Tag: Flood Relief

  • 1,545 ಕೋಟಿ ನೆರೆ ಪರಿಹಾರ ಕೇಳಲು ಕೇಂದ್ರಕ್ಕೆ ಮನವಿ: ಕ್ಯಾಬಿನೆಟ್ ಸಭೆ ನಿರ್ಧಾರ

    1,545 ಕೋಟಿ ನೆರೆ ಪರಿಹಾರ ಕೇಳಲು ಕೇಂದ್ರಕ್ಕೆ ಮನವಿ: ಕ್ಯಾಬಿನೆಟ್ ಸಭೆ ನಿರ್ಧಾರ

    ಬೆಂಗಳೂರು: ಮುಂಗಾರು ಮಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲು ಕ್ಯಾಬಿನೆಟ್ (Cabinet) ತೀರ್ಮಾನಿಸಿದೆ.

    ಮೂಲಭೂತ ಸೌಕರ್ಯಗಳ ಹಾನಿಗೆ ಎನ್‌ಡಿಆರ್‌ಎಫ್ ಅಡಿ 1,545 ಕೋಟಿ ರೂ. ಆರ್ಥಿಕ ಸಹಾಯ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಸರ್ಕಾರ ವರದಿ ಸಿದ್ಧಪಡಿಸಿದೆ. ಆದರೆ ಬೆಳೆ ನಷ್ಟದ ಬಗ್ಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿ ಪರಿಹಾರ ಕೇಳುತ್ತಿದ್ದೇವೆ ಅಂತಾ ಕಾನೂನು ಸಚಿವ ಹೆಚ್.ಕೆ.ಪಾಟೀಲ್ (H K Patil) ಸ್ಪಷ್ಟಪಡಿಸಿದ್ದಾರೆ.

    ಇನ್ನು ಒಳ ಮೀಸಲಾತಿ ವಿಚಾರವಾಗಿ ಶೀಘ್ರದಲ್ಲೇ ಮಸೂದೆಗೆ ಕ್ರಮ ವಹಿಸುತ್ತೇವೆ. ಮುಂದಿನ ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.

  • ಅವಶ್ಯಕತೆ ಬಿದ್ದರೆ ದೆಹಲಿಗೆ ಹೋಗಿ ಪ್ರಧಾನಿ ಮೋದಿ ಬಳಿ ಪ್ರವಾಹ ಪರಿಹಾರ ಕೇಳ್ತೀನಿ: ದೇವೇಗೌಡ

    ಅವಶ್ಯಕತೆ ಬಿದ್ದರೆ ದೆಹಲಿಗೆ ಹೋಗಿ ಪ್ರಧಾನಿ ಮೋದಿ ಬಳಿ ಪ್ರವಾಹ ಪರಿಹಾರ ಕೇಳ್ತೀನಿ: ದೇವೇಗೌಡ

    ಬೆಂಗಳೂರು: ಕಲ್ಯಾಣ ಕರ್ನಾಟಕ (Kalyana Karnataka) ಭಾಗದಲ್ಲಿ ಪ್ರವಾಹದಿಂದ ಆಗಿರೋ ಅನಾಹುತಕ್ಕೆ ಅವಶ್ಯಕತೆ ಬಿದ್ದರೆ ನಾನೇ ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗಿ, ಪರಿಹಾರಕ್ಕೆ ಮನವಿ ಮಾಡೋದಾಗಿ ಮಾಜಿ ಪ್ರಧಾನಿ ದೇವೇಗೌಡ (H D Deve Gowda) ತಿಳಿಸಿದ್ದಾರೆ.

    ಪ್ರವಾಹ (Flood) ವಿಚಾರ ಕುರಿತು ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಮೊನ್ನೆ ನೆರೆ ಹಾನಿ ಪ್ರದೇಶಗಳ ವೈಮಾನಿಕ ಸರ್ವೆ ಮಾಡಿದ್ದಾರೆ. ನಾನು ಅವರು ಮಾಡಿದ ಸರ್ವೆ ನೋಡಿದೆ. ನಾನು ಸಿಎಂ ಮೇಲೆ ಆಪಾದನೆ ಮಾಡೊಲ್ಲ. ವೈಮಾನಿಕ ಸರ್ವೆ ಮಾಡಿ 3 ದಿನ ಆಗಿದೆ. 6 ಜಿಲ್ಲೆಯಲ್ಲಿ ಬೆಳೆ ನಾಶ ಆಗಿದೆ. 50ಕ್ಕೂ ಹೆಚ್ಚು ಜನರು, ಜಾನುವಾರುಗಳು ಸತ್ತು ಹೋಗಿವೆ. ರೈತರ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಅವ್ರು ಎಕ್ರೆಗೆ ಇಷ್ಟು ಹಣ ಅಂತ ಘೋಷಣೆ ಮಾಡಿದ್ರು. ಆದರೆ ಫೀಲ್ಡ್ಗೆ ಹೋಗಿ ಎಷ್ಟು ಪ್ರದೇಶ ಹಾನಿಯಾಗಿದೆ ಅಂತ ನೋಡಿ ಸಂಬಂಧಪಟ್ಟವರ ನೋವಿಗೆ ಸ್ಪಂದಿಸುವ ಕೆಲಸವನ್ನು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಆಡಳಿತವೂ ಮಾಡಿಲ್ಲ. ಅವರ ನೋವಿಗೆ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: 3 ತಿಂಗಳು ನನ್ನ ಮನೆಮುಂದೆ ಮಾಧ್ಯಮಗಳು ಕಾಯೋ ಹಾಗೇ ಮಾಡಿದ್ದು ಯಾರ ಪ್ರೇರಣೆಯಿಂದ – HDD ಕಿಡಿ

    48 ಗಂಟೆ ಒಳಗೆ ಡಿಸಿಗಳು, ಜಿಲ್ಲಾ ಉಸ್ತುವಾರಿಗಳು ಜಾಗಕ್ಕೆ ಹೋಗಿ ಸ್ಥಳ ಪರಿಶೀಲನೆ ಮಾಡಬೇಕು. ನೋವಿನಲ್ಲಿ ಇರೋ ರೈತರಿಗೆ ಪರಿಹಾರ ಕೊಟ್ಟಿದ್ದಾರಾ ಇಲ್ವಾ ಅಂತ ನೋಡಿ ಮಾತಾಡಬೇಕು. ಮೂರ್ನಾಲ್ಕು ದಿನ ಆದ ಮೇಲೆ ಕಲಬುರಗಿಗೆ ವಿಮಾನದಲ್ಲಿ ಬಂದಿದ್ದಾರೆ. ನಾನೇ ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗ್ತೀನಿ. ಸ್ಥಳ ಪರಿಶೀಲನೆ ಮಾಡಿ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಮಾತಾಡ್ತೀನಿ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದೆ ಬರುವ ಎಲ್ಲಾ ಚುನಾವಣೆಗಳಿಗೂ ಬಿಜೆಪಿ-ಜೆಡಿಎಸ್ ಮೈತ್ರಿ: ಹೆಚ್‌ಡಿಡಿ ಘೋಷಣೆ

    ಈಗಾಗಲೇ ಪರಿಹಾರ ಕೊಡಿ ಅಂತ ಪ್ರಧಾನಿ ಮೋದಿ, ಅಮಿತ್ ಶಾಗೆ ಕುಮಾರಸ್ವಾಮಿ ಪತ್ರ ಬರೆದು ಮನವಿ ಮಾಡಿದ್ದಾರೆ. ನಾನು ಅವಶ್ಯಕತೆ ಬಿದ್ದರೆ ಮೋದಿ, ಅಮಿತ್ ಶಾಗೆ ಪತ್ರ ಬರೆಯುತ್ತೇನೆ. ನಾನೇ ದೆಹಲಿಗೆ ಹೋಗಿ ಪ್ರಧಾನಿ ಅವರ ಬಳಿ ಪರಿಹಾರಕ್ಕಾಗಿ ಮನವಿ ಮಾಡ್ತೀನಿ ಎಂದು ಹೇಳಿದ್ದಾರೆ.

    ಬೇರೆ ರಾಜ್ಯದ ಪ್ರವಾಹಕ್ಕೆ ಕೇಂದ್ರ ಹಣ ಕೊಟ್ಟಿದೆ. ಕರ್ನಾಟಕಕ್ಕೆ ಕೊಟ್ಟಿಲ್ಲ ಎಂಬ ಕಾಂಗ್ರೆಸ್ ನಾಯಕರ ಆರೋಪದ ಪ್ರತಿಕ್ರಿಯಿಸಿದ ಅವರು, ನಾನು ಇದರಲ್ಲಿ ರಾಜಕೀಯ ಬೆರೆಸಲು ಹೋಗಲ್ಲ. ಕಾಂಗ್ರೆಸ್‌ನ ಶಾಸಕರು ಗ್ಯಾರಂಟಿ ಕಾರ್ಯಕ್ರಮವನ್ನ ಅನುಷ್ಠಾನಕ್ಕೆ ತರಲು ಹೋಗಿ, ಇವತ್ತು ರಾಜ್ಯ ಬರಡಾಗಿದೆ. ಹಣಕಾಸಿನ ಸ್ಥಿತಿ ಹದಗೆಟ್ಟಿದೆ ಅಂತ ಹೇಳ್ತಿದ್ದಾರೆ. ಇದನ್ನ ನಾನು ಹೇಳ್ತಿಲ್ಲ. ಕಾಂಗ್ರೆಸ್ ಶಾಸಕರು ಹೇಳ್ತಿದ್ದಾರೆ. ರಾಜ್ಯದ ಬೊಕ್ಕಸದಲ್ಲಿ ದುಡ್ಡು ಇದೆಯೋ? ಇಲ್ಲವೋ ಅಂತ ಅವರಲ್ಲೇ ಗೊಂದಲವಿದೆ. ರಾಜ್ಯ ಸರ್ಕಾರ ಪ್ರವಾಹದಿಂದ ಸಮಸ್ಯೆಗೊಳಗಾದ ಜನರಿಗೆ ತನ್ನ ಸಂಪನ್ಮೂಲದಿಂದ ಶಕ್ತಿ ಮೀರಿ ಸಹಾಯ ಮಾಡಬೇಕು ಎಂದಿದ್ದಾರೆ.

  • ಪ್ರವಾಹ ಪರಿಹಾರ ತಕ್ಷಣ ಬಿಡುಗಡೆಗೆ ಸೂಚನೆ: ಕಾರಜೋಳ

    ಪ್ರವಾಹ ಪರಿಹಾರ ತಕ್ಷಣ ಬಿಡುಗಡೆಗೆ ಸೂಚನೆ: ಕಾರಜೋಳ

    ಬೆಂಗಳೂರು: ಪ್ರವಾಹದಿಂದ ಹಾನಿಯಾದ ಜನರಿಗೆ ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇಂದು ಜಿಲ್ಲಾಧಿಕಾರಿಗಳ ಸಮ್ಮೇಳನದಲ್ಲಿ ಗಮನಕ್ಕೆ ತಂದರು.

    ಬೆಳಗಾವಿ, ಬಾಗಲಕೋಟೆ ಮತ್ತು ಕಾರವಾರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಿ ಬೆಳೆ ಸೇರಿ ಮನೆಗಳಿಗೂ ಹಾನಿಯಾಗಿದೆ. ಈ ಪರಿಣಾಮ ಅಲ್ಲಿನ ಜನರು ಬಸ್ ಶೆಲ್ಟರ್ ಮತ್ತು ಸಮುದಾಯ ಭವನಗಳಲ್ಲಿ ಇನ್ನೂ ಜನ ವಾಸಿಸುತ್ತಿದ್ದಾರೆ. ಅಂಥವರಿಗೆ ಪರಿಹಾರ ನೀಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗೋವಿಂದ ಕಾರಜೋಳ ಅವರು ಜಿಲ್ಲಾಧಿಕಾರಿಗಳ ಸಮ್ಮೇಳನದಲ್ಲಿ ಗಮನಕ್ಕೆ ತಂದರು. ಇದನ್ನೂ ಓದಿ: ಬಸ್ ಮೇಲೆ ದಾಳಿಗೈದ ಮೂವರು ಉಗ್ರರ ಹತ್ಯೆ

    ಸಿಎಂ ಬಸವರಾಜ ಬೊಮ್ಮಾಯಿ ತಕ್ಷಣ ಈ ಕುರಿತು ಪ್ರತಿಕ್ರಿಯಿಸಿದ್ದು, ಇಂಥ ಪ್ರಕರಣಗಳಿಗೆ ತಕ್ಷಣ ಪರಿಹಾರ ನೀಡುವಂತೆ ಸೂಚಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯುತ್ತಿರುವ ಜಿಲ್ಲಾಧಿಕಾರಿಗಳ ಸಮ್ಮೇಳನದಲ್ಲಿ ಬೆಳಗಾವಿ ಪ್ರಕರಣಗಳ ಬಗ್ಗೆ ಕಾರಜೋಳ ಅವರು ಪ್ರಸ್ತಾಪಿಸಿದರು.

    ಈ ಕುರಿತು ಬೆಳಗಾವಿ ಜಿಲ್ಲಾಧಿಕಾರಿ ವಿವರಗಳನ್ನು ಒದಗಿಸಿದ್ದು, 7600 ಪ್ರಕರಣಗಳ ಪುನರ್ ಪರಿಶೀಲನೆ ಮತ್ತು 4 ರಿಂದ 5 ಸಾವಿರ ಪ್ರಕರಣಗಳಲ್ಲಿ ಮೇಲ್ವಿಚಾರಣೆ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ತಿಳಿಸಿದರು. ಇದನ್ನೂ ಓದಿ:  RRR ಸಿನಿಮಾ ದೇಹವಾದರೆ ಅಜಯ್ ಆತ್ಮ, ಆಲಿಯಾ ಶಕ್ತಿ: ರಾಜಮೌಳಿ

  • ಸಂಪೂರ್ಣ ಮನೆ ಹಾನಿಯಾಗಿದ್ದರೆ 1 ಲಕ್ಷ ರೂ. ಪರಿಹಾರ: ಸಿಎಂ

    ಬೆಂಗಳೂರು: ಭಾರೀ ಮಳೆಯಿಂದಾಗಿ ಪೂರ್ಣ ಮನೆ ಹಾನಿಯಾಗಿದ್ದರೆ 1 ಲಕ್ಷ ರೂ. ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಲು ಸೂಚಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ಭಾಗಶಃ ಬಿದ್ದ ಮನೆಗಳಿಗೂ ಪರಿಹಾರ ಕೊಡಲು ಸೂಚಿಸಿದ್ದೇವೆ. ಬೆಳೆ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಲಾಗುವುದು. ಜೊತೆಗೆ ಇಂದು ಕೋಲಾರ ಜಿಲ್ಲೆ ಹಾಗೂ ಹೊಸಕೋಟೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ತಿರುಪತಿಯಲ್ಲಿ ಆಣೆಕಟ್ಟು ಬಿರುಕು – ಜನರಲ್ಲಿ ಹೆಚ್ಚಿದ ಆತಂಕ

    ಪ್ರವಾಹ ಪೀಡಿತ ಪ್ರದೇಶಗಳಿಗೆ ಸಂಬಂಧಪಟ್ಟ ಇಲಾಖೆಗಳ ಸಚಿವರು ಭೇಟಿ ನೀಡಬಹುದು. ಉಸ್ತುವಾರಿ ಸಚಿವರಿಗೆ ಆ ಅಧಿಕಾರ ನೀಡಿಲ್ಲ. ಮುಖ್ಯಮಂತ್ರಿಗಳು ಬೇಕಾದರೆ ಸ್ಥಳಗಳಿಗೆ ತೆರಳಿ ವೀಕ್ಷಣೆ ನಡೆಸಬಹುದು ಎಂಬ ಸೂಚನೆ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಾರ್ಟ್ಸ್ ಧರಿಸಿದ್ದಕ್ಕೆ ಬ್ಯಾಂಕ್ ಒಳಗೆ ಬಿಡದ SBI ಸಿಬ್ಬಂದಿ

    ಗದಗ ಜಿಲ್ಲೆಯ ಹಾಲಕೇರಿ ಅನ್ನದಾನೇಶ್ವರ ಸಂಸ್ಥಾನ ಮಠದ ಡಾ. ಸಂಗನಬಸವ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ. ಅವರ ಅಂತಿಮ ನಮನ ಸಲ್ಲಿಸಲು ಹೋಗುತ್ತಿದ್ದೇನೆ. ಆ ಭಾಗದಲ್ಲಿ ಅತ್ಯಂತ ಪ್ರಭಾವಿ ಶ್ರೀಗಳಾಗಿದ್ದರು. ನಮಗೆ ಮಾರ್ಗದರ್ಶನ ಮಾಡುತ್ತಿದ್ದರು ಎಂದು ಸ್ಮರಿಸಿದರು.

  • ಬರ, ನೆರೆ ಎರಡೂ ಅನುದಾನ ನಿಮಗೇ, ನಾವ್ಯಾಕೆ ಇರೋದು- ಏಕವಚನದಲ್ಲಿ ಶಿವಲಿಂಗೇಗೌಡ-ಪ್ರೀತಂಗೌಡ ವಾಗ್ದಾಳಿ

    ಬರ, ನೆರೆ ಎರಡೂ ಅನುದಾನ ನಿಮಗೇ, ನಾವ್ಯಾಕೆ ಇರೋದು- ಏಕವಚನದಲ್ಲಿ ಶಿವಲಿಂಗೇಗೌಡ-ಪ್ರೀತಂಗೌಡ ವಾಗ್ದಾಳಿ

    ಹಾಸನ: ನೆರೆ ಪರಿಹಾರದ ವಿಚಾರದಲ್ಲಿ ಶಾಸಕರಿಬ್ಬರ ನಡುವೆ ವಾಕ್ಸಮರ ಏರ್ಪಟ್ಟಿದ್ದು, ಏಕವಚನದಲ್ಲೇ ವಾಗ್ವಾದ ನಡೆಸಿದ್ದಾರೆ. ಜೆಡಿಎಸ್‍ನ ಅರಿಸಿಕೇರೆ ಶಾಸಕ ಶಿವಲಿಂಗೇಗೌಡ ಹಾಗೂ ಬಿಜೆಪಿಯ ಹಾಸನ ಶಾಸಕ ಪ್ರೀತಂಗೌಡ ಅನುದಾನದ ವಿಚಾರದಲ್ಲಿ ಜಗಳವಾಡಿಕೊಂಡಿದ್ದಾರೆ.

    ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಇಬ್ಬರು ಶಾಸಕರು ಕಚ್ಚಾಡಿದ್ದು, ಬರಕ್ಕೆ ಹಣ ಬಂದ್ರೂ ನಿಮಗೇ, ಮಳೆಗೆ ಅನುದಾನ ಬಂದ್ರೂ ನಿಮಗೆ, ಹಾಗಿದ್ರೆ ನಾವ್ಯಾಕೆ ಇರೋದು ಎಂದು ಸಭೆಯಲ್ಲಿ ಶಿವಲಿಂಗೇಗೌಡ ಆಕ್ರೋಶ ಭರಿತವಾಗಿ ಮಾತನಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರೀತಂಗೌಡ ವಾಗ್ದಾಳಿ ನಡೆಸಿದ್ದು, ಹೌದು ಗೌಡ್ರೆ ನೀವು ಹೇಳ್ತಿರೋದು ಸರಿ, ಯಾವುದಕ್ಕೆ ಅನುದಾನ ಬಂದ್ರೂ ರೇವಣ್ಣೋರು ತಗೊಂಡ್ ಹೋಗ್ತಿದ್ದರು ಎಂದು ತಿರುಗೇಟು ನೀಡಿದ್ದಾರೆ.

    ಶಿವಲಿಂಗೇಗೌಡರು ನೇರವಾಗಿ ರೇವಣ್ಣೋರಿಗೆ ಹೇಳೋಕ್ಕಾಗದೆ ನಮ್ಮೆದುರು ಹೇಳುತ್ತಿದ್ದಾರೆ. ರೇವಣ್ಣವರಿಗೆ ಹೇಳಿ, ಶಿವಲಿಂಗೇಗೌಡರು ನಿಮ್ಮ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದರು, ಪ್ರೀತಂಗೌಡ ಕೂಡ ಶಿವಲಿಂಗೇಗೌಡರಿಗೆ ಧ್ವನಿಗೂಡಿಸಿದರು ಎಂದು ಹೇಳಿ ಎಂದು ಶಿವಲಿಂಗೇಗೌಡರ ಮಾತಿಗೆ ಪ್ರೀತಂಗೌಡ ತಿರುಗೇಟು ನೀಡಿದ್ದಾರೆ.

    ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಏಕವಚನದಲ್ಲಿ ಇಬ್ಬರು ಶಾಸಕರು ಜಗಳವಾಡಿದ್ದಾರೆ. ನೆರೆ ಪರಿಹಾರದಲ್ಲಿ ಸುಮಾರು 19 ಕೋಟಿ ರೂ. ಅನುದಾದ ಬಂದಿದೆ. ಸರಿಯಾಗಿ ಹಣ ಹಂಚಿಕೆ ಆಗಿಲ್ಲ. ಅರಸೀಕೆರೆ ಕ್ಷೇತ್ರಕ್ಕೆ ಏನೂ ಕೊಟ್ಟಿಲ್ಲ. ಇದೇನು ಜಿಲ್ಲೇನಾ? ಎಲ್ಲವನ್ನು ಬೇಕಾದಹಾಗೆ ಬಳಸಿಕೊಳ್ತಿದ್ದಾರೆ ಶಿವಲಿಂಗೇಗೌಡರು ಕಿಡಿಕಾರಿದ್ದಾರೆ. ಮಾತ್ರವಲ್ಲದೆ ನಿಂದು ಏನಿದೆ ಅದನ್ನು ನೀ ತಗೋ, ನಂದು ಏನಿದೆ ಅದನ್ನು ತಗೋತಿನಿ. ನಿನ್ನ ಕ್ಷೇತ್ರದ್ದು ನಾ ಕೇಳುತ್ತಿದ್ದೇನಾ ಎಂದು ಶಿವಲಿಂಗೇಗೌಡರು ಆಕ್ರೋಶ ಹೊರ ಹಾಕಿದ್ದಾರೆ.

    ಅನುದಾನ ನೀನು ತಂದಿದ್ದು ಎನ್ನಬೇಡ, ಸರ್ಕಾರ ಕೊಟ್ಟಿರೋದು. ನಾವೇನು ದನ ಕಾಯೋಕೆ ಬಂದಿಲ್ಲ ಎಂದು ಮತ್ತೆ ಶಿವಲಿಂಗೇಗೌಡ ಕಿಡಿಕಾರಿದ್ದಾರೆ. ಶಿವಲಿಂಗೇಗೌಡರ ಆರೋಪಕ್ಕೆ ಪ್ರತ್ಯುತ್ತರ ನೀಡಲು ಮುಂದಾದ ಶಾಸಕ ಪ್ರೀತಂಗೌಡ, ನಿಮ್ಮ ಸರ್ಕಾರ ಇದ್ದಾಗ ನೀವು ತಂದಿದ್ದು ಅಂತೀರಿ, ನಮ್ಮ ಸರ್ಕಾರ ಇದ್ದಾಗ ನಾನೇ ತಂದಿದ್ದೇನೆ ಅಂತೀವಿ. ಇದು ಯಡಿಯೂರಪ್ಪನವರ ಸರ್ಕಾರ. ಯಡಿಯೂರಪ್ಪ ಅವರೇ ಕೊಟ್ಟಿರೊ ಅನುದಾನ ಎಂದೇ ಹೇಳೋದು. ನನಗೂ ಟೇಬಲ್ ಕುಟ್ಟಿ ಮಾತನಾಡಲು ಬರುತ್ತೆ ಎಂದು ಶಾಸಕ ಪ್ರೀತಂಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ನೆರೆ ಪರಿಹಾರ ಸಿಗದ್ದಕ್ಕೆ ಆತ್ಮಹತ್ಯೆಗೆ ಶರಣು

    ನೆರೆ ಪರಿಹಾರ ಸಿಗದ್ದಕ್ಕೆ ಆತ್ಮಹತ್ಯೆಗೆ ಶರಣು

    ಧಾರವಾಡ: ಮನೆ ಹಾನಿ ಪರಿಹಾರ ಸಿಗದ ಕಾರಣ ಅಂಗವಿಕಲೆ ಆತ್ಮಹತ್ಯೆಗೆ ಶರಣಾದ ಘಟನೆ ಧಾರವಾಡದಲ್ಲಿ ನಡೆದಿದೆ.

    ಮಂಜುಳಾ ಕಲ್ಲೂರ್ ಆತ್ಮಹತ್ಯೆಗೆ ಶರಣಾದ ಯುವತಿ. ಧಾರವಾಡದ ಕಿತ್ತೂರ ರಾಣಿ ಚನ್ನಮ್ಮ ಪಾರ್ಕಿನಲ್ಲಿ ವಿಷ ಕುಡಿದು ಮಂಜುಳಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಧಾರವಾಡ ತಾಲೂಕಿನ ದುಬ್ಬನಮರಡಿ ಗ್ರಾಮದ ನಿವಾಸಿಯಾದ ಮಂಜುಳಾ ವಾಸವಿದ್ದ ಮನೆ ನಾಲ್ಕು ತಿಂಗಳ ಸುರಿದ ಮಳೆಗೆ ಬಿದ್ದಿತ್ತು. ಪರಿಹಾರ ನೀಡುವಂತೆ ಮಂಜುಳಾ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದರು. ಆದ್ರೆ ಜಿಲ್ಲಾಡಳಿತ 50 ಸಾವಿರ ರೂ. ಪರಿಹಾರ ನೀಡಿ ಕೈತೊಳೆದುಕೊಂಡಿತ್ತು.

    ಮೊದಲಿಗೆ ಮನೆಯ ಒಂದು ಗೋಡೆ ಬಿದ್ದಿತ್ತು. ನಂತರ ಮಳೆ ಹೆಚ್ಚಾದಾಗ ಸಂಪೂರ್ಣ ಮನೆಯೇ ವಾಸಕ್ಕೆ ಯೋಗ್ಯವಾಗಿರದ ಸ್ಥಿತಿಯಲ್ಲಿತ್ತು. ಹೀಗಾಗಿ ಮಂಜುಳಾ ತಮಗೆ ಹೆಚ್ಚಿನ ಪರಿಹಾರ ಸಿಗಬೇಕೆಂದು ಜಿಲ್ಲಾಧಿಕಾರಿಗಳ ಕಚೇರಿಗೆ ಬರುತ್ತಿದ್ದರು. ಪರಿಹಾರ ಸಿಗದ್ದಕ್ಕೆ ಮನನೊಂದು ಮಂಜುಳಾ ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

    ಆತ್ಮಹತ್ಯೆ ಮಾಡಿಕೊಂಡ ಸ್ಥಳಕ್ಕೆ ಉಪವಿಭಾಗಾಧಿಕಾರಿ ಮಹಮ್ಮದ್ ಜುಬೇರ್ ಕೂಡಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಜುಳಾ ಮನೆಯಲ್ಲಿ ಎಲ್ಲರೂ ಅಂಗವಿಕಲರಾಗಿದ್ದಾರೆ ಎಂದು ಅವರ ಕುಟುಂದವರು ತಿಳಿಸಿದ್ದು, ಡಿಸಿಗೆ ಈ ಎಲ್ಲ ಮಾಹಿತಿ ನೀಡಿದ್ರೂ ಕೂಡಾ ಪರಿಹಾರ ನೀಡಿಲ್ಲ ಎಂದು ತಿಳಿದು ಬಂದಿದೆ. ಈ ಸಂಬಂಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನೆರೆ ಪರಿಹಾರ ವಿತರಣೆಯಲ್ಲಿ ಅಕ್ರಮದ ವಾಸನೆ – ಎಸಿಬಿ ತನಿಖೆಗೆ ಸರ್ಕಾರ ಚಿಂತನೆ

    ನೆರೆ ಪರಿಹಾರ ವಿತರಣೆಯಲ್ಲಿ ಅಕ್ರಮದ ವಾಸನೆ – ಎಸಿಬಿ ತನಿಖೆಗೆ ಸರ್ಕಾರ ಚಿಂತನೆ

    ಬೆಂಗಳೂರು: ರಾಜ್ಯದ 22 ಜಿಲ್ಲೆಗಳಲ್ಲಿ ಕಳೆದ ವರ್ಷದ ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ನೆರೆ ಕಾಣಿಸಿಕೊಂಡಿತ್ತು. ಬಳಿಕ ರಾಜ್ಯ ಸರ್ಕಾರ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳನ್ನು ಕೈಗೊಂಡಿತು. ಆದರೆ ನೆರೆ ಪರಿಹಾರ ವಿತರಣೆಯಲ್ಲಿ ಇದೀಗ ಅಕ್ರಮದ ಆರೋಪ ಬಲವಾಗಿ ಕೇಳಿ ಬಂದಿದೆ. ರೈತರಿಗೆ ಬೆಳೆ ಪರಿಹಾರ ಮತ್ತು ಮನೆಗಳ ನಿರ್ಮಾಣದಲ್ಲಿ ಸಾಕಷ್ಟು ಲೋಪದೋಷಗಳು ಬೆಳಕಿಗೆ ಬರಲಾರಂಭಿಸಿವೆ. ಇದೀಗ ಸರ್ಕಾರ ಎಲ್ಲ 22 ಜಿಲ್ಲೆಗಳಲ್ಲಿ ನಡೆದಿರಬಹುದಾದ ಅಕ್ರಮಗಳನ್ನು ಕಲೆಹಾಕಲು ಅಧಿಕಾರಿಗಳಿಗೆ ಸೂಚಿಸಿದೆ. ಮಾಹಿತಿ ಸಂಗ್ರಹದ ಬಳಿಕ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಎಸಿಬಿ ತನಿಖೆಗೆ ಒಪ್ಪಿಸಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.

    ಅಕ್ರಮ ಹೇಗೆ? ರಾಜ್ಯದ 22 ಜಿಲ್ಲೆಗಳಲ್ಲಿ ನೆರೆ ಆಗಿತ್ತು. ಒಂದೆರಡು ತಿಂಗಳಿಂದಲೂ ಬೆಳೆ ಮತ್ತು ಮನೆ ಕಳೆದುಕೊಂಡವರಿಗೆ ಅಸಮರ್ಪಕ ಪರಿಹಾರ ವಿತರಣೆ ಆಗಿರುವ ಆರೋಪ ಕೇಳಿಬಂದಿದೆ. ಒಂದೇ ಸರ್ವೆ ನಂಬರ್ ಗೆ 2 ಬಾರಿ ಪರಿಹಾರ, ಒಂದೇ ವಿಸ್ತೀರ್ಣದ ಭೂಮಿಗೆ ಬೇರೆ ಬೇರೆ ಮೊತ್ತದ ಪರಿಹಾರ, ನಕಲಿ ಹೆಸರುಗಳಿಗೆ ಪರಿಹಾರ, ಪಕ್ಷವಾರು ಬೆಂಬಲಿತರಿಗೆ ಪರಿಹಾರ ವಿತರಣೆ, ಪ್ರಭಾವಿಗಳ ಅಣತಿ ಮೇರೆಗೆ ಪರಿಹಾರ ವಿತರಣೆ ಮಾಡಿದ ಆರೋಪಗಳು ಕೇಳಿಬಂದಿವೆ.

    ಹಾವೇರಿಯಲ್ಲಿ ಪರಿಹಾರ ವಿತರಣೆಯಲ್ಲಿ ಅತಿ ಹೆಚ್ಚು ಲೋಪದೋಷದ ಆರೋಪ ಇದೆ. ಬೆಳೆ ನಷ್ಟವಾದ ರೈತರಿಗೆ ಸರ್ಕಾರ 174 ಕೋಟಿ ರೂ. ಪರಿಹಾರ ಬಿಡುಗಡೆಗೊಳಿಸಿತ್ತು. ಹಾವೇರಿ ಜಿಲ್ಲೆಯಲ್ಲಿ 1,45,500 ರೈತರಿಗೆ ಪರಿಹಾರ ನೀಡಬೇಕಿತ್ತು. ಆದರೆ ಅಧಿಕಾರಿಗಳು 1,00,768 ರೈತರಿಗೆ ಮಾತ್ರ ಪರಿಹಾರ ವಿತರಿಸಿದ್ದಾರೆ. ಉಳಿದ 45 ಸಾವಿರ ರೈತರಿಗೆ ಪರಿಹಾರ ಇನ್ನೂ ಮುಟ್ಟಿಲ್ಲ. ಅಕ್ರಮದಲ್ಲಿ ಕೆಳಹಂತದ ಅಧಿಕಾರಿಗಳ ಪಾತ್ರ ಹೆಚ್ಚಾಗಿದೆ ಎನ್ನಲಾಗಿದೆ. ಇನ್ನು ಮನೆ ನಿರ್ಮಾಣ ಪರಿಹಾರದಲ್ಲಿಯೂ ಅವ್ಯವಹಾರದ ಆರೋಪ ಕೇಳಿಬಂದಿದೆ. ಮನೆ ಹಾನಿ ಪರಿಹಾರವೂ ಅರ್ಹರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ ಎನ್ನಲಾಗಿದೆ.

    ಈಗಾಗಲೇ ಬೆಳೆ ಪರಿಹಾರ ಕುರಿತು ಬೆಳಗಾವಿ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಕಳೆದ ಜನವರಿಯಲ್ಲಿ ತನಿಖೆಗೆ ಆದೇಶಿಸಿ ಪ್ರಾದೇಶಿಕ ಆಯುಕ್ತರಿಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪತ್ರ ಬರೆದು ತನಿಖೆಗೆ ಸೂಚಿಸಿದ್ದರು. ಸದ್ಯದಲ್ಲೇ ಸರ್ಕಾರದ ಕೈಗೆ ಈ ವರದಿ ಸೇರಲಿದೆ. ವರದಿ ಬಂದ ಬಳಿಕ ಚರ್ಚಿಸಿ ಪ್ರಕರಣಗಳನ್ನು ಎಸಿಬಿಗೆ ಕೊಡುವ ಸಾಧ್ಯತೆ ಇದೆ. ಬೇರೆ ಜಿಲ್ಲೆಗಳಲ್ಲೂ ನೆರೆ ಅವ್ಯವಹಾರದ ಆರೋಪ ಹಿನ್ನೆಲೆಯಲ್ಲಿ ಬೇರೆ ಜಿಲ್ಲೆಗಳಿಂದಲೂ ಸರ್ಕಾರ ಮಾಹಿತಿ ಕೇಳಿದೆ. ಎಲ್ಲ ಪ್ರಕರಣಗಳನ್ನೂ ಒಟ್ಟಿಗೆ ಸೇರಿಸಿ ಸರ್ಕಾರ ಎಸಿಬಿ ತನಿಖೆಗೆ ಕೊಡುವ ಸಾಧ್ಯತೆ ಇದೆ.  ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕವೇ ಪ್ರಕರಣವನ್ನು ಎಸಿಬಿಗೆ ಕೊಡಲು ಸರ್ಕಾರ ಚಿಂತನೆ ನಡೆಸಿದೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಭ್ರಷ್ಟ ಗ್ರಾಮ ಲೆಕ್ಕಿಗ ಅಮಾನತು

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಭ್ರಷ್ಟ ಗ್ರಾಮ ಲೆಕ್ಕಿಗ ಅಮಾನತು

    ಯಾದಗಿರಿ: ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೇತ್ತ ಯಾದಗಿರಿ ಕಂದಾಯ ಇಲಾಖೆ ಕೊನೆಗೂ ಭ್ರಷ್ಟಾಚಾರಿ ಗ್ರಾಮ ಲೆಕ್ಕಿಗ ಅಧಿಕಾರಿ ಅಮಾನತು ಮಾಡಿದೆ.

    ಜಿಲ್ಲೆಯ ಸುರಪುರ ತಾಲೂಕಿನ ಮುಷ್ಟಳ್ಳಿಯಲ್ಲಿ ಕೃಷ್ಣಾ ನದಿ ಪ್ರವಾಹದಲ್ಲಿ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣ ಬೆಳೆ ನಾಶವಾಗಿತ್ತು. ಸಂತ್ರಸ್ತ ರೈತರಿಗೆ ಸರ್ಕಾರ ಸಾವಿರಾರು ರೂಪಾಯಿ ಪರಿಹಾರ ಸಹ ನೀಡಿತ್ತು. ಆದರೆ ನೆರೆ ಪರಿಹಾರ ವಿತರಣೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದು ಅರ್ಹರಲ್ಲದ ರೈತರ ಖಾತೆಗೆ ಹಣ ವರ್ಗಾವಣೆ ಆಗಿತ್ತು. ಇದನ್ನು ಓದಿ: ನೆರೆ ಪರಿಹಾರ ವಿತರಣೆಯಲ್ಲಿ ಭ್ರಷ್ಟಾಚಾರ – ರಿಯಾಲಿಟಿ ಚೆಕ್‍ನಲ್ಲಿ ಬಯಲು

    ಈ ಭ್ರಷ್ಟಾಚಾರದ ಹಿಂದೆ ಗ್ರಾಮ ಲೆಕ್ಕಿಗ ಅಧಿಕಾರಿ ಶ್ರೀನಿವಾಸ ದೇಶಪಾಂಡೆ ಕೈವಾಡವಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿ, ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳಿದಿತ್ತು. ಪಬ್ಲಿಕ್ ಟಿವಿ ವರದಿಯ ಬಳಿಕ ನಿದ್ದೆಯಿಂದ ಎದ್ದಿರುವ ಜಿಲ್ಲಾಡಳಿತ ಕೊನೆಗೂ ಭ್ರಷ್ಟ ಅಧಿಕಾರಿಗೆ ಅಮಾನತು ಮಾಡಿದ್ದಾರೆ.

    ಯಾದಗಿರಿ ಸಹಾಯಕ ಆಯುಕ್ತ ಶಂಕರಗೌಡರ ಅಮಾನತು ಆದೇಶ ಹೊರಡಿಸಿದ್ದಾರೆ. ಅಲ್ಲದೆ ಪಬ್ಲಿಕ್ ಟಿವಿಯ ವರದಿಗೆ ಅಭಿನಂದನೆಗಳು ಸಲ್ಲಿರುವ ಆಯುಕ್ತರು, ಮರು ಸರ್ವೆ ಮಾಡಿ ಅರ್ಹ ರೈತ ಜಮೀನುಗಳಿಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

  • ಅಧಿಕಾರಿಗಳ ನಿರ್ಲಕ್ಷ್ಯ- ಪ್ರವಾಹ ಸಂತ್ರಸ್ತರ ನೆರವಿಗೆ ಬಿಡುಗಡೆಯಾಗಿದ್ದ 1 ಕೋಟಿ ರೂ. ಮತ್ತೆ ಡಿಸಿ ಖಾತೆಗೆ

    ಅಧಿಕಾರಿಗಳ ನಿರ್ಲಕ್ಷ್ಯ- ಪ್ರವಾಹ ಸಂತ್ರಸ್ತರ ನೆರವಿಗೆ ಬಿಡುಗಡೆಯಾಗಿದ್ದ 1 ಕೋಟಿ ರೂ. ಮತ್ತೆ ಡಿಸಿ ಖಾತೆಗೆ

    ಮಡಿಕೇರಿ: ಕೊಡಗು ಜಿಲ್ಲೆ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪದಿಂದ ನಲುಗಿ ಹೋಗಿದೆ. ಕಳೆದ 2 ವರ್ಷಗಳಲ್ಲಿ ಸುಮಾರೂ 2 ಸಾವಿರಕ್ಕೂ ಹೆಚ್ಚು ಕುಟುಂಬಗಳು ಮನೆ ಮಠಗಳನ್ನು ಕಳೆದುಕೊಂಡು ಬೀದಿ ಪಾಲಾಗಿವೆ. ಕಳೆದ ಆರು ತಿಂಗಳ ಹಿಂದೆ ಕೊಡಗಿನಲ್ಲಿ ಕಾವೇರಿ ಉಕ್ಕಿ ಹರಿದ ರಭಸಕ್ಕೆ ಮನೆ ಮಠಗಳನ್ನು ಕಳೆದುಕೊಂಡಿದ್ದ ಎಷ್ಟೋ ಜನರಿಗೆ ಇಂದಿಗೂ ಪೂರ್ಣ ಪ್ರಮಾಣದಲ್ಲಿ ಪರಿಹಾರ ದೊರೆತ್ತಿಲ್ಲ. ನೂರಾರು ರೈತರಿಗೆ ಬೆಳೆ ಪರಿಹಾರವೂ ಸಿಕ್ಕಿಲ್ಲ. ಆದರೆ ಅಧಿಕಾರಿಗಳು ಮಾತ್ರ ಎನ್‍ಡಿಆರ್ ಎಫ್ ನಿಂದ ಬಂದಿದ್ದ ಹಣದಲ್ಲಿ ಒಂದು ಕೋಟಿ ರೂಪಾಯಿಯನ್ನು ಬಳಸದೆ ಜಿಲ್ಲಾಧಿಕಾರಿಗೆ ವಾಪಸ್ಸ್ ಕಳುಹಿಸಿದ್ದಾರೆ.

    ಜಿಲ್ಲೆಯ ವಿರಾಜಪೇಟೆ ತಾಲೂಕಿನಾದ್ಯಂತ ಆಗಿದ್ದ ಪ್ರಾಕೃತಿಕ ನಷ್ಟದ ತುರ್ತು ಸೇವೆಗಳಿಗೆ ಮತ್ತು ಪರಿಹಾರಗಳಿಗೆ ಬಳಸಲು ಜಿಲ್ಲಾಧಿಕಾರಿ ಒಂದು ಕೋಟಿ ರೂ. ಹಣವನ್ನು ವಿರಾಜಪೇಟೆಗೆ ನೀಡಿದ್ದರು. ಆದರೆ ತಾಲೂಕು ಕಚೇರಿ ಶಿರಸ್ತೆದಾರ್ ಪೊನ್ನು ಮತ್ತು ಕೇಸ್ ವರ್ಕರ್ ಧನಂಜಯ್ ಡಿಸಿ ನೀಡಿದ್ದ ಚೆಕನ್ನು ತಹಶೀಲ್ದಾರ್ ಅವರ ಖಾತೆಗೆ ಜಮಾಮಾಡಿಲ್ಲ. ಹೀಗಾಗಿ ಚೆಕ್ ಸಮಯ ಮುಗಿದುಹೋಗಿ ಬಳಕೆ ಬಾರದಂತಾಗಿದೆ.

    ಈ ಕುರಿತು ವಿರಾಜಪೇಟೆ ತಹಶೀಲ್ದಾರ್ ಮಹೇಶ್ ಅವರನ್ನು ಕೇಳಿದರೆ, ಕೆಲಸದ ಒತ್ತಡದಿಂದ ಚೆಕನ್ನು ಖಾತೆಗೆ ಜಮಾ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಚೆಕ್ ಹಾಗೆ ಉಳಿದಿದ್ದು, ಜಿಲ್ಲಾಧಿಕಾರಿಯವರಿಗೆ ವಾಪಸ್ಸ್ ಕಳುಹಿಸಿದ್ದೇವೆ ಎನ್ನುತ್ತಾರೆ. ಆದರೆ ಯಾರಿಂದ ತಪ್ಪಾಯಿತು ಅವರ ವಿರುದ್ಧ ತುಟಿ ಬಿಚ್ಚುತ್ತಿಲ್ಲ.

    ಪ್ರವಾಹ ಉಕ್ಕಿ ಹರಿದಾಗ ಸಂತ್ರಸ್ತ ಕೇಂದ್ರಗಳನ್ನು ನಡೆಸಲು ಇದೇ ತಾಲೂಕು ಆಡಳಿತ ಸ್ಥಳೀಯರಿಂದಲೇ ವಸ್ತುಗಳನ್ನು ಖರೀದಿಸಿತ್ತು. ಬಳಿಕ ಐದು ತಿಂಗಳಾದ್ರೂ ಬಡ ವ್ಯಾಪಾರಿಗಳಿಗೆ ಹಣವನ್ನು ಪಾವತಿಸದೆ ಇದ್ದ ಕಾರಣ ವ್ಯಾಪಾರಿಗಳು ಪರದಾಡುವಂತಾಗಿತ್ತು. ತಾಲೂಕು ಆಡಳಿತದ ವಿರುದ್ಧ ಪ್ರತಿಭಟನೆಗೂ ವ್ಯಾಪಾರಿಗಳು ಮುಂದಾಗಿದ್ದರು. ಎಷ್ಟೋ ಸಂತ್ರಸ್ತರಿಗೆ ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಪರಿಹಾರ ಸಿಕ್ಕಿಲ್ಲ.

    ತಕ್ಷಣಕ್ಕೆ ಸಿಕ್ಕಿದ್ದ 10 ಸಾವಿರ ಪರಿಹಾರ ಹಣ ಬಿಟ್ಟರೆ ಮತ್ತೆ ಯಾವುದೇ ಪರಿಹಾರ ಲಭಿಸಿಲ್ಲ. ಹೀಗಾಗಿ ಕೊಟ್ಟ ಹಣವನ್ನೂ ಬಳಸದೆ ಚೆಕನ್ನು ವಾಪಸ್ ಮಾಡುತ್ತಿದ್ದಂತೆ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ವಿರಾಜಪೇಟೆಯ ಶಿರಸ್ತೇದಾರ್ ಮತ್ತು ಕೇಸ್ ವರ್ಕರ್ ಧನಂಜಯ್ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಸರಿಯಾದ ಉತ್ತರ ನೀಡದಿದ್ದರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಇನ್ನು ಚೆಕ್ ವಾಪಸ್ ಆಗಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಅಧಿಕಾರಿಗಳು ನಮಗೆ ಬೇಕಾ ಎಂದು ಅಸಮಾಧಾನ ಹೊರಹಾಕಿದ್ದಾರೆ.

  • ಜನರೆದುರು ನೀವು ಹೀರೋ, ನಾವು ವಿಲನ್ ಅಲ್ವಾ ಯಡಿಯೂರಪ್ಪ ಜೀ!

    ಜನರೆದುರು ನೀವು ಹೀರೋ, ನಾವು ವಿಲನ್ ಅಲ್ವಾ ಯಡಿಯೂರಪ್ಪ ಜೀ!

    ಬೆಂಗಳೂರು: ಆ ಒಂದು ದಿನ ದೆಹಲಿಯಿಂದ ಬಂತು ತುರ್ತು ಕರೆ ಬರುತ್ತೆ. ಆ ಕಡೆಯಿಂದ ತೂರಿ ಬಂದ ಮಾತಿಗೆ ಬಿಎಸ್ ಯಡಿಯೂರಪ್ಪ ಸೈಲೆಂಟ್ ಆಗ್ತಾರೆ. ಅಷ್ಟಕ್ಕೂ ಆ ಕರೆ ಮಾಡಿದವರು ಯಾರು? ಏಕೆ ಗೊತ್ತಾ? ಅನ್ನೋದನ್ನ ಕೇಳಿದ್ರೆ ನೀವು ಅಚ್ಚರಿಪಡ್ತೀರಿ. ಒಂದು ಕರೆಯ ಹಿಂದೆ ಯಡಿಯೂರಪ್ಪ ನಿಶಬ್ಧ ಕುತೂಹಲ ಹುಟ್ಟುಹಾಕಿದೆ.

    ಅಂದಹಾಗೆ ಅದು ಹೊಸ ವರ್ಷದ ಮೂರನೇ ದಿನ ಜನವರಿ 3. ದೆಹಲಿಯಿಂದ ಬಿಎಸ್‍ವೈಗೆ ತುರ್ತುಕರೆ ಬಂದೇ ಬಿಡ್ತು. ಬಿಎಸ್‍ವೈಗೆ ಕಾಲ್ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಫುಲ್ ಗರಂ ಆಗಿದ್ರಂತೆ. ತುಮಕೂರಿನಲ್ಲಿ ಪ್ರಧಾನಿ ಎದುರಿನ ಭಾಷಣಕ್ಕೆ ಗರಂ ಆದ ಅಮಿತ್ ಶಾ ಯಡಿಯೂರಪ್ಪಗೆ ಗರಂ ಕ್ಲಾಸ್ ತಗೊಂಡರಂತೆ. ನಾವು ವಿಲನ್, ತಾವು ಹೀರೋ. ಆದ್ರಲ್ಲವಾ ಯಡಿಯೂರಪ್ಪಜೀ ಅಂದ್ರಂತೆ ಅಮಿತ್ ಶಾ. ಪ್ರಧಾನಿ ಎದುರು ಈ ರೀತಿ ಮಾತನಾಡುವ ಅವಶ್ಯಕತೆ ಇತ್ತಾ ಯಡಿಯೂರಪ್ಪಜೀ, ಯಡಿಯೂರಪ್ಪಜೀ ನಿಮಗೆ ಏನಾಗಿತ್ತು? ಏಕೆ ಹೀಗೆ ಮಾಡಿದ್ರಿ ಅಂತಾ ಅಮಿತ್ ಶಾ ಪ್ರಶ್ನಿಸಿದ್ರು ಎನ್ನಲಾಗಿದೆ.

    ಆದ್ರೆ ಅಮಿತ್ ಶಾ ಮಾತಿಗೆ ಸಮರ್ಥನೆ ನೀಡದೇ ಸುಮ್ಮನಾದ ಯಡಿಯೂರಪ್ಪ, ಮನವಿ ರೂಪದಲ್ಲಿ ಹೇಳಲು ಹೋಗಿ ಆಗ್ರಹ ರೂಪ ಪಡೆದುಕೊಂಡಿದೆ. ನಿಮ್ಮನ್ನ ಮುಖಾಮಖಿ ಭೇಟಿಯಾದಾಗ ಮಾತಾಡ್ತೀನಿ, ನಾನು ಅಸಮಾಧಾನ ಅರ್ಥದಲ್ಲಿ ಹೇಳಿಲ್ಲ ಅಂತಾ ಚುಟುಕು ಸ್ಪಷ್ಟನೆ ನೀಡಿದರಂತೆ. ಆದರೆ ಯಡಿಯೂರಪ್ಪ ಪ್ರತಿಕ್ರಿಯೆಗೆ ತೃಪ್ತರಾಗದ ಅಮಿತ್ ಶಾ ಗರಂ ಆಗಿಯೇ ಕಾಲ್ ಕಟ್ ಮಾಡಿದರು ಎನ್ನಲಾಗಿದೆ.

    ಒಟ್ಟಿನಲ್ಲಿ ಸಿಎಂ ಭಾಷಣವನ್ನ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದು, ಯಡಿಯೂರಪ್ಪ ಮುಖಾಮುಖಿ ಭೇಟಿಯಾದಾಗ ಅಮಿತ್ ಶಾಗೆ ಏನ್ ಹೇಳ್ತಾರೆ? ಯಾವ ರೀತಿ ಸಮರ್ಥಿಸಿಕೊಳ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.