Tag: Fog

  • ಉತ್ತರ ಭಾರತದ ರಾಜ್ಯಗಳಲ್ಲಿ ದಟ್ಟವಾದ ಮಂಜು – ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ

    ಉತ್ತರ ಭಾರತದ ರಾಜ್ಯಗಳಲ್ಲಿ ದಟ್ಟವಾದ ಮಂಜು – ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ದಟ್ಟವಾದ ಮಂಜಿನ (Fog) ಪದರ ಆವೃತಗೊಂಡಿದ್ದು, ತೀವ್ರ ಶೀತ ವಾತವರಣ ನಿರ್ಮಾಣವಾಗಿದೆ. ಇದರ ಪರಿಣಾಮ ವಿಮಾನ (Flights) ಮತ್ತು ರೈಲುಗಳ (Train) ಸಂಚಾರದಲ್ಲಿ ಭಾರಿ ವ್ಯತ್ಯಯವಾಗಿದೆ.

    ಫ್ಲೈಟ್ ಮಾನಿಟರಿಂಗ್ ವೆಬ್‌ಸೈಟ್ ಫ್ಲೈಟ್‌ರಾಡಾರ್ ಪ್ರಕಾರ, ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರು ವಿಮಾನಗಳನ್ನು ರದ್ದುಗೊಳಿಸಲಾಗಿದೆ. 215 ವಿಮಾನಗಳ ಆಗಮನ ವಿಳಂಬವಾಗಿದೆ. ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ 17 ಹೊರಡುವ ವಿಮಾನಗಳು ವಿಳಂಬಗೊಂಡಿದ್ದು, 10 ವಿಮಾನಗಳು ರದ್ದಾಗಿದೆ. 36 ಆಗಮಿಸುವ ವಿಮಾನಗಳು ವಿಳಂಬವಾಗಿವೆ. ಇದನ್ನೂ ಓದಿ: ಬೇರೆ ರೂಟ್‌ಗೆ ಕರೆದೊಯ್ದ ಚಾಲಕ – ಭಯಗೊಂಡು ಚಲಿಸುತ್ತಿದ್ದ ಆಟೋದಿಂದ ಜಿಗಿದ ಮಹಿಳೆ

    ಶುಕ್ರವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ರನ್‌ವೇ ಗೋಚರತೆ ಶೂನ್ಯವಾಗಿತ್ತು. ವಿಮಾನ ಕಾರ್ಯಾಚರಣೆಗಳಿಗೆ ಸಂಭಾವ್ಯ ಅಡಚಣೆಗಳ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಎಚ್ಚರಿಸಿದ್ದಾರೆ. ಇಂಡಿಗೋ ಮತ್ತು ಸ್ಪೈಸ್‌ಜೆಟ್ ಹವಾಮಾನ ವಿಳಂಬಗಳ ವಿರುದ್ಧ ಎಚ್ಚರಿಕೆ ನೀಡಿವೆ. ಇದನ್ನೂ ಓದಿ: ಬೆಂಗಳೂರು| ಟ್ಯೂಷನ್ ಟೀಚರ್‌ನಿಂದಲೇ ವಿದ್ಯಾರ್ಥಿನಿ ಕಿಡ್ನ್ಯಾಪ್ – ಆರೋಪಿ ಸುಳಿವು ಕೊಟ್ಟವರಿಗೆ ಬಹುಮಾನ ಘೋಷಣೆ

    ಮಂಜಿನ ವಾತಾವರಣದಿಂದಾಗಿ ಹಲವಾರು ದೂರದ ಸೇವೆಗಳು ಸೇರಿದಂತೆ ಕನಿಷ್ಠ 24 ರೈಲುಗಳು ತಡವಾಗಿ ಓಡುತ್ತಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಇವುಗಳಲ್ಲಿ ಕೆಲವು ರೈಲುಗಳು 4-5 ಗಂಟೆಗಳವರೆಗೆ ವಿಳಂಬವಾಗಿವೆ. ಕರ್ನಾಟಕ ಎಕ್ಸ್‌ಪ್ರೆಸ್ ಮತ್ತು ಬಿಹಾರ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್, ಭಟಿಂಡಾ-ಬಾಲೂರ್‌ಘಾಟ್ ಫರಕ್ಕಾ ಎಕ್ಸ್‌ಪ್ರೆಸ್, ಆಂಧ್ರಪ್ರದೇಶ ಎಕ್ಸ್‌ಪ್ರೆಸ್, ಅಯೋಧ್ಯೆ ಎಕ್ಸ್‌ಪ್ರೆಸ್ ರೈಲುಗಳು ವಿಳಂಬವಾಗುತ್ತಿವೆ. ಇದನ್ನೂ ಓದಿ: ಸಿಎಂ ತವರು ಕ್ಷೇತ್ರದಲ್ಲೇ ದಲಿತ ಕುಟುಂಬಕ್ಕೆ 4 ವರ್ಷದಿಂದ ದಲಿತರಿಂದಲೇ ಬಹಿಷ್ಕಾರ

    ನೋಯ್ಡಾದಲ್ಲಿ, ಜ.8ರವರೆಗೆ ಶಾಲಾ ತರಗತಿಗಳಿಗಳನ್ನು ಮುಚ್ಚಲಾಗುವುದು ಎಂದು ಜಿಲ್ಲಾ ಅಧಿಕಾರಿಗಳು ಘೋಷಿಸಿದ್ದಾರೆ. ನೋಯ್ಡಾದಲ್ಲಿ ಶುಕ್ರವಾರ ಕನಿಷ್ಠ 8 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗೋಚರತೆ ಕಡಿಮೆಯಾದ ಕಾರಣ ಪಂಜಾಬ್‌ನ ಬಟಿಂಡಾದಲ್ಲಿ ಖಾಸಗಿ ಬಸ್ ಮತ್ತು ಟ್ರಕ್ ಡಿಕ್ಕಿ ಹೊಡೆದು 20 ರಿಂದ 25 ಪ್ರಯಾಣಿಕರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಹಾಲಿನ ದರ 10 ರೂ. ಹೆಚ್ಚಳಕ್ಕೆ ಬೇಡಿಕೆ ಇದೆ: ಸಚಿವ ವೆಂಕಟೇಶ್

    ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಪಂಜಾಬ್ ಮತ್ತು ಬಿಹಾರ ಸೇರಿದಂತೆ ರಾಜ್ಯಗಳಲ್ಲಿ ದಟ್ಟವಾದ ಮಂಜಿನ ಜೊತೆಗೆ ತೀವ್ರವಾದ ಚಳಿ ಅಲೆಯನ್ನು ಅನುಭವಿಸುತ್ತಿದೆ. ಪಾಟ್ನಾ ಸೇರಿದಂತೆ ಬಿಹಾರದ ಹಲವಾರು ಭಾಗಗಳಲ್ಲಿ ಹವಮಾನ ಕುಸಿದಿರುವುದರಿಂದ, ಮುಂದಿನ ಮೂರರಿಂದ ನಾಲ್ಕು ದಿನಗಳಲ್ಲಿ ಕನಿಷ್ಠ ತಾಪಮಾನವು 6-11 ಡಿಗ್ರಿ ಸೆಲ್ಸಿಯಸ್ ನಡುವೆ ಉಳಿಯುವ ನಿರೀಕ್ಷೆಯಿದೆ. ಇದಕ್ಕೆ ಸ್ಪಂದಿಸಿದ ಸರ್ಕಾರ ಶಾಲಾ ಸಮಯದಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ಪೀಣ್ಯ ಬಸವೇಶ್ವರ ಬಸ್ ನಿಲ್ದಾಣವಾಗುತ್ತಾ ಕಲ್ಯಾಣ ಮಂಟಪ, ಮಾಲ್?

  • ದೆಹಲಿಯಲ್ಲಿ ದಟ್ಟ ಮಂಜು- 80ಕ್ಕೂ ಹೆಚ್ಚು ವಿಮಾನಗಳು, ಹಲವಾರು ರೈಲುಗಳ ಸಂಚಾರದಲ್ಲಿ ವ್ಯತ್ಯಯ

    ದೆಹಲಿಯಲ್ಲಿ ದಟ್ಟ ಮಂಜು- 80ಕ್ಕೂ ಹೆಚ್ಚು ವಿಮಾನಗಳು, ಹಲವಾರು ರೈಲುಗಳ ಸಂಚಾರದಲ್ಲಿ ವ್ಯತ್ಯಯ

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದಟ್ಟವಾದ ಮಂಜಿನ ಪರಿಣಾಮ 80ಕ್ಕೂ ಹೆಚ್ಚು ವಿಮಾನಗಳು (Flight) ಹಾಗೂ ಹಲವಾರು ರೈಲುಗಳ (Train) ಪ್ರಯಾಣದಲ್ಲಿ ವ್ಯತ್ಯಯವಾಗಿದೆ.

    ಇಂದು ದೆಹಲಿ-ಎನ್‌ಸಿಆರ್‌ನ (Delhi- NCR) ಹಲವು ಪ್ರದೇಶಗಳಲ್ಲಿ ಸಾಧಾರಣ ಮಂಜಿನ ಜೊತೆಗೆ ಶೀತ ಹವಾಮಾನ ಪರಿಸ್ಥಿತಿ ಎದುರಾಗಿದೆ. ದೆಹಲಿಯಲ್ಲಿ ಕನಿಷ್ಠ ತಾಪಮಾನ 10.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉತ್ತರ ಭಾರತದಲ್ಲಿ ದಟ್ಟವಾದ ಮಂಜು (Fog) ಇರುವ ಕಾರಣ ಭಾರತೀಯ ಹವಾಮಾನ ಇಲಾಖೆ (IMD) ರೆಡ್ ಅಲರ್ಟ್ ಘೋಷಿಸಿದೆ. ಇದನ್ನೂ ಓದಿ: 5 ಅಸ್ಥಿಪಂಜರ ಪತ್ತೆ ಪ್ರಕರಣ- ತಮ್ಮ ತಮ್ಮ ಮನೆಗಳಿಗೆ ಬೀಗ ಹಾಕಿ ತೆರಳಿದ ಅಕ್ಕಪಕ್ಕದ ನಿವಾಸಿಗಳು

    ಈ ಸಂಬಂಧ IMD ತನ್ನ ಎಕ್ಸ್‌ನಲ್ಲಿ ಪಂಜಾಬ್, ಹರಿಯಾಣ, ದೆಹಲಿ ಉತ್ತರ ಪ್ರದೇಶ, ಉತ್ತರ ರಾಜಸ್ಥಾನ ಮತ್ತು ಉತ್ತರ ಮಧ್ಯಪ್ರದೇಶದಲ್ಲಿ ದಟ್ಟವಾದ ಮಂಜು ಆವರಿಸಿದೆ. ಈ ಹಿನ್ನೆಲೆಯಲ್ಲಿ ವಾಹನ ಚಾಲಕರು ಜಾಗರೂಕತೆಯಿಂದ ವಾಹನ ಚಲಾಯಿಸಿ. ಅಲ್ಲದೆ ಚಾಲನೆಯ ವೇಳೆ ವಾಹನದ ಲೈಟ್‌ ಆನ್‌ ಮಾಡಿಕೊಳ್ಳಿ. ಇನ್ನು ನಿಮ್ಮ ಪ್ರಯಾಣಕ್ಕಾಗಿ ವಿಮಾನಯಾನ, ರೈಲ್ವೆ ಮತ್ತು ರಾಜ್ಯ ಸಾರಿಗೆಯೊಂದಿಗೆ ಸಂಪರ್ಕದಲ್ಲಿರಿ ಎಂದು ತಿಳಿಸಿದೆ.

    ಹವಾಮಾನ ವೈಪರೀತ್ಯದಿಂದಾಗಿ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Indira Gandhi International Airport in Delhi) ಇಂದು ಬೆಳಗ್ಗೆ 8.30 ರವರೆಗೆ 80 ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿವೆ ಎಂದು ವರದಿಯಾಗಿದೆ. ಕಡಿಮೆ ಗೋಚರತೆಯಿಂದಾಗಿ ಮತ್ತೆ ವಿಮಾನಗಳು ಮತ್ತು ರೈಲು ಪ್ರಯಾಣದಲ್ಲಿ ವಿಳಂಬವಾಗಿದೆ. ದಟ್ಟ ಮಂಜಿನ ವಾತಾವರಣದಿಂದಾಗಿ ರಾಷ್ಟ್ರ ರಾಜಧಾನಿಗೆ ಪ್ರಯಾಣಿಸುವ ಮತ್ತು ಬರುವ ಪ್ರಯಾಣಿಕರು ಸಹ ತೊಂದರೆಗಳನ್ನು ಎದುರಿಸಿದರು.

    ಈ ಸಂಬಂಧ ದೆಹಲಿಯಿಂದ ಸಿಕ್ಕಿಂಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು , ಮಂಜು ಮತ್ತು ಹವಾಮಾನ ಪರಿಸ್ಥಿತಿಗಳಿಂದಾಗಿ ನಮ್ಮ ವಿಮಾನವು ಎರಡು ಗಂಟೆಗಳ ಕಾಲ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ. ಇನ್ನು ನಿನ್ನೆಗೆ ಹೋಲಿಸಿದರೆ ಇಂದು ಮಂಜು ಸ್ವಲ್ಪ ಉತ್ತಮವಾಗಿದೆ ಎಂದು ಆಟೋ, ಕ್ಯಾಬ್ ಚಾಲಕರು ತಿಳಿಸಿದ್ದಾರೆ. ಈ ನಡುವೆ ದೆಹಲಿ-ಎನ್‌ಸಿಆರ್‌ನಾದ್ಯಂತ ಕಠಿಣ ಹವಾಮಾನ ಪರಿಸ್ಥಿತಿಗಳ ಮಧ್ಯೆ, ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವದ ಪರೇಡ್‌ಗೆ ಸಿದ್ಧತೆಗಳು ಭರದಿಂದ ಸಾಗಿವೆ.

  • ಉತ್ತರ ಭಾರತ ಪ್ರವಾಸದ ಯೋಜನೆಯಲ್ಲಿದ್ದರೆ ಸದ್ಯ ಮುಂದೂಡಿ

    ಉತ್ತರ ಭಾರತ ಪ್ರವಾಸದ ಯೋಜನೆಯಲ್ಲಿದ್ದರೆ ಸದ್ಯ ಮುಂದೂಡಿ

    – ಮುಂದಿನ 6 ದಿನ ದೆಹಲಿಗೆ ಎಲ್ಲೋ ಅಲರ್ಟ್
    – ಭಾನುವಾರ ರಾತ್ರಿ 1.4 ಡಿಗ್ರಿ ಕನಿಷ್ಠ ತಾಪಮಾನ ದಾಖಲು

    ನವದೆಹಲಿ: ಉತ್ತರ ಭಾರತ (North India) ಪ್ರವಾಸ ಮಾಡುವ ಯೋಜನೆಯಲ್ಲಿದ್ದರೆ ಕೆಲ ದಿನಗಳ ಕಾಲ ನಿಮ್ಮ ಪ್ರವಾಸ ಮುಂದೂಡುವುದು ಒಳಿತು. ತೀವ್ರ ಶೀತಗಾಳಿಯಿಂದ ದೆಹಲಿ (Delhi) ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ಉಷ್ಣಾಂಶ ಕುಸಿದಿದ್ದು ಭಾರೀ ಮಂಜು (Fog) ಮತ್ತು ಚಳಿ (Cold) ಆವರಿಸಿಕೊಂಡಿದೆ.

    ಭಾನುವಾರ ರಾತ್ರಿ 1.4 ಡಿಗ್ರಿ ಕನಿಷ್ಠ ತಾಪಮಾನ ದೆಹಲಿಯಲ್ಲಿ ದಾಖಲಾಗಿದ್ದು ಈ ಋತುವಿನ ಅತ್ಯಂತ ಕಡಿಮೆ ತಾಪಮಾನ ಎಂದು ಕೇಂದ್ರ ಹವಾಮಾನ ಇಲಾಖೆ ಹೇಳಿದೆ. ಸೋಮವಾರದಿಂದ ಮುಂದಿನ 6 ದಿನಗಳವರೆಗೆ ದೆಹಲಿಯಲ್ಲಿ ಎಲ್ಲೋ ಅಲರ್ಟ್ ನೀಡಲಾಗಿದೆ. ಮೊದಲ 3 ದಿನಗಳಲ್ಲಿ ತಾಪಮಾನವು 2-3 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ನಂತರದ 3 ದಿನ ದಟ್ಟ ಮಂಜು ಆವರಿಸಿಕೊಳ್ಳಲಿದೆ ಎಂದು ಎಚ್ಚರಿಸಲಾಗಿದೆ. ಇದನ್ನೂ ಓದಿ: ಸಚಿವ ಸುಧಾಕರ್‌ರನ್ನ ಹಾಡಿ ಹೊಗಳಿದ ರಮ್ಯಾ: ಕೈಗೆ ನಟಿ ಬೈ ಹೇಳಿ ಬಿಜೆಪಿ ಸೇರ್ಪಡೆ?

    ಹವಾಮಾನ ಇಲಾಖೆಯ ಪ್ರಕಾರ, ಹಿಮಾಲಯದಿಂದ ವಾಯುವ್ಯ ಭಾರತದ ಬಯಲು ಪ್ರದೇಶದತ್ತ ವಾಯುವ್ಯ ಮಾರುತಗಳು ಬೀಸುತ್ತಿದ್ದು, ಮುಂದಿನ 2 ದಿನಗಳಲ್ಲಿ ಕನಿಷ್ಠ ತಾಪಮಾನವು 2-4 ಡಿಗ್ರಿಗಳಷ್ಟು ಕುಸಿಯುವ ಸಾಧ್ಯತೆಯಿದೆ. ಇದರ ಪರಿಣಾಮ ಉತ್ತರ ಭಾರತದ ಹಲವು ರಾಜ್ಯಗಳಲ್ಲೂ ಉಷ್ಣಾಂಶ ಕನಿಷ್ಠ ಮಟ್ಟದಲ್ಲಿರಲಿದೆ.

    ತಾಪಮಾನ ಕುಸಿದ ಹಿನ್ನಲೆ ಉತ್ತರ ರೈಲ್ವೆ ಪ್ರದೇಶದಲ್ಲಿ 30ಕ್ಕೂ ಹೆಚ್ಚು ರೈಲುಗಳು ತಡವಾಗಿ ಓಡುತ್ತಿವೆ ಎಂದು ಭಾರತೀಯ ರೈಲ್ವೆ ತಿಳಿಸಿದೆ. ಇನ್ನು ವಿಮಾನಗಳ ಹಾರಾಟದಲ್ಲೂ ವ್ಯತ್ಯಯವಾಗಿದೆ. ಇದನ್ನೂ ಓದಿ: ಏಕಕಾಲಕ್ಕೆ 72 ಕ್ಷೇತ್ರ ನಿರ್ವಹಿಸುವ ರಿಮೋಟ್ ಮತಯಂತ್ರ ಪ್ರದರ್ಶನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚೀನಾದಲ್ಲಿ ಭೀಕರ ರಸ್ತೆ ಅಪಘಾತ – 19 ಮಂದಿ ಬಲಿ

    ಚೀನಾದಲ್ಲಿ ಭೀಕರ ರಸ್ತೆ ಅಪಘಾತ – 19 ಮಂದಿ ಬಲಿ

    ಬೀಜಿಂಗ್: ದಟ್ಟ ಮಂಜಿನ (Fog) ಪರಿಣಾಮವಾಗಿ ಪೂರ್ವ ಚೀನಾದ (China) ಜಿಯಾಂಗ್‌ಕ್ಸಿ ಪ್ರಾಂತ್ಯದಲ್ಲಿ ಭಾನುವಾರ ಭೀಕರ ಅಪಘಾತ (Road Accident) ಸಂಭವಿಸಿದ್ದು, 19 ಮಂದಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 20 ಜನರು ಗಾಯಗೊಂಡಿದ್ದಾರೆ.

    ಮೃತ ವ್ಯಕ್ತಿಯ ಅಂತ್ಯಕ್ರಿಯೆಗೆ ಹೊರಟಿದ್ದ ಮೆರವಣಿಗೆಗೆ ಟ್ರಕ್‌ ಡಿಕ್ಕಿ ಹೊಡೆದಿದೆ. ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ 19 ಮಂದಿ ಮೃತಪಟ್ಟಿದ್ದಾರೆ. ಗಾಂಗ್ ಎಂಬ ಸ್ಥಳೀಯ ವ್ಯಕ್ತಿಯೊಬ್ಬರ ಪತ್ನಿಯ ಅಂತ್ಯಕ್ರಿಯೆಗೆ ಮೆರವಣಿಗೆ ಸಾಗುತ್ತಿತ್ತು. ಇದನ್ನೂ ಓದಿ: ಶಾಲೆ ಬಿಟ್ಟು ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದ ವ್ಯಕ್ತಿ ಅಮೆರಿಕದ ಜಡ್ಜ್

    ರಸ್ತೆಯಲ್ಲಿ ಮುಂದೆ ಮೆರವಣಿಗೆ ವಾಹನ ಸಾಗಿತ್ತು. ವಾಹನವನ್ನು ಹಿಂಬಾಲಿಸಿ ಜನರು ಸಾಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಟ್ರಕ್‌ಗೆ ಜನರ ಗುಂಪಿಗೆ ನುಗ್ಗಿದೆ. ದಟ್ಟ ಮಂಜಿನ ಕಾರಣದಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

    ಕಟ್ಟುನಿಟ್ಟಿನ ಸುರಕ್ಷತಾ ಸಂಚಾರಿ ನಿಯಮಗಳ ಸಮಸ್ಯೆಯಿಂದಾಗಿ ಚೀನಾದಲ್ಲಿ ರಸ್ತೆ ಅಪಘಾತಗಳು ಸಾಮಾನ್ಯವಾಗಿದೆ. ಸೆಪ್ಟೆಂಬರ್‌ನಲ್ಲಿ ನೈಋತ್ಯ ಗೈಝೌ ಪ್ರಾಂತ್ಯದ ಬಳಿ ಬಸ್ ಪಲ್ಟಿಯಾದ ನಂತರ 27 ಪ್ರಯಾಣಿಕರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು – ಪಾಕ್‌ನಲ್ಲಿ ಅಗತ್ಯ ವಸ್ತುಗಳ ಕೊರತೆ, ಚಿಕನ್ ಬೆಲೆಯೂ ಗಗನಕ್ಕೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಟ್ಟ ಮಂಜಿನಿಂದ ಕಾಣದಂತಾದ ಚೀನಾದ ಸೇತುವೆ – ಅಪಘಾತಕ್ಕೀಡಾಗಿ ರಾಶಿ ಬಿದ್ದ ನೂರಾರು ವಾಹನ

    ದಟ್ಟ ಮಂಜಿನಿಂದ ಕಾಣದಂತಾದ ಚೀನಾದ ಸೇತುವೆ – ಅಪಘಾತಕ್ಕೀಡಾಗಿ ರಾಶಿ ಬಿದ್ದ ನೂರಾರು ವಾಹನ

    ಬೀಜಿಂಗ್: ಭಾರೀ ಮಂಜಿನಿಂದಾಗಿ (Fog) ರಸ್ತೆಗಳು ಕಾಣದೇ ಸೇತುವೆಯೊಂದರಲ್ಲಿ ನೂರಾರು ವಾಹನಗಳು ಅಪಘಾತಕ್ಕೀಡಾಗಿದ್ದಲ್ಲದೇ (Vehicles Crash) ಹತ್ತಾರು ವಾಹನಗಳು ಒಂದರಮೇಲೊಂದು ರಾಶಿ ಬಿದ್ದಿರುವ ಘಟನೆ ಚೀನಾದ (China) ಹೆನಾನ್ ಪ್ರಾಂತ್ಯದ ಝೆಂಗ್‌ಝೌನಲ್ಲಿ (Zhengzhou) ಬುಧವಾರ ನಡೆದಿರುವುದಾಗಿ ವರದಿಯಾಗಿದೆ.

    ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ವೀಡಿಯೋಗಳು ಹರಿದಾಡಿವೆ. ಸೇತುವೆಯೊಂದರ ಮೇಲೆ ಕಾರು, ಟ್ರಕ್ ಸೇರಿದಂತೆ ಹಲವಾರು ವಾಹನಗಳು ಅಪಘಾತಕ್ಕೀಡಾಗಿ, ಒಂದಕ್ಕೊಂದು ಅಂಟಿಕೊಂಡು ರಾಶಿ ಬಿದ್ದಿವೆ. ಟ್ರಾಫಿಕ್‌ನಿಂದ ಹೊರಬರಲಾಗದ ಸ್ಥಿತಿಯಿಂದಾಗಿ ಜನರು ಬಾನೆಟ್ ಮೇಲೆ ನಿಂತುಕೊಂಡಿರುವುದು ಕಂಡುಬಂದಿದೆ.

    ನೂರಾರು ವಾಹನಗಳ ಸರಣಿ ಅಪಘಾತದಲ್ಲಿ ಅನೇಕರು ಗಾಯಗೊಂಡಿದ್ದಾರೆ, ಹಲವರು ಸಿಕ್ಕಿಬಿದ್ದಿದ್ದಾರೆ ಎಂದು ವರದಿಗಳು ತಿಳಿಸಿವೆ. ರಾಶಿ ಬಿದ್ದ ವಾಹನಗಳನ್ನು ತೆರವುಗೊಳಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಂದಾಜಿನ ಪ್ರಕಾರ, ಸರಣಿ ಅಪಘಾತದಲ್ಲಿ 200ಕ್ಕೂ ಹೆಚ್ಚು ವಾಹನಗಳು ಒಳಗೊಂಡಿವೆ ಎನ್ನಲಾಗಿದೆ. ಸಾವು-ನೋವುಗಳು ಸಂಭವಿಸಿರುವ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಇದನ್ನೂ ಓದಿ: ಉತ್ತರ ಭಾರತದಲ್ಲಿ ಮಂಜಿನ ದಟ್ಟನೆ – ವಿಮಾನ ಸಂಚಾರಕ್ಕೆ ಅಡಚಣೆ

    ಸ್ಥಳೀಯ ಅಗ್ನಿಶಾಮಕ ಇಲಾಖೆ ತಕ್ಷಣವೇ 11 ಅಗ್ನಿಶಾಮಕ ವಾಹನಗಳು ಹಾಗೂ 66 ಅಗ್ನಿಶಾಮಕ ರಕ್ಷಣಾ ಸಿಬ್ಬಂದಿಯನ್ನು ಘಟನಾ ಸ್ಥಳಕ್ಕೆ ಕಳುಹಿಸಿದೆ. ಝೆಂಗ್‌ಝೌನ ಸೇತುವೆಯಲ್ಲಿ ಯಾವುದೇ ವಾಹನಗಳ ಸಂಚಾರವನ್ನು ಪ್ರಸ್ತುತ ನಿಷೇಧಿಸಿ ನೋಟಿಸ್ ಜಾರಿ ಮಾಡಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಮಂಜುಗಡ್ಡೆ ಕುಸಿದು ಮಹಿಳೆ ಸೇರಿ ಭಾರತ ಮೂಲದ ಮೂವರು ನೀರುಪಾಲು

    Live Tv
    [brid partner=56869869 player=32851 video=960834 autoplay=true]

  • ಉತ್ತರ ಭಾರತದಲ್ಲಿ ಮಂಜಿನ ದಟ್ಟನೆ – ವಿಮಾನ ಸಂಚಾರಕ್ಕೆ ಅಡಚಣೆ

    ಉತ್ತರ ಭಾರತದಲ್ಲಿ ಮಂಜಿನ ದಟ್ಟನೆ – ವಿಮಾನ ಸಂಚಾರಕ್ಕೆ ಅಡಚಣೆ

    ನವದೆಹಲಿ: ಬುಧವಾರ ಮತ್ತೆ ಉತ್ತರ ಭಾರತದಲ್ಲಿ ಮಂಜಿನ (Fog) ದಟ್ಟನೆ ಹಾಗೂ ತೀವ್ರ ಚಳಿ ಹೆಚ್ಚಾಗಿದ್ದು, ಈ ವೇಳೆ ದೆಹಲಿಯ (New Delhi) ಸುಮಾರು 100 ವಿಮಾನಗಳ ವೇಳೆಯನ್ನು ಹಾಗೂ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ.

    ಈ ಬಗ್ಗೆ ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಮಾತನಾಡಿ, 3 ದಿನಗಳಿಂದ ಉಂಟಾಗುತ್ತಿರುವ ಹವಮಾನ (Weather) ವೈಪರೀತ್ಯದಿಂದಾಗಿ ವಿಮಾನ ನಿಲ್ದಾಣದಲ್ಲಿ 100ಕ್ಕೂ ಹೆಚ್ಚು ವಿಮಾನಗಳು (Flight) ವಿಳಂಬವಾಗಿ ಬಂದಿದೆ. ಕೆಲವು ವಿಮಾನಗಳ ಮಾರ್ಗವನ್ನು ಬದಲಾಗಿದೆ ಎಂದು ತಿಳಿಸಿದರು.

    ಉತ್ತರ ಭಾರತದ ಹೆಚ್ಚಿನ ಭಾಗಗಳನ್ನು ದಟ್ಟವಾದ ಮಂಜು ಆವರಿಸಿದೆ. ಇದರಿಂದಾಗಿ ವಿಮಾನ ಪ್ರಯಾಣಿಕರಿಗೆ ಸಮಸ್ಯೆಗಳು ಹೆಚ್ಚಾಗುತ್ತಿವೆ. ಕಳೆದ ಕೆಲವು ದಿನಗಳಿಂದ ದೇಶದ ಉತ್ತರ ಭಾಗಗಳ ಮೇಲೆ ಪರಿಣಾಮ ಬೀರುತ್ತಿರುವ ಕಳಪೆ ಗೋಚರತೆಯಿಂದಾಗಿ ಬುಧವಾರ ಮತ್ತೊಮ್ಮೆ ವಿಮಾನ ಸಂಚಾರವನ್ನು ಅಡ್ಡಿಪಡಿಸಿತು.

    ದಟ್ಟವಾದ ಮಂಜು ಗೋಚರತೆಯಿಂದಾಗಿ ಮಂಗಳವಾರ ಸುಮಾರು 6 ಗಂಟೆಗಳ ಕಾಲ ಪಶ್ಚಿಮ ಬಂಗಾಳದ ಬಾಗ್ಡೋಗ್ರಾ ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆಗಳ ಮೇಲೆ ಪರಿಣಾಮ ಬೀರಿತ್ತು. ಇದರಿಂದಾಗಿ ನೂರಾರು ಪ್ರಯಾಣಿಕರು ತೊಂದರೆ ಅನುಭವಿಸಿದ್ದರು. ಇದನ್ನೂ ಓದಿ: ರಾಮನಗರದಲ್ಲಿ ಅಯೋಧ್ಯೆ ಮಾದರಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ಲಾನ್: ಅಶ್ವಥ್ ನಾರಾಯಣ್ ಘೋಷಣೆ

    ಈ ಹಿನ್ನೆಲೆಯಲ್ಲಿ ವಿಸ್ತಾರಾ, ಸ್ಪೈಸ್‌ಜೆಟ್ ಮತ್ತು ಇಂಡಿಗೋ ವಿಳಂಬಕ್ಕೆ ವಿಷಾದ ವ್ಯಕ್ತಪಡಿಸಿತ್ತು. ದೆಹಲಿಯಲ್ಲಿ ಮುಂಜಾನೆಯ ಮಂಜಿನಿಂದಾಗಿ ಭಾರೀ ತೊಂದರೆಗಿದೆ. ಉಂಟಾದ ಅನಾನುಕೂಲತೆಯನ್ನು ಕಡಿಮೆ ಮಾಡಲು ನಾವು ನಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದೇವೆ ಎಂದು ಇಂಡಿಗೋ ಮಂಗಳವಾರ ಹೇಳಿತ್ತು. ಇದನ್ನೂ ಓದಿ: ಮಂಜುಗಡ್ಡೆ ಕುಸಿದು ಮಹಿಳೆ ಸೇರಿ ಭಾರತ ಮೂಲದ ಮೂವರು ನೀರುಪಾಲು

    Live Tv
    [brid partner=56869869 player=32851 video=960834 autoplay=true]

  • ದಟ್ಟ ಮಂಜಿನಿಂದ ರಸ್ತೆ ಕಾಣದೇ ಅಪಘಾತ, 14 ಸಾವು – ಮೋದಿ ಸಂತಾಪ

    ದಟ್ಟ ಮಂಜಿನಿಂದ ರಸ್ತೆ ಕಾಣದೇ ಅಪಘಾತ, 14 ಸಾವು – ಮೋದಿ ಸಂತಾಪ

      -ಮೃತರ ಕುಟುಂಬಕ್ಕೆ 2 ಲಕ್ಷ, ಗಾಯಾಳುಗಳಿಗೆ 50 ಸಾವಿರ ಪರಿಹಾರ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಮತ್ತು ಗಾಯಾಳುಗಳ ಕುಟುಂಬಕ್ಕೆ ಪ್ರಧಾನಿ ನರೆಂದ್ರ ಮೋದಿ ಅವರು 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳು ಬೇಗವಾಸಿಯಾಗಲಿ, ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತಾ ಮೃತರ ರಕ್ತಸಂಬಂಧಿಗಳಿಗೆ ತಲಾ 2 ಲಕ್ಷ ರೂಪಾಯಿ, ಪ್ರಧಾನಮಂತ್ರಿಯ ರಾಷ್ಟ್ರೀಯ ಪರಿಹಾರ ನಿಧಿಯಿಂದ ಗಾಯಾಳುಗಳಿಗೆ 50,000 ರೂಪಾಯಿ ಹಣವನ್ನು ಪರಿಹಾರವಾಗಿ ನೀಡಲಾಗುವುದು ಎಂದು ಹೇಳಿದ್ದಾರೆ.

    ದಟ್ಟವಾದ ಮಂಜು ಆವರಿಸಿದ ಪರಿಣಾಮ ಚಾಲಕನಿಗೆ ರಸ್ತೆ ಕಾಣಿಸದೆ ವಾಹನವೊಂದು ಅಪಘಾತಕ್ಕೀಡಾಗಿತ್ತು. ಈ ವೇಳೆ 14 ಮಂದಿ ಧಾರುಣವಾಗಿ ಮೃತಪಟ್ಟಿದ್ದಾರೆ ಹಾಗೂ 18 ಜನರಿಗೆ ಗಂಭೀರವಾದ ಗಾಯಗಳಾಗಿವೆ. ಈ ಘಟನೆಯಲ್ಲಿ ಗಾಯಗೊಂಡವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಕಲ್ಲು ಬಂಡೆಯನ್ನು ತುಂಬಿದ್ದ ಟ್ರಕ್ ಮತ್ತೊಂದು ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಈ ವೇಳೆ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಈ ವೇಳೆ ರಾಂಗ್ ರೂಟ್‍ನಲ್ಲಿ ಬರುತ್ತಿದ್ದ ಇತರ ಎರಡು ವಾಹನಗಳು ಟ್ರಕ್‍ಗೆ ಡಿಕ್ಕಿ ಹೊಡೆದಿದ್ದು, ಇದರಿಂದಾಗಿ ಟ್ರಕ್‍ನಲ್ಲಿ ತುಂಬಿದ ಬಂಡೆಗಳು ವಾಹನದ ಮೇಲೆ ಬಿದ್ದವು. ಟ್ರಕ್‍ನ ಮುಂಭಾಗದಲ್ಲಿದ್ದ ಮತ್ತೊಂದು ಸಣ್ಣ ಲಾರಿ ಕೂಡ ಹಾನಿಯಾಗಿದೆ. ಒಟ್ಟಾರೆಯಾಗಿ ಈ ಅಪಘಾತದಲ್ಲಿ ನಾಲ್ಕು ವಾಹನಗಳು ಹಾನಿಗೊಳಗಾಗಿವೆ.

    ಈ ಅಪಘಾತದಲ್ಲಿ ಟ್ರಕ್ ಚಾಲಕ ಬದುಕುಳಿದಿದ್ದಾನೆ. ಆತನನ್ನು ಬಂಧಿಸಿದ್ದೇವೆ ವಿಚಾರಣೆ ನಡೆಸುತ್ತೇವೆ. ಅಪಘಾತಕ್ಕೆ ಸಂಬಂಧಿಸಿದಂತೆ ಇನ್ನು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ ಎಂದು ಜಲ್ಪೈಗುರಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸುಮಂತ್ ರಾಯ್ ಹೇಳಿದ್ದಾರೆ.

  • ದಟ್ಟ ಮಂಜಿನಿಂದ ರಸ್ತೆ ಕಾಣದೆ ಅಪಘಾತ – 13 ಮಂದಿ ದಾರುಣ ಸಾವು

    ದಟ್ಟ ಮಂಜಿನಿಂದ ರಸ್ತೆ ಕಾಣದೆ ಅಪಘಾತ – 13 ಮಂದಿ ದಾರುಣ ಸಾವು

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಧುಪ್ಪುರಿ ನಗರದಲ್ಲಿ ಮಂಗಳವಾರ ರಾತ್ರಿ ದುರಂತ ಘಟನೆಯೊಂದು ನಡೆದಿದೆ.

    ದಟ್ಟ ಮಂಜು ಆವರಿಸಿದ ಪರಿಣಾಮ ಚಾಲಕನಿಗೆ ರಸ್ತೆ ಕಾಣಿಸದೆ ವಾಹನವೊಂದು ಅಪಘಾತಕ್ಕೀಡಾಗಿದೆ. ಹೀಗಾಗಿ 13 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ.

    ಇನ್ನು ಘಟನೆಯಲ್ಲಿ ಗಾಯಗೊಂಡವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ವಾಹನದಲ್ಲಿದ್ದವರ ಬಗ್ಗೆ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.

    ಸರ್ಕಲ್ ಇನ್ಸ್ ಪೆಕ್ಟರ್ ಹಾಗೂ ತಂಡ ಘಟನೆ ನಡೆದ 10 ನಿಮಿಷದಲ್ಲಿಯೇ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲದೆ ಕ್ರೇನ್ ಮೂಲಕ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ದಟ್ಟ ಮಂಜು ಕವಿದ ಪರಿಣಾಮ ರಸ್ತೆ ಕಾಣದೆ ಈ ಅಪಘಾತ ಸಂಭವಿಸಿರಬಹುದು ಎಂದು ಸರ್ಕಲ್ ಇನ್ಸ್ ಪೆಕ್ಟರ್ ಶಂಕೆ ವ್ಯಕ್ತಪಡಿಸಿದ್ದಾರೆ.

  • ಕಣಕುಂಬಿ ಕಾಡಲ್ಲಿ ಮಂಜಿನ ಮ್ಯಾಜಿಕ್- ಪ್ರವಾಸಿಗರನ್ನು ಕೈ ಬೀಸಿ ಕರೀತಿದೆ ಭೂಲೋಕದ ಸ್ವರ್ಗ

    ಕಣಕುಂಬಿ ಕಾಡಲ್ಲಿ ಮಂಜಿನ ಮ್ಯಾಜಿಕ್- ಪ್ರವಾಸಿಗರನ್ನು ಕೈ ಬೀಸಿ ಕರೀತಿದೆ ಭೂಲೋಕದ ಸ್ವರ್ಗ

    ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ ಕಡಿಮೆಯಾಗುತ್ತಿದ್ದಂತೆ ಜಿಲ್ಲೆಯ ಜನ ಒಂದು ಸ್ಥಳದತ್ತ ಮುಖ ಮಾಡುತ್ತಿದ್ದಾರೆ. ನಿಸರ್ಗದ ಮಡಿಲಲ್ಲಿ ಮಂಜಿನಾಟ ನೋಡುಗರ ಕಣ್ಣಿಗೆ ಹಬ್ಬ. ಕೊರೊನಾ ಆತಂಕ, ಪ್ರವಾಹ ಫಜೀತಿಯಿಂದ ಬೇಸತ್ತ ಜನ ಪ್ರಕೃತಿಯ ಸೊಬಗಿಗೆ ಮೈವೊಡ್ಡುತ್ತಿದ್ದಾರೆ.

    ಹೌದು. ಕಣ್ಣು ಹಾಯಿಸಿದಲ್ಲೆಲ್ಲ ಹಚ್ಚ ಹಸಿರು. ಭೂಮಿ-ಆಕಾಶ ಒಂದಾದಂತೆ ಭಾಸವಾಗುತ್ತಿರುವ ಪ್ರಕೃತಿಯ ಅಂದ. ಇದೆಲ್ಲದರ ಮಧ್ಯೆ ಮಂಜಿನ ಮ್ಯಾಜಿಕ್, ಬೆಟ್ಟ-ಗುಡ್ಡಗಳು ಕಾಣದಷ್ಟು ಮಂಜಿನ ನಲಿವು. ಮೈ ಜುಮ್ಮೆನಿಸುವ ಚಳಿ, ತುಂತುರು ಮಳೆ. ಇದು ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿ ಅರಣ್ಯವ್ಯಾಪ್ತಿಯ ಗ್ರಾಮಗಳಲ್ಲಿ ನಿಸರ್ಗ ಸೃಷ್ಠಿಸಿರೋ ಅದ್ಭುತ.

    ಕಣಕುಂಬಿ ಅರಣ್ಯ ವ್ಯಾಪ್ತಿಯ ಜಾಂಬೋಟಿ, ಚಿಕಳೆ ಸೇರಿದಂತೆ ಕಾಡಂಚಿನ ಗ್ರಾಮಗಳಲ್ಲಿ ದಟ್ಟವಾದ ಮಂಜು ಆವರಿಸಿದೆ. ಬೆಟ್ಟ ಗುಡ್ಡಗಳೇ ಕಾಣದಷ್ಟು ಮಂಜು ಮುತ್ತಿಕೊಂಡಿದೆ. ಒಂದು ಕ್ಷಣ ಬಿಸಿಲು ಮತ್ತೊಂದು ಕ್ಷಣ ಚಳಿ. ನೆರಳು ಬೆಳಕಿನಾಟದ ಮಧ್ಯೆ ಮಂಜಿನ ಸೊಬಗು ನೋಡುವುದೇ ಕಣ್ಣಿಗೆ ಹಬ್ಬ. ಕೊರೊನಾ ಆತಂಕ, ಲಾಕ್‍ಡೌನ್, ವರುಣಾರ್ಭಟಕ್ಕೆ ಬೇಸತ್ತ ಜನ ಈಗ ನಿರಾಳರಾಗಿದ್ದಾರೆ. ಹೀಗಾಗಿಯೇ ಕುಟುಂಬ ಸಮೇತವಾಗಿ ನಿಸರ್ಗದತ್ತ ಮುಖ ಮಾಡುತ್ತಿದ್ದಾರೆ.

    ಗೋವಾಗೆ ತೆರಳುವ ಮಾರ್ಗ ಮಧ್ಯದಲ್ಲಿಯೇ ಚಿಕಳೆ, ಜಾಂಬೋಟಿ ಗ್ರಾಮಗಳು ಬರೋದ್ರಿಂದ ಮುಖ್ಯ ರಸ್ತೆಯಿಂದ 10 ರಿಂದ 15 ಕಿಲೋಮೀಟರ್ ಸಾಗಿ ಒಂದೆರಡು ಕಿಲೋಮೀಟರ್ ವಾಕ್ ಹೋದ್ರೆ ಸಾಕು ನಿಸರ್ಗದ ವೈಭವ ಕಣ್ಮುಂದೆ ಬರುತ್ತೆ. ಪ್ರವಾಸಿಗರು ಮನಸ್ಸು ನಿರ್ಮಲವಾಗಿಸಿಕೊಂಡು ನಿಸರ್ಗದ ಅಂದವನ್ನು ಸವಿಯುತ್ತಾ ಸಂಚರಿಸುತ್ತಾರೆ. ಮಂಜಿನ ಮಧ್ಯೆ ಪ್ರವಾಸಿಗರಿಂದ ಸೆಲ್ಫಿ ಸುರಿಮಳೆಯೇ ಸುರಿಯುತ್ತೆ.

    ಒಟ್ಟಿನಲ್ಲಿ ಏಳೆಂಟು ತಿಂಗಳಿಂದ ಮನೆಯಲ್ಲಿ ಕುಳಿತು ಬೇಜಾರಾಗಿದ್ದ ಜನ ನಿಸರ್ಗದತ್ತ ಮುಖ ಮಾಡಿ ರಿಲ್ಯಾಕ್ಸ್ ಆಗುತ್ತಿರುವುದಂತು ಸುಳ್ಳಲ್ಲ.

  • ರಾಯಚೂರಿನಲ್ಲಿ ಬೆಳಗ್ಗೆಯಿಂದ ಜಿಟಿ ಜಿಟಿ ಮಳೆ – ಜೋರು ವರ್ಷಧಾರೆ ಸಾಧ್ಯತೆ

    ರಾಯಚೂರಿನಲ್ಲಿ ಬೆಳಗ್ಗೆಯಿಂದ ಜಿಟಿ ಜಿಟಿ ಮಳೆ – ಜೋರು ವರ್ಷಧಾರೆ ಸಾಧ್ಯತೆ

    – ಇತ್ತ ವಿಜಯಪುರದಲ್ಲಿ ಮಂಜು ಮುಸುಕಿದ ವಾತಾವರಣ

    ರಾಯಚೂರು/ ವಿಜಯಪುರ: ರಾಯಚೂರಿನಲ್ಲಿ ಬೆಳಗ್ಗೆಯಿಂದ ಜಿಟಿ ಜಿಟಿ ಮಳೆ ಬರುತ್ತಿದ್ದರೆ, ಇತ್ತ ಬಿಸಿಲ ನಾಡು ವಿಜಯಪುರದಲ್ಲಿ ಬೇಸಿಗೆಯಲ್ಲೂ ಚಳಿಯ ವಾತಾವರಣ ಇದೆ.

    ರಾಯಚೂರಿನಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಜಿಟಿ ಜಿಟಿ ಮಳೆ ಆಗುತ್ತಿದೆ. ಜೋರು ಮಳೆ ಬರುವ ಸಾಧ್ಯತೆಗಳಿದ್ದು, ಹತ್ತಿ, ಮೆಣಸಿನಕಾಯಿ ಬೆಳೆದ ರೈತರು ಕಟಾವಿಗೆ ಬಂದಿರುವ ಫಸಲು ಹಾಳಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಇತ್ತ ವಿಜಯಪುರ ಹವಾಮಾನದಲ್ಲಿ ಭಾರೀ ಬದಲಾವಣೆ ಆಗಿದೆ. ಬಿಸಿಲ ನಾಡಲ್ಲಿ ಬೇಸಿಗೆಯಲ್ಲೂ ಚಳಿಯ ವಾತಾವರಣವಿದ್ದು, ಜಿಲ್ಲೆಯ ಕೆಲವು ಕಡೆ ಮಂಜು ಮುಸುಕಿದೆ. ವಿಜಯಪುರ ಜಿಲ್ಲೆಯ ಸಾರವಾಡ ಬಳಿ ದಟ್ಟವಾದ ಮಂಜು ಆವರಿಸಿದೆ.

    ದಟ್ಟವಾದ ಮಂಜು ಇರುವ ಕಾರಣ ಚಾಲಕರು ಹೆಡ್‍ಲೈಟ್ ಬಳಸಿ ವಾಹನ ಚಲಾಯಿಸುತ್ತಿದ್ದಾರೆ. ಇದೇ ವೇಳೆ ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಆತಂಕದಲ್ಲಿದ್ದಾರೆ.