Tag: flyover

  • ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪಾಲಿಕೆ ಪ್ಲ್ಯಾನ್ – ಅಂಡರ್‌ಪಾಸ್, ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾದ ಪಾಲಿಕೆ

    ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪಾಲಿಕೆ ಪ್ಲ್ಯಾನ್ – ಅಂಡರ್‌ಪಾಸ್, ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾದ ಪಾಲಿಕೆ

    ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಟ್ರಾಫಿಕ್  (Traffic) ಸಮಸ್ಯೆ ಜಾಸ್ತಿ ಆಗುತ್ತಿದೆ. ಯಾವ ಭಾಗಕ್ಕೆ ಹೋದರೂ ಸಂಚಾರ ದಟ್ಟಣೆ ಹೆಚ್ಚಾಗ್ತಿದೆ. ಬಿಬಿಎಂಪಿ (BBMP) ಟ್ರಾಫಿಕ್ ಸ್ಪಾಟ್‌ಗಳನ್ನು ಗುರುತಿಸಿ ಸರ್ವೆಗೆ ಮುಂದಾಗಿದೆ. ಸರ್ವೆ ನಡೆಸಲು ಟೆಂಡರ್ ಕರೆದಿದೆ. ಸರ್ವೆ ಮುಗಿದ ಬಳಿಕ 12 ಕಡೆ ಮೇಲ್ಸೇತುವೆ ಅಂಡರ್ ಪಾಸ್ (Underpass) ನಿರ್ಮಾಣಕ್ಕೆ ಮುಂದಾಗಿದೆ.

    ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ಸಂಚಾರ ದಟ್ಟಣೆ ಬಗ್ಗೆ ಚರ್ಚೆ ಆಗುತ್ತಿದೆ. ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಈಗಾಗಲೇ ಹಲವಾರು ಕ್ರಮಗಳನ್ನು ಜರುಗಿಸಿದ್ದಾರೆ. ಈಗ ಮತ್ತೆ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಬಿಬಿಎಂಪಿ ನಗರದಲ್ಲಿ ಸರ್ವೆ ನಡೆಸಲು ಮುಂದಾಗಿದೆ. ಖಾಸಗಿ ಸಂಸ್ಥೆಗೆ ಟೆಂಡರ್ ನೀಡಿ ಎಲ್ಲೆಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ, ಪರಿಹಾರ ಏನು ಎಂಬುದನ್ನು ವರದಿ ನೀಡಲು ಸೂಚಿಸಿದೆ. ಶೀಘ್ರದಲ್ಲೇ ಸರ್ವೆ ಆರಂಭ ಆಗಲಿದೆ. ಇದನ್ನೂ ಓದಿ: ಹಣ ಲಪಟಾಯಿಸಿದ್ರೂ ಬಿಡದಿ ಇನ್ಸ್‌ಪೆಕ್ಟರ್‌ ಸಸ್ಪೆಂಡ್ ಯಾಕಿಲ್ಲ?- ಭ್ರಷ್ಟನಿಗೆ ರಾಜಕೀಯ ರಕ್ಷಣೆ ಎಂದ ಮಾಜಿ ಶಾಸಕ

    ಟ್ರಾಫಿಕ್ ಜಾಮ್ ಆಗುವ ರಸ್ತೆಯಲ್ಲಿ ದಿನಕ್ಕೆ ಎಷ್ಟು ವಾಹನ ಓಡಾಡುತ್ತಿವೆ. ಟ್ರಾಫಿಕ್ ಜಾಮ್ ಆಗಲಿಕ್ಕೆ ಕಾರಣ ಹುಡುಕಬೇಕಿದೆ. ಎಲ್ಲೆಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಬೇಕು. ಫ್ಲೈಓವರ್ ನಿರ್ಮಾಣ ಮಾಡಬೇಕು ಎಂದು ವರದಿ ನಿರ್ಧಾರ ಮಾಡಲಿದ್ದಾರೆ. ಈಗಾಗಲೇ ಗೊರಗುಂಟೆಪಾಳ್ಯ, ತುಮಕೂರು ರಸ್ತೆ, ಸ್ಯಾಂಡಲ್‌ಸೋಪ್ ಫ್ಯಾಕ್ಟರಿ, ಹೆಬ್ಬಾಳ, ಟಿನ್ ಫ್ಯಾಕ್ಟರಿ, ಸಿಲ್ಕ್ ಬೋರ್ಡ್ ಈ ಭಾಗಗಳಲ್ಲಿ ಫ್ಲೈಓವರ್ ಇದ್ದರೂ ಟ್ರಾಫಿಕ್ ಜಾಮ್ ಆಗುತ್ತಿದೆ. ಇದಕ್ಕೆ ಸೂಕ್ತ ಕಾರಣ ಪತ್ತೆ ಹಚ್ಚಿ ಪರಿಹಾರ ಏನು ಎಂದು ಕಂಡುಕೊಂಡು ವರದಿ ನೀಡಲಿದ್ದಾರೆ. ಇದನ್ನೂ ಓದಿ: ಮಡಿಕೇರಿಯ ಈ ಗ್ರಾಮದ 30 ಯುವಕರಿಗಿಲ್ಲ ಕಂಕಣ ಭಾಗ್ಯ

