Tag: Flyovers

  • ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಬಂದ್ – ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ವಾಹನ ಸವಾರರು

    ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಬಂದ್ – ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ವಾಹನ ಸವಾರರು

    ಬೆಂಗಳೂರು: ಹೊಸ ವರ್ಷಾಚರಣೆಯ (New Year) ಕ್ಷಣಗಣನೆ ಹಿನ್ನೆಲೆ. ಮುಂಜಾಗ್ರತಾ ಕ್ರಮವಾಗಿ ನಗರದ ಎಲ್ಲಾ ಫ್ಲೈಓವರ್‌ಗಳನ್ನು (Flyovers) ಪೊಲೀಸ್ ಇಲಾಖೆ ಬಂದ್ ಮಾಡಿದೆ. ಈ ನಡುವೆ ಎಲೆಕ್ಟ್ರಾನಿಕ್ ಸಿಟಿ (Electronic City Flyover) ಎಲಿವೇಟೆಡ್ ಫ್ಲೈಓವರ್ ಬಂದ್ ಮಾಡಿದ ಕಾರಣ ಪೊಲೀಸರು (Police) ಮತ್ತು ವಾಹನ ಸವಾರರ ನಡುವೆ ವಾಗ್ವಾದ ನಡೆದಿದೆ.

    ಈಗಾಗಲೇ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಎಲ್ಲಾ ಫ್ಲೈಓವರ್‌ಗಳನ್ನು ಬಂದ್ ಮಾಡಿದ್ದಾರೆ. ಅದೇ ರೀತಿ ಎಲೆಕ್ಟ್ರಾನಿಕ್ ಸಿಟಿಯಿಂದ ಸಿಲ್ಕ್‌ಬೋರ್ಡ್‌ ವರೆಗಿನ 9 ಕಿಲೋಮೀಟರ್ ದೂರದ ಫ್ಲೈಓವರ್ ಕೂಡ ಬಂದ್ ಮಾಡಲಾಗಿದೆ. ಕುಡಿದು ಮೋಜು ಮಸ್ತಿ ಹಿನ್ನೆಲೆ. ರಾತ್ರಿ ವೇಳೆ ಕುಡಿದು ಅತಿವೇಗವಾಗಿ ವಾಹನ ಚಾಲನೆಯಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಯಿಂದಾಗಿ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆಯ ವರೆಗೆ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಇದೀಗ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಕ್ಲೋಸ್ ಮಾಡಿದ್ದಕ್ಕೆ ವಾಹನ ಸವಾರರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಯಾವುದೇ ಮಾಹಿತಿ ನೀಡದೆ ಕ್ಲೋಸ್ ಮಾಡಿದ್ದೀರಿ ಎಂದು ಟ್ರಾಫಿಕ್ ಪೊಲೀಸರೊಂದಿಗೆ ಜಟಾಪಟಿ ನಡೆಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷವನ್ನು ಯಾವ ದೇಶ ಮೊದಲು ಆಚರಿಸುತ್ತೆ ಗೊತ್ತಾ?

    ಬೈಕ್ ಸವಾರರಿಗೆ ಫ್ಲೈಓವರ್‌ನಲ್ಲಿ ಸಂಚರಿಸಲು ಅವಕಾಶ ನೀಡುವಂತೆ ಪೊಲೀಸರಿಗೆ ಒತ್ತಾಯಿಸಿದ್ದು, ಟ್ರಾಫಿಕ್ ಪೊಲೀಸರು ನಿರಾಕರಿಸಿದ್ದಾರೆ. ಬಳಿಕ ಹೊಸೂರು ಮುಖ್ಯರಸ್ತೆಯಲ್ಲಿಯೇ ವಾಹನ ಸವಾರರು ಹೊರಟಿದ್ದಾರೆ. ಇದನ್ನೂ ಓದಿ: BREAKING: ರಾಕೇಶ್ ಅಡಿಗಗೆ ಸೆಡ್ಡು ಹೊಡೆದು ಬಿಗ್ ಬಾಸ್ ಕಿರೀಟ ಗೆದ್ದ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ

    ಇತ್ತ ಕೋರಮಂಗಲದಲ್ಲಿ ಹೊಸ ವರ್ಷದ ಸಂಭ್ರಮದಲ್ಲಿ ಯುವಕ, ಯುವತಿಯರು ಡಿಜೆ ಸೌಂಡ್‍ಗೆ ಸಖತ್ ಸ್ಟೆಪ್ಸ್ ಹಾಕುತ್ತಿದ್ದಾರೆ. ಸಂಭ್ರಮಾಚರಣೆ ಹಿನ್ನೆಲೆ ಯುವ ಸಮೂಹ ಕುಣಿದು ಕುಪ್ಪಳಿಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಹೊಸ ವರ್ಷಾಚರಣೆ ಹಿನ್ನೆಲೆ ಸಿಲಿಕಾನ್ ಸಿಟಿಯ 32 ಮೇಲ್ಸೆತುವೆಗಳು ಬಂದ್

    ಹೊಸ ವರ್ಷಾಚರಣೆ ಹಿನ್ನೆಲೆ ಸಿಲಿಕಾನ್ ಸಿಟಿಯ 32 ಮೇಲ್ಸೆತುವೆಗಳು ಬಂದ್

    ಬೆಂಗಳೂರು: ವ್ಹೀಲಿಂಗ್ ಹಾಗೂ ಅಪಘಾತಗಳಿಗೆ ಕಡಿವಾಣ ಹಾಕಲು ಬೆಂಗಳೂರು ಸಂಚಾರಿ ಪೊಲೀಸರು ನಗರದ ಪ್ರಮುಖ ಮೇಲ್ಸೆತುವೆಗಳನ್ನು ಮಂಗಳವಾರ ರಾತ್ರಿ ಬಂದ್ ಮಾಡಲಿದ್ದಾರೆ.

    ರಾತ್ರಿ 10ರಿಂದ ಬೆಳಗಿನ ಜಾವ 4 ಗಂಟೆಯ ವರೆಗೆ ಒಟ್ಟು 32 ಮೇಲ್ಸೆತುವೆಗಳನ್ನು ಬಂದ್ ಮಾಡಲಾಗುತ್ತದೆ. ಪ್ರಮುಖವಾಗಿ ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ವೈಟ್ ಫೀಲ್ಡ್, ಹೆಚ್‍ಎಸ್‍ಆರ್ ಲೇಔಟ್, ಪುಲಿಕೇಶಿ ನಗರ, ರಿಚ್ಮಂಡ್ ರಸ್ತೆಯ ಮೇಲ್ಸೆತುವೆ, ಡೈರಿ ಸರ್ಜಕಲ್, ಕೆ.ಆರ್.ಮಾರ್ಕೆಟ್, ಆನಂದರಾವ್ ಸರ್ಕಲ್, ಬನಶಂಕರಿ ಮೇಲ್ಸೆತುವೆಗಳನ್ನು ಬಂದ್ ಮಾಡಲಾಗುತ್ತದೆ.

    ವಾಹನ ಸವಾರರ ಸಂಚಾರಕ್ಕೆ ತೊಂದರೆಯಾಗದಂತೆ ಪರ್ಯಾಯ ಮಾರ್ಗ ವ್ಯವಸ್ಥೆ ಮಾಡಲಾಗಿದೆ. 2018 ಹಾಗೂ 2019ರಲ್ಲಿ ಪ್ರತಿ ದಿನ ನೂರಾರು ಅಪಘಾತಗಳು 50 ಸಾವಿರಕ್ಕೂ ಹೆಚ್ಚು ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಅಪಘಾತಗಳನ್ನು ತಡೆಯಲು ಹಾಗೂ ಕುಡಿದು ವಾಹನ ಚಾಲನೆ ಮಾಡುವ ಸವಾರರಿಗೆ ಬಿಸಿ ಮುಟ್ಟಿಸಲು ಪೊಲೀಸಲು ಪ್ರಮುಖ ಮೇಲ್ಸೆತುವೆಗಳನ್ನು ಬಂದ್ ಮಾಡಲು ಚಿಂತಿಸಿದ್ದಾರೆ. ಹೊಸ ವರ್ಷ ಸಂಭ್ರಮಾಚರಣೆ ನಂತರ ಬಹುತೇಕ ವಾಹನ ಸವಾರರು ಮೇಲ್ಸೆತುವೆಗಳ ಮೇಲೆ ಸಂಚರಿಸುವಾಗ ವ್ಹೀಲಿಂಗ್ ಮಾಡಿ ಅಪಘಾತಗಳಿಗೆ ಕಾರಣರಾಗುತ್ತಾರೆ. ಇಂತಹ ಅವಘಡಗಳನ್ನು ತಪ್ಪಿಸಲು ಪೊಲೀಸರು ಪ್ರಮುಖ ಮೇಲ್ಸೆತುವೆಗಳ ಮೇಲೆ ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ.

  • 12 ಮೇಲ್ಸೇತುವೆಗಳಿಗೆ ಕಾಯಕಲ್ಪ ನೀಡಲಿರುವ ಬಿಬಿಎಂಪಿ

    12 ಮೇಲ್ಸೇತುವೆಗಳಿಗೆ ಕಾಯಕಲ್ಪ ನೀಡಲಿರುವ ಬಿಬಿಎಂಪಿ

    ಬೆಂಗಳೂರು: ಸಿರ್ಸಿ ಫ್ಲೈಓವರ್ ಡಾಂಬರೀಕರಣ ಮಾದರಿಯಲ್ಲಿ ನಗರದ 12 ಮೇಲ್ಸೇತುವೆಗಳನ್ನ ಹಂತ ಹಂತವಾಗಿ ದುರಸ್ತಿ ಮಾಡಲು ಬಿಬಿಎಂಪಿ ಮುಂದಾಗಿದೆ.

    ಟಿಕ್ಕಿಟಾರ್ ಶೀಟ್ ಬಳಸಿ ಡಾಂಬರೀಕರಣಕ್ಕೆ ಬಿಬಿಎಂಪಿ ಯೋಜನೆಯನ್ನ ಸಿದ್ಧಪಡಿಸಿಕೊಂಡಿದೆ. ನಗರದ ಐಟಿಸಿ, ಆನಂದ್ ರಾವ್ ವೃತ್ತ, ಡೈರಿ ಸರ್ಕಲ್ ಫ್ಲೈಓವರ್, ರಿಚ್ಮಂಡ್ ಸರ್ಕಲ್ ಫ್ಲೈಓವರ್ ಸೇರಿದಂತೆ ಒಟ್ಟು 12 ಮೆಲ್ಸೇತುವೆಗಳಿಗೆ ಕಾಯಕಲ್ಪ ನೀಡಲು ಪಾಲಿಕೆ ಮುಂದಾಗಿದೆ.

    ಮೆಲ್ಸೇತುವೆಗಳ ನಿರ್ವಹಣೆ ಸರಿಯಾಗಿ ಆಗದೆ ಹಲವು ದೋಷಗಳು ಕಂಡು ಬಂದಿವೆ ಎಂದು ಸಂಚಾರಿ ತಜ್ಞರು ತಮ್ಮ ಅಭಿಪ್ರಾಯವನ್ನ ತಿಳಿಸಿದ್ದಾರೆ. ಆದ್ದರಿಂದ ನಗರದಲ್ಲಿ ಎಲ್ಲಾ ಮೆಲ್ಸೇತುವೆಗಳ ನಿರ್ವಾಹಣೆ ಮತ್ತು ದುರಸ್ತಿ ಕಾರ್ಯಕ್ಕೆ ಬಿಬಿಎಂಪಿ ಸಿದ್ಧವಾಗಿದೆ. ನಗರದ ಹಲವು ಮೇಲ್ಸೇತುವೆ ಮಾರ್ಗದಲ್ಲಿ ಸಾಕಷ್ಟು ಗುಂಡಿಗಳು ಬಿದ್ದಿವೆ. ಈ ಹಿಂದೆ ಸುಮ್ಮನಹಳ್ಳಿ ಫ್ಲೈಓವರ್, ಹೆಬ್ಬಾಳ ಫ್ಲೈಓವರ್‍ನಲ್ಲಿ ಗುಂಡಿ ಬಿದ್ದಿದ್ದು ವಾಹನ ಸವಾರರ ಆತಂಕಕ್ಕೆ ಕಾರಣವಾಗಿತ್ತು. ಇದರಿಂದ ವಾಹನ ಸವಾರರು ಪಾಲಿಕೆಯ ಮೇಲೆ ಕಿಡಿಕಾರಿದ್ದರು. ಪಾಲಿಕೆಯ ಮೇಲೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಬಿಬಿಎಂಪಿ ಮೇಲ್ಸೇತುವೆಗಳ ಮರು ಡಾಂಬರೀಕರಣ ಮಾಡಲು ನಿರ್ಧರಿಸಿದೆ.

    ದುರಸ್ಥಿಯಾಗುವ 12 ಮೇಲ್ಸೇತುವೆಗಳ ಪಟ್ಟಿ:
    01) ಐಟಿಸಿ ಮೇಲ್ಸೇತುವೆ
    02) ಬೆಳ್ಳಂದೂರು ಮೇಲ್ಸೇತುವೆ
    03) ಆರ್ ಎಂಪಿ ಮೇಲ್ಸೇತುವೆ
    04) ಡೈರಿ ಸರ್ಕಲ್ ಮೇಲ್ಸೇತುವೆ
    05) ಲಿಂಗರಾಜಪುರ ಮೇಲ್ಸೇತುವೆ
    06) ನಾಗನಪಾಳ್ಯ ಮೇಲ್ಸೇತುವೆ


    07) ರಾಮಸ್ವಾಮಿ ಮೇಲ್ಸೇತುವೆ
    08) ರಿಚ್ಮಂಡ್ ಸರ್ಕಲ್ ಮೇಲ್ಸೇತುವೆ
    09) ನಾಯಂಡನಹಳ್ಳಿ ಮೇಲ್ಸೇತುವೆ
    10) ಸಿಲ್ಕ್ ಬೋರ್ಡ್ ಮೇಲ್ಸೇತುವೆ
    11) ಯಶವಂತಪುರ- ಮತ್ತಿಕೆರೆ ಮೇಲ್ಸೇತುವೆ
    12) ಎಚ್ ಎಸ್ ಆರ್ ಲೇಔಟ್
    13) ಆನಂದ್ ರಾವ್ ಸರ್ಕಲ್

  • 4 ಕೋಟಿ ವೆಚ್ಚದ ಮೇಲ್ಸೇತುವೆ ಕಳ್ಳತನ

    4 ಕೋಟಿ ವೆಚ್ಚದ ಮೇಲ್ಸೇತುವೆ ಕಳ್ಳತನ

    -ಇಟ್ಟಿಗೆ, ರೇಲಿಂಗ್ ಸಹ ಕದ್ದರು

    ನವದೆಹಲಿ: ದೇಶದ ರಾಜಾಧಾನಿಯಲ್ಲಿ ಪಾದಚಾರಿಗಳಿಗಾಗಿ ನಿರ್ಮಿಸಿದ್ದ ಮೇಲ್ಸೇತುವೆ ಕಳ್ಳತನವಾಗಿದೆ. ಸೌಥ್ ಸೆಂಟ್ರಲ್ ದೆಹಲಿಯಲ್ಲಿ ಜವಾಹರ್ ಲಾಲ್ ಸ್ಟೇಡಿಯಂಗೆ ಹೋಗಲು ಪಾದಚಾರಿಗಳಿಗಾಗಿ 2010ರಲ್ಲಿ ಮೇಲ್ಸೇತುವೆ ನಿರ್ಮಿಸಲಾಗಿತ್ತು. ಕೆಲವೇ ತಿಂಗಳಲ್ಲಿ ಸೇತುವೆಗೆ ಅಳವಡಿಸಿದ್ದ ವಸ್ತುಗಳನ್ನು ಕದಿಯಲು ಜನರು ಪ್ರಾರಂಭಿಸಿದ್ದರು.

    ಸೇತುವೆ ಉದ್ಘಾಟನೆಯಾದಾಗ ಎರಡು ಬದಿಯಲ್ಲಿ ಎಲಿವೇಟರ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಎಲಿವೇಟರ್ ಬಳಸುವ ಜೊತೆಗೆ ಕೆಲವರು ಅಲ್ಲಿಯ ಸ್ವಿಚ್ಛ್, ಲೈಟ್ ಗಳನ್ನು ಕದಿಯಲು ಆರಂಭಿಸಿದ್ದರು. ವಿದ್ಯುತ್ ಉಪಕರಣಗಳ ಕಳ್ಳತನದ ಬಳಿಕ ಎಲಿವೇಟರ್ ಸೇವೆ ಸ್ಥಗಿತಗೊಂಡಿತ್ತು. ಎರಡು ವರ್ಷಗಳ ಹಿಂದೆ ಮೇಲ್ಸೇತುವೆ ಮೇಲಿನ ಸಂಚಾರವನ್ನು ಪಿಡಬ್ಲ್ಯೂಡಿ ಇಲಾಖೆ ಬಂದ್ ಮಾಡಿದೆ. ಕಳೆದ ಎರಡು ವರ್ಷಗಳಿಂದ ಸೇತುವೆ ಅಕ್ರಮ ಚಟುವಟಿಕೆಗೆ ಮತ್ತು ಕಿಡಿಗೇಡಿಗಳಿಗೆ ಆಶ್ರಯತಾಣವಾಗಿ ಬದಲಾಗಿದೆ.

    ಮೇಲ್ಸುತವೆ ಸಂಚಾರ ಬಂದ್ ಆದಾಗಿನಿಂದ ಅಲ್ಲಿಯ ಇಟ್ಟಿಗೆ, ಕಬ್ಬಿಣದ ರಾಡುಗಳು, ಮೇಲೆ ಹತ್ತಲು ಸಹಾಯಕ್ಕೆ ಅಳವಡಿಸಿದ್ದ ಲೋಹದ ಪೈಪುಗಳು ಸೇರಿದಂತೆ ಇನ್ನಿತರ ವಸ್ತುಗಳ ಕಳ್ಳತನವಾಗಿವೆ. ಸದ್ಯ ಸೇತುವೆಯ ಬಹುತೇಕ ವಸ್ತುಗಳು ಕಳ್ಳತನವಾಗಿವೆ. ಇಲ್ಲೊಂದು ಸೇತುವೆ ಇತ್ತು ಎಂಬ ಕುರುಹು ಮಾತ್ರ ಉಳಿದುಕೊಂಡಿದೆ. ಎಷ್ಟು ಸಾಧ್ಯವಾಗುತ್ತೋ ಅಷ್ಟನ್ನು ಸೇತುವೆಯಿಂದ ಕಳ್ಳತನ ಮಾಡಲಾಗಿದೆ. ಇದೀಗ ಬೃಹತ್ ಗಾತ್ರದ ಕಬ್ಬಿಣದ ಸರಳು, ಪೈಪುಗಳು ಉಳಿದುಕೊಂಡಿವೆ.

    ಈ ಕುರಿತು ಪ್ರತಿಕ್ರಿಯಿಸಿರುವ ಸರ್ಕಾರಿ ಅಧಿಕಾರಿಯೊಬ್ಬರು, ಸೇತುವೆಯನ್ನು ವಾರಕ್ಕೆ ಸುಮಾರು 10 ಸಾವಿರ ಜನರು ಬಳಸುತ್ತಿದ್ದರು. ಎಲಿವೇಟರ್ ಕೇವಲ ಎರಡು ತಿಂಗಳಲ್ಲಿಯೇ ಬಂದ್ ಆಯ್ತು. ಮುಖ್ಯ ರಸ್ತೆ ಇರೋದರಿಂದ ಇಲ್ಲಿ ಅಪಘಾತ ನಿಯಂತ್ರಣಕ್ಕಾಗಿ ಮೇಲ್ಸೇತುವೆ ನಿರ್ಮಿಸಲಾಗಿತ್ತು. ಸೇತುವೆ ಬಳಕೆ ನಿಂತಾಗಿನಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಸಾರ್ವಜನಿಕ ಆಸ್ತಿ ಕಳ್ಳತನವಾಗದಂತೆ ಪೊಲೀಸರು ನೋಡಿಕೊಳ್ಳಬೇಕಿತ್ತು. ಆದರೆ ಪೊಲೀಸರು ಸರಿಯಾಗಿ ಕೆಲಸ ಮಾಡದ ಹಿನ್ನೆಲೆಯಲ್ಲಿ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಬ್ರಿಡ್ಜ್ ಗೆ ಅಳವಡಿಸಲಾಗಿದ್ದ ವಸ್ತುಗಳು ಕಳ್ಳತನವಾಗಿವೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    2010ರಲ್ಲಿ ಉದ್ಘಾಟಿಸಲಾಗಿದ್ದ ಸೇತುವೆಯ ವಸ್ತುಗಳ ಕಳ್ಳತನದ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ಹೇಳುತ್ತಾರೆ. ಮೇಲ್ಸೇತುವೆಗೆ ಎರಡು ಬದಿಯಲ್ಲಿ ಲಿಫ್ಟ್ ವ್ಯವಸ್ಥೆ ಸಹ ಕಲ್ಪಿಸಲಾಗಿತ್ತು. ಮೇಲ್ಭಾಗದಲ್ಲಿ ಪಾದಚಾರಿಗಳ ಸುರಕ್ಷತೆಗಾಗಿ ಎರಡು ಕಡೆ ಸ್ಟೀಲ್ ನಿಂದ ಮಾಡಲ್ಪಟ್ಟ ರೇಲಿಂಗ್ಸ್ ಅಳವಡಿಸಲಾಗಿತ್ತು. ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವದರಿಂದ ಮೇಲ್ಸೇತುವೆ ನಿರ್ಮಿಸಲಾಗಿತ್ತು. ಈ ಮೇಲ್ಸೇತುವೆ ಮೂಲಕ ಸಾಯಿ ಬಾಬಾ ಮಂದಿರದಿಂದ ಜವಾಹರ್ ಲಾಲ್ ಸ್ಟೇಡಿಯಂಗೆ ನೇರವಾಗಿ ತಲುಪಬಹುದಿತ್ತು.