Tag: flyover

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಹೆಬ್ಬಾಳ ಫ್ಲೈ ಓವರ್ ಮೇಲೆ ಡಾಂಬರೀಕರಣ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಹೆಬ್ಬಾಳ ಫ್ಲೈ ಓವರ್ ಮೇಲೆ ಡಾಂಬರೀಕರಣ

    – ವರದಿಯಿಂದ ಎಚ್ಚೆತ್ತ ಬಿಡಿಎ ಅಧಿಕಾರಿಗಳು

    ಬೆಂಗಳೂರು: ಕಳಪೆ ಕಾಮಗಾರಿಯಿಂದ ಅಪಾಯಕ್ಕಾಗಿ ಆಹ್ವಾನಿಸುತ್ತಿದ್ದ ಹೆಬ್ಬಾಳ ಫ್ಲೈ ಓವರ್ ಗೆ ಡಾಂಬರೀಕರಣ ಭಾಗ್ಯ ದೊರೆತಿದೆ. ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳು ಹೆಬ್ಬಾಳ ಫ್ಲೈ ಓವರ್ ಮೇಲೆ ಡಾಂಬರೀಕರಣ ಮಾಡುತ್ತಿದ್ದು, ಸವೆದಿದ್ದ ಕಬ್ಬಿಣದ ಡ್ರಿಲ್‍ಗಳನ್ನ ಸರಿಪಡಿತ್ತಿದ್ದಾರೆ.

    ಕಳಪೆ ಕಾಮಗಾರಿಯಿಂದ ಮೇಲ್ಸೇತುವೆ ಮೇಲೆ ಕಬ್ಬಿಣದ ಡ್ರಿಲ್ ಸವೆದು, ಎರಡು ಕಡೆ ಗುಂಡಿ ಬಿದ್ದು ಕುಸಿಯುವ ಮಟ್ಟಕ್ಕೆ ತಲುಪಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ವರದಿ ಬೆನ್ನಲ್ಲೇ ಬಿಡಿಎ ಅಧಿಕಾರಿಗಳು ಎಚ್ಚೆತ್ತುಕೊಂಡು ಹೆಬ್ಬಾಳ ಫ್ಲೈ ಓವರ್ ಮೇಲೆ ಗುಂಡಿ ಬಿದ್ದ ಕಡೆ ಡಾಂಬರೀಕರಣ ಆರಂಭಿಸಿದ್ದಾರೆ. ಇದನ್ನೂ ಓದಿ: ಅಪಾಯ ಆಹ್ವಾನಿಸುತ್ತಿದೆ ಹೆಬ್ಬಾಳ ಫ್ಲೈಓವರ್

    ಹೆಬ್ಬಾಳ ಫ್ಲೈ ಓವರ್ ಮೇಲೆ ನಿಂತು ಕೆಳಗಡೆ ನೋಡುದರೆ ಗುಂಡಿಗಳಲ್ಲಿ ಸೇತುವೆಯ ಕೆಳಗಡೆ ಓಡಾಡುವ ಜನ, ವಾಹನಗಳು ಕಾಣುತ್ತಿದ್ದರು. ಈ ಪ್ರಮಾಣದಲ್ಲಿ ಅಪಾಯ ಸೃಷ್ಟಿಯಾಗಿ ಮೇಲ್ಸೇತುವೆ ಯಾವಾಗ ಕುಸಿಯುತ್ತದೆಯೋ ಅಂತ ವಾಹನ ಸವಾರರು ಭಯದಲ್ಲೇ ಓಡಾಡುತ್ತಿದ್ದರು. ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿದ ವರದಿ ಬಳಿಕ ಬಿಡಿಎ ಅಧಿಕಾರಿಗಳು ಎಚ್ಚೆತ್ತು, ಕಬ್ಬಿಣದ ಡ್ರಿಲ್ ಸರಿಪಡಿಸಿ, ಡಾಂಬರ್ ಹಾಕುತ್ತಿದ್ದಾರೆ.

    ಈ ಕಳಪೆ ಕಾಮಗಾರಿಯ ಫ್ಲೈ ಓವರ್ ಬಗ್ಗೆ ಪಬ್ಲಿಕ್ ಟಿವಿಯು ಸಂಚಾರ ತಜ್ಞರ ಅಭಿಪ್ರಾಯ ಸಂಗ್ರಹಿಸಿತ್ತು. ಹೆಬ್ಬಾಳ ಫ್ಲೈ ಓವರ್ ಪರಿಸ್ಥಿತಿ ಮನಗಂಡು ಸಂಚಾರ ತಜರ್ಞರು ಆತಂಕ ವ್ಯಕ್ತಪಡಿಸಿದ್ದರು. ಸರಿಯಾದ ನಿರ್ವಹಣೆ ಮಾಡದಿದ್ದರೆ ಎರಡ್ಮೂರು ತಿಂಗಳಲ್ಲಿ ಅಪಾಯ ಸಂಭವಿಸುತ್ತದೆ. ಅಪಾಯ ಕಟ್ಟಿಟ್ಟ ಬುತ್ತಿ ಎಂದು ಬಿಡಿಎಗೆ ಎಚ್ಚರಿಕೆ ನೀಡಿದ್ದರು. ಇದನ್ನು ಮನಗಂಡ ಬಿಡಿಎ ಅಧಿಕಾರಿಗಳು ಅಪಾಯ ಸಂಭವಿಸುವುದಕ್ಕೂ ಮುನ್ನವೇ ದುರಸ್ತಿ ಕಾಮಗಾರಿ ಆರಂಭಿಸಿದ್ದಾರೆ.

    ಇದೇ ರೀತಿ ಬೆಂಗಳೂರಿನ ಕೆಲವು ಫ್ಲೈ ಓವರ್ ಗಳು ಅಪಾಯದ ಅಂಚಿನಲ್ಲಿವೆ. ಅಧಿಕಾರಿಗಳು ಇನ್ನದರೂ ಎಚ್ಚೆತ್ತು ಕಳಪೆ ಕಾಮಗಾರಿ ಫ್ಲೈ ಓವರ್ ಗಳನ್ನ ಸರಿಪಡಿಸುತ್ತಾರಾ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

  • ಅಪಾಯ ಆಹ್ವಾನಿಸುತ್ತಿದೆ ಹೆಬ್ಬಾಳ ಫ್ಲೈಓವರ್

    ಅಪಾಯ ಆಹ್ವಾನಿಸುತ್ತಿದೆ ಹೆಬ್ಬಾಳ ಫ್ಲೈಓವರ್

    ಬೆಂಗಳೂರು: ಸುಮನಹಳ್ಳಿ ಆಯ್ತು, ಇದೀಗ ಹೆಬ್ಬಾಳ ಫ್ಲೈಓವರ್ ಸರದಿ. ಪ್ರಯಾಣಿಕರೇ ಹೆಬ್ಬಾಳ ಫ್ಲೈಓವರ್ ಮೇಲೆ ಹೋಗೋದಕ್ಕೂ ಮುನ್ನ ಎಚ್ಚರವಾಗಿರಿ. ಮೇಲ್ಸೇತುವೆ ಸವೆದು ಎರಡು ಕಡೆ ಗುಂಡಿ ಬಿದ್ದಿದೆ. ಹೀಗಾಗಿ ಸೇತುವೆ ಮೇಲೆ ನಿಂತು ಈ ಗುಂಡಿ ಮೂಲಕ ಕೆಳಗಡೆ ನೋಡಿದರೆ ಓಡಾಡುವ ಜನ, ವಾಹನಗಳು ಕಾಣುತ್ತವೆ. ಈ ಕಾರಣದಿಂದಾಗಿ ಹೆಬ್ಬಾಳ ಮೇಲ್ಸೇತುವೆ ಡೇಂಜರ್ ಝೋನ್ ಆಗಿದೆ.

    ಹೌದು. ಬೆಂಗಳೂರಿನ ಫ್ಲೈಓವರ್ ಗಳ ಮೇಲೆ ವಾಹನ ಸವಾರರು ಸಂಚರಿಸೋಕೆ ಭಯ ಪಡುತ್ತಿದ್ದಾರೆ. ಈ ಮೇಲ್ಸೇತುವೆ ಮೇಲಿನ ಕಬ್ಬಿಣದ ಡ್ರಿಲ್ ಸವೆದು, ಫ್ಲೈಓವರ್ ನಲ್ಲಿ ಎರಡು ಕಡೆ ಗುಂಡಿ ಬಿದ್ದಿದೆ. ಈ ಮೂಲಕ ಕೆಳಗಡೆ ನೋಡಿದರೆ ಕೆಳಗಡೆ ಓಡಾಡುವ ವಾಹನಗಳು, ಜನರು ಕಾಣುತ್ತಾರೆ. ಅಷ್ಟು ಪ್ರಮಾಣದಲ್ಲಿ ಗುಂಡಿ ಬಿದ್ದಿದ್ದರೂ ಇದರ ಮೇಲೆಯೇ ವಾಹನಗಳು ಓಡಾಡ್ತಿದ್ದು, ಅಪಾಯ ಯಾವ ಸಮಯದಲ್ಲಿ ಆಗುತ್ತೋ ಗೊತ್ತಿಲ್ಲ. ಈ ರೀತಿ ಆದರೂ ಬಿಡಿಎ ಅಧಿಕಾರಿಗಳು, ಸರ್ಕಾರದ ಪ್ರತಿನಿಧಿಗಳು ಇದರ ಕಡೆ ಗಮನಹರಿಸಿಲ್ಲ. ಈ ರೀತಿಯ ಅಪಾಯ ಸೃಷ್ಟಿಸುವ ರೀತಿ ಗುಂಡಿ ಬಿದ್ದಿದೆ. ಜನ ಇದರ ಮೇಲೆ ಸಂಚರಿಸೋಕೆ ಆತಂಕ ಪಡುತ್ತಿದ್ದಾರೆ. ಇಷ್ಟಾದರೂ ಅಧಿಕಾರಿಗಳು ಕ್ರಮ ಜರುಗಿಸಿಲ್ಲ ಎಂದು ವಾಹನ ಸವಾರರು ಆತಂಕ ವ್ಯಕ್ತಪಡಿಸಿದ್ದಾರೆ.

