Tag: Flyover Slab

  • ‘ಪಬ್ಲಿಕ್ ಟಿವಿ’ ವರದಿ ಇಂಪ್ಯಾಕ್ಟ್: ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಸ್ಲಾಬ್ ಕುಸಿತ – ಟೋಲ್ ಸಿಬ್ಬಂದಿಯಿಂದ ದುರಸ್ತಿ

    ‘ಪಬ್ಲಿಕ್ ಟಿವಿ’ ವರದಿ ಇಂಪ್ಯಾಕ್ಟ್: ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಸ್ಲಾಬ್ ಕುಸಿತ – ಟೋಲ್ ಸಿಬ್ಬಂದಿಯಿಂದ ದುರಸ್ತಿ

    ನೆಲಮಂಗಲ: ನೆಲಮಂಗಲ (Nelamangala) ಹಾಗೂ ಗೊರಗುಂಟೆಪಾಳ್ಯ (Gorguntepalya) ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರಿಗೆ ಜೀವಕ್ಕೆ ಕುತ್ತು ಬರುವ ಹಾಗೇ ಗುಂಡಿಗಳ ಸಮಸ್ಯೆಯಿತ್ತು. ಇದಕ್ಕೆ ಸಂಬಂಧಿಸಿದಂತೆ ‘ಪಬ್ಲಿಕ್ ಟಿವಿ’ (PUBLiC TV) ವರದಿ ಮಾಡಿತ್ತು.ಇದನ್ನೂ ಓದಿ: ಬಾಲಿವುಡ್‌ನತ್ತ ನಟ- ‘ಜಬ್ ವಿ ಮೆಟ್’ ನಿರ್ದೇಶಕನ ಸಿನಿಮಾದಲ್ಲಿ ಫಹಾದ್ ಫಾಸಿಲ್

    ಪಬ್ಲಿಕ್ ಟಿವಿಯಲ್ಲಿ ವರದಿ ಬಿತ್ತರವಾದ ಹಿನ್ನೆಲೆ ಟೋಲ್ ನಿರ್ವಹಣೆಯ ಸಿಬ್ಬಂದಿ, ಕುಸಿದು ಬಿದ್ದ ಬೃಹತ್ ಸ್ಲಾಬ್‌ಗಳನ್ನು ದುರಸ್ತಿ ಮಾಡಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ನಗರದ ಕುಣಿಗಲ್ ಬೈಪಾಸ್ ಬಳಿ ಸ್ಲಾಬ್‌ಗಳು ಕುಸಿದಿದ್ದವು. ವರದಿ ಬಳಿಕ ಓಡೋಡಿ ಬಂದು ಟೋಲ್ ಸಿಬ್ಬಂದಿಗಳು ದುರಸ್ತಿ ಕಾರ್ಯ ಆರಂಭಿಸಿದ್ದಾರೆ.

    ವಾಹನ ಸವಾರರಿಗೆ ಯಮಸ್ವರೂಪಿ ಮೃತ್ಯು ಕೂಪವಾಗಿದ್ದ ಬೃಹತ್ ಗುಂಡಿ ಸ್ಲಾಬ್‌ಗಳನ್ನು ಅಳವಡಿಸಿದ್ದಾರೆ. ಕಂಡು ಕಾಣದಂತೆ ಇದ್ದ ಟೋಲ್ ನಿರ್ವಹಣೆ ಕಂಪನಿಯ ಸಿಬ್ಬಂದಿ ಬೆಂಗಳೂರು ಹಾಗೂ ತುಮಕೂರು ರಾಷ್ಟ್ರೀಯ ಹೆದ್ದಾರಿಯ (Bengaluru Tumkuru National Highway) ಗುಂಡಿಯನ್ನು ದುರಸ್ತಿ ಮಾಡಿದ್ದು, ಇನ್ನೂ ಸಾಕಷ್ಟು ದುರಸ್ತಿ ಕೆಲಸ ಮಾಡಬೇಕಿದೆ. ರಸ್ತೆಯಲ್ಲಿ ಗುಂಡಿ ಗಂಡಾಂತರ ಜನಾಕ್ರೋಶದ ವರದಿ ಪ್ರಸಾರ ಮಾಡಿದ್ದ ‘ಪಬ್ಲಿಕ್ ಟಿವಿ’ಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಹರಿಯಾಣ ವಿಧಾನಸಭೆ ಚುನಾವಣೆ – ಆಪ್, ಕಾಂಗ್ರೆಸ್‌ ಮೈತ್ರಿ ಹಿಂದಿನ ಲೆಕ್ಕಾಚಾರ ಏನು?

  • ಸರ್ವಿಸ್ ರಸ್ತೆಯಲ್ಲಿ ಗುಂಡಿ ಗಂಡಾಂತರ: ಹೆದ್ದಾರಿಯಲ್ಲಿ ಕುಸಿದ ಬೃಹತ್ ಸ್ಲಾಬ್‌ಗಳು

    ಸರ್ವಿಸ್ ರಸ್ತೆಯಲ್ಲಿ ಗುಂಡಿ ಗಂಡಾಂತರ: ಹೆದ್ದಾರಿಯಲ್ಲಿ ಕುಸಿದ ಬೃಹತ್ ಸ್ಲಾಬ್‌ಗಳು

    ನೆಲಮಂಗಲ: ಸಿಲಿಕಾನ್ ಸಿಟಿಯಲ್ಲಿ ವಾಹನ ಚಾಲಕರಿಗೆ ಯಾವಾಗಲೂ ಟ್ರಾಫಿಕ್ ಸಮಸ್ಯೆ, ಮಳೆಯ ಸಂದರ್ಭದಲ್ಲಿ ಗುಂಡಿಯ ಸಮಸ್ಯೆ. ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇರುತ್ತದೆ.

    ಕೆಲ ವರ್ಷಗಳ ಹಿಂದೆ ದಾಸರಹಳ್ಳಿಯ (Dasarahalli) ಎಂಟನೇ ಮೈಲಿ ಬಳಿ ಫ್ಲೈಓವರ್‌ ರಸ್ತೆಯ ಪಿಲ್ಲರ್‌ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ವಾಹನಗಳಿಗೆ ನಿಷೇಧ ಹೇರಲಾಯಿತು. ಇದರಿಂದಾಗಿ ಸಾಕಷ್ಟು ಸಮಸ್ಯೆಯಾಗಿ ಪ್ರತಿನಿತ್ಯ ಟ್ರಾಫಿಕ್ ಜಾಮ್‌ನಿಂದಾಗಿ ಸವಾರರು ಪರಿತಪ್ಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿ ಸುದ್ದಿಗೆ ಕಾರಣವಾಗಿತ್ತು. ಇತ್ತೀಚೆಗಷ್ಟೇ ನೆಲಮಂಗಲ (Nelamangala) ಹಾಗೂ ಗೊರಗುಂಟೆಪಾಳ್ಯ (Gorguntepalya) ನಡುವಿನ ರಾಷ್ಟ್ರೀಯ ಹೆದ್ದಾರಿಯು ಈ ಟ್ರಾಫಿಕ್ ಸಮಸ್ಯೆಗಳಿನ್ನು ತೆರವುಗೊಳಿಸಿ, ವಾಹನಗಳಿಗೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿತ್ತು.ಇದನ್ನೂ ಓದಿ: ಪಶ್ಚಿಮ ಬಂಗಾಳದ ʼಅಪರಾಜಿತ ಬಿಲ್‌ʼ ಪೋಕ್ಸೊಗಿಂತ ಭಿನ್ನ ಹೇಗೆ?

    ಇಗೀಗ ಟೋಲ್ ಕಂಪನಿಯ ನಿರ್ಲಕ್ಷ್ಯದಿಂದ ಮತ್ತೊಂದು ಭಾರೀ ಅನಾಹುತಕ್ಕೆ ಕಾರಣವಾಗಿದೆ. ನೆಲಮಂಗಲದ ಕುಣಿಗಲ್ ಬೈಪಾಸ್, ಮಾಕಳಿ, ಮಾದನಾಯಕನಹಳ್ಳಿ, ಮಾದಾವಾರ ರಸ್ತೆಯ ಬಳಿ ಬೃಹತ್ ಗುಂಡಿಗಳಿಂದ ಸವಾರರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಂದ ಪರಿಣಾಮ ರಸ್ತೆಯ ಪಕ್ಕದ ಬೃಹತ್ ಸ್ಲಾಬ್‌ಗಳು ಕುಸಿದು ವಾಹನ ಸವಾರರ ಜೀವಕ್ಕೆ ಮೃತ್ಯು ಕೂಪವಾಗಿ ಪರಿಣಮಿಸಿವೆ.

    ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುವ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾಗೂ ರಾಜ್ಯದ ಸುಮಾರು 17 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೃಹತ್ ಗುಂಡಿಗಳ ಗಂಡಾಂತರದಿಂದ ಪರಿಸ್ಥಿತಿ ಹದಗೆಟ್ಟಿದೆ. ದ್ವಿಚಕ್ರ ವಾಹನ ಸವಾರರು ಸ್ವಲ್ಪ ಯಾಮಾರಿದರೂ ಜೀವಕ್ಕೆ ಸಂಚಕಾರ ತರಲಿದೆ.ಇದನ್ನೂ ಓದಿ: Breaking | ರೇಣುಕಾಸ್ವಾಮಿ ಕೊಲೆ ಕೇಸ್‌ – ದರ್ಶನ್‌ & ಗ್ಯಾಂಗ್‌ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

    ಪ್ರತಿನಿತ್ಯ ಲಕ್ಷಾಂತರ ರೂಪಾಯಿ ಟೋಲ್ ಹಣ ಸಂಗ್ರಹಿಸುವ ಟೋಲ್ ಕಂಪನಿ ನಿರ್ವಹಣೆ ಮಾಡಬೇಕಿದ್ದು, ಸವಾರರ ಜೀವದ ಜೊತೆಗೆ ಚಲ್ಲಾಟವಾಡುತ್ತಿದ್ದಾರೆ ಎಂದು ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಸಮಸ್ಯೆಗಳ ಆಗರವಾಗಿರುವ ನೆಲಮಂಗಲ ಗೊರಗುಂಟೆಪಾಳ್ಯ ನಡುವಿನ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಒಂದಲ್ಲ ಒಂದು ಸಮಸ್ಯೆ ಸವಾರರ ಜೀವಕ್ಕೆ ಯಮಸ್ವರೂಪಿಯಾಗಿದೆ.

  • ಭಾರೀ ಮಳೆಗೆ ಕುಸಿದ ಹಾಸನ-ಮೈಸೂರು ರಸ್ತೆಯ ಫ್ಲೈಓವರ್ ಸ್ಲ್ಯಾಬ್; ಹೆಚ್ಚಿದ ಆತಂಕ

    ಭಾರೀ ಮಳೆಗೆ ಕುಸಿದ ಹಾಸನ-ಮೈಸೂರು ರಸ್ತೆಯ ಫ್ಲೈಓವರ್ ಸ್ಲ್ಯಾಬ್; ಹೆಚ್ಚಿದ ಆತಂಕ

    – ಮಳೆ ಹೆಚ್ಚಾದರೆ ವಾಹನಗಳ ಸಂಚಾರ ಬಂದ್ ಸಾಧ್ಯತೆ

    ಹಾಸನ: ಭಾರೀ ಮಳೆಗೆ ಫ್ಲೈಓವರ್ ಸ್ಲ್ಯಾಬ್‌ಗಳು (Flyover Slab) ಹಾಗೂ ಮಣ್ಣು ಕುಸಿದಿರುವ ಘಟನೆ ಹಾಸನ (Hassan) ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹಂಗರಹಳ್ಳಿ ಗ್ರಾಮದಲ್ಲಿ ನಡೆದಿದೆ.

    ರಾಷ್ಟ್ರೀಯ ಹೆದ್ದಾರಿ-373 (National Highway) ಹಾಸನದಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ಬೇಲೂರು-ಬಿಳಿಕೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಹಂಗರಹಳ್ಳಿ ಬಳಿ ನಿರ್ಮಿಸಲಾಗಿತ್ತು. ಫ್ಲೈಓವರ್ ನಿರ್ಮಾಣ ಹಂತದಲ್ಲಿರುವಾಗಲೇ ಎರಡು ಬಾರಿ ಕುಸಿದಿದ್ದರೂ ಗುತ್ತಿಗೆದಾರ ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡಿರಲಿಲ್ಲ.

    ಇದೀಗ ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 3ನೇ ಬಾರಿಗೆ ಫ್ಲೈಓವರ್ ಸ್ಲ್ಯಾಬ್‌ಗಳು ಹಾಗೂ ತಳಪಾಯದ ಮಣ್ಣು ಕುಸಿದಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಸಂಪೂರ್ಣ ಫ್ಲೈಓವರ್ ಕುಸಿಯುವ ಆತಂಕ ಎದುರಾಗಿದೆ. ಕಳಪೆ ಕಾಮಗಾರಿಯೇ ಫ್ಲೈಓವರ್ ಕುಸಿಯಲು ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಸವಸಾಗರ ಜಲಾಶಯ ಭರ್ತಿ – ಕೃಷ್ಣಾ ನದಿಗೆ 1.80 ಲಕ್ಷ ಕ್ಯೂಸೆಕ್ ನೀರು ರಿಲೀಸ್

    ಮಳೆ ಹೆಚ್ಚಾದರೆ ವಾಹನಗಳ ಸಂಚಾರ ಬಂದ್ ಆಗುವ ಸಾಧ್ಯತೆ ಎದುರಾಗಿದೆ. ಇದನ್ನೂ ಓದಿ: ಉಡುಪಿ ಕಾಲೇಜಿನ ಲೇಡಿಸ್‌ ಟಾಯ್ಲೆಟ್‌ನಲ್ಲಿ ವೀಡಿಯೋ ಚಿತ್ರೀಕರಣ ಕೇಸ್‌ – ಬೆಂಗ್ಳೂರು FSLಗೆ ಮೊಬೈಲ್ ರವಾನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]