    ಬಿಬಿಎಂಪಿ ಟ್ರಾಫಿಕ್ ಜಾಮ್ ಬಗ್ಗೆ ಸರ್ವೆ ನಡೆಸಲು ಮುಂದಾಗಿದ್ದು, ಸರ್ವೆ ಆದ ಬಳಿಕ ಎಲ್ಲೆಲ್ಲಿ ಅಂಡರ್ ಪಾಸ್ ನಿರ್ಮಾಣ, ಮತ್ತೆ ಫ್ಲೈಓವರ್ ನಿರ್ಮಾಣ ಮಾಡಲಿದೆಯೋ ಕಾದು ನೋಡಬೇಕಿದೆ. ಇದನ್ನೂ ಓದಿ: ಕಡ್ಲೆಕಾಯಿ ಪರಿಷೆಯ ತುತ್ತೂರಿ ವಿರುದ್ಧ ಬಸವನಗುಡಿ ನಿವಾಸಿಗಳು ಗರಂ!

  • ಬೆಂಗಳೂರು-ತುಮಕೂರು ಫ್ಲೈಓವರ್ ಭಾರೀ ವಾಹನಗಳಿಗೆ ಮುಕ್ತನಾ..?

    ಬೆಂಗಳೂರು-ತುಮಕೂರು ಫ್ಲೈಓವರ್ ಭಾರೀ ವಾಹನಗಳಿಗೆ ಮುಕ್ತನಾ..?

    ಬೆಂಗಳೂರು: ಬೆಂಗಳೂರು-ತುಮಕೂರು ಫ್ಲೈಓವರ್ (Bengaluru Tumakuru Flyover), ಭಾರೀ ಗಾತ್ರದ ವಾಹನಗಳಿಗೆ ಮುಂದಿನ ವರ್ಷವೇ ಮುಕ್ತವಾಗಲಿದೆ. ಕೇಬಲ್ ಅಳವಡಿಕೆ ಕಾರ್ಯ ಆರಂಭ ಆಗಿದ್ದು, ಮುಗಿಯೋಷ್ಟರಲ್ಲಿ ಇನ್ನೂ ಐದಾರು ತಿಂಗಳು ಬೇಕಾಗಬಹುದು.

    ಬೆಂಗಳೂರು- ತುಮಕೂರು ಫ್ಲೈಓವರ್‍ನಲ್ಲಿ ಭಾರೀ ವಾಹನಗಳ ಓಡಾಟಕ್ಕೆ ಪ್ರವೇಶ ನಿಬರ್ಂಧ ಮುಂದುವರಿಯಲಿದ್ದು, ಮುಂದಿನ ವರ್ಷ ಜನವರಿಗೆ ಮುಕ್ತವಾಗುವ ಸಾಧ್ಯತೆಗಳಿವೆ. ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ನ ತಾಂತ್ರಿಕ ತಜ್ಞರ ತಂಡದ ಶಿಫಾರಸ್ಸಿನ ಮೇರೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಫ್ಲೈಓವರ್‍ನ ವ್ಯಾಪ್ತಿಯಲ್ಲಿರುವ ಹಳೆಯ ಕೇಬಲ್‍ಗಳನ್ನು ಹೊಸ ಪ್ರಿಸ್ಟ್ರೇಸ್ಡ್ ಕೇಬಲ್‍ಗಳೊಂದಿಗೆ ಬದಲಾಯಿಸಲು ಪ್ರಾರಂಭಿಸಿದೆ. ಆದರೆ ಕಾಮಗಾರಿ ಮುಗಿಯೋಕೆ ಇನ್ನೂ 5-6 ತಿಂಗಳು ಬೇಕಾಗಬಹುದು. 4 ಕಿ.ಮೀ ಉದ್ದದ ಮೇಲ್ಸೇತುವೆಯ ಉದ್ದಕ್ಕೂ ಹಳೆಯ ಕೇಬಲ್‍ಗಳು ಮತ್ತು ಅದಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ನಡೆಸೋಕೆ 30 ಕೋಟಿ ವೆಚ್ಚ ತಗುಲಬಹುದೆಂದು ಅಂದಾಜಿಸಲಾಗಿದೆ.

    ಕೇಬಲ್ ಅಳವಡಿಕೆ ಕಾರ್ಯ ಕಳೆದ 4-5 ತಿಂಗಳಿನಿಂದ ನಡೆದ್ರೂ ಕಾಮಗಾರಿ ಪ್ರಾಪರ್ ಆಗಿ ನಡೆದಿಲ್ಲ. ಹಳೆಯ ಕೇಬಲ್‍ಗಳಿಗೆ ಅತ್ಯಾಧುನಿಕ ಕೇಬಲ್ ಅಳವಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಮೇಲ್ಸೇತುವೆಯ 102 ಮತ್ತು 103ನೇ ಕಂಬಗಳ ನಡುವೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಈ ಮೇಲ್ಸೇತುವೆ ಮೇಲೆ ವಾಹನ ಸಂಚಾರವನ್ನು 2021ರ ಡಿಸೆಂಬರ್ 25ರಿಂದ ನಿಬರ್ಂಧಿಸಲಾಗಿತ್ತು. ಇದನ್ನೂ ಓದಿ: ಪ್ರಿಯಕರನಿಗಾಗಿ 6 ವರ್ಷದ ಮಗಳೊಂದಿಗೆ ಭಾರತಕ್ಕೆ ಹಾರಿಬಂದ 49ರ ಪೋಲೆಂಡ್‌ ಮಹಿಳೆ

    ಕೇಬಲ್ ಸಮಸ್ಯೆ ಬಗ್ಗೆ ತಜ್ಞರು ಹೇಳೋ ಪ್ರಕಾರ, ಒಂದು ಕಂಬದಿಂದ ಇನ್ನೊಂದು ಕಂಬದ ನಡುವೆ ಜೋಡಿಸುವ ಸೆಗ್ಮೆಂಟ್‍ನಲ್ಲಿ ತೂತು ಮಾಡಿ ಕೇಬಲ್ ತೂರಿಸಿ ಎಳೆದು ಬೋಲ್ಟ್ ಹಾಕಲಾಗುತ್ತದೆ. ಕೇಬಲ್‍ಗಳನ್ನು ಎಳೆದು ಕಟ್ಟಿದ ಜಾಗವನ್ನು ಕಾಂಕ್ರೀಟ್‍ನಿಂದ ತುಂಬಿ ಗಟ್ಟಿಗೊಳಿಸಲಾಗುತ್ತದೆ. ತುಮಕೂರು ರಸ್ತೆ ಮೇಲ್ಸೇತುವೆಯಲ್ಲಿ ಅಳವಡಿಸಿದ ನಾಲ್ಕೈದು ಕೇಬಲ್‍ಗಳಲ್ಲಿ ಕೆಲವು ಶಿಥಿಲವಾಗಿರುವ ಸಾಧ್ಯತೆ ಇದೆ ಅಂತಾರೆ.

    ರಾಜ್ಯದ ಅರ್ಧ ಜಿಲ್ಲೆಗಳು, ಹೊರ ರಾಜ್ಯಗಳಿಗೆ ಇದೇ ಫ್ಲೈಓವರ್ ಮೂಲಕವಾಗಿಯೇ ಭಾರೀ ಗಾತ್ರದ ವಾಹನಗಳು ಸಂಚರಿಸಬೇಕು. ಆದರೆ ಪೀಕ್ ಹವರ್ ನಲ್ಲಿ ಸಂಚಾರಕ್ಕೆ ನಿಬರ್ಂಧ ಇರೋದ್ರಿಂದ ಭಾರೀ ಗಾತ್ರದ ವಾಹನ ಸವಾರರು ನಿತ್ಯ ಪರದಾಡ್ತಿದ್ದಾರೆ. ಈ ಪರದಾಟ ಮುಂದಿನ ವರ್ಷದ ತನಕವೂ ಇರಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರಿನ ಫ್ಲೈಓವರ್‌ನಲ್ಲೇ ಸ್ಕೂಟರ್ ಅಡ್ಡಗಟ್ಟಿ 1.70 ಕೋಟಿ ರೂ. ಮೌಲ್ಯದ ಚಿನ್ನ ದರೋಡೆ

    ಬೆಂಗಳೂರಿನ ಫ್ಲೈಓವರ್‌ನಲ್ಲೇ ಸ್ಕೂಟರ್ ಅಡ್ಡಗಟ್ಟಿ 1.70 ಕೋಟಿ ರೂ. ಮೌಲ್ಯದ ಚಿನ್ನ ದರೋಡೆ

    ಬೆಂಗಳೂರು: ನಗರದ ಕೆ.ಆರ್. ಮಾರ್ಕೆಟ್ (K.R. Market) ಫ್ಲೈಓವರ್‌ನಲ್ಲೇ (Flyover) ಸಿನಿಮೀಯ ಶೈಲಿಯಲ್ಲಿ ದರೋಡೆ ನಡೆದಿದೆ. ಚಿನ್ನ ವ್ಯಾಪಾರಿಯನ್ನು ಅಡ್ಡಗಟ್ಟಿ ದುಷ್ಕರ್ಮಿಗಳು ದರೋಡೆ (Bengaluru Robbery) ಮಾಡಿ ಎಸ್ಕೇಪ್ ಆಗಿದ್ದಾರೆ.

    3 ಕೆಜಿ 780 ಗ್ರಾಂ ತೂಕದ ಸುಮಾರು 1.70 ಕೋಟಿ ರೂ. ಮೌಲ್ಯದ ಚಿನ್ನವನ್ನು ದರೋಡೆಕೋರರು ದೋಚಿದ್ದಾರೆ. ಕೆಲವೇ ಸೆಕೆಂಡ್‌ಗಳಲ್ಲಿ ಈ ದರೋಡೆ ನಡೆದಿರುವುದು ಬೆಂಗಳೂರಿಗರನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಇದನ್ನೂ ಓದಿ: ಮದುವೆಯಾದ 2 ಗಂಟೆಯಲ್ಲೇ ಪತ್ನಿಗೆ ತಲಾಖ್ ನೀಡಿದ ಪತಿ

    ಚಿನ್ನದ ವ್ಯಾಪಾರಿ ತಮ್ಮ ಸ್ಕೂಟರ್‌ನಲ್ಲಿ ಚಿನ್ನ ಇಟ್ಟುಕೊಂಡು ಫ್ಲೈಓವರ್‌ನಲ್ಲೇ ಹೋಗುತ್ತಿದ್ದರು. ಈ ವೇಳೆ ಮತ್ತೊಂದು ಬೈಕ್‌ನಲ್ಲಿ ಬಂದಿದ್ದ ಇಬ್ಬರು ಅರೋಪಿಗಳು, ಫ್ಲೈಓವರ್‌ ಮೇಲೆ ಚಲಿಸುತಿದ್ದ ಬೈಕ್‌ಗೆ ಅಡ್ಡ ಬಂದು ಬೈಕ್ ಸ್ಲೋ ಮಾಡಿಸಿದ್ದಾರೆ. ನಂತರ ನೇರವಾಗಿ ಸ್ಕೂಟರ್‌ನಲ್ಲಿ ಚಿನ್ನ ಇದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

    ದರೋಡೆಗೊಳಗಾದ ವ್ಯಾಪಾರಿ ಕಾಟನ್‌ಪೇಟೆ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನಾ ಸ್ಥಳದಲ್ಲಿ ಸಿಸಿಟಿವಿ ಇಲ್ಲ. ಈ ಸಂಬಂಧ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ಗಂಡು.. ಬೀದಿಯಲ್ಲಿ ಹೆಣ್ಣು; ಐಷಾರಾಮಿ ಜೀವನಕ್ಕೆ ಹೆಣ್ಣಾಗಿದ್ದ ಐನಾತಿ ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರೀ ಮಳೆಗೆ ಮಂಗಳೂರಿನ ಪಂಪ್‍ವೆಲ್ ಫ್ಲೈಓವರ್ ಕೆಳಭಾಗ ಜಲಾವೃತ!

    ಭಾರೀ ಮಳೆಗೆ ಮಂಗಳೂರಿನ ಪಂಪ್‍ವೆಲ್ ಫ್ಲೈಓವರ್ ಕೆಳಭಾಗ ಜಲಾವೃತ!

    ಮಂಗಳೂರು: ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆರಾಯ ಅಬ್ಬರಿಸಿದ್ದಾನೆ. ಸಂಜೆವರೆಗೂ ಸಾಧಾರಣವಾಗಿ ಸುರಿಯುತ್ತಿದ್ದ ಮಳೆ ಬಳಿಕ ಭಾರೀ ಪ್ರಮಾಣದಲ್ಲಿ ಸುರಿದಿದೆ. ಮಂಗಳೂರು ನಗರ (Rain in Mangaluru) ಸೇರಿ ಜಿಲ್ಲಾದ್ಯಂತ ಸುರಿದ ಭಾರೀ ಮಳೆಗೆ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಹರಿಯಿತು. ನಗರದೊಳಗಿನ ಪ್ರಮುಖ ರಸ್ತೆಗಳು ಕೆಲ ಕಾಲ ಜಲಾವೃತವಾಗಿ ಸಂಚಾರಕ್ಕೆ ತೊಡಕಾಯಿತು.

    ಮುಂಗಾರು ಮಳೆ ಎಂಟ್ರಿ ಕೊಟ್ರೂ ರಾಜ್ಯದ ಕರಾವಳಿಯಲ್ಲಿ ಸರಿಯಾಗಿ ಮಳೆ ಸುರಿದಿಲ್ಲ. ಕೆಲ ದಿನಗಳಿಂದ ಆಗ್ಗಾಗ್ಗೆ ಬರುತ್ತಿದ್ದ ಮಳೆ ಮತ್ತೆ ಕಣ್ಮರೆಯಾಗಿ ಬಿಸಿಲಿನ ವಾತಾವರಣವಿತ್ತು. ಜುಲೈ 3 ರಿಂದ 5 ವರೆಗೂ ಕರಾವಳಿಯಲ್ಲಿ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ (Weather Department) ಸೂಚನೆ ನೀಡಿದೆ. ಸೋಮವಾರ ಸಂಜೆ ವೇಳೆಗೆ ಸುಮಾರು ಎರಡು ಗಂಟೆಗಳ ಕಾಲ ಸುರಿದ ಭಾರೀ ಮಳೆ ಜನ ಜೀವನವನ್ನೇ ಅಸ್ತವ್ಯಸ್ತವನ್ನಾಗಿಸಿತ್ತು. ನಗರದ ಪ್ರಮುಖ ರಸ್ತೆಗಳು ಕೆರೆಯಂತಾಗಿ ವಾಹನ ಸವಾರರು ಪರದಾಡುವಂತಾಗಿತ್ತು. ಇದನ್ನೂ ಓದಿ: ಜಸ್ಟ್‌ 999 ರೂ.ಗೆ ಜಿಯೋ ಭಾರತ್‌ 4ಜಿ ಫೋನ್‌ ಬಿಡುಗಡೆ – ಗುಣ ವೈಶಿಷ್ಟ್ಯಗಳೇನು?

    ನಗರದ ಹೆಬ್ಬಾಗಿಲು ಎಂದೆನಿಸಿಕೊಂಡಿರುವ ಪಂಪ್‍ವೆಲ್ ಸರ್ಕಲ್‍ ನಲ್ಲಿ (Pumpwell Circle) ಪಕ್ಕದ ಚರಂಡಿ ತುಂಬಿ ರಸ್ತೆ ಜಲಾವೃತವಾಗಿತ್ತು. ಸುಮಾರು ಅರ್ಧ ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ ಕಿಲೋ ಮೀಟರ್ ಗಟ್ಟಲೆ ವಾಹನಗಳು ನಿಂತಿದ್ದವು. ಪಂಪ್‍ವೆಲ್ ಸರ್ಕಲ್‍ನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಫ್ಲೈಓವರ್ ಆದಂದಿನಿಂದ ಈ ಸಮಸ್ಯೆ ಇದೆ. ಫ್ಲೈಓವರ್‍ನ ಅಡಿ ಭಾಗದಲ್ಲಿ ನಗರಕ್ಕೆ ಹೋಗೋ ವಾಹನಗಳಿಗೆ ರಸ್ತೆಯಿದ್ದು ಅಲ್ಲೇ ಸಮೀಪದಲ್ಲಿ ಚರಂಡಿ ಇದೆ.

    ಈ ಚರಂಡಿಯ ಒಂದು ಭಾಗ ಎತ್ತರವಿದ್ದು ಇನ್ನೊಂದು ಭಾಗ ಕೆಳಗಿದೆ. ಹೀಗಾಗಿ ನೀರು ಹರಿದು ಹೋಗಬೇಕಿದ್ದ ಭಾಗದಲ್ಲಿ ಎತ್ತರ ಇರೋದ್ರಿಂದ ನೀರು ರಸ್ತೆಗೆ ನುಗ್ಗಿ ಬರುತ್ತದೆ. ಕಳೆದ ಐದಾರು ವರ್ಷದಿಂದ ಈ ಸಮಸ್ಯೆ ಇದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕೂತಿದ್ದಾರೆ. ಹೀಗಾಗಿ ಈ ಸಮಸ್ಯೆ ಪ್ರತೀ ವರ್ಷದ ಮೊದಲ ಮಳೆಗೆ ಇದ್ದೇ ಇರುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಮಾಡಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಪ್ರಯೋಜನ ಆಗಿಲ್ಲ.

    ಈ ರೀತಿಯ ಸಮಸ್ಯೆ ನಗರದ ಹಲವು ತಗ್ಗು ಪ್ರದೇಶದಲ್ಲಿ ಇದೆ. ಕೊಟ್ಟಾರ ಚೌಕಿ, ಮಾಲೆಮಾರ್ ಸೇರಿದಂತೆ ಹಲವು ಕಡೆ ರಸ್ತೆಯಲ್ಲಿ ನೀರು ತುಂಬಿತ್ತು. ನಗರದಲ್ಲಿ ಮಾತ್ರವಲ್ಲದೆ ಜಿಲ್ಲೆಯ ಬಂಟ್ವಾಳ, ಪುತ್ತೂರು ,ಬೆಳ್ತಂಗಡಿಯಲ್ಲೂ ಭಾರೀ ಮಳೆಯಾಗಿದೆ. ಇಂದು ಮತ್ತು ನಾಳೆಯೂ ಭಾರೀ ಮಳೆಯಾಗುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದ್ದು ಜನ ಎಚ್ಚರದಿಂದ ಇರುವಂತೆ ಜಿಲ್ಲಾಡಳಿತವೂ ಮನವಿ ಮಾಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫ್ಲೈಓವರ್‌ನಿಂದ ರೈಲ್ವೇ ಹಳಿಗೆ ಬಿದ್ದ ಕಾರು – ಐವರಿಗೆ ಗಂಭೀರ ಗಾಯ

    ಫ್ಲೈಓವರ್‌ನಿಂದ ರೈಲ್ವೇ ಹಳಿಗೆ ಬಿದ್ದ ಕಾರು – ಐವರಿಗೆ ಗಂಭೀರ ಗಾಯ

    ಮುಂಬೈ: ಕಾರೊಂದು ಮೇಲ್ಸೇತುವೆ (Flyover) ಮೇಲಿಂದ ರೈಲ್ವೇ ಹಳಿಗೆ (Railway Track) ಬಿದ್ದ ಪರಿಣಾಮ ಐವರು ಗಂಭೀರ ಗಾಯಗೊಂಡ ಘಟನೆ ಭಾನುವಾರ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ.

    ಬೆಳಿಗ್ಗೆ 7:30ರ ಸುಮಾರಿಗೆ ನಾಗ್ಪುರದ (Nagpur) ಬೋರ್ಖೆಡಿ ಮೇಲ್ಸೇತುವೆಯ ಮೇಲೆ ಕಾರು ಚಲಿಸುತ್ತಿತ್ತು. ಈ ವೇಳೆ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಜೆಪಿ ನಡ್ಡಾ ಅವ್ರು ದೆಹಲಿಗೆ ಬನ್ನಿ ಎಂದಿದ್ದಕ್ಕೆ ಹೋಗುತ್ತಿದ್ದೇನೆ: ಬಿಎಸ್‍ವೈ

    ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದೆ. ಅತಿ ವೇಗದಲ್ಲಿ ಕಾರು ಚಲಾಯಿಸಿದ ಪರಿಣಾಮ ಈ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

    ಸ್ಥಳಕ್ಕೆ ಬುಟಿಬೋರಿ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣವೇನು ಎಂದು ತನಿಖೆ ಬಳಿಕ ತಿಳಿಯಲಿದೆ. ಸದ್ಯ ಗಾಯಾಳುಗಳು ಚೇತರಿಸಿಕೊಂಡ ಬಳಿಕ ಅವರಿಂದ ಮಾಹಿತಿ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇಂದು ನಂದಿಗಿರಿಧಾಮ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧ ತೆರವು; ನಾಳೆ ಬಂದ್ – ಜಿಲ್ಲಾಡಳಿತ ಮರು ಆದೇಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಗಳಿಗೆ ವಿಚ್ಛೇದನ ಕೊಡಲು ಪ್ರೋತ್ಸಾಹಿಸಿದ ಅತ್ತೆಯನ್ನೇ ಹತ್ಯೆಗೈದ ಅಳಿಯ

    ಮಗಳಿಗೆ ವಿಚ್ಛೇದನ ಕೊಡಲು ಪ್ರೋತ್ಸಾಹಿಸಿದ ಅತ್ತೆಯನ್ನೇ ಹತ್ಯೆಗೈದ ಅಳಿಯ

    ಅಮರಾವತಿ: ಮಗಳನ್ನು ವಿಚ್ಛೇದನ (Divorce) ಕೊಡುವಂತೆ ಪ್ರೋತ್ಸಾಹಿಸಿದ ಕಾರಣಕ್ಕಾಗಿ ಅತ್ತೆಯನ್ನೇ (Mother-In-Law) ಅಳಿಯ ಹತ್ಯೆ ಮಾಡಿದ ಘಟನೆ ಆಂಧ್ರಪ್ರದೇಶದ (Andhra Pradesh) ವಿಜಯವಾಡದ (Vijayawada) ಫ್ಲೈಓವರ್ (Flyover) ಮೇಲೆ ಶನಿವಾರ ನಡೆದಿದೆ.

    ನಾಗಮಣಿ (47) ಕೊಲೆಯಾದ ಮಹಿಳೆ. ಆರೋಪಿ ರಾಜೇಶ್ (37) ಸುಮಾರು 9 ಗಂಟೆಯ ವೇಳೆಗೆ ಆತನ ಅತ್ತೆಯನ್ನು ಚನುಮೋಲು ವೆಂಕಟರಾವ್ ಫ್ಲೈಓವರ್ ಮೇಲೆ ಕೊಂದಿದ್ದಾನೆ. ಆರೋಪಿ ರಾಜೇಶ್‌ಗೆ ಆತನ ಹೆಂಡತಿ ವಿಚ್ಛೇದನ ನೀಡಲು ಮುಂದಾಗಿದ್ದಳು. ಈ ವಿಚ್ಛೇದನದ ಅರ್ಜಿ ನ್ಯಾಯಾಲಯದಲ್ಲಿ ಬಾಕಿ ಇದ್ದು, ಮಗಳಿಗೆ ವಿಚ್ಛೇದನ ನೀಡುವಂತೆ ಪ್ರೋತ್ಸಾಹಿಸಿದ್ದಕ್ಕಾಗಿ ನಾಗಮಣಿಯನ್ನು ಹತ್ಯೆ ಮಾಡಿದ್ದಾನೆ ಎಂದು ವಿಜಯವಾಡ ಪಶ್ಚಿಮ ಎಸಿಪಿ ಹನುಮಂತ ರಾವ್ ತಿಳಿಸಿದ್ದಾರೆ. ಇದನ್ನೂ ಓದಿ: ನವಜೋಡಿ ಸೇರಿ ಐವರು ಸಂಬಂಧಿಗಳನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ

    ಪೊಲೀಸರ ಪ್ರಕಾರ, ವಿಚ್ಛೇದನ ನೀಡುವಂತೆ ತನ್ನ ಮಗಳಿಗೆ ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸಿದ ಹಿನ್ನೆಲೆ ರಾಜೇಶ್ ನಾಗಮಣಿಯ ಮೇಲೆ ದ್ವೇಷ ಹೊಂದಿದ್ದ. ತಾನು ಪತ್ನಿಯಿಂದ ದೂರವಾಗಲು ಅತ್ತೆ-ಮಾವಂದಿರೇ ಕಾರಣ ಎಂದು ಭಾವಿಸಿ ಅತ್ತೆಯನ್ನು ತೆಂಗಿನಕಾಯಿ ತುಂಡರಿಸುವ ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: 20 ಜನರ ಮೇಲೆ ದಾಳಿ ಮಾಡಿದ್ದ ಮೋಸ್ಟ್ ವಾಂಟೆಡ್ ಕೋತಿ ಕೊನೆಗೂ ಸೆರೆ

    ಘಟನೆಯಿಂದ ನಾಗಮಣಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಆರೋಪಿಯ ಪತ್ತೆಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ರಾಜೇಶ್ ಮನೆಮನೆಗೆ ಬಟ್ಟೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದು, ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಮಾಜಿ ಪ್ರಿಯಕರನ ಕಿಡ್ನಾಪ್ – 21 ಲಕ್ಷ ರೂ. ದೋಚಿದ ಪ್ರಿಯತಮೆ

  • ಉದ್ಘಾಟನೆ ದಿನವೇ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ

    ಉದ್ಘಾಟನೆ ದಿನವೇ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ

    ಮಂಡ್ಯ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ (Bangalore Mysore Expressway) ಉದ್ಘಾಟನೆಯಾದ ದಿನವೇ ನೂತನ ಎಕ್ಸ್‌ಪ್ರೆಸ್ ಹೈವೇನಲ್ಲಿ ಭೀಕರ ಅಪಘಾತ ಸಂಭವಿಸಿದೆ.

    ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿದ್ದ ಕಾರು ಮಂಡ್ಯ (Mandya) ಜಿಲ್ಲೆಯ ಮದ್ದೂರಿನ (Maddur) ಎಕ್ಸ್‍ಪ್ರೆಸ್ ವೇ ಫ್ಲೈಓವರ್ (Flyover) ಬಳಿ ಕಾರು ಪಲ್ಟಿಯಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿಯಾಗಿ ಕಾರು ಪಲ್ಟಿಯಾಗಿದೆ.

    ಪಲ್ಟಿಯಾದ ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಗುಡಿಸಲಿಗೆ ಬೆಂಕಿ ಐವರು ಸಜೀವ ದಹನ

  • ಸ್ಯಾಂಕಿ ರಸ್ತೆ ವಿಸ್ತರಣೆಗೆ ಮುಂದಾದ ಬಿಬಿಎಂಪಿ

    ಸ್ಯಾಂಕಿ ರಸ್ತೆ ವಿಸ್ತರಣೆಗೆ ಮುಂದಾದ ಬಿಬಿಎಂಪಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿರೋಧದ ನಡುವೆಯೂ ರಾತ್ರೋರಾತ್ರಿ ಬಸವೇಶ್ವರ ಪುತ್ಥಳಿ ತೆರವು

    ವಿರೋಧದ ನಡುವೆಯೂ ರಾತ್ರೋರಾತ್ರಿ ಬಸವೇಶ್ವರ ಪುತ್ಥಳಿ ತೆರವು

    ಹುಬ್ಬಳ್ಳಿ: ಸಾಕಷ್ಟು ವಿರೋಧಗಳ ನಡುವೆಯೂ ಫ್ಲೈಓವರ್ (Flyover) ನಿರ್ಮಾಣಕ್ಕಾಗಿ ರಾತ್ರೋರಾತ್ರಿ ಬಸವೇಶ್ವರ ಪುತ್ಥಳಿ (Basaveshwara Statue) ತೆರವು ಮಾಡಲಾಗಿದೆ.

    ನಗರದಲ್ಲಿ (Hubballi) ಸುಗಮ ಸಂಚಾರಕ್ಕಾಗಿ ಹಲವು ಕಡೆ ಫ್ಲೈಓವರ್ ನಿರ್ಮಾಣ ಮಾಡಲಾಗುತ್ತಿದ್ದು, ಇದರಲ್ಲಿ ಒಂದು ಫ್ಲೈಓವರ್ ಬಸವವನದಲ್ಲಿರುವ ಬಸವೇಶ್ವರರ ಪುತ್ಥಳಿ ಮೇಲೆ ಹಾದುಹೋಗಲಿದೆ. ಆದರೆ ಇದಕ್ಕೆ ಲಿಂಗಾಯತ ಸಮುದಾಯದಿಂದ ತೀವ್ರ ವಿರೋಧವಿದೆ. ಹೀಗಾಗಿ ವಾಣಿಜ್ಯನಗರಿ ಹುಬ್ಬಳ್ಳಿಯ ಮಹತ್ವದ ಯೋಜನೆಯಲ್ಲಿ ಒಂದಾಗಿರುವ ಫ್ಲೈಓವರ್ ಈಗಾಗಲೇ ಜಿಲ್ಲಾಡಳಿತ, ಮಹಾನಗರ ಪಾಲಿಕೆ ವತಿಯಿಂದ ಸಾಕಷ್ಟು ಬಾರಿ ಲಿಂಗಾಯತ ಮುಖಂಡರ ಜೊತೆಗೆ ಸಭೆ ನಡೆಸಲಾಗಿತ್ತು.

    ಸಭೆಗಳಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು ಜೊತೆಗೆ ಒಮ್ಮತವು ಬಂದಿರಲಿಲ್ಲ. ಹೀಗಾಗಿ ಪುತ್ಥಳಿ ತೆರವು ಕಾರ್ಯವನ್ನು ಇಷ್ಟು ದಿನ ನಿಲ್ಲಿಸಲಾಗಿತ್ತು. ಆದರೆ ಸೋಮವಾರ ತಡರಾತ್ರಿ ಏಕಾಏಕಿ ತಾಂತ್ರಿಕ ಉಪಕರಣಗಳ ಮೂಲಕ ಬಸವೇಶ್ವರರ ಮೂರ್ತಿಯನ್ನು ತೆರವು ಮಾಡಲಾಗಿದೆ. ಇದನ್ನೂ ಓದಿ: ಕೇಂದ್ರ ಬಜೆಟ್ ಮೇಲೆ ಜಗತ್ತು ಕಣ್ಣಿಟ್ಟಿದೆ: ಮೋದಿ

    ಫ್ಲೈಓವರ್ ಕಾಮಗಾರಿ ಪೂರ್ಣಗೊಂಡ ಬಳಿಕ ಮತ್ತೆ ಬಸವೇಶ್ವರರ ಮೂರ್ತಿಯನ್ನು ಪ್ರತಿಷ್ಠಾಪಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಆದರೆ ಇದಕ್ಕೆ ಲಿಂಗಾಯತ ಸಮುದಾಯ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್‍ಗೆ ಜೀವ ಬೆದರಿಕೆ- ವ್ಯಕ್ತಿ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲಿಂದ ಬಿದ್ದು ಬೈಕ್ ಸವಾರ ಸಾವು

    ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲಿಂದ ಬಿದ್ದು ಬೈಕ್ ಸವಾರ ಸಾವು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Bengaluru) ನಡೆದ ಅಪಘಾತಕ್ಕೆ ದ್ವಿಚಕ್ರ ವಾಹನ ಸವಾರರೊಬ್ಬರು ಬಲಿಯಾಗಿದ್ದಾರೆ. ಬೈಕ್‍ನಲ್ಲಿ (Bike) ಸಂಚರಿಸುತ್ತಿದ್ದಾಗ ಫ್ಲೈಓವರ್‌ನ ತಡೆಗೊಡೆಗೆ ಗುದ್ದಿ ಫ್ಲೈಓವರ್ ಮೇಲಿಂದ ಕೆಳಕ್ಕೆ ಬಿದ್ದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿಯ (Electronics City) ನೀಲಾದ್ರಿ ಕ್ರಾಸ್ ಬಳಿ ನಡೆದಿದೆ.

    ಆಂಧ್ರ ಮೂಲದ ಕೌರಿ ನಾಗಾರ್ಜುನ (33) ಮೃತ ದುರ್ದೈವಿ. ಬೆಂಗಳೂರಿನಿಂದ ಹೊಸೂರು (Hosur) ಕಡೆ ನಾಗಾರ್ಜುನ ಪಲ್ಸರ್ ಬೈಕ್‍ನಲ್ಲಿ ಹೊರಟಿದ್ದರು. ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ಕ್ರಾಸ್ ಬಳಿ ಬರುತ್ತಿದ್ದಂತೆ ಫ್ಲೈಓವರ್ ಇಳಿಯಬೇಕಾಗಿತ್ತು. ಈ ವೇಳೆ ಏಕಾಏಕಿ ಬೈಕ್ ಕಂಟ್ರೋಲ್‍ಗೆ ಬಾರದೆ ಸ್ಕಿಡ್ ಆಗಿ ಫ್ಲೈಓವರ್‌ನ ತಡೆಗೊಡೆಗೆ ಗುದ್ದಿ ಮೇಲಿಂದ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಇದನ್ನೂ ಓದಿ: ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಪತಿ ಜಾನ್ ಶಾ ನಿಧನ

    ತಕ್ಷಣ ಸಾರ್ವಜನಿಕರು ಸ್ಥಳೀಯ ಖಾಸಗಿ ಆಸ್ಪತ್ರೆಗೆ (Hospital) ದಾಖಲಿಸಿದ್ದರು. ಆ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ನಾಗಾರ್ಜುನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ಅವರಿಗೆ ಗಂಡೆದೆ ಇದೆ – ಆರ್.ಅಶೋಕ್

    Live Tv
    [brid partner=56869869 player=32851 video=960834 autoplay=true]