    ಇದಕ್ಕೆ ಸಂಚಾರಿತಜ್ಞರು ಕೂಡ ಆತಂಕ ವ್ಯಕ್ತಪಡಿಸ್ತಿದ್ದು, ಕಳಪೆ ಕಾಮಗಾರಿಯಿಂದ ಈ ರೀತಿ ಆಗಿದೆ. ಹೀಗಾಗಿ ಮುಂಚಿತವಾಗಿ ಎಚ್ಚೆತ್ತು ಕ್ರಮ ಜರುಗಿಸಬೇಕು. ಇಲ್ಲ ಅಂದರೆ ಸೇತುವೆ ಕುಸಿಯುವ ಸಂಭವ ಇದೆ. ದೊಡ್ಡ ಅಪಾಯ ಎದುರಾಗಿ ಅಪಘಾತಗಳಾಗುತ್ತವೆ. ಅಧಿಕಾರಿಗಳು ಎಚ್ಚೆತ್ತು ಸರಿಪಡಿಸದೇ ಹೋದರೆ ಅಪಾಯ ಗ್ಯಾರಂಟಿ ಅಂತ ಮುನ್ಸೂಚನೆ ಕೊಡುತ್ತಿದ್ದಾರೆ.

    ಒಟ್ಟಾರೆ ಹೆಬ್ಬಾಳ ಫ್ಲೈಓವರ್ ಡೇಂಜರ್ ಸ್ಪಾಟ್ ಆಗಿದೆ. ಈಗಾಗಲೇ ಮೇಲು ಸೇತುವೆ ಮೇಲೆ ಗುಂಡಿ ಬಿದ್ದು ಸೇತುವೆ ಕುಸಿಯುವ ಸಂಭವ ಹೆಚ್ಚಿದೆ. ಹಲವಾರು ಬಾರಿ ವಾಹನ ಸವಾರರು ಬಿದ್ದು ಗಾಯಗೊಂಡು, ಸಾವನ್ನಪ್ಪಿರುವ ಉದಾಹರಣೆಗಳಿವೆ. ಬಿಬಿಎಂಪಿ, ಬಿಡಿಎ ಮತ್ತು ಸರ್ಕಾರದ ಪ್ರತಿನಿಧಿಗಳು ಎಚ್ಚೆತ್ತು ಮುನ್ನೆಚ್ಚರಿಕಾ ಕ್ರಮಗಳನ್ನ ಜರುಗಿಸ್ತಾರಾ ಕಾದು ನೋಡಬೇಕಿದೆ.

  • ಫ್ಲೈಓವರ್‌ನಿಂದ ಜನರ ಗುಂಪಿನ ಮುಂದೆ ಬಿದ್ದ ಕಾರು- ಮಹಿಳೆ ಸಾವು

    ಫ್ಲೈಓವರ್‌ನಿಂದ ಜನರ ಗುಂಪಿನ ಮುಂದೆ ಬಿದ್ದ ಕಾರು- ಮಹಿಳೆ ಸಾವು

    ಹೈದರಾಬಾದ್: ಚಾಲಕ ನಿಯಂತ್ರಣ ತಪ್ಪಿ ಫ್ಲೈಓವರ್‌ನಿಂದ ನೆಲಕ್ಕೆ ಬಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಹೈದರಾಬಾದ್‍ನ ಬಯೋಡೈವರ್ಸಿಟಿ ಜಂಕ್ಷನ್ ಬಳಿಕ ಘಟನೆ ನಡೆದಿದ್ದು, ದುರ್ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಅಪಘಾತದಲ್ಲಿ ಕಾರ್ ಚಾಲಕ ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ವೇಗವಾಗಿ ಬಂದ ಚಾಲಕನ ನಿಯಂತ್ರಣ ತಪ್ಪಿದ ಕಾರು ಫ್ಲೈಓವರ್ ತಡೆಗೊಡೆ ಜಿಗಿದು ನೆಲಕ್ಕೆ ಬಿದ್ದಿದೆ. ಅದೃಷ್ಟವಶಾತ್ ರಸ್ತೆ ಪಕ್ಕದಲ್ಲಿ ಬಸ್‍ಗಾಗಿ ಕಾಯುತ್ತಿದ್ದ ಜನರ ಗುಂಪಿನ ಮುಂದೆ ಕಾರು ಬಿದ್ದಿದ್ದರಿಂದ ಭಾರೀ ಅನಾಹುತ ಕೈತಪ್ಪಿದೆ. ಒಂದು ವೇಳೆ ಕಾರು ಜನರ ಮೇಲೆ ಬಿದ್ದಿದ್ದಕ್ಕೆ ಸುಮಾರು 10ಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ದರು.

    ಮೇಲಿಂದ ಬಿದ್ದ ಕಾರು ಪಲ್ಟಿ ಹೊಡೆದು ಮರಕ್ಕೆ ಡಿಕ್ಕಿ ಹೊಡೆದಿದೆ. ತಕ್ಷಣವೇ ಜನರು ಅತ್ತಿತ್ತ ಓಡಿ ಹೋಗಿದ್ದಾರೆ. ಆದರೆ ಪಾದಚಾರಿ ಮಹಿಳೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಕಾರು ಚಾಲಕ ಸೇರಿದಂತೆ ಇಬ್ಬರು ಗಂಭೀತವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಸಂಬಂಧಿಕರಿಗೆ 5 ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡ ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡುವುದಾಗಿ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಮೇಯರ್ ಭರವಸೆ ನೀಡಿದ್ದಾರೆ. ಜೊತೆಗೆ ಮೂರು ದಿನಗಳ ಕಾಲ ಬಯೋಡೈವರ್ಸಿಟಿ ಜಂಕ್ಷನ್‍ನಲ್ಲಿರುವ ಫ್ಲೈಓವರ್ ಮೇಲೆ ವಾಹನ ಸಂಚಾರವನ್ನು ತಡೆಯಲಾಗಿದೆ.

  • ಫ್ಲೈಓವರ್ ಮೇಲೆ ಗುಂಡಿ – ಸುಮನಹಳ್ಳಿ ಮೇಲ್ಸೇತುವೆ ಬಂದ್

    ಫ್ಲೈಓವರ್ ಮೇಲೆ ಗುಂಡಿ – ಸುಮನಹಳ್ಳಿ ಮೇಲ್ಸೇತುವೆ ಬಂದ್

    ಬೆಂಗಳೂರು: ನಾಗರಬಾವಿಯಿಂದ ಸುಮನಹಳ್ಳಿಗೆ ಹೋಗುವ ಫ್ಲೈಓವರ್ ಮೇಲೆ ಗುಂಡಿಯಾಗಿದ್ದು, ಸುಮ್ಮನಹಳ್ಳಿಯ ಮೇಲ್ಸೇತುವೆಯನ್ನು ಬಂದ್ ಮಾಡಲಾಗಿದೆ.

    ಸಿಲಿಕಾನ್ ಸಿಟಿಯಲ್ಲಿ ಮಳೆ ಬಂದರೆ ರಸ್ತೆಗಳು ಕೆರೆಯಂತಾಗಿ ಗುಂಡಿಗಳಾಗುತ್ತೆ. ಆದರೆ ಈಗ ಮೇಲ್ಸೇತುವೆಯಲ್ಲಿ ಗುಂಡಿ ಬಿದ್ದಿದೆ. ಬರೀ ಗುಂಡಿ ಆದರೆ ತೇಪೆಹಾಕಿ ಮುಚ್ಚುತ್ತಾರೆ. ಆದರೆ ಇಡೀ ಬ್ರಿಡ್ಜ್ ಮೇಲೆ ವಾಹನ ಸಂಚಾರವನ್ನೇ ನಿಷೇಧ ಮಾಡಿದ್ದು ಯಾವಾಗ ಏನ್ ಅನಾಹುತ ಆಗೋತ್ತೋ ಅನ್ನೋ ಭಯ ಸಾರ್ವಜನಿಕರಲ್ಲಿ ಕಾಡುತ್ತಿದೆ.

    ಮೇಲ್ಸೇತುವೆಯ ರಸ್ತೆಯಲ್ಲಿ ಸುಮಾರು 6 ಅಡಿ ಅಗಲದಷ್ಟು ಗುಂಡಿ ಬಿದ್ದಿದ್ದು ಬರೀ ಕಬ್ಬಿಣ ಮಾತ್ರ ಕಾಣುತ್ತಿದೆ. ಈ ರಸ್ತೆ ನಿರ್ಮಾಣವಾಗಿ ಇನ್ನೂ 10 ವರ್ಷಗಳು ಸಹ ಆಗಿಲ್ಲ ಆಗಲೇ ಈ ರೀತಿಯಾಗಿರೋದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಈಗ ಗುಂಡಿ ಬಿದ್ದ ಜಾಗದಲ್ಲಿ ಬ್ಯಾರಿಕೇಟ್ ವ್ಯವಸ್ಥೆ ಮಾಡಲಾಗಿದ್ದು, ಇದು ನಮ್ಮ ಬಿಬಿಎಂಪಿಯ ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ.

    ಈ ಭಾಗದ ರಸ್ತೆ ಸಂಚಾರವನ್ನು ಪೊಲೀಸರು ಬಂದ್ ಮಾಡಿದ್ದು, ಪಬ್ಲಿಕ್ ಟಿವಿಯ ವರದಿಯ ಬೆನ್ನಲ್ಲೇ ಸ್ಥಳೀಯ ಬಿಬಿಎಂಪಿ ಸದಸ್ಯ ಮೋಹನ್ ಕುಮಾರ್ ಹಾಗೂ ಇಂಜಿನಿಯರ್ ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಔಟರ್ ರಿಂಗ್ ರೋಡ್ ಬಂದ್ ಆಗಿದ್ದು, ಸರ್ವಿಸ್ ರೋಡ್ ನಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿದೆ. ಬಿಬಿಎಂಪಿಯವರ ಈ ಕಳಪೆ ಕಾಮಗಾರಿಯಿಂದ ಬೆಳ್ಳಂ ಬೆಳಗ್ಗೆಯೇ ವಾಹನ ಸವಾರರು ಪರದಾಡುವಂತಾಗಿದೆ.

  • ಬೆಳ್ಳಂಬೆಳಗ್ಗೆ ಹೊತ್ತಿ ಉರಿಯಿತು ಸೇತುವೆ ಕೆಳಗೆ ನಿಲ್ಲಿಸಿದ್ದ 20ಕ್ಕೂ ಹೆಚ್ಚು ವಾಹನ

    ಬೆಳ್ಳಂಬೆಳಗ್ಗೆ ಹೊತ್ತಿ ಉರಿಯಿತು ಸೇತುವೆ ಕೆಳಗೆ ನಿಲ್ಲಿಸಿದ್ದ 20ಕ್ಕೂ ಹೆಚ್ಚು ವಾಹನ

    ಮುಂಬೈ: ಬೆಳ್ಳಂಬೆಳಗ್ಗೆ ಬೋರ್ವಿಯಾಲಿಯಲ್ಲಿ ಸೇತುವೆ ಕೆಳಗೆ ನಿಲುಗಡೆ ಮಾಡಲಾಗಿದ್ದ 20 ಕ್ಕೂ ಹೆಚ್ಚು ವಾಹನಗಳು ಅಗ್ನಿ ಅವಘಡದಲ್ಲಿ ಸುಟ್ಟು ಭಸ್ಮವಾಗಿದೆ.

    ಬೆಳಗ್ಗೆ ಸುಮಾರು 8 ಗಂಟೆಗೆ ಈ ಅವಘಡ ಸಂಭವಿಸಿದೆ. ಘಟನೆ ನಡೆದ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು, ಬೆಂಕಿ ಅನಾಹುತಕ್ಕೆ ಕಾರಣವೇನು ಎಂಬುವುದು ತಿಳಿದುಬಂದಿಲ್ಲ. ಈ ಅಗ್ನಿ ಅನಾಹುತದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಆದರೆ ಸೇತುವೆ ಕೆಳಗೆ ನಿಲುಗಡೆ ಮಾಡಲಾಗಿದ್ದ 20ಕ್ಕೂ ಹೆಚ್ಚು ವಾಹನಗಳು ಬೆಂಕಿ ಕೆನ್ನಾಲಿಗೆಯಲ್ಲಿ ಸುಟ್ಟು ಕರಕಲಾಗಿವೆ.

    ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಆಗಮಿಸಿ ವಾಹನಗಳಿಗೆ ತಗುಲಿದ್ದ ಬೆಂಕಿಯನ್ನು ನೆಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇದ್ದಕ್ಕಿದಂತೆ ಈ ಅಗ್ನಿ ಅನಾಹುತವಾಗಲು ಕಾರಣವೇನು ಎಂದು ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.

    2016ರಲ್ಲಿ ಮುಂಬೈ ಹೈ ಕೋರ್ಟ್ ಫ್ಲೈಓವರ್ ಕೆಳಗೆ ವಾಹನ ನಿಲುಗಡೆ ಮಾಡುವಂತಿಲ್ಲ ಎಂದು ತೀರ್ಪು ನೀಡಿತ್ತು. ಅಲ್ಲದೇ ಮೇ 2018ರಲ್ಲಿ ಸಾರ್ವಜನಿಕರು ಮುಂಬೈ ಬೀದಿಗಳಲ್ಲಿ, ಫ್ಲೈಓವರ್ ಕೆಳಗೆ ಉಪಯೋಗ ಮಾಡದ ವಾಹನಗಳನ್ನು ನಿಲ್ಲಿಸುವುದನ್ನು ಖಂಡಿಸಿ ಆಪರೇಷನ್ ಖತಾರ ಅಭಿಯಾನವನ್ನು ಕೂಡ ಆರಂಭಿಸಿದ್ದರು. ಆಗ ಪೋಲೀಸರು ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು.

  • ಫ್ಲೈಓವರ್ ತಡೆಗೋಡೆಗೆ ಲಾರಿ ಡಿಕ್ಕಿ – ಗಂಟೆಗಟ್ಟಲೆ ಟ್ರಾಫಿಕ್ ಜಾಮ್

    ಫ್ಲೈಓವರ್ ತಡೆಗೋಡೆಗೆ ಲಾರಿ ಡಿಕ್ಕಿ – ಗಂಟೆಗಟ್ಟಲೆ ಟ್ರಾಫಿಕ್ ಜಾಮ್

    ಬೆಂಗಳೂರು: ಫ್ಲೈಓವರ್ ತಡೆಗೋಡೆಗೆ ಲಾರಿ ಡಿಕ್ಕಿಯಾಗಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆದ ಘಟನೆ ಬೆಂಗಳೂರಿನ ಹೆಚ್‍ಎಸ್‍ಆರ್ ಬಡಾವಣೆ ಅಗರ ಫ್ಲೈಓವರ್ ಬಳಿ ನಡೆದಿದೆ.

    ಬೆಳಗ್ಗಿನ ಜಾವ ನಾಲ್ಕು ಗಂಟೆ ಸುಮಾರಿನಲ್ಲಿ ಈ ಅಪಘಾತ ಸಂಭವಿಸಿದೆ. ಕಬ್ಬಿಣದ ಸರಳುಗಳನ್ನು ತುಂಬಿಕೊಂಡು ಲಾರಿ ಮಾರತ್ತಹಳ್ಳಿ ಕಡೆಯಿಂದ ಸಿಲ್ಕ್ ಬೋರ್ಡ್ ಕಡೆ ಬರುತ್ತಿತ್ತು. ಈ ವೇಳೆ ಫ್ಲೈಓವರ್ ತಡೆಗೋಡೆಗೆ ಲಾರಿ ಡಿಕ್ಕಿಯಾಗಿದೆ.

    ಘಟನೆಯಿಂದ ಲಾರಿ ಚಾಲಕ ಹಾಗೂ ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಅಪಘಾತದಿಂದಾಗಿ ಮಾರತ್ತಹಳ್ಳಿ ರಿಂಗ್ ರಸ್ತೆಯಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.

    ಈ ಬಗ್ಗೆ ಹೆಚ್‍ಎಸ್‍ಆರ್ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಯಶವಂತಪುರ ಫ್ಲೈಓವರ್‌ನಿಂದ ಕೆಳಗೆ ಬಿದ್ದ ಟ್ರಕ್- ಕ್ಲೀನರ್ ಸಾವು

    ಯಶವಂತಪುರ ಫ್ಲೈಓವರ್‌ನಿಂದ ಕೆಳಗೆ ಬಿದ್ದ ಟ್ರಕ್- ಕ್ಲೀನರ್ ಸಾವು

    ಬೆಂಗಳೂರು: ಯಶವಂತಪುರ ಫ್ಲೈಓವರ್‌ನಿಂದ ಅಣಬೆ ತುಂಬಿದ್ದ ಟ್ರಕ್ ಕೆಳಗೆ ಬಿದ್ದು, ಕ್ಲೀನರ್ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಬೆಳಗ್ಗೆ 5.30ರ ಸುಮಾರಿಗೆ ನಡೆದಿದೆ.

    ಪುಣೆಯಿಂದ ಬೆಂಗಳೂರಿಗೆ ಟ್ರಕ್ ನಲ್ಲಿ ಅಣಬೆ ತರಲಾಗುತ್ತಿತ್ತು. ಯಶವಂತಪುರ ಫ್ಲೈಓವರ್‌ನಲ್ಲಿ ಲಾಂಗ್ ಕರ್ವ್ ಇರುವುದರಿಂದ ಟ್ರಕ್ ಕೆಳಗೆ ಬಿದ್ದಿದೆ. ಪರಿಣಾಮ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟು, ಚಾಲಕನಿಗೆ ಗಂಭೀರ ಗಾಯವಾಗಿದೆ.

    ಲಾಂಗ್ ಕರ್ವ್ ಇರುವುದರಿಂದ ಈ ಫ್ಲೈಓವರ್ ಮೇಲೆ ಪದೇ ಪದೇ ಈ ರೀತಿಯ ಅವಘಡಗಳು ನಡೆಯುತ್ತಲೇ ಇದೆ. ಕೆಲ ತಿಂಗಳ ಹಿಂದೆ ಕೋಳಿ ತುಂಬಿದ್ದ ಟೆಂಪೋ ಇದೇ ಫ್ಲೈಓವರ್‌ನಿಂದ ಕೆಳಗೆ ಬಿದ್ದಿತ್ತು.

  • ಫ್ಲೈಓವರ್ ಮೇಲೆ ಹೊತ್ತಿ ಉರಿದ ಕಾರು – ತಾಯಿ, ಇಬ್ಬರು ಮಕ್ಕಳು ಸಜೀವದಹನ

    ಫ್ಲೈಓವರ್ ಮೇಲೆ ಹೊತ್ತಿ ಉರಿದ ಕಾರು – ತಾಯಿ, ಇಬ್ಬರು ಮಕ್ಕಳು ಸಜೀವದಹನ

    ನವದೆಹಲಿ: ಚಲಿಸುತ್ತಿದ್ದ ಕಾರಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಪರಿಣಾಮ ವಾಹನದ ಒಳಗಿದ್ದ ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಸಜೀವ ದಹನವಾಗಿರುವ ದಾರುಣ ಘಟನೆ ಪೂರ್ವ ದೆಹಲಿಯ ಅಕ್ಷರಧಾಮ ಫ್ಲೈಓವರ್ ನಲ್ಲಿ ನಡೆದಿದೆ.

    ಭಾನುವಾರ ಸಂಜೆ ಸುಮಾರು 6.30ರ ಹೊತ್ತಿಗೆ ಈ ದುರಂತ ಸಂಭವಿಸಿದೆ. ದೆಹಲಿಯ ನಿವಾಸಿಗಳಾದ ರಂಜನಾ ಮಿಶ್ರಾ, ರಿಧಿ ಹಾಗೂ ನಿಕ್ಕಿ ಮೃತ ದುರ್ದೈವಿಗಳು. ಭಾನುವಾರ ಸಂಜೆ ಅಕ್ಷರಧಾಮ ದೇವಾಲಯಕ್ಕೆ ರಂಜನಾ, ಪತಿ ಉಪೇಂದ್ರ ಮಿಶ್ರಾ ಹಾಗೂ ಅವರ ಮೂವರು ಮಕ್ಕಳು ಕಾರಿನಲ್ಲಿ ತೆರೆಳುತ್ತಿದ್ದರು. ಈ ವೇಳೆ ಅಕ್ಷರಧಾಮ ಫ್ಲೈಓವರ್ ಮೇಲೆ ಬರುತ್ತಿರುವಾಗ ಕಾರಿನಲ್ಲಿ ಗ್ಯಾಸ್ ಲೀಕ್ ಆದ ಕಾರಣ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಕಾರು ಹೊತ್ತಿ ಉರಿದಿದೆ.

    ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರು ಚಲಾಯಿಸುತ್ತಿದ್ದ ಪತಿ, ತನ್ನ ಪಕ್ಕದಲ್ಲೇ ಕೂತಿದ್ದ ಮೂರನೇ ಮಗಳನ್ನು ಎತ್ತಿಕೊಂಡು ಹೊರಗಡೆ ಹಾರಿದ್ದಾರೆ. ಆದ್ರೆ ಪತ್ನಿ ಹಾಗೂ ಇನ್ನಿಬ್ಬರು ಮಕ್ಕಳು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತ್ತಿದ್ದ ಕಾರಣಕ್ಕೆ ಅವರನ್ನು ಕಾಪಾಡುವಷ್ಟರಲ್ಲಿ ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಮೂವರು ಕೂಡ ಸಜೀವದಹನವಾಗಿದ್ದಾರೆ.

    ಕಾರಿಗೆ ಬೆಂಕಿ ಹೇಗೆ ತಗುಲಿತು ಅಂತ ನನಗೆ ಗೊತ್ತಿಲ್ಲ ಎಂದು ಶಾಕ್‍ನಲ್ಲಿ ಉಪೇಂದ್ರ ಮಿಶ್ರಾ ಹೇಳುತ್ತಿದ್ದಾರೆ. ಸದ್ಯ ಬೆಂಕಿ ಅನಾಹುತದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಡಿಸಿಪಿ ಜಸ್ಮೀತ್ ಸಿಂಗ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮೈಸೂರು ರಸ್ತೆ ಫ್ಲೈಓವರ್ ಮೇಲೆ ಓಡಾಡುವ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್

    ಮೈಸೂರು ರಸ್ತೆ ಫ್ಲೈಓವರ್ ಮೇಲೆ ಓಡಾಡುವ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್

    ಬೆಂಗಳೂರು: ಗುಂಡಿ ಮುಚ್ಚುವ ಕಾಮಗಾರಿ ಹಿನ್ನೆಲೆಯಲ್ಲಿ ಇದೇ ತಿಂಗಳ 26 ರಿಂದ ಮೈಸೂರು ರಸ್ತೆ ಫ್ಲೈಓವರ್ (ಸಿರ್ಸಿ ಸರ್ಕಲ್) ಮುಚ್ಚಲಿದ್ದು, ವಾಹನ ಸವಾರರು ಮುಂದಿನ 4 ತಿಂಗಳು ಪರ್ಯಾಯ ಮಾರ್ಗ ನೋಡಿಕೊಳ್ಳಬೇಕಿದೆ.

    ಮೈಸೂರು ರಸ್ತೆ, ಬಸವನಗುಡಿ, ಮೆಜೆಸ್ಟಿಕ್, ಗೋರಿಪಾಳ್ಯ ಮಾರ್ಗವಾಗಿ ಸಂಚರಿಸಲು ಬೆಂಗಳೂರಿನ ಸಿರ್ಸಿ ಫ್ಲೈಓವರ್ ಬಳಸುತ್ತಿದ್ದ ವಾಹನ ಸವಾರರು ನೋಡಲೇಬೇಕಾದ ಸುದ್ದಿ ಇದಾಗಿದೆ. ಫ್ಲೈಓವರ್ ಮೇಲೆ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಹಿನ್ನೆಲೆಯಲ್ಲಿ ಇದೇ ತಿಂಗಳ 27 ರಂದು ಫ್ಲೈಓವರ್ ಬಂದ್ ಆಗಲಿದೆ. ಈ ಮೂಲಕ ವಾಹನ ಸಂಚಾರಕ್ಕೆ ಬ್ರೇಕ್ ಬೀಳಲಿದೆ.

    ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಟೆಕ್ಕಿ ಟಾರ್ ಶೀಟ್ ಅಳವಡಿಸಲಾಗುತ್ತದೆ. ಮೂರು ಮಿಲಿ ಮೀಟರ್ ಗಾತ್ರದ ಸಣ್ಣ ಡಾಂಬಾರ್ ಶೀಟ್ ಹಾಕಿ ಕಾಂಕ್ರಿಟ್ ಮೇಲ್ಭಾಗದಲ್ಲಿ ಡಾಂಬರೀಕರಣ ಮಾಡಲಾಗುತ್ತದೆ. ಇನ್ನು ಈ ಕಾಮಗಾರಿಗೆ 4 ತಿಂಗಳ ಸಮಯ ಕೇಳಿದ್ದು, 2 ತಿಂಗಳಲ್ಲಿ ಮುಗಿಸುವ ವಿಶ್ವಾಸವಿದೆ ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

    ಕಳೆದ 4 ವರ್ಷಗಳ ಹಿಂದೆ ಫ್ಲೈಓವರ್ ಡಾಂಬರೀಕರಣ ಮಾಡಲಾಗಿತ್ತು. ಗುಂಡಿ ಬಿದ್ದಿದೆ ಎಂದು 3 ತಿಂಗಳ ಹಿಂದೆಯಷ್ಟೇ ಗುಂಡಿ ಮುಚ್ಚುವ ಕೆಲಸವೂ ಆಗಿದೆ. ಈಗ ಮತ್ತೆ 4 ಕೋಟಿ 50 ಲಕ್ಷ ವೆಚ್ಚದಲ್ಲಿ ಮತ್ತೆ ಕಾಮಗಾರಿ ಕೈಗೆತ್ತಿಕೊಂಡಿದೆ.

    4 ಹಂತದಲ್ಲಿ ಫ್ಲೈಓವರ್ ಬಂದ್ ಆಗಲಿದೆ. ಮೊದಲು ರಾಯನ್ ಸರ್ಕಲ್ ನಿಂದ ಮೈಸೂರು ರಸ್ತೆವರೆಗೂ ಬಂದ್ ಮಾಡಲಾಗುತ್ತದೆ. ಮತ್ತೆ ಟೌನ್‍ಹಾಲ್ ಭಾಗದಿಂದ ರಾಯನ್ ಸರ್ಕಲ್‍ವರೆಗೂ ಕಾಮಗಾರಿ ಮಾಡಲಾಗುತ್ತದೆ. ಇತ್ತ ಮೂರನೇ ಹಂತದಲ್ಲಿ ಮೈಸೂರು ರಸ್ತೆಯಿಂದ ಮಾರುಕಟ್ಟೆವರೆಗೂ ಬಂದ್ ಮಾಡಲಾಗುತ್ತದೆ. ಕಡೆಯದಾಗಿ ಕೆ.ಆರ್.ಮಾರುಕಟ್ಟೆಯಿಂದ ಟೌನ್ ಹಾಲ್ ತಲುಪುವ ಫ್ಲೈಓವರ್ ತಲುಪುವ ಕಡೆಯ ಭಾಗದವರೆಗೂ ಡಾಂಬರೀಕರಣ ಕಾಮಗಾರಿ ನಡೆಯಲಿದೆ. ಹೀಗಾಗಿ ವಾಹನ ಸವಾರರು ಮುಂದಿನ 4 ತಿಂಗಳೂ ಪರ್ಯಾಯ ಮಾರ್ಗ ನೋಡಿಕೊಳ್ಳಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಫ್ಲೈಓವರ್ ಮೇಲೆ ಧಗ ಧಗ ಹತ್ತಿ ಉರಿದ ಕಾರು- ವಿಡಿಯೋ ವೈರಲ್

    ಫ್ಲೈಓವರ್ ಮೇಲೆ ಧಗ ಧಗ ಹತ್ತಿ ಉರಿದ ಕಾರು- ವಿಡಿಯೋ ವೈರಲ್

    ದೆಹಲಿ: ಮಂಗಳವಾರ ಸಂಜೆ ವೇಳೆಯಲ್ಲಿ ಗುರುಗ್ರಾಂ ರಾಜೀವ್ ಚೌಕ್ ಫ್ಲೈಓವರ್ ಮೇಲೆ ಚಲಿಸುತ್ತಿದ್ದ ಹೋಂಡಾ ಸಿಟಿ ಕಾರೊಂದಕ್ಕೆ ದಿಢೀರ್ ಬೆಂಕಿ ಹತ್ತಿಕೊಂಡು, ಧಗ ಧಗ ಉರಿದು ಸುಟ್ಟುಹೋಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಅಪಘಾತದಲ್ಲಿ ಸುಟ್ಟ ಕಾರು ಮ್ಯಾನ್ ಪವರ್ ಸಂಸ್ಥೆಯಲ್ಲಿ ಕೆಲಸ ಮಾಡುವ ರಾಕೇಶ್ ಚಾಂಡೇಲ್ ಎಂಬ ವ್ಯಕ್ತಿಗೆ ಸೇರಿದೆ. ಗುರುಗ್ರಾಮ್ ಫ್ಲೈಓವರ್ ಮೇಲೆ ಚಲಿಸುತ್ತಿದ್ದಾಗ ಕಾರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಎಚ್ಚೆತ್ತಿಕೊಂಡ ರಾಕೇಶ್ ಕಾರನ್ನು ರಸ್ತೆ ಬದಿ ನಿಲ್ಲಿಸಿದ್ದಾನೆ. ಏನಾಯ್ತು ಎಂದು ನೋಡುವಷ್ಟರಲ್ಲಿ ಕಾರಿಗೆ ಬೆಂಕಿ ಹತ್ತಿಕೊಂಡು ಉರಿಯಲು ಆರಂಭಿಸಿತು.

    ಬೆಂಕಿ ಹೊಡೆತಕ್ಕೆ ಧಗ ಧಗ ಉರಿದ ಕಾರು ವೇಗದಿಂದ ಮುಂದೆ ಸಾಗುತ್ತ ಎದುರಿಗಿದ್ದ ಆಟೋವೊಂದಕ್ಕೆ ಡಿಕ್ಕಿ ಹೊಡೆದಿದೆ. ಆಗ ಆಟೋ ಚಾಲಕ ಆಟೋಯಿಂದ ಹೊರ ಹಾರಿ ಪ್ರಾಣ ಉಳಿಸಿಕೊಂಡಿದ್ದಾನೆ. ಹೀಗೆ ಮುಂದೆ ಚಲಿಸಿದ ಕಾರು ಡಿವೈಡರ್‍ಗೆ ಡಿಕ್ಕೆ ಹೊಡೆದು ತನ್ನಷ್ಟಕ್ಕೆ ನಿಂತಿದೆ. ಆ ಬಳಿಕ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸಿದ್ದಾರೆ.

    ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಆದರೆ ಅಗ್ನಿ ಅವಗಡದಿಂದ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಸದ್ಯ ಈ ಕುರಿತು ಸರದಾರ್ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕ್ರಿಯೆ ಕೋಡ್‍ನ ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews