ಬೆಂಗಳೂರು: ಹಿಟ್ ಅಂಡ್ ರನ್‌ಗೆ (Hit And Run) ಫ್ಲೈಓವರ್ (Flyover) ಮೇಲಿಂದ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ದೇವನಹಳ್ಳಿ (Devanahalli) ಸಮೀಪದ ಬಚ್ಚಳ್ಳಿ ಗೇಟ್ ಫ್ಲೈಓವರ್ ಮೇಲೆ ನಡೆದಿದೆ.
ನೇತ್ರಾವತಿ (31) ಹಿಟ್ ಅಂಡ್ ರನ್‌ಗೆ ಬಲಿಯಾದ ಮಹಿಳೆ. ನೇತ್ರಾವತಿ ಹಾಗೂ ಪತಿ ಬೈಕಿನಲ್ಲಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಕಡೆಗೆ ಹೋಗುತ್ತಿದ್ದರು. ಈ ವೇಳೆ ಒನ್ ವೇನಲ್ಲಿ ಬಂದ ಕಾರು ಬೈಕ್‌ಗೆ ಡಿಕ್ಕಿಯಾಗಿದೆ. ಕಾರು ಗುದ್ದಿದ ರಭಸಕ್ಕೆ ಬೈಕ್‌ನಲ್ಲಿದ್ದ ನೇತ್ರಾವತಿ ಫ್ಲೈಓವರ್ ಕೆಳಗೆ ಬಿದ್ದಿದ್ದಾರೆ. ಫ್ಲೈಓವರ್ ಮೇಲಿಂದ ಬಿದ್ದಿದ್ದರಿಂದ ತಲೆಗೆ ಬಲವಾದ ಪೆಟ್ಟು ಬಿದ್ದು ನೇತ್ರಾವತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತಿ ಬೈಕ್‌ನ ಎಡಭಾಗಕ್ಕೆ ಬಿದ್ದು ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಮಂಜುನಾಥಸ್ವಾಮಿಗೆ ಬೆದರಿಕೆ – ತುಮಕೂರಿನಲ್ಲಿ ಯೂಟ್ಯೂಬರ್ ಅರೆಸ್ಟ್
ಬೆಂಗಳೂರು: ಓವರ್‌ಟೇಕ್ (Overtake) ಮಾಡಲು ಹೋಗಿ ಫ್ಲೈಓವರ್ ತಡೆಗೋಡೆಗೆ ಬಲೆನೋ ಕಾರು ಡಿಕ್ಕಿಯಾದ ಪರಿಣಾಮ ಮೂವರು ಗಂಭೀರ ಗಾಯಗೊಂಡ ಘಟನೆ ಎಲೆಕ್ಟ್ರಾನಿಕ್ ಸಿಟಿ ಟು ಸಿಲ್ಕ್ ಬೋರ್ಡ್ ಪ್ಲೈ ಓವರ್ (Electronic City To Silk Board Flyover) ಮೇಲೆ ನಡೆದಿದೆ.
ತಂಜಿಮ್ (22), ತಾಂಜೆ (25), ಮಹಮ್ಮದ್ ಸಾಹಿಲ್ (25), ಅಬ್ದುಲ್ (23) ಹಾಗೂ ಮಹಮ್ಮದ್ ಸಿದ್ದಾರ್ ಟ್ರಿಪ್ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಸಿಂಗಸಂದ್ರ ಸಮೀಪ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಕಾರು ಡಿಕ್ಕಿಯಾಗಿದೆ. ಇದನ್ನೂ ಓದಿ: ಯಶವಂತಪುರ ಫ್ಲೈಓವರ್ ಮೇಲೆ ಟಯರ್ ಬ್ಲಾಸ್ಟ್ – ಗೆಣಸು ತುಂಬಿದ್ದ ಬೊಲೆರೋ ಪಲ್ಟಿ
ಅಪಘಾತ ನಡೆದ ಸಂದರ್ಭ ಏರ್‌ಬ್ಯಾಗ್ ಓಪನ್ ಆಗಿದ್ದರಿಂದ ಕಾರ್‌ನಲ್ಲಿದ್ದ ಐವರು ಅಪಾಯದಿಂದ ಪಾರಾಗಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಎಲೆಕ್ಟ್ರಾನಿಕ್ ಸಿಟಿಯ ಕಾವೇರಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸಂಜಯ್ ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವು – ಗಂಗಾವತಿ ಆಸ್ಪತ್ರೆಗೆ ಮುಗಿಬಿದ್ದ ಮಹಿಳೆಯರು
ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ (Electronic City Flyover) ಗುರುವಾರ ರಾತ್ರಿ ಸರಣಿ ಅಪಘಾತ ಸಂಭವಿಸಿದೆ. ಇದರ ಪರಿಣಾಮ ಫ್ಲೈಓವರ್ ಮೇಲೆ ಭಾರೀ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದೆ.
ಸರಣಿ ಅಪಘಾತದಿಂದಾಗಿ ಫ್ಲೈಓವರ್ ಸುತ್ತಮುತ್ತ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಕಿಲೋಮೀಟರ್‌ಗಟ್ಟಲೆ ವಾಹನಗಳು ನಿಂತಲ್ಲೇ ನಿಂತಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಸ್ಥಳಕ್ಕೆ ಎಲೆಕ್ಟ್ರಾನ್ ಸಿಟಿ ಎಲಿವೇಟೆಡ್ ಫ್ಲೈವರ್ ಸಿಬ್ಬಂದಿ ಆಗಮಿಸಿದ್ದು, ಅಪಘಾತವಾಗಿದ್ದ ವಾಹನಗಳನ್ನು ತೆರವು ಮಾಡಲು ಹರಸಾಹಸಪಟ್ಟಿದ್ದಾರೆ.
ಮಡಿಕೇರಿ: ಭಾಗಮಂಡಲದಲ್ಲಿ (Bhagamandala) ನಿರ್ಮಾಣವಾಗಿರುವ ಕೊಡಗಿನ (Kodagu) ಏಕೈಕ ಮೇಲ್ಸೇತುವೆ (Flyover) ವಾಹನ ಸಂಚಾರಕ್ಕೆ ಮುಕ್ತಗೊಂಡಿದ್ದು ಇನ್ನು ಮುಂದೆ ಪ್ರವಾಹ ಬಂದರೂ ಗ್ರಾಮಸ್ಥರು, ಕಾವೇರಿ ಭಕ್ತರು (Cauvery Devotees) ಯಾವುದೇ ಅತಂಕ ಇಲ್ಲದೇ ಮಳೆಗಾಲದಲ್ಲೂ ಓಡಾಟ ನಡೆಸಬಹುದಾಗಿದೆ.
ಹೌದು. ಸುಮಾರು ಆರು ವರ್ಷಗಳ ಬಳಿಕ ಸೇತುವೆ ಕಾಮಗಾರಿ ಮುಕ್ತಾಯಗೊಳ್ಳುತ್ತಿದ್ದು, ಒಂದಷ್ಟು ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ. ವಾಹನಗಳ ಸಂಚಾರಕ್ಕೆ ಈಗಾಗಲೇ ಮೇಲ್ಸೇತುವೆಯಲ್ಲಿ ಅವಕಾಶ ಮಾಡಲಾಗಿದೆ. ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಮೇಲ್ಸೇತುವೆ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ. ಇದನ್ನೂ ಓದಿ: ವರ್ಷದಿಂದ ವರ್ಷಕ್ಕೆ ರಾಕೆಟ್ ವೇಗದಲ್ಲಿ ಚಿಮ್ಮುತ್ತಿದೆ ಭಾರತದ ರಕ್ಷಣಾ ರಫ್ತು!
ಮಳೆಗಾಲದಲ್ಲಿ (Rain) ಭಾಗಮಂಡಲ ಜಲಾವೃತವಾಗುವುದು ಸಾಮಾನ್ಯ. ತ್ರಿವೇಣಿ ಸಂಗಮ (Triveni Sangama) ಮುಳುಗಡೆಯಾದರೆ ತಲಕಾವೇರಿ, ಕೋರಂಗಾಲ, ಅಯ್ಯಂಗೇರಿ, ನಾಪೋಕ್ಲು ಮತ್ತು ಚೇರಂಗಾಲ ಸೇರಿದಂತೆ ಹಲವು ಗ್ರಾಮಗಳ ಸಂಪರ್ಕ ಕಡಿತಗೊಳ್ಳುತ್ತವೆ. ಇದರಿಂದ ಈ ಭಾಗದ ನಿವಾಸಿಗಳು ಮಳೆಗಾಲದಲ್ಲಿ ವಿಪರೀತ ಸಮಸ್ಯೆ ಅನುಭವಿಸುತ್ತಿದ್ದರು. ಈ ಭಾಗದ ಮಕ್ಕಳಿಗೆ ಶಾಲೆಗೆ ತೆರಳಲು ಕೂಡ ಸಮಸ್ಯೆಯಾಗುತ್ತಿತ್ತು. ಇದನ್ನೂ ಓದಿ: ಕೊಟ್ಟ ಮಾತಿನಂತೆ ಚಿತ್ರ ಬಿಡಿಸಿದ ಯುವತಿಗೆ ಪತ್ರ ಬರೆದ ಪ್ರಧಾನಿ ಮೋದಿ
2019 ರಲ್ಲಿ ಕೋರಂಗಾಲದಲ್ಲಿ ಭೂಕುಸಿತವಾಗಿ ಒಂದೇ ಸ್ಥಳದಲ್ಲಿ 5 ಜನರು ಭೂಸಮಾಧಿಯಾಗಿದ್ದರು. ಈ ದುರ್ಘಟನೆ ಸಂಭವಿಸಿದ ಸ್ಥಳವನ್ನು ತಲುಪಬೇಕಾಗಿದ್ದ ರಕ್ಷಣಾ ಪಡೆಗಳು, ಸ್ಥಳೀಯರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ರಸ್ತೆ ಮುಳುಗಡೆಯಾಗಿದ್ದರಿಂದ ಯಾವುದೇ ವಾಹನಗಳ ಓಡಾಟವೂ ಸಾಧ್ಯವಾಗಿರಲಿಲ್ಲ.
2020 ರ ಆಗಸ್ಟ್ ತಿಂಗಳಲ್ಲೂ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದುಬಿದ್ದಿತ್ತು. ಪರಿಣಾಮ ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದ ನಾರಾಯಣ ಆಚಾರ್ ಮತ್ತು ಕುಟುಂಬದ ಐವರು ಭೂ ಸಮಾಧಿಯಾಗಿದ್ದರು. ಆಗಲೂ ಕೂಡ ಬಾರಿ ಮಳೆ ಸುರಿಯುತ್ತಿದ್ದರಿಂದ ಭಾಗಮಂಡಲದ ತ್ರಿವೇಣಿ ಸಂಗಮ ಮುಳುಗಡೆಯಾಗಿತ್ತು. ಭಾಗಮಂಡಲದಿಂದ ತಲಕಾವೇರಿವರೆಗೆ ಹಲವು ಕಡೆಗಳಲ್ಲಿ ಭೂಕುಸಿತವಾಗಿದ್ದರಿಂದ ಜೆಸಿಬಿ ಮತ್ತು ಇತರೇ ವಾಹನಗಳನ್ನು ತೆಗೆದುಕೊಂಡು ಹೋಗಿ ರಸ್ತೆ ತೆರವು ಮಾಡಲು ಪರದಾಡಬೇಕಾಗಿತ್ತು. ಹೀಗಾಗಿ ಭಾಗಮಂಡಲದಲ್ಲಿದ್ದ ಪ್ರವಾಹದ ನೀರನ್ನು ದಾಟಿ ಮುಂದೆ ಹೋಗಲು ಎರಡು ದಿನಗಳೇ ಕಾಯಬೇಕಾಗಿತ್ತು.
ಹಲವಾರು ದಶಕಗಳಿಂದ ಪ್ರತಿ ಮಳೆಗಾಲದಲ್ಲಿಯೂ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದ ಭಾಗಮಂಡಲ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರಿಗೆ ಮೇಲ್ಸೇತುವೆ ಕಾಮಗಾರಿ ಮುಕ್ತವಾಗಿದ್ದು ಈಗ ಹರ್ಷದಲ್ಲಿದ್ದಾರೆ.
– ಫೆಬ್ರವರಿ ಮೊದಲ ವಾರದಲ್ಲಿ ವಾಹನ ಸಂಚಾರಕ್ಕೆ ಸಿಗ್ನಲ್ ಕೊಟ್ಟ ಐಐಎಸ್‌ಸಿ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಿಂದ (Bengaluru) ರಾಜ್ಯದ 22 ಜಿಲ್ಲೆಗಳು ಸೇರಿದಂತೆ ಗೋವಾ, ಮಹಾರಾಷ್ಟ್ರಕ್ಕೆ ಸಂಪರ್ಕಿಸುವ ಪೀಣ್ಯ ಫ್ಲೈಓವರ್ (Peenya Flyover) ಮೇಲೆ ಸಂಚರಿಸುವ ವಾಹನ ಸವಾರರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಹೆವಿ ವಾಹನಗಳ (Heavy Vehicle) ಸಂಚಾರಕ್ಕೆ ಫ್ಲೈಓವರ್ ಫಿಟ್ ಆಗಿರುವ ಬಗ್ಗೆ ಐಐಎಸ್‌ಸಿ (IISC) ತಜ್ಞರ ವರದಿ ಎನ್‌ಹೆಚ್‌ಎಐ ಕೈ ಸೇರಿದೆ.
ಬೆಂಗಳೂರಿನಿಂದ ರಾಜ್ಯದ ಶೇ.80ರಷ್ಟು ಜಿಲ್ಲೆಗಳಿಗೆ ಸಂಪರ್ಕಿಸುವ ಪೀಣ್ಯ ಫ್ಲೈಓವರ್‌ಗೆ ಹಿಡಿದಿದ್ದ ಗ್ರಹಣ ದೂರಾಗುವ ಸಂದರ್ಭ ಬಂದಿದೆ. ಇದೇ ಫೆಬ್ರವರಿ ಮೊದಲ ವಾರದಿಂದಲೇ ಹೆವಿ ವೆಹಿಕಲ್ ಓಡಾಟಕ್ಕೆ ಸಂಚಾರ ಮುಕ್ತವಾಗುವ ಸಾಧ್ಯತೆ ಇದೆ. ಫ್ಲೈಓವರ್ ಲೋಡ್ ಟೆಸ್ಟಿಂಗ್ ಬಳಿಕ ಫ್ಲೈಓವರ್ ಫಿಟ್ನೆಸ್ ಬಗ್ಗೆ ಪರೀಕ್ಷೆ ಮಾಡಿದ್ದ ಐಐಎಸ್‌ಸಿ ತಜ್ಞರ ತಂಡ ವರದಿ ಸಿದ್ಧಪಡಿಸಿ ಎನ್‌ಹೆಚ್‌ಎಐ ಅಧಿಕಾರಿಗಳಿಗೆ ರಿಪೋರ್ಟ್ ನೀಡಿದೆ. ಇದನ್ನೂ ಓದಿ: ಕೆ.ಎನ್.ರಾಜಣ್ಣ, ಶಾಮನೂರು ಶಿವಶಂಕರಪ್ಪಗೆ ಕೈ ಹೈಕಮಾಂಡ್ ವಾರ್ನಿಂಗ್
2 ವರ್ಷದಿಂದ ಹೆವಿ ವಾಹನಗಳ ಸಂಚಾರಕ್ಕೆ ಹೇರಿದ್ದ ನಿರ್ಬಂಧ ಸದ್ಯ ಇದೇ ಫೆಬ್ರವರಿ ಮೊದಲ ವಾರದಲ್ಲಿ ತೆರವು ಮಾಡುವ ಸಾಧ್ಯತೆ ಇದೆ. ಫ್ಲೈಓವರ್ ಎರಡು ಪಿಲ್ಲರ್‌ಗಳಲ್ಲಿ ಕಾಣಿಸಿಕೊಂಡ ಸಮಸ್ಯೆಯಿಂದಾಗಿ ಹೆವಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಸಮಸ್ಯೆ ಪತ್ತೆಗೆ ಮುಂದಾಗಿದ್ದ ಐಐಎಸ್‌ಸಿ ತಜ್ಞರು ಫ್ಲೈಓವರ್ ಕೇಬಲ್‌ಗಳು ಹಾಳಾಗಿದ್ದ ಕಾರಣವನ್ನು ಪತ್ತೆ ಹಚ್ಚಿದ್ದಾರೆ. ಈ ಹಿಂದೆ ಪಿಲ್ಲರ್‌ಗಳಿಗೆ ಅಳವಡಿಕೆ ಮಾಡಿದ್ದ ಕೇಬಲ್‌ಗಳು ತುಕ್ಕು ಹಿಡಿದಿದ್ದೆ ದೋಷಕ್ಕೆ ಕಾರಣ ಎಂಬ ರಿಪೋರ್ಟ್ ನೀಡಿವೆ. ಇದನ್ನೂ ಓದಿ: ಕೆರೆಗೋಡು ಹನುಮ ಧ್ವಜ ಪ್ರಕರಣ – ಪಿಡಿಓ ಅಮಾನತು
ಕೇಬಲ್‌ಗಳಿಗೆ ನೀರು ತಗುಲಿದ್ದ ಕಾರಣ ಸಂಪೂರ್ಣ ಕೇಬಲ್ ತುಕ್ಕು ಹಿಡಿದಿದ್ದ ಪರಿಣಾಮ ಪಿಲ್ಲರ್‌ಗಳಲ್ಲಿ ಅಳವಡಿಕೆ ಮಾಡಿದ್ದ ಕೇಬಲ್ ಹಾಳಾಗಿತ್ತು. ಸದ್ಯ ಈಗ ಆ ಎಲ್ಲವನ್ನು ತೆರವು ಮಾಡಿ ಈ ಹಿಂದೆ ಅಳವಡಿಕೆ ಮಾಡಿದ್ದ ಕೇಬಲ್‌ಗಳಿಗಿಂತ 4 ಪಟ್ಟು ಸದೃಢವಾದ ಕೇಬಲ್ ಅಳವಡಿಕೆ ಮಾಡುವುದರ ಜೊತೆಗೆ ತುಕ್ಕು ಹಿಡಿಯದಂತೆ ಗ್ರೀಸ್ ಇರುವ ಕೇಬಲ್ ಅನ್ನು ಅಳವಡಿಕೆ ಮಾಡಲಾಗಿದೆ. ಜೊತೆಗೆ ಮುಂದೆ ಈ ರೀತಿ ಸಮಸ್ಯೆಯಾದರೆ ವಾಹನ ಓಡಾಟ ನಿಲ್ಲಿಸದೇ ಹಾಗೇ ಸರಿ ಮಾಡಬಹುದಾದ ಕ್ಷಮತೆ ಕೂಡ ಕೇಬಲ್‌ಗೆ ಇದೆ ಎಂದು ಐಐಎಸ್‌ಸಿ ವರದಿ ನೀಡಿದೆ. ಇದನ್ನೂ ಓದಿ: ವಿಷ್ಣುವಿನ 11ನೇ ಅವತಾರವಾಗಲು ಮೋದಿ ಪ್ರಯತ್ನಿಸ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ
ಸದ್ಯ ಇದೇ ವಾರ ಐಐಎಸ್‌ಸಿ ತಜ್ಞರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಭೆ ಮಾಡಲಿದ್ದು, ಸಭೆ ಬಳಿಕ ಸಂಚಾರ ಮುಕ್ತ ಯಾವಾಗ ಎಂಬ ಅಧಿಕೃತ ಮಾಹಿತಿ ನೀಡುವ ಸಾಧ್ಯತೆ ಇದೆ. ಕಳೆದೆರಡು ವರ್ಷಗಳಿಂದ ಟ್ರಾಫಿಕ್‌ನಿಂದ ಪರದಾಡುತ್ತಿದ್ದ ಹೆವಿ ವಾಹನಗಳಿಗೆ ಸದ್ಯ ಗುಡ್‌ನ್ಯೂಸ್ ಸಿಕ್ಕಿದ್ದು, ಇನ್ಮುಂದೆ ಟ್ರಾಫಿಕ್ ಕಿರಿಕಿರಿ ಇಲ್ಲದೆ ಸಂಚಾರ ಮಾಡಬಹುದಾಗಿದೆ. ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದರೆ ಕಾಂಗ್ರೆಸ್ ಸರ್ಕಾರ ತೆಗೆಯುವ ಗ್ಯಾರಂಟಿ: ಬೊಮ್ಮಾಯಿ
ಬೆಂಗಳೂರು: ಬರೋಬ್ಬರಿ 22 ಜಿಲ್ಲೆಗಳ ಸಂಚಾರ ರಹದಾರಿ ಪೀಣ್ಯ ಫ್ಲೈಓವರ್ (Peenya Flyover) ಇಂದಿನಿಂದ ಮತ್ತೆ ಮೂರು ದಿನಗಳ ಕಾಲ ಬಂದ್ ಆಗಲಿದೆ. ಲೋಡ್ ಟೆಸ್ಟಿಂಗ್‌ಗಾಗಿ (Load Testing) ಎನ್‌ಹೆಚ್‌ಎ (NHA) ಮನವಿ ಮೇರೆಗೆ ಸಂಚಾರಿ ಪೊಲೀಸರು ಇಂದಿನಿಂದ ಫ್ಲೈಓವರ್ ಕ್ಲೋಸ್ ಮಾಡಲಿದ್ದಾರೆ.
ಸುಮಾರು ಮೂರು ವರ್ಷದಿಂದ ಪೀಣ್ಯ ಫ್ಲೈಓವರ್ ಭಾರಿ ವಾಹನಗಳಿಗೆ ಬಂದ್ ಆಗಿದೆ. 2021ರಲ್ಲಿ ಪೀಣ್ಯ ಫ್ಲೈಓವರ್‌ನಲ್ಲಿ ತಾಂತ್ರಿಕ ತೊಂದರೆ ಉಂಟಾಗಿ ಭಾರಿ ಪ್ರಮಾಣದ ವಾಹನಗಳ ಸಂಚಾರ ನಿಷೇಧ ಮಾಡಲಾಗಿತ್ತು. ಪೀಣ್ಯ ಫ್ಲೈಓವರ್‌ನ ಗುಣಮಟ್ಟ ಸರಿಯಿಲ್ಲ, ಕಳಪೆ ಕಾಮಾಗಾರಿ, ಇಡೀ ಫ್ಲೈಓವರ್ ಅನ್ನು ಕೆಡವಬೇಕು ಎಂಬ ಚರ್ಚೆ ಆರಂಭವಾಗಿತ್ತು. ಆದರೆ ಕೆಲ ದಿನಗಳ ನಂತರ ಸಣ್ಣಪುಟ್ಟ ಕಾಮಾಗಾರಿ ಮಾಡಿ ಕೆಲ ಕೇಬಲ್‌ಗಳನ್ನು ಅಳವಡಿಸಿ ಸಣ್ಣ ಪ್ರಮಾಣದ ವೆಹಿಕಲ್ ಓಡಾಟಕ್ಕೆ ಅವಕಾಶ ಮಾಡಲಾಗಿತ್ತು. ಫ್ಲೈಓವರ್ ಮೇಲೆ ಸಂಪೂರ್ಣವಾಗಿ ಹೆವಿ ವೆಹಿಕಲ್‌ಗಳ ಓಡಾಟ ನಿರ್ಬಂಧಿಸಲಾಗಿತ್ತು. ಇದೀಗ ಮತ್ತೆ ಮೂರು ದಿನಗಳ ಕಾಲ ಪೀಣ್ಯ ಫ್ಲೈಓವರ್ ಬಂದ್ ಮಾಡಲಾಗುತ್ತದೆ. ಇದನ್ನೂ ಓದಿ: ನನಗೆ ತುಂಬಾ ಖುಷಿಯಾಗಿದೆ: ಅಯೋಧ್ಯೆ ರಾಮಮಂದಿರಕ್ಕೆ ಮಗ ಕೆತ್ತಿರುವ ರಾಮಲಲ್ಲಾ ಮೂರ್ತಿ ಆಯ್ಕೆಯಾಗಿದ್ದಕ್ಕೆ ತಾಯಿ ಸಂತಸ
ಇಂದು ರಾತ್ರಿ 11 ಗಂಟೆಯಿಂದ ಜನವರಿ 19ರ ಬೆಳಗ್ಗೆ 11 ಗಂಟೆವರೆಗೆ ಪೀಣ್ಯ ಫ್ಲೈಓವರ್ ಬಂದ್ ಮಾಡಲಾಗುತ್ತದೆ. ಎನ್‌ಹೆಚ್‌ಎಐ ಅಧಿಕಾರಿಗಳು ಕೇಬಲ್ ಅಳವಡಿಕೆ ಕಾರ್ಯ ಪೂರ್ಣಗೊಳಿಸಿದ್ದು, ಹೆವಿ ವೆಹಿಕಲ್‌ಗಳ ಓಡಾಟ ನಡೆಸಿ ಪರೀಕ್ಷೆ ನಡೆಸಲಿದ್ದಾರೆ. ಹೆವಿ ವೆಹಿಕಲ್‌ಗಳ ಓಡಾಟಕ್ಕೆ ತಂತ್ರಜ್ಞರು ಯೆಸ್ ಅಂದರೆ ಇನ್ಮುಂದೆ ಬಸ್ಸು, ಲಾರಿಗಳು ಫ್ಲೈಓವರ್ ಮೇಲೆಯೇ ಸಾಗಬಹುದು. ಹೀಗಾಗಿ ಎನ್‌ಹೆಚ್‌ಎಐ ಅಧಿಕಾರಿಗಳ ಮನವಿ ಮೇರೆಗೆ ಮೂರು ದಿನಗಳ ಕಾಲ ಸಂಚಾರಿ ಪೊಲೀಸರು ಫ್ಲೈಓವರ್ ಬಂದ್ ಮಾಡಲಿದ್ದಾರೆ. ಮೂರು ದಿನಗಳ ಕಾಲ ಎನ್‌ಹೆಚ್ 48ರಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಲಿದ್ದು, ವಾಹನ ಸವಾರರು ಪರ್ಯಾಯ ರಸ್ತೆ ಬಳಸುವುದು ಒಳಿತು. ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ಗೆ ಫುಡ್ ಡೆಲಿವರಿ ಬಾಯ್ ಬಲಿ
ಬೆಂಗಳೂರು: ಲೋಡ್ ಟೆಸ್ಟಿಂಗ್ (Load Testing) ಮಾಡುವ ಸಲುವಾಗಿ ಜನವರಿ 16ರಿಂದ ಮೂರು ದಿನಗಳ ಕಾಲ ಪೀಣ್ಯ ಫ್ಲೈಓವರ್ (Peenya Flyover) ಬಂದ್ ಆಗಲಿದೆ.
