು ಚಿತ್ರದ ಅಭಿಮಾನಿಗಳು ಗಲಾಟೆ ಶುರುಮಾಡಿಕೊಂಡಿದ್ದರು. ಈ ಜಗಳ ತಾರಕಕ್ಕೇರಿ ವಿಲನ್ ಫ್ಯಾನ್ಸ್ ಥಿಯೇಟರ್ ನಿಂದ ಹೊರಬಂದು ಕಲ್ಲು ತೂರಾಟ ನಡೆಸಿದ್ದಾರೆ.

    ಅಭಿಮಾನಿಗಳ ರೊಚ್ಚಿಗೆ ಚಿತ್ರಮಂದಿರದ ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ. ಕೂಡಲೇ ಥಿಯೇಟರ್ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿ ತಿ.ನರಸೀಪುರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

    ಶಿವಣ್ಣ ಅಭಿಮಾನಿಗಳಿಗೆ ಪ್ರೇಮ್ ಸ್ಪಷ್ಟನೆ:
    ಚಿತ್ರದಲ್ಲಿ ಶಿವಣ್ಣ ಅವರಿಗೆ ಅವಮಾನಿಸಲಾಗಿದೆ, ಕಾಸ್ಟ್ಯೂಮ್ ನಿಂದ ಹಿಡಿದು ಎಲ್ಲಾ ಪಾತ್ರಗಳಲ್ಲಿಯೂ ಶಿವರಾಜ್ ಕುಮಾರ್ ಅವರಿಗೆ ಅವಮಾನ ಮಾಡಲಾಗಿದೆ ಅಂತ ಅಭಿಮಾನಿಗಳು ಪ್ರೇಮ್ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಪ್ರಸಿದ್ಧ ಚಿತ್ರಮಂದಿರ ನರ್ತಕಿ ಥಿಯೇಟರ್ ಮುಂದೆ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರೇಮ್, ಸಿನಿಮಾನ ಸಿನಿಮಾ ಥರ ನೋಡಿ. ನಿಮ್ಮನ್ನ ನೋಯಿಸುವುದು ನನ್ನ ಉದ್ದೇಶವಲ್ಲ. ಶಿವಣ್ಣನ ಮುಗ್ಧತೆಯನ್ನು ಆ ಸೀನ್‍ನಲ್ಲಿ ತೋರಿಸಲಾಗಿದೆ. ಆ ಸೀನ್ ನಲ್ಲಿ ಶಿವಣ್ಣ ಅವರ ಅಭಿನಯವೇ ಪ್ರಮುಖ. ಆದ್ದರಿಂದಲೇ ಅಷ್ಟು ಚೆನ್ನಾಗಿ ಮೂಡಿ ಬಂದಿದೆ. ಶಿವಣ್ಣ ಪಾತ್ರ ಒಂದೊಮ್ಮೆ ಫೈಟ್ ಮಾಡಿದ್ದರೆ, ಅಲ್ಲಿ ಅರ್ಥವೇ ಕೆಟ್ಟು ಹೋಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಸಿನಿಮಾ ಗೆಲ್ಲಲು ಅಭಿಮಾನಿಗಳೇ ಕಾರಣ. ನಿಮ್ಮಿಂದಲೇ ಸಿನಿಮಾ ಗೆಲುವು ಪಡೆದಿದೆ. ಬೇರೆ ಭಾಷೆಯ ಸಿನಿಮಾ ಕ್ಷೇತ್ರದ ಜನರು ತಿರುಗಿ ನೀಡುವಂತೆ ಮಾಡಿದ್ದೀರಿ. ಅದ್ದರಿಂದ ಸಿನಿಮಾವನ್ನು ಹಾಗೆಯೇ ನೋಡಿ. ಈ ಕುರಿತು ಕ್ಷಮೆ ಇರಲಿ ಎಂದು ತಿಳಿಸಿದ್ದಾರೆ. ಆದರೆ ಅಭಿಮಾನಿಗಳ ಬೇಡಿಕೆಯಾದ ಫೈಟ್ ದೃಶ್ಯ ಕತ್ತರಿ ಹಾಕುವ ಬಗ್ಗೆ ಯಾವುದೇ ಮಾತುಗಳನ್ನಾಡಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿರ್ದೇಶಕ ಪ್ರೇಮ್ ವಿರುದ್ಧ ತಿರುಗಿ ಬಿದ್ರು ಶಿವಣ್ಣನ ಅಭಿಮಾನಿಗಳು!

    ನಿರ್ದೇಶಕ ಪ್ರೇಮ್ ವಿರುದ್ಧ ತಿರುಗಿ ಬಿದ್ರು ಶಿವಣ್ಣನ ಅಭಿಮಾನಿಗಳು!

    ಬೆಂಗಳೂರು: ನಿರ್ದೇಶಕ ಪ್ರೇಮ್ ಅವರ ಬಹುನಿರೀಕ್ಷಿತ ಚಿತ್ರ ‘ದಿ ವಿಲನ್’ ಗುರುವಾರವಷ್ಟೇ ತೆರೆಕಂಡಿದ್ದು, ಇದೀಗ ಸಿನಿಮಾ ನೋಡಿದ ಬಳಿಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿಮಾನಿಗಳು ಪ್ರೇಮ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

    ಸಿನಿಮಾದಲ್ಲಿ ಸುದೀಪ್ ಅವರು ಶಿವಣ್ಣನಿಗೆ ಹೊಡೆಯುವ ದೃಶ್ಯವಿದ್ದು, ಈ ದೃಶ್ಯಕ್ಕೆ ಕತ್ತರಿ ಹಾಕಬೇಕು ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಈ ಸಂಬಂಧ ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ನರ್ತಕಿ ಚಿತ್ರಮಂದಿರದ ಮುಂದೆ ಪ್ರತಿಭಟನೆ ಮಾಡಲು ಸಜ್ಜಾಗಿದ್ದಾರೆ.

    ಈ ಸಂಬಂಧ ಶಿವಣ್ಣ ಅಭಿಮಾನಿ ಪುನೀತ್ ಎಂಬವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಸಿನಿಮಾವನ್ನು ಸಿನಿಮಾ ತರಹ ನೋಡಿ ಅಂತ ಎಲ್ಲರೂ ಹೇಳುತ್ತಾರೆ. ಅದನ್ನೂ ನಾನು ಕೂಡ ಒಪ್ಪಿಕೊಳ್ಳುತ್ತೇನೆ. ಆದ್ರೆ ಸಿನಿಮಾದಲ್ಲಿರುವ ಹೀರೋಗೆ ಗೌರವ ಕೊಡಬೇಕು ಅನ್ನೋ ಸಾಮಾನ್ಯ ಜ್ಞಾನ ಒಬ್ಬ ನಿರ್ದೇಶಕನಿಗೆ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.  ಇದನ್ನೂ ಓದಿ:  ಶಿವಣ್ಣ ಏನ್ ದಡ್ಡರೇ- ಅಭಿಮಾನಿಗಳಿಗೆ ಸುದೀಪ್ ಪ್ರಶ್ನೆ

    ನಾನು ಸಿನಿಮಾವನ್ನು ಒಬ್ಬ ಕಲಾವಿದನಾಗಿ ಹಾಗೂ ಪಾತ್ರವಾಗಿಯೂ ನೋಡುತ್ತೇನೆ. ಇವೆರಡು ಕಣ್ಣುಗಳಿದ್ದಂತೆ. ಈ ಸಿನಿಮಾದ ಪಾತ್ರದಲ್ಲಿ ಶಿವಣ್ಣನಿಗೆ ತುಂಬಾ ಅವಮಾನ ಮಾಡಲಾಗಿದೆ ಅಂತ ಚಿತ್ರದ ಒಂದು ದೃಶ್ಯವನ್ನು ಹೇಳುವ ಮೂಲಕ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

    ಕೆಲವು ಸಂದರ್ಭಗಳಲ್ಲಿ ಒಬ್ಬ ನಿರ್ದೇಶಕನನ್ನು ನಾವು ಅತೀವವಾಗಿ ನಂಬುತ್ತೇವೆ. ಕಾರಣವೇನೆಂದರೆ ಒಂದು ಅವರು ಈ ಮೊದಲು 2 ಸಿನಿಮಾಗಳನ್ನು ಮಾಡಿದ್ದಾರೆ. ಆದ್ರೆ ಇಲ್ಲಿ ಪ್ರೇಮ್ ನಂಬಿಕೆಗೆ ದ್ರೋಹ ಮಾಡಿದ್ದಾರೆ. ಹೀಗಾಗಿ ಚಿತ್ರ ನೋಡಿದ ಬಳಿಕ ತುಂಬಾನೇ ಬೇಜಾರಾಗಿದೆ. ಆದ್ರೆ ಈ ಬಗ್ಗೆ ಶಿವಣ್ಣ ಅವರಿಗೆ ಹೇಳಿದ್ರೆ, ಅವರದ್ದು ಮಗು ಮನಸ್ಸು. ನೀವು ಏನು ಮಾಡಬಾರದು, ಒಂದು ಕಟೌಟ್ ಹೆಚ್ಚಾಗಿ ನಿಲ್ಲಿಸಿಬಿಡಿ. ಒಂದು ಹಾರ ಎಕ್ಸ್ಟ್ರಾ ಹಾಕಿ ಬಿಡಿ. ನೀವು ಗೌರವ ಕೊಡಿ ಸಿನಿಮಾನ ಸಿನಿಮಾದಂತೆ ನೋಡಿ.. ಹೀಗೆ ಅವರು ಧನಾತ್ಮಕವಾಗಿಯೇ ಮಾತನಾಡುತ್ತಾರೆ ಅಂತ ಪುನೀತ್ ತಿಳಿಸಿದ್ರು.

    ಅವರು ಗಲಾಟೆ ಮಾಡಿದ್ರೆ ತಾಯಾಣೆ ಥಿಯೇಟರ್ ಗೆ ಬರಲ್ಲ ಅಂತ ಹೇಳಿದ್ದರು. ಹೀಗಾಗಿ ನಾವು ಗಲಾಟೆ ಮಾಡಿಲ್ಲ. ಶಿವಣ್ಣ ಹೇಳಿದ್ದು ಎಲ್ಲವನ್ನು ಸ್ವೀಕರಿಸುತ್ತೇವೆ. ಆದ್ರೆ ಇಷ್ಟೊಂದು ಬೇಸರ ಯಾವತ್ತೂ ಆಗಿಲ್ಲ ಅಂತ ಅವರು ದುಃಖ ತೋಡಿಕೊಂಡರು.

    ಶಿವಣ್ಣ ಅವರು 125 ಸಿನಿಮಾ ಮಾಡಿದ ಹೀರೋ. ಸುಮ್ನೆ ಇರುತ್ತಾರೆ ಅಂತ ಇವರೆಲ್ಲರದ್ದು ಜಾಸ್ತಿ ಆಯ್ತು. ಸಿನಿಮಾದಲ್ಲಿ ಪರೋಕ್ಷವಾಗಿ ಅವಮಾನ ಮಾಡಲಾಗಿದೆ. ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡಿದ್ದಾರೆ ಅನಿಸುತ್ತೆ. ಯಾಕಂದ್ರೆ ಕಾಸ್ಟ್ಯೂಮ್ ನಿಂದ ಹಿಡಿದು ಎಲ್ಲದರಲ್ಲೂ ಅವಮಾನ ಮಾಡಿದ್ದಾರೆ ಅಂತ ಪ್ರೇಮ್ ವಿರುದ್ಧ ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

    https://www.youtube.com/watch?v=MPXuUCvMg9o

    https://www.youtube.com/watch?v=BazgjNIbQLI

  • ಸಿನಿಮಾ ನೋಡಲು ಬಂದವ್ರಿಗೆ ಪೊಲೀಸರೇ `ವಿಲನ್’ ಗಳಾದ್ರು!

    ಸಿನಿಮಾ ನೋಡಲು ಬಂದವ್ರಿಗೆ ಪೊಲೀಸರೇ `ವಿಲನ್’ ಗಳಾದ್ರು!

    ಶಿವಮೊಗ್ಗ: ಕಿಚ್ಚ ಸುದೀಪ್ ಹಾಗೂ ಟಗರು ಶಿವಣ್ಣ ಅಭಿನಯದ `ದಿ ವಿಲನ್’ ಸಿನಿಮಾಕ್ಕೆ ಪ್ರದರ್ಶನಕ್ಕೆ ಚುನಾವಣಾ ನೀತಿ ಸಂಹಿತೆಯೇ ವಿಲನ್ ಆದ ಘಟನೆ ಶಿವಮೊಗ್ಗ ದಲ್ಲಿ ನಡೆದಿದೆ.

    ಇಲ್ಲಿನ ಲಕ್ಷ್ಮೀ ಟಾಕೀಸ್ ನಲ್ಲಿ ವಿಲನ್ ಚಿತ್ರದ ಮಧ್ಯರಾತ್ರಿ ಪ್ರದರ್ಶನ ನಿಗದಿ ಆಗಿತ್ತು. ಅಭಿಮಾನಿ ಸಂಘದವರಿಗೆ ಟಿಕೆಟ್ ನೀಡುವ ಭರವಸೆಯನ್ನೂ ಟಾಕೀಸ್ ನವರು ನೀಡಿದ್ದರು. ಆದರೆ, ಈ ಪ್ರದರ್ಶನಕ್ಕೆ ಚುನಾವಣಾ ಆಯೋಗದ ಅನುಮತಿ ಪಡೆಯದಿರಲಿಲ್ಲ. ಈ ಕಾರಣಕ್ಕೆ ಪೊಲೀಸರು ಚಿತ್ರಪ್ರದರ್ಶನಕ್ಕೆ ಅವಕಾಶ ನೀಡಲಿಲ್ಲ.

    ಹೀಗಾಗಿ ಅದೂವರೆಗೂ ಮಧ್ಯರಾತ್ರಿಯೇ ಅಭಿಮಾನದ ನಟರ ಸಿನೆಮಾ ನೋಡುವ ಉಮೇದಿನಲ್ಲಿದ್ದ ಅಭಿಮಾನಿಗಳು ಆಕ್ರೋಶಗೊಂಡರು. ಅದೂವರೆಗೂ ಕಟೌಟ್ ಗೆ ಹಾರ ಹಾಕಿ, ಪಟಾಕಿ ಸಿಡಿಸಿ, ಕುಂಬಳಕಾಯಿ ಒಡೆದು, ಕರ್ಪೂರ ಹಚ್ಚಿ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ಪೊಲೀಸರೂ ವಿಲನ್ ಗಳಾದರು. ಎಲ್ಲರನ್ನೂ ಹೊರ ಕಳಿಸಿ, ಗೇಟು ಮುಚ್ಚಿಸಿದರು. ತೀವ್ರ ನಿರಾಸೆಯಲ್ಲಿ ಅಭಿಮಾನಿಗಳು ಹಿಂತಿರುಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಡಿಯೋ: ಗಲಾಟೆ ಮಾಡಬಾರದು? ಅಂದಿದ್ದು ಯಾರಿಗೆ ಚಾಲೆಂಜಿಂಗ್ ಸ್ಟಾರ್?

    ವಿಡಿಯೋ: ಗಲಾಟೆ ಮಾಡಬಾರದು? ಅಂದಿದ್ದು ಯಾರಿಗೆ ಚಾಲೆಂಜಿಂಗ್ ಸ್ಟಾರ್?

    ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಇಂದು ನಡೆದ ಶರಣ ಸಂಸ್ಕೃತಿ ಉತ್ಸವದ ಜಾಗೃತಿ ನಡಿಗೆಗೆ ರಾಕ್‍ಲೈನ್ ವೆಂಕಟೇಶ್ ಹಾಗೂ ದರ್ಶನ್ ಚಾಲನೆ ನೀಡಿದ್ದಾರೆ. ಮುರುಘಾಮಠದ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಸೌಹಾರ್ದ ನಡಿಗೆ ಪಾರಿವಾಳ ಹಾರಿಬಿಡುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದ್ದಾರೆ.

    ಮುರುಘಾಮಠಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿದರು. ದರ್ಶನ್ ಮಠಕ್ಕೆ ಬರುತ್ತಿದ್ದಂತೆ ಮಠದ ಆನೆ ಬಗ್ಗೆ ವಿಚಾರಿಸಿದ್ದಾರೆ. ಅಲ್ಲದೇ ಆನೆಯ ಆರೋಗ್ಯದ ಬಗ್ಗೆಯೂ ವಿಚಾರಿಸಿ ತಿಂಡಿ ಏನು ಕೊಟ್ಟಿದ್ದೀರಿ ಎಂದು ಮಾವುತರಿಗೆ ಕೇಳಿದ್ದಾರೆ. ಅಷ್ಟೇ ಅಲ್ಲದೇ ಆನೆಯ ದಂತವನ್ನು ಕೈಯಿಂದ ಮುಟ್ಟಿ ನೋಡಿ ಚೆನ್ನಾಗಿದೆ ಹೇಳಿದರು. ಈ ವೇಳೆ ದರ್ಶನ್ ಅಭಿಮಾನಿಯೊಬ್ಬರ ಮೇಲೆ ಗರಂ ಆದರು. ಗಲಾಟೆ ಮಾಡಬಾರದು ಆವಾಗಿನಿಂದ ನಿನ್ನದೇ ಗಲಾಟೆ ಎಂದು ಹೇಳಿ ಖಡಕ್ ವಾರ್ನಿಂಗ್ ಕೊಟ್ಟರು.

    ನಗರದ ಗಾಂಧಿ ವೃತ್ತದಿಂದ ಮುರುಘಾ ಮಠದವರೆಗೆ ಜಾಥಾ ಆರಂಭವಾಗಿದ್ದು, ದರ್ಶನ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಾಲನೆ ನೀಡಿದರು. ಸದ್ಯ ದರ್ಶನ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದು, ಅಭಿಮಾನಿಗಳನ್ನು ಚದುರಿಸಲು ಪೊಲೀಸರಿಂದ ಹರಸಾಹಸಪಟ್ಟರು. ದರ್ಶನ್ ಹಾಗೂ ರಾಕ್‍ಲೈನ್ ವೆಂಕಟೇಶ್ ಅವರಿಗೆ ಡಾ. ಶಿವಮೂರ್ತಿ ಮುರುಘಾ ಶರಣರು ಸಾಥ್ ನೀಡಿದ್ದಾರೆ.

    ಶರಣ ಸಂಸ್ಕೃತಿ ಉತ್ಸವದ ಜಾಗೃತಿ ನಡಿಗೆಗೆ ಚಾಲನೆ ನೀಡುವ ಮುನ್ನ ಮಾತನಾಡಿದ ರಾಕ್‍ಲೈನ್ ವೆಂಕಟೇಶ್ ಅವರು, ದಸರಾ ಆಚರಣೆ ಮಾಡಲು ಬಂದಿದ್ದೇವೆ, ದಸರಾ ಹಬ್ಬ ಮಾಡೋಣ. ಹಬ್ಬ ಆಚರಿಸಲು ನಮ್ಮನ್ನು ಮುರುಘಾ ಶರಣರು ಕರೆಸಿದ್ದಾರೆ. ಹೀಗಾಗಿ ಚಿತ್ರದ ಬಗ್ಗೆ ಮಾತನಾಡುವುದು ಬೇಡ ವೀರ ಮದಕರಿ ಚಿತ್ರದ ಬಗ್ಗೆ ಮಾತನಾಡಲು ಪ್ರತ್ಯೇಕ ವೇದಿಕೆ ಸೃಷ್ಟಿಸುತ್ತೇವೆ. ಈಗ ಚಿತ್ರದುರ್ಗ ಹಾಗು ಚಿತ್ರದ ಬಗ್ಗೆ ಮಾತನಾಡುವುದು ಸರಿಯಲ್ಲ ಅಂತಾ ತಿಳಿಸಿದ್ರು.

    ಇದೇ ವೇಳೆ ರಾಕ್‍ಲೈನ್ ವೆಂಕಟೇಶ್ ಅವರು ಮಾಧ್ಯಮಗಳ ಮುಂದೆ ಮಾತನಾಡದೇ ದರ್ಶನ್ ಅವರು ಕೂಡ ದಸರಾ ಹಬ್ಬದ ಶುಭಾಶಯ ತಿಳಿಸಿ ಅಲ್ಲಿಂದ ಹೊರಟು ಹೋದರು. ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಟರಾದ ದೊಡ್ಡಣ್ಣ, ಶ್ರೀನಿವಾಸ ಮೂರ್ತಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv