Tag: Fogging

  • ಕೊರೊನಾ ಮಧ್ಯೆ ಶುರುವಾಯ್ತು ಜನರಿಗೆ ಚಿಕನ್ ಗುನ್ಯಾ ಕಾಟ

    ಕೊರೊನಾ ಮಧ್ಯೆ ಶುರುವಾಯ್ತು ಜನರಿಗೆ ಚಿಕನ್ ಗುನ್ಯಾ ಕಾಟ

    ಧಾರವಾಡ: ಕೊರೊನಾ ಮಧ್ಯೆ ಗ್ರಾಮವೊಂದಕ್ಕೆ ಕೊರೊನಾ ಮಧ್ಯದಲ್ಲಿ ಈಗ ಚಿಕನ್ ಗುನ್ಯಾ ಕಾಟ ಆರಂಭವಾಗಿದೆ.

    ಜಿಲ್ಲೆಯ ಲಕಮಾಪುರ ಎಂಬ 2 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಚಿಕನ್ ಗುನ್ಯಾ ಕಾಣಿಸಿಕೊಂಡಿದ್ದು. ಕಳೆದ ವಾರ ಗ್ರಾಮದಲ್ಲಿ ಕೈ ಕಾಲು ಬೇನೆ ಬಂದವರಿಗೆ ತಪಾಸಣೆ ಮಾಡಿಸಿದಾಗ, ಗ್ರಾಮದ ಒಬ್ಬರಲ್ಲಿ ಚಿಕನ್ ಗುನ್ಯಾ ಪತ್ತೆಯಾಗಿತ್ತು. ನಂತರ ಗ್ರಾಮದಲ್ಲಿ ಇದು ಹೆಚ್ಚಾಗಬಾರದೆಂದು ಆರೋಗ್ಯ ಇಲಾಖೆಯವರು ಲಾರ್ವಾ ಸರ್ವೇ ಕೂಡಾ ಮಾಡಿಸಿದ್ದರು. ಇದನ್ನು ಓದಿ:ಕಳ್ಳಬಟ್ಟಿ ಅಡ್ಡೆ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ

    ಈಗ ಗ್ರಾಮದಲ್ಲಿ ಚಿಕನ್ ಗುನ್ಯಾ ಹೆಚ್ಚಾಗಬಾರದೆಂದು ಫಾಗಿಂಗ್ ಕೂಡಾ ಮಾಡಲಾಗುತ್ತಿದೆ. ಎಲ್ಲ ಕಡೆ ಕೊರೊನಾ ಕೂಡಾ ಹೆಚ್ಚಾಗಿರುವ ಕಾರಣ, ನಿನ್ನೆಯಷ್ಟೇ ಇದೇ ಗ್ರಾಮದಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ. 60 ಜನರಿಗೆ ನಡೆಸಿದ ಕೊರೊನಾ ಟೆಸ್ಟ್‍ನಲ್ಲಿ ಎರಡು ಪಾಸಿಟಿವ್ ಬಂದಿವೆ.

    ಸದ್ಯ ಗ್ರಾಮದಲ್ಲಿ ಚಿಕನ್ ಗುನ್ಯಾ ಹೆಚ್ಚಾಗದಂತೆ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದ್ದು, ಜನರಿಗೆ ಸ್ವಚ್ಛತೆ ಕಾಪಾಡಲು ಹಾಗೂ ನೀರು ಬಹಳ ದಿನಗಳ ತುಂಬಿ ಇಡದಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ಕೊರೊನಾ ಸೋಂಕು ಹರಡದಂತೆ ಗ್ರಾಮದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಇದನ್ನು ಓದಿ: ಹೆದ್ದಾರಿಯಲ್ಲಿ ಚಾಲಕರನ್ನು ಬೆದರಿಸಿ ಹಣ ದರೋಡೆ – ಆರೋಪಿಗಳ ಬಂಧನ

  • ಕೊರೊನಾ ಬೆನ್ನಲ್ಲೇ ನಗರದ ಹಲವೆಡೆ ಫಾಗಿಂಗ್

    ಕೊರೊನಾ ಬೆನ್ನಲ್ಲೇ ನಗರದ ಹಲವೆಡೆ ಫಾಗಿಂಗ್

    -ಸೂಪರ್ ಮಾರ್ಕೆಟ್‍ಗೆ ಬಿಬಿಎಂಪಿ ಗೈಡ್‍ಲೈನ್

    ಬೆಂಗಳೂರು: ನಗರದ ಹಲವೆಡೆ ಸೋಂಕು ಹರಡದಿರಲಿ ಎಂದು ಔಷಧಿಗಳ ಸಿಂಪಡನೆ ಆರಂಭವಾಗಿದೆ. ಅದರಲ್ಲೂ ತಗ್ಗು ಪ್ರದೇಶ, ಜನನಿಬಿಡ ಇರುವ ಕಡೆ ಹೆಚ್ಚು ಗಮನ ಕೇಂದ್ರಿಕರಿಸಲಾಗಿದೆ. ಇದು ಬಿಬಿಎಂಪಿ ವ್ಯಾಪ್ತಿಯಲ್ಲಿ ಫಾಗಿಂಗ್ ಮಾಡಿ ಸೋಂಕು ನಿಯಂತ್ರಿಸುವ ಕೆಲಸ ನಡೆಯುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದ್ದಾರೆ.

    ಸೊಳ್ಳೆ, ನೊಣ ನಿಯಂತ್ರಣಕ್ಕೆ ಹೆಚ್ಚು ಗಮನ ಕೇಂದ್ರಿಕರಿಸಲಾಗಿದೆ. ಮುಖ್ಯವಾಗಿ ಎಲ್ಲ ಮಾರ್ಕೆಟ್, ಬ್ಲಾಕ್ ಸ್ಪಾರ್ಟ್‍ಗಳ ಬಳಿ ಬ್ಲಿಚಿಂಗ್ ಪೌಡರ್ ಬಳಸಲಾಗುತ್ತದೆ. ಇಮಿಗೇಶನ್ ಮಾಡಿದರೆ ಹೆಚ್ಚು ಸಮಯ ಪಡೆಯಲಿದೆ. ಹಾಗಾಗಿ ಮಾಸ್ ಇಮಿಗೇಶನ್ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ಚೈನಾದಂತೆ ಔಷಧಿ ಸಿಂಪಡನೆಗೆ ನಮ್ಮಲ್ಲಿ ಅಗತ್ಯ ಸಲಕರಣೆಗಳ ಕೊರತೆ ಇದೆ. ಇದನ್ನು ಸರ್ಕಾರದ ಗಮನಕ್ಕೆ ತಂದಿದ್ದು, ಕೂಡಲೇ ಕ್ರಮಕೈಗೊಳ್ಳಲಿದೆ ಎಂದರು.

    ಇತ್ತ ನಗರದ ಎಸಿ ಸೂಪರ್ ಮಾರುಕಟ್ಟೆಗಳಿಗೆ ಬಿಬಿಎಂಪಿ ಗೈಡ್‍ಲೈನ್‍ಗಳನ್ನು ಸೂಚಿಸಿದೆ. ಈ ಪ್ರಕಾರ ಪಾಲಿಸದಿದ್ದರೆ ಮಾರ್ಕೆಟ್ ಬಂದ್ ಮಾಡಬೇಕಾಗುತ್ತದೆ. ಈ ಭಯ ಸೂಪರ್ ಮಾರ್ಕೆಟ್‍ಗಳಲ್ಲೂ ಕಾಡುತ್ತಿದೆ. ಮಲ್ಲೇಶ್ವರಂ ಬಿಗ್ ಬಜಾರಿನಲ್ಲಿ ಹೊಸ ಕೌಂಟರ್‍ಗಳನ್ನು ತೆರೆಯಲಾಗಿದೆ. ಗ್ರಾಹಕರಿಗೆ ಯಾವುದೇ ಹೊಸ ಆಫರ್ ನೀಡಿಲ್ಲ. ಕಾರಣ ಅದಕ್ಕಾಗಿ ಜನ ಜಾಸ್ತಿ ಸಂಖ್ಯೆಯಲ್ಲಿ ಸೇರಬಾರದೆಂದು ಈ ನಿಯಮ ಹಾಕಲಾಗಿದೆ. ಸ್ಯಾನಿಟೈಜರ್, ಮಾಸ್ಕ್ ಕಡ್ಡಾಯ ಮಾಡಲಾಗಿದ್ದು, ಸಿಬ್ಬಂದಿಗೆ ಸಮಸ್ಯೆಯಾದರೆ ಕಡ್ಡಾಯ ರಜೆಗೂ ಸೂಪರ್ ಮಾರ್ಕೆಟ್ ಸಜ್ಜಾಗಿದೆ.

    ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಕಮೀಷನರ್ ಅನಿಲ್ ಕುಮಾರ್, ಸೂಪರ್ ಮಾರ್ಕೆಟ್, ಪಾರ್ಕ್ ಗಳು ಹೆಚ್ಚಿನ ನಿಗಾ ಇಡಲು ಗೈಡ್‍ಲೈನ್ ಘೋಷಣೆ ಮಾಡಲಾಗಿದೆ. ಜನ ಸಮೂಹ ಅನುಸರಿಬೇಕಾದ ನಿಯಮಗಳ ಹೇಳಲಾಗಿದೆ. ಜನರು ವ್ಯಾಯಾಮ ಮಾಡಲು ಅಡ್ಡಿ ಇಲ್ಲ ಆದರೆ ಪಾರ್ಕ್ ನಲ್ಲಿ ಸೇರುವುದು ಬೇಡ ಎಂದು ಪಾರ್ಕ್ ನಿಯಮಗಳ ಬಗ್ಗೆ ಸಹ ಉಲ್ಲೇಖಿಸಿದರು.

  • ಸಿಎಂಗೆ ಸೊಳ್ಳೆ ಕಚ್ಚಬಾರದೆಂದು ಸಿಬ್ಬಂದಿಯಿಂದ 7 ದಿನ ನಿರಂತರ ಫಾಗಿಂಗ್

    ಸಿಎಂಗೆ ಸೊಳ್ಳೆ ಕಚ್ಚಬಾರದೆಂದು ಸಿಬ್ಬಂದಿಯಿಂದ 7 ದಿನ ನಿರಂತರ ಫಾಗಿಂಗ್

    ರಾಯಚೂರು: ಗ್ರಾಮ ವಾಸ್ತವ್ಯ ಹೂಡಲಿರುವ ಸಿಎಂ ಅವರಿಗೆ ಸೊಳ್ಳೆ ಕಚ್ಚಬಾರದೆಂದು ಶಾಲೆಯ ಸುತ್ತ ಕಳೆದ ಏಳು ದಿನಗಳಿಂದ ಫಾಗಿಂಗ್ ಮಾಡಲಾಗುತ್ತಿದೆ.

    ಗ್ರಾಮವಾಸ್ತವ್ಯ ಮುಂದುವರಿಸಿರುವ ಮುಖ್ಯಮಂತ್ರಿಗಳು ಬುಧವಾರ ರಾಯಚೂರಿನ ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮದಲ್ಲಿ ಜನತಾದರ್ಶನ ಹಾಗೂ ಗ್ರಾಮ ವಾಸ್ತವ್ಯ ನಡೆಸಲಿದ್ದಾರೆ. ಹೀಗಾಗಿ ಇಂದು ಸಂಜೆ ಕೂಡ ಗ್ರಾಮ ಪಂಚಾಯತಿ ಸಿಬ್ಬಂದಿಯು ಶಾಲೆಯ ಕೊಠಡಿಗಳು ಹಾಗೂ ಆವರಣದಲ್ಲಿ ಫಾಗಿಂಗ್ ಮಾಡಿದೆ.

    ಬೆಂಗಳೂರು ಕಂಟೋನ್ಮೆಂಟ್‍ನಿಂದ ರಾತ್ರಿ 8.45ಕ್ಕೆ ಈಗಾಗಲೇ ಉದ್ಯಾನ ಎಕ್ಸ್‍ಪ್ರೆಸ್ ಟ್ರೈನ್ ಮೂಲಕ ಪ್ರಯಾಣ ಬೆಳೆಸಿರುವ ಸಿಎಂ ಬೆಳಗ್ಗೆ ರಾಯಚೂರು ರೈಲ್ವೇ ನಿಲ್ದಾಣ ತಲುಪಲಿದ್ದಾರೆ. ಅಲ್ಲಿಂದ ನೇರವಾಗಿ ಯರಮರಸ್ ಸರ್ಕೀಟ್ ಹೌಸ್‍ಗೆ ಹೋಗಿ ವಿಶ್ರಾಂತಿ ಪಡೆಯಲಿದ್ದಾರೆ. ನಂತರ ಬೆಳಗ್ಗೆ 8:30ಕ್ಕೆ ಕೆಎಸ್‍ಆರ್ ಟಿಸಿ ಬಸ್‍ನಲ್ಲಿ ಪ್ರಯಾಣಿಸಿ ವಾಸ್ತವ್ಯ  ಹೂಡಲಿರುವ ಕರೇಗುಡ್ಡ ಗ್ರಾಮಕ್ಕೆ ಬರಲಿದ್ದಾರೆ.

    ಮುಖ್ಯಮಂತ್ರಿಗಳು ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಉದ್ಘಾಟಿಸಿದ ಮೇಲೆ ವೇದಿಕೆ ಕಾರ್ಯಕ್ರಮ ಮುಗಿಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ರಾತ್ರಿ 8 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 10 ಗಂಟೆಗೆ ಊಟ ಮಾಡಿ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. ನೀರಾವರಿಗಾಗಿ ಆಗ್ರಹಿಸಿ ಜಿಲ್ಲೆಯ 25ಕ್ಕೂ ಹೆಚ್ಚು ಸ್ವಾಮೀಜಿಗಳು ಮನವಿ ಸಲ್ಲಿಸಲಿದ್ದಾರೆ.

    ಮಳೆಯಾಗಿದ್ದರಿಂದ ಕಲಬುರಗಿಯ ಹೆರೂರು ಬಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ರದ್ದಾಗಿತ್ತು. ಹೀಗಾಗಿ, 600*300 ಅಡಿ ವಿಸ್ತೀರ್ಣದ ವಾಟರ್ ಪ್ರೂಫ್ ಬೃಹತ್ ಪೆಂಡಾಲ್ ಹಾಕಲಾಗಿದೆ. ಪೊಲೀಸ್ ಭದ್ರತೆ ಹಾಗೂ ವಿವಿಧ ಅಧಿಕಾರಿಗಳು ಈಗಾಗಲೇ ಕರೇಗುಡ್ಡ ಗ್ರಾಮಕ್ಕೆ ಆಗಮಿಸಿದ್ದಾರೆ.