Tag: folk song

  • ಮಹಿಳಾ ದಿನಾಚರಣೆ – ಪತ್ನಿ ಜೊತೆ ಬಿಂದಾಸ್ ಸ್ಟೆಪ್ಸ್ ಹಾಕಿದ ಶಾಸಕ

    ಮಹಿಳಾ ದಿನಾಚರಣೆ – ಪತ್ನಿ ಜೊತೆ ಬಿಂದಾಸ್ ಸ್ಟೆಪ್ಸ್ ಹಾಕಿದ ಶಾಸಕ

    ನೆಲಮಂಗಲ: ಮಹಿಳಾ ದಿನಾಚರಣೆ ವಿಶೇಷ ಕಾರ್ಯಕ್ರಮವೊಂದರಲ್ಲಿ ಪತ್ನಿ ಜೊತೆ ಯಲಹಂಕ ಶಾಸಕ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ್ದಾರೆ.

    ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಅಭಿವೃದ್ಧಿ ಸಂಜೀವಿನಿ ಗ್ರಾಮ ಪಂಚಾಯತಿ ಒಕ್ಕೂಟ ಕಾರ್ಯಕ್ರಮದಡಿ, ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶ್ವವಾಣಿ ಫೌಂಡೇಶನ್ ವತಿಯಿಂದ ಆಚರಿಸಲಾಯಿತು. ಬೆಂಗಳೂರು ಹೊರವಲಯ ಉತ್ತರ ತಾಲೂಕಿನ ಮಾಚೋಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವನಾಥ ಅವರು ತಮ್ಮ ಪತ್ನಿ ವಾಣಿ ವಿಶ್ವನಾಥ್ ಜೊತೆ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ: ಬಿಜೆಪಿ, ಮೋದಿ, ಯೋಗಿಯನ್ನು ಮುಸ್ಲಿಮರು ಪ್ರೀತಿಸುತ್ತಾರೆ: ದ್ಯಾನಿಶ್‌ ಅಜಾದ್‌ ಅನ್ಸಾರಿ

    ಗ್ರಾಮದ ಮಹಿಳೆಯರು ಕೋಲಣ್ಣ ಕೋಲೆ ಜಾನಪದ ಹಾಡಿಗೆ ಅತ್ಯುತ್ತಮವಾಗಿ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಶಾಸಕ ವಿಶ್ವನಾಥ್‍ಗೆ ಪತ್ನಿ ವಾಣಿ ವಿಶ್ವನಾಥ್ ಕೂಡಾ ಸಾಥ್ ನೀಡಿದರು. ಇದನ್ನೂ ಓದಿ: ನೀರನ್ನು ಮರುಬಳಕೆ ಮಾಡಿ: ಮೋದಿ ಕರೆ

  • ಜಾನಪದ ಗೀತೆ ಮೂಲಕ ಗಣಪನಿಗೆ ನಮಿಸಿದ ಶಿಕ್ಷಕರ ತಂಡ- ವಿಡಿಯೋ ವೈರಲ್

    ಜಾನಪದ ಗೀತೆ ಮೂಲಕ ಗಣಪನಿಗೆ ನಮಿಸಿದ ಶಿಕ್ಷಕರ ತಂಡ- ವಿಡಿಯೋ ವೈರಲ್

    ಬೆಂಗಳೂರು: ಇತ್ತೀಚಿಗೆ ಜಾನಪದ ಸಾಹಿತ್ಯ ಸಿನಿಮಾ ಹಾಡಿಗೆ ಅಥವಾ ಇತರೆ ಸಂಗೀತ ಶೈಲಿಗೆ ಎಲ್ಲೋ ಮರೆಯಾಗುತ್ತಿದೆ. ಆದರೆ ನೆಲಮಂಗಲ ಪಟ್ಟಣದಲ್ಲಿ ಶಿಕ್ಷಕರ ತಂಡವೊಂದು ಜಾನಪದ ಸಾಹಿತ್ಯಕ್ಕೆ ಒತ್ತು ಕೊಟ್ಟು, ಗಣಪತಿ ದೇವರಿಗೆ ಗೀತೆಯನ್ನು ಸರ್ಮಪಿಸಿ ಭಜನೆ ಮಾಡಿ ಎಲ್ಲರ ಮನ ಗೆದ್ದಿದ್ದಾರೆ.

