Tag: followers

  • ಕೆಜಿಎಫ್ ಚಿತ್ರಕ್ಕೆ ಬ್ಯಾನರ್ ಹಾಕಿ ದರ್ಶನ್ ಫಾನ್ಸ್ ಬೆಂಬಲ- ಒಂದಾದ ಅಣ್ತಾಮ್ಮಾಸ್

    ಕೆಜಿಎಫ್ ಚಿತ್ರಕ್ಕೆ ಬ್ಯಾನರ್ ಹಾಕಿ ದರ್ಶನ್ ಫಾನ್ಸ್ ಬೆಂಬಲ- ಒಂದಾದ ಅಣ್ತಾಮ್ಮಾಸ್

    ಬೆಂಗಳೂರು: ವಿಶ್ವಾದ್ಯಂತ ಸದ್ದು ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಕೆಜಿಎಫ್’ ಇಂದು ಬಿಡುಗಡೆಯಾಗಿದೆ. ಕೆಜಿಎಫ್ ಚಿತ್ರಕ್ಕಾಗಿ ಅಣ್ತಮ್ಮಾಸ್ ಫ್ಯಾನ್ಸ್ ಒಂದಾಗಿದ್ದಾರೆ. ಚಂದನವನದ ಹೆಮ್ಮೆಯ ಸಿನಿಮಾ ಕೆಜಿಎಫ್ ಚಿತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು ಯಶ್ ಚಿತ್ರಕ್ಕೆ ಶುಭ ಕೋರಿದ್ದಾರೆ.

    ನಗರದಾದ್ಯಂತ ಹಲವೆಡೆ ದರ್ಶನ್ ಅಭಿಮಾನಿಗಳು ಕೆಜಿಎಫ್ ಚಿತ್ರದ ಬ್ಯಾನರ್ ಹಾಕಿ ವಿಶೇಷವಾಗಿ ಬೆಂಬಲ ಸೂಚಿಸುತ್ತಿದ್ದಾರೆ. ಕೆಜೆಎಫ್ ಚಿತ್ರ ಸ್ಟಾರ್ ಅಭಿಮಾನಿಗಳ ಬಣವನ್ನು ಒಗ್ಗೂಡಿಸಿದ ಕನ್ನಡದ ಹೆಮ್ಮೆಯ ಚಿತ್ರ ಎಂದು ಹೇಳಲಾಗುತ್ತಿದೆ. ಕನ್ನಡದ ಚಿತ್ರ ವಿಶ್ವಾದ್ಯಂತ ಹೆಸರು ಮಾಡಬೇಕು ಎಂಬ ಕಾರಣದಿಂದ ಸಮಸ್ತ ಕನ್ನಡ ಚಿತ್ರ ರಸಿಕರೂ ಒಗ್ಗಟ್ಟಾಗಿ ಕೆಜಿಎಫ್ ಗೆ ಬೆಂಬಲ ಸೂಚಿಸುತ್ತಿದ್ದಾರೆ.

    ಕೋಲಾರದ ಕೆಜಿಎಫ್ ನಲ್ಲಿ ಹುಟ್ಟುವ ಮಗು ಮುಂಬೈನಲ್ಲಿ ತನ್ನ ಹೆಜ್ಜೆಯನ್ನು ಮೂಡಿಸುತ್ತಾನೆ. ನೀನು ಹೇಗೆ ಬಾಳ್ತಿಯಾ ನನಗೆ ಗೊತ್ತಿಲ್ಲ. ಆದ್ರೆ ಸಾಯುವ ಮುನ್ನ ನೀನೊಬ್ಬ ಶ್ರೀಮಂತ, ಅತ್ಯಂತ ಶಕ್ತಿಯುಳ್ಳವನಾಗಿರಬೇಕು ಎಂದು ಮಗನಿಂದ ಮಾತು ಪಡೆದುಕೊಳ್ಳುವ ತಾಯಿ. ಮುಂಬೈ ಸೇರಿದ ಮೇಲೆ ಬದಲಾಗುವ ಬದುಕು. ಮತ್ತೆ ಕೋಲಾರ ಸೇರುವ ಹುಡುಗ. ಹೀಗೆ ಕಥೆಯ ಒಂದೊಂದು ಎಳೆಯನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ.

    ಕೆಜಿಎಫ್ ಚಿತ್ರವನ್ನು ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಕೆಜಿಎಫ್ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗದಲ್ಲಿ ನಟಿ ಶ್ರೀನಿಧಿ ಶೆಟ್ಟಿ, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ಅನಂತ್ ನಾಗ್ ಹಾಗೂ ವಸಿಷ್ಠ ಸಿಂಹ ನಟಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತ್ನಿಗೆ Awesome ಎಂದ್ರು ನಟ ಸುದೀಪ್

    ಪತ್ನಿಗೆ Awesome ಎಂದ್ರು ನಟ ಸುದೀಪ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಅವರು ತಮ್ಮ ಪತ್ನಿ ಪ್ರಿಯಾ ಅವರಿಗೆ ಟ್ವೀಟ್ ಮಾಡುವ ಮಾಡಿ ಅಭಿನಂದಿಸಿದ್ದಾರೆ.

