Tag: Floral Tea

  • ರೋಜ್ ಟೀ ಮಾಡಿ ಸವಿದು, ರಿಫ್ರೆಶ್ ಆಗಿ

    ರೋಜ್ ಟೀ ಮಾಡಿ ಸವಿದು, ರಿಫ್ರೆಶ್ ಆಗಿ

    ನೀವು ಗಿಡಮೂಲಿಕೆಗಳ ಚಹಾವನ್ನು (Herbal Tea) ಇಷ್ಟಪಡುತ್ತೀರಾದರೆ ಈ ಒಂದು ರೆಸಿಪಿಯನ್ನು ಮಿಸ್ ಮಾಡದೇ ಟ್ರೈ ಮಾಡಬೇಕು. ರೋಜ್ ಟೀ (Rose Tea) ಅಥವಾ ಗುಲಾಬಿ ಚಹಾ ಒಂದು ರಿಫ್ರೆಶಿಂಗ್ ಅನುಭವ ನೀಡುವ ಪಾನೀಯವಾಗಿದ್ದು, ಇದನ್ನು ಸುಲಭವಾಗಿಯೂ ತಯಾರಿಸಬಹುದು. ರೋಜ್ ಟೀಯ ಸುವಾಸನೆಯೇ ನಿಮ್ಮ ಮೂಡ್ ಅನ್ನು ತಾಜಾಗೊಳಿಸುತ್ತದೆ ಮಾತ್ರವಲ್ಲದೇ ಹರ್ಬಲ್ ಟೀ ಸಾಕಷ್ಟು ಆರೋಗ್ಯದ ಪ್ರಯೋಜನಗಳನ್ನು ಹೊಂದಿದೆ. ರೋಜ್ ಟೀಯನ್ನು ಸಿಂಪಲ್ ಆಗಿ ಹೇಗೆ ಮಾಡಬಹುದು ಎಂಬುದನ್ನು ನೀವು ಇಲ್ಲಿಂದ ಕಲಿತುಕೊಳ್ಳಿ.

    ಬೇಕಾಗುವ ಪದಾರ್ಥಗಳು:
    ಗ್ರೀನ್ ಟೀ ಬ್ಯಾಗ್ – 2
    ಒಣ ಗುಲಾಬಿ ದಳಗಳು – 2 ಟೀಸ್ಪೂನ್
    ರೋಜ್ ವಾಟರ್ – 1 ಟೀಸ್ಪೂನ್
    ನೀರು – 3 ಕಪ್
    ಜೇನುತುಪ್ಪ – ಅಗತ್ಯಕ್ಕೆ ತಕ್ಕಂತೆ ಇದನ್ನೂ ಓದಿ: 15 ನಿಮಿಷ ಸಾಕು – ಟ್ರೈ ಮಾಡಿ ಬಾಳೆಹಣ್ಣು, ಓಟ್ಸ್ ಕುಕ್ಕೀಸ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆ ತೆಗೆದುಕೊಂಡು, ನೀರನ್ನು ಹಾಕಿ ಕುದಿಸಿಕೊಳ್ಳಿ.
    * ನೀರು ಕುದಿಯಲು ಪ್ರಾರಂಭವಾದಂತೆ ಗುಲಾಬಿ ದಳಗಳನ್ನು ಹಾಕಿ 5 ನಿಮಿಷ ಕುದಿಸಿಕೊಳ್ಳಿ.
    * ಬಳಿಕ ಉರಿಯನ್ನು ಆಫ್ ಮಾಡಿ, ಅದರಲ್ಲಿ ಗ್ರೀನ್ ಟೀ ಬ್ಯಾಗ್‌ಗಳನ್ನು ಅದ್ದಿ.
    * ಚಹಾದ ಸಾರ ನೀರಿನಲ್ಲಿ 3-4 ನಿಮಿಷ ಬೆರೆಯಲು ಬಿಡಿ. ಬಳಿಕ ಟೀ ಬ್ಯಾಗ್‌ಗಳನ್ನು ನೀರಿನಿಂದ ತೆಗೆದುಹಾಕಿ.
    * ಈಗ ರೋಜ್ ಟೀಯನ್ನು ಕಪ್‌ಗಳಿಗೆ ಹಾಕಿ, ನಿಮ್ಮ ಸ್ವಾದಕ್ಕೆ ಅನುಸಾರದಂತೆ ಜೇನುತುಪ್ಪ ಸೇರಿಸಿ, ಕಲಡಿಕೊಳ್ಳಿ.
    * ಇದೀಗ ರೋಜ್ ಟೀ ತಯಾರಾಗಿದ್ದು, ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಮನೆಯಲ್ಲೇ ಮಾಡಿ ಸ್ಟ್ರಾಬೆರಿ ಓಟ್ಸ್ ಕುಲ್ಫಿ