Tag: Flying Sikh Milkha singh

  • ಚಾಂಪಿಯನ್ ಓಟಗಾರ ಮಿಲ್ಕಾ ಸಿಂಗ್ ನಿಧನಕ್ಕೆ ನಳಿನ್‍ಕುಮಾರ್ ಕಟೀಲ್ ಸಂತಾಪ

    ಚಾಂಪಿಯನ್ ಓಟಗಾರ ಮಿಲ್ಕಾ ಸಿಂಗ್ ನಿಧನಕ್ಕೆ ನಳಿನ್‍ಕುಮಾರ್ ಕಟೀಲ್ ಸಂತಾಪ

    ಬೆಂಗಳೂರು: ಫ್ಲೈಯಿಂಗ್ ಸಿಖ್ ಖ್ಯಾತಿಯ, ಚಾಂಪಿಯನ್ ಓಟಗಾರ ಮಿಲ್ಕಾ ಸಿಂಗ್ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಟ್ವಿಟ್ಟರ್‍ನಲ್ಲಿ ಕೂಡ ಸಂತಾಪ ಸೂಚಿಸಿರುವ ನಳಿನ್‍ಕುಮಾರ್ ಕಟೀಲ್ ಅವರು, ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ನಾಲ್ಕು ಚಿನ್ನದ ಪದಕಗಳನ್ನು ಗೆದ್ದುಕೊಟ್ಟ ದಿಗ್ಗಜ ಓಟಗಾರ ಮಿಲ್ಕಾ ಸಿಂಗ್ ಅವರು, 1958ರ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಏಷ್ಯನ್ ಗೇಮ್ಸ್ ನಲ್ಲಿ ನಾಲ್ಕು ಬಾರಿ ಚಿನ್ನ ಗೆದ್ದ ಹೆಗ್ಗಳಿಕೆ ಅವರದ್ದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಥ್ಲಿಟ್ ಮಿಲ್ಕಾಸಿಂಗ್ ಇನ್ನಿಲ್ಲ

    2013ರಲ್ಲಿ ಮಿಲ್ಕಾ ಸಿಂಗ್ ಅವರ ಜೀವನಾಧಾರಿತ ಬಾಲಿವುಡ್ ಸಿನಿಮಾ `ಭಾಗ್ ಮಿಲ್ಕಾ ಭಾಗ್’ ಬಿಡುಗಡೆಯಾಗಿತ್ತು. ಅದು ಕೂಡ ಭರ್ಜರಿ ಹಿಟ್ ಆಗಿತ್ತು. ಮಿಲ್ಕಾ ಸಿಂಗ್ ಭಾರತೀಯ ಸೇನೆಯಲ್ಲಿಯೂ ಕಾರ್ಯನಿರ್ವಹಿಸಿದ್ದರು. ಪಂಜಾಬ್ ಸರ್ಕಾರದಲ್ಲಿ ಕ್ರೀಡಾ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು ಎಂದು ಅವರನ್ನು ನೆನಪಿಸಿಕೊಂಡಿದ್ದಾರೆ. ಮೃತರ ಕುಟುಂಬ, ಬಂಧುಮಿತ್ರರಿಗೆ ಈ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.