    ಸುದೀಪ್ ಅಭಿಮಾನಿಗಳು ತಮ್ಮ ಟ್ಟಿಟ್ಟರಿನಲ್ಲಿ, “ನಮ್ಮ ಐಡಲ್ ಗೊಂಬೆ, ಕನ್ನಡ ಇಂಡಸ್ಟ್ರಿಯ ಬಾದ್‍ಷಾ ಅವರ ಪತ್ನಿ, ನಮ್ಮ ನೆಚ್ಚಿನ ಅತ್ತಿಗೆ ಪ್ರಿಯಾ ಅವರು  ಟ್ಟಿಟ್ಟರಿನಲ್ಲಿ 1 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ” ಎನ್ನುವ ಸಾಲನ್ನು ಬರೆದು ಪ್ರಿಯಾ ಸುದೀಪ್ ಮತ್ತು ಅವರ ಫಾಲೋವರ್ಸ್ ಸಂಖ್ಯೆಯನ್ನು ತೋರಿಸುವ ಸ್ಕ್ರೀನ್ ಶಾಟ್ ಅನ್ನು ಕೊಲಾಜ್ ಮಾಡಿ ಅಭಿನಂದನೆ ತಿಳಿಸಿದ್ದರು.

    ಅಭಿಮಾನಿಗಳು ಮಾಡಿದ್ದ ಟ್ವೀಟ್‍ನ್ನು ಕಿಚ್ಚ ಸುದೀಪ್ ಅವರು ರೀಟ್ವೀಟ್ ಮಾಡಿ, Awesome ಎಂದು ಬರೆದು, ನಗುವ ಮತ್ತು ಜ್ಯೂಸ್ ಗ್ಲಾಸ್ ಇರುವ ಎಮೋಜಿ ಹಾಕಿ ಚಿಯರ್ಸ್ ಮಾಡಿದ್ದಾರೆ.

    ನಟ ಸುದೀಪ್ ಅವರು ಪತ್ನಿಗೆ ಟ್ವೀಟ್ ಮಾಡುವ ಮೂಲಕ ಅಭಿನಂದನೆ ತಿಳಿಸಿದ ತಕ್ಷಣ ಅಭಿಮಾನಿಗಳು ರೀಟ್ವೀಟ್ ಮಾಡುವ ಮೂಲಕ ಶುಭಾಶಯವನ್ನು ತಿಳಿಸಿದ್ದಾರೆ. ಸುದೀಪ್ ಮಾಡಿರುವ ಟ್ವೀಟ್ 2 ಸಾವಿರಕ್ಕಿಂತೂ ಅಧಿಕ ಲೈಕ್ಸ್ ಕಂಡಿದೆ.

    ಸದ್ಯಕ್ಕೆ ಸುದೀಪ್ ಅವರು, ‘ಪೈಲ್ವಾನ್’ ಮತ್ತು ‘ಕೋಟಿಗೊಬ್ಬ 3’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಿವಮೊಗ್ಗದಲ್ಲಿ ಧ್ರುವ ಸರ್ಜಾ- ಕಿಕ್ಕಿರಿದ ಅಭಿಮಾನಿಗಳು

    ಶಿವಮೊಗ್ಗದಲ್ಲಿ ಧ್ರುವ ಸರ್ಜಾ- ಕಿಕ್ಕಿರಿದ ಅಭಿಮಾನಿಗಳು

    ಶಿವಮೊಗ್ಗ: ಜಿಲ್ಲೆಯ ನವೀಕೃತ ಜೋಯಾಲುಕ್ಕಾಸ್ ಮಳಿಗೆಯನ್ನು ಖ್ಯಾತ ನಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಿಕ್ಕಿರಿದ ಅಭಿಮಾನಿಗಳ ನಡುವೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜೋಯಾಲುಕ್ಕಾಸ್ ಸಮೂಹದ ಸಿಎಂಡಿ ಜಾಯ್ ಅಲುಕ್ಕಾಸ್ ಇನ್ನಿತರರು ಉಪಸ್ಥಿತರಿದ್ದರು.

    ಧ್ರುವ ಸರ್ಜಾ ಮಳಿಗೆ ಉದ್ಘಾಟಿಸಿ ಚಿನ್ನಾಭರಣ, ವಜ್ರ, ವಾಚ್ ಇನ್ನಿತರ ವಿಭಾಗಗಳಿಗೆ ಭೇಟಿ ನೀಡಿ ವೈವಿಧ್ಯಮಯ ಶ್ರೇಣಿ ಹಾಗೂ ವಿನ್ಯಾಸಗಳಿಗೆ ಮೆಚ್ಚುಗೆ ಸೂಚಿಸಿದರು. ಈ ಮಳಿಗೆಯಲ್ಲಿನ ಪ್ರಾಚೀನ ಸಂಗ್ರಹಗಳನ್ನು ಒಳಗೊಂಡ ಹರಳುಗಳ ವಿಭಾಗ ಅಪೂರ್ವ ಸೇರಿದಂತೆ ವಿವಿಧ ವಿಭಾಗಗಳಲ್ಲಿನ ವಿವಿಧತೆಗೆ ಸಂತಸ ವ್ಯಕ್ತಪಡಿಸಿದರು.

    ನವೀಕೃತ ಮಳಿಗೆ ಆರಂಭಗೊಂಡ ಬೆನ್ನಲ್ಲೇ ಜೋಯಾಲುಕ್ಕಾಸ್ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ಘೋಷಿಸಿದೆ. ಪ್ರತಿ ಖರೀದಿಯ ಮೇಲೆ ಖಚಿತವಾದ ಗೃಹ ಬಳಕೆ ವಸ್ತುಗಳನ್ನು ಉಚಿತವಾಗಿ ಪಡೆಯಲಿದ್ದಾರೆ. ಬೆಳಗ್ಗಿನಿಂದಲೇ ತಮ್ಮ ಪ್ರೀತಿಯ ನಟ ಧ್ರುವ ಸರ್ಜಾ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು.

    ವೇದಿಕೆ ಮೇಲೆ ಬಂದ ಧ್ರುವ ಸರ್ಜಾ ಶಿವಮೊಗ್ಗ ಅಭಿಮಾನಿಗಳಿಗಾಗಿ ಸಿನಿಮಾ ಡೈಲಾಗ್ ಹೇಳಿ ರಂಜಿಸಿದರು. ಅಲ್ಲದೇ ಜೋಯಾಲುಕ್ಕಾಸ್ ಮಳಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಧ್ರುವ ಸರ್ಜಾ ಹಿಂತಿರುಗುವಾಗ ಅವರಿಗೆ ಅಡ್ಡಲಾದ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗ್ರಾಮ ಪಂಚಾಯತ್ ಅಧ್ಯಕ್ಷನ ಬೆಂಬಲಿಗರಿಂದ ಸದಸ್ಯನ ಬರ್ಬರ ಹತ್ಯೆ!

    ಗ್ರಾಮ ಪಂಚಾಯತ್ ಅಧ್ಯಕ್ಷನ ಬೆಂಬಲಿಗರಿಂದ ಸದಸ್ಯನ ಬರ್ಬರ ಹತ್ಯೆ!

    – ಅವಿಶ್ವಾಸ ನಿರ್ಣಯ ಮಂಡಿಸಿದ್ದಕ್ಕೆ ಕೊಲೆ

    ಬೆಳಗಾವಿ: ಗ್ರಾಮ ಪಂಚಾಯತ್ ನಲ್ಲಿ ಅವಿಶ್ವಾಸ ನಿರ್ಣಯ ಮಾಡಿದಕ್ಕೆ ಸದಸ್ಯರೊಬ್ಬರನ್ನು ಅಧ್ಯಕ್ಷನ ಬೆಂಬಲಿಗರು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿದೆ.

    ಹೊಸ ವಂಟಮೂರಿ ಗ್ರಾಮ ಪಂಚಾಯತ್ ಸದಸ್ಯ ಬನ್ನೆಪ್ಪ ಪಾಟೀಲ್ ಕೊಲೆಯಾದ ಸದಸ್ಯ. ಹೊಸ ವಂಟಮೂರಿ ಗ್ರಾಮ ಪಂಚಾಯತಿಯಲ್ಲಿ ಕಳೆದ ಮೂರು ವರ್ಷಗಳಿಂದ ಶಿವಾಜಿ ವಣ್ಣೂರ ಎಂಬವರು ಅಧ್ಯಕ್ಷನಾಗಿದ್ದನು. ಆದರೆ ಶಿವಾಜಿ ವಣ್ಣೂರನ ಕಾರ್ಯವೈಖರಿ ಬಗ್ಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಹಲವು ದಿನಗಳಿಂದ ಅಧ್ಯಕ್ಷನ ವಿರುದ್ಧ ಗ್ರಾಮ ಪಂಚಾಯ್ತಿ ಸದಸ್ಯರ ಗುಂಪೊಂದು ಅವಿಶ್ವಾಸ ನಿರ್ಣಯ ಹೊರಡಿಸಲು ಯತ್ನಿಸಿತ್ತು ಆದರೇ ಸಫಲಗೊಂಡಿರಲಿಲ್ಲ. ಆದರೆ ಡಿಸೆಂಬರ್ 7ಕ್ಕೆ ಹತ್ಯೆಯಾದ ಬನ್ನೆಪ್ಪ ಪಾಟೀಲ್ ನೇತೃತ್ವದಲ್ಲಿ ಸದಸ್ಯರು ಮತ್ತೊಮ್ಮೆ ಅಧ್ಯಕ್ಷನ ವಿರುದ್ಧ ಅವಿಶ್ವಾಸ ನಿರ್ಣಯ ಮಾಡಿದ್ದರು. ಇದು ಶಿವಾಜಿ ವಣ್ಣೂರನ ಹತಾಶೆಗೆ ಕಾರಣವಾಗಿತ್ತು.

    ಗುರುವಾರ ರಾತ್ರಿ 9 ಗಂಟೆ ಸಮಯದಲ್ಲಿ ನಡು ಊರಿನಲ್ಲೇ ಸದಸ್ಯ ಬನ್ನಪ್ಪೆ ಪಾಟೀಲ್‍ನನ್ನು ಶಿವಾಜಿ ವಣ್ಣೂರ ಹಾಗೂ ಬೆಂಬಲಿಗರು ಸೇರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಗ್ರಾಮ ಪಂಚಾಯತಿಯಲ್ಲಿ ತನ್ನ ವಿರುದ್ಧ ಕೈಗೊಂಡ ಅವಿಶ್ವಾಸ ನಿರ್ಣಯ ಪ್ರಶ್ನಿಸಿ ಶಿವಾಜಿ ವಣ್ಣೂರ ಹೈಕೋರ್ಟ್ ಮೆಟ್ಟಿಲು ಏರಿದ್ದನು. ಹೈಕೋರ್ಟ್ ತೀರ್ಪು ಪ್ರಕಟವಾಗುವ ಮೊದಲೇ ಈ ಭೀಕರ ಹತ್ಯೆ ನಡೆದಿದೆ. ಕೊಲೆಯಾದ ಬನ್ನೆಪ್ಪ ಪಾಟೀಲ್ ಹಾಗೂ ಪತ್ನಿ ಸವಿತಾ ಪಾಟೀಲ್ ಇಬ್ಬರು ಸಹ ಪಂಚಾಯತ್ ಸದಸ್ಯರಾಗಿದ್ದಾರೆ. ಈ ಘಟನೆ ಇಡೀ ಹೊಸ ವಂಟಮೂರಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಕಾಕಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಆರಂಭಿಸಿದ್ದಾರೆ.

    ಹೊಸ ವಂಟೂರಿ ಗ್ರಾಮವು ಶಾಸಕ ಸತೀಶ್ ಜಾರಕಿಹೊಳಿ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ. ಇಲ್ಲಿ ಬಹತೇಕ ಎಲ್ಲಾ ಸದಸ್ಯರು ಕಾಂಗ್ರೆಸ್ ಪಕ್ಷದ ಬೆಂಬಲಿಗರೇ ಆಗಿದ್ದಾರೆ. ಈಗ ಪಂಚಾಯತ್ ಚುನಾವಣೆ ದ್ವೇಷಕ್ಕೆ ಸದಸ್ಯರೊಬ್ಬರು ಬಲಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಿಸೆಂಬರ್ 4ಕ್ಕೆ ಅಂಬಿಯ ಹಾಲು-ತುಪ್ಪ ಕಾರ್ಯ

    ಡಿಸೆಂಬರ್ 4ಕ್ಕೆ ಅಂಬಿಯ ಹಾಲು-ತುಪ್ಪ ಕಾರ್ಯ

    ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಅವರು ಶನಿವಾರ ಮೃತಪಟ್ಟಿದ್ದು, ಸೋಮವಾರ ಅವರ ಅಂತ್ಯಕ್ರಿಯೆಯನ್ನು ಮಾಡಲಾಗಿತ್ತು. ಸದ್ಯ ಈಗ ಹಾಲು-ತುಪ್ಪ ಕಾರ್ಯವನ್ನು ಡಿಸೆಂಬರ್ 4ಕ್ಕೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

    ಕಂಠೀರವ ಸ್ಟುಡಿಯೋದಲ್ಲಿ ಇಂದು ಅಂಬಿ ಅಸ್ಥಿ ಪೂಜೆಯನ್ನು ಮಾತ್ರ ಮಾಡಲಾಯಿತು. 11ನೇ ದಿನಕ್ಕೆ ಅಂದರೆ ಡಿಸೆಂಬರ್ 4ರಂದು ಹಾಲು-ತುಪ್ಪ ಕಾರ್ಯ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಇಂದು ಹಾಲು-ತುಪ್ಪ ಕಾರ್ಯ ನಡೆಯಲಿದೆ ಎಂದು ಮಂಡ್ಯದಿಂದ ಅಭಿಮಾನಿವೊಬ್ಬರು ತೆಂಗಿನ ಹೊಂಬಾಳೆಯನ್ನು ತಂದಿದ್ದರು. ಇಂದು ಹಾಲು-ತುಪ್ಪ ಕಾರ್ಯ ನಡೆಯುವುದಿಲ್ಲ ಎಂದು ಅಭಿಮಾನಿ ಮಾಹಿತಿ ಪಡೆದ ನಂತರ 11ನೇ ದಿನಕ್ಕೆ ಹೊಂಬಾಳೆ ತರುತ್ತೇನೆ ಎಂದು ಹೇಳಿದ್ದಾರೆ.

    ಅಭಿಷೇಕ್ ಅವರು ಅಭಿಮಾನಿಗಳು ತಂದ ಹಾಲನ್ನು ಪಡೆದು ಅಸ್ಥಿ ಮೇಲೆ ಹಾಕಿ ಪೂಜೆ ನೆರವೇರಿಸಿದ್ದಾರೆ. ಅಲ್ಲದೇ ಹೊಂಬಾಳೆ ಮತ್ತು ತುಪ್ಪ ಹನ್ನೊಂದನೇ ದಿನಕ್ಕೆ ತನ್ನಿ ಎಂದ ಅಭಿಷೇಕ್ ಆಪ್ತರು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಅಭಿಷೇಕ್ ಚಿತೆಯಲ್ಲಿನ ಅಗ್ನಿಯನ್ನು ಹಾಲು ಹಾಕುವ ಮೂಲಕ ಶಾಂತಿ ಮಾಡುತ್ತಿದ್ದಾರೆ. ಇಬ್ಬರು ಪುರೋಹಿತರು ಅಸ್ಥಿ ಶಾಂತಿ ಪೂಜೆಯನ್ನು ನಡೆಸುತ್ತಿದ್ದಾರೆ. ಈ ವೇಳೆ ಅಭಿಮಾನಿಗಳನ್ನು ಒಳಗಡೆ ಬಿಡಲು ಪೊಲೀಸರು ನಿರಾಕರಿಸಿದ್ದರು. ಆಗ ಅಭಿಷೇಕ್ ಪೂಜೆ ನಂತರ ಅಭಿಮಾನಿಗಳನ್ನ ಒಳಗಡೆ ಬಿಡಿ ಎಂದಿದ್ದಾರೆ.

    ಅಭಿಷೇಕ್ ಅಸ್ಥಿ ಶಾಂತಿ ಪೂಜೆ ನೋಡಲು ಅಭಿಮಾನಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಸರದಿ ಸಾಲಿನಲ್ಲಿ ಸ್ಟುಡಿಯೋ ಒಳಗಡೆ ಬರುವುದ್ದಕ್ಕೆ ಅವಕಾಶ ನೀಡಿದ್ದಾರೆ. ಈ ವೇಳೆ ಅಭಿಷೇಕ್ ಅಭಿಮಾನಿಗಳಿಗೆ ಅಂಬಿ ಚಿತಾಭಸ್ಮ ನೀಡಿದ್ದಾರೆ. ಅರ್ಧ ಚಿತಾ ಭಸ್ಮವನ್ನ ನಾವು ಶ್ರೀರಂಗಪಟ್ಟಣಕ್ಕೆ ವಿಸರ್ಜಿಸುತ್ತೇವೆ. ಇನ್ನು ಅರ್ಧ ಚಿತಾಭಸ್ಮವನ್ನು ಜೊತೆಯಾಗಿ ಇಟ್ಟುಕೊಳ್ಳುತ್ತೇವೆ ಎಂದು ಅಭಿಮಾನಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅಭಿಮಾನಿಗಳ ಪ್ರೀತಿಗೆ ನಟಿ ರಾಧಿಕಾ ಪಂಡಿತ್ ಫಿದಾ

    ಅಭಿಮಾನಿಗಳ ಪ್ರೀತಿಗೆ ನಟಿ ರಾಧಿಕಾ ಪಂಡಿತ್ ಫಿದಾ

    ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರು ಅಭಿಮಾನಿಗಳ ಪ್ರೀತಿ ಕಂಡು ಫೀದಾ ಆಗಿದ್ದಾರೆ.

    ಅಭಿಮಾನಿಗಳು ತಮ್ಮ ನೆಚ್ಚಿನ ಕಲಾವಿದರಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಒಟ್ಟಿಗೆ ಇರುವ ಚಿತ್ರವನ್ನು ತಮ್ಮ ಎದೆ ಮೇಲೆ ಟ್ಯಾಟೂ ಬಿಡಿಸಿಕೊಂಡಿದ್ದಾರೆ. ಅಲ್ಲದೇ ಮತ್ತೊಬ್ಬ ಅಭಿಮಾನಿ ತಮ್ಮ ಬಲಗೈ ಮೇಲೆ “ಪ್ರಿನ್ಸೆಸ್ ರಾಧಿಕಾ” ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ.

    ಅಭಿಮಾನಿಗಳು ಟ್ಯಾಟೂ ಹಾಕಿಸಿಕೊಂಡ ಫೋಟೋವನ್ನು ರಾಧಿಕಾ ಪಂಡಿತ್ ಅವರು ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. “ನಿಮ್ಮ ಪ್ರೀತಿ ನಮ್ಮನ್ನು ಮೂಕವಿಸ್ಮಿತವಾಗಿಸಿದೆ. ಧನ್ಯವಾದಗಳು. ಆದರೆ ನಮಗೆ ನಿಮ್ಮ ಪ್ರೀತಿ ಹಾಗೂ ಆಶೀರ್ವಾದ ಅಷ್ಟೇ ಬೇಕು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಇತ್ತೀಚೆಗೆ ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಸೀಮಂತ ನಡೆದಿದ್ದು, ಹಸಿರು ಬಣ್ಣದ ಉಡುಗೆಯಲ್ಲಿ ಯಶ್- ರಾಧಿಕಾ ದಂಪತಿ ಮಿಂಚಿದ್ದರು. ಗೌಡರ ಸಂಪ್ರದಾಯದಂತೆ ಸೀಮಂತ ನಡೆದಿತ್ತು. ಇವರಿಬ್ಬರ ಮದುವೆ ಕಾರ್ಯಕ್ರಮವೂ ಇದೇ ಹೋಟೆಲ್ ನಲ್ಲಿ ನಡೆದಿದ್ದು, ಇದೀಗ ಸೀಮಂತ ಕೂಡ ಅಲ್ಲೇ ನಡೆದಿದ್ದು ವಿಶೇಷವಾಗಿತ್ತು.

    ಯಶ್ ಹಾಗೂ ರಾಧಿಕ ಡಿಸೆಂಬರ್ 9ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅದೇ ದಿನವೇ ಮಗು ಜನನವಾಗುತ್ತದೆ ಅಂತ ವೈದ್ಯರು ಹೇಳಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಸೀಮಂತ ಕಾರ್ಯಕ್ರಮ ನಡೆದಿದ್ದು, ಡಿಸೆಂಬರ್ 9ಕ್ಕೆ ಜೂನಿಯರ್ ರಾಕಿಂಗ್ ಸ್ಟಾರ್ ಅಥವಾ ಪುಟಾಣಿ ಸ್ಯಾಂಡಲ್ ಪ್ರಿನ್ಸೆಸ್ ಆಗಮನವಾಗುತ್ತಿರುವ ಖುಷಿಯಲ್ಲಿ ಯಶ್ ಅಭಿಮಾನಿಗಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಭಿಮನಿಯ ಕ್ಯಾನ್ಸರ್ ಪೀಡಿತ ತಾಯಿಯ ಚಿಕಿತ್ಸೆಗೆ ಕಿಚ್ಚನ ಸಹಾಯ

    ಅಭಿಮನಿಯ ಕ್ಯಾನ್ಸರ್ ಪೀಡಿತ ತಾಯಿಯ ಚಿಕಿತ್ಸೆಗೆ ಕಿಚ್ಚನ ಸಹಾಯ

    ಬೆಂಗಳೂರು: ತನ್ನ ಅಭಿಮಾನಿಯ ಕ್ಯಾನ್ಸರ್ ಪೀಡಿತ ತಾಯಿಗೆ ಚಿಕಿತ್ಸೆಗೆ ಸಹಾಯ ಮಾಡಲು ಕಿಚ್ಚ ಸುದೀಪ್ ಮುಂದಾಗಿದ್ದಾರೆ.

    ಸುದೀಪ್ ಅವರ ಅಭಿಮಾನಿಯಾಗಿರುವ ಲಕ್ಷ್ಮಣ್ ಗೌಡ ತಮ್ಮ ಟ್ವಿಟ್ಟರ್ ಖಾತೆ ಮೂಲಕ ಸುದೀಪ್ ಅವರ ಬಳಿ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಅಭಿಮಾನಿಯ ಟ್ವೀಟ್ ಗೆ ಸುದೀಪ್ ಸಹಾಯ ನೀಡುವ ಭರವಸೆ ನೀಡಿದ್ದಾರೆ.