    ನೆಲಮಂಗಲ ಪಟ್ಟಣದ ಮಾರುತಿ ಬಡಾವಣೆಯಲ್ಲಿ ಗಣಪತಿ ದೇವಾಲಯವಿದೆ. ಅಲ್ಲಿ ಶಿಕ್ಷಕರ ಗುಂಪೊಂದು ಜಾನಪದ ಗೀತೆಯನ್ನು ಹಾಡಿ ಭಜನೆ ಮಾಡಿದ್ದಾರೆ. ಅಲ್ಲದೆ ಹಾಡಿನ ಜೊತೆ ತಮ್ಮದೇ ಭಂಗಿಯಲ್ಲಿ ಕುಣಿದು ಭಕ್ತಿ ಮೆರೆದಿದ್ದಾರೆ. ಈ ಮೂಲಕ ಜಾನಪದ ಗೀತೆಗೆ ಶಿಕ್ಷಕ ತಂಡದ ಮೆರಗು ತಂದಿದೆ. ದೇವಾಲಯದಲ್ಲಿ ಹಾಡುತ್ತಾ, ಕುಣಿಯುತ್ತಾ ಶಿಕ್ಷಕರು ಭಜನೆ ಮಾಡುತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರು ಸೆರೆಹಿಡಿದಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಿಕ್ಷಕರ ಜಾನಪದ ಪ್ರೀತಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಜಾನಪದ ಗೀತೆ ‘ಚಲ್ಲಿದರು ಮಲ್ಲಿಗೆಯ’ ಮಾದಪ್ಪನ ಹಾಡಿಗೆ ಫುಲ್ ಜೋಶ್‍ನಲ್ಲಿ ಶಿಕ್ಷಕರ ತಂಡ ಹೆಜ್ಜೆ ಹಾಕಿದೆ. ಹಾಗೆಯೇ ಜಾನಪದ ಗೀತೆಗಳನ್ನು ಉಳಿಸುವ ನಿಟ್ಟಿನಲ್ಲಿ ಮಾರುತಿ ಬಡಾವಣೆಯ ಜನರು ಪ್ರೋತ್ಸಾಹ ತೋರುತ್ತಿದ್ದಾರೆ. ಆಧುನಿಕ ಯುಗದಲ್ಲಿ ಜಾನಪದ ಗೀತೆಗಳಿಗೆ ತಂಡ ಪ್ರಾಮುಖ್ಯತೆ ನೀಡಿರುವುದು ನೆಟ್ಟಿಗರ ಗಮನ ಸೆಳೆದಿದೆ.

  • ಟಿಕ್‍ಟಾಕ್‍ನಲ್ಲಿ ವೈರಲ್ ಆಯ್ತು ಉ.ಕ ವಿದ್ಯಾರ್ಥಿಗಳ ಜನಪದ ಹಾಡು

    ಟಿಕ್‍ಟಾಕ್‍ನಲ್ಲಿ ವೈರಲ್ ಆಯ್ತು ಉ.ಕ ವಿದ್ಯಾರ್ಥಿಗಳ ಜನಪದ ಹಾಡು

    ಬಾಗಲಕೋಟೆ: ಸಾಮಾಜಿಕ ಜಾಲತಾಣದಲ್ಲಿ ದಿಢೀರನೆ ಜನಪ್ರಿಯರಾದವರು ಸಾಕಷ್ಟು ಜನರಿದ್ದಾರೆ. ಹಾಡಲ್ಲಾಗಿರಬಹುದು, ಡ್ಯಾನ್ಸ್, ಮಿಮಿಕ್ರಿ ಯಾವುದೇ ಮನರಂಜನೆ ಮೂಲಕ ದಿನ ಬೆಳಗಾಗೋದರೊಳಗೆ ಫೇಮಸ್ ಆಗುತ್ತಾರೆ. ಸದ್ಯ ಬಾಗಲಕೋಟೆ ನಗರದ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಜನಪದ ಹಾಡಿನ ಮೂಲಕ ಫುಲ್ ಪಾಪ್ಯುಲರ್ ಆಗಿದ್ದಾರೆ.

    ವಿದ್ಯಾರ್ಥಿಗಳು ತಯಾರಿಸಿರುವ ಜಾನಪದ ಹಾಡೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈಗಾಗಲೇ ಫೇಮಸ್ ಆಗಿರುವ “ನನ್ನ ಗೆಳತಿ ನನ್ನ ಗೆಳತಿ” ಹಾಡಿನ ಫೀಮೆಲ್ ವರ್ಶನ್ ಹಾಡು “ನನ್ನ ಗೆಳೆಯಾ ನನ್ನ ಗೆಳೆಯಾ” ಹಾಡನ್ನು ಎಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ರಚನೆ ಮಾಡಿದೆ.

    ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ ರಶ್ಮಿ ಗುಡ್ಡದ ಹಾಡಿ ನೃತ್ಯ ಮಾಡಿದ್ದಾಳೆ. ಹಾಡನ್ನು ಯುಟ್ಯೂಬ್‍ನಲ್ಲಿ ಅಪ್ಲೋಡ್ ಮಾಡಿದ್ದು, ಒಂದೇ ದಿನದಲ್ಲಿ ಎರಡು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿ ಸಖತ್ ಮೆಚ್ಚುಗೆಗೆ ಪಾತ್ರವಾಗಿದೆ.

    ಸೌಭಾಗ್ಯ ಹಿರೇಮಠ ಎಂಬ ಇನ್ನೋರ್ವ ವಿದ್ಯಾರ್ಥಿನಿ ಈ ಹಾಡನ್ನು ಬರೆದಿದ್ದು, ಉಳಿದ ಎಂಜಿನಿಯರಿಂಗ್ ಗೆಳೆಯರು ಮ್ಯೂಸಿಕ್, ಕ್ಯಾಮರಾ ವರ್ಕ್ ಹಾಗೂ ಎಡಿಟಿಂಗ್ ವರ್ಕ್ ಮಾಡಿ ಹೊಸ ಪ್ರಯತ್ನಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ. ಉತ್ತರ ಕರ್ನಾಟಕದ ಇಳಕಲ್ ಸೀರೆ ಹಾಗೂ ಮಾಡರ್ನ್ ಡ್ರೆಸ್‍ನಲ್ಲಿ ರಶ್ಮಿ ಗುಡ್ಡದ ನೃತ್ಯ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾಳೆ.

    ಬಾಗಲಕೋಟೆ ನಗರದ ಶಿರೂರು ಅಗಸಿ, ಮುಚಖಂಡಿ ಕೆರೆಯ ಸೇತುವೆ, ಆಲಮಟ್ಟಿ ಹಿನ್ನೀರು ಬಳಿ ಚಿತ್ರೀಕರಣ ಮಾಡಿದ್ದು, ಪಕ್ಕಾ ಉತ್ತರ ಕರ್ನಾಟಕ ಜನಪದ ಹಾಡು ಈಗ ಫುಲ್ ಫೇಮಸ್ ಆಗಿದೆ. ಕೇವಲ ವಾಟ್ಸಾಪ್ ಫೇಸ್‍ಬುಕ್ ಅಲ್ಲದೆ ಅಪ್ಲೋಡ್ ಆದ ಕೆಲವೇ ಗಂಟೆಗಳಲ್ಲಿ ನಾಡಿನ ಮೂಲೆ ಮೂಲೆಯಾದ್ಯಂತ ಟಿಕ್‍ಟಾಕ್‍ನಲ್ಲಿ ಈ ಹಾಡಿಗೆ ಯುವತಿಯರು ಅಭಿನಯಿಸಿ ಹಾಡನ್ನು ಎಂಜಾಯ್ ಮಾಡುತ್ತಿದ್ದಾರೆ.

  • ಗಾಯಕನ ಮೇಲೆ ಬರೋಬ್ಬರಿ 50 ಲಕ್ಷ ಎಸೆದ ಜನರು – ವಿಡಿಯೋ ವೈರಲ್

    ಗಾಯಕನ ಮೇಲೆ ಬರೋಬ್ಬರಿ 50 ಲಕ್ಷ ಎಸೆದ ಜನರು – ವಿಡಿಯೋ ವೈರಲ್

    ಗಾಂಧಿನಗರ: ಜನರು ತಮಗೆ ಇಷ್ಟವಾದ ನೃತ್ಯ ಮಾಡಿದರೆ ಅಥವಾ ಸಂಗೀತ ಹಾಡಿದರೆ ಅವರ ಮೇಲೆ ಹಣ ಎಸೆಯುತ್ತಾರೆ. ಆದರೆ ಇಲ್ಲೊಬ್ಬ ಗಾಯಕರ ಹಾಡಿನ್ನು ಕೇಳಿ ಮೋಡಿಗೆ ಒಳಗಾದ ಜನ ಬರೋಬ್ಬರಿ 50 ಲಕ್ಷ ರೂ.ಗಳನ್ನು ಎಸೆದು ಪ್ರೀತಿ ತೋರಿಸಿದ್ದಾರೆ.

    ಗುಜರಾತ್ ನ ವಲ್ಸಾದ್ ಪ್ರದೇಶದಲ್ಲಿ ಶನಿವಾರ ಧಾರ್ಮಿಕ ಸಮಾರಂಭದಲ್ಲಿ ಗುಜರಾತಿ ಜಾನಪದ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಜಾನಪದ ಹಾಡನ್ನು ಹಾಡಿದ ಗಾಯಕನ ಮೇಲೆ ಜನರು ಹಣ ಎಸೆದಿದ್ದು, ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಧಾರ್ಮಿಕ ಸಮಾರಂಭದಲ್ಲಿ ಗಾಯಕರೊಬ್ಬರು ಜಾನಪದ ಹಾಡನ್ನು ಹಾಡುತ್ತಿದ್ದರು. ಈ ವೇಳೆ ಅಲ್ಲಿ ನೆರೆದಿದ್ದ ಸಂಗೀತ ಪ್ರೇಮಿಗಳು 100 ಮತ್ತು 500 ಮುಖಬೆಲೆಯ ನೋಟುಗಳನ್ನು ಅವರ ಮೇಲೆ ಸುರಿದಿದ್ದಾರೆ. ಗಾಯಕನ ಮೇಲೆ ಬರೋಬ್ಬರಿ 50 ಲಕ್ಷ ಹಣವನ್ನು ಸುರಿದು ಅಭಿಮಾನ ಮೆರೆದಿದ್ದಾರೆ. ಜನರು ಗಾಯಕನ ಸುತ್ತಲೂ ನಿಂತು ನೋಟಿನ ಮಳೆಗರೆಯುತ್ತಿದ್ದರೆ ಗಾಯಕ ತಮ್ಮದೇ ಆದ ರಾಗದಲ್ಲಿ ಹಾಡನ್ನು ಮುಂದುವರೆಸಿದ್ದಾರೆ. ಈ ಎಲ್ಲ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

    ವಲ್ಸಾದ್ ನ ಕಾಲ್ವಾಡಾ ಗ್ರಾಮದ ಆಶಿಶ್ ಪಟೇಲ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣವನ್ನು ಜಲರಾಮ್ ಮಾನವ ಸೇವಾ ಟ್ರಸ್ಟ್ ನೀಡಲಾಗಿದೆ. ಸದ್ಯಕ್ಕೆ ಜಾನಪದ ಗಾಯಕನ ಮೇಲೆ ಹೊಸ ನೋಟಿನ್ನು ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.