Tag: Flooding

  • ಕೋಚಿಂಗ್ ಸೆಂಟರ್‌ಗೆ ಮಳೆ ನೀರು ನುಗ್ಗಿ ಮೂವರು UPSC ಆಕಾಂಕ್ಷಿಗಳು ಸಾವು – ಮಾಲೀಕ ಸೇರಿ ಇಬ್ಬರು ಅರೆಸ್ಟ್‌

    ಕೋಚಿಂಗ್ ಸೆಂಟರ್‌ಗೆ ಮಳೆ ನೀರು ನುಗ್ಗಿ ಮೂವರು UPSC ಆಕಾಂಕ್ಷಿಗಳು ಸಾವು – ಮಾಲೀಕ ಸೇರಿ ಇಬ್ಬರು ಅರೆಸ್ಟ್‌

    ನವದೆಹಲಿ: ಇಲ್ಲಿನ ಹಳೇ ರಾಜೇಂದ್ರ ನಗರದಲ್ಲಿರುವ ಕೋಚಿಂಗ್‌ ಸೆಂಟರ್‌ಗೆ (Delhi Coaching Centre) ಮಳೆ ನೀರು ನುಗ್ಗಿದ ಪರಿಣಾಮ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಚಿಂಗ್‌ ಸೆಂಟರ್‌ ಮಾಲೀಕ ಹಾಗೂ ಸಂಯೋಜಕನನ್ನ ದೆಹಲಿ ಪೊಲೀಸರು (Delhi Police) ಬಂಧಿಸಿ, ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

    ಕೋಚಿಂಗ್‌ ಸೆಂಟರ್‌ ಮಾಲೀಕ ಅಭಿಷೇಕ್‌ ಗುಪ್ತಾ ಹಾಗೂ ಸಂಯೋಜಕ ದೇಶ್‌ಪಾಲ್‌ ಸಿಂಗ್‌ ಬಂಧಿತರು. ಕೇರಳ ಮೂಲದ ನವೀನ್‌, ಉತ್ತರ ಪ್ರದೇಶದ ಶ್ರೇಯಾ, ತೆಲಂಗಾಣದ ತಾನಿಯಾ ಮೃತ ವಿದ್ಯಾರ್ಥಿಗಳಾಗಿದ್ದಾರೆ. ಇದನ್ನೂ ಓದಿ: ಅಶ್ಲೀಲ ವೀಡಿಯೋ ವೀಕ್ಷಿಸಿ ಸಹೋದರಿಯ ಅತ್ಯಾಚಾರಗೈದು ಹತ್ಯೆ – ಪ್ರಕರಣ ಮುಚ್ಚಿಡಲು ತಾಯಿ, ಹಿರಿಯ ಸಹೋದರಿಯರ ಸಾಥ್

    ನಿಯಮ ಉಲ್ಲಂಘನೆ ಕಾರಣ:
    ಕೋಚಿಂಗ್‌ ಸೆಂಟರ್‌ನಿಂದ ನೆಲಮಾಳಿಗೆಯಲ್ಲಿ ಪಾರ್ಕಿಂಗ್‌ ಮತ್ತು ಸ್ಟೋರ್‌ ರೂಮ್‌ಗಳಿಗಾಗಿ ಅನುಮತಿ ಪಡೆಯಲಾಗಿತ್ತು. 2 ನೆಲಮಾಳಿಗೆಗಳನ್ನ ಪಾರ್ಕಿಂಗ್ ಮತ್ತು ಸ್ಟೋರ್‌ ರೂಮ್‌ಗಾಗಿ ಇದೇ ತಿಂಗಳ ಜುಲೈ 9ರಂದು ಎನ್‌ಒಸಿ ಪಡೆದುಕೊಂಡಿತ್ತು. ಆದರೆ ನಿಯಮಕ್ಕೆ ವಿರುದ್ಧವಾಗಿ ಗ್ರಂಥಾಲಯ ನಿರ್ಮಾಣ ಮಾಡಲಾಗಿದೆ. ಇದನ್ನೂ ಓದಿ: ಪ್ರೇಯಸಿಯನ್ನೇ ಬರ್ಬರವಾಗಿ ಇರಿದು ಕೊಂದ ಪ್ರಿಯಕರ – ಶವವನ್ನು ಪೊದೆಗೆ ಎಸೆದು ಎಸ್ಕೇಪ್

    ಈ ಗ್ರಂಥಾಲದಲ್ಲಿ 7 ವಿದ್ಯಾರ್ಥಿಗಳು ಓದುತ್ತಿದ್ದಾಗ ಏಕಾಏಕಿ ನೀರು ನುಗ್ಗಿದ ಪರಿಣಾಮ, ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜೇಂದ್ರ ನಗರದಲ್ಲಿರುವ ಕೋಚಿಂಗ್‌ ಸೆಂಟರ್‌ಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದ್ದು, ಈ ಕುರಿತ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಘಟನೆಯಲ್ಲಿ ಮೃತಪಟ್ಟವರಿಗೆ ಆಪ್‌ ಸಚಿವೆ ಅತಿಶಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಕಮರಿಗೆ ಉರುಳಿದ ಕಾರು – ಐವರು ಮಕ್ಕಳು ಸೇರಿ ಒಂದೇ ಕುಟುಂಬದ 8 ಮಂದಿ ದುರ್ಮರಣ!

  • ರಾಜ್ಯದ ಸೂಕ್ಷ್ಮ ಪ್ರದೇಶಗಳ ಜಿಯೋಲಾಜಿಕಲ್ ಸರ್ವೇ: ಸಚಿವ ಬೊಮ್ಮಾಯಿ

    ರಾಜ್ಯದ ಸೂಕ್ಷ್ಮ ಪ್ರದೇಶಗಳ ಜಿಯೋಲಾಜಿಕಲ್ ಸರ್ವೇ: ಸಚಿವ ಬೊಮ್ಮಾಯಿ

    ಉಡುಪಿ: ಒಂದೆಡೆ ಕೊರೊನಾ, ಮತ್ತೊಂದೆಡೆ ನೆರೆ ನಿಯಂತ್ರಣ ರಾಜ್ಯ ಸರ್ಕಾರಕ್ಕೆ ಸವಾಲಾಗಿದೆ. ಪ್ರವಾಹದ ಪರಿಹಾರವನ್ನು ಕೊರೊನಾ ನಿಯಮ ಮೀರಿ ಮಾಡಲಾಗುವುದಿಲ್ಲ. ಇವತ್ತು ರಾಜ್ಯ ಸಚಿವರ ಜೊತೆ ಪ್ರಧಾನಿ ವೀಡಿಯೋ ಕಾನ್ಫರೆನ್ಸ್ ಇದೆ. ಈ ಬಗ್ಗೆ ಎಲ್ಲಾ ಚರ್ಚೆ ನಡೆಸುತ್ತೇವೆ ಎಂದು ಗೃಹ, ಉಡುಪಿ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

    ಉಡುಪಿಯಲ್ಲಿ ನೆರೆ ವೀಕ್ಷಣೆ ಸಂದರ್ಭ ಮಾಧ್ಯಮಗಳ ಜೊತೆ ಬೊಮ್ಮಾಯಿ ಮಾತನಾಡಿದರು. ಗಂಜಿ ಕೇಂದ್ರದಲ್ಲಿ ಕೊರೊನಾ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಮುಂಜಾಗೃತೆ ಕಷ್ಟವಾದರೂ ಮಾಡಲೇಬೇಕಾದ ಪರಿಸ್ಥಿತಿ ಇದೆ ಎಂದರು. ಪ್ರಧಾನಮಂತ್ರಿ ಜೊತೆ ರಾಜ್ಯದ ನೆರೆ ಪರಿಸ್ಥಿತಿ ಕುರಿತು ನೆನ್ನೆ ಚರ್ಚಿಸಿದ್ದೇವೆ. ರಾಜ್ಯದ ಎರಡು ಪ್ರಮುಖ ಸಮಸ್ಯೆಯ ಕುರಿತು ಮಾತನಾಡಿದ್ದೇವೆ. ಕಡಲ್ಕೊರತಕ್ಕೆ ಶಾಶ್ವತ ಪರಿಹಾರದ ಬಗ್ಗೆ ಚರ್ಚೆಯಾಗಿದೆ. ಎಡಿಬಿ ನೆರೆವಿನೊಂದಿಗೆ ಶಾಶ್ವತ ಪರಿಹಾರದ ಬಗ್ಗೆ ಮಾತನಾಡಿದ್ದೇನೆ. ಕಡಲ್ಕೊರೆತ ನಿಯಂತ್ರಣ ಕ್ಕೆ ಹೆಚ್ಚಿನ ಅನುದಾನ ನೀಡಲು ಬೇಡಿಕೆ ಇಟ್ಟಿದ್ದೇವೆ ಎಂದರು.

    ಸೂಕ್ಷ್ಮ ಪ್ರದೇಶಗಳ ಸರ್ವೇ: ಪಶ್ಚಿಮ ಘಟ್ಟದಲ್ಲಿ ಭೂ ಕುಸಿತ ಆಗುವ ಸೂಕ್ಷ್ಮ ಪ್ರದೇಶಗಳ ಬಗ್ಗೆ ಸರ್ವೇ ಮಾಡಬೇಕು. ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಮೂಲಕ ಸರ್ವೇ ಮಾಡಬೇಕು. ಸರ್ವೇಯ ಜೊತೆಗೆ ಮ್ಯಾಪಿಂಗ್ ಕೂಡಾ ಮಾಡಿಸಬೇಕಾಗಿದೆ. ಭೂಕುಸಿತ ತಡೆ ಹಾಗೂ ಶಾಶ್ವತ ಪುನರ್ವಸತಿ ಕುರಿತು ಚರ್ಚಿಸಿದ್ದೇವೆ ಎಂದರು. ಈ ನಡುವೆ ಭಾರೀ ಮಳೆ ಹಾನಿಗೆ ತುತ್ತಾದ ಉಡುಪಿ ಜಿಲ್ಲೆಗೆ ಎನ್ ಡಿಆರ್ ಎಫ್ ಮೂಲಕ 10 ಕೋಟಿ ಬಿಡುಗಡೆ ಮಾಡುತ್ತೇನೆ. ಈ ಪರಿಹಾರದ ಹಣವನ್ನು ರಕ್ಷಣೆ ಹಾಗೂ ಪುನರ್ವಸತಿಗೆ ಬಳಕೆ ಮಾಡಲಾಗುವುದು ಎಂದರು.