    ಅಭಿಮಾನಿಯ ಮನವಿ ಹೀಗಿತ್ತು
    “ಅಣ್ಣ ನಮ್ಮ ಅಮ್ಮ ಇವರು. ಹೆಸರು ಮಂಗಳಮ್ಮ ವಯಸ್ಸು 40. ಇವರು 4 ವರ್ಷಗಳಿಂದ ಬ್ರೆಸ್ಟ್ ಕ್ಯಾನ್ಸರ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. 2 ಸಲ ಆಪರೇಷನ್ ಆಗಿದೆ. ಮತ್ತೆ ಕಾಯಿಲೆ ಜಾಸ್ತಿ ಆಗಿದೆ. ಈಗ ಮತ್ತೆ ಆಪರೇಷನ್ ಮಾಡಿಸಬೇಕು. ಮತ್ತೆ ಆಪರೇಷನ್ ಅಂದರೆ ನಾವು ತುಂಬಾ ತೊಂದರೆಯಲ್ಲಿ ಇದ್ದೇವೆ. ಆದ್ದರಿಂದ ಸಹಾಯ ಅನಿವಾರ್ಯತೆ ಇದೆ ದಯವಿಟ್ಟು ಅಣ್ಣ” ಎಂದು ಲಕ್ಷ್ಮಣ್ ಗೌಡ ಟ್ವೀಟ್ ಮಾಡಿ ಮನವಿ ಮಾಡಿದ್ದರು.

    ಕಿಚ್ಚ ಸುದೀಪ್ ಯಾವಾಗಲೂ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ಸದ್ಯ ಲಕ್ಷ್ಮಣ್ ಗೌಡ ಅವರ ಟ್ವೀಟ್‍ಗೆ ಕಿಚ್ಚ ಸುದೀಪ್ “ನಾನು ನನ್ನ ಕೈಯಲಾದ ಸಹಾಯ ಮಾಡುತ್ತೇನೆ. ಆಸ್ಪತ್ರೆ ಬಗ್ಗೆ ನನಗೆ ಮಾಹಿತಿ ನೀಡಿ. ನನ್ನ ಜನರು ನಿಮ್ಮನ್ನು ಅಲ್ಲಿ ಸಂರ್ಪಕಿಸುತ್ತಾರೆ. ನಿಮ್ಮ ತಾಯಿ ಬೇಗ ಗುಣಮುಖವಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ” ಪ್ರತಿಕ್ರಿಯಿಸಿದ್ದಾರೆ.

    ಸದ್ಯ ಕಿಚ್ಚ ಸುದೀಪ್ ಅವರ ಈ ಟ್ವೀಟ್‍ಗೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇವರ ಆದೇಶದಂತೆ ರೇಪ್ ಮಾಡಿದ್ದೇನೆ ಎಂದಿದ್ದ ದೇವಮಾನವನಿಗೆ 15 ವರ್ಷ ಜೈಲು

    ದೇವರ ಆದೇಶದಂತೆ ರೇಪ್ ಮಾಡಿದ್ದೇನೆ ಎಂದಿದ್ದ ದೇವಮಾನವನಿಗೆ 15 ವರ್ಷ ಜೈಲು

    ಸಿಯೋಲ್: ಚರ್ಚ್‍ನಲ್ಲಿ 8 ಜನ ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರ ಎಸಗಿದ್ದ ಧರ್ಮ ಗುರುವಿಗೆ ದಕ್ಷಿಣ ಕೊರಿಯಾ ಕೋರ್ಟ್ 15 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

    ಸಿಯೋಲ್‍ನ ಮಮಿನ್ ಸೆಂಟ್ರಲ್ ಚರ್ಚ್‍ನ ಲೀ ಜೇ ರಾಕ್ (75) ಜೈಲು ಶಿಕ್ಷೆಗೆ ಗುರಿಯಾದ ಧರ್ಮಗುರು. ಇತನು ಕ್ರಿಶ್ಚಿಯನ್ನರು ನಡೆಸುತ್ತಿದ್ದ ಸಂಸ್ಥೆಯ ಮುಖ್ಯಸ್ಥನಾಗಿದ್ದು, 1.30 ಲಕ್ಷ ಅನುಯಾಯಿಗಳನ್ನು ಹೊಂದಿದ್ದ. ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಆರೋಪದಡಿ ಮೇ ತಿಂಗಳಿನಲ್ಲಿ ಬಂಧಿಸಲಾಗಿದ್ದ ಲೀ ಜೇ ರಾಕ್‍ಗೆ ಬುಧವಾರ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.

    ಕೆಲಸ ಮಾಡುವಂತೆ ದೇವರಿಂದ ಆದೇಶ ಬಂದಿತ್ತು. ನಾನು ದೇವಮಾನವನಾಗಿದ್ದು ಹೀಗಾಗಿ ಮಾಡಿರುವೆ ಎಂದು ಲೀ ಜೇ ರಾಕ್, ಕೋರ್ಟ್ ಆದೇಶ ಬಳಿಕ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾನೆ.

    ಏನಿದು ಪ್ರಕರಣ?:
    ಲೀ ಜೇ ರಾಕ್ ತನ್ನ ಅಪಾರ್ಟಮೆಂಟ್‍ಗೆ ಬರುವಂತೆ ಹಾಗೂ ಲೈಂಗಿಕ ಕ್ರಿಯೆಗೆ ಒಳಗಾಗುವಂತೆ ಒತ್ತಾಯಿಸುತ್ತಿದ್ದಾನೆ ಎಂದು ಮೂರು ಜನರ ಮಹಿಳೆ ದೂರು ನೀಡಿದ್ದರು. ನಾನು ಅವನ ವಿರುದ್ಧ ನಿಲ್ಲಲು ಸಾಧ್ಯವಾಗುತ್ತಿಲ್ಲ. ಅವನು ರಾಜ, ದೇವರು ಇದ್ದಂತೆ ಎಂದು ಸಂತ್ರಸ್ತ ಮಹಿಳೆಯೊಬ್ಬಳು ಭಯದಿಂದಲೇ ಮಾಧ್ಯಮಗಳ ಮುಂದೆ ತನ್ನ ಅಳಲು ತೋಡಿಕೊಂಡಿದ್ದಳು. ಈ ಮಹಿಳೆ ಹುಟ್ಟಿನಿಂದಲೇ ಚರ್ಚ್‍ನಲ್ಲಿ ವಾಸ್ತವ್ಯ ಪಡೆದಿದ್ದಳು.

    ಒಟ್ಟು 8 ಜನ ಸಂತ್ರಸ್ತ ಮಹಿಳೆಯರು ಲೀ ಜೇ ರಾಕ್ ವಿರುದ್ಧ ಧ್ವನಿ ಎತ್ತಿದ್ದರು. ಆರೋಪ ಬಂದ ಹಿನ್ನೆಲೆಯಲ್ಲಿ ಆತನನ್ನು ಮೇ ತಿಂಗಳಿನಲ್ಲಿ ಬಂಧಿಸಲಾಗಿತ್ತು. ಆರೋಪಿಯು ಸಂತ್ರಸ್ತ ಮಹಿಳೆಯರ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ ಹಾಗೂ ಕಿರುಕುಳ ನೀಡಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಕೋರ್ಟ್ ವಿಚಾರಣೆ ವೇಳೆ ಧರ್ಮಗುರುವಿನ ಮೇಲಿನ ಆರೋಪ ಸಾಬೀತಾಗಿತ್ತು.

    ನಾನು ದೇವಮಾನವ, ಪವಿತ್ರವಾದ ವ್ಯಕ್ತಿ, ಪರಿಶುದ್ಧ ಆತ್ಮ, ದೈವಿಕ ಶಕ್ತಿಯನ್ನು ಹೊಂದಿರುವುದಾಗಿ ಹೇಳಿಕೊಂಡು ಚರ್ಚ್ ಪ್ರಾರ್ಥನೆಗೆ ಬಂದು ಭಕ್ತರಿಗೆ ಮೋಸ ಮಾಡುತ್ತಿದ್ದ ಎಂದು ವರದಿಯಾಗಿದೆ.

    ಮಹಿಳೆಯ ಚರ್ಚ್ ಪ್ರವೇಶವನ್ನು ತಡೆದಿದ್ದಕ್ಕೆ ಲೈಂಗಿಕ ದೌರ್ಜನ್ಯ ಕೇಸ್ ಹಾಕಲಾಗಿದೆ ಎಂದು ಆರೋಪಿ ಪರ ವಕೀಲರು ವಾದ ಮಂಡಿಸಿದ್ದರು. ಆದರೆ ಆರೋಪ ಸಾಬೀತು ಆಗುತ್ತಿದ್ದಂತೆ ಕೋರ್ಟ್ 15 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಆ ಮಗುವಿನ ಜೊತೆ ಕಳೆದ ಆ ಸುಂದರ ಕ್ಷಣ ಮರೆಯಲ್ಲ: ಅಭಿಮಾನಿಯ ನಿಧನಕ್ಕೆ ಕರಗಿದ ಕಿಚ್ಚನ ಮನ

    ಆ ಮಗುವಿನ ಜೊತೆ ಕಳೆದ ಆ ಸುಂದರ ಕ್ಷಣ ಮರೆಯಲ್ಲ: ಅಭಿಮಾನಿಯ ನಿಧನಕ್ಕೆ ಕರಗಿದ ಕಿಚ್ಚನ ಮನ

    ಬೆಂಗಳೂರು: ತನ್ನ ಅಭಿಮಾನಿಯೊಬ್ಬ ಅನಾರೋಗ್ಯದಿಂದ ನಿಧನ ಹೊಂದಿದ್ದ ಸುದ್ದಿ ಕೇಳಿ ಕಿಚ್ಚ ಸುದೀಪ್ ಸಂತಾಪ ಸೂಚಿಸಿದ್ದಾರೆ.

    ಸುದೀಪ್ ಅವರ ಅಭಿಮಾನಿಯಾಗಿದ್ದ ಆದಿತ್ಯ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದರು. ಆದಿತ್ಯ ಇಂದು ಕೊನೆಯುಸಿರೆಳೆದಿದ್ದಾರೆ.

    “ನನಗೆ ತುಂಬಾ ಬೇಸರವಾಗುತ್ತಿದೆ. ನಾನು ಆ ಮಗುವಿನ ಜೊತೆ ಕಳೆದ ಆ ಸುಂದರ ಕ್ಷಣಗಳನ್ನು ಎಂದಿಗೂ ಮರೆಯುವುದಿಲ್ಲ. ಆ ಅದ್ಭುತ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಳ್ಳುತ್ತೇನೆ” ಎಂದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

    ಆದಿತ್ಯ ಅಪರೂಪದ ಡಿಎಂಡಿ ಕಾಯಿಲೆಯಿಂದ ಬಳಲುತ್ತಿದ್ದರು. ಡಿಎಂಡಿ ಕಾಯಿಲೆ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ. ಅಲ್ಲದೇ ಒಂದು ಗಂಟೆ ಒಂದೇ ಕಡೆ ಕೂರಲು ಸಾಧ್ಯವಾಗುವುದಿಲ್ಲ. ಈ ಕಾಯಿಲೆ ಹೆಚ್ಚು ಹುಡುಗರಲ್ಲಿ ಕಾಣಿಸಿಕೊಳ್ಳುತ್ತದೆ.

    ಆದಿತ್ಯಗೆ ಸುದೀಪ್ ನೆಚ್ಚಿನ ನಟನಾಗಿದ್ದರಿಂದ ಅವರನ್ನು ಬಹಳ ಇಷ್ಟಪಡುತ್ತಿದ್ದರು. ಕೆಲವು ವರ್ಷಗಳ ಹಿಂದೆ ಆದಿತ್ಯ ಡಿಎಂಡಿ ಕಾಯಿಲೆಯಿಂದ ಬಳಲುತ್ತಿದ್ದರು. 2014ರಲ್ಲಿ ಮೈಸೂರಿನಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯ ನಡೆಯುತ್ತಿದ್ದಾಗ ಸುದೀಪ್ ತಮ್ಮ ಅಭಿಮಾನಿ ಆದಿತ್ಯ ಅವರನ್ನು ಭೇಟಿ ಮಾಡಿ ತಮ್ಮ ಆಸೆಗಳನ್ನು ಹೇಳಿಕೊಂಡಿದ್ದರು.

    ಆದಿತ್ಯ ಅವರ ಆಸೆಗಳನ್ನು ಈಡೇರಿಸಲು ಕಿಚ್ಚ ಸುದೀಪ್ ಅವರ ಕುಟುಂಬಕ್ಕೆ ನೆರವಾಗಿದ್ದರು. ಆದಿತ್ಯ ಅವರ ತಂದೆ ಭಾರತಿ ಶಂಕರ್ ಆಗಿದ್ದು, ‘ಆಟೋಗ್ರಾಫ್ ಪ್ಲೀಸ್’ ಚಿತ್ರವನ್ನು ನಿರ್ದೇಶಿಸಿದ್ದರು. ನಂತರ ಅವರು ಚಿತ್ರರಂಗದಿಂದ ದೂರ ಉಳಿದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನೀವು ಪ್ರಜಾಕೀಯ ಬಿಟ್ಟು ಡೈರೆಕ್ಷನ್ ಮಾಡಿ ಅಂದ್ರೆ ನಾನು ಪಕ್ಷ ಬಿಡೋದಕ್ಕೆ ರೆಡಿ: ಉಪೇಂದ್ರ

    ನೀವು ಪ್ರಜಾಕೀಯ ಬಿಟ್ಟು ಡೈರೆಕ್ಷನ್ ಮಾಡಿ ಅಂದ್ರೆ ನಾನು ಪಕ್ಷ ಬಿಡೋದಕ್ಕೆ ರೆಡಿ: ಉಪೇಂದ್ರ

    ಬೆಂಗಳೂರು: ಪ್ರಜಾಕೀಯಕ್ಕೆ ಉಪೇಂದ್ರ ಗುಡ್ ಬೈ ಹೇಳುತ್ತಾರಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ. ಅಭಿಮಾನಿಗಳಿಗೆ ಉಪೇಂದ್ರ ಮಾಡಿರುವ ಟ್ವೀಟ್ ನಿಂದಾಗಿ ಈ ಪ್ರಶ್ನೆ ಈಗ ಎದ್ದಿದೆ.

    “ನೀವು ಪ್ರಜಾಕೀಯ ಬಿಟ್ಟು ಡೈರೆಕ್ಷನ್ ಮಾಡಿ ಅಂದರೆ ನಾನು ಪ್ರಜಾಕೀಯ ಬಿಡುವುದ್ದಕ್ಕೆ ರೆಡಿ” ಎಂದು ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಅಭಿಮಾನಿಗಳಿಗೆ ಹೇಳಿದ್ದಾರೆ.

    ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳು “ಇವರು ರಿಮೇಕ್ ಸಿನಿಮಾ ಮಾಡುವುದು ಬಿಡಲಿಲ್ಲ, ನೀವು ಮತ್ತೆ ಡೈರೆಕ್ಷನ್ ಮಾಡುತ್ತಿಲ್ಲ, ಒಳ್ಳೆಯ ಸ್ಕ್ರಿಪ್ಟ್ ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಯಾಕೆಂದರೆ ನಮ್ಮ ಬಗ್ಗೆ ನಿಮಗೆ ಕಾಳಜಿಯೇ ಇಲ್ಲ” ಎಂಬುದಾಗಿ ಟ್ವೀಟ್ ಮಾಡಿದ್ದರು.

    ಅಭಿಮಾನಿಗಳ ಈ ಟ್ವೀಟ್‍ಗೆ ಉಪೇಂದ್ರ ರೀ-ಟ್ವೀಟ್ ಮಾಡಿ “ನೀವಿಲ್ಲದೆ ನಾನೂ ಏನೂ ಅಲ್ಲ, ನೀವು ಹೇಳಿದ ಹಾಗೆ ಕೇಳುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ ದಯವಿಟ್ಟು ಹೀಗೆ ಹೇಳಬೇಡಿ ನಿಮಗೋಸ್ಕರ ನಾನು ಪ್ರಜಾಕೀಯ ಬಿಡುವುದಕ್ಕೂ ತಯಾರಿದ್ದೇನೆ ಎಂಬುದಾಗಿ ಹೇಳಿ ರೀ-ಟ್ಟೀಟ್ ಮಾಡಿದ್ದಾರೆ.

    ಈ ಟ್ವೀಟ್ ನಿಂದಾಗಿ ಮತ್ತೆ ಉಪೇಂದ್ರ ಸಿನಿಮಾ ಡೈರೆಕ್ಷನ್ ಕಡೆ ಮುಖ ಮಾಡುತ್ತಾರಾ ಎನ್ನುವ ಕುತೂಹಲ ಮೂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews