Tag: floodwater

  • ಪ್ರವಾಹದಲ್ಲಿ ಸಿಲುಕಿದ್ದ ಮಕ್ಕಳನ್ನು ಹೆಗಲ ಮೇಲೆ ಹೊತ್ತು ರಕ್ಷಿಸಿದ ಪೊಲೀಸ್ ಪೇದೆ: ವಿಡಿಯೋ

    ಪ್ರವಾಹದಲ್ಲಿ ಸಿಲುಕಿದ್ದ ಮಕ್ಕಳನ್ನು ಹೆಗಲ ಮೇಲೆ ಹೊತ್ತು ರಕ್ಷಿಸಿದ ಪೊಲೀಸ್ ಪೇದೆ: ವಿಡಿಯೋ

    ಗಾಂಧಿನಗರ: ಗುಜರಾತ್‍ನಲ್ಲಿ ಭೀಕರ ಮಳೆಯಾಗುತ್ತಿದ್ದು, ಪ್ರವಾಹದಲ್ಲಿ ಸಿಲುಕಿದ್ದ ಇಬ್ಬರು ಮಕ್ಕಳನ್ನು ಪೊಲೀಸ್ ಪೇದೆಯೊಬ್ಬರು ಭುಜದ ಮೇಲೆ ಹೊತ್ತು ರಕ್ಷಣೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪೊಲೀಸ್ ಪೇದೆ ಪೃಥ್ವಿರಾಜ್ ಜಡೇಜಾ ಅವರು ಶನಿವಾರ ಮೊರ್ಬಿ ಜಿಲ್ಲೆಯ ಪ್ರವಾಹ ಸಂತ್ರಸ್ತರ ರಕ್ಷಣೆಗೆ ನಿಯೋಜನೆ ಗೊಂಡಿದ್ದರು. ಈ ವೇಳೆ ತಂಕರ ಪಟ್ಟಣದಲ್ಲಿ ಇಬ್ಬರು ಬಾಲಕಿಯರು ಪ್ರವಾಹಕ್ಕೆ ಸಿಲುಕಿದ್ದರು. ಆ ಮಕ್ಕಳನ್ನು ಪೇದೆ ಪೃಥ್ವಿರಾಜ್ ಅವರು ಭುಜದ ಮೇಲೆ ಹೊತ್ತು ಪ್ರವಾಹದ ಮಧ್ಯೆ ಸುಮಾರು 1.5 ಕಿಮೀ ದೂರ ಸಾಗಿ ರಕ್ಷಣೆ ಮಾಡಿದ್ದಾರೆ.

    ಪೃಥ್ವಿರಾಜ್ ಅವರ ಸಾಹಸದ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ತಮ್ಮ ಮೊಬೈಲ್ ಹಾಗೂ ಕ್ಯಾಮೆರಾದಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಫೇಸ್‍ಬುಕ್, ಟ್ವಿಟ್ಟರ್ ಹಾಗೂ ವಾಟ್ಸಪ್ ಸೇರಿದಂತೆ ವಿವಿಧ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೃಥ್ವಿರಾಜ್ ಅವರ ಕರ್ತವ್ಯ ನಿಷ್ಠೆ ಹಾಗೂ ಮಾನವೀಯತೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಈ ಕುರಿತು ಗುಜರಾತ್‍ನ ಡಿಜಿಪಿ ಷಂಷೀರ್ ಸಿಂಗ್ ಅವರು ಟ್ವೀಟ್ ಮಾಡಿದ್ದು, ನಮ್ಮ ಭುಜ ನಿಮ್ಮ ರಕ್ಷಣೆಗಾಗಿ ಇವೆ. ಮೊರ್ಬಿ ಪ್ರವಾಹ ಪೀಡಿತ ಪ್ರದೇಶದಲ್ಲಿ ಪೃಥ್ವಿರಾಜ್ ಅವರು ವೀರರಂತೆ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಸಂತ್ರಸ್ತರಿಗೆ ಅಭಯ ನೀಡಿದ್ದಾರೆ.

    ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಕೂಡ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರವಾಹದಲ್ಲಿ ಸಿಲುಕಿರುವ ಜನರನ್ನು ರಕ್ಷಣೆ ಮಾಡಲು ನಮ್ಮ ವೀರ ಯೋಧರು, ಭದ್ರತಾ ಸಿಬ್ಬಂದಿ ಬದ್ಧತೆ ಹಾಗೂ ತ್ಯಾಗವನ್ನು ಮೆರೆಯುತ್ತಿದ್ದಾರೆ. ಈ ವಿಡಿಯೋವನ್ನು ಒಮ್ಮೆ ನೋಡಿ ಎಂದು ತಿಳಿಸಿದ್ದಾರೆ.

    https://twitter.com/DVSadanandGowda/status/1160372596191289346

  • ಮೊಣಕಾಲುದ್ದದ ನೀರಿನ ಮಧ್ಯೆಯೂ ರಾಷ್ಟ್ರಧ್ವಜ ಹಾರಿಸಿದ ಶಿಕ್ಷಕರು

    ಮೊಣಕಾಲುದ್ದದ ನೀರಿನ ಮಧ್ಯೆಯೂ ರಾಷ್ಟ್ರಧ್ವಜ ಹಾರಿಸಿದ ಶಿಕ್ಷಕರು

    ದಿಸ್‍ಪುರ್: ಶಾಲೆಯ ಆವರಣ ನೀರಿನಿಂದ ಆವೃತವಾಗಿ ಮೊಣಕಾಲುದ್ದ ನೀರು ನಿಂತಿದ್ರೂ ಅದರ ಮಧ್ಯೆಯೂ ರಾಷ್ಟ್ರಧ್ವಜ ಹಾರಿಸಿ ಅದಕ್ಕೆ ಶಿಕ್ಷಕರು ಹಾಗೂ ಇಬ್ಬರು ಮಕ್ಕಳು ಸೆಲ್ಯೂಟ್ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಣಗಳಲ್ಲಿ ಹರಿದಾಡ್ತಿದೆ.

    ಪ್ರವಾಹ ಪೀಡಿತ ಅಸ್ಸಾಂನಲ್ಲಿ ಶಿಕ್ಷಕರು ಸ್ವಾತಂತ್ರ್ಯ ದಿನವಾದ ಇಂದು ರಾಷ್ಟ್ರಧ್ವಜ ಹಾರಿಸಿ ಜನ ಗಣ ಮನ ಹಾಡೋದನ್ನ ಮಾತ್ರ ಮರೆಯಲಿಲ್ಲ. ಕಳೆದ ಕೆಲವು ವಾರಗಳಿಂದ ಭಾರೀ ಮಳೆಯ ಕಾರಣ ಅಸ್ಸಾಂನ ಬಹುತೇಕ ಭಾಗಗಳು ಜಲಾವೃತವಾಗಿವೆ. ಶಿಕ್ಷಕರು ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಈ ಆರು ಜನ ಸ್ವಾತಂತ್ರೋತ್ಸವ ಆಚರಿಸಿದ ದಿ ನಸ್ಕಾರಾ ಲೋವರ್ ಪ್ರೈಮರಿ ಸ್ಕೂಲ್ ಆಗಸ್ಟ್ 13ರಿಂದಲೂ ಜಲಾವೃತವಾಗಿದೆ ಎಂದು ವರದಿಯಾಗಿದೆ.

    ಶಾಲೆಯ ಮುಖ್ಯ ಶಿಕ್ಷಕ ತಝೀಮ್ ಸಿಕ್ದರ್ ಹಾಗೂ ಸಹೋದ್ಯೋಗಿಗಳಾದ ಸ್ರಿಪೆನ್ ರಬಾ, ಜಾಯ್‍ದೇವ್ ರಾಯ್, ಮಿಝಾನುರ್ ರೆಹ್‍ಮಾನ್ ಸೇರಿದಂತೆ ಇಬ್ಬರು ವಿದ್ಯಾರ್ಥಿಗಳಾದ ಜಿಯಾರುಲ್ ಸಲಿ ಖಾನ್ ಮತ್ತು ಹೈದರ್ ಸಲಿ ಖಾನ್ ಸ್ವಾತಂತ್ರ ದಿನಾಚರಣೆಯನ್ನ ಆಚರಿಸಿದ್ದಾರೆ.

    ಸೋಮವಾರದ ಸಭೆಯಲ್ಲಿ ನಾವು ನಾಲ್ವರು ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದೆವು ಎಂದು ಶಾಲೆಯ ಸಹಾಯಕ ಶಿಕ್ಷಕ ರೆಹಮಾನ್ ಹೇಳಿದ್ದಾರೆ.

    ಪ್ರವಾಹದ ಕಾರಣ ನಾವು ಹೆಚ್ಚಿನದ್ದೇನೂ ಮಾಡಲಾಗಲಿಲ್ಲ. ರಾಷ್ಟ್ರಗೀತೆ ಮತ್ತು ವಂದೇ ಮಾತರಂ ಹಾಡಿದೆವು. ಚಿಕ್ಕ ಮಕ್ಕಳು ಹೆಚ್ಚು ಹೊತ್ತು ನೀರಿನಲ್ಲಿ ಇರಬಾರದು ಎಂಬ ಕಾರಣಕ್ಕೆ ಬೇಗನೆ ಕಾರ್ಯಕ್ರಮವನ್ನ ಮುಗಿಸೆದೆವು ಅಂತ ಅವರು ಹೇಳಿದ್ದಾರೆ.

  • ವಿಡಿಯೋ: ಪ್ರವಾಹದ ನೀರು ರೆಸ್ಟೊರೆಂಟ್‍ಗೆ ನುಗ್ಗಿದ್ರೂ ಊಟ ಮುಂದುವರೆಸಿದ್ರು!

    ವಿಡಿಯೋ: ಪ್ರವಾಹದ ನೀರು ರೆಸ್ಟೊರೆಂಟ್‍ಗೆ ನುಗ್ಗಿದ್ರೂ ಊಟ ಮುಂದುವರೆಸಿದ್ರು!

     

    ಬೀಜಿಂಗ್: ಪ್ರವಾಹದ ನೀರು ರೆಸ್ಟೊರೆಂಟ್‍ನೊಳಗೆ ನುಗ್ಗಿದ್ರೂ ಜನ ಆರಾಮಾಗಿ ಊಟ ಮುಂದುವರೆಸಿದ ಘಟನೆ ಚೀನಾದಲ್ಲಿ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

    ಇಲ್ಲಿನ ಜಿಲಿನ್ ಪ್ರಾಂತ್ಯದ ಚಾಂಗ್‍ಚುನ್‍ನ ರೆಸ್ಟೊರೆಂಟ್‍ವೊಂದರಲ್ಲಿ ಕಳೆದ ಗುರುವಾರ ಈ ಘಟನೆ ನಡೆದಿದೆ. ಪ್ರವಾಹದ ನೀರು ರೆಸ್ಟೊರೆಂಟ್‍ನೊಳಗೆ ನುಗ್ಗಿ ಪುಟ್ಟ ಕೊಳದಂತೆ ಆಗಿದ್ರೂ ಗ್ರಾಹಕರು ತಮ್ಮ ಕಾಲನ್ನ ಮೇಲೆತ್ತಿ ಸೋಫಾ ಮೇಲೆ ಇಟ್ಟುಕೊಂಡು ಊಟ ಮಡೋದನ್ನ ಮುಂದುವರೆಸಿದ್ದಾರೆ. ಇನ್ನೂ ಕೆಲವು ಗ್ರಾಹಕರು ನೀರಿನಲ್ಲೇ ನಡೆದಾಡಿದ್ದಾರೆ.

    ರೆಸ್ಟೊರೆಂಟ್ ಸಿಬ್ಬಂದಿ ನೀರನ್ನ ಹೊರಹಾಕಲು ಬಕೆಟ್‍ನಲ್ಲಿ ನೀರು ತುಂಬಿಸಿಟ್ಟಿರೋದನ್ನ ವಿಡಿಯೋದಲ್ಲಿ ಕಾಣಬಹುದು.

    https://www.youtube.com/watch?v=ogcpwARu63E