Tag: folloers

  • ಸಿನಿಮಾ ಪ್ರದರ್ಶನಕ್ಕೆ ಲೇಟ್ – ಪೊಲೀಸ್ ಜೀಪ್ ಮೇಲೆ ಪಟಾಕಿ ಹೊಡೆದ ಪುಂಡರು

    ಸಿನಿಮಾ ಪ್ರದರ್ಶನಕ್ಕೆ ಲೇಟ್ – ಪೊಲೀಸ್ ಜೀಪ್ ಮೇಲೆ ಪಟಾಕಿ ಹೊಡೆದ ಪುಂಡರು

    ಬೆಂಗಳೂರು: ಸಿನಿಮಾ ಪ್ರದರ್ಶಿಸಲು ವಿಳಂಬವಾದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಅಭಿಮಾನಿಗಳು ಪೊಲೀಸ್ ಜೀಪಿನ ಮೇಲೆಯೇ ಪಟಾಕಿ ಹೊಡೆದ ಘಟನೆ ಕರ್ನಾಟಕದ ಗಡಿಗೆ ಹೊಂದಿಕೊಂಡಿರೋ ತಮಿಳುನಾಡಿನ ಹೊಸೂರು ಸಮೀಪ ನಡೆದಿದೆ.

    ತಮಿಳಿನ ವಿಜಯ ಅಭಿನಯದ ಬಹುನಿರೀಕ್ಷಿತ ‘ಬಿಗಿಲ್’ ಚಿತ್ರ ಪ್ರದರ್ಶನದ ವೇಳೆ ಅಭಿಮಾನಿಗಳು ಈ ಕೃತ್ಯ ಎಸಗಿದ್ದಾರೆ. ಚಿತ್ರಮಂದಿರದ ಮಾಲೀಕ ಬೆಳಗ್ಗಿನ ಜಾವ ಚಿತ್ರ ಪ್ರದರ್ಶನ ಮಾಡುವುದಾಗಿ ಟಿಕೆಟ್ ಹಂಚಿದ್ದರು. ಈ ಹಿನ್ನೆಲೆಯಲ್ಲಿ ಥಿಯೇಟರ್ ಬಳಿ ಅಪಾರ ಸಂಖ್ಯೆಯ ವಿಜಯ್ ಅಭಿಮಾನಿಗಳು ನೆರೆದಿದ್ದರು.

    ಆದರೆ ಹೇಳಿದ ಸಮಯಕ್ಕೆ ಚಿತ್ರ ಪ್ರದರ್ಶನ ಮಾಡದ ಹಿನ್ನೆಲೆಯಲ್ಲಿ ಅಭಿಮಾನಿಗಳು ಪುಂಡಾಟ ಮೆರೆದಿದ್ದಾರೆ. ಅಂಗಡಿಗಳ ಬ್ಯಾನರ್ ಹರಿದು ಬ್ಯಾರಿಕೇಡ್ ಮುರಿದು ಪೊಲೀಸ್ ಜಿಪ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ ಪೊಲೀಸ್ ಜಿಪ್ ಮೇಲೆ ಪಟಾಕಿ ಹಚ್ಚಿ ವಿಜಯ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗವೂ ನಡೆಯಿತು.

    ಈ ಸಂಬಂಧ ಕೃಷ್ಣಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.