Tag: flour mill

  • ಹಿಟ್ಟಿನ ಗಿರಣಿಯಲ್ಲಿ ಸಿಲುಕಿದ ಬಾಲಕ- ಯಂತ್ರಕ್ಕೆ ಸಿಲುಕಿ ತುಂಡು ತುಂಡಾದ ದೇಹ

    ಹಿಟ್ಟಿನ ಗಿರಣಿಯಲ್ಲಿ ಸಿಲುಕಿದ ಬಾಲಕ- ಯಂತ್ರಕ್ಕೆ ಸಿಲುಕಿ ತುಂಡು ತುಂಡಾದ ದೇಹ

    – ಕಟರ್ ಬಳಸಿ ದೇಹದ ಭಾಗಗಳನ್ನ ಹೊರ ತೆಗೆದ ಸಿಬ್ಬಂದಿ

    ಜೈಪುರ: ಹಿಟ್ಟಿನ ಗಿರಣಿಯ ಯಂತ್ರದೊಳಗೆ ಸಿಲುಕಿ ಬಾಲಕ ಸಾವನ್ನಪ್ಪಿರುವ ಭಯಾನಕ ಘಟನೆ ಜೈಪುರದ ನಾಹರಗಢ ರಸ್ತೆಯ ಖಂಡೇಲಾವಾಲ ಫ್ಲೋರ್ ಮಿಲ್ ನಲ್ಲಿ ನಡೆದಿದೆ.

    16 ವರ್ಷದ ಅಮಿತ್ ಸಾವನ್ನಪ್ಪಿದ ಬಾಲಕ. ಅಮಿತ್ ಗಿರಣಿಯಲ್ಲಿ ಗೋಧಿಯನ್ನ ಯಂತ್ರಕ್ಕೆ ಹಾಕಿ ಹಿಟ್ಟು ಮಾಡುವ ಕೆಲಸ ಮಾಡುತ್ತಿದ್ದನು. ಈ ವೇಳೆ ಮೇಲಿನಿಂದ ಗೋಧಿ ಚೀಲ ಎಳೆಯುವಾಗ ಆಯತಪ್ಪಿ ಗಿರಣಿಯ ಯಂತ್ರದ ಮಧ್ಯೆ ಬಿದ್ದಿದ್ದಾನೆ. ಕೆಲವೇ ಕ್ಷಣಗಳಲ್ಲಿ ಅಮಿತ್ ದೇಹ ತುಂಡು ತುಂಡಾಗಿದೆ.

    ಅಮಿತ್ ದೇಹಕ್ಕೆ ಯಂತ್ರಕ್ಕೆ ಸಿಲುಕಿದ ಪರಿಣಾಮ ಕೈ, ಕಾಲು, ದೇಹ, ತಲೆ ಮತ್ತು ಕಾಲುಗಳ ಪ್ರತ್ಯೇಕಗೊಂಡಿದ್ದವು. ಕೈಗಳು ಕಟ್ ಆಗಿ ಹೊರ ಬಂದಿದ್ರೆ ಅರ್ಧ ದೇಹ ಯಂತ್ರದಲ್ಲಿಯೇ ಸಿಲುಕಿಕೊಂಡಿತ್ತು. ಇಡೀ ಗಿರಣಿ ಅಮಿತ್ ರಕ್ತದಿಂದ ಕೆಂಪು ಕೆಂಪು ಆಗಿತ್ತು. ಕೊನೆಗೆ ಗ್ಯಾಸ್ ಕಟರ್ ಬಳಸಿ ಯಂತ್ರಗಳನ್ನ ತುಂಡರಿಸಿ ಅಮಿತ್ ದೇಹವನ್ನ ಹೊರ ತೆಗೆಯಲಾಗಿದೆ.

    ಮಗ ಎರಡು ತಿಂಗಳಿನಿಂದ ಗಿರಣಿಯಲ್ಲಿ ಮಗ ಕೆಲಸ ಮಾಡುತ್ತಿದ್ದನು. ಆತನ ತಂದೆ ದೆಹಲಿಯಲ್ಲಿ ಕೂಲಿ ಕೆಲಸ ಮಾಡ್ತಾರೆ. ಅವನೇ ಕೆಲಸ ಮಾಡೋದಾಗಿ ಹೇಳಿ ಇಲ್ಲಿ ಸೇರಿಕೊಂಡಿದ್ದನು ಎಂದು ಅಮಿತ್ ತಾಯಿ ರೇಖಾ ಹೇಳಿದ್ದಾರೆ. ಮೃತ ಅಮಿತ್ ತಂದೆ ಘಟನೆ ಸಂಬಂಧ ಪೊಲೀಸರು ಗಿರಣಿ ಮಾಲೀಕ ರಮೇಶ್ ಮತ್ತು ತರುಣ್ ಕೂಲ್ವಾಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಹಿಟ್ಟಿನ ಗಿರಣಿಯ ಮೆಷಿನ್ ಒಳಗೆ ತಲೆ ಸಿಲುಕಿ ಮಹಿಳೆ ದುರ್ಮರಣ

    ಹಿಟ್ಟಿನ ಗಿರಣಿಯ ಮೆಷಿನ್ ಒಳಗೆ ತಲೆ ಸಿಲುಕಿ ಮಹಿಳೆ ದುರ್ಮರಣ

    ಕಾರವಾರ: ಹಿಟ್ಟಿನ ಗಿರಣಿಯ ಮೆಷಿನ್ ಒಳಗೆ ತಲೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ್ ನಲ್ಲಿ ನಡೆದಿದೆ.

    ಮಾಲಿನಿ ನಾಯ್ಕ(30) ಮೃತ ದುರ್ದೈವಿ. ಇಂದು ಬೆಳಗ್ಗೆ ಈ ಘಟನೆ ಸಂಭವಿಸಿದ್ದು, ಇವರು ಮಿರ್ಜಾನ್ ನಲ್ಲಿ ಹಿಟ್ಟಿನ ಮೆಷಿನ್ ನಲ್ಲಿ ಕೆಲಸ ಮಾಡುತ್ತಿದ್ದರು. ಮೃತ ಮಾಲಿನಿ ನಾಯ್ಕ ಅವರು ಎಂದಿನಂತೆ ಇಂದು ಬೆಳಗ್ಗೆ ತನ್ನ ಮನೆಯಲ್ಲಿ ಹಿಟ್ಟಿನ ಗಿರಣಿಯಲ್ಲಿ ಹಿಟ್ಟು ಮಾಡಲು ಪುಡಿಯನ್ನು ಮೆಷಿನ್ ಒಳಗೆ ಹಾಕುತ್ತಿದ್ದರು. ಈ ವೇಳೆ ಮೆಷಿನ್ ನಲ್ಲಿದ್ದ ಬ್ಲೇಡುಗಳಿಗೆ ಮಾಲಿನಿ ಅವರ ತಲೆಕೂದಲು ಸಿಲುಕಿಕೊಂಡಿದೆ.

    ತಕ್ಷಣ ಬಿಡಿಸಿಕೊಳ್ಳಲು ಸಾಧ್ಯವಾಗದೆ ಮಾಲಿನಿಯ ಅವರ ತಲೆಯು ಅದರೊಳಗೆ ಸೇರಿ ಜಜ್ಜಿಹೋಗಿದ್ದು, ತೀವ್ರ ರಕ್ತಸ್ರಾವದಿಂದಾಗಿ ಮೃತಪಟ್ಟಿದ್ದಾರೆ. ಮಿರ್ಜಾನ್ ನಲ್ಲಿ ಹಿಟ್ಟಿನ ಗಿರಣಿ ನಡೆಸುತ್ತಿದ್ದ ಮಾಲಿನಿ ನಾಯ್ಕ ಕಾರವಾರ ಮೂಲದ ಹಪ್ಪಳ ತಯಾರಿಕಾ ಕಂಪನಿಯವರಿಗೆ ಹಪ್ಪಳ ತಯಾರಿಸಿ ಕೂಡ ನೀಡುತ್ತಿದ್ದರು.

    ಈ ಘಟನೆ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews