Tag: Flower Show

  • 10 ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಅದ್ಧೂರಿ ತೆರೆ- ಅಪ್ಪು ಜಾತ್ರೆ ವೀಕ್ಷಣೆಗೆ ಹರಿದು ಬಂತು ಜನಸಾಗರ

    10 ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಅದ್ಧೂರಿ ತೆರೆ- ಅಪ್ಪು ಜಾತ್ರೆ ವೀಕ್ಷಣೆಗೆ ಹರಿದು ಬಂತು ಜನಸಾಗರ

    ಬೆಂಗಳೂರು: ಲಾಲ್ ಬಾಗ್ ನಾ ಫಲಪುಷ್ಪ ಪ್ರದರ್ಶನಕ್ಕೆ ಅದ್ದೂರಿಯಾಗಿ ತೆರೆ ಬಿದ್ದಿದೆ. ಡಾ. ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಗೆ ಅರ್ಪಿಸಿದ್ದ ಫ್ಲವರ್ ಶೋ ವೀಕ್ಷಣೆಗೆ ಜನ ಸಾಗರವೇ ಹರಿದು ಬಂದಿದೆ.

    75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ಆಯೋಜನೆ ಮಾಡಿದ್ದ ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನಕ್ಕೆ ತೆರೆ ಬಿದ್ದಿದೆ. ಆಗಸ್ಟ್ 5ರಿಂದ 15ರ ವರೆಗೆ 10 ದಿನಗಳ ಕಾಲ ನಡೆದ ಫ್ಲವರ್ ಶೋಗೆ ಕಡೆಯ ದಿನವಾದ ಸೋಮವಾರ ದಾಖಲೆ ಮಟ್ಟದಲ್ಲಿ ಜನ ಸಾಗರ ಹರಿದು ಬಂದಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಈ ‘ಪ್ರಣಯ ಪಕ್ಷಿ’ಗಳದ್ದೇ ಮಾತು

    ಕೊರೋನಾ ಬಳಿಕ ಅದ್ಧೂರಿ ಆಗಿ ನಡೆದ ಮತ್ತು ಅಗಲಿದ ಕನ್ನಡ ನಾಡಿನ ಕರುನಾಡ ರತ್ನಗಳಾದ ಡಾ.ರಾಜ್ ಕುಮಾರ್ ಮತ್ತು ಡಾ.ಪುನೀತ್ ರಾಜ್ ಕುಮಾರ್‍ಗೆ ಈ ಬಾರಿ ಫ್ಲವರ್ ಶೋವನ್ನು ಅರ್ಪಿಸಲಾಗಿತ್ತು. ಹೀಗಾಗಿ ಫ್ಲವರ್ ಶೋ ವೀಕ್ಷಿಸಲು ಕಳೆದ 2 ದಿನಗಳಲ್ಲಿ 2 ಲಕ್ಷಕ್ಕೂ ಅಧಿಕ ಜನಸ್ತೋಮವೇ ಆಗಮಿಸಿ ಹೂವಿನ ಲೋಕವನ್ನು ಕಣ್ತುಂಬಿಕೊಂಡಿದ್ದಾರೆ. ಹೂವಿನ ಲೋಕಕ್ಕೆ ಮರಳಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತೋಷ ಪಟ್ಟಿದ್ದಲ್ಲದೇ, ಕರುನಾಡ ರತ್ನ, ನಗುವಿನ ಒಡೆಯ ಡಾ.ಪುನೀತ್ ರಾಜ್‍ಕುಮಾರ್ ರನ್ನು ಕಂಡು ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

    ಕಳೆದ 10 ದಿನಗಳ ಕಾಲ ನಡೆದ ಈ ಪ್ಲವರ್ ಶೋ ವೀಕ್ಷಣೆಗೆ ಸುಮಾರು 10 ಲಕ್ಷ ಕ್ಕೂ ಹೆಚ್ಚು ಜನ ಆಗಮಿಸಿದ್ದಾರಂತೆ. ಇಷ್ಟು ಪ್ರಮಾಣದಲ್ಲಿ ಜನ ಬಂದಿರೋದು ಇದೇ ಮೊದಲು. ಈ ಬಾರಿಯ ಫ್ಲವರ್ ಶೋನಿಂದ ತೋಟಗಾರಿಕೆ ಇಲಾಖೆಗೆ ಬರೋಬ್ಬರಿ 3.36 ಕೋಟಿ ಆದಾಯ ಬಂದಿದೆಯಂತೆ. ಒಟ್ಟಾರೆ 10 ದಿನಗಳ ಫ್ಲವರ್ ಶೋಗೆ ಅದ್ದೂರಿಯಾಗಿ ತೆರೆ ಬಿದ್ದಿದ್ದು ನಗುವಿನ ದೊರೆಗಳಾದ ಡಾ.ರಾಜ್, ಅಪ್ಪುವನ್ನು ಹೂವಿನಲ್ಲಿ ಕಂಡು ಹೂವಿನ ಪ್ರೇಮಿಗಳು ಖುಷಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲಾಲ್‍ಬಾಗ್‍ನಲ್ಲಿ ಈಗ ಎಲ್ಲೆಲ್ಲೂ ಅಪ್ಪು – ನಗುವಿನ ಒಡೆಯನನ್ನು ನೋಡಲು ಮುಗಿಬಿದ್ದ ಜನ

    ಲಾಲ್‍ಬಾಗ್‍ನಲ್ಲಿ ಈಗ ಎಲ್ಲೆಲ್ಲೂ ಅಪ್ಪು – ನಗುವಿನ ಒಡೆಯನನ್ನು ನೋಡಲು ಮುಗಿಬಿದ್ದ ಜನ

    ಬೆಂಗಳೂರು: ನಗರದ ಲಾಲ್‍ಬಾಗ್‍ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ 500ಕ್ಕೂ ಹೆಚ್ಚು ಹೂಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅರಳಿ ನಗುತ್ತಿದ್ದಾರೆ. ಈ ನಗುವಿನ ಒಡೆಯನನ್ನು ನೋಡಲು ಜನ ಸಾಗರವೇ ಹರಿದು ಬರುತ್ತಿದೆ.

    75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಫಲ ಪುಷ್ಪಪ್ರದರ್ಶನ ಮಾಡಲಾಗುತ್ತಿದೆ. ಈ ಬಾರಿ ಅಪ್ಪು ಮತ್ತು ಡಾ.ರಾಜ್‍ಕುಮಾರ್ ಥೀಮ್‍ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು, ಮೂರನೇ ದಿನವಾದ ಶನಿವಾರದಂದು ರಾಜ್ಯದ ಮೂಲೆ ಮೂಲೆಗಳಿಂದ ಜನ ಸಾಗರವೇ ಹರಿದು ಬಂದಿತ್ತು. ಹೂವಿನಲ್ಲಿ ಅರಳಿದ ಪುನೀತ್ ರಾಜ್ ಕುಮಾರ್ ಅವರನ್ನು ಕಂಡು ಕೆಲವರು ಭಾವುಕರಾದರೆ, ಇನ್ನೂ ಕೆಲವರು ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ ನಾಲ್ಕೈದು ದಿನ ಮಳೆ ಸಂಭವ – ಉಡುಪಿ, ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್

    ಶನಿವಾರ ಮಳೆಯನ್ನು ಲೆಕ್ಕಿಸದೇ 20 ಸಾವಿರಕ್ಕೂ ಹೆಚ್ಚು ಜನ ಲಾಲ್ ಬಾಗ್‍ಗೆ ಭೇಟಿ ಕೊಟ್ಟು ಸಖತ್ ಎಂಜಾಯ್ ಮಾಡಿದ್ದರು. ಒಟ್ಟು 500 ಬಗೆಯ ವಿವಿಧ ಜಾತಿಯ ಹೂವುಗಳಿಂದ ಹೂವಿನ ಲೋಕವೇ ಅರಳಿದ್ದು, ಆಗಸ್ಟ್ 15ರವರೆಗೆ ಈ ವಿಶೇಷ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಸಾರ್ವಜನಿಕರು, ಪ್ರವಾಸಿಗರು, ವಿದೇಶಿ ಪ್ರೇಕ್ಷಕರು ಹಾಗೂ ಹೆಚ್ಚಾಗಿ ಶಾಲಾ ಮಕ್ಕಳು ಆಗಮಿಸಿ ಫಲಪುಷ್ಪ ಪ್ರದರ್ಶನದ ಕಳೆಯನ್ನು ಮತ್ತಷ್ಟು ಹೆಚ್ಚಿಸಿದ್ದರು. ಇನ್ನೂ ಇಲ್ಲಿನ ಹೂಗಳ ಲೋಕ, ಶಿಸ್ತು, ಸ್ವಚ್ಛತೆ ಹಾಗೂ ತೋಟಗಾರಿಕೆ ಇಲಾಖೆಯ ಈ ವರ್ಷದ ಥೀಮ್ ಕಂಡು ಪ್ರವಾಸಿಗರು ಫುಲ್ ಫಿದಾ ಆಗಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಲಾಲ್‌ಬಾಗ್‌ನಲ್ಲಿ ಅಪ್ಪು ನೆನಪಿನ ಫಲಪುಷ್ಪ ಪ್ರದರ್ಶನ

    ವೀಕೆಂಡ್ ಇದ್ದಿದ್ದರಿದ ಫ್ಲವರ್ ಶೋಗೆ ಹೆಚ್ಚಿನ ಜನ ಲಾಲ್‍ಬಾಗ್‍ಗೆ ಆಗಮಿಸಿದ್ದರು. ವಿವಿಧ ಜಾತಿಯ ಹಳದಿ, ಪಿಂಕ್ ಶೇಡ್‍ನಲ್ಲಿ ಹೂಗಳು ಕಂಗೊಳಿಸುತ್ತಿದ್ದವು. ಹಚ್ಚ ಹಸಿರಿನಿಂದ ಸೌಂದರ್ಯವನೆಲ್ಲಾ ತಮ್ಮ ಬಳಿಯೇ ಇರಿಸಿಕೊಂಡಿರುವ ಸುಂದರ ಗಿಡಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತಿತ್ತು. ಲಾಲ್‍ಬಾಗ್‍ನಲ್ಲಿರುವ ಈ ಹೂವುಗಳಿಗೆ ಮನಸೋತ ಜನ ಫೋಟೋಗಳನ್ನ ಕ್ಲಿಕ್ಕಿಸಿಕೊಳ್ಳುವ ದೃಶ್ಯಗಳು ಸಾಮಾನ್ಯವಾಗಿದ್ದವು.

    Live Tv
    [brid partner=56869869 player=32851 video=960834 autoplay=true]

  • ನಾಳೆಯಿಂದ ಲಾಲ್‌ಬಾಗ್‌ನಲ್ಲಿ ಅಪ್ಪು ನೆನಪಿನ ಫಲಪುಷ್ಪ ಪ್ರದರ್ಶನ

    ನಾಳೆಯಿಂದ ಲಾಲ್‌ಬಾಗ್‌ನಲ್ಲಿ ಅಪ್ಪು ನೆನಪಿನ ಫಲಪುಷ್ಪ ಪ್ರದರ್ಶನ

    ಬೆಂಗಳೂರು: ನಾಳೆಯಿಂದ 10 ದಿನಗಳ ಕಾಲ ಲಾಲ್‌ಬಾಗ್‌ನಲ್ಲಿ ಪುಷ್ಪ ಲೋಕ ಅನಾವರಣಗೊಳ್ಳಲಿದೆ. ದಿವಂಗತ ಡಾ.ಪುನೀತ್ ರಾಜ್‌ಕುಮಾರ್ ನೆನಪಿನಾರ್ಥವಾಗಿ ಈ ಬಾರಿ ಫ್ಲವರ್ ಶೋ ನಡೆಯುತ್ತಿದ್ದು, 10 ಲಕ್ಷಕ್ಕೂ ಹೆಚ್ಚು ಹೂವುಗಳಿಂದ ವಿವಿಧ ಆಕೃತಿಗಳನ್ನು ಸಿಂಗರಿಸಲಾಗಿದೆ.

    ಸಾಂದರ್ಭಿಕ ಚಿತ್ರ

    ಗಾಜಿನಮನೆಯಲ್ಲಿ ಮೈಸೂರಿನ ಶಕ್ತಿಧಾಮ, ಗಾಜನೂರು ಮನೆ, ಡಾ.ರಾಜ್, ಡಾ.ಪುನೀತ್ ರಾಜ್‌ಕುಮಾರ್ ಪ್ರತಿಮೆಗಳನ್ನು ಪುಷ್ಪಗಳಲ್ಲಿ ಅರಳಿಸಲಾಗಿದೆ. ನಾಳೆಯಿಂದ ಆಗಸ್ಟ್ 15ರ ವರೆಗೂ ಫಲಪುಷ್ಪ ಪ್ರದರ್ಶನ ಇರಲಿದ್ದು, ಪ್ರತಿದಿನ ನಿತ್ಯ 12 ಗಂಟೆಗಳ ಕಾಲ ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿರಲಿದೆ. ಇದನ್ನೂ ಓದಿ: ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಗೆದ್ದ ಪ್ರಿಯಾ ಮೋಹನ್‍ಗೆ 5 ಲಕ್ಷ ನಗದು ಪುರಸ್ಕಾರ: ನಾರಾಯಣಗೌಡ

    ಸಾಮಾನ್ಯ ದಿನಗಳಲ್ಲಿ 70 ರೂಪಾಯಿ, ರಜಾ ದಿನಗಳಲ್ಲಿ 75 ರೂ.ಪಾಯಿ ಪ್ರವೇಶ ಶುಲ್ಕ ಇದೆ ಎಂದು ತೋಟಗಾರಿಕಾ ಇಲಾಖೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ನಟ ದಿ. ಪುನೀತ್ ಹೆಸರಲ್ಲಿ ಆಗಸ್ಟ್ 5ರಿಂದ ಲಾಲ್‍ಬಾಗ್‍ನಲ್ಲಿ ಫ್ಲವರ್ ಶೋ: ಮುನಿರತ್ನ

    ನಟ ದಿ. ಪುನೀತ್ ಹೆಸರಲ್ಲಿ ಆಗಸ್ಟ್ 5ರಿಂದ ಲಾಲ್‍ಬಾಗ್‍ನಲ್ಲಿ ಫ್ಲವರ್ ಶೋ: ಮುನಿರತ್ನ

    ಬೆಂಗಳೂರು: ಈ ವರ್ಷ ಬೆಂಗಳೂರಿನ ಲಾಲ್‍ಬಾಗ್ ನಲ್ಲಿ ಫ್ಲವರ್ ಶೋ ನಡೆಯಲಿದೆ. ಆಗಸ್ಟ್ 5 ರಿಂದ 15 ರವರೆಗೆ ಫ್ಲವರ್ ಶೋ ನಡೆಯಲಿದ್ದು, ಆ.5ರಂದು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ ಎಂದು ತೋಟಗಾರಿಕಾ ಸಚಿವ ಮುನಿರತ್ನ ಹೇಳಿದ್ದಾರೆ.

    ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಫ್ಲವರ್ ಶೋ ನಡೆಯಲಿದೆ. ಆಗಸ್ಟ್ 15ರ ಬಳಿಕ ಒಂದೆರಡು ದಿನಗಳ ಕಾಲ ಮುಂದುವರಿಸುವ ಬಗ್ಗೆ ಚರ್ಚೆ ನಡೆದಿದೆ. ದಿ. ನಟ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ನಡೆಯುತ್ತಿರುವ ಈ ಬಾರಿಯ ಫ್ಲವರ್ ಶೋಗೆ ವಿದೇಶಗಳಿಂದಲೂ ಹೂವುಗಳನ್ನು ತರಿಸಲಾಗಿದೆ ಎಂದರು. ಇದನ್ನೂ ಓದಿ: ಕುದುರೆ ಏರಿ ಫುಡ್ ಡೆಲಿವರಿ ಮಾಡಿದ ವ್ಯಕ್ತಿ ಪತ್ತೆ- ಆದರೆ ಈತ ಸ್ವಿಗ್ಗಿ ಉದ್ಯೋಗಿಯಲ್ಲ!

    ರಾಜ್ಯದಲ್ಲಿ ಮಳೆಯಿಂದ ತೋಟಗಾರಿಕೆ ಬೆಳೆ ನಷ್ಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಂಪೂರ್ಣ ವರದಿ ಅಧಿಕಾರಿಗಳು ತರಿಸುತ್ತಿದ್ದಾರೆ. ವರದಿ ಬಳಿಕ ರೈತರಿಗೆ ಮಾಡಬೇಕಿರುವ ಸಹಾಯವನ್ನು ಖಂಡಿತವಾಗಿಯೂ ಮಾಡುತ್ತೇವೆ. ಏನೇನು ನಷ್ಟ ಉಂಟಾಗಿದೆಯೋ ಅದನ್ನು ಗಮನಿಸುತ್ತೇವೆ. ಪ್ರಾಮಾಣಿಕವಾಗಿ ನಾವು ರೈತರ ಜೊತೆ ಇದ್ದೇವೆ ಎಂದು ತಿಳಿಸಿದರು.

    ಈ ಬಾರಿ ಫಲಪುಷ್ಪ ಪ್ರದರ್ಶನಕ್ಕೆ ಪುನೀತ್ ಹಾಗೂ ಗಾಜನೂರಿನ ಮನೆ ವಿಶೇಷವಾಗಿದೆ. ಲಾಲ್‍ಬಾಗ್ ಫ್ಲವರ್ ಶೋ ಕೋವಿಡ್‍ನಿಂದ ಕಾರ್ಯಕ್ರಮ ಮಾಡಿರಲಿಲ್ಲ. ಆದರೆ ಈ ಬಾರಿ ಆಗಸ್ಟ್ 15ರಂದು ಹಿಂದೆ ಮಾಡುತ್ತಿದ್ದಕ್ಕಿಂತ ಹೆಚ್ಚಾಗಿ ಮಾಡುತ್ತಿದ್ದೇವೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಫಲಪುಷ್ಪ ಪ್ರದರ್ಶನದಲ್ಲಿ ಅರಳಿದ ಹೂ ಮನಸ್ಸಿನ ‘ಅಪ್ಪು’

    ಫಲಪುಷ್ಪ ಪ್ರದರ್ಶನದಲ್ಲಿ ಅರಳಿದ ಹೂ ಮನಸ್ಸಿನ ‘ಅಪ್ಪು’

    ಬಾಗಲಕೋಟೆ: ಜಿಲ್ಲೆಯ ಹೊರವಲಯದಲ್ಲಿ ತೋಟಗಾರಿಕೆ ಮೇಳವನ್ನ ಹಮ್ಮಿಕೊಳ್ಳಲಾಗಿದ್ದು, ಫಲ ಪುಷ್ಪ ಪ್ರದರ್ಶನದಲ್ಲಿ ಪುನೀತ್ ರಾಜ್‍ಕುಮಾರ್ ರಂಗೋಲಿಯಲ್ಲಿ ಅರಳಿದ ಕಲಾಕೃತಿ ಅತ್ಯಾಕರ್ಷಕವಾಗಿ ಎಲ್ಲರ ಗಮನ ಸೆಳೆಯುತ್ತಿದೆ.

    ಹುಬ್ಬಳ್ಳಿಯ ರಂಗೋಲಿ ಕಲಾವಿದ ಶಿವಲಿಂಗಪ್ಪ ಬಡಿಗೇರ್ ಅವರು ತಮ್ಮ ಕೈಚಳಕದಿಂದ ನಾಲ್ಕು ಗಂಟೆ ಕಾಲ ಬಿಡಿಸಿದ ಅಪ್ಪು ಕಲಾಕೃತಿ ಚಿತ್ರ ಎಲ್ಲರ ಆಕರ್ಷಣ ಕೇಂದ್ರ ಬಿಂದುವಾಗಿದೆ. ಯುವಕ, ಯುವತಿಯರು, ಚಿಕ್ಕ-ಚಿಕ್ಕ ಮಕ್ಕಳು ಫಲಪುಷ್ಪ ಪ್ರದರ್ಶನದಲ್ಲಿ ರಂಗೋಲಿಯಲ್ಲಿ ಅರಳಿದ ಅಪ್ಪು ಚಿತ್ರದ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ. ಇದನ್ನೂ ಓದಿ: ಪ್ರಕೃತಿ ಸೌಂದರ್ಯ ಸವಿಯಿರಿ: ಬೆಂಗಳೂರು-ಶಿವಮೊಗ್ಗ ರೈಲಿಗೆ ವಿಸ್ಟಾಡಾಮ್ ಕೋಚ್

    ಶಿವಲಿಂಗಪ್ಪ ಬಡಿಗೇರ ಈ ಕುರಿತು ಮಾತನಾಡಿ, ಹಲವಾರು ತೋಟಗಾರಿಕೆ ಮೇಳದಲ್ಲಿ ಕವಿಗಳು, ಸಾಹಿತಿಗಳು ಅನೇಕ ಚಿತ್ರಗಳನ್ನು ರಂಗೋಲಿ ಮೂಲಕ ಬಿಡಿಸಿ ಪ್ರದರ್ಶನ ಮಾಡಿದ್ದೇನೆ. ಈ ನಡುವೆ ನಮ್ಮನ್ನ ಅಗಲಿದ ಪುನೀತ್ ಅವರ ಚಿತ್ರವನ್ನು ಈ ಬಾಗಲಕೋಟೆ ತೋಟಗಾರಿಕೆ ಮೇಳದಲ್ಲಿ ರಂಗೋಲಿಯಲ್ಲಿ ಬಿಡಿಸಿರುವುದು ನನ್ನ ಸೌಭಾಗ್ಯ ಎಂದರು.

    ಹೂ ಮನಸ್ಸಿನ ಮನುಷ್ಯನನ್ನು ತೋಟಗಾರಿಕೆ ಮೇಳದ ಫಲಪುಷ್ಪ ಪ್ರದರ್ಶನದಲ್ಲಿ ಜನಮೆಚ್ಚುಗೆ ಪಡೆದು ಎಲ್ಲರೂ ಅವರ ರಂಗೋಲಿ ಭಾವಚಿತ್ರದ ಮುಂದೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದನ್ನು ನೋಡುತ್ತಿದ್ದರೆ ನನಗೆ ಹೆಮ್ಮೆ ಎನಿಸುತ್ತದೆ. ಜೊತೆಗೆ ಮಹಾನ್ ನಟನನ್ನು ಕಳೆದುಕೊಂಡಿದ್ದಕ್ಕೆ ದುಃಖವೂ ಆಗುತ್ತಿದೆ. ಪುನೀತ್ ಮೃತಪಟ್ಟಿಲ್ಲ ಅವರು ಚಿತ್ರದ ಮೂಲಕ ಜೀವಂತವಾಗಿದ್ದಾರೆ ಎಂದು ನೆನೆದರು. ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ, ಪೀಣ್ಯ ಫ್ಲೈಓವರ್ ಸಂಚಾರ ಬಂದ್ – ಬದಲಿ ಮಾರ್ಗ ಇಲ್ಲಿದೆ

    ಮೂರು ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ವಿವಿಧ ಫಲಪುಷ್ಪ ಪ್ರಾತ್ಯಕ್ಷಿಕೆಗಳು ನಡೆಯಲಿದೆ.

  • ಬೆಂಗಳೂರಿನಲ್ಲಿ ಕೊರೊನಾ ಕರಿನೆರಳು – ಈ ಬಾರಿ ಇಲ್ಲ ಫ್ಲವರ್ ಶೋ

    ಬೆಂಗಳೂರಿನಲ್ಲಿ ಕೊರೊನಾ ಕರಿನೆರಳು – ಈ ಬಾರಿ ಇಲ್ಲ ಫ್ಲವರ್ ಶೋ

    ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಇನ್ನೂ ಮೂರು ದಿನ ಬಾಕಿಯಿದೆ. ಆದರೆ ಪ್ರತಿ ವರ್ಷ ಗಣರಾಜ್ಯೋತ್ಸವದ ಪ್ರಯುಕ್ತ ಲಾಲ್‍ಬಾಗ್‍ನಲ್ಲಿ ನಡೆಯುತ್ತಿದ್ದ ಫಲಪುಷ್ಪ ಪ್ರದರ್ಶನ ಈ ಬಾರಿ ರದ್ದಾಗಿದೆ.

    ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾದ ಫಲಪುಷ್ಪ ರದ್ದತಿ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಕುಸುಮಾ, ಕೊರೊನಾ ಭೀತಿ ಹಿನ್ನೆಲೆ ಫ್ಲವರ್ ಶೋವನ್ನು ಕೈ ಬಿಟ್ಟಿದ್ದೇವೆ. ಪ್ರತಿವರ್ಷ ಐದು ಲಕ್ಷಕ್ಕೂ ಹೆಚ್ಚು ಮಂದಿ ಫ್ಲವರ್ ಶೋ ವೀಕ್ಷಣೆ ಮಾಡುತ್ತಿದ್ದರು ಎಂದು ಹೇಳಿದರು.

    ಒಂದು ಪ್ರದರ್ಶನಕ್ಕೆ ಎರಡು ಕೋಟಿಗೂ ಅಧಿಕ ವೆಚ್ಚ ತಗುಲುತ್ತಿತ್ತು. ಫ್ಲವರ್ ಶೋ ವೇಳೆ ಹೆಚ್ಚು ಜನ ಉದ್ಯಾನವನಕ್ಕೆ ಬರುತ್ತಾರೆ. ಈ ವೇಳೆ ಕ್ರೌಡ್ ಕಂಟ್ರೋಲ್ ಮಾಡುವುದು ಅಸಾಧ್ಯ. 1912 ರಿಂದ ಆರಂಭವಾದ ಪ್ಲವರ್ ಶೋ ಸುಮಾರು 109 ವರ್ಷಗಳ ಕಾಲ ಸತತವಾಗಿ ಆಚರಿಸಿಕೊಂಡು ಬಂದಿದೆ ಎಂದು ತಿಳಿಸಿದರು.

    ತೋಟಗಾರಿಕೆ ಇಲಾಖೆ ಈ ವರ್ಷ ಆಯೋಜನೆ ಮಾಡುವ ಲೆಕ್ಕಾಚಾರ ಇಟ್ಟುಕೊಂಡಿತ್ತು. ಈ ಬಗ್ಗೆ ಬಿಬಿಎಂಪಿಗೆ ತೋಟಗಾರಿಕೆ ಇಲಾಖೆ ಅಭಿಪ್ರಾಯ ಕೇಳಿತ್ತು. ಇದಕ್ಕೆ ಪ್ರತಿಯಾಗಿ ಬಿಬಿಎಂಪಿ ಫಲಪುಷ್ಪ ಪ್ರದರ್ಶನ ಆಯೋಜಿಸುವುದಕ್ಕೆ ಅನುಮತಿ ನೀಡಿಲ್ಲ. ಹೀಗಾಗಿ ಈ ವರ್ಷದ ಫ್ಲವರ್ ಶೋವನ್ನು ತೋಟಗಾರಿಕೆ ಇಲಾಖೆ ಕೈ ಬಿಟ್ಟಿದೆ ಎಂದರು.

    ಕೋವಿಡ್ 19 ನಿಂದಾಗಿ ಸ್ವಾತಂತ್ರ್ಯ ದಿನಾಚರಣೆಯಂದು ನಡೆಯಬೇಕಿದ್ದ ಫ್ಲವರ್ ಶೋ ರದ್ದಾಗಿತ್ತು. ಈಗ ಮತ್ತೊಮ್ಮೆ ಕೊರೊನಾ ಕಾರಣದಿಂದಾಗಿ ಫ್ಲವರ್ ಶೋ ರದ್ದಾಗಿದೆ.

  • 20 ವರ್ಷದ ಬಳಿಕ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಫ್ಲವರ್ ಶೋ ರದ್ದು

    20 ವರ್ಷದ ಬಳಿಕ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಫ್ಲವರ್ ಶೋ ರದ್ದು

    ಬೆಂಗಳೂರು: ಮಹಾಮಾರಿ ಕೊರೊನಾದಿಂದ 20 ವರ್ಷದ ಬಳಿಕ ಈ ಬಾರಿ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಫಲಪುಷ್ಟ ಪ್ರದರ್ಶನವನ್ನು ರದ್ದು ಮಾಡಲಾಗಿದೆ.

    ಪ್ರತಿ ವರ್ಷ ಸ್ವಾತಂತ್ರ್ಯ ದಿನಚರಣೆಗೆ ಫ್ಲವರ್ ಶೋ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಭಯದಿಂದಾಗಿ ಫಲಪುಷ್ಟ ಪ್ರದರ್ಶನವನ್ನು ರದ್ದು ಮಾಡಲಾಗಿದೆ. ಕರ್ನಾಟಕ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ತೋಟಗಾರಿಕಾ ಸಂಘದ ಸಹಯೋಗದಲ್ಲಿ ಲಾಲ್‍ಬಾಗ್‍ನಲ್ಲಿ ಫ್ಲವರ್ ಶೋ ಆಯೋಜನೆ ಮಾಡಲಾಗುತ್ತಿತ್ತು.

    ಪ್ರತಿವರ್ಷ ಫ್ಲವರ್ ಶೋಗೆ ಎರಡು ತಿಂಗಳಿಂದಲೇ ಸಿದ್ಧತೆಗಳನ್ನ ನಡೆಸಲಾಗುತ್ತಿತ್ತು. ಜೊತೆಗೆ ಆಗಸ್ಟ್ ತಿಂಗಳ ಮೊದಲ ವಾರದಲ್ಲಿಯೇ ಪ್ರದರ್ಶನಕ್ಕೆ ಅನುವು ಮಾಡಲಾಗುತ್ತಿತ್ತು. ಆದರೆ ಈ ವರ್ಷ ಆಗಸ್ಟ್ ಮೊದಲವಾರ ಬಂದರೂ ಯಾವುದೇ ಸಿದ್ಧತೆಗಳು ನಡೆದಿಲ್ಲ. ಫ್ಲವರ್ ಶೋಗೆ ಲಕ್ಷಾಂತರ ಮಂದಿ ಲಾಲ್‍ಬಾಗ್‍ಗೆ ಬರುತ್ತಾರೆ. ಇದರಿಂದ ಕೊರೊನಾ ಸೋಂಕು ಹೆಚ್ಚಾಗಬಹುದು ಎಂಬ ಕಾರಣಕ್ಕಾಗಿ ಈ ಬಾರಿಯ ಫ್ಲವರ್ ಶೋವನ್ನು ರದ್ದುಪಡಿಸಲಾಗುತ್ತಿದೆ.

    1912 ರಿಂದ ಆರಂಭವಾದ ಫ್ಲವರ್ ಶೋ 108 ವರ್ಷಗಳ ಕಾಲ ಸತತವಾಗಿ ಆಚಾರಿಸಿಕೊಂಡು ಬಂದಿದೆ. ಆದರೆ ಕೊರೊನಾದಿಂದ 20 ವರ್ಷದ ಬಳಿಕ ಈ ಬಾರಿ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಫಲಪುಷ್ಟ ಪ್ರದರ್ಶನವನ್ನು ರದ್ದು ಮಾಡಲಾಗಿದೆ.

  • ಕೃಷಿ ಮೇಳಕ್ಕೆ ಲಕ್ಷಕ್ಕೂ ಹೆಚ್ಚು ಜನರ ಭೇಟಿ- ಗಮನ ಸೆಳೆದ ಪುಷ್ಪ ಮೇಳ

    ಕೃಷಿ ಮೇಳಕ್ಕೆ ಲಕ್ಷಕ್ಕೂ ಹೆಚ್ಚು ಜನರ ಭೇಟಿ- ಗಮನ ಸೆಳೆದ ಪುಷ್ಪ ಮೇಳ

    ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ರೈತರ ಜಾತ್ರೆಯ ಸಂಭ್ರಮ ಜೋರಾಗಿ ನಡೆದಿದೆ. ನಗರದ ಹೊರವಲಯದ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಕೃಷಿ ಮೇಳಕ್ಕೆ ಈ ಬಾರಿ ಮೊದಲ ದಿನವೇ ಒಂದು ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ.

    ಈ ಬಾರಿಯ ಕೃಷಿ ಮೇಳದಲ್ಲಿ ವಿಶೇಷ ಆಕರ್ಷಣೆ ಎಂಬಂತೆ ಪುಷ್ಪ ಮೇಳ ಗಮನ ಸೆಳೆಯಿತು. ಜರ್ಬೇರಾ, ಲಿಲ್ಲಿ, ಗುಲಾಬಿ ಹೂವುಗಳು ಎಲ್ಲರನ್ನು ತಿರುಗಿ ನೋಡುವಂತೆ ಮಾಡಿದವು. ವಿವಿಧ ತಾಲೂಕು ಹಾಗೂ ಜಿಲ್ಲೆಗಳಿಂದ ಬಂದಿದ್ದ ರೈತರು ವಿವಿಧ ತಳಿ, ತಂತ್ರಜ್ಞಾನವನ್ನು ನೋಡುವುದರಲ್ಲಿ ಬ್ಯುಸಿಯಾಗಿದ್ದರೆ, ಇತ್ತ ಯುವಕ, ಯುವತಿಯರು, ಪುಷ್ಪ ಪ್ರದರ್ಶನದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದರಲ್ಲಿ ನಿರತರಾಗಿದ್ದರು.

    ಕೃಷಿ ಮೇಳದ ಫ್ಲವರ್ ಶೋದಲ್ಲಿ ಹೂವಿನ ಲೋಕವೇ ಅನಾವರಣಗೊಂಡಿತ್ತು. ಕಣ್ಣಿಗೆ ತಂಪು, ಮನಕ್ಕೆ ಮುದ ನೀಡುವ ತರಹೇವಾರಿ ಪುಷ್ಪಗಳು ಫ್ಲವರ್ ಶೋದ ಹೈಲೈಟ್ ಆಗಿತ್ತು. ಸೌಂದರ್ಯ ಪುಷ್ಪಗಳ ಜೊತೆಗೆ ಅಲಂಕಾರಿಕ ಔಷಧಿ ಪುಷ್ಪಗಳು ಕೂಡಾ ಸುಗಂಧ ಹೊರಸೂಸುವ ಪುಷ್ಪಗಳೊಂದಿಗೆ ಸ್ಪರ್ಧೆಗೆ ಇಳಿದಂತೆ ಕಂಗೊಳಿಸಿದವು. ಜೊತೆಗೆ ಸಂಪಿಗೆ, ಸೇವಂತಿ, ದಾಸವಾಳ, ಚಕ್ರಮಣಿ, ಸರ್ಪಗಂಡ, ಬೃಂದ ರಾಜಾ ಹೂವುಗಳನ್ನ ಅಲಂಕರಿಸಿ ಇಡಲಾಗಿತ್ತು.

    ಒಂದು ಕಡೆ ಹೂವಿನ ಅಲಂಕಾರ ಇದ್ದರೆ, ಮತ್ತೊಂದೆಡೆ ಕಲ್ಲಗಂಡಿ ಹಣ್ಣಿನಲ್ಲಿ ದೇಶದ ಪ್ರಮುಖ ಗಣ್ಯರಾದ ಸಿದ್ಧಾರೂಢ ಶ್ರೀ, ಪೇಜಾವರಶ್ರೀ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ, ಸ್ವಾಮಿ ವಿವೇಕಾನಂದ, ಗಾಂಧೀಜಿ, ದ.ರಾ.ಬೇಂದ್ರೆ ಹಾಗೂ ಅಂಬೇಡ್ಕರ್ ಸೇರಿದಂತೆ ಇತರರ ಚಹರೆಯನ್ನು ಕೆತ್ತನೆ ಮಾಡಲಾಗಿತ್ತು. ಪ್ರತಿ ವರ್ಷದಂತೆ ಈ ಬಾರಿ ಸಹ ಉತ್ತರ ಕರ್ನಾಟಕದ ಜನತೆ ಕೃಷಿ ಮೇಳದಲ್ಲಿ ಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಂಡರು.

  • ಮಂಜಿನ ನಗರಿ ಮಡಿಕೇರಿಗೆ ಪುಷ್ಪರಾಣಿಯರ ಆಗಮನ

    ಮಂಜಿನ ನಗರಿ ಮಡಿಕೇರಿಗೆ ಪುಷ್ಪರಾಣಿಯರ ಆಗಮನ

    – ಮೇಳೈಸಲಿದೆ ಕೊಡಗಿನ ವಿಶೇಷತೆ
    – ಫೆ 7ರಿಂದ ಫಲಪುಷ್ಪ ಪ್ರದರ್ಶನ

    ಮಡಿಕೇರಿ: ಹೂವಿನ ರಾಣಿಯರ ಆಗಮನಕ್ಕೆ ಮಡಿಕೇರಿ ಸಂಪೂರ್ಣ ಸಿದ್ಧವಾಗಿದ್ದು, ವಿವಿಧ ರೀತಿಯ ಪುಷ್ಪಗಳ ಪ್ರದರ್ಶನಕ್ಕೆ ರಾಜಾಸೀಟ್ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.

    ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಪ್ರವಾಸಿ ತಾಣವಾದ ರಾಜಾಸೀಟ್ ನ ಉದ್ಯಾನವನದಲ್ಲಿ ತೋಟಗಾರಿಕಾ ಇಲಾಖೆಯ ವತಿಯಿಂದ ವಾರ್ಷಿಕವಾಗಿ ಆಯೋಜಿಸುವ ಫಲಪುಷ್ಪ ಪ್ರದರ್ಶನ ಕಳೆದ ಒಂದೆರಡು ವರ್ಷಗಳಿಂದ ಕಾರಣಾಂತರಗಳಿಂದ ವಿಳಂಬವಾಗುತ್ತಿತ್ತು. ಇದರಿಂದಾಗಿ ಪುಷ್ಪ ಪ್ರಿಯರಿಗೆ ನಿರಾಸೆಯ ಭಾವ ಎದುರಾಗುತ್ತಿತ್ತು. ಆದರೆ ಈ ವರ್ಷ ಫಲಪುಷ್ಪ ಪ್ರದರ್ಶನವನ್ನು ಬೇಸಿಗೆ ಆರಂಭದ ಈ ಸನ್ನಿವೇಶದಲ್ಲೇ ಆಯೋಜಿಸಲು ತೋಟಗಾರಿಕಾ ಇಲಾಖೆ ಮುಂದಾಗಿದೆ.

    ಈ ನಿಟ್ಟಿನಲ್ಲಿ ಈಗಾಗಲೇ ದಿನಾಂಕವೂ ನಿಗಿದಿಗೊಂಡಿದ್ದು, ಸಿದ್ಧತೆ ಭರದಿಂದ ಸಾಗಿದೆ. ಪ್ರಸಕ್ತ ವರ್ಷದ ಫೆ.7 ರಿಂದ 10ರ ವರೆಗೆ ನಾಲ್ಕು ದಿನಗಳ ಕಾಲ ಉದ್ಯಾನವನ ಪುಷ್ಪರಾಣಿಯರಿಂದ, ಮತ್ತಿತರ ಹಲವು ಆಕರ್ಷಣೆಗಳಿಂದ ಕಂಗೊಳಿಸಲಿದೆ. ರಾಜಾಸೀಟ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಸಲಹೆ-ಸೂಚನೆಯಂತೆ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್, ಸಹಾಯಕ ನಿರ್ದೇಶಕರಾದ ಸಿ.ಎಂ. ಪ್ರಮೋದ್ ನೇತೃತ್ವದಲ್ಲಿ ಸಮಿತಿ ಮೂಲಕ ಅಗತ್ಯ ಸಿದ್ಧತೆಗಳು ಉದ್ಯಾನವನದಲ್ಲಿ ನಡೆಯುತ್ತಿವೆ. ಇದರಿಂದಾಗಿ ಪುಷ್ಪ ಪ್ರಿಯರು ಮತ್ತು ಪ್ರವಾಸಿಗರು ಮತ್ತಷ್ಟು ಸಂತಸಗೊಂಡಿದ್ದಾರೆ.

  • ರಾಜಾಸೀಟ್ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ

    ರಾಜಾಸೀಟ್ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ

    ಮಡಿಕೇರಿ: ಪ್ರವಾಸಿಗರ ನೆಚ್ಚಿನ ತಾಣ ರಾಜಾಸೀಟ್ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಬಳಸುವುದು ಮತ್ತು ಪುಷ್ಪಗಳನ್ನು ಕೀಳುವುದು ಕಂಡು ಬಂದಲ್ಲಿ 100 ರೂ. ದಂಡ ವಿಧಿಸಲು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ರಾಜಾಸೀಟ್ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅನೀಸ್, ಫೆಬ್ರವರಿ 07 ರಿಂದ 10 ರವರೆಗೆ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಈ ಮೂಲಕ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.

    ಇದರ ಜೊತೆಗೆ ರಾಜಾಸೀಟಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಪಾದಚಾರಿ ಮಾರ್ಗವನ್ನು ಮತ್ತಷ್ಟು ವಿಸ್ತಾರಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ರಾಜಾಸೀಟ್ ಬಳಿ ಹೆಚ್ಚಿನ ವಿದ್ಯುತ್ ದೀಪಗಳ ಅಳವಡಿಕೆಗೆ ಮತ್ತು ನಿರ್ವಹಣೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ರಾಜಾಸೀಟ್ ಪ್ರವೇಶ ಶುಲ್ಕದಿಂದ ರೂ. 70 ಲಕ್ಷ ಆದಾಯ ಬಂದಿರುವುದನ್ನು ಅಧಿಕಾರಿಗಳ ಗಮನಕ್ಕೆ ತಂದರು. ಅಲ್ಲದೇ ಬರುವ ತಿಂಗಳು ರಾಜಾಸೀಟ್ ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.