ಜನವರಿ 16ರ ರಾತ್ರಿ 11 ಗಂಟೆಯಿಂದ ಜನವರಿ 19ರ ಬೆಳಗ್ಗೆ 11 ಗಂಟೆಯವರೆಗೆ ಈ ಫ್ಲೈಓವರ್ ಕ್ಲೋಸ್ ಆಗಲಿದೆ. ಈ ಹಿನ್ನೆಲೆ ಎಲ್ಲಾ ವಾಹನ ಸವಾರರು ಸರ್ವಿಸ್ ರಸ್ತೆ ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಇದರಿಂದಾಗಿ ಮುಂದಿನ ವಾರ ತುಮಕೂರು ರಸ್ತೆಯಲ್ಲಿ ಬೃಹತ್ ವಾಹನ ದಟ್ಟಣೆ ಉಂಟಾಗಲಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮೂರು ಡಿಸಿಎಂ ಚರ್ಚೆ ಹೈಕಮಾಂಡ್ ಅಂಗಳಕ್ಕೆ ಬಂದಿಲ್ಲ: ಖರ್ಗೆ ಸ್ಪಷ್ಟನೆ
ಈ ಕುರಿತು ಎನ್‌ಹೆಚ್‌ಎಐ ಯೋಜನಾ ನಿರ್ದೇಶಕ ಜಯಕುಮಾರ್ ಮಾತನಾಡಿದ್ದು, ಕಾಮಗಾರಿ ಪೂರ್ಣಗೊಂಡಿದೆ. ಪ್ರಿಸ್ಟ್ರೆಸ್ಡ್ ಕೇಬಲ್‌ಗಳ ಸಾಮರ್ಥ್ಯವನ್ನು ನಿರ್ಣಯಿಸಲು ನಾವು ಲೋಡ್ ಪರೀಕ್ಷೆಗಳನ್ನು ನಡೆಸಬೇಕಾಗಿದೆ. ಲೋಡ್ ಪರೀಕ್ಷೆಯ ಸಮಯದಲ್ಲಿ ತಲಾ 32 ಟನ್‌ಗಳನ್ನು ಹೊತ್ತ 8 ಟ್ರಕ್‌ಗಳನ್ನು 48 ಗಂಟೆಗಳಿಗೂ ಹೆಚ್ಚು ಕಾಲ ಫ್ಲೈಓವರ್ ಮೇಲೆ ಓಡಿಸಲಾಗುತ್ತದೆ. ನಾವು ಎರಡು ಸ್ಪ್ಯಾನ್‌ಗಳನ್ನು ಮಾತ್ರ ಪರಿಶೀಲಿಸುತ್ತೇವೆ. ಇದಕ್ಕಾಗಿ 105-106 ಮತ್ತು 117-118 ಕಂಬಗಳನ್ನು ಸಂಪರ್ಕಿಸುವ ವ್ಯಾಪ್ತಿಯನ್ನು ಎನ್‌ಹೆಚ್‌ಎಐ ಗುರುತಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮುಸ್ಲಿಮರ ಜನಸಂಖ್ಯೆ ಹೆಚ್ಚಾದ್ರೆ ಹಿಂದೂಗಳ ಪರಿಸ್ಥಿತಿ ಹೇಗಿರತ್ತೆ ಯೋಚ್ನೆ ಮಾಡಿ: ಹರೀಶ್ ಪೂಂಜಾ ಭಾಷಣ ವೈರಲ್
ಈ ಫ್ಲೈಓವರ್ 23 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವುದಲ್ಲದೇ ಬೆಂಗಳೂರು ಮತ್ತು ರಾಜ್ಯದ ಇತರೆ ಜಿಲ್ಲೆಗಳಿಗೆ ಒಂದು ರೀತಿಯ ಆರ್ಥಿಕ ಚೇತರಿಕೆಯ ಕೊಂಡಿ ಆಗಿದೆ. ಪೀಣ್ಯ ಮೇಲ್ಸೇತುವೆ ಒಟ್ಟು 120 ಪಿಲ್ಲರ್‌ಗಳನ್ನು ಒಳಗೊಂಡಿದೆ. ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿರುವ ಉಗ್ರರ ಶಿಬಿರದ ಮೇಲೆ ಭಾರತದಿಂದ ಬಾಂಬ್ ದಾಳಿ!
ಚಂಡೀಗಢ: ಪಂಜಾಬ್‌ನ ಲೂಧಿಯಾನದಲ್ಲಿ (Punjab’s Ludhiana) ಫ್ಲೈಓವರ್ ಮೇಲೆ ಬೆಂಕಿಯ ಕೆನ್ನಾಲಿಗೆ ಧಗಧಗಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಖತ್ ವೈರಲ್ ಆಗುತ್ತಿದೆ.
ಲೂಧಿಯಾನದ ಖನ್ನಾ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಯಿಲ್ ತುಂಬಿ ಹೊರಟಿದ್ದ ಟ್ಯಾಂಕರ್ (Oil Tanker) ಫ್ಲೈಓವರ್‌ನ ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಪರಿಣಾಮ ಬೆಂಕಿ ಹೊತ್ತಿ ಉರಿದಿದೆ.
ಘಟನೆಯ ಹಿನ್ನೆಲೆಯಲ್ಲಿ ಕೆಲ ಕಾಲ ಆ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಇನ್ನು ಫ್ಲೈಓವರ್‌ನಲ್ಲಿ ಬೆಂಕಿಯ ಕೆನ್ನಾಲಿಗೆ ಆಕಾಶದೆತ್ತರಕ್ಕೆ ಹೊತ್ತಿ ಉರಿಯುತ್ತಿದ್ದರೆ,ಇದರ ಕೆಳಗೆ ವಾಹನಗಳು ಚಲಿಸುತ್ತಿದ್ದವು. ಸದ್ಯಕ್ಕೆ ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯಗಳ ಬಗ್ಗೆ ವರದಿಯಾಗಿಲ್ಲ. ಇದನ್ನೂ ಓದಿ: ಮಕ್ಕಳು ಹೂ ಕಿತ್ತಿದ್ದಕ್ಕೆ ಅಂಗನವಾಡಿ ಸಹಾಯಕಿ ಮೂಗು ಕತ್ತರಿಸಿದ ಮಾಲೀಕ
#WATCH | Punjab: A massive fire broke out in Khanna, Ludhiana after an oil tanker hit a divider and overturned. pic.twitter.com/JrPrKVNmaQ
ಘಟನೆಯ ಫೋಟೋಗಳು ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ. ಘಟನೆಯ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಹರಸಾಹಸಪಟ್ಟಿದ್ದಾರೆ. ಈ ಮೂಲಕ ಭಾರೀ ಅನಾಹುತವನ್ನು ತಡೆಯಲು ಪ್ರಯತ್ನಿಸಿವೆ.
– ರಾತ್ರಿ 11 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ ಸಂಚಾರ ನಿರ್ಬಂಧ
ಬೆಂಗಳೂರು: 2024ರ ಹೊಷವರ್ಷ (New Year 2024) ಸಂಭ್ರಮಾಚರಣೆಗೆ ಕ್ಷಣಗಣನೆ ಬಾಕಿಯಿದೆ. ನೂತನ ವರ್ಷವನ್ನ ಬರಮಾಡಿಕೊಳ್ಳೋದಕ್ಕೆ ಜನರು ಕಾತುರದಿಂದ ಕಾಯ್ತಿದ್ದಾರೆ. ಅದೇ ರೀತಿ ಯಾವುದೇ ಅನಾಹುತ ಆಗದಂತೆ ಎಚ್ಚರಿಕೆ ವಹಿಸಲು ಪೊಲೀಸರು (Police) ಕೂಡ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಹೊಸವರ್ಷದ ಖುಷಿಯಲ್ಲಿ ಯಾವುದೇ ಅನಾಹುತ ಆಗದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಹೊಸವರ್ಷದ ಸಂಭ್ರದ ವೇಳೆ ಕೆಲ ಪುಂಡರು ಕುಡಿದು ಫ್ಲೈಓವರ್‌ಗಳ ಮೇಲೆ ವ್ಹೀಲಿಂಗ್ ಮಾಡುವ ಹುಚ್ಚಾಟ ನಡೆಸುತ್ತಾರೆ, ಅತಿವೇಗವಾಗಿ ವಾಹನ ಚಲಾಯಿಸೋದು ಮಾಡ್ತಾರೆ. ಇದರಿಂದ ಸಾಕಷ್ಟು ಜನ ಜೀವ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಮಾಡದ ತಪ್ಪಿಗೆ ಆಸ್ಪತ್ರೆ ಸೇರುವಂತಾಗಿದೆ. ಇದೇ ಕಾರಣಕ್ಕೆ ನಗರದ ಪ್ರಮುಖ ಫ್ಲೈಓವರ್‌ಗಳನ್ನ ಡಿಸೆಂಬರ್ 31ರ ರಾತ್ರಿ ಬಂದ್ ಮಾಡಲಾಗಿದೆ.
2023ರ ಡಿಸೆಂಬರ್ 31 ರಾತ್ರಿ 11 ಗಂಟೆಯಿಂದ 2024ರ ಜನವರಿ 1ರ ಬೆಳಗ್ಗಿನ ಜಾವ 6 ಗಂಟೆ ತನಕ ಬ್ಯಾರಿಕೇಡ್‌ಗಳನ್ನು ಹಾಕಿ ಯಾವುದೇ ವಾಹನ ಓಡಾಡದಂತೆ ನಿರ್ಬಂಧ ಮಾಡೋಕೆ ಸಿದ್ದತೆ ನಡೆಸಿದ್ದಾರೆ. ಜನಸಂದಣಿ ಜಾಸ್ತಿ ಇರುವ ಎಂಜಿ, ಬ್ರಿಗೇಡ್, ಕೋರಮಂಗಲ, ಮಹದೇವಪುರ ಗುರುತಿಸಲಾಗಿದೆ. ಸಾಕಷ್ಟು ಕಡೆ ಟ್ರಾಫಿಕ್ ಬದಲಾವಣೆಯನ್ನೂ ಸಹ ಪೊಲೀಸರು ಮಾಡಿದ್ದಾರೆ. ಇದನ್ನೂ ಓದಿ: ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ – ಗೋವಾದಿಂದ ಮಂಗಳೂರಿಗೆ ದರವೆಷ್ಟು?
ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಬಿಎಂಟಿಸಿ (BMTC) ಬಸ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅದೇ ರೀತಿ ಬುಧವಾರ ಸಂಜೆ ಬಿಎಂಟಿಸಿಗೆ ಗೃಹಿಣಿಯೊಬ್ಬರು ಬಲಿಯಾದ ಘಟನೆ ಸಿಲ್ಕ್‌ಬೋರ್ಡ್ (Sikboard) ಸಮೀಪದ ಮಡಿವಾಳ ಫ್ಲೈಓವರ್ (Madiwala Flyover) ಮೇಲೆ ನಡೆದಿದೆ.
ಸೀಮಾ ಬಿಎಂಟಿಸಿಗೆ ಬಲಿಯಾದ ಗೃಹಿಣಿ. ಬುಧವಾರ ಸಂಜೆ 6:30ರ ವೇಳೆಗೆ ಘಟನೆ ನಡೆದಿದ್ದು, ಗೃಹಿಣಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಿಎಂಟಿಸಿ ಬಸ್ ಚಾಲಕನ ಅಜಾಗರೂಕತೆಯಿಂದ ಅಪಘಾತವಾಗಿದೆ ಎಂದು ಆರೋಪಿಸಲಾಗಿದೆ. ಬಸ್ ಪಕ್ಕದಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಗುದ್ದಿದ್ದರಿಂದ ಸವಾರರು ಆಯತಪ್ಪಿ ಬಿದ್ದಿದ್ದಾರೆ. ಘಟನೆಯಲ್ಲಿ ಗೃಹಿಣಿ ಸಾವನ್ನಪ್ಪಿದರೆ ಒಂದೂವರೆ ವರ್ಷದ ಮಗು ಗಾನವಿ ಹಾಗೂ ಆಕೆಯ ಪತಿ ಗುರುಮೂರ್ತಿ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆ ರೀತಿ ಬಿಂಬಿಸಿ ನಾಪತ್ತೆಯಾಗಿದ್ದ ಪೇದೆ ಅಯ್ಯಪ್ಪ ಮಾಲೆ ಧರಿಸಿ ಪತ್ತೆ
ತಮ್ಮ ಮಗುವಿನೊಂದಿಗೆ ದಂಪತಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಪತಿ ಗುರುಮೂರ್ತಿ ಸಿಂಗಸಂದ್ರ ಬೆಸ್ಕಾಂ ಉದ್ಯೋಗಿಯಾಗಿದ್ದು, ಕಳೆದ 8 ವರ್ಷದಿಂದ ಬೆಸ್ಕಾಂನಲ್ಲಿ ಲೈನ್‌ಮೆನ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೂಲತಃ ವಿಜಯನಗರ ಜಿಲ್ಲೆ, ಗುಡೇಕೋಟೆ ಕೂಡ್ಲಿಗಿಯ ಶ್ರೀಕಂಠಪುರ ತಾಂಡದ ನಿವಾಸಿಗಳಾದ ದಂಪತಿ ಉದ್ಯೋಗ ನಿಮಿತ್ತ ಬೆಂಗಳೂರಿಗೆ ಬಂದು ನೆಲೆಸಿದ್ದರು. ಸೈಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮೃತ ಗೃಹಿಣಿಯ ಮರಣೋತ್ತರ ಪರೀಕ್ಷೆ ನಡೆಯಲಿದೆ. ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನೆ ಬಳಿಕ ಚಾಲಕ ಮತ್ತು ನಿರ್ವಾಹಕ ಬಸ್ ಬಿಟ್ಟು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಸೋಶಿಯಲ್ ಮೀಡಿಯಾ ಖಾತೆ ಇಲ್ಲ – ಮನೋರಂಜನ್ ಬೆಂಗಳೂರು ನೆಟ್‌ವರ್ಕ್ ಯಾವುದು?