Tag: Flowers

  • ಅಣ್ಣನಿಗೆ ಏನಾದ್ರೂ ಆದ್ರೆ ಬಳ್ಳಾರಿಯಲ್ಲಿ ರುದ್ರಾವತಾರ ನೋಡುತ್ತೀರಿ- ಆನಂದ್ ಸಿಂಗ್ ಬೆಂಬಲಿಗರಿಂದ ಪೋಸ್ಟ್

    ಅಣ್ಣನಿಗೆ ಏನಾದ್ರೂ ಆದ್ರೆ ಬಳ್ಳಾರಿಯಲ್ಲಿ ರುದ್ರಾವತಾರ ನೋಡುತ್ತೀರಿ- ಆನಂದ್ ಸಿಂಗ್ ಬೆಂಬಲಿಗರಿಂದ ಪೋಸ್ಟ್

    ಬಳ್ಳಾರಿ: ಅಣ್ಣನಿಗೆ ಏನಾದ್ರೂ ಆದರೆ ನಾವು ಸುಮ್ಮನಿರಲ್ಲ. ಬಳ್ಳಾರಿಯಲ್ಲಿ ರುದ್ರಾವತಾರ ನೋಡುತ್ತೀರಿ ಅಂತ ಶಾಸಕ ಆನಂದ್ ಸಿಂಗ್ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ.

    ಆನಂದ್ ಸಿಂಗ್ ಬೆಂಬಲಿಗರು, ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶಾಸಕ ಗಣೇಶ್ ವಿರುದ್ಧ ಕಿಡಿಕಾರಿದ್ದಾರೆ. ತಮ್ಮ ನಾಯಕ ಮೇಲೆ ಹಲ್ಲೆಯಾಗಿರುವ ಕುರಿತು ಮಾಹಿತಿ ಪಡೆದಯುತ್ತಿದ್ದಂತೆ ಕೆಲ ಬೆಂಬಲಿಗರು ಬೆಂಗಳೂರಿಗೆ ತೆರಳಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ನಡುವೆಯೇ ವಾಗ್ದಾಳಿ ನಡೆದಿದ್ದು, ಶಾಸಕರ ಬೆಂಬಲಿಗರು ಪರಸ್ಪರ ಗಲಾಟೆ ಮಾಡಿಕೊಂಡರೆ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎನ್ನುವುದನ್ನು ಅರಿತ ಪೊಲೀಸರು ಹೈಲರ್ಟ್ ಆಗಿದ್ದಾರೆ. ಇದನ್ನು ಓದಿ: ಡಿಕೆಶಿಗೆ ಭಾರೀ ಮುಖಭಂಗ – ಶಾಸಕರನ್ನು ರಕ್ಷಿಸಲು ಸುಳ್ಳು ಹೇಳಿ ಭಾರೀ ಟೀಕೆಗೆ ಗುರಿಯಾದ್ರು ಡಿಕೆ ಬ್ರದರ್ಸ್!

    ಯಾವುದೇ ಸಮಯದಲ್ಲಿ ಆನಂದ್ ಸಿಂಗ್ ಬೆಂಬಲಿಗರು ಶಾಸಕ ಗಣೇಶ್ ಮನೆಯ ಮೇಲೆ ದಾಳಿ ಮಾಡಬಹುದು ಎನ್ನುವ ಶಂಕೆ ವ್ಯಕ್ತಪಡಿಸಿ, ಹೊಸಪೇಟೆಯ ಮೃತ್ಯುಂಜಯ ನಗರದಲ್ಲಿರುವ ಶಾಸಕರ ಮನೆಗೆ ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ. ಇದನ್ನು ಓದಿ: ಮೊದ್ಲು ಮದುವೆ ಬಳಿಕ ಎದೆನೋವು ಈಗ ಆಕ್ಸಿಡೆಂಟ್ – ಕಡೆಗೂ ಆನಂದ್ ಸಿಂಗ್ ತಲೆಗೆ 12 ಹೊಲಿಗೆ!

    ಆನಂದ್ ಸಿಂಗ್ ಅವರ ಪತ್ನಿ, ಪುತ್ರ ಹಾಗೂ ಸಹೋದರ ಶಾಸಕ ಗಣೇಶ್ ವಿರುದ್ಧ ದೂರು ನೀಡಬೇಕೇ? ಬೇಡವೇ ಈ ವಿಚಾರದ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

    https://www.youtube.com/watch?v=9xgPiNXdmxU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವರಮಹಾಲಕ್ಷ್ಮಿ ಹಬ್ಬಕ್ಕೆ ಗಗನಕ್ಕೇರಿದ ಹೂವಿನ ಬೆಲೆ- ಯಾವ ಹೂವಿಗೆ ಎಷ್ಟು ಬೆಲೆ, ಇಲ್ಲಿದೆ ಮಾಹಿತಿ

    ವರಮಹಾಲಕ್ಷ್ಮಿ ಹಬ್ಬಕ್ಕೆ ಗಗನಕ್ಕೇರಿದ ಹೂವಿನ ಬೆಲೆ- ಯಾವ ಹೂವಿಗೆ ಎಷ್ಟು ಬೆಲೆ, ಇಲ್ಲಿದೆ ಮಾಹಿತಿ

    ಬೆಂಗಳೂರು: ವರಗಳ ನೀಡೋ ವರಮಹಾಲಕ್ಷ್ಮಿ ದೇವಿ ಆರಾಧನೆಗೆ ಎರಡು ದಿನ ಬಾಕಿ ಇರುವಾಗ್ಲೇ ಸಿಲಿಕಾನ್ ಸಿಟಿ ಹೆಂಗೆಳೆಯರು ಶಾಪಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ಬೆಲೆ ಜಾಸ್ತಿಯಾಗಿ ಹೂ ಭಾರವಾದ್ರೂ, ಲಕ್ಷ್ಮೀ ಅಲಂಕಾರಕ್ಕೆ ಖರೀದಿಯಲ್ಲಿ ತೊಡಗಿದ್ದಾರೆ. ಮಾರುಕಟ್ಟೆಗಳಲ್ಲಂತು ಹೂ, ಹಣ್ಣು ಕಾಯಿಗಳ ಬೆಲೆ ದುಪ್ಪಟ್ಟಾಗಿದ್ರೂ ಶಾಪಿಂಗ್ ಭರಾಟೆ ಜೋರಾಗಿದೆ.

    ಯಾವ ಹೂವಿಗೆ ಎಷ್ಟು ಬೆಲೆ?

    ಕನಕಾಂಬರ-  1000 ರೂ. ಕೆಜಿಗೆ
    ಮಲ್ಲಿಗೆ-  1000 ರೂ. ಕೆಜಿಗೆ
    ಸೆವಂತಿಗೆ-  800 ರೂ. ಕೆಜಿಗೆ
    ಮಲ್ಲಿಗೆ ದಿಂಡು-  100 ರೂ. 1ಕ್ಕೆ
    ಮಲ್ಲಿಗೆ ಹಾರ- 500 ರೂ.
    ಸುಗಂಧ ರಾಜಾ – 600 ರೂ.
    ಕಮಲದ ಹೂ-  50 ರೂ. 1ಕ್ಕೆ
    ವಿಳ್ಯದ ಎಲೆ-  100  ರೂ. 1ಕಟ್ಟು

    ಕನಕಾಂಬರ ಹಾಗೂ ಮಲ್ಲಿಗೆ ಕೆಜಿಗೆ 1,000 ರೂ. ಇದೆ. ಸೇವಂತಿಗೆ ಕೆಜಿಗೆ 800 ರೂ. ಇದೆ. ಮಲ್ಲಿಗೆ ದಿಂಡು 1ಕ್ಕೆ 100 ರೂ. ಇದೆ. ಮಲ್ಲಿಗೆ ಹಾರ 500 ರೂ. ಇದರೆ, ಸುಗಂಧ ರಾಜಾ 600 ರೂ. ಮುಟ್ಟಿದೆ. 1 ಕಮಲದ ಹೂ ಕೊಳ್ಳಬೇಕಂದ್ರೆ 50 ಕೊಡಬೇಕು. 1 ಕಟ್ಟು ವಿಳ್ಯದ ಎಲೆ ಬೆಲೆ 100 ರೂ. ತಲುಪಿದೆ.

    ಗ್ರಾಹಕರು ಹೂ ಹಣ್ಣಿನ ಬೆಲೆ ಕೇಳಿ ಫುಲ್ ಶಾಕ್ ಆಗುತ್ತಿದ್ದಾರೆ. ಆದರೂ ಬೆಲೆ ದುಪ್ಪಟ್ಟಾಗಿದ್ರು ಲಕ್ಷ್ಮಿ ಹೂವಿನ ಅಲಂಕಾರ ಮಿಸ್ ಮಾಡೋಕ್ಕಾಗುತ್ತ. ಲಕ್ಷ್ಮಿಗೆ ಎಲ್ಲಾ ತರಹದ ನೈವೇದ್ಯ ಮಾಡಬೇಕು ಅಂತಾ ಸ್ವಲ್ಪ ಜಾಸ್ತಿನೇ ದುಡ್ಡು ತೆತ್ತು ಹೆಣ್ಣು ಮಕ್ಕಳು ಹೂವಿನ ಖರೀದಿಯಲ್ಲಿ ತೊಡಗಿದ್ದಾರೆ.

    ಒಟ್ಟಿನಲ್ಲಿ ಬೆಲೆ ಏರಿಕೆ ನಡುವೆಯೂ ಲಕ್ಷ್ಮಿ ಹಬ್ಬದ ಸಂಭ್ರಮ ಮಾರ್ಕೆಟ್‍ನಲ್ಲಿ ಕಾಣಿಸುತ್ತಿದೆ. ಜನ ರೇಟ್‍ಗೆ ಚಿಂತಿಸದೆ, ಆಯಸ್ಸು, ಆರೋಗ್ಯ, ಐಶ್ವರ್ಯ, ಸಮೃದ್ಧಿ ಕೊಡುವ ಲಕ್ಷ್ಮಿಯನ್ನು ಆರಾಧಿಸೋಕೆ ಹೂವು ಹಣ್ಣು ಖರೀದಿ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv