Tag: Follow

  • ಬಸ್‍ನಲ್ಲಿದ್ದ ಯುವತಿಯನ್ನು ಕಿಚಾಯಿಸಿದ ಪುಂಡರು- ಓರ್ವ ಅರೆಸ್ಟ್

    ಬಸ್‍ನಲ್ಲಿದ್ದ ಯುವತಿಯನ್ನು ಕಿಚಾಯಿಸಿದ ಪುಂಡರು- ಓರ್ವ ಅರೆಸ್ಟ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪುಂಡರ ಹಾವಳಿ ಮಿತಿ ಮೀರಿದೆ. ಇಬ್ಬರು ಯುವಕರು ಬಸ್ ಹತ್ತಿದ್ದ ಯುವತಿಯನ್ನು ಫಾಲೋ ಮಾಡಿ ಚುಡಾಯಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.

    ಇಬ್ಬರು ಯುವಕರು ಯುವತಿಯೊಬ್ಬಳನ್ನು ಫಾಲೋ ಮಾಡಿಕೊಂಡು ಬಂದಿದ್ದಾರೆ. ಬಳಿಕ ಆ ಯುವತಿ ಬಿಎಂಟಿಸಿ ಬಸ್ ಹತ್ತಿದ್ದರೂ ಆ ಇಬ್ಬರು ಯುವಕರು ಆಕೆಯನ್ನು ಬಿಡಲಿಲ್ಲ. ಬೆಂಗಳೂರಿನ ಇಂದಿರಾನಗರದದಿಂದ ಬೈಯ್ಯಪ್ಪನಲ್ಲಿವೆರಗೂ ಬಸ್ ಫಾಲೋ ಮಾಡಿ ಯುವತಿಯನ್ನು ಚೇಡಿಸಿದ್ದಾರೆ.

    ಯುವಕರು ತಮ್ಮ ಡಿಯೋ ಬೈಕಿನಲ್ಲಿ ಹೆಲ್ಮೆಟ್ ಧರಿಸದೇ ಬಿಎಂಟಿಸಿ ಬಸ್ ಅನ್ನು ಫಾಲೋ ಮಾಡಿದ್ದಾರೆ. ಬಸ್ ಚಲಿಸುತ್ತಿರುವಾಗಲೇ ಬಸ್‍ನ ಕಿಟಕಿ ಬಳಿ ಹೋಗಿ ಯುವಕರು ಯುವತಿಯನ್ನು ಚುಡಾಯಿಸಿದ್ದಾರೆ. ಇಬ್ಬರು ಪುಂಡರ ಕೃತ್ಯವನ್ನು ನೋಡಿದ ಪ್ರಯಾಣಿಕರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾರೆ.

    ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಇಬ್ಬರು ಪುಂಡ ಯುವಕರಲ್ಲಿ ಅರುಣ್ ಎಂಬಾತನನ್ನು ಬಂಧಿಸಿದ್ದಾರೆ.

    https://www.youtube.com/watch?v=fNpvVR8DCUw

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • 6 ಕಿ.ಮೀ ಫಾಲೋ ಮಾಡಿದ ಅಭಿಮಾನಿಗೆ ಬುದ್ಧಿ ಮಾತು ಹೇಳಿ ಆಸೆ ನೆರವೇರಿಸಿದ್ರು ಪವರ್ ಸ್ಟಾರ್!

    6 ಕಿ.ಮೀ ಫಾಲೋ ಮಾಡಿದ ಅಭಿಮಾನಿಗೆ ಬುದ್ಧಿ ಮಾತು ಹೇಳಿ ಆಸೆ ನೆರವೇರಿಸಿದ್ರು ಪವರ್ ಸ್ಟಾರ್!

    ಬೆಂಗಳೂರು: ಇತ್ತೀಚೆಗೆ ಅಭಿಮಾನಿಯೊಬ್ಬರು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕಾರನ್ನು ಸುಮಾರು 6 ಕಿ.ಮೀ ಫಾಲೋ ಮಾಡಿದ್ದಾರೆ. ಆ ವ್ಯಕ್ತಿಯನ್ನು ನೋಡಿದ ತಕ್ಷಣ ಪುನೀತ್ ಆ ವ್ಯಕ್ತಿಯನ್ನು ನಿಲ್ಲಿಸಿ ಬುದ್ಧಿ ಮಾತು ಹೇಳಿದ್ದಾರೆ.

    ಪುನೀತ್ ರಾಜ್‍ಕುಮಾರ್ ತನ್ನ ಅಣ್ಣ ರಾಘವೇಂದ್ರ ರಾಜ್‍ಕುಮಾರ್ ಅವರ ಎರಡನೇ ಮಗ ಯುವ ರಾಜ್‍ಕುಮಾರ್ ನಿಶ್ಚಿತಾರ್ಥ ಮುಗಿಸಿಕೊಂಡು ವಾಪಾಸ್ ಬರುವಾಗ ಈ ಘಟನೆ ನಡೆದಿದೆ. ಅಣ್ಣನ ಮಗ ಯುವ ರಾಜ್‍ಕುಮಾರ್ ಎಂಗೇಜ್ಮೆಂಟ್‍ಗೆ ಇಡೀ ದೊಡ್ಮನೆ ಮೈಸೂರಿಗೆ ಪಯಣ ಬೆಳೆಸಿತ್ತು. ಅದ್ಧೂರಿಯಾಗಿ ನಿಶ್ಚಿತಾರ್ಥ ಮುಗಿಸಿಕೊಂಡು ಪುನೀತ್ ಮೈಸೂರಿನಿಂದ ಬೆಂಗಳೂರಿಗೆ ವಾಪಾಸ್ ಬರುತ್ತಿದ್ದರು.

    ಈ ವೇಳೆ ಪುನೀತ್ ರಾಜ್‍ಕುಮಾರ್ ಅವರನ್ನು ನೋಡಿದ ಅಭಿಮಾನಿ ಕೀರ್ತಿರಾಜ್, ಪುನೀತ್ ಕಾರ್ ನ ಹಿಂಬಾಲಿಸಿಕೊಂಡು ಬಂದಿದ್ದಾರೆ. ಸುಮಾರು 6 ಕಿ.ಮೀ ವರೆಗೂ ಕಾರನ್ನು ಫಾಲೋ ಮಾಡಿದ್ದಾರೆ. ತನ್ನ ಕಾರನ್ನು ಫಾಲೋ ಮಾಡುತ್ತಿರುವ ಅಭಿಮಾನಿಯನ್ನು ಪುನೀತ್ ಗಮನಿಸಿದ್ದಾರೆ. ತಕ್ಷಣ ಕಾರ್ ನಿಲ್ಲಿಸಿ ಆತನಿಗೆ ಹಿಂದೆಂದೂ ಕಾರು ಫಾಲೋ ಮಾಡದಂತೆ ಸಂದೇಶ ಕೊಟ್ಟಿದ್ದಾರೆ. ಪುನೀತ್ ಸರಳತೆ ಹಾಗೂ ಕಾಳಜಿ ಬಗ್ಗೆ ಅಭಿಮಾನಿ ತನ್ನ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

    ಫೇಸ್‍ಬುಕ್ ಪೋಸ್ಟ್ ನಲ್ಲಿ ಏನಿದೆ?
    ಪುನೀತ್ ರಾಜ್‍ಕುಮಾರ್ ಅವರ ಸರಳತೆ ಹಾಗೂ ಅವರ ಸೌಜನ್ಯತೆ ನಾನು ನಿಜಕ್ಕೂ ಮೂಕಾನಾದೇ. ಸುಮಾರು 6 ಕಿ.ಮೀ ಪುನೀತ್ ರಾಜ್‍ಕುಮಾರ್ ರವರ ಚಲಿಸುತ್ತಿದೆ. ಕಾರ್ ಅನ್ನು ಹಿಂಬಾಲಿಸುತ್ತಿದ ನನ್ನನು ಮೀರರ್ ನಲ್ಲಿ ನೋಡಿ ತಮ್ಮ ಕಾರ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ. ಮೊದಲು ಪ್ರಾಣ ಮುಖ್ಯ ನಾನು ಮತ್ತೆ ಸಿಗುತ್ತೆನೇ ಏನೂ ಫೋಟೋ ಬೇಕಾ ತಗೊಳ್ಳಿ ಎಂದು ಬುದ್ಧಿವಾದವನ್ನು ಹೇಳಿ ಫೋಟೋ ತೆಗೆಸಿಕೊಂಡರು. ಪುನೀತ್ ರಾಜ್‍ಕುಮಾರ್ ರವರ ಸರಳತೆ ಹಾಗೂ ಅವರ ಸೌಜನ್ಯತೆ ನಾನು ನಿಜಕ್ಕೂ ಮೂಕನಾದೇ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಮರೆಯಲಾಗದ ಸುಮಧುರ ಸುಂದರ ಕ್ಷಣಗಳು ಎಂದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದಾರೆ.

  • ಫಾಲೋ ಮಾಡ್ಕೊಂಡು ಬಂದ ಅಭಿಮಾನಿಯನ್ನು ಕಾರಿನಿಂದ ಇಳಿದು ಬೈದ ಚಾಲೆಜಿಂಗ್ ಸ್ಟಾರ್! – ವಿಡಿಯೋ

    ಫಾಲೋ ಮಾಡ್ಕೊಂಡು ಬಂದ ಅಭಿಮಾನಿಯನ್ನು ಕಾರಿನಿಂದ ಇಳಿದು ಬೈದ ಚಾಲೆಜಿಂಗ್ ಸ್ಟಾರ್! – ವಿಡಿಯೋ

    ಬೆಂಗಳೂರು: ಅಭಿಮಾನಿಯೊಬ್ಬರು ಚಾಲೆಜಿಂಗ್ ಸ್ಟಾರ್ ದರ್ಶನ್‍ರನ್ನು ಫಾಲೋ ಮಾಡಿದ್ದಕ್ಕೆ ನನ್ನನ್ನು ಫಾಲೋ ಮಾಡ್ಬೇಡ ಎಂದು ಬೈದು ಬುದ್ದಿವಾದ ಹೇಳಿದ ಘಟನೆ ಬೆಳಕಿಗೆ ಬಂದಿದೆ.

    ದರ್ಶನ್ ಪರ್ಸನಲ್ ಕೆಲಸಕ್ಕೆ ಹೊರಗಡೆ ಹೊರಟರೆ ಇತ್ತೀಚೆಗೆ ಖರೀದಿಸಿದ ಲ್ಯಾಂಬೋರ್ಗಿನಿ ಕಾರನ್ನು ಸ್ವತಃ ಡ್ರೈವ್ ಮಾಡಿಕೊಂಡು ಹೋಗುತ್ತಾರೆ. ಆದೇ ರೀತಿ ಮೊನ್ನೆ ಮೈಸೂರಿನ ಸುತ್ತಮುತ್ತ ಹೋಗಿದ್ದಾರೆ. ಆಗ ಅಭಿಮಾನಿಯೊಬ್ಬರು ಕಾರು ಹಿಂದೆ ಹಿಂದೆಯೇ ಫಾಲೋ ಮಾಡಿದ್ದಾರೆ. ಇದರಿಂದ ಟ್ರಾಫಿಕ್ ಜಾಮ್ ಆಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು.

    ಆಗ ಕೊಪಗೊಂಡ ದರ್ಶನ್ ಕಾರ್ ನಿಲ್ಲಿಸಿ ಆ ಅನಾಮಿಕ ಅಭಿಮಾನಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಿಡಿಯೋವನ್ನು ದರ್ಶನ್ ಅಭಿಮಾನಿಗಳು ಸೋಶಿಯಲ್ ಮಿಡಿಯಾದಲ್ಲಿ ಅಪ್‍ಲೋಡ್ ಮಾಡಿ ದಯವಿಟ್ಟು ಯಾರು ಈ ರೀತಿ ತೊಂದರೆ ಕೊಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.

    ಸದ್ಯ `ಯಜಮಾನ’ ಚಿತ್ರದ ಶೂಟಿಂಗ್‍ನಲ್ಲಿರುವ ದರ್ಶನ್ ಸೋಶಿಯಲ್ ಮಿಡಿಯಾದಲ್ಲಿ ತಮ್ಮ ಸಾಮಾಜಿಕ ಕಳಕಳಿಯ ಸಮಾಚಾರಗಳ ಜೊತೆಗೆ ಈಗ `ಕುರುಕ್ಷೇತ್ರ’ ಮೇಕಿಂಗ್‍ನಿಂದಲೂ ಸದ್ದು ಮಾಡುತ್ತಿದ್ದಾರೆ. ಸ್ಯಾಂಡಲ್‍ವುಡ್‍ನ ಮಹತ್ವಾಕಾಂಕ್ಷೆ `ಮುನಿರತ್ನ ಕುರುಕ್ಷೇತ್ರ’ ರಿಲೀಸ್‍ಗೆ ಸಿದ್ಧವಾಗುತ್ತಿದ್ದು, ಅದ್ಧೂರಿ ಮೇಕಿಂಗ್‍ನಿಂದ ಸದ್ದು ಮಾಡುತ್ತಿದೆ.

    https://twitter.com/DTEAM7999/status/985453036792360961