Tag: Fog

  • ಪ್ರವಾಸಿಗರ ಪಾಲಿನ ಸ್ವರ್ಗವಾದ ಚಾರ್ಮಾಡಿ ಘಾಟ್ – ವಿಡಿಯೋ ನೋಡಿ

    ಪ್ರವಾಸಿಗರ ಪಾಲಿನ ಸ್ವರ್ಗವಾದ ಚಾರ್ಮಾಡಿ ಘಾಟ್ – ವಿಡಿಯೋ ನೋಡಿ

    ಚಿಕ್ಕಮಗಳೂರು: ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟಿಯಲ್ಲಂತು ನಿಸರ್ಗ ಮಾತೆಯ ನೈಜ ಸೊಬಗು ಅನಾವರಣಗೊಂಡಿದೆ. ಇಳೆಗೆ ಹಸಿರ ಹೊದಿಕೆಯ ಸ್ವಾಗತ. ಹಾದಿಯುದ್ದಕ್ಕೂ ದಟ್ಟ ಮಂಜಿನ ಆಟ. ಹಸಿರ ವನರಾಶಿ ನಡುವಿಂದ ಸಾಗೋ ಬೆಳ್ಮುಗಿಲ ಸಾಲು. ರಸ್ತೆಯುದ್ದಕ್ಕೂ ಧುಮ್ಮಿಕ್ಕಿ ಹರಿಯೋ ಜಲಧಾರೆಯ ಸೊಬಗು ಆವರಿಸಿಕೊಂಡಿದೆ.

    ನಾಲ್ಕೈದು ದಿನದ ಹಿಂದೆ ಮಳೆಯಿಂದಾಗಿ ರಾಡಿಯಾಗಿದ್ದ ಚಾರ್ಮಾಡಿ ಇದೀಗ ತನ್ನ ಸೊಬಗಿನಿಂದ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಬೆಟ್ಟ-ಗುಡ್ಡಗಳ ಸಾಲು. ಬಾನಿಗೆ ಮುತ್ತಿಕ್ಕೋ ಮಂಜಿನ ರಾಶಿ. ಆಗಾಗ್ಗೆ ಸುರಿಯುತ್ತಿರುವ ಮಳೆಗೆ ಹಸಿರ ಬೆಟ್ಟಗಳ ಸಾಲಿನಿಂದ ಧುಮ್ಮಿಕ್ಕಿ ಹರಿಯುವ ಜಲಧಾರೆ ಚಾರ್ಮಾಡಿ ಘಾಟ್ ನ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.

    ನಿರಂತರ ಮಳೆಯ ಆಗಮನಕ್ಕೆ ಬೆಟ್ಟಗಳು ಹಸಿರೊದ್ದು ಕಂಗೊಳಿಸುತ್ತಿದ್ದು, ಮಂಜಿನ ಕಣ್ಣಾಮುಚ್ಚಾಲೆ ಆಟ ಪ್ರವಾಸಿಗರ ಪಾಲಿನ ಸ್ವರ್ಗವಾಗಿದೆ. ದಟ್ಟ ಕಾನನದ ನಡುವಿನ ಜುಳು-ಜುಳು ನಿನಾದೊಂದಿಗೆ ಹರಿಯುವ ಝರಿಗಳು ಮನಕ್ಕೆ ಮುದ ನೀಡುತ್ತವೆ. ಮುಗಿಲು ಚುಂಬಿಸೋ ಹಸಿರು ಬೆಟ್ಟದ ಮೇಲೆಲ್ಲ ಹರಡಿರುವ ಹಿಮದ ರಾಶಿ. ಬೆಳ್ಮುಗಿಲ ಸಾಲಿಂದ ಬಂಗಾರದ ಕಿರಣಗಳನ್ನ ಹೊರಸೂಸೋ ದಿನಕರನ ಚಿತ್ತಾರ. ಬಂಡೆಯಿಂದ ಬಂಡೆಗೆ ಜಿಗಿಯುತ್ತಾ ಸಾಗೋ ಜಲಧಾರೆಯ ಮಂಜುಳಗಾನ ಮಲೆನಾಡಲ್ಲೊಂದು ಹೊಸ ಲೋಕವನ್ನೆ ಸೃಷ್ಠಿಸಿವೆ ಎಂದು ಪರಿಸರವಾದಿ ಗಿರಿಜಾಶಂಕರ್ ಹೇಳಿದ್ದಾರೆ.

  • ದೆಹಲಿಯಲ್ಲಿ ಭಾರೀ ಮಂಜಿನಿಂದಾಗಿ 69 ರೈಲುಗಳು ವಿಳಂಬ, 8 ರದ್ದು

    ದೆಹಲಿಯಲ್ಲಿ ಭಾರೀ ಮಂಜಿನಿಂದಾಗಿ 69 ರೈಲುಗಳು ವಿಳಂಬ, 8 ರದ್ದು

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಬೆಳಗ್ಗೆ 12.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿ ದಟ್ಟ ಮಂಜು ಕವಿದ ಪರಿಣಾಮ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

    ಇಂದು ಬೆಳಗ್ಗೆ ದಟ್ಟವಾದ ಮಂಜು ಆವರಿಸಿಕೊಂಡಿದರಿಂದ 69 ರೈಲುಗಳು ವಿಳಂಬವಾಗಿದ್ದು 22 ಬಾರಿ ಸಮಯವನ್ನು ಬದಲಾವಣೆ ಮಾಡಲಾಗಿದ್ದು ಹಾಗೂ 8 ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.

    ಬೆಳಗ್ಗೆ 8.30 ಹೊತ್ತಿಗೆ ಶೇ. 93 ತೇವಾಂಶವಿತ್ತು. 400 ಮೀಟರ್ ದೂರದಲ್ಲಿರುವ ವಸ್ತುಗಳು ಮಾತ್ರ ಕಾಣುತ್ತಿತ್ತು. ರಾಜೇಂದ್ರ ನಗರ ಟರ್ಮಿನಲ್ – ನ್ಯೂ ಡೆಲ್ಲಿ ಸಂಪೂರ್ಣ ಕ್ರಾಂತಿ ಎಕ್ಸ್ ಪ್ರೆಸ್ 24 ಗಂಟೆ ವಿಳಂಬವಾಗಿದ್ದರೆ, ಸೀತಾಮರ್ಹಿ – ಆನಂದ್ ವಿಹಾರ್ ಲಿಚಾವಿ 25 ಗಂಟೆಗಳ ಕಾಲ ವಿಳಂಬವಾಗಿತ್ತು.

    ನ್ಯೂ ದೆಹಲಿ- ವಾರಣಾಸಿ ಮಹಾನಮ ಎಕ್ಸ್ ಪ್ರೆಸ್, ದೆಹಲಿ- ಅಜಾಮ್‍ಘಡ ಕೈಫಿಯತ್ ಎಕ್ಸ್ ಪ್ರೆಸ್, ಆನಂದ್ ವಿಹಾರ್- ಮೌ ಎಕ್ಸ್ ಪ್ರೆಸ್, ಶ್ರೀಗಂಗಾನಗರ- ದೆಹಲಿ ಇಂಟರ್ ಸಿಟಿ, ದೆಹಲಿ- ಫಜಿಲ್ಕಾ ಇಂಟರ್ ಸಿಟಿ, ದೆಹಲಿ- ಅಲಿಪುರ್‍ದ್ವರ್ ಮಹಾನಂದ ಎಕ್ಸ್ ಪ್ರಸ್ ಹಾಗೂ ರಾಕ್ಸೂಲ್ – ದೆಹಲಿ ಸದ್ಭಾವನ ಎಕ್ಸ್ ಪ್ರೆಸ್ ಗಳು ಭಾರಿ ಮಂಜಿದ್ದ ಕಾರಣ ರದ್ದಾಗಿದೆ.

    ಮಂಜಿನಿಂದಾಗಿ ಯಾವುದೇ ವಿಮಾನವನ್ನು ರದ್ದುಗೊಳಿಸಿಲ್ಲ ಎಂದು ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.